ಬೆಟಗೇರಿ ಪೊಲೀಸರ ಕಾರ್ಯಚರಣೆ; ನಾಲ್ಕು ತಂಡಗಳ ಮೇಲೆ ದಾಳಿ, 58 ಜನ ಜೂಜುಕೋರರ ಬಂಧನ

0
Spread the love

ಬಡಾವಣೆ, ಬೆಟಗೇರಿ ಪೊಲೀಸರ ಪ್ರತ್ಯೇಕ ದಾಳಿ…..

Advertisement

ಬೆಟಗೇರಿ: ದೀಪಾವಳಿ ಹಬ್ಬದ ನೆಪದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ನಾಲ್ಕು ತಂಡಗಳ ಮೇಲೆ ಬೆಟಗೇರಿ ಪೊಲೀಸರು ದಾಳಿ ಮಾಡಿ 58 ಜನರನ್ನು ಬಂಧಿಸಿ, ಅವರಿಂದ 60ಸಾವಿರಕ್ಕೂ ಹೆಚ್ಚು ನಗದು ವಶಪಡಿಸಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.

ಎಪಿಎಂಸಿ ಮಾರ್ಕೆಟ್‌ನಲ್ಲಿ ಎರಡು ಕಡೆ ಜೂಜಾಡುತ್ತಿದ್ದ 36 ಜನರನ್ನು ಬಂಧಿಸಿದ್ದಾರೆ. ದನದ ಮಾರುಕಟ್ಟೆ ಹಾಗೂ ಪೂರ್ವ ಭಾಗದಲ್ಲಿ ಬರುವ ನಾಗಪ್ಪನಕಟ್ಟಿ ಹತ್ತಿರ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಬಡಾವಣೆ ಪೊಲೀಸರು ದಾಳಿ ಮಾಡಿದ್ದರು.

ಬಂಧಿತರಿಂದ 50 ಸಾವಿರದ 140ರೂ,ಗಳನ್ನು ಜಪ್ತಿ ಮಾಡಲಾಗಿದೆ.

ಮತ್ತೆರಡು ಪ್ರಕರಣದಲ್ಲಿ ಬೆಟಗೇರಿಯ ಕುರಹಟ್ಟಿಪೇಟಿಯ ವಾಟರ್ ಟ್ಯಾಂಕ್ ಬಳಿ 16 ಜನ ಹಾಗೂ ಪರ್ವತಗೌಡರ ಪೆಟ್ರೋಲ್ ಬಂಕ್ ಬಳಿ 6ಜನ ಜೂಜಾಟದಲ್ಲಿ ತೊಡಗಿದ್ದದವರ ಮೇಲೆ ಬೆಟಗೇರಿ ಪೊಲೀಸರು ದಾಳಿ ಮಾಡಿದ್ದರು.

ಬಂಧಿತರಿಂದ 14ಸಾವಿರದ 750 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಡಾವಣೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖೆ 0079/2023, 0080/2023 ಹಾಗೂ ಬೆಟಗೇರಿ ಠಾಣೆಯಲ್ಲಿ 0088/2023 ಹಾಗೂ 0089/2023 ರಂತೆ ಕೆ.ಪಿ ಆ‌್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here