ಬೆಂಗಳೂರು: ಕಮಲ್ ಹಾಸನ್ ಬಗ್ಗೆ ವ್ಯಾಲ್ಯೂ ಕೊಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಾವುದೇ ರಾಜ್ಯದ ಭಾಷಿಕರು ಆಗಿರಬಹುದು, ನಾವೆಲ್ಲರೂ ಮೊದಲು ಭಾರತೀಯರು, ನಾವೆಲ್ಲರೂ ಒಂದಾಗಿ ಬಾಳಬೇಕಿದೆ.
Advertisement
ಹೆಚ್ಚು ಬೆಂಕಿ ಹಚ್ಚುವ ಕೆಲಸ ಆಗೋದು ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ. ಒಂದು ಭಾಷೆಯ ವಿಷಯ ಮತ್ತೆ ಮತ್ತೊಂದು ಕಾವೇರಿ ವಿಷಯ. ಚಾಲ್ತಿಯಲ್ಲಿರದ ಕಮಲ್ ಹಾಸನ್ ಬಗ್ಗೆ ವ್ಯಾಲ್ಯೂ ಕೊಡುವ ಅವಶ್ಯಕತೆ ಇಲ್ಲ ಅಂತ ಹೇಳಿದ್ದಾರೆ.
ಇನ್ನೂ ಕಮಲ್ ಹಾಸನ್‌ಗೆ ಪೊಲಿಟಿಕಲ್ ಪಾರ್ಟಿಯಲ್ಲೂ ಸಕ್ಸಸ್ ಸಿಕ್ಕಿಲ್ಲ, ಸಿನಿಮಾದಲ್ಲೂ ಸಿಕ್ಕಿಲ್ಲ. ಪ್ರಚಾರಕ್ಕೆ, ನಮಗೆ ಅವಮಾನ ಮಾಡಲು ಮಾತಾಡಿದ್ದಾರೆ ಅಂತ ಶೋಭಾ ಕರಂದ್ಲಾಜೆ ಹೇಳಿದ್ದಾರೆ.