” ಮುಂದೊಂದು ದಿನ ಕರ್ಮ ಬಡ್ಡಿ ಸಮೇತ ಬರುತ್ತೆ”; ಧನುಷ್ ಡಿವೋರ್ಸ್ ಗೆ ಟಾಂಗ್ ಕೊಟ್ಟ ನಯನತಾರಾ?

0
Spread the love

ನಟ ಧನುಷ್ ಹಾಗೂ ನಟಿ ನಯನತಾರಾ ವಿವಾದ ಸದ್ಯಕ್ಕೆ ಬಗೆ ಹರಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇಬ್ಬರ ನಡುವಿನ ವೈಮನಸ್ಸು ದಿನೇ ದಿನೇ ಹೆಚ್ಚುತ್ತಲೆ ಇದೆ.  ‘ನಾನುಂ ರೌಡಿ ದಾನ್’ ಸಿನಿಮಾದ ಕೆಲ ದೃಶ್ಯಗಳ ಬಳಕೆಗೆ ಧನುಷ್ ಅವಕಾಶ ನೀಡಿಲ್ಲ ಎಂದು ನಯನತಾರಾ ಸಿಟ್ಟಾಗಿದ್ದರು. ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಓಪನ್ ಲೆಟರ್ ಬರೆದು ಆಕ್ರೋಶ ಹೊರ ಹಾಕಿದ್ದರು. ಇದೀಗ ಕರ್ಮದ ಬಗ್ಗೆ ಕೆಲ ಸಾಲುಗಳನ್ನು ನಯನತಾರಾ ಹಂಚಿಕೊಂಡಿದ್ದು, ಈ ವಿಚಾರ ಚರ್ಚೆಗೆ ಕಾರಣವಾಗಿದೆ,

Advertisement

ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಪೋಸ್ಟ್ ಹಾಕಿರುವ ನಟಿ ನಯನತಾರಾ, ‘ಕರ್ಮ ಹೇಳುತ್ತದೆ: ಸುಳ್ಳುಗಳಿಂದ ನೀವು ಯಾರದ್ದಾದರೂ ಜೀವನವನ್ನು ನಾಶ ಮಾಡಿದರೆ ಅದನ್ನು ಸಾಲದ ರೀತಿ ಸ್ವೀಕರಿಸು. ನಂತರ ಬಡ್ಡಿ ಸಮೇತ ಅದು ನಿನಗೆ ಬರುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ.

ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಅವರಿಗೆ ಕೋರ್ಟ್ ಅಧಿಕೃತವಾಗಿ ವಿಚ್ಚೇದನ ನೀಡಿದೆ. ಇದೇ ವಿಚಾರವನ್ನು ಇಟ್ಟುಕೊಂಡು ನಯನತಾರಾ ಅವರು ಈ ರೀತಿಯ ಪೋಸ್ಟ್ ಮಾಡಿದರೆ ಎನ್ನುವ ಕುತೂಹಲ ಅನೇಕರಿಗೆ ಮೂಡಿದೆ.

ಚಿತ್ರರಂಗದಲ್ಲಿ ಬೆಳೆಯುತ್ತಿರುವ ಕಾಲದಲ್ಲಿ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದರು. ಇಬ್ಬರೂ ‘ಯಾರಡಿ ನೀ ಮೋಹಿನಿ’ ಅನ್ನುವ ಸಿನಿಮಾದಲ್ಲಿಯೂ ನಟಿಸಿದ್ದರು. ಅಲ್ಲಿಂದ ಇವರ ಸ್ನೇಹ ಉತ್ತಮವಾಗಿಯೇ ಇತ್ತು. ಆದರೆ, ‘ನಾನುಂ ರೌಡಿ ಧನ್’ ಸಿನಿಮಾದ ಬಳಿಕ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡಿದೆ. ಒಬ್ಬರನ್ನು ಒಬ್ಬರಿಗೆ ಆಗುತ್ತಿಲ್ಲ.

ನಯನತಾರಾ ಅವರು ವಿಘ್ನೇಶ್ ಶಿವನ್ ಅವರನ್ನು ಮದುವೆ ಆದರು. ಇವರ ಮದುವೆಯನ್ನು ಡ್ಯಾಕ್ಯುಮೆಂಟರಿ ರೀತಿ ಮಾಡಿ ನೆಟ್​ಫ್ಲಿಕ್ಸ್​ಗೆ ಕೊಡಲಾಗಿದೆ. ಈ ಡಾಕ್ಯುಮೆಂಟರಿಯಲ್ಲಿ ಸೇರಿಸಲು ತಾವು ಹಾಗೂ ವಿಘ್ನೇಶ್ ಒಟ್ಟಾಗಿ ಕೆಲಸ ಮಾಡಿದ ಮೊದಲ ಸಿನಿಮಾ ‘ನಾನುಂ ರೌಡಿ ದಾನ್’ ಸಿನಿಮಾದ ಕೆಲ ದೃಶ್ಯಗಳನ್ನು ನಯನತಾರಾ ಅವರು ಧನುಶ್ ಬಳಿ ಕೇಳಿದ್ದರು. ಆದರೆ, ಇದಕ್ಕೆ ಧನುಶ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದ ನಯನತಾರಾ ಹಾಗೆಯೇ ದೃಶ್ಯಗಳ ಬಳಕೆ ಮಾಡಿಕೊಂಡಿದ್ದರು. ಇದರಿಂದ ಧನುಶ್ ಕಾನೂನು ಹೋರಾಟಕ್ಕೆ ಮುಂದಾದರು. ಇದರಿಂದ ಸಿಟ್ಟಾದ ನಯನತಾರಾ ಅವರು ಉದ್ದನೆಯ ಸಾಲುಗಳನ್ನು ಬರೆದುಕೊಂಡು ಆಕ್ರೋಶ ಹೊರ ಹಾಕಿದ್ದರು. 37 ಸೆಕೆಂಡುಗಳ ತೆರೆ ಹಿಂದಿನ ದೃಶ್ಯವನ್ನು ಬಳಸಿಕೊಂಡಿದ್ದಕ್ಕೆ 10 ಕೋಟಿ ರೂಪಾಯಿ ಪರಿಹಾರ ಕೇಳಿದ್ದರು. ಇದನ್ನು ಖಂಡಿಸಿ ನಯನತಾರಾ ಧನುಷ್ ವಿರುದ್ಧ ಬಹಿರಂಗವಾಗಿ ಪೋಸ್ಟ್ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.


Spread the love

LEAVE A REPLY

Please enter your comment!
Please enter your name here