ಕಳಪೆ ಮಾಂಸ ದಂಧೆ ಕೇಸ್:‌ ನಗರದ ಪ್ರತಿಷ್ಠಿತ ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ನೊಟೀಸ್.!

0
Spread the love

ಬೆಂಗಳೂರು: ಮೆಜೆಸ್ಟಿಕ್ ನಲ್ಲಿ ಪತ್ತೆಯಾದ ಕಳಪೆ ಮಾಂಸ ದಂಧೆ ವಿಚಾರ ಇಡೀ ಬೆಂಗಳೂರಿನ ಜನರನ್ನ ಬೆಚ್ಚಿ ಬೀಳಿಸಿದೆ.. ತೊಂಭತ್ತು ಮಾಂಸದ ಬಾಕ್ಸ್ ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.. ಈಗಾಗಲೇ ಮಾಂಸದ ಸ್ಯಾಂಪಲ್ ಗಳನ್ನ ಲ್ಯಾಬ್ ಗೆ ಕಳಿಸಲಾಗಿದ್ದು ಪರಿಶೀಲನೆ ನಡೆಸಲಾಗ್ತಿದೆ.. ಈ ಬೆನ್ನಲ್ಲೇ ಅಬ್ದುಲ್ ರಜಾಕ್​ನಿಂದ  ಮಾಂಸ ಪಡೆಯುತ್ತಿದ್ದ ಹೋಟೆಲ್‌,

Advertisement

ರೆಸ್ಟೋರೆಂಟ್​ಗಳಿಗೆ ಆಹಾರ ಇಲಾಖೆ  ನೋಟಿಸ್​ ನೀಡಿದೆ. ಮೊದಲ ಹಂತವಾಗಿ 9 ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನೊಟೀಸ್​ ನೀಡಲಾಗಿದ್ದು, ವ್ಯವಹಾರದ ದಾಖಲೆ ಸಮೇತ ವಿಚಾರಣೆಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಈಗಾಗಲೆ ಇಬ್ಬರು ವಿಚಾರಣೆಗೆ ಹಾಜರಾಗಿದ್ದು, ಉಳಿದವರು ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಮನವಿ ಮಾಡಿಕೊಂಡಿದ್ದಾರೆ. ಶನಿವಾರ ಅಬ್ದಲ್​ ರಜಾಕ್​ ವಿಚಾರಣೆಗೆ ಹಾಜರಾಗಿದ್ದರು. ಸೋಮವಾರವೂ ಕೂಡ ಅಬ್ದುಲ್ ರಜಾಕ್ ವಿಚಾರಣೆ ಹಾಜರಾಗಲಿದ್ದಾರೆ.

 


Spread the love

LEAVE A REPLY

Please enter your comment!
Please enter your name here