ಶಿವಮೊಗ್ಗ: ವ್ಯಕ್ತಿಯೊಬ್ಬರು ಹೊಟ್ಟೆ ನೋವು ತಾಳಲಾರದೇ ಡೆತ್‍ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಾಗರ ತಾಲೂಕಿನ ಮಂಚಾಲೆ ಗ್ರಾಮದಲ್ಲಿ ಜರುಗಿದೆ. ನಟೇಶ್ (45) ಮೃತ ದುರ್ಧಯವಿಯಾಗಿದ್ದು, ಮೃತ ನಟೇಶ್ ಕಳೆದ ಹಲವು ದಿನಗಳಿಂದ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದನು.
ಎಷ್ಟೆ ಮಾತ್ರೆ ತಿಂದರೂ ಕಮ್ಮಿಯಾಗದ ಹಿನ್ನೆಲೆ ಮನನೊಂದ ನಟೇಶ್, ಡೆತ್‍ನೋಟ್ ಬರೆದಿಟ್ಟು ತನ್ನ ಮನೆಯ ಹಿಂಭಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ ಈ ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



