ಗದಗ: ಗದಗ ನಗರದ ಜಿಲ್ಲಾಡಳಿತ ಭವನದ ಮುಂದೆ ಸಚಿವ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗದಗ-ಬೆಟಗೇರಿ ಅವಳಿ ನಗರದ 35ನೇ ವಾರ್ಡ್ ನಲ್ಲಿ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಸಮಸ್ಯೆಗಳನ್ನು ಸಚಿವರ ಎದುರಿಗೆ ಬಿಚ್ಚಿಟ್ಟರು.
ತಕ್ಷಣವೇ ಸಂಬಂಧಪಟ್ಟ ಆ ಭಾಗದ ನಗರಸಭೆಯ ಪರಿಸರ ಇಂಜಿನಿಯರ್ ಆನಂದ ಬದಿಯನ್ನು ಕರೆಯಲು ಪೌರಾಯುಕ್ತರಿಗೆ ಸೂಚಿಸಿದರು.
ಪೌರಾಯುಕ್ತರು ಆನಂದ ಬದಿಗೆ ಫೋನ್ ಕರೆ ಮಾಡಿದರೂ ಸಂಪರ್ಕ ಸಿಗಲಿಲ್ಲ. ಅಷ್ಟೇ ಅಲ್ಲದೆ ಸಚಿವರು ಕೂಡ ಸ್ಪೀಕರ್ ಮೂಲಕ ಕರೆದರು. ಸಾಕಷ್ಟು ಸಲ ಕರೆದರೂ ಆನಂದ ಬದಿ ಸುಳಿವು ಸಿಗಲಿಲ್ಲ. ಇದರಿಂದಾಗಿ ಸಿಟ್ಟಿಗೆದ್ದ ಸಚಿವರು ಡಿಸಿ ಗೋವಿಂದ ರೆಡ್ಡಿ ಅವರಿಗೆ ಕ್ರಮಕ್ಕೆ ಸೂಚಿಸಿದರು.
ಕೂಡಲೇ ಆನಂದ ಬದಿಗೆ ನೋಟಿಸ್ ನೀಡುತ್ತೇನೆ ಎಂದು ಡಿಸಿ ಹೇಳಿದರು.



