ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಗೊಜನೂರ ವಿದ್ಯಾರ್ಥಿಗಳು ಉತ್ತಮ ಸಾಧನೆಯೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಬಾಲಕರ ವಿಭಾಗ, ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ವಿಭಾಗದ ಖೋ-ಖೊದಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರೌಢಶಾಲಾ ವಿಭಾಗದ ಬಾಲಕರ ವೈಯಕ್ತಿಕ ಆಟಗಳಲ್ಲಿ ಮೃತ್ಯುಂಜಯ ಹುಬ್ಬಳ್ಳಿ100 ಮೀ ಪ್ರಥಮ, ಅಭಿಷೇಕ ಲಮಾಣಿ 200 ಮೀ ದ್ವಿತೀಯ, 4*100 ಮೀ ರೀಲೆ ಪ್ರಥಮ, ಪ್ರೌಢ ವಿಭಾಗ ಬಾಲಕಿಯರ ವೈಯಕ್ತಿಕ ಆಟಗಳಲ್ಲಿ ಮಧುಮತಿ ಮಾಗಡಿ 200 ಮೀ ದ್ವಿತೀಯ, ರಾಧಾ ಗಾಂಜಿ 800 ಮೀ ಓಟ ಪ್ರಥಮ ಮತ್ತು 1500 ಮೀ ಓಟ ಪ್ರಥಮ, ಸಹನಾ ಕರಕಣ್ಣವರ 800 ಮೀ ಓಟ ದ್ವಿತೀಯ ಮತ್ತು 4*100 ಮೀ ರೀಲೆ ಪ್ರಥಮ ಬಹುಮಾನ ಪಡೆದಿದ್ದಾರೆ.
ಪ್ರಾಥಮಿಕ ಬಾಲಕರ ಮತ್ತು ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಹರೀಶ ಕಳಸೂರ 100 ಮೀ ಓಟ ಮತ್ತು 200 ಮೀ ಓಟ ಪ್ರಥಮ, ರವಿ ವಡ್ಡರ 200 ಮೀ ಓಟ ದ್ವಿತೀಯ, ಕೈಫ್ ದಿಂಡವಾಡ ಗುಂಡು ಮತ್ತು ಚಕ್ರ ಎಸೆತ ಪ್ರಥಮ, ಅನಿತಾ ಭಜಂತ್ರಿ 600 ಮೀ ಓಟ ದ್ವಿತೀಯ ಮತ್ತು 4*100 ರಿಲೇ ಪ್ರಥಮ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.