Home Blog Page 2046

ಸಂಪುಟ ಪುನಾರಚನೆ ವಿಚಾರ: ಸಚಿವ ಜಿ. ಪರಮೇಶ್ವರ್ ಹೇಳಿದ್ದೇನು..?

0

ಬೆಂಗಳೂರು: ಖಾತೆ ಬದಲಾವಣೆ ಬಗ್ಗೆ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ. ಡಿಸಿಎಂ ಅವರು ದೆಹಲಿಗೆ ಹೋಗಿದ್ದಾರೆ. ಖಾತೆ ಬದಲಾವಣೆ ಬಗ್ಗೆ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ಇಷ್ಟು ಕಾಲ ವರಿಷ್ಠರು ಏನು ಜವಾಬ್ದಾರಿ ಕೊಟ್ಟಿದ್ದಾರೋ ಅದನ್ನು ಮಾಡಿಕೊಂಡು ಬಂದಿದ್ದೇನೆ.

ಈಗಲೂ ಅವರು ಏನೇ ಜವಾಬ್ದಾರಿ ಕೊಟ್ಟರೂ ಮಾಡುವುದಿಕ್ಕೆ ನಾನು ತಯಾರಾಗಿರುತ್ತೀನಿ. ಪಕ್ಷದ ಸೂಚನೆಯನ್ನು 35 ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದೇನೆ. ಸರ್ಕಾರ, ಪಕ್ಷದಲ್ಲಿ ಕೊಟ್ಟ ಜವಾಬ್ದಾರಿ ಮಾಡಿಕೊಂಡು ಬಂದಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಕೇಳಿದ್ದೇನೆ. ಒಂದೊಮ್ಮೆ ಆ ವಿಚಾರ ವರಿಷ್ಠರ ಮುಂದೆ ಇದ್ದರೆ ಬದಲಾವಣೆ ಮಾಡುತ್ತಾರೆ ಎಂದರು.

ಇನ್ನೂ ಮುಡಾ ಪ್ರಕರಣದಲ್ಲಿ ಸಿಎಂ ಕುಟುಂಬಕ್ಕೆ ಜಮೀನು ಮಾರಿದ ಮೂಲ ಮಾಲೀಕರ ಮಕ್ಕಳಿಂದ ದೂರು ವಿಚಾರವಾಗಿ ಮಾತನಾಡಿ, ಈಗಾಗಲೇ ಲೋಕಾಯುಕ್ತದಲ್ಲಿ ಮುಡಾ ತನಿಖೆ ನಡೆಯುತ್ತಿದೆ. ಬಹುಶ: ಲೋಕಾಯುಕ್ತದವರು ಇದನ್ನು ಗಮನಿಸಬಹುದು. ತನಿಖೆ ಮಾಡುವವರು ಇದನ್ನು ಗಮಿಸಿಯೇ ತನಿಖೆ ಮಾಡುತ್ತಾರೆ ಎಂದು ತಿಳಿಸಿದರು.

ಮತ್ತೊಂದು ಬೆಚ್ಚಿ ಬೀಳುವ ಘಟನೆ: ಆಸ್ಪತ್ರೆಗೆ ನುಗ್ಗಿ ಮಚ್ಚಿನಿಂದ ನರ್ಸ್ ಮೇಲೆ ಪಾಗಲ್ ಪ್ರೇಮಿ ಹಲ್ಲೆ

0

ಬೆಳಗಾವಿ ನಗರದಲ್ಲಿ ಮತ್ತೊಂದು ಬೆಚ್ಚಿ ಬೀಳುವ ಘಟನೆ ನಡೆದಿದೆ. ಕೈ ಚೀಲದಲ್ಲಿ ಮಚ್ಚು ತೆಗೆದುಕೊಂಡು ಬಂದು ಆಸ್ಪತ್ರೆಗೆ ನುಗ್ಗಿ ನರ್ಸ್ ಮೇಲೆ ಪಾಗಲ್ ಪ್ರೇಮಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಪಾಗಲ್ ಪ್ರೇಮಿ ಪ್ರಕಾಶ್ ಜಾಧವ್ ಎಂಬಾತನಿಂದ ಕೃತ್ಯ ನಡೆದಿದ್ದು, ನರ್ಸ್ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಕಾಲೋನಿಯಲ್ಲಿ ವಾಸವಿರುವ ಪ್ರಕಾಶ್ ನರ್ಸ್ ಗೆ ನಿತ್ಯ ಹಿಂಬಾಲಿಸುವುದು, ಮದುವೆ ಆಗುವಂತೆ ಪೀಡಿಸುತ್ತಿದ್ದನು. ಕೆಲ ದಿನಗಳ ಹಿಂದೆ ತನ್ನ ಕುಟುಂಬದ ಜೊತೆ ನರ್ಸ್​ ಮನೆಗೆ ಹೋಗಿದ್ದ.

ನರ್ಸ್ ಕುಟುಂಬಸ್ಥರ ಬಳಿ ಮದುವೆ ಮಾಡಿಕೊಡುವಂತೆ ಪ್ರಸ್ತಾಪಿಸಿದ್ದ. ಆದರೆ ಮದುವೆ ಮಾಡಿಕೊಡಲು ನರ್ಸ್ ಕುಟುಂಬಸ್ಥರು ನಿರಾಕರಿಸಿದ್ದರು. ಇದಾದ ಬಳಿಕವೂ, ಮದುವೆ ಆಗುವಂತೆ ನರ್ಸ್​ ಬೆನ್ನುಬಿದ್ದದ್ದ ಪ್ರಕಾಶ್​​, ಆಕೆ ಸ್ಪಂದಿಸದಿದ್ದಾಗ ಆಸ್ಪತ್ರೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಆತನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಮಾಹಿತಿ ದೊರೆತ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ಖಡೇಬಜಾರ್ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕದನ ವಿರಾಮದ ಮಧ್ಯೆಯೇ ಪಾಕ್ ನಲ್ಲಿ ಬುಗಿಲೆದ್ದ ಹಿಂಸಾಚಾರ: 10 ಮಂದಿ ಬಲಿ

ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಅಲಿಜೈ ಮತ್ತು ಬಗಾನ್ ಬುಡಕಟ್ಟುಗಳ ನಡುವೆ ಮತ್ತೆ ಘರ್ಷಣೆ ನಡೆದಿದೆ. ಈ ಎರಡು ಸಮುದಾಯಗಳ ನಡುವೆ ವಾರದ ಹಿಂದೆ ಜಗಳ ನಡೆದು ಹಲವರು ಮೃತಪಟ್ಟಿದ್ದರು. ಬಳಿಕ ಕದನ ವಿರಾಮ ಘೋಷಿಸಲಾಗಿತ್ತು. ಇದೀಗ ಕದನ ವಿರಾಮದ ನಡುವೆಯೂ ಎರಡು ಪ್ರ್ಯಾಂತ್ಯಗಳ ನಡುವೆ ಗಲಾಟೆ ನಡೆದಿದ್ದು ಘಟನೆಯಲ್ಲಿ ಕನಿಷ್ಟ 10 ಮಂದಿ ಮೃತಪಟ್ಟಿದ್ದಾರೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಯವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾದ, ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಕುರ್ರಮ್ ಜಿಲ್ಲೆಯಲ್ಲಿ ಎರಡು ಬುಡಕಟ್ಟು ಸಮುದಾಯದ ನಡುವೆ ಮತ್ತೆ ಘರ್ಷಣೆ ಭುಗಿಲೆದ್ದಿದೆ.ಘಟನೆಯಲ್ಲಿ 10 ಜನರ ಮೃತಪಟ್ಟಿದ್ದು 21 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಶುಕ್ರವಾರ ಈ ಎರಡು ಬುಡಕಟ್ಟುಗಳ ನಡುವೆ ನಡೆದ ಭೀಕರ ಸಂಘರ್ಷದಲ್ಲಿ ಕನಿಷ್ಟ 47 ಮಂದಿ ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿದ್ದರು. ಬಳಿಕ ಭಾನುವಾರ ಪ್ರಾಂತೀಯ ಸರಕಾರ ಹಾಗೂ ಎರಡೂ ಬುಡಕಟ್ಟುಗಳ ಮುಖಂಡರ ನಡುವೆ ನಡೆದ ಮಾತುಕತೆಯಲ್ಲಿ ಒಂದು ವಾರದ ಕದನ ವಿರಾಮಕ್ಕೆ ಎರಡೂ ಬುಡಕಟ್ಟು ಸಮುದಾಯದವರು ಒಪ್ಪಿಕೊಂಡಿದ್ದರು. ಆದರೆ ಮಂಗಳವಾರ ತಡರಾತ್ರಿ ಮತ್ತೆ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಂತೀಯ ಸರ್ಕಾರದ ನಿಯೋಗ ಮತ್ತು ಎರಡೂ ಪಂಗಡಗಳ ಹಿರಿಯರ ನಡುವಿನ ಸಭೆಗಳ ನಂತರ ಭಾನುವಾರ ಶಿಯಾ ಮತ್ತು ಸುನ್ನಿ ಸಮುದಾಯಗಳ ನಡುವೆ ಏಳು ದಿನಗಳ ಕದನ ವಿರಾಮ ಘೋಷಿಸಲಾಗಿತ್ತು.

ಕಲಬುರಗಿ ಸೆಂಟ್ರಲ್ ಜೈಲು ಮುಖ್ಯ ಅಧೀಕ್ಷಕಿ ಹತ್ಯೆಗೆ ಸಂಚು!? ಕಾರು ಸ್ಪೋಟಿಸುವ ಬೆದರಿಕೆ ಸಂದೇಶ!

0

ಕಲಬುರ್ಗಿ:- ಅನಾಮಧೇಯ ವ್ಯಕ್ತಿ ಓರ್ವನಿಂದ ಕಲಬುರಗಿ ಸೆಂಟ್ರಲ್ ಜೈಲು ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೊಟಿಸುವುದಾಗಿ ಬೆದರಿಕೆ ಸಂದೇಶ ಬಂದಿದೆ.

ಕಲಬುರಗಿ ನಗರದ ಪೊಲೀಸ್ ಇನ್ಸ್​ಪೆಕ್ಟರ್ ಮೊಬೈಲ್​ಗೆ ಕಾರು ಸ್ಪೋಟಿಸುವ ಆಡಿಯೋ ಸಂದೇಶ ಬಂದಿದೆ. ಕಾರು ಸ್ಫೊಟಿಸುವ ಮೂಲಕ ಅನಿತಾ ಹತ್ಯೆಗೆ ಸಂಚು ಹೂಡಲಾಗಿದೆಯೇ ಎಂಬ ಅನುಮಾನ ಇದೀಗ ಬಲವಾಗಿದೆ.

ಸದ್ಯ ಪೊಲೀಸ್ ಇನ್ಸ್​ಪೆಕ್ಟರ್ ಆಡಿಯೋ ಬೆದರಿಕೆ ಸಂದೇಶದ ಬಗ್ಗೆ ಸುಪರಿಂಟೆಂಡೆಂಟ್ ಗಮನಕ್ಕೆ ತಂದಿದ್ದಾರೆ. ಇದೀಗ ಬೆದರಿಕೆ ಸಂದೇಶದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅನಿತಾ, ಸಿಸಿಟಿವಿ ಕಣ್ಗಾವಲಿನಲ್ಲೇ ಕಾರು ಪಾರ್ಕ್ ಮಾಡುವಂತೆ ಸೂಚನೆ ನೀಡಿದ್ದಾರೆ. ಜೈಲಿನ ಬಳಿ ಹಾಗೂ ಇತರೆಡೆಗಳಲ್ಲಿ ಎಲ್ಲೇ ಆದರೂ ಸಿಸಿಟಿವಿ ಇರುವ ಕಡೆ ಕಾರ್ ಪಾರ್ಕಿಂಗ್ ಮಾಡಲು ಸೂಚನೆ ನೀಡಿದ್ದಾರೆ.

ಒಂದೂವರೆ ತಿಂಗಳ ಹಿಂದೆಯಷ್ಟೆ ಅನಿತಾ ಕಲಬುರಗಿ ಜೈಲಿಗೆ ವರ್ಗಾವಣೆಯಾಗಿ ಬಂದಿದ್ದಾರೆ. ಅವರು ಅಧಿಕಾರ ಸ್ವೀಕಾರ ಮಾಡಿದ ದಿನವೇ ಜೈಲಿನಲ್ಲಿ ಕೈದಿಗಳು ಹೈಫೈ ಜೀವನ ನಡೆಸುತ್ತಿರುವುದು ಅನಾವರಣ ಆಗಿತ್ತು. ಇದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದರು.

ಅನಿತಾ ಅವರು ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದ್ದರಿಂದ ಕೆರಳಿದ ಕೈದಿಗಳೇ ಬೆದರಿಕೆ ಸಂದೇಶ ಕಳುಹಿಸಿದರೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ.‌

ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು!

0

ಹಾವೇರಿ:- ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದ ಬಳಿ ಜರುಗಿದೆ.

ಮೃತ ಬಾಲಕರನ್ನು 12 ವರ್ಷದ ರಾಕೇಶ ಕೂಲೇರ್, 12 ವರ್ಷದ ಸಂತೋಷ ಚನ್ನಗೌಡ ಎಂದು ಗುರುತಿಸಲಾಗಿದೆ.

ಇಬ್ಬರು ಬಾಲಕರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಕುಮುದ್ವತಿ ನದಿಯಲ್ಲಿ ಸ್ನಾನ‌ ಮಾಡಲು ಹೋದಾಗ ಈಜಲು ಬಾರದೇ ಈ ಅವಘಡ ಸಂಭವಿಸಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಮೃತದೇಹದ ಹೊರಗೆ ತೆಗೆಯುವ ಕಾರ್ಯ ಮಾಡಿದ್ದಾರೆ. ಘಟನೆ ಸಂಬಂಧ ರಾಣಿ ಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿಯಲ್ಲಿ ಶೂಟೌಟ್: ಓರ್ವ ಯುವಕನ ಸ್ಥಿತಿ ಗಂಭೀರ!

0

ಬೆಳಗಾವಿ:- ನಗರದ ನಂದಿನಿ ಡೈರಿ ಬಳಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯುವಕ ಗಂಭೀರ ಗಾಯಗೊಂಡ ಘಟನೆ ಜರುಗಿದೆ.

ಬೆಳಗಾವಿ ನಗರದ ಮಹಾಂತೇಶ ನಗರ ಬಳಿಯ ನಂದಿನ ಡೈರಿಯ ಬಳಿ ಶೂಟೌಟ್ ನಡೆದಿದ್ದು, ತಿಳಕವಾಡಿಯ ನಿವಾಸಿ 31 ವರ್ಷದ ಪ್ರಣೀತ್ ಕುಮಾರ್ ಎಂಬ ಯುವಕನ ಮೇಲೆ ಗುಂಡಿನ ದಾಳಿ ನಡೆದಿದೆ.

ಕೆಎಂಎಫ್ ಡೈರಿ ಬಳಿ ಟಿಳಕವಾಡಿಯ ದ್ವಾರಕಾ ನಗರ ಐದನೇ ಕ್ರಾಸ್‌ನ ನಿವಾಸಿ ಪ್ರಣೀತ್ ಕುಮಾರ್ ಮೇಲೆ ವೈಯಕ್ತಿಕ ದ್ವೇಷ ಹಿನ್ನೆಲೆ ದಾಳಿ ನಡೆದಿರುವ ಶಂಕೆ ಇದೆ ಎನ್ನಲಾಗಿದೆ.

ಸ್ಥಳಕ್ಕೆ ಮಾಳಮಾರುತಿ ಠಾಣೆ ಎಸಿಪಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಪ್ರತ್ಯಕ್ಷ್ ಜೊತೆ ಹಸೆಮಣೆ ಏರಲು ಸಜ್ಜಾದ ಚಂದನಾ ಅನಂತಕೃಷ್ಣ: ಇಂದು ಬೆಂಗಳೂರಿನಲ್ಲಿ ಮದುವೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿಯ ಚಿನ್ನುಮರಿ ಖ್ಯಾತಿಯ ಚಂದನಾ ಅನಂತಕೃಷ್ಣ ಮದುವೆ ಸಂಭ್ರದಲ್ಲಿದ್ದಾರೆ. ಇಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ವಿವಾಹ ನಡೆಯಲಿದ್ದು ಮದುವೆಗೆ ಉದ್ಯಮಿಗಳು, ಸಿನಿಮಾ ರಂಗದವರು ,ಕಿರುತೆರೆ ಕಲಾವಿದರು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಸದ್ಯ ಮೆಹೆಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದ್ದು, ಕ್ಯೂಟ್ ಜೋಡಿ ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ ಅಂತ ಹೆಜ್ಜೆ ಹಾಕಿ ಸಂಭ್ರಮಿಸಿದೆ. ಚಂದನಾ ಖುಷಿಯಲ್ಲಿ ಲಕ್ಷ್ಮೀ ನಿವಾಸ ತಂಡ ಕೂಡ ಜೊತೆಯಾಗಿದೆ.

ಚಂದನಾ ಅವರು ತಾವು ಮದುವೆಯಾಗುತ್ತಿರುವ ಹುಡುಗ ಪ್ರತ್ಯಕ್ಷ್‌‌ ಜತೆ ಸಖತ್‌ ಡ್ಯಾನ್ಸ್‌ ಮಾಡಿದ್ದಾರೆ. ಕುಟುಂಬಸ್ಥರು ನಿಶ್ಚಯಿಸಿರುವ ಮದುವೆ ಇದಾಗಿದ್ದು, ಬಂಧು – ಮಿತ್ರರು, ಕಿರುತೆರೆ ಕಲಾವಿದರ ಸಮ್ಮುಖದಲ್ಲಿ ಚಂದನಾ ಅನಂತಕೃಷ್ಣ – ಪ್ರತ್ಯಕ್ಷ್ ವಿವಾಹವಾಗಲಿದ್ದಾರೆ.

ಮೂಲತಃ ಚಿಕ್ಕಮಗಳೂರಿನವರಾಗಿರುವ ಪ್ರತ್ಯಕ್ಷ ಬೆಂಗಳೂರಿನಲ್ಲೇ ಸ್ವಂತ ಉದ್ಯಮ ಹೊಂದಿದ್ದಾರೆ. ಸಿನಿಮಾ ಕುಟುಂಬದ ಹಿನ್ನಲೆ ಹೊಂದಿರೋ ಪ್ರತ್ಯಕ್ಷ ತಂದೆ ನಟ ದಿವಂಗತ ಉದಯ್ ಹುತ್ತಿನಗದ್ದೆ ಹಾಗೂ ತಾಯಿ ಲಲಿತಾಂಜಲಿ ಉದಯ್ ದಂಪತಿ ಪುತ್ರ. ಪ್ರತ್ಯಕ್ಷ್‌ ತಂದೆ ಉದಯ್‌ ಡಾ.ರಾಜ್‌ ಕುಮಾರ್‌ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಸಂಪುಟ ಪುನಾರಚನೆ ಫಿಕ್ಸ್!? DCM ಬೆನ್ನಲ್ಲೇ ದೆಹಲಿಯತ್ತ CM ಸಿದ್ದರಾಮಯ್ಯ!

0

ಬೆಂಗಳೂರು:- ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದು ಬೀಗಿದೆ. ಈ ಗೆಲುವಿನ ಖುಷಿಯಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಸಚಿವ ಸಂಪುಟ ಪುನಾರಚನೆಯ ಬಗ್ಗೆಯೂ ಚರ್ಚೆ ಮುನ್ನೆಲೆಗೆ ಬಂದಿದೆ.

ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ. ಶುಕ್ರವಾರ ಮಧ್ಯಾಹ್ನ ಸಭೆ ನಡೆಯಲಿದೆ. ಇದೇ ವೇಳೆ ಮುಖ್ಯಮಂತ್ರಿಗಳು ಕೇಂದ್ರದ ಕೆಲ ಸಚಿವರನ್ನು ಭೇಟಿಯಾಗಿ ರಾಜ್ಯದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಸಿಎಂ ಕಾರ್ಯಾಲಯ ತಿಳಿಸಿದೆ.

ಇನ್ನು ಈಗಾಗಲೇ ದೆಹಲಿ ತಲುಪಿರುವ ಡಿಕೆ ಶಿವಕುಮಾರ್ ಅವರು ನೂತನ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿ ಶುಭಕೋರಿದ್ದಾರೆ. ಶುಕ್ರವಾರ ಸಿಎಂ ಹಾಗೂ ಡಿಸಿಎಂ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಇನ್ನು ರಾಜ್ಯದಲ್ಲಿ ಸಂಪುಟ ಪುನಾರಚನೆ ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ಸ್ವತಃ ಡಿಕೆಶಿ ಸುಳಿವನ್ನೂ ನೀಡಿದ್ದಾರೆ. ಕೆಲವು ಸಚಿವರು ತ್ಯಾಗ ಮಾಡಬೇಕಾದ ಸಂದರ್ಭ ಬರಬಹುದು ಎಂಬ ಅರ್ಥದಲ್ಲೂ ಹೇಳಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿ ಭೇಟಿಯ ಸಂದರ್ಭದಲ್ಲಿ ವರಿಷ್ಠರಿಗೆ ಈ ವಿಚಾರವನ್ನು ಗಮನಕ್ಕೆ ತರುವ ಸಾಧ್ಯತೆ ಇದೆ.

ನಾಗರೀಕರ ಗಮನಕ್ಕೆ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್!

0

ಬೆಂಗಳೂರು:- ಬೆಸ್ಕಾಂ ಸಿಬ್ಬಂದಿಗಳ ತುರ್ತು ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ನಿರ್ವಹಣಾ ಕಾಮಗಾರಿಯ ಪ್ರಯುಕ್ತ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.

ನಗರದ ಏರ್‌ಪೋರ್ಟ್ ರಸ್ತೆ, ಕೋಡಿಹಳ್ಳಿ, 16 ಮತ್ತು 19ನೇ ಮುಖ್ಯರಸ್ತೆ, ಎಚ್‌ಎಎಲ್ 2ನೇ ಹಂತ, ಕಾಲ್ಟನ್ ಟವರ್ಸ್, ಎನ್‌ಎಎಲ್ ಕಾಂಪೌಂಡ್, ಕೋಡಿಹಳ್ಳಿ, ರಾಮ ಟೆಂಪಲ್ ರಸ್ತೆ, ವೆಂಕಟೇಶ್ವರ ಕಾಲೋನಿ, ಬೂಮರೆಡ್ಡಿ ಕಾಲೋನಿ, 515 ಕಾಲೋನಿ, ಕೋಡಿಹಳ್ಳಿ ಗ್ರಾಮ, 17, 18 ಹಾಗೂ 19ನೇ ಅಡಿ ಮುಖ್ಯರಸ್ತೆ, ಸರ್ವೀಸ್ ರಸ್ತೆ 100, 13ನೇ ಎಚ್, 12ನೇ ಮುಖ್ಯರಸ್ತೆ, ದೊಮ್ಮಲೂರು 2ನೇ ಹಂತ, 6ನೇ ಮುಖ್ಯ ಡಿಫೆನ್ಸ್ ಕಾಲೋನಿ, 80 ಅಡಿ ರಸ್ತೆ, 11ನೇ ಮುಖ್ಯರಸ್ತೆ, ಹಳೆ ತಿಪ್ಪಸಂದ್ರ, ಹೊಸ ತಿಪ್ಪಸಂದ್ರ, ಎಂಜಿ ರಸ್ತೆಗಳಲ್ಲಿ ಪವರ್ ಕಟ್ ಇರಲಿದೆ.

ಚರ್ಚ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಮ್ಯೂಸಿಯಂ ರಸ್ತೆ, ರೆಸ್ಟ್‌ಹೌಸ್ ರಸ್ತೆ, ರಿಚ್ಮಂಡ್ ರಸ್ತೆ, ಕಸ್ತೂರಬಾ ರಸ್ತೆ, ವಾಲ್ಟನ್ ರಸ್ತೆ, ಡಿಕನ್ಸನ್ ರಸ್ತೆ, ಅಶೋಕ್ ನಗರ, ಪ್ರೈಮ್‌ರೋಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಟ್ರಿನಿಟಿ ಸರ್ಕಲ್, ಹಲಸೂರು ರಸ್ತೆ, ಮರ್ಫಿ ಪಟ್ಟಣ, ಹಲಸೂರು ಗೀತಾಂಜಲಿ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

15 ವರ್ಷಗಳ ಸಂಬಂಧ: ಕೊನೆಗೂ ಹುಡುಗನನ್ನು ಪರಿಚಯಸಿದ ಕೀರ್ತಿ ಸುರೇಶ್

ಕಾಲಿವುಡ್‌ ನಟಿ, ಮಹಾನಟಿ ಖ್ಯಾತಿ ಕೀರ್ತಿ ಸುರೇಶ್‌ ಮದುವೆ ವಿಚಾರ ಸಖತ್ ಸದ್ದು ಮಾಡಿತ್ತು. ಈ ಹಿಂದೆ ಹಲವರ ಜೊತೆ ಕೀರ್ತಿ ಹೆಸರು ಕೇಳಿ ಬಂದಿತ್ತು. ಆದರೆ ಅದ್ಯಾವುದಕ್ಕೂ ನಟಿ ಕ್ಯಾರೆ ಎಂದಿರಲಿಲ್ಲ. ತಾನಾಯಿತು ತನ್ನಕೆಲಸವಾಯಿತು ಅಂತಿದ್ದ ನಟಿ ಕೀರ್ತಿ ಸುರೇಶ್ ಕೊನೆಗೂ ಮದುವೆಗೆ ಮನಸ್ಸು ಮಾಡಿದ್ದಾರೆ. ಜೊತೆಗೆ ತಮ್ಮ ಬಹುಕಾಲದ ಪ್ರೀತಿಯ ಬಗ್ಗೆ ಹೇಳಿಕೊಂಡಿರುವ ಕೀರ್ತಿ ಸುರೇಶ್ ಮದುವೆಯಾಗುತ್ತಿರುವ ಹುಡುಗನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೌದು. ನಟಿ ಕೀರ್ತಿ ಸುರೇಶ್ ಬಹುಕಾಲದ ಗೆಳೆಯ, ಉದ್ಯಮಿ ಆಂಟೋನಿ ತಟ್ಟಿಲ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಭಾವಿ ಪತಿ ಆಂಟೋನಿ ಜೊತೆಗಿನ ಫೋಟೋ ಶೇರ್ ಮಾಡಿ, 15 ವರ್ಷಗಳ ಬಂಧ ಎಂದು ನಟಿ ಬರೆದುಕೊಂಡಿದ್ದಾರೆ. ಯಾವಾಗಲೂ ಆಂಟೋನಿ ಮತ್ತು ಕೀರ್ತಿ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಕೀರ್ತಿ ಹಾಗೂ ಆ್ಯಂಟೋನಿ ಬಾಲ್ಯದ ಗೆಳೆಯರು. 16ನೇ ವಯಸ್ಸಿನಲ್ಲಿ ಕೀರ್ತಿಗೆ ಆ್ಯಂಟೋನಿ ಪರಿಚಯ ಆಯಿತು. ಆ ಗೆಳೆತನ ನಂತರ ಪ್ರೀತಿಗೆ ತಿರುಗಿದೆ. ಈ ವಿಚಾರವನ್ನು ಕೀರ್ತಿ ಅವರೇ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.  15 ವರ್ಷಗಳ ಪ್ರೀತಿಯಲ್ಲಿದ್ದ ಕೀರ್ತಿ ಸುರೇಶ್ ಹಾಗೂ ಆಂಟೋನಿ ಡಿ.11ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗೋವಾದಲ್ಲಿ ಮದುವೆ ನಡೆಯಲಿದ್ದು ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಲಾಗಿದೆಯಂತೆ. ಆಪ್ತರಿಗಷ್ಟೇ ಮದುವೆಗೆ ಆಹ್ವಾನ ನೀಡುತ್ತಿದ್ದು ಬಳಿಕ ಜೋಡಿ ಗ್ರ್ಯಾಂಡ್ ಆಗಿ ರಿಸೆಪ್ಷನ್ ಮಾಡಿಕೊಳ್ಳಲಿದ್ದಾರಂತೆ. ಆಂಟನಿ ಅವರು ಕೇರಳದ ಕೊಚ್ಚಿಯವರು. ಪ್ರಮುಖ ರೆಸಾರ್ಟ್ ಮಾಲೀಕರಾಗಿದ್ದಾರೆ ಎನ್ನಲಾಗಿದೆ.

error: Content is protected !!