ನವದೆಹಲಿ: ಉದ್ವೇಗದಲ್ಲಿ ಆಶ್ವಾಸನೆ ನೀಡುವ ಮೊದಲು ಹತ್ತು ಸಲ ಯೋಚಿಸಬೇಕು ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದರು. ನವದೆಹಲಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿತಿ, ರಾಜ್ಯದ ಪಾಲುದಾರಿಕೆ ಮತ್ತು ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಡೆಸಬೇಕಾಗುತ್ತದೆ, ಚುನಾವಣೆ ಸಮಯದಲ್ಲಿ ಜನರಿಗೆ ಉದ್ವೇಗದಲ್ಲಿ ಆಶ್ವಾಸನೆ ನೀಡುವ ಮೊದಲು ಹತ್ತು ಸಲ ಯೋಚಿಸಬೇಕು,
ಗ್ಯಾರಂಟಿ ಯೋಜನೆಗಳನ್ನು ಜಾರಿಯಲ್ಲಿಡಲು ಸಿದ್ದರಾಮಯ್ಯ ಸರ್ಕಾರ ಹೆಣಗಾಡುತ್ತಿದೆ, ಸರ್ಕಾರದ ತೊಳಲಾಟ ಮತ್ತು ವೇದನೆಯನ್ನು ಅದುಮಿಟ್ಟುಕೊಳ್ಳಲಾರದೆ ಮಾರ್ಮಿಕವಾಗಿ ಹೊರಹಾಕಿದ ಡಿಕೆ ಶಿವಕುಮಾರ್ ಅವರನ್ನು ತಾನು ಅಭಿನಂದಿಸುವುದಾಗಿ ಸೋಮಣ್ಣ ಹೇಳಿದರು.
ಇನ್ನೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಬ್ಬ ಅನುಭವಿ ರಾಜಕಾರಣಿಯಾಗಿದ್ದಾರೆ, ಗ್ಯಾರಂಟಿ ಯೋಜನೆಗಳ ವಿಷಯದಲ್ಲಿ ನಿನ್ನೆ ಅವರು ಸಿದ್ದರಾಮಯ್ಯ ಮತ್ತು ಶಿವಕುಮಾರ್ರನ್ನು ತರಾಟೆಗೆ ತೆಗೆದುಕೊಂಡಿದ್ದು ಸರಿಯಾಗಿದೆ, ಸೋನಿಯ ಮತ್ತು ರಾಹುಲ್ ಗಾಂಧಿಯಿಂದಾಗದ ಕೆಲಸವನ್ನು ಖರ್ಗೆ ಮಾಡಿದ್ದಾರೆ ಎಂದು ಸೋಮಣ್ಣ ಹೇಳಿದರು.