ತುಮಕೂರು: ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಪರೀಕ್ಷೆಗಳು ಮುಗಿದಿವೆ. ಇದೇ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿವೆ. ಆದ್ರೆ, ಕೊನೆಯ ದಿನವಾದ ಏಪ್ರಿಲ್ 17ರಂದು ಶಿವಮೊಗ್ಗ ಮತ್ತು ಬೀದರ್ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇನ್ನೂ ಈ ವಿಚಾರವಾಗಿ ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಸಿಇಟಿ ನಿಯಮವನ್ನ ಮೊದಲು ತಿಳಿದುಕೊಳ್ಳಬೇಕು. ಅವರವರ ಆಚರಣೆಗೆ ಸಂವಿಧಾನ ಅವಕಾಶ ಕೊಟ್ಟಿದೆ. ಆಸ್ತಿಕರಾಗಿ, ನಾಸ್ತಿಕರಾಗಿ ಬದುಕಲು ಸಂವಿಧಾನದಲ್ಲಿ ಅವಕಾಶವಿದೆ. ಅಂತಹ ಧಾರ್ಮಿಕ ಆಚರಣೆಗಳನ್ನ ಯಾರೇ ಮಾಡಿದರು ಅದನ್ನ ಒಪ್ಪಬೇಕಾಗಿದೆ ಎಂದು ಹೇಳಿದರು.
ಸಿಇಟಿ ಪರೀಕ್ಷಾ ನಿಯಮದಲ್ಲಿ ಯಾವುದೇ ಗೊಂದಲ ಆಗದ ದೃಷ್ಟಿಯಿಂದ ಕ್ರಮಗಳನ್ನು ಕೈಗೊಂಡಿರುತ್ತಾರೆ. ಕೆಲವರು ಬುರ್ಖಾ ಹಾಕಿಕೊಂಡು ಬರ್ತೀನಿ ಅಂತಾರೆ. ಯಾರ್ ಬರ್ತಾರೆ ಅನ್ನೋದು ಗೊತ್ತಾಗಲ್ಲ. ಇದರಿಂದ ಅವರಿಗೆ ಗೊಂದಲ ಉಂಟಾಗುತ್ತೆ.
ಇನ್ನೂ ಕೆಲವರು ಇನ್ನೊಂದು ಹಾಕಿಕೊಂಡು ಬರ್ತೀನಿ ಅಂತಾರೆ ಅವಾಗ ಗೊಂದಲ ಆಗುತ್ತೆ. ಈ ಗೊಂದಲ ನಿವಾರಣೆಗೆ ತಜ್ಞರ ಸಮಿತಿ ರಚನೆ ಮಾಡಿ. ಸರ್ಕಾರ ಗೊಂದಲ ನಿವಾರಣೆ ಮಾಡಿ ಸೂಕ್ತ ಕ್ರಮ ಕೈಗೊಂಡರೆ ಸೂಕ್ತ ಅಂತಾ ಸಲಹೆ ಎಂದು ಹೇಳಿದರು.