Home Blog Page 2

ಕಾಂಗ್ರೆಸ್ ಸರ್ಕಾರ ಭರವಸೆಗಳನ್ನು ಈಡೇರಿಸಿದೆ: ಶಾಸಕ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ಹಿಂದಿನ ಬಿಜೆಪಿ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಘೋಷಿಸಿ ಮಾಡಿಟ್ಟಿರುವ 73 ಸಾವಿರ ಕೋಟಿ ರೂಗಳ ಸಾಲವನ್ನು ಈಗಿನ ಕಾಂಗ್ರೆಸ್ ಸರ್ಕಾರ ಭರ್ತಿ ಮಾಡಬೇಕಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.

ಅವರು ಸೋಮವಾರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕೆರೆ ಹೂಳೆತ್ತುವ ಕಾಮಗಾರಿ, ಸಿಸಿ ರಸ್ತೆ ನಿರ್ಮಾಣ, ಗ್ರಂಥಾಲಯ ಕಟ್ಟಡ ನಿರ್ಮಾಣ, ಹೊಸಳ್ಳಿ ರಸ್ತೆ ಸುಧಾರಣೆ, ಸಂಪರ್ಕ ರಸ್ತೆ ಸುಧಾರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿರುವ ಐದು ಭರವಸೆಗಳನ್ನು ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಮುಖ್ಯವಾಗಿ ಬಿಜೆಪಿಯವರು ಮಾಡಿರುವ ಸಾಲದ ಹಣವನ್ನು ಸರ್ಕಾರ ತೀರಿಸುವ ಮೂಲಕ ರಾಜ್ಯದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಪ್ರಗತಿಯತ್ತ ಸಾಗುತ್ತಿದೆ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಹೊಸಪೇಟಿಯಲ್ಲಿ 1.30 ಲಕ್ಷ, ಹಾವೇರಿ ಜಿಲ್ಲೆಯಲ್ಲಿ 1 ಲಕ್ಷ ಜನರಿಗೆ ಹಕ್ಕುಪತ್ರ ನೀಡಲು ಸಾಧ್ಯವಿತ್ತೇ? ಹೊಸಳ್ಳಿ ಗ್ರಾಮಕ್ಕೆ 1 ಕೋಟಿಗೂ ಅಧಿಕ ಅನುದಾನವನ್ನು ನೀಡಲು ಸಾಧ್ಯವಿತ್ತೇ ಎನ್ನುವುದನ್ನು ಜನರು ಅರಿಯಬೇಕು. ಮತಕ್ಷೇತ್ರದಲ್ಲಿ 200 ಕೋಟಿ ರೂಗಳಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಗಳು ಬಂದು ಚಾಲನೆ ನೀಡಿರುವುದು ಎಲ್ಲರಿಗೂ ತಿಳಿದ ವಿಷಯ. ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದಿದ್ದರೆ ರೋಣ ಮತಕ್ಷೇತ್ರಕ್ಕೆ 200 ಕೋಟಿ ರೂ ಅನುದಾನವನ್ನು ತರಲಾಗುತ್ತಿತ್ತೇ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದರು.

ಕೃಷ್ಣಾ ಬಿ ಸ್ಕೀಂ ಮೂಲಕ ಗಜೇಂದ್ರಗಡ ತಾಲೂಕಿನ 19 ಕೆರೆಗಳನ್ನು ಭರ್ತಿ ಮಾಡಲು ಈಗಾಗಲೇ ಕ್ರಿಯಾಯೋಜನೆಯನ್ನು ರೂಪಿಸಲಾಗಿದ್ದು, ಈ ಬಜೆಟ್‌ನಲ್ಲಿ ಘೋಷಣೆಯಾಗಿ ಅನುದಾನವೂ ಬರಲಿದೆ. ಈ ಯೋಜನೆಯಲ್ಲಿ ಹೊಸಳ್ಳಿ ಗ್ರಾಮದ ಕೆರೆಯನ್ನು ಸೇರಿಸಿಕೊಂಡು ಕೃಷ್ಣಾ ನದಿಯ ನೀರಿನಿಂದ ಭರ್ತಿ ಮಾಡಲಾಗುವುದು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು 8 ಲಕ್ಷ ರೂಗಳ ವೆಚ್ಚದಲ್ಲಿ ಕೆರೆಯ ಹೂಳೆತ್ತುವ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರ. ಗ್ರಾಮಸ್ಥರು ಸಹ ಸಾಮೂಹಿಕವಾಗಿ ಪಾಲ್ಗೊಂಡು ಅವರಿಗೆ ಸಹಕಾರ ನೀಡಬೇಕು ಮತ್ತು ಅಂತರ್ಜಲ ಹೆಚ್ಚಿಸಲು ಕೆರೆಯನ್ನು ರಕ್ಷಿಸಬೇಕು. ಅಭಿವೃದ್ಧಿ ಕಾರ್ಯಗಳಿಗೂ ಸಹಕಾರ ಅಗತ್ಯ ಎಂದರು.

ಸಾನ್ನಿಧ್ಯವನ್ನು ಗುರುಪಾದ ಶ್ರೀಗಳು ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ನ್ಯಾಯವಾದಿ ವಿ.ಆರ್. ಗುಡಿಸಾಗರ, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಬಿ. ಅಳಗವಾಡಿ, ತಾ.ಪಂ ಮಾಜಿ ಉಪಾಧ್ಯಕ್ಷ ಪ್ರಭು ಮೇಟಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಂಗಪ್ಪ ಮೆಣಸಿನಕಾಯಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ, ಸದಸ್ಯ ಬಸವರಾಜ ನವಲಗುಂದ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಯೂಸುಪ್ ಇಟಗಿ, ವಿ.ಬಿ. ಸೋಮನಕಟ್ಟಿಮಠ, ವಿ.ಬಿ. ಪಸಾರದ, ಕಾಶೀಮಸಾಬ ಪಿಂಜಾರ, ಬಿ.ಎಸ್. ರಡ್ಡೇರ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಜಿಲ್ಲೆಯಲ್ಲಿ 26 ಶುದ್ಧಗಂಗಾ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 26 ಕೆರೆಗಳ ಹೂಳು ತೆಗೆಯುವ ಕಾರ್ಯವನ್ನು ಮಾಡಲಾಗಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗುವ ಕೆಲಸಗಳಿದ್ದಲ್ಲಿ ಅವುಗಳಿಗೆ ಸಹಕಾರ ನೀಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸದಾಕಾಲ ಸಿದ್ಧವಿದೆ.

  • ಕೇಶವ ದೇವಾಂಗ.
    ಧ.ಗ್ರಾ.ಸಂ ಯೋಜನಾಧಿಕಾರಿ, ಗದಗ.

ಶ್ರೀ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಸೇವೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಹಾಶಿವರಾತ್ರಿಯ ದಿನದಂದು ಶ್ರೀ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಗಾಗಿ ಸಿದ್ಧಗೊಂಡಿರುವ 5 ಸಾವಿರ ಶಿವಲಿಂಗಗಳನ್ನು ಶುಭ್ರಗೊಳಿಸಿ ಪೂಜೆ ಸಲ್ಲಿಸುವ ಸೇವಾ ಕಾರ್ಯದ ಮೂಲಕ ಶ್ರದ್ಧಾ-ಭಕ್ತಿಯಿಂದ ಶಿವರಾತ್ರಿ ಹಬ್ಬದಲ್ಲಿ ಪಾಲ್ಗೊಂಡರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಪರಶುರಾಮ ಬಾರ್ಕಿ ಮಾರ್ಗದರ್ಶನ ಮತ್ತು ಎನ್‌ಎಸ್‌ಎಸ್ ಘಟಕದ ಅಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ ಅವರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಧರ್ಮಕ್ಷೇತ್ರಕ್ಕೆ ಆಗಮಿಸಿ ಶಿವಲಿಂಗಗಳನ್ನು ನೀರಿನಿಂದ ಶುಭ್ರಗೊಳಿಸಿ ವಿಭೂತಿ ಲೇಪಿಸಿ, ಪುಷ್ಪ, ಬಿಲ್ವಪತ್ರೆಗಳಿಂದ ಅಲಂಕರಿಸಿದರು. ಪೂಜಿತಗೊಂಡ ಶಿವಲಿಂಗಗಳನ್ನು ಆಗಮಿಸಿದ ಅಪಾರ ಭಕ್ತರು ಸ್ಪರ್ಶಿಸಿ ಭಕ್ತಿಯಿಂದ ನಮಿಸಿದರು.

ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಪ್ರೊ. ವಿಕ್ರಂ ಶಿರೋಳ, ಡಾ. ಅರುಣ ಕುಂಬಿ, ಪ್ರೊ. ಶಿವಲಿಂಗಪ್ಪ ಡಿ.ಆರ್, ಪ್ರೊ. ಷಣ್ಮುಖ ಗಡ್ಡೆಣ್ಣವರ, ಸೋಮು ನವಲಗುಂದ, ರವಿ ದುರಗಣ್ಣವರ, ಪ್ರೊ. ನವೀನ, ಮಂಜುನಾಥ್ ಸಾತಪುತೆ, ಸಿಬ್ಬಂದಿಗಳ ಸೇರಿ ಅನೇಕ ವಿದ್ಯಾರ್ಥಿಗಳು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಶಿವರಾತ್ರಿ ದಿನ ಧರ್ಮಕ್ಷೇತ್ರದಲ್ಲಿನ ಶಿವಲಿಂಗಗಳನ್ನು ಶುಭ್ರಗೊಳಿಸಿ ಪೂಜಿಸಲಾಗುತ್ತದೆ. ಈ ದಿನ ಉಪವಾಸ ವ್ರತಾಚರಣೆಯೊಂದಿಗೆ ಶಿವಲಿಂಗ ಪೂಜಾ ಸೇವೆ ಮಾಡುವುದು ತಮ್ಮ ಭಾಗ್ಯವೆಂದು ಕಾಲೇಜಿನ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನ ಅಗಡಿ ಇಂಜಿನಿಯರಿಂಗ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆ ಮತ್ತು ಭಕ್ತಿಯಿಂದ ಕ್ಷೇತ್ರದಲ್ಲಿನ ಸಾವಿರಾರು ಶಿವಲಿಂಗಗಳಿಗೆ ಜಲಪ್ರೋಕ್ಷಣೆ ಮಾಡಿ ಅಲಂಕರಿಸುವ ಮೂಲಕ ಶಿವರಾತ್ರಿ ಜಾತ್ರಾಮಹೋತ್ಸವಕ್ಕೆ ಜೀವಕಳೆ ನೀಡುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶ್ರೀಗಳು ಹೇಳಿದರು.

ಶಿವರಾತ್ರಿಯ ನಿಮಿತ್ತ ಅಪಾರ ಭಕ್ತರು ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿ ಲಿಂ. ವೀರಗಂಗಾಧರ ಜಗದ್ಗುರುಗಳ ಕೃತ ಗದ್ದುಗೆ, ಶಿವಲಿಂಗ ದರ್ಶನ ಮತ್ತು ಕ್ಷೇತ್ರದ ಪಟ್ಟಾಧ್ಯಕ್ಷರ ದರ್ಶನಾಶೀರ್ವಾದ ಪಡೆದರು.

ಮತಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ: ಮಿಥುನ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಿರೇವಡ್ಡಟ್ಟಿ ಗ್ರಾಮದ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು, ರಸ್ತೆ ನಿರ್ಮಾಣ, ಆರೋಗ್ಯ, ಕೃಷಿ, ಶಿಕ್ಷಣ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ ಹೇಳಿದರು.

ಡಂಬಳ ಹೋಬಳಿ ಹಿರೇವಡ್ಡಟ್ಟಿ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದ ಯುವಕ ಮಂಡಳಿ ಹಾಗೂ ಭಜನಾ ಸಂಘದ ಸಮುದಾಯ ಭವನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 50 ಲಕ್ಷ ರೂಗಳ ಅನುದಾನದ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಮುದಾಯ ಭವನದ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣವಾಗಬೇಕು. ಗ್ರಾಮದ ಮನಕವಾಡ ಮಠಕ್ಕೂ ಈಗಾಗಲೇ 20 ಲಕ್ಷ ರೂ ಅನುದಾನ ನೀಡಲಾಗಿದೆ. ಇನ್ನೂ ಹೆಚ್ಚಿನ ಅನುದಾನ ನೀಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇಂತಹ ಧಾರ್ಮಿಕ ಕೇಂದ್ರಗಳಿಂದ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು.

ಪರಮಪೂಜ್ಯ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಈ ಭಾಗದ ಗ್ರಾಮದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವುದು ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಹನಮರಡ್ಡಿ ಮೇಟಿ, ಲೋಕಪ್ಪ ನಂದಿಕೋಲ, ಶಿವಪ್ಪ ಅಂಕದ, ಸುರೇಶ ಕವಲೂರ, ಶರಣಪ್ಪ ನಂದಿಕೋಲ, ವೆಂಕಪ್ಪ ಬಳ್ಳಾರಿ, ಅಬ್ದುಲ್‌ಸಾಬ್ ಕಲಕೇರಿ, ಗುಳಪ್ಪ ಸಂಗನಾಳ, ಶರಣಪ್ಪ ಅಂಕದ, ಶ್ರೀವೀರಭದ್ರೇಶ್ವರ ದೇವಸ್ಥಾನದ ಯುವಕ ಮಂಡಳಿ ಹಾಗೂ ಭಜನಾ ಸಂಘದ ಅಧ್ಯಕ್ಷ ಹಾಲೇಶ ಹಲಿಗಿಲಿವಾಡ, ಉಪಾಧ್ಯಕ್ಷ ಶ್ರಾವಣ ಶಿವಳ್ಳಿ, ಕಾರ್ಯದರ್ಶಿ ಮಲ್ಲಣ್ಣ ಅಂಕದ, ಖಜಾಂಚಿ ಪ್ರಶಾಂತ ಹಂಚಿನಾಳ, ಉಮೇಶ ಕಿರಿಕಿರಿ, ಶರಣಪ್ಪ ಕುಂದ್ರಹಳ್ಳಿ, ಮಂಜುನಾಥ ಮೇವುಂಡಿ, ಸುರೇಶ ಮುಪ್ಪಿನಎಣ್ಣಿ, ಈರಣ್ಣ ಕಾಮಣ್ಣವರ, ಸುರೇಶಪ್ಪ ಬಣವಿ, ಚನ್ನಪ್ಪ ಜುಂಜುರಿ ಗುತ್ತಿಗೆದಾರ ಫಕ್ಕಿರಸಾಬ್ ಕೊಪ್ಪಳ, ಗ್ರಾಮದ ಹಿರಿಯರು, ಯುವಕರು ಇದ್ದರು.

ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ, ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಮಾತನಾಡಿ, ರೋಣ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಶಾಸಕ ಜಿ.ಎಸ್. ಪಾಟೀಲರ ಶಿಫಾರಸ್ಸಿನ ಮೇರೆಗೆ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಿಯವರಿಗೂ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ನಮ್ಮ ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಮಾದರಿ ಗ್ರಾಮವನ್ನಾಗಿ ಮಾಡಲು ಗ್ರಾಮದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಶ್ರಮಿಸೋಣ ಎಂದು ಹೇಳಿದರು.

ನಕಲಿ ದಾಖಲೆ ಸೃಷ್ಟಿಸಿ KSRTC ಸಿಬ್ಬಂದಿ ವರ್ಗಾವಣೆ: FIR ದಾಖಲು, ಪೊಲೀಸರಿಂದ ತನಿಖೆ ಚುರುಕು

0

ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗದ ಮಾಗಡಿ ಘಟಕದಲ್ಲಿ ಕೆಲಸಮಾಡುತ್ತಿದ್ದ ಕೆಎಸ್‌ಆರ್‌ಟಿಸಿ ಚಾಲಕ-ಕಂ ನಿರ್ವಾಹಕ ಎಂ. ಜಯದೇವ್ ಅವರನ್ನು ಏಕಾಏಕಿ ಮಂಗಳೂರು ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

ಪರಿಶೀಲನೆಯ ವೇಳೆ ಜಯದೇವ್ ಅವರ ಹೆಸರಿನಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಲಾಗಿದೆ ಎಂಬುದು ಪತ್ತೆಯಾದರೂ, ಅವರು ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ. ಇದರಿಂದಾಗಿ ವಿಧಾನಸೌಧ ಠಾಣೆಯಲ್ಲಿ ಸಚಿನ್ ವಿರುದ್ಧ ಪ್ರಕರಣ ದಾಖಲಾಗಿದೆ. ಹಿಂದಿನ ಘಟನೆಗಳಲ್ಲಿ, 11.11.2025 ರಂದು ಜಯದೇವ್ ಅನ್ನು ಬೆಂಗಳೂರು ಕೇಂದ್ರೀಯ 6ನೇ ಘಟಕದಿಂದ ಮಂಗಳೂರು ವಿಭಾಗಕ್ಕೆ ವರ್ಗಾಯಿಸಿದ್ದರು.

ಬಳಿಕ RTI ಮೂಲಕ ದಾಖಲಾತಿಗಳನ್ನು ಪರಿಶೀಲಿಸಿದಾಗ, ಜಯದೇವ್ ಅವರ ನಕಲಿ ಸಹಿ ಮತ್ತು ನಕಲಿ ಅರ್ಜಿಯನ್ನು ಸೃಷ್ಟಿಸಿ, ಸಚಿವರ ಕಚೇರಿಗೆ ಸಲ್ಲಿಸಿರುವುದು ಪತ್ತೆಯಾಗಿದ್ದು, ಸಂಬಂಧಿತ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಸೂಚಿಸಿದ್ದಾರೆ.

ವಿಜಯೇಂದ್ರನಂತೆ ಯತೀಂದ್ರ ಕೂಡ ವಸೂಲಿ ಕಂಪನಿಯಾಗಿದ್ದಾನೆ; ಯತ್ನಾಳ್

0

ವಿಜಯಪುರ:- ಯತೀಂದ್ರ ಕೂಡ ವಿಜಯೇಂದ್ರನಂತೆ ವಸೂಲಿಗೆ ಇಳಿದಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಹೇಗೆ ಯಡ್ಡಿಯೂರಪ್ಪ ಸಿಎಂ ಇದ್ದಾಗ ವಸೂಲಿ ಮಾಡಿದ್ದ, ಹಾಗೆ ಸಿದ್ದರಾಮಯ್ಯ ಮಗ ಕೂಡ ವಿಜಯೇಂದ್ರನಂತೆ ವಸೂಲಿಗೆ ನಿಂತಿದ್ದಾನೆ. ವಿಜಯೇಂದ್ರ ಕಡೆ ರಾತ್ರಿ ಟ್ರೇನಿಂಗ್ ತೆಗೆದುಕೊಳ್ಳುತ್ತಾನಂತೆ. ಹೇಗೆ ನಕಲಿ ಸಹಿ ಮಾಡಬೇಕು ಅಂತ ತಿಳಿಸಿಕೊಳ್ಳುತ್ತಿದ್ದಾನೆ ಟ್ರೇನಿಂಗ್ ಕೊಡುವ ಮಾಸ್ಟರ್ ನಮ್ಮವನೇ. ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡುವುದಿಲ್ಲ, ಡಿಕೆಶಿ ಸಿಎಂ ಆಗುವುದಿಲ್ಲ. ವಿಧಾನಸಭೆ ವಿಸರ್ಜನೆ ನಿಶ್ಚಿತ ಎಂದಿದ್ದಾರೆ.

ಗದ್ದುಗೆ ಗುದ್ದಾಟ ಜಗಳ ವಿಧಾನಸಭೆ ವಿಸರ್ಜನೆವರೆಗೆ ಬಂದ್ರೆ ಆಶ್ಚರ್ಯ ಇಲ್ಲ. ಡಿಕೆಶಿ ಅವರಿಗೆ ಡೂ ಆರ್ ಡೈ ಇದೆ. ಸಿದ್ದರಾಮಯ್ಯ ಅವರಿಗೆ ಏನಿದೆ ಇನ್ನೊಮ್ಮೆ ಸಿಎಂ ಆಗಲ್ಲ, ಹೇಗಿದ್ರೂ ಮನೆಗೆ ಹೋಗುತ್ತೇನೆ ಅಂತಾ ಗೊತ್ತಿದೆ. ನನ್ನ ಮಗ ಅಂತ್ರೂ ಅಷ್ಟು ಯೋಗ್ಯನಲ್ಲ ಅಂತಾ ಗೊತ್ತಾಗಿದೆ. ವಿಸರ್ಜನೆ ಆಗೇ ಆಗುತ್ತೆ, ಮುಂದೆ ಮತ್ತೆ ಒಳ್ಳೆಯ ಸರ್ಕಾರ ಬರುತ್ತೆ. ರಾಜ್ಯದಲ್ಲಿ ನಡೆದಿರುವ ಭೂಕಬಳಿಕೆ, ಹಿಂದೂ ದೇವಸ್ಥಾನಗಳಿಗೆ ಕಲ್ಲು ಎಸೆಯು ವುದು. ನಿನ್ನೆ ಒಂದು ಮೂರ್ತಿ ಭಗ್ನ ಮಾಡಿದ್ದಾರೆ. ಇದೆಕ್ಕೆಲ್ಲ ಶಾಶ್ವತ ಪರಿಹಾರ ಅಂದ್ರೆ ನಮ್ಮ ಜೆಸಿಬಿ ಒಂದೇ ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ಸೋತ ಬೆನ್ನಲ್ಲೇ ಪಾಕ್ ನ ಇಬ್ಬರು ಸ್ಟಾರ್‌ ಆಟಗಾರರು ಔಟ್‌!?

0

ಕೊಲಂಬೋ: ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಸೋಲಿನಿಂದ ಕೆಟ್ಟ ಸ್ಥಿತಿಯಲ್ಲಿದ್ದ ಪಾಕಿಸ್ತಾನ ತಂಡ ಬಾಬರ್ ಅಜಂ ಮತ್ತು ಶಾಹಿನ್ ಅಫ್ರಿದಿಯನ್ನು ನಮೀಬಿಯಾ ವಿರುದ್ಧದ ಕೊನೆಯ ಪಂದ್ಯಕ್ಕೆ ವಿಶ್ರಾಂತಿಗೆ ಕಳಿಸಲು ನಿರ್ಧರಿಸಿದೆ.

ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಪಾಕ್ ಸೂಪರ್‌ 8 ಪ್ರವೇಶ ಸಾಧ್ಯವಾಗುತ್ತದೆ. ಭಾರತದೊಂದಿಗೆ ನಡೆದ ಪಂದ್ಯದಲ್ಲಿ 61 ರನ್‌ಗಳ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ತಮ್ಮ ಅಸಮಾಧಾನವನ್ನು ತಂಡದ ವ್ಯವಸ್ಥಾಪಕ ನವೇದ್ ಅಕ್ರಮ್ ಚೀಮಾಗೆ ವ್ಯಕ್ತಪಡಿಸಿದ್ದಾರೆ.

ಇದೀಗ ನಮೀಬಿಯಾ ವಿರುದ್ಧ ಬಾಬರ್ ಮತ್ತು ಶಾಹೀನ್ ಅವರ ಜಾಗದಲ್ಲಿ ಸಲ್ಮಾನ್ ಮಿರ್ಜಾ/ನಸೀಮ್ ಶಾ ಮತ್ತು ಫಖರ್ ಜಮಾನ್ ಅವರನ್ನು ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಎ ಗುಂಪಿನಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ಸೂಪರ್‌ 8 ಪ್ರವೇಶಿಸಿದೆ. ಇನ್ನೊಂದು ಕಡೆ 2 ಪಂದ್ಯ ಗೆದ್ದಿರುವ ಅಮೆರಿಕ ನೆಟ್‌ ರನ್‌ ರೇಟ್‌ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.

ಕೆಆರ್ ಪುರ| ಟ್ಯಾಕ್ಸ್ ಬಾಕಿ ಇರುವ ಕಟ್ಟಡ ಮಾಲೀಕರಿಗೆ ಶಾಕ್ ಕೊಟ್ಟ ಜಿಬಿಎ!

0

ಬೆಂಗಳೂರು:- ಕೆಆರ್ ಪುರ ವಲಯದಲ್ಲಿ ಜಿಬಿಎ ಅಧಿಕಾರಿಗಳು ಪ್ರಾಪರ್ಟಿ ಟ್ಯಾಕ್ಸ್ ಬಾಕಿ ಇರುವ ಕಟ್ಟಡ ಮಾಲೀಕರಿಗೆ ದಂಡ ಮತ್ತು ಹರಾಜು ಕ್ರಮ ಜಾರಿಗೊಳಿಸಿದ್ದಾರೆ.

ವಲಯ ಆಯುಕ್ತೆ ಡಾ. ಸುಧಾ ಸ್ವಪ್ನ್ ನೇತೃತ್ವದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ, ಎರಡು–ಮೂರು ವರ್ಷಗಳಿಂದ ವಾಣಿಜ್ಯ ಮಳಿಗೆಗಳು ಮತ್ತು ಕಟ್ಟಡಗಳಿಗೆ ಪಾವತಿ ಮಾಡದವುಗಳಿಗೆ ಸೀಲ್ ಹಾಕಿ, ಹರಾಜು ನೋಟೀಸ್ ಅಂಟಿಸಲಾಗಿದೆ.

ಕೆಆರ್ ಪುರ ವಲಯ ವ್ಯಾಪ್ತಿಯಲ್ಲಿ ಒಟ್ಟು 24 ಕಟ್ಟಡಗಳನ್ನು ಹರಾಜಿಗೆ ಗುರುತಿಸಲಾಗಿದೆ. ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಟ್ಟಡ ಮಾಲೀಕರ ವಿರುದ್ದ ಕ್ರಮ ಕೈಗೊಂಡಿದ್ದಾರೆ.

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಸೀಜ್; ಆರೋಪಿ ಅರೆಸ್ಟ್!

0

ಬೆಂಗಳೂರು:- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ತರಲಾಗಿದ್ದ ಸುಮಾರು 6.90 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಈ ಗಾಂಜಾ ಮೌಲ್ಯವು ಸುಮಾರು 2.44 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಗಾಂಜಾವನ್ನು ಸೂಟ್‌ಕೇಸ್‌ನಲ್ಲಿ ಕುಕ್ಕಿಸ್ ಪ್ಯಾಕೆಟ್‌ಗಳಾಗಿ ಮುಚ್ಚಿ ಸಾಗಿಸಲಾಗುತ್ತಿದ್ದು, ಇದೀಗ ಆರೋಪಿಗಳ ಬಂಧನವಾಗಿದೆ.

ಇದೀಗ ಆರೋಪಿ ವಿರುದ್ಧ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಗೆ ಜನರನ್ನು ದೂಡಲಾಗಿದೆ: ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ

0

ತುಮಕೂರು: ರಾಜ್ಯದ ಜನರಿಗೆ ಇನ್ನೊಬ್ಬರಿಗೆ ಕೊಡುವ ಶಕ್ತಿಯನ್ನು ಕೊಡಬೇಕಿತ್ತು. ಆದರೆ, ದಿನನಿತ್ಯ ಇನ್ನೊಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಗೆ ಜನರನ್ನು ದೂಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದ ಶಾಸಕರು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ. ಸುರೇಶ್ ಬಾಬು ಅವರು ತಮ್ಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಸುತ್ತಿರುವ ಜನಸ್ಪಂದನ ಕಾರ್ಯಕ್ರಮದ 100ನೇ ವಾರದ ಸಮಾರಂಭವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನರು ಬುದ್ಧಿವಂತರಾಗಬೇಕು. ಇನ್ನೊಬ್ಬರಿಗೆ ಕೊಡುವ ಶಕ್ತಿ ತಮಗೆ ಬರದೇ ಇರುವ ಬಗ್ಗೆ ಅವರು ಆಲೋಚನೆ ಮಾಡಬೇಕು. ಮಹಾತ್ಮ ಗಾಂಧೀಜಿ ಅವರ ರಾಮರಾಜ್ಯದ ಕನಸು ನನಸು ಎಂದರೆ ತಾನು ಒಬ್ಬರ ಮುಂದೆ ಕೈಚಾಚುವುದು ಅಲ್ಲ, ಇನ್ನೊಬ್ಬರಿಗೆ ಕೊಡುವುದು ಎಂದು ಕೇಂದ್ರ ಸಚಿವರು ಹೇಳಿದರು. ಪರೋಕ್ಷವಾಗಿ ಅವರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ, ಜನರನ್ನು ಶಾಶ್ವತವಾಗಿ ಆರ್ಥಿಕ ಸಬಲರನ್ನಾಗಿ ಮಾಡುವಷ್ಟು ಸಂಪನ್ಮೂಲ ರಾಜ್ಯದಲಿದೆ ಎಂದು ಎಂದಷ್ಟೇ ನಾನು ಹೇಳುತ್ತಿದ್ದೇನೆ ಎಂದವರು ನುಡಿದರು.

ಅಭಿವೃದ್ಧಿ ಎನ್ನುವುದು ಪ್ರಚಾರದಲ್ಲಿ ಮಾತ್ರ ಕಾಣುತ್ತಿದೆ. ಕೇವಲ ಜಾಹೀರಾತುಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ. ನೂರಾರು ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡಿ ಜಾಹೀರಾತು ನೀಡಲಾಗುತ್ತಿದೆ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದೇನೆ. ಆದರೆ, ಅದನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಿಲ್ಲ. ಈಗ ನೋಡಿದರೆ ಕೆಲಸಕ್ಕಿಂತ ಪ್ರಚಾರವೇ ಜಾಸ್ತಿಯಾಗಿದೆ ಎಂದು ಅವರು ಟೀಕಿಸಿದರು.

ಪ್ರಚಾರಕ್ಕಿಂತ ಕರ್ತವ್ಯವೇ ಮಿಗಿಲು ಎಂದು ನಾನು ನಂಬಿದ್ದೇನೆ. ಕೇವಲ ರಾಜಕೀಯ ಲಾಭದ ಭರವಸೆಗಳಿಂದ ಜನರಿಗೆ ಉಪಯೋಗವಿಲ್ಲ. ಅವರನ್ನು ಶಾಶ್ವತವಾಗಿ ಮೇಲೆತ್ತುವ ಕೆಲಸ ಆಗಬೇಕಿದೆ. ಕೃಷಿಕರಿಗೆ ಶಕ್ತಿ ತುಂಬಬೇಕಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಸೌಲಭ್ಯಗಳು ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿರಬೇಕು. ಆದರೆ, ರಾಜ್ಯದಲ್ಲಿ ಬೇರೆಯದೇ ಪರಿಸ್ಥಿತಿ ಇದೆ ಎಂದು ಕೇಂದ್ರ ಸಚಿವರು ಕಳವಳ ವ್ಯಕ್ತಪಡಿಸಿದರು.

ಜನೌಷಧಿ ಕೇಂದ್ರಗಳಿಗೂ ಕಲ್ಲು ಹಾಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿತ್ತು: ಬಿ.ವೈ.ವಿಜಯೇಂದ್ರ

0

ಬೆಂಗಳೂರು: ಶಾಸಕರಿಗೆ ವಿದೇಶ ಪ್ರವಾಸ ಭಾಗ್ಯ ದಯಪಾಲಿಸಿದ ಮುಖ್ಯಮಂತ್ರಿಯವರು ಆರೋಗ್ಯ ಸಚಿವರನ್ನೂ ಆಸ್ಟ್ರೇಲಿಯ, ನ್ಯೂಜಿಲೆಂಡ್‍ಗೆ ಕಳಿಸಿದರೆ ಬಡವರ ಪರಿಸ್ಥಿತಿ ಏನಾದೀತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಸರಕಾರಿ ಆಸ್ಪತ್ರೆಗಳಲ್ಲಿ ಇದೀಗ ಔಷಧಿ ಸಿಗದೇ ಬಡಜನರು ಪರದಾಡುತ್ತಿದ್ದಾರೆ. ಎಷ್ಟೋಕಡೆ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಿದ ಮಾಹಿತಿ ಬರುತ್ತಿದೆ ಎಂದು ಆರೋಪಿಸಿದರು.

ಆರೋಗ್ಯ ಇಲಾಖೆ ಸಚಿವರು, ಮುಖ್ಯಮಂತ್ರಿಗಳು ಇದರ ಕುರಿತು ಗಮನ ಹರಿಸಿಲ್ಲ ಎಂದು ಟೀಕಿಸಿದರು. ಸಚಿವರು, ಶಾಸಕರನ್ನು ಹೊರಕ್ಕೆ ಕಳಿಸುವ ಮುಂಚಿತವಾಗಿ ಔಷಧಿ ಸಮರ್ಪಕ ಸರಬರಾಜಿಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರ ಜನಪ್ರಿಯತೆಯನ್ನು ಸಹಿಸಲು ಸಾಧ್ಯವಾಗದೇ ಜನೌಷಧಿ ಕೇಂದ್ರಗಳಿಗೂ ಕಲ್ಲು ಹಾಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿತ್ತು. ಗ್ರಾಮೀಣ ಭಾಗದಲ್ಲಿ ಕೃತಕವಾಗಿ ಔಷಧಿ ಕೊರತೆಯನ್ನು ಸೃಷ್ಟಿಸಿ,

ಟೆಂಡರ್ ಕರೆಯದೇ ತುರ್ತು ಖರೀದಿ ಎಂದು ಕಳ್ಳ ದಂಧೆ ಮಾಡಲು ಸರಕಾರ ಹೊರಟಿದೆಯೇ ಎಂಬ ವಿಚಾರ ರಾಜ್ಯದ ಜನರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದರು. ರಾಜ್ಯ ಸರಕಾರ, ಸಚಿವರು ಎಚ್ಚತ್ತುಕೊಂಡು ಇದರ ಕುರಿತು ಗಮನ ಹರಿಸಬೇಕು. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಿದರು.

error: Content is protected !!