ವಿಜಯಸಾಕ್ಷಿ ಸುದ್ದಿ, ಗದಗ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ದಿ ಯೋಜನೆ ನರಗುಂದ ಇವರ ವತಿಯಿಂದ ಚಿಕ್ಕನರಗುಂದ-42ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶಾನ ಜರುಗಿತು.
ಗ್ರಾ.ಪಂ ಸದಸ್ಯರಾದ ಮುತ್ತು ರಾಯರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗರ್ಭಿಣಿ ಮಹಿಳೆಯರು ಪೌಷ್ಠಿಕ ಆಹಾರ ಸೇವಿಸುವುದರಿಂದ ಸುಲಭ ಹೆರಿಗೆಯಾಗಿ ಜನಿಸುವ ಮಕ್ಕಳು ಸಹ ಸದೃಢವಾಗಿ ಬೆಳೆಯುತ್ತಾರೆ.
ಅಲ್ಲದೇ ಆರೋಗ್ಯವಂತ ಸಮಾಜಕ್ಕೆ ತಮ್ಮ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಮೇಲ್ವಿಚಾರಕಿ ಕಾವೇರಿ ಅತ್ತಿಮರದ ಮಾತನಾಡಿ, ನಿತ್ಯ ಮಗುವಿಗೆ ಆಹಾರ ನೀಡುವ ವಿಧಾನ, ತಾಯಿಯ ಎದೆ ಹಾಲಿನ ಮಹತ್ವದ ಬಗ್ಗೆ ತಿಳಿದುಕೊಂಡು ಸಮಾಜಕ್ಕೆ ಆರೋಗ್ಯವಂತ ಮಕ್ಕಳನ್ನು ಸಿದ್ಧಗೊಳಿಸುವದು ಅವಶ್ಯಕವೆಂದರು.
ಕಾರ್ಯಕ್ರಮ ಸಂಯೋಜಕರಾದ ಮಂಜು ಗುಗ್ಗರಿ ಮಾತನಾಡಿ, ಬಾಣಂತಿಯರು ಮಗುವಿಗೆ 6 ತಿಂಗಳು ಪೂರ್ಣಗೊಳ್ಳುವವರೆಗೆ ಕಡ್ಡಾಯವಾಗಿ ಸ್ತನ್ಯಪಾನ ಮಾಡಿಸಬೇಕು. 6 ತಿಂಗಳ ನಂತರ ಅನ್ನಪ್ರಾಶನ ಪದ್ಧತಿ ರೂಢಿಸಿಕೊಳ್ಳುವದು ಉತ್ತಮ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಈರಮ್ಮ ಮುದಿಗೌಡ್ರ, ಸದಸ್ಯರಾದ ನಿರ್ಮಲಾ ತಳವಾರ, ಶಂಕ್ರಮ್ಮ ಚೆಲವಾದಿ, ಶೃತಿ ಬ್ಯಾಳಿ, ಅಂಗನವಾಡಿ ಕಾರ್ಯಕರ್ತೆಯರಾದ ಭಾರತಿ ಪಾಟೀಲ, ನೀಲಗಂಗಾ ಮಾದರ, ಗೀತಾ ಕಾಡದೇವರಮಠ, ಸವಿತಾ ರಾಯರೆಡ್ಡಿ, ವಿ.ಬಿ. ಹಿರೇಮಠ, ಸಹಾಯಕಿಯರು ಪಾಲ್ಗೊಂಡಿದ್ದರು. ಮಂಜುಳಾ ಮೇಟಿ ಕಾರ್ಯಕ್ರಮ ನಿರೂಪಿಸಿದರು.