ಢಾಕಾ: ಬಾಂಗ್ಲಾದೇಶದಲ್ಲಿಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹೋರಾಟ ನಡೆಸಿದ್ದ ಹಿಂದೂ ಧಾರ್ಮಿಕ ಮುಖಂಡ ಹಾಗೂ ಇಸ್ಕಾನ್ ಸದಸ್ಯ ಚಿನ್ಮಯ್ ಕೃಷ್ಣದಾಸ್ ಪ್ರಭು ಬ್ರಹ್ಮಚಾರಿ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇಶದ್ರೋಹದ ಆರೋಪದ ಮೇಲೆ ಕೃಷ್ಣದಾಸ್ ಅವರನ್ನು ಬಂಧಿಸಲಾಗಿದ್ದು ಇದೀಗ ಚಿನ್ಮಯ್ ಕೃಷ್ಣದಾಸ ಪ್ರಭು ಬಿಡುಗಡೆಗೆ ಆಗ್ರಹಿಸಿ ಹಲವರು ಭೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ದೇಶದ್ರೋಹದ ಆರೋಪದ ಮೇಲೆ ಸೋಮವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಕೃಷ್ಣದಾಸ್ ಪ್ರಭುವನ್ನು ಅಧಿಕಾರಿಗಳು ಬಂಧಿಸಿದ್ದರು. ಅಲ್ಲದೆ ದೇಶವನ್ನು ತೊರೆಯದಂತೆ ನಿರ್ಬಂಧಿಸಿದ್ದರು. ಬಂಧಿತ ಸ್ವಾಮೀಜಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮಂಗಳವಾರ ಢಾಕಾದ ನ್ಯಾಯಾಲಯ ಕೃಷ್ಣ ದಾಸ್ ಪ್ರಭು ವಿರುದ್ಧದ ದೇಶದ್ರೋಹ ಆರೋಪವನ್ನು ಎತ್ತಿಹಿಡಿದಿದ್ದು ಜಾಮೀನು ನಿರಾಕರಿಸಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಬಳಿಕ ದೇಶದಲ್ಲಿಹಿಂದೂಗಳ ಮೇಲೆ ನಡೆದಿದ್ದ ದೌರ್ಜನ್ಯ ವಿರೋಧಿಸಿ ಚಿನ್ಮಯ್ ಪ್ರಭು ನೇತೃತ್ವದಲ್ಲಿಹೋರಾಟ ನಡೆದಿತ್ತು. ರಂಗ್‌ಪುರದಲ್ಲಿನ.22 ರಂದು ಚಿನ್ಮಯ್ ಪ್ರಭು ನೇತೃತ್ವದಲ್ಲಿಪ್ರತಿಭಟನಾ ರಾರಯಲಿ ನಡೆಸಿದ್ದ ಹಿಂದೂ ಸಮುದಾಯ ಮುಖಂಡರು, ಬಾಂಗ್ಲಾದೇಶದಲ್ಲಿಭಾಗವಧ್ವಜ ಹಾರಿಸಿದ್ದರು. ಕೇಸರಿಧ್ವಜ ಹಾರಿಸಿದ್ದ ಚಿನ್ಮಯ್ ಪ್ರಭು ವಿರುದ್ಧ ಬಾಂಗ್ಲಾದೇಶ ಮಧ್ಯಂತರ ಸರಕಾರ ದೇಶದ್ರೋಹ ಸೇರಿದಂತೆ 18 ಪ್ರಕರಣ ದಾಖಲಿಸಿದೆ. ಬಾಂಗ್ಲಾದೇಶದಲ್ಲಿಹಿಂದೂ ಧಾರ್ಮಿಕ ಮುಖಂಡ ಚಿನ್ಮಯ್ ಬಂಧನದ ಮಾಹಿತಿಯನ್ನು ಕೇಂದ್ರ ಸರಕಾರ ಖಚಿತಪಡಿಸಿದೆ.
”ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರಕಾರ ದೇಶದ್ರೋಹದ ಆಪಾದನೆ ಮೇಲೆ ಚಿನ್ಮಯ್ ಕೃಷ್ಣದಾಸ್ ಪ್ರಭು ಅವರನ್ನು ಬಂಧಿಸಿದೆ,” ಎಂದು ವಾರ್ತಾ ಹಾಗೂ ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ್ತಿ ಕಾಂಚನ್ ಗುಪ್ತಾ ಹೇಳಿದ್ದಾರೆ.