HomeLife Styleಕಲ್ಲಂಗಡಿ ಹಣ್ಣಷ್ಟೇ ಅಲ್ಲ ಬೀಜಗಳಲ್ಲೂ ಅಡಗಿದೆ ಅದ್ಭುತ ಆರೋಗ್ಯ ಪ್ರಯೋಜನಗಳು!

ಕಲ್ಲಂಗಡಿ ಹಣ್ಣಷ್ಟೇ ಅಲ್ಲ ಬೀಜಗಳಲ್ಲೂ ಅಡಗಿದೆ ಅದ್ಭುತ ಆರೋಗ್ಯ ಪ್ರಯೋಜನಗಳು!

For Dai;y Updates Join Our whatsapp Group

Spread the love

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಬೇಕಾದರೆ ತಿನ್ನುವ ಮೊದಲ ಹಣ್ಣೇ ಕಲ್ಲಂಗಡಿ ಹಣ್ಣು. ಇದು ದೇಹವನ್ನು ನಿರ್ಜಲೀಕರಣದಿಂದ ಕಾಪಾಡುವುದು ಮಾತ್ರವಲ್ಲದೆ, ಇದರಲ್ಲಿ ಇರುವ ಹಲವಾರು ಬಗೆ ಪೋಷಕಾಂಶಗಳು ದೇಹಕ್ಕೆ ಸಿಗುವುದು. ಆದರೆ ಇದರ ಬೀಜಗಳಲ್ಲಿ ಕೂಡ ಹಲವಾರು ಬಗೆ ಔಷಧೀಯ ಗುಣಗಳು ಇವೆ ಎಂದು ಹೇಳಲಾಗಿದೆ. ಇದನ್ನು ಸೇವನೆ ಮಾಡಿದರೆ, ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವರು. ಬೀಜ ಅಗತ್ಯವಿಲ್ಲ ಎಂದು ಎಸೆಯುವ ಮುನ್ನಾ ಅದರ ಪ್ರಯೋಜನಗಳನ್ನ ತಿಳಿದುಕೊಳ್ಳಿ.

* ಮೂಳೆಗಳನ್ನ ಬಲಪಡಿಸುತ್ತದೆ: ಕಲ್ಲಂಗಡಿ ಬೀಜಗಳಲ್ಲಿ ಮ್ಯಾಂಗನೀಸ್, ತಾಮ್ರ, ಪೊಟ್ಯಾಸಿಯಂನಂತಹ ಖನಿಜ ಅಂಶ ಹೆಚ್ಚಿದೆ. ಹೀಗಾಗಿ ಇದು ದೇಹದ ಮೂಳೆಗಳಿಗೆ ಬಹಳ ಒಳ್ಳೆಯದು. ದಿನಕ್ಕೆ 5 6 ಒಣಗಿದ ಕಲ್ಲಂಗಡಿ ಬೀಜಗಳನ್ನು ತಿನ್ನಿ.

* ವೀರ್ಯ ಗುಣಮಟ್ಟ ಸುಧಾರಣೆ: ಬಂಜೆತನಕ್ಕೆ ಕೇವಲ ಹೆಣ್ಣು ಕಾರಣವಾಗಲ್ಲ. ಗಂಡು ಇದಕ್ಕೆ ಕಾರಣ. ಗಂಡಿನಲ್ಲಿ ವೀರ್ಯದ ಕೊರತೆ ಉಂಟಾದಾಗ ಭವಿಷ್ಯದಲ್ಲಿ ಮಗು ಪಡೆಯಲು ಸಾಧ್ಯವಾಗದೇ ಇರಬಹುದು. ಕಲ್ಲಂಗಡಿ ಹೆಚ್ಚಿನ ಪ್ರಮಾಣದ ಸತುವನ್ನು ಹೊಂದಿರುತ್ತದೆ. ಹೀಗಾಗಿ ಇದು ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

* ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ: ಕಲ್ಲಂಗಡಿ ಬೀಜ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಗಳಿಂದ ಕೂಡಿದ್ದು, ಚರ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಜೊತೆಗೆ ವಿವಿಧ ಸೌಂದರ್ಯ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಕಲ್ಲಂಗಡಿ ಬೀಜಗಳು ಮೆಗ್ನೀಸಿಯಮ್ ಅನ್ನು ಒಳಗೊಂಡಿರುತ್ತವೆ. ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತವೆ.

* ತಲೆ ಕೂದಲಿಗೆ ಒಳ್ಳೆಯದು: ಪ್ರತಿಯೊಬ್ಬರೂ ಆರೋಗ್ಯಕರ ತಲೆ ಕೂದಲನ್ನು ಇಷ್ಟಪಡುತ್ತಾರೆ. ಕಲ್ಲಂಗಡಿ ಬೀಜಗಳಲ್ಲಿ ಇರುವ ಪ್ರೋಟೀನ್ಗಳು, ಕಬ್ಬಿಣ, ಮೆಗ್ನೀಸಿಯಂ, ಸತು ಮತ್ತು ತಾಮ್ರ ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆ. ಜೊತೆಗೆ ಕೂದಲನ್ನು ಬಲಪಡಿಸುತ್ತದೆ. ಕಲ್ಲಂಗಡಿ ಬೀಜದಲ್ಲಿರುವ ಮ್ಯಾಂಗನೀಸ್ ಕೂದಲು ಉದುರುವಿಕೆಯನ್ನು ತಡೆಯುತ್ತದೆ.

* ರೋಗ ನಿರೋಧಕ ಶಕ್ತಿ ಹೆಚ್ಚಳ: ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರಬೇಕು. ಆಗ ಮಾತ್ರ ಕಾಯಿಲೆಗಳ ವಿರುದ್ಧ ಹೋರಾಡಬಹುದು. ಕೊರೊನಾ ಹೆಚ್ಚಾದ ವೇಳೆ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಜನ ಪರದಾಡುತ್ತಿದ್ದರು. ಕಲ್ಲಂಗಡಿ ಬೀಜದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶ ಅಡಗಿದೆ. ಹಾಗಾಗಿ ಕಲ್ಲಂಗಡಿ ಬೀಜಗಳನ್ನು ಸೇವಿಸಿ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!