Home Blog Page 134

ಕೀನ್ಯಾದ ಯುವ ಶಾಸಕ ಕ್ಯಾಲೆಬ್ ಭಗವದ್ಗೀತೆ ಹಿಡಿದು ಪ್ರಮಾಣವಚನ: ಮೊಂಬಾಸಾದಲ್ಲಿ ಐತಿಹಾಸಿಕ ಕ್ಷಣ

0

ಕೀನ್ಯಾ: ಮೊಂಬಾಸಾ ಕೌಂಟಿಯ ವಿಧಾನಸಭೆಯಲ್ಲಿ ಯುವ ನಾಯಕರೊಬ್ಬರು ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಯುವ ಶಾಸಕ ಕ್ಯಾಲೆಬ್ ಈ ವಿಭಿನ್ನ ಹೆಜ್ಜೆ ಇಟ್ಟಿದ್ದಾರೆ.

ಮೊಂಬಾಸಾ ಯುವ ಅಸೆಂಬ್ಲಿಯ ಕಾರ್ಯಕ್ರಮದ ವೇಳೆ, ಸದಸ್ಯರ ಸಮ್ಮುಖದಲ್ಲಿ ಕ್ಯಾಲೆಬ್ ಅವರು ‘ಭಗವದ್ಗೀತೆ ಆಸ್ ಇಟ್ ಇಸ್’ ಗ್ರಂಥವನ್ನು ಎತ್ತಿಹಿಡಿದು ಶಪಥ ಸ್ವೀಕರಿಸಿದರು. ಸಾರ್ವಜನಿಕ ಹುದ್ದೆಗಳು ಸಾಮಾನ್ಯವಾಗಿ ಪ್ರಬಲ ಧಾರ್ಮಿಕ ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿರುವ ದೇಶದಲ್ಲಿ ಈ ನಡೆ ವಿಶೇಷ ಮಹತ್ವ ಪಡೆದುಕೊಂಡಿದೆ.

ಈ ಕುರಿತು ಇಸ್ಕಾನ್ನ ಓಂಕಾರ ಮುಕುಂದ ದಾಸ್ ಪ್ರತಿಕ್ರಿಯಿಸಿ, ಇದು ನಾಟಕೀಯ ನಡೆ ಅಲ್ಲ, ಹೃದಯದಿಂದ ಬಂದ ಭಾವನೆ ಎಂದು ಹೇಳಿದ್ದಾರೆ.

ಕ್ಯಾಲೆಬ್ ಹರೇ ಕೃಷ್ಣ ಸಮುದಾಯದ ಭಕ್ತರಾಗಿದ್ದು, ತಮ್ಮ ಅಣ್ಣನ ಮೂಲಕ ಇಸ್ಕಾನ್ ಸಂಘಟನೆಯೊಂದಿಗೆ ಸೇರಿಕೊಂಡಿದ್ದಾರೆ. 2021ರಲ್ಲಿ ಸ್ಥಾಪಿತವಾದ ‘ದಿ ಬೆಟರ್ ಯು ಕ್ಲಬ್’ ಎಂಬ ವಿಶ್ವವಿದ್ಯಾಲಯ ಆಧಾರಿತ ಉಪಕ್ರಮದ ಅಧ್ಯಕ್ಷರಾಗಿ 180ಕ್ಕೂ ಹೆಚ್ಚು ಸದಸ್ಯರನ್ನು ಒಗ್ಗೂಡಿಸಿದ್ದಾರೆ.

ರಾತ್ರಿ ಮಲಗುವ ಮುನ್ನ 2 ಲವಂಗ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು..?

0

ಲವಂಗವು ಶಕ್ತಿಯುತ ಉತ್ಕರ್ಷಣ ನಿರೋಧಕ (antioxidant) ಗುಣಗಳನ್ನು ಹೊಂದಿದ್ದು, ಜೀವಕೋಶಗಳ ಹಾನಿ ತಡೆಯಲು ಸಹಾಯ ಮಾಡುತ್ತದೆ ಮತ್ತು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಪುರುಷರ ಆರೋಗ್ಯಕ್ಕೆ ಅದರ ವಿಶೇಷ ಪ್ರಯೋಜನಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ:

  1. ಅಕಾಲಿಕ ಸ್ಖಲನ ನಿಯಂತ್ರಣ: ಕೆಲ ಪುರುಷರು ಸಂಭೋಗದ ವೇಳೆ ಅಕಾಲಿಕ ಸ್ಖಲನದಿಂದ ತೊಂದರೆ ಅನುಭವಿಸುತ್ತಾರೆ. ನಿಯಮಿತ ಲವಂಗ ಸೇವನೆ ಈ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  2. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ತಡೆಯುವುದು: ಲವಂಗದ ಸಕ್ರಿಯ ಪದಾರ್ಥಗಳು ರಕ್ತ ಪರಿಚಲನೆಯನ್ನು ಸುಧಾರಿಸಿ, ಖಾಸಗಿ ಅಂಗಗಳ ಆರೋಗ್ಯಕ್ಕೆ ಉತ್ತಮವಾಗಿದೆ.
  3. ವೀರ್ಯದ ಗುಣಮಟ್ಟ ಸುಧಾರಣೆ: ಕಡಿಮೆ ವೀರ್ಯಾಣು ಸಂಖ್ಯೆಯ ಪುರುಷರಿಗೆ ಲವಂಗವು ಸಹಾಯ ಮಾಡಿ, ವೀರ್ಯದ ಸಂಖ್ಯೆಯನ್ನು ಮತ್ತು ಚಟುವಟಿಕೆಯನ್ನು ಹೆಚ್ಚಿಸುತ್ತದೆ.
  4. ಬ್ಲಡ್ ಶುಗರ್ ನಿಯಂತ್ರಣ: ಲವಂಗದಲ್ಲಿ ಇರುವ ಯುಜೆನಾಲ್ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲಗೊಳಿಸಲು ನೆರವಾಗುತ್ತದೆ, ಇದರಿಂದ ಮಧುಮೇಹ ನಿಯಂತ್ರಣ ಸಾಧ್ಯ.
  5. ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು: ಲವಂಗದ ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಕಾರಿ.
  6. ಹಲ್ಲಿನ ಆರೋಗ್ಯ: ಹಲ್ಲು ನೋವು ಇರುವ ಸಂದರ್ಭದಲ್ಲಿ ಲವಂಗವನ್ನು ಬಳಸುವದು ತ್ವರಿತ ಪರಿಹಾರ ನೀಡುತ್ತದೆ.
  7. ಜೀರ್ಣಕ್ರಿಯೆ ಸುಧಾರಣೆ: ಲವಂಗವು ಆಹಾರ ಜೀರ್ಣವಾಗಲು ಸಹಾಯಮಾಡುತ್ತದೆ.
  8. ಬಾಯಿ ದುರ್ವಾಸನೆ ನಿವಾರಣೆ: ಬಾಯಿಯ ದುರ್ವಾಸನೆ ತಡೆಯಲು ಲವಂಗವು ಪರಿಣಾಮಕಾರಿ.
  9. ರೋಗನಿರೋಧಕ ಶಕ್ತಿ: ಲವಂಗವು ದೇಹದ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸೇವಿಸುವ ವಿಧಾನ:
ಪ್ರತಿದಿನ 2–3 ಲವಂಗವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಊಟದ ನಂತರ ಹಾಲು ಅಥವಾ ಬೆಚ್ಚಗಿನ ನೀರಿನೊಂದಿಗೆ ಸೇವಿಸಬಹುದು. ಲವಂಗವನ್ನು ಚೆನ್ನಾಗಿ ಅಗಿದು ನುಂಗಬೇಕು.

ಎಚ್ಚರಿಕೆ:
ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡಿದರೆ ಹೊಟ್ಟೆ ಕಿರಿಕಿರಿ ಅಥವಾ ಉಸಿರಾಟದ ತೊಂದರೆಗಳು ಉಂಟಾಗಬಹುದು. ಶಿಫಾರಸು ಮಾಡಿದ ಪ್ರಮಾಣವನ್ನು ಮೀರಿ ಸೇವಿಸಬಾರದು.

ಅಧಿಕೃತವಾಗಿ ಸತಿ-ಪತಿಯಾದ ರಶ್ಮಿಕಾ, ವಿಜಯ್; ಅದ್ದೂರಿ ನಡೆದ ವಿವಾಹ!

0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಅವರ ಮದುವೆ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರಿತು.

ಬೆಳಗ್ಗೆ 8 ಗಂಟೆಗೆ ನಡೆದ ಶುಭ ಮುಹೂರ್ತದಲ್ಲಿ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಕುಟುಂಬಸ್ಥರು ಮತ್ತು ಆಪ್ತರ ಮಾತ್ರ ಆಹ್ವಾನಿತರಾಗಿದ್ದರು. ಹಲವು ವರ್ಷಗಳಿಂದ ಪ್ರೀತಿಸುತ್ತಾ ಬಂದ ಈ ಜೋಡಿ, ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಮದುವೆ ವೇಳೆ ರಶ್ಮಿಕಾ ಕುಟುಂಬದ ಕೊಡವ ಸಂಪ್ರದಾಯ ಮತ್ತು ವಿಜಯ್ ಕುಟುಂಬದ ಆಂಧ್ರ ಸಂಪ್ರದಾಯಗಳನ್ನು ಗೌರವಿಸಲು ವಿಭಿನ್ನ ಆಚರಣೆಗಳು ಆಯೋಜಿಸಲ್ಪಟ್ಟಿದ್ದು, ಹಳದಿ ಶಾಸ್ತ್ರ, ಮೆಹಂದಿ, ಸಂಗೀತ ಕಾರ್ಯಕ್ರಮಗಳು ಪೂರ್ಣವಾಗಿ ಪ್ಲ್ಯಾನ್ ಆಗಿ ನಡೆದವು. ಮದುವೆಗೆ ಸಾಂದರ್ಭಿಕವಾಗಿ ರವಿತೇಜ್, ಸಂದೀಪ್ ರೆಡ್ಡಿ ವಂಗಾ, ಆಶಿಕಾ ರಂಗನಾಥ್ ಹಾಗೂ ರಶ್ಮಿಕಾ ಗೆಳತಿಯರು ಉಪಸ್ಥಿತರಿದ್ದರು.

ದೇವರಕೊಂಡ ಸಮುದಾಯದ ಸಂಪ್ರದಾಯದಂತೆ ಮುಂಜಾನೆ ಮುಹೂರ್ತದಲ್ಲಿ ಮದುವೆ ನೆರವೇರಿದ್ದು, ಬಳಿಕ ಸಂಜೆ ರಶ್ಮಿಕಾ ಕುಟುಂಬದ ಸಂಪ್ರದಾಯದಂತೆ ಕೊಡವ ಆಚರಣೆಗೂ ಜೋಡಿ ಭಾಗಿಯಾಗಲಿದೆ. ಮಾರ್ಚ್ 4 ರಂದು ಮದುವೆಯ ಆರತಕ್ಷತೆ ನಡೆಯಲಿದ್ದು, ಕನ್ನಡ ಸಿನಿಮಾ ರಂಗದ ಹಲವರು, ಸ್ಯಾಂಡಲ್‌ವುಡ್‌ನ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಕುಟುಂಬ, ಗಣೇಶ್, ಧ್ರುವ ಸರ್ಜಾ, ಯಶ್, ಕಿಚ್ಚ ಸುದೀಪ್ ಸೇರಿದಂತೆ, ಆಹ್ವಾನಿತರಾಗಿದ್ದಾರೆ.

ಪಿಯುಸಿ ಪರೀಕ್ಷೆಗೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟ ಪೋಸ್ಟ್: ವಿದ್ಯಾರ್ಥಿಗಳಲ್ಲಿ ಆತಂಕ

0

ಬೆಂಗಳೂರು: ಫೆಬ್ರವರಿ 28ರಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿವೆ. ಪರೀಕ್ಷೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟ ಮಾಡುವುದಾಗಿ ಪೋಸ್ಟ್ ಹರಿದಾಡುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮೂಡಿಸಿದೆ.

‘ಡಾ. ಕನ್ನಡಿಗ’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ಯಾವುದಾದರೂ ಪ್ರಶ್ನೆ ಪತ್ರಿಕೆ ಬೇಕು ಅಂದ್ರೆ ಮೆಸೇಜ್ ಮಾಡಿ. ಅಮೌಂಟ್ ಎಷ್ಟು ಅಂತ ಆಮೇಲೆ ಹೇಳ್ತಿನಿ” ಎಂದು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರೀಕ್ಷಾ ವ್ಯವಸ್ಥೆಯ ಮೇಲೆ ಅನುಮಾನ ಹುಟ್ಟಿಸಿದೆ.

ಆದರೆ, ಯಾವ ವಿಷಯದ ಪ್ರಶ್ನೆ ಪತ್ರಿಕೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಪರೀಕ್ಷಾ ಸಮಯದಲ್ಲಿ ಹಳೆಯ ಅಥವಾ ನಕಲಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಹಣ ಮಾಡುವ ಉದ್ದೇಶದಿಂದ ಇಂತಹ ಮೋಸಗಳು ನಡೆಯುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ. ಇಂತಹ ಜಾಲಗಳಿಗೆ ಸಿಲುಕಿ ಹಣ ಕಳೆದುಕೊಳ್ಳಬಾರದು ಮತ್ತು ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯ ಘಟನೆ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು. ಜನವರಿ 6, 2026ರಂದು ಪರೀಕ್ಷೆ ಆರಂಭಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ವಾಟ್ಸಾಪ್ ಮೂಲಕ ಹರಿದಾಡಿತ್ತು. ಶಿವಮೊಗ್ಗ ಜಿಲ್ಲೆಯ ಕೋಡ್ ಹೊಂದಿದ್ದ ಪ್ರಶ್ನೆ ಪತ್ರಿಕೆ ತುಮಕೂರು ಜಿಲ್ಲೆಯಲ್ಲೂ ಪತ್ತೆಯಾಗಿತ್ತು.

ಈ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿಸುತ್ತೇನೆಂದು 82 ಗ್ರಾಂ ಚಿನ್ನ ದೋಚಿದ ಶಿಕ್ಷಕ? ಧಾರವಾಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ

0

ಧಾರವಾಡ: ವಿದ್ಯಾರ್ಥಿ ಜೀವನದ ಪ್ರಮುಖ ಹಂತವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿಸುತ್ತೇನೆಂದು ಹೇಳಿ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಮೋಸ ಮಾಡಿದ ಆರೋಪ ಕೇಳಿಬಂದಿದೆ. ಈ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ಶಿವನಗರ ನಿವಾಸಿ 10ನೇ ತರಗತಿ ವಿದ್ಯಾರ್ಥಿ ಅಭಿಷೇಕ್‌ಗೆ ಧಾರವಾಡದ ವಿದ್ಯಾರಣ್ಯ ಶಾಲೆಯ ಶಿಕ್ಷಕ ರಾಜಶೇಖರ್ ಪ್ರಶ್ನೆಪತ್ರಿಕೆ ಲೀಕ್ ಮಾಡಿ ಪಾಸ್ ಮಾಡಿಸುತ್ತೇನೆಂದು ನಂಬಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ತನ್ನ ಮಗನ ಕಾಲೇಜು ಫೀಸ್ ಕಟ್ಟಬೇಕಿದೆ, ಮನೆಯಲ್ಲಿರುವ ಬಂಗಾರವನ್ನು ತಂದುಕೊಡು ಎಂದು ಶಿಕ್ಷಕ ಕೇಳಿದ್ದಾನೆ ಎನ್ನಲಾಗಿದೆ.

ಮೊದಲಿಗೆ ನಿರಾಕರಿಸಿದ್ದ ವಿದ್ಯಾರ್ಥಿ, ಬಳಿಕ ಶಿಕ್ಷಕನ ಮಾತಿಗೆ ಮಣಿದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಡಿಯೋ ಕಾಲ್ ಮೂಲಕ ಅಲ್ಮೇರಾದಲ್ಲಿ ಇಟ್ಟಿದ್ದ 82 ಗ್ರಾಂ ಬಂಗಾರವನ್ನು ತೆಗೆದುಕೊಂಡು ಶಿಕ್ಷಕನಿಗೆ ನೀಡಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಷಯ ತಿಳಿದ ನಂತರ ಆತಂಕಗೊಂಡ ಅಭಿಷೇಕ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಅವನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿದ್ಯಾರ್ಥಿ ಬಳಿ ಚಿನ್ನ ಪಡೆದು ಬ್ಯಾಂಕ್‌ನಲ್ಲಿ ಅಡವಿಟ್ಟಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ತೋರಿಸಿದರೂ ಪ್ರಕರಣ ದಾಖಲಿಸಲು ಧಾರವಾಡ ಉಪನಗರ ಪೊಲೀಸರು ಹಿಂದೇಟು ಹಾಕಿದ್ದಾರೆ ಎಂಬುದು ಪೋಷಕರ ಆರೋಪ.

ಎನ್. ಶಶಿಕುಮಾರ್ ಪೊಲೀಸ್ ಕಮಿಷನರ್ ಪ್ರಕರಣ ದಾಖಲಿಸಲು ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಸದ್ಯ ಪೋಷಕರು ಉಪನಗರ ಠಾಣೆಗೆ ದೂರು ನೀಡಿದ್ದಾರೆ.

ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್: ಕಾನ್ಫಿಡೆಂಟ್ ಗ್ರೂಪ್‌ ಒಡೆಯನಿಗೆ ಮುಳುವಾಯ್ತಾ 500 ಕೋಟಿ ಮಿಸ್‌ಮ್ಯಾಚ್ ಹಣ

0

ಬೆಂಗಳೂರು: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಂದಿದೆ. ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥರಾಗಿದ್ದ ರಾಯ್ ಅವರ ಸಾವಿಗೆ ಬರೋಬ್ಬರಿ 500 ಕೋಟಿ ರೂಪಾಯಿ ಹವಾಲಾ ವ್ಯವಹಾರ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ.

ಹವಾಲಾ ಹಣದ ಲೆಕ್ಕ ನೀಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ರಾಯ್, ಐಟಿ ಇಲಾಖೆಯ ತನಿಖೆಯ ಒತ್ತಡಕ್ಕೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ಕೇರಳದ ಕೊಚ್ಚಿ ಪ್ರಾಜೆಕ್ಟ್ ಹಿನ್ನೆಲೆ ಡಿಸೆಂಬರ್‌ನಲ್ಲೇ ಐಟಿ ಇಲಾಖೆ 500 ಕೋಟಿ ರೂಪಾಯಿ ವ್ಯವಹಾರದ ಬಗ್ಗೆ ವಿವರ ಕೇಳಿತ್ತು ಎನ್ನಲಾಗಿದೆ.

ಈ ಹಿನ್ನೆಲೆ ರಾಯ್ ದುಬೈಯಿಂದ ಭಾರತಕ್ಕೆ ಮರಳುವುದನ್ನು ವಿಳಂಬಗೊಳಿಸಿದ್ದರೆಂದು ತಿಳಿದುಬಂದಿದೆ. ಐಟಿ ದಾಳಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರೂ, ನಂತರ ತಮ್ಮ ಪಾರ್ಟ್ನರ್ ಮತ್ತು ಸಿಎ ಸಲಹೆ ಮೇರೆಗೆ ಅರ್ಜಿಯನ್ನು ವಾಪಸ್ ಪಡೆದಿದ್ದರು. ಭಾರತಕ್ಕೆ ವಾಪಸ್ ಬಂದ ಬಳಿಕ 500 ಕೋಟಿ ರೂ. ಮೂಲ ಮತ್ತು ಲೆಕ್ಕದ ಕುರಿತು ಐಟಿ ಅಧಿಕಾರಿಗಳು ಅನೇಕ ಪ್ರಶ್ನೆಗಳನ್ನು ಕೇಳಿದ್ದರು.

ಈ ಒತ್ತಡದಿಂದ ರಾಯ್ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎನ್ನಲಾಗುತ್ತಿದೆ. ಆತ್ಮಹತ್ಯೆ ದಿನ ಐಟಿ ಅಧಿಕಾರಿಗಳಿಗೆ ಉತ್ತರಿಸುವುದಾಗಿ ಹೇಳಿದ್ದರೂ, ಮಾನಸಿಕ ಖಿನ್ನತೆಗಾಗಿ ಬಳಸುತ್ತಿದ್ದ ಔಷಧಿಯನ್ನು ಸೇವಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ 500 ಕೋಟಿ ಹವಾಲಾ ಹಣದ ಮೂಲ, ಅದರ ಹಾದಿ ಹಾಗೂ ಯಾರಿಗೆ ಸಂಬಂಧಪಟ್ಟದ್ದು ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

ನೇಣಿಗೆ ಕೊರಳೊಡ್ಡಿದ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ!

0

ಕೋಲಾರ:- ಕೋಲಾರ ತಾಲ್ಲೂಕು ಖಾದ್ರಿಪುರ ಗ್ರಾಮದಲ್ಲಿ ನೇಣು ಬಿಗಿದು ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

36 ವರ್ಷದ ಮೊನೀಶ್ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕ. ಇವರು ಕೋಲಾರದ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು ಎಂದು ತಿಳಿದುಬಂದಿದೆ.

ಪತ್ನಿ ವೇದವತಿ ಕೆಲಸಕ್ಕೆ ಹೋಗಿದ್ದ ವೇಳೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ಐಟಿ ದಾಳಿ ಶಾಕ್: ಕೋರಮಂಗಲದಲ್ಲಿ ಬಿಬಿಎಂಪಿ ನಿವೃತ್ತ ಮುಖ್ಯ ಇಂಜಿನಿಯರ್ ಆತ್ಮಹತ್ಯೆ

0

ಬೆಂಗಳೂರು: ರಾಜಧಾನಿ ಬೆಂಗಳೂರುದಲ್ಲಿ ಐಟಿ ದಾಳಿಗಳ ಬೆನ್ನಲ್ಲೇ ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ ಪರಮೇಶ್ವರಯ್ಯ ಅವರು ಕೋರಮಂಗಲದ ತಮ್ಮ ನಿವಾಸದಲ್ಲಿ ಇಂದು ಬೆಳ್ಳಂಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಕ್ರಮ ಆಸ್ತಿ ಸಂಬಂಧ ಸಿಸಿಬಿಯಲ್ಲಿ ದಾಖಲಾಗಿದ್ದ ಎಫ್ಐಆರ್ ಹಿನ್ನೆಲೆ ತನಿಖೆಗೆ ಹೆದರಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪರಮೇಶ್ವರಯ್ಯ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹಾದೇವಪುರ ವಲಯದಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಸುಮಾರು 20 ದಿನಗಳ ಹಿಂದೆ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದಾದ ಬಳಿಕ ಅವರು ಖಿನ್ನತೆಯಲ್ಲಿ ಇದ್ದರು ಎನ್ನಲಾಗಿದೆ.

2021ರಲ್ಲಿ ಗುತ್ತಿಗೆದಾರ ಅನಿಲ್ ನಿವಾಸದ ಮೇಲೆ ನಡೆದ ಐಟಿ ದಾಳಿಯಲ್ಲಿ 1.35 ಲಕ್ಷ ರೂ. ನಗದು, 275.98 ಗ್ರಾಂ ಚಿನ್ನಾಭರಣ ಹಾಗೂ ಜಮೀನು ದಾಖಲೆಗಳು ಪತ್ತೆಯಾಗಿದ್ದವು. ವಿಚಾರಣೆಯಲ್ಲಿ ಅನಿಲ್ ಕುಮಾರ್, ಈ ಹಣ ಹಾಗೂ ದಾಖಲೆಗಳು ಪರಮೇಶ್ವರಯ್ಯ ಅವರಿಗೆ ಸೇರಿವೆ ಎಂದು ಹೇಳಿದ್ದನು.

ಅನಂತರ 2021ರ ಡಿಸೆಂಬರ್ 4ರಂದು ಪರಮೇಶ್ವರಯ್ಯ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಡಿಸೆಂಬರ್ 6ರಂದು ಬ್ಯಾಂಕ್ ಲಾಕರ್‌ಗಳ ಪರಿಶೀಲನೆಯಲ್ಲಿ 86.35 ಲಕ್ಷ ರೂ. ನಗದು ಪತ್ತೆಯಾಗಿತ್ತು. ಲಾಕರ್ ಜಿ. ಕಿಶೋರ್ ನಾಯ್ಡು ಹೆಸರಲ್ಲಿ ಇದ್ದರೂ, ಅದರ ಕೀ ಪರಮೇಶ್ವರಯ್ಯ ಪತ್ನಿ ಮಹಾಲಕ್ಷ್ಮೀ ಅವರ ಹೆಸರಿನಲ್ಲಿ ಇತ್ತು ಎಂದು ತಿಳಿದುಬಂದಿತ್ತು.

2012ರಲ್ಲಿ 29.64 ಲಕ್ಷ ರೂ. ಇದ್ದ ಆಸ್ತಿ ಮೌಲ್ಯ 2021ರ ವೇಳೆಗೆ 5.85 ಕೋಟಿಗೆ ಏರಿಕೆಯಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ 2026ರ ಜನವರಿ 30ರಂದು ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಇತ್ತೀಚೆಗಷ್ಟೇ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಳಿಕ ಇದೀಗ ಪರಮೇಶ್ವರಯ್ಯ ಅವರ ಸಾವು ಮತ್ತೊಂದು ಸಂಚಲನ ಸೃಷ್ಟಿಸಿದೆ.

ಚಿಕ್ಕಮಗಳೂರು–ಬೇಲೂರು ಗಡಿ ಭಾಗದಲ್ಲಿ ಕಾಡಾನೆಗಳ ಆತಂಕ: ಹಿಂಡು ಹಿಂಡಾಗಿ ಲಗ್ಗೆ ಇಟ್ಟ ‘ಬೀಟಮ್ಮ’ ಗ್ಯಾಂಗ್!

0

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ಭಾಗದಿಂದ ಚಿಕ್ಕಮಗಳೂರು ಜಿಲ್ಲೆಗೆ ಕಾಡಾನೆಗಳ ದೊಡ್ಡ ಗುಂಪು ಪ್ರವೇಶಿಸಿದ್ದು, ಜನರಲ್ಲಿ ಭೀತಿ ಮೂಡಿಸಿದೆ.

‘ಬೀಟಮ್ಮ’ ಮತ್ತು ‘ಭುವನೇಶ್ವರಿ’ ಗ್ಯಾಂಗ್‌ಗಳಾಗಿ ಗುರುತಿಸಲ್ಪಟ್ಟಿರುವ ಈ ಕಾಡಾನೆಗಳು ಬೇಲೂರು ಮಾರ್ಗದಿಂದ ಜಿಲ್ಲೆಗೆ ಪ್ರವೇಶಿಸಿ, ಭೀಮಾ ನೇತೃತ್ವದಲ್ಲಿ ಸುಮಾರು 25 ಕಾಡಾನೆಗಳು ಚಿಕ್ಕಮಗಳೂರು ಕಡೆಗೆ ಬಂದಿವೆ. ಒಟ್ಟಾರೆ 45 ಕಾಡಾನೆಗಳಿದ್ದ ಬೀಟಮ್ಮ ಗ್ಯಾಂಗ್ ನಂತರ 20 ಕಾಡಾನೆಗಳೊಂದಿಗೆ ಬೇಲೂರು ಕಡೆಗೆ ಹಿಂತಿರುಗಿದ್ದರೂ, ಮೂಡಿಗೆರೆ–ಬೇಲೂರು ಗಡಿಯ ತೋಟ ಪ್ರದೇಶಗಳಲ್ಲಿ ಇನ್ನೂ 20 ಕಾಡಾನೆಗಳು ಬೀಡುಬಿಟ್ಟಿರುವುದರಿಂದ ಆತಂಕ ಮುಂದುವರಿದಿದೆ.

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ 22 ಕಾಡಾನೆಗಳು ಸಂಚರಿಸುತ್ತಿದ್ದು, ಕಸ್ಕೆಬೈಲು ಗುಡ್ಡದಲ್ಲಿ ತಂಗಿರುವುದು ಕಂಡುಬಂದಿದೆ. ಬಾರದಹಳ್ಳಿ, ಚಟ್ಟನಹಳ್ಳಿ, ಕಲ್ಲು ಗುಡ್ಡ, ವಾಟೆಗಂಡಿ, ಹುಲಿಹಂಡ್ಲು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದೆ. ಚಿಕ್ಕಮಗಳೂರು ನಗರ ಸುತ್ತಮುತ್ತಲೂ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ರಾತ್ರಿ ವೇಳೆ ಹೊರಗೆ ಹೋಗಲು ಹೆದರುತ್ತಿದ್ದಾರೆ. ಈ ನಡುವೆ, ಕಾಡಾನೆ ದಾಳಿಗಳಿಂದ ಒಂದೇ ವಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಅರಣ್ಯ ಇಲಾಖೆ ಹೈ ಅಲರ್ಟ್ ಘೋಷಿಸಿ, ಕಾರ್ಮಿಕರಿಗೆ ತೋಟಗಳಿಗೆ ತೆರಳದಂತೆ ತಾತ್ಕಾಲಿಕ ಸೂಚನೆ ನೀಡಿದೆ. ಜನರಿಗೆ ಎಚ್ಚರಿಕೆಯಿಂದ ಗುಂಪುಗಳಲ್ಲಿ ಸಂಚರಿಸಲು, ಕಾಡಾನೆ ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಕಾಫಿನಾಡಿನಲ್ಲಿ ಮರುಕಳಿಸುತ್ತಿರುವ ಕಾಡಾನೆಗಳ ಹಾವಳಿ ರೈತರು ಹಾಗೂ ತೋಟಗಾರರಿಗೆ ತಲೆನೋವಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಲಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಒಟ್ಟು 12 ಗ್ರಾಮಗಳಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕಲ್ಲಿನಿಂದ ಕಾಲು ಜಜ್ಜಿ ಭೀಕರ ಹಲ್ಲೆ; ಘಟನೆಗೆ ಹಳೆ ವೈಷಮ್ಯ ಕಾರಣವಾ? – 11 ಆರೋಪಿಗಳು ಅರೆಸ್ಟ್!

0

ಮಂಡ್ಯ: ಪಾಂಡವಪುರದ ಕನಗನಹಳ್ಳಿಯಲ್ಲಿ ಹಳೆಯ ವೈಷಮ್ಯದಿಂದ ಹುಟ್ಟಿದ ಕ್ರೂರ ಹಲ್ಲೆ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಯೋರ್ವಳ ಪ್ರೀತಿಗೆ ಸಂಬಂಧಪಟ್ಟ ದ್ವೇಷದಿಂದ, ಪ್ರಕಾಶ್ ಮತ್ತು ನವೀನ್ ಅವರನ್ನು ಗಿರೀಶ್, ಮದ್ದಪ್ಪ, ಪ್ಲಗ್ ಮಂಜ, ಗಣೇಶ, ಶಿವಣ್ಣ, ನಿಂಗಣ್ಣ ಸೇರಿ ಒಟ್ಟು 14 ಮಂದಿ ಕಿಡಿಗೇಡಿಗಳು ಕಲ್ಲಿನಿಂದ ಹಲ್ಲೆ ನಡೆಸಿ ನವೀನ್ ಕಾಲನ್ನು ಜಜ್ಜಿ ಹಾಕಿದ್ದರು. ಭೀಕರ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿದುಬಿಟ್ಟಿದ್ದರು.

ಘಟನೆ ಬಗ್ಗೆ ದೂರು ದಾಖಲಾಗುತ್ತಲೇ, ಪಾಂಡವಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶರತ್ ಕುಮಾರ್ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡವು ಮೊದಲ ದಿನದಲ್ಲೇ ಇಬ್ಬರನ್ನು ಬಂಧಿಸಿತು, ಬಳಿಕ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಸಂಬಂಧಿಕರ ಮನೆಗಳಲ್ಲಿ ಅಡಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ 14 ಆರೋಪಿಗಳ ಪೈಕಿ 11 ಮಂದಿ ಬಂಧನವಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

error: Content is protected !!