Home Blog Page 2052

ಕೌಟುಂಬಿಕ ಕಲಹ: ಕೃಷಿಹೊಂಡಕ್ಕೆ ಬಿದ್ದು ಮಹಿಳೆ ಆತ್ಮಹತ್ಯೆ!

0

ಶ್ರೀನಿವಾಸಪುರ: ಕೌಟುಂಬಿಕ ಕಲಹದಿಂದ ಗೃಹಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ಜಿ. ಶ್ರೀನಿವಾಸಪುರ ತಾ. ಕೊಡಿಚೆರುವು ಗ್ರಾಮದಲ್ಲಿ ನಡೆದಿದೆ. ಕೊಡಿಚೆರುವು ಗ್ರಾಮದ ವರಲಕ್ಷ್ಮಿ (35) ಮೃತ ಮಹಿಳೆಯಾಗಿದ್ದು,

ಗ್ರಾಮದ ಹೊರಲವಲಯದ ಕೃಷಿಹೊಂಡದಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹದಿಂದ ಕೃಷಿಹೊಂಡಕ್ಕೆ ಬಿದ್ದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯಾಗಿದ್ದು, ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂದೂ ಧಾರ್ಮಿಕ ಮುಖಂಡ ಕೃಷ್ಣದಾಸ್ ಪ್ರಭು ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ: 20ಕ್ಕೂ ಹೆಚ್ಚು ಜನರಿಗೆ ಗಾಯ

ಢಾಕಾ: ಬಾಂಗ್ಲಾದೇಶದಲ್ಲಿಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹೋರಾಟ ನಡೆಸಿದ್ದ ಹಿಂದೂ ಧಾರ್ಮಿಕ ಮುಖಂಡ ಹಾಗೂ ಇಸ್ಕಾನ್‌ ಸದಸ್ಯ ಚಿನ್ಮಯ್‌ ಕೃಷ್ಣದಾಸ್‌ ಪ್ರಭು ಬ್ರಹ್ಮಚಾರಿ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇಶದ್ರೋಹದ ಆರೋಪದ ಮೇಲೆ ಕೃಷ್ಣದಾಸ್ ಅವರನ್ನು ಬಂಧಿಸಲಾಗಿದ್ದು ಇದೀಗ ಚಿನ್ಮಯ್ ಕೃಷ್ಣದಾಸ ಪ್ರಭು ಬಿಡುಗಡೆಗೆ ಆಗ್ರಹಿಸಿ ಹಲವರು ಭೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ದೇಶದ್ರೋಹದ ಆರೋಪದ  ಮೇಲೆ ಸೋಮವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಕೃಷ್ಣದಾಸ್ ಪ್ರಭುವನ್ನು ಅಧಿಕಾರಿಗಳು ಬಂಧಿಸಿದ್ದರು. ಅಲ್ಲದೆ ದೇಶವನ್ನು ತೊರೆಯದಂತೆ ನಿರ್ಬಂಧಿಸಿದ್ದರು.  ಬಂಧಿತ ಸ್ವಾಮೀಜಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮಂಗಳವಾರ ಢಾಕಾದ ನ್ಯಾಯಾಲಯ ಕೃಷ್ಣ ದಾಸ್ ಪ್ರಭು ವಿರುದ್ಧದ ದೇಶದ್ರೋಹ ಆರೋಪವನ್ನು ಎತ್ತಿಹಿಡಿದಿದ್ದು ಜಾಮೀನು ನಿರಾಕರಿಸಿದೆ.

ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿ ಬಳಿಕ ದೇಶದಲ್ಲಿಹಿಂದೂಗಳ ಮೇಲೆ ನಡೆದಿದ್ದ ದೌರ್ಜನ್ಯ ವಿರೋಧಿಸಿ ಚಿನ್ಮಯ್‌ ಪ್ರಭು ನೇತೃತ್ವದಲ್ಲಿಹೋರಾಟ ನಡೆದಿತ್ತು. ರಂಗ್‌ಪುರದಲ್ಲಿನ.22 ರಂದು ಚಿನ್ಮಯ್‌ ಪ್ರಭು ನೇತೃತ್ವದಲ್ಲಿಪ್ರತಿಭಟನಾ ರಾರ‍ಯಲಿ ನಡೆಸಿದ್ದ ಹಿಂದೂ ಸಮುದಾಯ ಮುಖಂಡರು, ಬಾಂಗ್ಲಾದೇಶದಲ್ಲಿಭಾಗವಧ್ವಜ ಹಾರಿಸಿದ್ದರು. ಕೇಸರಿಧ್ವಜ ಹಾರಿಸಿದ್ದ ಚಿನ್ಮಯ್‌ ಪ್ರಭು ವಿರುದ್ಧ ಬಾಂಗ್ಲಾದೇಶ ಮಧ್ಯಂತರ ಸರಕಾರ ದೇಶದ್ರೋಹ ಸೇರಿದಂತೆ 18 ಪ್ರಕರಣ ದಾಖಲಿಸಿದೆ. ಬಾಂಗ್ಲಾದೇಶದಲ್ಲಿಹಿಂದೂ ಧಾರ್ಮಿಕ ಮುಖಂಡ ಚಿನ್ಮಯ್‌ ಬಂಧನದ ಮಾಹಿತಿಯನ್ನು ಕೇಂದ್ರ ಸರಕಾರ ಖಚಿತಪಡಿಸಿದೆ.

”ಮುಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರಕಾರ ದೇಶದ್ರೋಹದ ಆಪಾದನೆ ಮೇಲೆ ಚಿನ್ಮಯ್‌ ಕೃಷ್ಣದಾಸ್‌ ಪ್ರಭು ಅವರನ್ನು ಬಂಧಿಸಿದೆ,” ಎಂದು ವಾರ್ತಾ ಹಾಗೂ ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ್ತಿ ಕಾಂಚನ್‌ ಗುಪ್ತಾ ಹೇಳಿದ್ದಾರೆ.

 

 

ದೇವನಹಳ್ಳಿ: ಬೈಕ್-ಕಾರು ಅಪಘಾತ; ಇಬ್ಬರು ದುರ್ಮರಣ!

0

ದೇವನಹಳ್ಳಿ:- ಬೈಕ್-ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ದುರ್ಮರಣ ಹೊಂದಿರುವ ಘಟನೆ ದೇವನಹಳ್ಳಿ ಹಳ್ಳಿ ತಾಲೂಕಿನ ನೆರಗನಹಳ್ಳಿ ಬಳಿ ನಡೆದಿದೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಜ್ಜು ಗುಜ್ಜಾಗಿದ್ದು, ಬೈಕ್ ನಲ್ಲಿ ಚಲಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ದಲ್ಲಿ ಉಗನವಾಡಿಯ ವೆಂಕಟೇಶ್ (50), ಹಾಗೂ ಕಸವನಹಳ್ಳಿ ಯ ಮಹೇಶ್ (30) ಮೃತಪಟ್ಟವರು.

ಇನ್ನೂ ಅಪಘಾತದಲ್ಲಿ ಮೃತ ಪಟ್ಟ ದೇಹಗಳನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆ ಗೆ ರವಾನೆ ಮಾಡಲಾಗಿದ್ದು, ಆಸ್ಪತ್ರೆಯ ಬಳಿ ಮೃತರ ಕುಟುಂಬಸ್ಥರು ಜಮಾಯಿಸಿ ಕಣ್ಣೀರು ಹಾಕಿದ್ದಾರೆ.

ಚಾಮರಾಜನಗರ: ವಿದ್ಯುತ್ ಸ್ಪರ್ಶಿಸಿ ಮರಿ ಗಂಡಾನೆ ಸಾವು!

0

ಚಾಮರಾಜನಗರ:- ಜಮೀನಿನ ತಂತಿ ಬೇಲಿಗೆ ಹರಿಸಲಾಗಿದ್ದ ವಿದ್ಯುತ್ ಸ್ಪರ್ಶಿಸಿ ಮೂರು ವರ್ಷದ ಮರಿ ಗಂಡಾನೆ ಸಾವನ್ನಪ್ಪಿದ ಘಟನೆ ಬಂಡೀಪುರ ಕಾಡಂಚಿನ ಜಕ್ಕಳ್ಳಿ ಗ್ರಾಮದ ಜಮೀನೊಂದರಲ್ಲಿ ಜರುಗಿದೆ.

ಶರಿಯರ್ ಖಾನ್ ಎಂಬುವರಿಗೆ ಸೇರಿದ ಜಮೀನಿನ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಕಾಡಿನಿಂದ ಮೇವು ಅರಸಿ ಬಂದ ಆನೆ ಮರಿಗೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ.

ಜಮೀನು ಮಾಲೀಕರು ಹಾಗು ಜಮೀನು ಗುತ್ತಿಗೆ ಪಡೆದಿದ್ದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ನಿಮ್ಮಂತ ಅಭಿಮಾನಿಗಳನ್ನು ನಾನೆಂದು ಕಂಡಿಲ್ಲ: RCB ಫ್ಯಾನ್ಸ್ ಗೆ ಸಿರಾಜ್ ಭಾವುಕ ಸಂದೇಶ!

0

ಸತತ 7 ವರ್ಷಗಳಿಂದ RCB ಪರ ಆಟವಾಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಪ್ರಾಂಚೈಸಿ ಕೈ ಬಿಟ್ಟಿದೆ.

ಈ ಬಾರಿಯ ಐಪಿಎಲ್​​ ಮೆಗಾ ಹರಾಜಿನ ಮೂಲಕ ಸಿರಾಜ್​ ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿದ್ದಾರೆ. ಅತ್ತ ಜಿಟಿ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆ ಸಿರಾಜ್ ಆರ್​​ಸಿಬಿ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದು ಧನ್ಯವಾದಗಳನ್ನು ತಿಳಿಸಿದ್ದಾರೆ.

‘ನನ್ನ ಪ್ರೀತಿಯ ಆರ್‌ಸಿಬಿಗೆ.. ಆರ್‌ಸಿಬಿ ಜೊತೆಗಿನ ಏಳು ವರ್ಷಗಳು ತುಂಬಾ ಖುಷಿ ನೀಡಿವೆ. ಆರ್‌ಸಿಬಿ ಜರ್ಸಿಯಲ್ಲಿನ ದಿನಗಳನ್ನು ನೆನಪಿಸಿಕೊಂಡಾಗ ಹೃದಯ ಉಕ್ಕಿ ಬರುತ್ತದೆ. ಕೃತಜ್ಞತೆ, ಪ್ರೀತಿಯ ಭಾವನೆ ನನ್ನಲ್ಲಿ ತುಳುಕುತ್ತದೆ. ಮೊದಲ ಬಾರಿಗೆ ನಾನು ತೊಟ್ಟ ಜರ್ಸಿ, ಆರ್​ಸಿಬಿ ಜೊತೆಗಿನ ಬಂಧವನ್ನು ತುಂಬಾನೇ ಬಿಗಿಯಾಗಿಸಿದೆ. ಅದು ಅಷ್ಟರಮಟ್ಟಿಗೆ ನಮ್ಮ ಬಂಧವನ್ನು ಗಟ್ಟಿಯಾಗಿಸುತ್ತೆ ಅಂತಾ ಎಂದೂ ಯೋಚಿಸಿರಲಿಲ್ಲ.

ಆರ್​ಸಿಬಿ ಪರ ನಾನು ಮಾಡಿದ ಮೊದಲ ಬಾಲ್​​ನಿಂದ ಹಿಡಿದು, ಪ್ರತಿ ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಕಳೆದ ಪ್ರತಿಕ್ಷಣ. ಆ ನನ್ನ ಪ್ರಯಾಣ ಅಸಾಧಾರಣ. ಈ ಜರ್ನಿಯಲ್ಲಿ ಏರಿಳಿತಗಳಿದ್ದವು. ಆದರೆ ನೆನಪುಗಳು ಸ್ಥಿರವಾಗಿ ಉಳಿದಿವೆ. RCB ಅಂದರೆ ಹೃದಯ ಬಡಿತ, ಮನೆಯಂತೆ ಭಾಸವಾಗುವ ಕುಟುಂಬ. ಇದು ಫ್ರಾಂಚೈಸಿಗಿಂತ ದೊಡ್ಡದು ಎಂದು ಬರೆದುಕೊಳ್ಳುವ ಮೂಲಕ RCB ಮೇಲಿನ ಅಭಿಮಾನ ತೋರಿದ್ದಾರೆ.

ಕರ್ನಾಟಕದಲ್ಲಿ ಮೈಕೊರೆಯೋ ಚಳಿ: ಬೆಂಗಳೂರಿನಲ್ಲಿ ಮೂರು ದಿನ ಮಳೆ ಸಾಧ್ಯತೆ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮತ್ತು ಚಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕಾರಾವಳಿಗೂ ಮಳೆ ಮುನ್ಸೂಚನೆ ನೀಡಲಾಗಿದೆ. ಆದ್ರೆ ಹವಾಮಾನ ವೈಪರೀತ್ಯ ಕಾರಣ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮೈಕೊರೆಯುವಂತಹ ಚಳಿ ಇರಲಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಭಾರಿ ಮಳೆಯಾಗುತ್ತಿದೆ. ಜೊತೆಗೆ ದಟ್ಟವಾದ ಮಂಜು ಅವರಿಸಿದ್ದು ರಸ್ತೆಗಳು ಕಾಣದಂತಾಗಿದೆ. ರಾಮನಾಥಪುರಂ, ತಿರುಚಿರಾಪಳ್ಳಿ, ಪೆರಂಬಲೂರು, ಕಲ್ಲಕುರಿಚಿ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ವಿಪರೀತ ಚಳಿಯಿಂದ ಜ್ವರ, ಕೆಮ್ಮು, ಶೀತದಂತಹ ಕಾಯಿಲೆಗಳು ಭಾದಿಸಲಿದ್ದು, ಆರೋಗ್ಯದ ಮೇಲೆ ನಿಗಾ ಇಡುವಂತೆ ವೈದ್ಯರು ಸೂಚಿಸಿದ್ದಾರೆ.

ಇನ್ನೂ ಕರ್ನಾಟಕದಲ್ಲಿ ಚಳಿ ಜೋರಾಗಿದೆ. ಸಂಜೆಯಾಗುತ್ತಿದ್ದಂತೆ ಶುರುವಾದ ಚಳಿ ಬೆಳಗಿನ ಜಾವ ಸೂರ್ಯೋದಯ ತನಕ ಬಿಡುವುದಿಲ್ಲ. ಬೆಳಗಿನಲ್ಲಿ ಮನೆಯ ಹೊಸ್ತಿಲು ದಾಟಿ ಹೊರ ಬಂದರೆ ಸಾಕು ಗಡಗಡ ಮೈ ನಡುಗಿಸಿ ಹಲ್ಲು ಗಟಿಯೂರುವಂತೆ ಮಾಡುವ ಮಾಗಿಯ ಮೈಕೊರೆಯುವ ಚಳಿಗೆ ಜನರು ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುತ್ತಿದ್ದಾರೆ.

ಭೀಕರ ಅಪಘಾತ: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇಯಲ್ಲಿ ಮೂವರು ಸಾವು!

0

ರಾಮನಗರ:- ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ಘಟನೆ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇಯಲ್ಲಿ ಜರುಗಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​​ಗೆ ಗುದ್ದಿದ ಕಾರು ಎದುರು ಬದಿಯಿಂದ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸಿಗೆ ಗುದ್ದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಇಬ್ಬರು ಪುರುಷರು, ಹಾಗೂ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಘಟನೆ ತಾಲೂಕಿನ‌ ಸಂಗಬಸವನದೊಡ್ಡಿ ಬಳಿ ಮಂಗಳವಾರ ರಾತ್ರಿ 9.30ರ ಸುಮಾರಿಗೆ ಜರುಗಿದೆ. ಘಟನೆಯಲ್ಲಿ ಲಿಯಾಕತ್, ಅಸ್ಮಾ, ನೂರ್, ‌ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕುಟುಂಬ, ಸಂಬಂಧಿಕರ ಕಾರ್ಯಕ್ರಮವೊಂದಕ್ಕೆ ತೆರಳುತ್ತಿತ್ತು. ಕಾರು ಡಿವೈಡರ್​ಗೆ ಕಾರು ಗುದ್ದಿದ ಪರಿಣಾಮ ಕಾರು ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರನ್ನು ಹೊರ ತೆಗೆಯಲು ಹರಸಾಹಸಪಡಬೇಕಾಯಿತು.

ಅಪಘಾತ ಕಾರಣ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ರಾಮನಗರ ಟ್ರಾಫಿಕ್ ಪೊಲೀಸರು ಪರಿಶೀಲಿಸಿದ್ದಾರೆ.

‘ಝೀಬ್ರ’ ಸಕ್ಸಸ್ ಖುಷಿಯಲ್ಲಿ ಡಾಲಿ ಧನಂಜಯ್: ಟಾಲಿವುಡ್ ನಿಂದ ಭರ್ಜರಿ ಆಫರ್, ನಿಜವಾಯ್ತು ಚಿರಂಜೀವಿ ಭವಿಷ್ಯ!

ಕನ್ನಡ ಚಿತ್ರರಂಗದ ಸ್ಟಾರ್ ನಟ ಡಾಲಿ ಧನಂಜಯ್ ಪರಭಾಷೆಯಲ್ಲೂ ಸದ್ದು ಮಾಡುತ್ತಿದ್ದಾರೆ. ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಧನಂಜಯ್ ಇದೀಗ ಮತ್ತೊಂದು ಹಿಟ್ ಸಿನಿಮಾ ನೀಡಿದ್ದಾರೆ. ಡಾಲಿ ಧನಂಜಯ್ ನಟನೆಯ ಝೀಬ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿದೆ. ತೆಲುಗು ಪ್ರೇಕ್ಷಕರು ಧನಂಜಯ ಅವರ ನಟನೆಗೆ ಫಿದಾ ಆಗಿದ್ದು ಟಾಲಿವುಡ್ ನಿಂದ ಡಾಲಿಗೆ ಭರ್ಜರಿ ಆಫರ್ ಬರೋಕೆ ಶುರುವಾಗಿದೆ.

ಝೀಬ್ರ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಾಣುತ್ತಿದ್ದಂತೆ ತೆಲುಗಿನಲ್ಲಿ ಡಾಲಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಈ ಮೊದಲು ವಿಲನ್ ಪಾತ್ರಗಳಿಗೆ ಹೆಚ್ಚು ಬೇಡಿಕೆ ಹೊಂದಿದ್ದ ಡಾಲಿಗೆ ಇದೀಗ ನಾಯಕನಾಗಿ ಆಫರ್ ಬರ್ತಿದೆ. ಡಾಲಿ ನಟನೆ, ಸ್ಟೈಲ್‌ಗೆ ಪ್ರೇಕ್ಷಕರು ಮಾತ್ರವಲ್ಲದೇ ತೆಲುಗು ಸಿನಿಮಾ ಇಂಡಸ್ಟ್ರಿ ಕೂಡ ಫಿದಾ ಆಗಿದೆ. ಸದ್ಯ ತೆಲುಗಿನ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಡಾಲಿ ಹಿಂದೆ ಬಿದ್ದಿದ್ದು ಸಿನಿಮಾ ಮಾಡಲು ಕ್ಯೂನಲ್ಲಿ ನಿಂತಿವೆ ಎನ್ನಲಾಗುತ್ತಿದೆ.

ಈಗಾಗಲೇ ಪೀಪಲ್ ಮೀಡಿಯಾ ಫ್ಯಾಕ್ಟರಿ, ಹಯಾಗ್ರೀವ ಕ್ರಿಯೇಷನ್, ಪ್ರೈಮ್ ಶೋ ಎಂಟಟೈನ್‌ಮೆಂಟ್, ಸತ್ಯ ಜ್ಯೋತಿ ಫಿಲ್ಮ್ ಸೇರಿದಂತೆ ತೆಲುಗಿನ ಅನೇಕ ದೊಡ್ಡ ಬ್ಯಾನರ್‌ಗಳು ಡಾಲಿ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ಈಗಾಗಲೇ ಧನಂಜಯ ಅವರ ಕಾಲ್‌ಶೀಟ್‌ಗಾಗಿ ಈ ಬ್ಯಾನರ್‌ಗಳು ಎದುರು ನೋಡುತ್ತಿವೆ. ಒಂದು ವೇಳೆ ಡಾಲಿ ಕಡೆಯಿಂದ ಎಲ್ಲಾ ಬ್ಯಾನರ್‌ಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕರೇ ತೆಲುಗಿನಲ್ಲೇ ಫಿಕ್ಸ್ ಆಗುವುದು ಬಹುತೇಕ ಖಚಿತವಾಗಿದೆ. ಇದು ಡಾಲಿಯ ಕನ್ನಡದ ಅಭಿಮಾನಿಗಳಿಗೆ ಕೊಂಚ ಬೇಸರವಾಗಿದೆ.

ಝೀಬ್ರ ಪ್ರೀ ರಿಲೀಸ್ ಈವೆಂಟ್ ನಲ್ಲಿ ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರು ಕೂಡ ಡಾಲಿ ಅವರನ್ನು ಹಾಡಿಹೊಗಳಿದ್ದರು. ಧನಂಜಯ ತೆಲುಗಿನಲ್ಲಿ ಸ್ಟಾರ್ ಆಗಿ ಸೆಟಲ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಝೀಬ್ರ ಸಿನಿಮಾ ಹಿಟ್ ಆಗಿದ್ದು ಡಾಲಿಗೆ ಆಫರ್‌ಗಳು ಹೆಚ್ಚು ಹೆಚ್ಚು ಬರ್ತಿವೆ. ಈ ಮೂಲಕ ಚಿರಂಜೀವಿ ಭವಿಷ್ಯ ನಿಜವಾದಂತಿದೆ.

ಡಿವೋರ್ಸ್ ಬಳಿಕ ನನಗೆ ‘ಸೆಕೆಂಡ್ ಹ್ಯಾಂಡ್ʼ ಯೂಸ್ಡ್ ಎಂದು ಹಣೆಪಟ್ಟಿ ಕಟ್ಟಿದರು: ನಟಿ ಸಮಂತಾ ಬೇಸರ

ಟಾಲಿವುಡ್ ಬ್ಯೂಟಿ ಸಮಂತಾ ಹಾಗೂ ನಟ ನಾಗಚೈತನ್ಯ ಹಲವು ವರ್ಷಗಳ ಕಾಲ ಪ್ರೀತಿಸಿ ಅದ್ದೂರಿಯಾಗಿ ಮದುವೆಯಾಗಿದ್ದರು. ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾದ ಜೋಡಿ ಮದುವೆಯಾದ ನಾಲ್ಕೇ ನಾಲ್ಕು ವರ್ಷಕ್ಕೆ ಡಿವೋರ್ಸ್ ಪಡೆದು ದೂರ ದೂರವಾಗಿದ್ದಾರೆ. ಸದ್ಯ ನಾಗಚೈತನ್ಯ ನಟಿ ಶೋಭಿತಾ ಜೊತೆ ಎರಡನೇ ಮದುವೆಗೆ ಸಿದ್ದವಾಗಿದ್ದಾರೆ. ಇತ್ತ ನಟಿ ಸಮಂತಾ ಸಿನಿಮಾ ರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್ ಚಿತ್ರರಂಗದಲ್ಲೂ ನಟಿ ಮಿಂಚುತ್ತಿದ್ದಾರೆ.ಈ ಮಧ್ಯೆ ಡಿವೋರ್ಸ್ ಬಳಿಕ ತಾವು ಎದುರಿಸಿದ ಅವಮಾನಗಳ ಬಗ್ಗೆ ನಟಿ ಮಾತನಾಡಿದ್ದಾರೆ.

ಗಲಾಟ್ಟಾ ಇಂಡಿಯಾಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಮಂತಾ “ಡಿವೋರ್ಸ್‌ ಪಡೆದ ನಂತರ ನನಗೆ ʼಸೆಕೆಂಡ್‌ ಹ್ಯಾಂಡ್‌ʼ,ಯೂಸ್ಡ್‌ʼ ಎಂಬ ಹಣೆಪಟ್ಟಿಗಳನ್ನು ಕಟ್ಟಿದರು. ಈ ಸಮಾಜದಲ್ಲಿ ಹೆಣ್ಣು ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕು. ಈಗಲೂ ಲಿಂಗ ತಾರತಮ್ಯವಿದೆ. ಮೇಲ್‌ ಡಾಮಿನೇಟ್‌ ಎಂಬುದು ಭಾರತವನ್ನು ಆವರಿಸಿಕೊಂಡಿದೆ” ಎಂದಿದ್ದಾರೆ.

“ಒಬ್ಬ ಮಹಿಳೆ ಡಿವೋರ್ಸ್‌ ಪಡೆದ ನಂತರ ಸಾಕಷ್ಟು ಕಳಂಕ ಮತ್ತು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಸೋಶಿಯಲ್‌ ಮೀಡಿಯಾಗಳಲ್ಲಿ ʼಸೆಕೆಂಡ್‌ ಹ್ಯಾಂಡ್‌ʼ,ʼಯೂಸ್ಡ್‌ʼ ಎನ್ನುವ ರೀತಿಯಲ್ಲಿ ಕಾಮೆಂಟ್ಸ್ ಗಳು ಹರಿದಾಡಿದವು. ಅಷ್ಟೇ ಅಲ್ಲದೆ, ಈಗಾಗಲೇ ಒಂದು ಮದುವೆಯಾಗಿರುವ ನಿಮಲ್ಲಿ ತಪ್ಪಿತಸ್ಥ ಭಾವ ಇರಬೇಕು. ನಿಮಗೆ ನಾಚಿಕೆ ಆಗಬೇಕು. ನಿಮ್ಮ ಜೀವನ ಇನ್ನು ವ್ಯರ್ಥ, ಈಗ ನೀವು ಮೂಲೆ ಗುಂಪಾಗಿದ್ದೀರಿ ಎಂಬಂಥ ಮಾತುಗಳು ಕೇಳಿ ಬಂದವು. ಇಂಥ ಸಂದರ್ಭಗಳಲ್ಲಿ ಹುಡುಗಿಯರು ಮತ್ತು ಅವರ ಕುಟುಂಬಗಳಿಗೆ ಕಷ್ಟವಾಗುತ್ತದೆ” ಎಂದು ನಟಿ ಹೇಳಿದ್ದಾರೆ.

“ಕೆಲ ದಿನಗಳ ಹಿಂದೆಯಷ್ಟೇ ನಾನು ವೈಟ್‌ ಗೌನ್‌ ಒಂದನ್ನು ಧರಿಸಿ ಈವೆಂಟ್‌ ನಲ್ಲಿ ಪಾಲ್ಗೊಂಡಿದ್ದೆ. ಆ ಸುದ್ದಿ ಸಾಕಷ್ಟು ವೈರಲ್‌ ಆಯಿತು. ಹಲವರು ಬಾಯಿಗೆ ಬಂದಹಾಗೆ ಮಾತನಾಡಿದರು. ನಾನು ಉದ್ದೇಶಪೂರ್ವಕವಾಗಿ ಆ ಉಡುಪನ್ನು ತೀರಾ ಇಷ್ಟಪಟ್ಟು ಧರಿಸಿದ್ದೆ. ಆದರೆ ಅದಕ್ಕೆ ಬಂದ ಕಾಮೆಂಟ್‌ ಗಳು ನನಗೆ ನೋವನ್ನು ಉಂಟು ಮಾಡಿದವು. ನಾನು ವೈವಾಹಿಕ ಬದುಕಿನಿಂದ ದೂರ ಉಳಿದಿದ್ದೇನೆ. ಡಿವೋರ್ಸ್‌ ಕೂಡ ಪಡೆದಿದ್ದೇನೆ ನಿಜ. ಹಾಗಂದ ಮಾತ್ರಕ್ಕೆ ನಾನು ಯಾವುದೋ ಮೂಲೆಯಲ್ಲಿ ಕೂತು ಅಳುತ್ತಿದ್ದೇನೆ ಎಂದಲ್ಲ. ಹೊಸ ಬದುಕಿಗೆ ಮತ್ತೆ ನನ್ನನ್ನು ನಾನು ತೆರೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ” ಎಂದಿದ್ದಾರೆ.

“ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಇದು ಯಾವ ಪ್ರತೀಕಾರವೂ ಅಲ್ಲ. ನಾನು ಯಾವ ವಿಷಯವನ್ನೂ ಮರೆಮಾಚಲು ಪ್ರಯತ್ನಿಸುವುದಿಲ್ಲ. ಏನು ನಡೆಯಬೇಕಿತ್ತೋ ಅದು ನಡೆದಿದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ನನ್ನ ಬದುಕು ಅಲ್ಲಿಗೆ ಮುಗಿಯುವುದಿಲ್ಲ. ಎಲ್ಲಿ ನನ್ನ ಬದುಕು ಕೊನೆಗೊಂಡಿತೋ ಅಲ್ಲಿಂದಲೇ ಮತ್ತೆ ಆರಂಭಗೊಳ್ಳಲಿದೆ. ನಾನು ಈ ಕ್ಷಣಕ್ಕೆ ತುಂಬಾ ಆರಾಮವಾಗಿ, ಸಂತೋಷವಾಗಿಯೂ ಇದ್ದೇನೆ. ಈಗ ನಾನು ತುಂಬಾ ಬೆಳೆದಿದ್ದೇನೆ. ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇನೆ. ಅದ್ಭುತ ವ್ಯಕ್ತಿಗಳು ನನ್ನೊಂದಿಗಿದ್ದಾರೆ. ನನ್ನ ಜೀವನದ ಮುಂದಿನ ಹಂತವನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಸಮಂತಾ ಭರವಸೆಯ ಮಾತನಾಡಿದ್ದಾರೆ.

ಪುರುಷರಿಗೆ ಇರುವಷ್ಟು ಸೌಕರ್ಯ, ಸೌಲಭ್ಯಗಳು ಮಹಿಳೆಯರಿಗೂ ದೊರಕಬೇಕು: ಸಿ.ಎಸ್. ಶಿವನಗೌಡ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರ್ಮಿಕ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ ಇವರ ವತಿಯಿಂದ ಮಿಷನ್ ಶಕ್ತಿ ಯೋಜನೆಯಡಿಯಲ್ಲಿ `ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆಯ ಅಂತಾರಾಷ್ಟ್ರೀಯ ದಿನದ ನಿಮಿತ್ತ ವಿಶೇಷ ಅರಿವು ಮೂಡಿಸುವ ಕಾರ್ಯಕ್ರಮವನ್ನು ಎ.ಸಿ.ಎಂ. ಗಾರ್ಮೆಂಟ್ಸ್ ಗದಗದಲ್ಲಿ ಹಮ್ಮಿಕೊಳ್ಳಲಾಗಿತ್ತು

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೆಲಸದ ಸ್ಥಳಗಳಲ್ಲಿ ಮಹಿಳೆ ನೆಮ್ಮದಿಯಿಂದ ಕಾರ್ಯ ನಿರ್ವಹಿಸುವಂತಾಗಲು 10ಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿ ಒಂದು ಕೆಲಸದ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ರಚಿಸಲು ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇಂದು ಸ್ತ್ರೀ ಮತ್ತು ಪುರುಷರಿಬ್ಬರೂ ಸಮಾನರು. ಆದ್ದರಿಂದ ಪುರುಷರಿಗೆ ಇರುವಷ್ಟು ಸೌಕರ್ಯ, ಸೌಲಭ್ಯಗಳು ಮಹಿಳೆಯರಿಗೂ ದೊರಕಬೇಕು. ಒಂದು ವೇಳೆ ಯಾವುದೇ ರೀತಿಯ ದೌರ್ಜನ್ಯ, ಅನ್ಯಾಯಗಳು ಆಗುತ್ತಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ಇಲಾಖೆ, ಮಹಿಳಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಸಂಘ-ಸಂಸ್ಥೆಗಳನ್ನು ಸಂಪರ್ಕಿಸಿ ನ್ಯಾಯ ದೊರಕಿಸಿಕೊಳ್ಳಬೇಕೆಂದು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಾಧಾ ಜಿ.ಮಣ್ಣೂರು  ಮಾತನಾಡಿ, ಮಿಷನ್ ಶಕ್ತಿ ಯೋಜನೆಯ ಕಾರ್ಯವೈಖರಿ ದೇಶಕ್ಕೆ ಮಾದರಿಯಾಗಬೇಕು. ಮಹಿಳೆಯರು ತಮಗೆ ರಾಜ್ಯ ಸರರ್ಕಾರ/ ಕೇಂದ್ರ ಸರ್ಕಾರಗಳು ನೀಡಿದ ಎಲ್ಲ ಯೋಜನೆಗಳ ಸೌಲಭ್ಯವನ್ನು ಪಡೆದುಕೊಂಡು ಅವರು ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಸಮಾಜದ ಎಲ್ಲ ಸ್ಥರದ ಮಹಿಳೆಯರನ್ನು ಜಾಗೃತಗೊಳಿಸುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ಅಧಿಕಾರಿಗಳ ಗುರುತರವಾದ ಜವಾಬ್ದಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ ಮಾತನಾಡಿ, ಇಲಾಖೆಯು ಈಗಾಗಲೇ ಮಹಿಳೆ ಮತ್ತು ಮಕ್ಕಳ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯನ್ನು ನೀಡುತ್ತಿದೆ. ಮಹಿಳೆ ಮತ್ತು ಮಕ್ಕಳ ಅಪೌಷ್ಠಕತೆಯನ್ನು ಹೊಗಲಾಡಿಸಲು ಪೋಷಣ ಅಭಿಯಾನ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಯೋಜನೆ, ಹಲವಾರು ಸೇವೆಗಳು ಒಂದೇ ಕಡೆ ಸಿಗುಂತಾಗಲು ಸಖಿ ಒನ್ ಸ್ಟಾಪ್ ಸೆಂಟರ್, ಗರ್ಭಿಣಿ/ಬಾಣಂತಿಯರಿಗೆ ಆರ್ಥಿಕ ಸಹಾಯವಾಗಲು ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಭಾಗ್ಯಲಕ್ಷ್ಮೀ/ಸುಕನ್ಯಾ ಸಮೃದ್ಧಿ ಯೋಜನೆ ಹೀಗೆ ಹಲವಾರು ಯೋಜನೆಗಳ ಜೊತೆಗೆ ಮಿಷನ್ ಶಕ್ತಿ ಯೋಜನೆಯು ಸಮಾಜದ ಪ್ರತಿಯೊಬ್ಬ ಹೆಣ್ಣು ಮಗು/ಮಹಿಳೆಯರಿಗೆ ಸುರಕ್ಷತೆ, ಭದ್ರತೆ ಹಾಗೂ ಸಬಲೀಕರಣಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕ್ಷಕಿ ಪ್ರಭಾವತಿ ಮುದಿಗೌಡರ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ಮಿನಜಗಿ, ಎಸಿಎಂ ಗಾರ್ವ್ಮೆಂಟ್ಸ್ನ ಅಶೋಕ ರಾಠೋಡ, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಶ್ರೀಧರ ಪೂಜಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: Content is protected !!