ಸಿನಿಮಾ ಚೆನ್ನಾಗಿದ್ದರೂ ಫೇಕ್ ರಿವ್ಯೂಗಳಿಂದ ಚಿತ್ರಗಳಿಗೆ ಹೊಡೆತ ಬೀಳುತ್ತಿದೆ — ಈ ವಿಷಯದ ಬಗ್ಗೆ ನಟ ವಿಜಯ್ ದೇವರಕೊಂಡ ಓಪನ್ ಆಗಿ ಮಾತನಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ವಿಮರ್ಶೆಗಳನ್ನು ಹರಡುವ ಮೂಲಕ ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾಗಳನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಕಲಿ ವಿಮರ್ಶೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿರುವುದು ವಿಜಯ್ ಅವರಿಗೆ ಖುಷಿ ಕೊಟ್ಟಿದೆಯಾದರೂ, ಅದೇ ಸಮಯದಲ್ಲಿ ಇದು ನೋವನ್ನೂ ಕೊಡುತ್ತದೆ ಎನ್ನುತ್ತಾರೆ.
“ಬುಕ್ ಮೈ ಶೋನಲ್ಲಿ ಈ ಬದಲಾವಣೆ ನೋಡೋದು ಖುಷಿಯೂ ಹೌದು, ದುಃಖವೂ ಹೌದು. ಜನರ ಕನಸು, ಕಷ್ಟ, ಹಣವನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಆದರೆ ನಮ್ಮದೇ ಜನರು ಈ ಸಮಸ್ಯೆ ಹುಟ್ಟುಹಾಕುತ್ತಿದ್ದಾರೆ ಅನ್ನೋದು ತುಂಬಾ ದುಃಖಕರ” ಎಂದು ಅವರು ಬರೆದುಕೊಂಡಿದ್ದಾರೆ.
‘ಡಿಯರ್ ಕಾಮ್ರೇಡ್’ ಸಿನಿಮಾ ಸಮಯದಲ್ಲಿ ಸಂಘಟಿತ ದಾಳಿಗಳನ್ನು ಎದುರಿಸಿದ್ದೆ ಎಂದು ವಿಜಯ್ ಹೇಳಿದ್ದು, “ನಾನು ಮಾತಾಡಿದಾಗ ಯಾರೂ ಕೇಳದಂತೆ ಅನ್ನಿಸುತಿತ್ತು. ಒಳ್ಳೆಯ ಸಿನಿಮಾ ಯಾರೂ ತಡೆಯಲು ಸಾಧ್ಯವಿಲ್ಲ ಅಂತ ಕೆಲವರು ಸಮಾಧಾನ ಕೊಟ್ಟಿದ್ದರು. ನನ್ನ ಜೊತೆ ಕೆಲಸ ಮಾಡಿದ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನ ನೋವನ್ನು ಅರ್ಥ ಮಾಡಿಕೊಂಡಿದ್ದರು” ಎಂದು ತಿಳಿಸಿದ್ದಾರೆ.
“ಯಾಕೆ ಇವರು ಹೀಗೆ ಮಾಡುತ್ತಾರೆ ಅಂತ ಯೋಚಿಸುತ್ತಾ ಅನೇಕ ರಾತ್ರಿ ನಿದ್ದೆಯೇ ಬಂದಿಲ್ಲ. ನನ್ನ ಕನಸುಗಳನ್ನು ಉಳಿಸಿಕೊಳ್ಳಲು ಹೇಗೆ ಹೋರಾಡಬೇಕು ಎಂದು ಯೋಚಿಸಿದ್ದೇನೆ. ಇಷ್ಟು ವರ್ಷಗಳ ಬಳಿಕ ಈ ವಿಚಾರ ಹೊರಬಂದಿರುವುದು ಸಂತೋಷ. ಚಿರಂಜೀವಿಯಂಥ ಟಾಪ್ ಹೀರೋ ಸಿನಿಮಾಗಿಗೂ ಇಂತಹ ಬೆದರಿಕೆ ಇದೆ ಎಂದು ನ್ಯಾಯಾಲಯ ಗುರುತಿಸಿರುವುದು ನನಗೆ ಧೈರ್ಯ ನೀಡಿದೆ” ಎಂದು ವಿಜಯ್ ಹೇಳಿದ್ದಾರೆ.
ಒಟ್ಟಿನಲ್ಲಿ, ಫೇಕ್ ರಿವ್ಯೂಗಳ ವಿರುದ್ಧ ವಿಜಯ್ ದೇವರಕೊಂಡ ನೀಡಿರುವ ಈ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



