Home Blog Page 2048

ನದಿಯಲ್ಲಿ ಈಜಲು ಹೋಗಿ ಅವಘಡ: ನೀರು ಪಾಲಾದ ಮೂವರು ಯುವಕರು!

0

ಮಂಗಳೂರು:- ನದಿಯಲ್ಲಿ ಈಜಲು ಹೋಗಿ ಮೂವರು ಯುವಕರು ನೀರುಪಾಲಾದ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಮೂಡುಕೋಡಿಯಲ್ಲಿ ಜರುಗಿದೆ.

20 ವರ್ಷದ ಲಾರೆನ್ಸ್, 19 ವರ್ಷದ ಸೂರಜ್, 19 ವರ್ಷದ ಜೈಸನ್ ಮೃತ ದುರ್ದೈವಿಗಳು ಎನ್ನಲಾಗಿದೆ. ವಾಲ್ಟರ್‌ರವರ ಮನೆಯಲ್ಲಿ ಊಟ ಮುಗಿಸಿ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ಬಳಿ ಯುವಕರು ಈಜಲು ಹೋಗಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ನೀರುಪಾಲಾಗಿದ್ದಾರೆ.

ಈಜು ತಜ್ಞರು ಮೂವರು ಯುವಕರ ಮೃತದೇಹ ನೀರಿನಿಂದ ಹೊರತೆಗೆದಿದ್ದಾರೆ. ಮೃತರು ಮಂಗಳೂರಿನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು. ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ.30ರಂದು ಗುರು ಗಂಧರ್ವ ಸಂಗೀತ ಸಭಾದಿಂದ ಸಂಗೀತೋತ್ಸವ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಗುರು ಗಂಧರ್ವ ಸಂಗೀತ ಸಭಾದಿಂದ ನ.30ರ ಮಧ್ಯಾಹ್ನ 3.30ಕ್ಕೆ ಎಪಿಎಂಸಿ ವರ್ತಕರ ಸಭಾ ಭವನ(ಎಸ್‌ಬಿಐ ಬ್ಯಾಂಕ್ ಮೇಲೆ)ದಲ್ಲಿ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತೋತ್ಸವ ಜರುಗಲಿದೆ.

ಕುಂದಗೋಳದ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷ ಅರವಿಂದ ಕಟಗಿ ಕಾರ್ಯಕ್ರಮ ಉದ್ಘಾಟಿಸುವರು. ಈರಮ್ಮ ಭಜಂತ್ರಿ ಅಧ್ಯಕ್ಷತೆ ವಹಿಸುವರು. ಸಾಹಿತಿಗಳಾದ ಕೆ.ಎಸ್. ಕೊಡ್ಲಿವಾಡ, ನಾಗರಾಜ ಹಣಗಿ ಅತಿಥಿಗಳಾಗಿ ಆಗಮಿಸುವರು. ಸಂಗೀತ ಕಲಾವಿದರಾದ ಸಿರಸಿಯ ರೇಖಾ ದಿನೇಶ, ಲಕ್ಷೆö್ಮÃಶ್ವರದ ಪರಶುರಾಮ ಭಜಂತ್ರಿ, ಡಾ. ಅರ್ಜುನ ವಠಾರ, ಕೃಷ್ಣಕುಮಾರ ಕುಲಕರ್ಣಿ, ಸಾರಂಗ ಕುಲಕರ್ಣಿ, ಶ್ರೀಹರಿ ದಿಗ್ಗಾವಿ, ಅನಂತ ಪಾವಣಸ್ಕರ, ಶೀವಸ್ವಾಮಿ ಹಿರೇಮಠ, ಅಕ್ಷಯ ಕುಮಾರ ಭಜಂತ್ರಿ ಮತ್ತು ಗುರು ಗಂಧರ್ವ ಸಂಗೀತ ಶಾಲೆ ವಿದ್ಯಾರ್ಥಿಗಳು ಸಂಗೀತ ಸೇವೆಗೈಯುವರು ಎಂದು ಪ್ರಕಟಣೆ ತಿಳಿಸಿದೆ.

ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್: ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲು ಸಂಚಾರ!

0

ಬೆಂಗಳೂರು:- ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕರ್ನಾಟಕದಿಂದ ಶಬರಿಮಲೆಗೆ ತೆರಳುವವರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆಯು ಹುಬ್ಬಳ್ಳಿ-ಕೊಲ್ಲಂ ಮತ್ತು ಬೆಳಗಾವಿ-ಕೊಲ್ಲಂ ನಿಲ್ದಾಣಗಳ ನಡುವೆ ಒಟ್ಟು ಆರು ಟ್ರಿಪ್‌ ವಿಶೇಷ ರೈಲುಗಳ ಸೇವೆಗೆ ಅವಕಾಶ ಕಲ್ಪಿಸಿದೆ.

ಹುಬ್ಬಳ್ಳಿ-ಕೊಲ್ಲಂ ಮತ್ತು ಬೆಳಗಾವಿ-ಕೊಲ್ಲಂ ನಿಲ್ದಾಣಗಳ ನಡುವೆ 6 ವಿಶೇಷ ರೈಲುಗಳ ಸೇವೆಯನ್ನು ನೈಋತ್ಯ ರೈಲ್ವೆ ಇಲಾಖೆಯು ವ್ಯವಸ್ಥೆ ಮಾಡಿದೆ.

ಡಿಸೆಂಬರ್ 5ರಿಂದ ಜನವರಿ 9ರವರೆಗೆ ಹುಬ್ಬಳ್ಳಿಯಿಂದ ಪ್ರತಿ ಗುರುವಾರ ಸಂಜೆ 5.30ಕ್ಕೆ ಹೊರಡಲಿದೆ. ಮರುದಿನ ಸಂಜೆ 4.30ಕ್ಕೆ ಕೊಲ್ಲಂ ತಲುಪಲಿದೆ.

ಡಿಸೆಂಬರ್ 6ರಿಂದ ಜನವರಿ 10ರವರೆಗೆ ರೈಲು ಸಂಖ್ಯೆ 07314 ಕೊಲ್ಲಂನಿಂದ ಪ್ರತಿ ಶುಕ್ರವಾರ ಸಂಜೆ 6.30ಕ್ಕೆ ಹೊರಡಲಿದ್ದು, ಮರುದಿನ ಸಂಜೆ 7.35ಕ್ಕೆ ಎಸ್​ಎಸ್​ಎಸ್​ ಹುಬ್ಬಳ್ಳಿ ತಲುಪಲಿದೆ.

ಈ ಎರಡೂ ರೈಲು ಮಾರ್ಗಗಳಲ್ಲಿ ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸೀಕೆರೆ, ತುಮಕೂರು, ಎಸ್​ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್, ಅಲುವಾ, ಎರ್ನಾಕುಲಂ, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ್, ಕಾಯಂಕುಲಂ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.

ಡಿಸೆಂಬರ್ 9ರಿಂದ ಜನವರಿ 13ರವರೆಗೆ ರೈಲು ಸಂಖ್ಯೆ 07317 ಬೆಳಗಾವಿಯಿಂದ ಪ್ರತಿ ಸೋಮವಾರ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ಮರುದಿನ ಸಂಜೆ 4.30ಕ್ಕೆ ಕೊಲ್ಲಂ ತಲುಪಲಿದೆ.

ಡಿಸೆಂಬರ್ 10ರಿಂದ ಜನವರಿ 14ರವರೆಗೆ ರೈಲು ಸಂಖ್ಯೆ 07318 ಕೊಲ್ಲಂನಿಂದ ಪ್ರತಿ ಮಂಗಳವಾರ ಸಂಜೆ 6.30ಕ್ಕೆ ಹೊರಡಲಿದೆ. ಮರುದಿನ ರಾತ್ರಿ 10 ಗಂಟೆಗೆ ಬೆಳಗಾವಿ ತಲುಪಲಿದೆ.

ನ.30ರಂದು ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕುರಿತು ಶೈಕ್ಷಣಿಕ ಸಮಾವೇಶ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಘಟಕ, ಗದಗ ಜಿಲ್ಲಾ ಘಟಕ ಹಾಗೂ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲಾ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರ ಹಾಗೂ ಶೈಕ್ಷಣಿಕ ಸಮಾವೇಶ-2024ನ್ನು ನ.30ರಂದು ಬೆಳಿಗ್ಗೆ 10.30ಕ್ಕೆ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

ಡಂಬಳ-ಗದಗ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಉಪನ್ಯಾಸ ನೀಡಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆ (ಅಭಿವೃದ್ಧಿ) ಉಪನಿರ್ದೇಶಕ ಜಿ.ಎಲ್. ಬಾರಾಟಕ್ಕೆ, ರಾಜ್ಯ ಘಟಕ ಹುಬ್ಬಳ್ಳಿಯ ಕರ್ನಾಟಕ ಮಾಧ್ಯಮ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ. ಶರಣು ಗೋಗೇರಿ, ವಿದ್ಯಾದಾನ ಶಿಕ್ಷಣ ಸಮಿತಿಯ ಅಧ್ಯಕ್ಷ ಧೀರೇಂದ್ರ ಹುಯಿಲಗೋಳ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ರವಿ ಗುಂಜಿಕರ, ಕನಕದಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರವಿ ದಂಡಿನ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ, ಕರ್ನಾಟಕ ರಾಜ್ಯ ಸಹ-ಶಿಕ್ಷಕರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಬಿ.ಎಫ್. ಪೂಜಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವ್ಹಿ.ವ್ಹಿ. ನಡುವಿನಮನಿ, ಮಂಗಳಾ ತಾಪಸ್ಕರ್, ಶಿಕ್ಷಣಾಧಿಕಾರಿ ಎಮ್.ಎಚ್. ಕಂಬಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಮ್. ಫಡ್ನೇಶಿ, ಎಚ್.ಎನ್. ನಾಣಕಿನಾಯ್ಕ, ಡಾ. ಗುರುನಾಥ ಹೂಗಾರ, ಆರ್.ಎನ್. ಹುರಳಿ, ಜಿಲ್ಲಾ ಅಕ್ಷರ ದಾಸೋಹಾಧಿಕಾರಿ ಎಸ್.ಡಿ. ಕನವಳ್ಳಿ ಅತಿಥಿಗಳಾಗಿ ಆಗಮಿಸುವರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲೂಕಾ ಘಟಕದ ಪದಾಧಿಕಾರಿಗಳು ಸರ್ವರಿಗೂ ಸ್ವಾಗತ ಕೋರಿದ್ದಾರೆ.

ಮಹಿಳೆಯರು ಸಾಧನೆ ಮಾಡುವುದರತ್ತ ಗಮನ ಹರಿಸಬೇಕು: ಸಚಿವೆ ಲಕ್ಮೀ ಹೆಬ್ಬಾಳಕರ್

0

ವಿಜಯಸಾಕ್ಷಿ ಸುದ್ದಿ, ವಿಜಯಪುರ: ಪ್ರತಿಯೊಬ್ಬರಿಗೂ ಜೀವನದಲ್ಲಿ ಗುರಿ ಇರಬೇಕು. ಜೀವನದಲ್ಲಿ ಗುರಿ ಇಲ್ಲದ್ದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಮೀ ಹೆಬ್ಬಾಳಕರ್ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ೧೯ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇವತ್ತು ಮಹಿಳೆ ಸಾಧನೆ ಮಾಡದ ಕೇತ್ರ ಯಾವುದೂ ಉಳಿದಿಲ್ಲ. ವೈಜ್ಞಾನಿಕ, ಕ್ರೀಡೆ ಹೀಗೆ ಎಲ್ಲ ಕೇತ್ರಗಳಲ್ಲಿ ಮಹಿಳೆಯರು ಮುಂದೆ ಇದ್ದೇವೆ. ಆದರೆ ಮಹಿಳೆಯರ ಸಾಧನೆಯನ್ನು ಗುರುತಿಸುವ ಕೆಲಸಗಳಾಗುತ್ತಿಲ್ಲ. ಅದಕ್ಕೆ ತಲೆ ಕೆಡಿಸಿಕೊಳ್ಳದೇ ಸಾಧನೆ ಮಾಡುವುದರತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಮಹಿಳಾ ವಿವಿ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ್ ಹಾಗೂ ತೊರವಿ ಗ್ರಾ.ಪಂ ಅಧ್ಯಕ್ಷೆ ಪದ್ಮಾಬಾಯಿ ರೇವಣಸಿದ್ದಪ್ಪ ನಡಗಡಿ ಅವರನ್ನು ವಿಶ್ವವಿದ್ಯಾನಿಲಯದ ಪರವಾಗಿ ಸನ್ಮಾನಿಸಲಾಯಿತು.

ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪ್ರೊ. ವಿಷ್ಣು ಶಿಂದೆ ನಿರೂಪಿಸಿದರು. ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ವಂದಿಸಿದರು.

ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿ

0

ವಿಜಯಸಾಕ್ಷಿ ಸುದ್ದಿ, ಗದಗ:  ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬೆಂಗಳೂರು, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಗದಗ, ಮೈಲಾರಪ್ಪ ಮೆಣಸಗಿ ಪದವಿಪೂರ್ವ ಕಾಲೇಜು ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಗದಗ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸ್ಥಳೀಯ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಬಸವರಾಜ ಯರನಾಳ ಕನ್ನಡ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಇನ್ನೋರ್ವ ವಿದ್ಯಾರ್ಥಿ ಶ್ರೀಕಾಂತ ಕಂಬಳಿ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದಿದ್ದಾನೆ.

ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು, ಪ್ರಾಚಾರ್ಯರು, ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ವೀರಭದ್ರ ದೇವರು ಪಿತೃವಾಕ್ಯ ಪರಿಪಾಲನೆಯ ಸಂಕೇತ: ಚನ್ನವೀರ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ವೀರಭದ್ರ ದೇವರು ದುಷ್ಟರ ಶಿಕ್ಷಕ, ಶಿಷ್ಟರ ರಕ್ಷಕನಾಗಿದ್ದಾನೆ. ಪಿತೃವಾಕ್ಯ ಪರಿಪಾಲಿಸುವುದಕ್ಕಾಗಿ ದಕ್ಷಬ್ರಹ್ಮನ ಶಿರವನ್ನು ಹಾರಿಸಿದ. ಅದಕ್ಕಾಗಿಯೇ ವೀರಭದ್ರ ದೇವರು ಪಿತೃವಾಕ್ಯ ಪರಿಪಾಲನೆಯ ಸಂಕೇತವಾಗಿದ್ದಾನೆ. ಅದರಂತೆಯೇ ಪ್ರತಿಯೊಬ್ಬರೂ ತಂದೆ-ತಾಯಿಗೆ ವಿಧೇಯರಾಗಿ ವೀರಭದ್ರ ದೇವರ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಹೇಳಿದರು.

ಅವರು ಮಂಗಳವಾರ ರಾತ್ರಿ ಶಿರಹಟ್ಟಿ ಪೇಟೆಯ 42ನೇ ವರ್ಷದ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಆದಿ-ಅನಾದಿ ಕಾಲದಿಂದೂ ಸಹ ದೀಪಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದ್ದು, ತ್ರಿಮೂರ್ತಿಗಳು ಸಹ ಜ್ಯೋತಿ ರೂಪವಾಗಿದ್ದಾರೆ. ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವುದೇ ಕಾರ್ತಿಕೋತ್ಸವದ ಉದ್ದೇಶವಾಗಿದೆ. ಪ್ರಸ್ತುತ ದಿನಮಾನದಲ್ಲಿ ವಿಜ್ಞಾನ ನೆಮ್ಮದಿ ಹಾಳು ಮಾಡುತ್ತಿದೆ. ವಿಜ್ಞಾನ ನಾಡಿಗೆ ಸಮೃದ್ಧಿ ಕೊಡುತ್ತದೆ, ವಿಜ್ಞಾನವು ಬೇಕು, ಜೊತೆಗೆ ಮನುಷ್ಯ ಮೃಗನಂತೆ ವರ್ತನೆ ಮಾಡುವುದನ್ನು ಬಿಟ್ಟು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಆಧ್ಯಾತ್ಮ ಜೀವನದತ್ತ ಸಾಗುವುದು ಅವಶ್ಯವಿದೆ. ಕಾರ್ತಿಕ ಮಾಸದಲ್ಲಿ ದೇವರನ್ನು ಸಂಪ್ರೀತಗೊಳಿಸುವುದಕ್ಕಾಗಿ ದೀಪಾರಾಧನೆ ಮಾಡಬೇಕು. ಸಮಾಜಕ್ಕೆ, ನಾಡಿಗೆ, ಗ್ರಾಮಕ್ಕೆ ಬೆಳಗುವ ಜ್ಯೋತಿ ನೀವಾಗಬೇಕೆಂದು ಹೇಳಿದರು.

ನಂತರ ಅಡವಿಸೋಮಾಪೂರದ ಶ್ರೀ ಸಿದ್ದಲಿಂಗೇಶ್ವರ ಜಾನಪದ ಕಲಾತಂಡದ ವತಿಯಿಂದ ಅಹೋರಾತ್ರಿ ಜಾನಪದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಕಾAತ ನೂರಶೆಟ್ಟರ, ಎಸ್.ಬಿ. ಹೊಸೂರ, ಮುತ್ತಣ್ಣ ಮಜ್ಜಗಿ, ಸಿದ್ದು ಹೊಸೂರ, ಸುರೇಶ ಹವಳದ, ಶಿವು ಪಟ್ಟಣಶೆಟ್ಟರ, ಬಸವರಾಜ ರಾಜಮನಿ, ಬಸವರಾಜ ಭೋರಶೆಟ್ಟರ, ಮಂಜು ರಿತ್ತಿ ಮುಂತಾದವರು ಉಪಸ್ಥಿತರಿದ್ದರು.

ನಿನ್ನ ಯೋಗ್ಯತೆ ಏನು ಅಂತ ನನಗೆ ಗೊತ್ತಾಗಿದೆ: ಉಗ್ರಂ ಮಂಜು ವಿರುದ್ಧ ತಿರುಗಿಬಿದ್ದ ಮೋಕ್ಷಿತಾ!

0

ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಯುವರಾಣಿ ಆಗಿರುವ ಮೋಕ್ಷಿತಾ ಅವರು, ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಈ ವಾರ ‘ರಾಜ-ರಾಣಿ’ ಟಾಸ್ಕ್ ನಡೆದಿದೆ. ಉಗ್ರಂ ಮಂಜು ಅನ್ನು ಮಹಾರಾಜ ಮಾಡಿದ್ದ ಬಿಗ್​ಬಾಸ್ ಅವರಿಗೆ ಕೆಲವು ವಿಶೇಷ ಅಧಿಕಾರ ಕೊಟ್ಟಿದ್ದರು. ಅವರಿಗೆ ಮನೆಯ ಸದಸ್ಯರೆಲ್ಲರೂ ಗೌರವ ಕೊಡಬೇಕು, ಆಜ್ಞೆ ಪಾಲಿಸಬೇಕು ಎಂದಿದ್ದರು.

ಆದರೆ ಈಗ ಟ್ವಿಸ್ಟ್ ಒಂದನ್ನು ಕೊಟ್ಟಿದ್ದು, ಮೋಕ್ಷಿತಾ ಅನ್ನು ಮಹಾರಾಣಿ ಮಾಡಿದ್ದಾರೆ. ಈಗ ಮಹಾರಾಜ ಮತ್ತು ಮಹಾರಾಣಿ ನಡುವೆ ವೈಮನಸ್ಯ ಶುರುವಾಗಿದೆ. ಇಬ್ಬರೂ ಪರಸ್ಪರ ಜೋರಾಗಿಯೇ ಕಿತ್ತಾಡಿದ್ದಾರೆ.

ಯುವರಾಣಿ ಮೋಕ್ಷಿತಾ ಅವರನ್ನು ನೋಡಿದಾಗ ಎಲ್ಲರೂ ತಲೆ ಬಾಗಿ ನಮಸ್ಕಾರ ಮಾಡಬೇಕು ಅಂತ ಗೋಲ್ಡ್ ಸುರೇಶ್ ಅವರು ಗೌತಮಿ, ತ್ರಿವಿಕ್ರಮ್, ಧನರಾಜ್ ಮುಂದೆ ಹೇಳುತ್ತಾ ಇರುತ್ತಾರೆ. ಆಗ ಗೌತಮಿ ಆಗೋದಿಲ್ಲ. ಯಾರು ಹತ್ತಿರ ತಲೆ ಬಗ್ಗಿಸಲಿ, ತಲೆ ಬಗ್ಗಿಸಿದ ದಿನ ನಾವು ಅವರನ್ನು ಒಪ್ಪಿಕೊಂಡಂತೆ ಲೆಕ್ಕ ಅಂತ ಹೇಳಿದ್ದಾರೆ.

ಆಗ ಮಂಜಣ್ಣ ನಾಲಿಗೆಗೆ ಮೆತ್ತಿಕೊಂಡು, ನರಿಯ ಕಣ್ಣೀರು ಹಾಕಿ ಆಡಿದ್ದು ಆಟವಲ್ಲ. ಯುವರಾಣಿ ಪಟ್ಟ ನಾನು ಕೊಟ್ಟಿರುವ ಭಿಕ್ಷೆ ಅಂತ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕೋಪಗೊಂಡ ಮೋಕ್ಷಿತಾ ನೀವು ಕೊಟ್ಟಿದ್ದಲ್ಲ ಬಿಗ್ ಬಾಸ್ ಕೊಟ್ಟಿರೋ ಭಿಕ್ಷೆ ಅಂತ ಜೋರಾಗಿ ಕಿರುಚಾಡಿದ್ದಾರೆ. ಯಾರ ಯಾರ ಯೋಗ್ಯತೆ ಏನು ಎಂಬುದು ಗೊತ್ತಿದೆ ಎಂದು ಮಂಜು ಮೋಕ್ಷಿತಾಗೆ ಟಾಂಗ್ ಕೊಟ್ಟಿದ್ದಾರೆ.

ಅದಕ್ಕೆ ನಿನ್ನ ಯೋಗ್ಯತೆ ಏನು ಎಂಬುದು ನನಗೂ ಗೊತ್ತಿದೆ ಎಂದು ಮೋಕ್ಷಿತಾ ತಿರುಗೇಟು ಕೊಟ್ಟಿದ್ದಾರೆ. ‘ಆಕಾಶದಲ್ಲಿ ನೀ ದೀಪವಾದೆ’ ಎಂದು ಮೋಕ್ಷಿತಾ ಹಾಡಿದ ಹಾಡನ್ನೇ ಹಾಡುತ್ತಾ ಮಂಜು ಕೆಣಕಿದ್ದಾರೆ. ಸಿಟ್ಟಿನಲ್ಲಿ ಥೂ ಎಂದು ಮಂಜುಗೆ ಹೇಳಿದ್ದಾರೆ.

ಕಷ್ಟಗಳಿಲ್ಲದೆ ಜೀವನ ಮೌಲ್ಯ ತಿಳಿಯದು: ರಂಭಾಪುರಿ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ಬ್ಯಾಡಗಿ: ಕಷ್ಟಗಳು ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ನಷ್ಟ ಯಾರನ್ನು ನಂಬಬೇಕೆಂಬುದನ್ನು ಕಲಿಸುತ್ತದೆ. ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಏನೆಂದು ತಿಳಿಯದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಬುಧವಾರ ನಗರದ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನದ ಗೋಪುರ ಕಳಸಾರೋಹಣ ಹಾಗೂ ೬ನೇ ವರ್ಷದ ಕಾರ್ತೀಕ ದೀಪೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ನಂಬಿಕೆ, ಸ್ನೇಹ, ವಾತ್ಸಲ್ಯ, ವಿಶ್ವಾಸ ಇವು ಮಾನವ ಜೀವನದ ಅತಿ ದೊಡ್ಡ ಆಸ್ತಿ. ಇವುಗಳನ್ನು ಯಾವಾಗಲೂ ಕಳೆದುಕೊಳ್ಳಬಾರದು. ಯಾವಾಗ ಏನಾಗುವುದೋ ಯಾರಿಗೂ ಗೊತ್ತಿಲ್ಲ. ಏನನ್ನೂ ನಾವು ತೆಗೆದುಕೊಂಡು ಹೋಗುವುದಿಲ್ಲ. ಬದುಕಿರುವಷ್ಟು ದಿನ ಒಳ್ಳೆಯವರ ಸ್ನೇಹ ಸಂಬAಧವನ್ನು ಉಳಿಸಿಕೊಳ್ಳಬೇಕು. ಗಳಿಸಿದ ಸಂಪತ್ತು, ಪಡೆದ ಅಧಿಕಾರ, ಏರಿದ ಅಂತಸ್ತು, ಸಂತಸ ಸಂಭ್ರಮ ಎಲ್ಲವೂ ಸ್ಥಿರವಲ್ಲ. ಮಾಡಿದ ಸತ್ಕಾರ್ಯ ಗಳಿಸಿಕೊಂಡ ಅನುಭವ ಶಾಶ್ವತ. ದೇವರು ಮತ್ತು ಧರ್ಮದಲ್ಲಿ ನಂಬಿಕೆಯನ್ನಿಟ್ಟು ಬಾಳಬೇಕು. ಶನಿ ದೇವರಿಗೆ ಹೆದರದೇ ಇರುವವರು ಯಾರೂ ಇಲ್ಲ. ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡುವುದಿಲ್ಲ ಎಂಬ ನಾಣ್ಣುಡಿಯಿದೆ. ಶನಿ ಪೂಜೆ ಆರಾಧನೆಯಿಂದ ಆತನ ಕೃಪೆಗೆ ಪಾತ್ರರಾಗಬೇಕಾಗುತ್ತದೆ. ಶ್ರೀ ಶನೇಶ್ವರಸ್ವಾಮಿ ಟ್ರಸ್ಟ್ ಪ್ರತಿ ವರುಷ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು.

ಮಡ್ಲೂರು ಮುರುಘಾಮಠದ ಮುರುಘರಾಜೇಂದ್ರ ಸ್ವಾಮಿಗಳು ಉಪಸ್ಥಿತರಿದ್ದರು. ಶ್ರೀ ಶನೇಶ್ವರಸ್ವಾಮಿ ಟ್ರಸ್ಟ್ ಅಧ್ಯಕ್ಷ ಚಂದ್ರಪ್ಪ ಕಾರಗಿ ಅಧ್ಯಕ್ಷತೆ ವಹಿಸಿದ್ದರು. ಡಾ.ಪ್ರೇಮಾನಂದ ತಿ.ಲಕ್ಕಣ್ಣನವರ ಉಪನ್ಯಾಸ ನೀಡಿದರು.

ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಮೋಟೆಬೆನ್ನೂರಿನ ಪುಟ್ಟನಗೌಡ ಪಾಟೀಲ, ಚಿಕ್ಕನಾಯಕನಹಳ್ಳಿ ಹಿರಿಯ ದಿವಾನಿ ನ್ಯಾಯಾಧೀಶ ಸತೀಶ ಎಸ್.ಟಿ., ಉಪವಲಯ ಅರಣ್ಯಾಧಿಕಾರಿ ಡಾ.ಜಗದೀಶ ಎಸ್.ಮಹಾರಾಜಪೇಟೆ,  ಬ್ಯಾಡಗಿಯ ಇಂದುಧರಯ್ಯ ಎಂ.ಹಿರೇಮಠ, ಪ್ರಕಾಶ ಬನ್ನಿಹಟ್ಟಿ, ಚಿಕ್ಕಪ್ಪ ಹಾದಿಮನಿ, ಎಂ.ಡಿ. ಚಿಕ್ಕಣ್ಣನವರ, ಕೆ.ಜಿ. ಕುಲಕರ್ಣಿ, ಸಾಯಿಬಾಬಾ ಮಂದಿರ ಧರ್ಮದರ್ಶಿ ಮಂಜಯ್ಯ ಶಾಸ್ತಿç ಪಾಲ್ಗೊಂಡಿದ್ದರು. ಹಲವಾರು ಗಣ್ಯರಿಗೆ ಹಾಗೂ ಸೇವಾ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ಡಿ.6ರಂದು ಬೆಳ್ಳಟ್ಟಿಯಲ್ಲಿ ಕರ್ಪೂರ ಕಾರ್ತಿಕೋತ್ಸವ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿಯ ಶ್ರೀ ರಾಮಲಿಂಗೇಶ್ವರ ದಾಸೋಹ ಮಠದಲ್ಲಿ ಡಿ.6ರ ಬೆಳಿಗ್ಗೆ ಶ್ರೀ ರಾಮಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮಧ್ಯಾಹ್ನ 3 ಗಂಟೆಗೆ ಲಲಿತಾ ಸಹಸ್ರನಾಮ ಪಠಣ, ಸಂಜೆ 5 ಗಂಟೆಗೆ ಅನುಭವಗೋಷ್ಠಿ ನಡೆಯಲಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಅಗಡಿ-ಗುತ್ತಲದ ಗುರುಸಿದ್ದ ಸ್ವಾಮೀಜಿ, ಗೌರವ ಸಾನ್ನಿಧ್ಯವನ್ನು ಕಲಬುರ್ಗಿ ಬ್ರಹ್ಮಪುರ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆಯನ್ನು ನರಗಡ್ಡಿಮಠದ ಶಾಂತಲಿAಗ ಸ್ವಾಮೀಜಿ, ಹಿರೇವಡ್ಡಟ್ಟಿಯ ಡಾ. ಸಿದ್ದಲಿಂಗ ದೇವರು ವಹಿಸಲಿದ್ದಾರೆ. ಅತಿಥಿಗಳಾಗಿ ವೀರೇಶ ಬ್ಯಾಹಟ್ಟಿ, ಎನ್.ಎಸ್. ಭಟ್, ಶಿವಮೂರ್ತೆಪ್ಪ ಶಿಂಪಗೇರ, ಗಣಪತಿ ಗಾಂವಕರ, ಪಂಚಯ್ಯ ಹಿರೇಮಠ, ಶಿವಚಲಕುಮಾರ ಸಾಲಿಮಠ, ಶ್ರೀನಿವಾಸರಡ್ಡಿ ಬಸವರಡ್ಡಿ ಆಗಮಿಸಲಿದ್ದಾರೆ.

ದಾಸೋಹಿ ಪ್ರಶಸ್ತಿ ಪುರಸ್ಕೃತರಾಗಿ ಹಾವೇರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ರೋಣ ಪಿಎಸ್‌ಐ ಪ್ರಕಾಶ ಬಣಕಾರ ಇವರುಗಳನ್ನು ಸನ್ಮಾನಿಸಲಾಗುವುದು. ನಂತರ ಕರ್ಪೂರ ಕಾರ್ತಿಕೋತ್ಸವ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ರಾಮಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪೀಠಾಧಿಪತಿ ಬಸವರಾಜ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!