ವಿಜಯಸಾಕ್ಷಿ ಸುದ್ದಿ, ಮುಳಗುಂದ : ರಾಜ್ಯ ಸರಕಾರ ಹೊರಡಿಸಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಆದೇಶವನ್ನು ವಿರೋಧಿಸಿ ಹಸಿರು ಸೇನೆ ರಾಜ್ಯ ಸಂಘ ಹಾಗೂ ಮುಳಗುಂದ ಘಟಕದ ಸದಸ್ಯರು ಹೆಸ್ಕಾಂ ಕಛೇರಿ ಅಧಿಕಾರಿ ಎಸ್.ಒ. ಸುಂಕದ ಅವರಿಗೆ ಮನವಿ ಸಲ್ಲಿಸಿದರು.
Advertisement
ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಮಾತನಾಡಿ, ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದರು. ದೇವರಾಜ ಸಂಗನಪೇಟಿ, ದತ್ತಣ್ಣ ಯಳವತ್ತಿ, ಸೈಯದಲಿ ಶೇಖ, ಜಿ.ಎಂ. ಗಾಡಿ, ಮಾಹಾಂತೇಶ ಗುಂಜಳ, ಮುತ್ತಣ್ಣ ಬಳ್ಳಾರಿ, ದೇವಪ್ಪ ಅಣ್ಣಿಗೇರಿ, ಬಸವರಾಜ ಕೋಟಗಿ ಮುಂತಾದವರಿದ್ದರು.