Home Blog Page 2059

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆಲುವು: ಮಾಜಿ ಶಾಸಕನಿಗೆ ಬಂಪರ್ ಗಿಫ್ಟ್, ಹೆಸ್ಕಾಂ ಅಧ್ಯಕ್ಷರಾಗಿ ಅಜ್ಜಂಪೀರ್‌ ಖಾದ್ರಿ ನೇಮಕ!

0

ಬೆಂಗಳೂರು:- ಶಿಗ್ಗಾವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಹಿನ್ನೆಲೆ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ ಬಂಪರ್ ಗಿಫ್ಟ್​ ನೀಡಲಾಗಿದೆ.

ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಳಿಕ ಸಿಎಂ ಸಿದ್ದರಾಮಯ್ಯ ಮನವಿ ಮೇರೆಗೆ ಉಮೇದುವಾರಿಕೆ ವಾಪಸ್​ ಪಡೆದುಕೊಂಡಿದ್ದ ಹಿನ್ನೆಲೆ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಿಗ್ಗಾಂವಿ ಉಪಚುನಾವಣೆ ವೇಳೆ ತಮ್ಮ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆದುಕೊಂಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಫಲಿತಾಂಶ ಪ್ರಕಟವಾದ ಎರಡೇ ದಿನದಲ್ಲಿ ಖಾದ್ರಿ ಅವರಿಗೆ ಈ ಗಿಫ್ಟ್​ ನೀಡಿದ್ದಾರೆ.

ಶಿಗ್ಗಾಂವಿ ಉಪಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ಖಾದ್ರಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಖಾದ್ರಿಗೆ ಉತ್ತಮ ಸ್ಥಾನಮಾನದ ಭರವಸೆ ನೀಡಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ನಾಮಪತ್ರ ಹಿಂಪಡೆಯುವಂತೆ ಸೂಚಿಸಿದ್ದರು. ಭರವಸೆ ಬೆನ್ನಲ್ಲೇ ಖಾದ್ರಿ ನಾಮಪತ್ರ ಹಿಂಪಡೆದು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್‌ಗೆ ಬೆಂಬಲ ಸೂಚಿಸಿದ್ದರು.

ಅದರಂತೆಯೇ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಬೆನ್ನಿಗೆ ನಿಂತು ಗೆಲ್ಲಿಸಿದ್ದರು. ಇದೀಗ ಕೊಟ್ಟ ಮಾತಿನಂತೆಯೇ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.

ಲಕ್ಕುಂಡಿ ಅನ್ವೇಷಣೆಯಲ್ಲಿ 600ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಲಭ್ಯ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಲಕ್ಕುಂಡಿಯಲ್ಲಿ ಜರುಗುತ್ತಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆಯಲ್ಲಿ 5 ಬಾವಿ ಹಾಗೂ 5 ಶಾಸನಗಳು ಸೇರಿದಂತೆ 600ಕ್ಕೂ ಅಧಿಕ ಪ್ರಾಚ್ಯಾವೇಶಗಳು ಲಭ್ಯವಾಗಿವೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಲಕ್ಕುಂಡಿ ಗ್ರಾಮದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಲಕ್ಕುಂಡಿಯನ್ನು ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಿದ್ದಾರೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಿಶೇಷ ಅಭಿವೃದ್ಧಿ ಹೊಂದಿ ಹೊಯ್ಸಳರು, ಕೆಲವು ಕಾಲ ವಿಜಯನಗರದ ಅರಸರೂ ಆಳಿದ್ದಾರೆ. ಇಂದು ಪ್ರಾಚ್ಯಾವಶೇಷಗಳ ಅನ್ವೇಷಣೆ ಸಂಗ್ರಹಣೆ ಕೆಲಸ ವಿಶೇಷ ಪ್ರಯತ್ನವಾಗಿದ್ದು ಸಾಂಸ್ಕೃತಿಕ, ಐತಿಹಾಸಿಕ, ಕಾಂತ್ರಿಕಾರಕ ಹೆಜ್ಜೆಯಾಗಿದೆ ಎಂದರು.

ಲಕ್ಕುಂಡಿಯಲ್ಲಿ ಈ ಹಿಂದೆ ಇದ್ದ 101 ದೇವಾಲಯಗಳಲ್ಲಿ ಇಂದು 50-60ಲಭ್ಯವಾಗಿದೆ ಹಾಗೂ 8-10 ದೇವಾಲಯದ ಪಾಯಗಳು ದೊರಕಿವೆ. ಇನ್ನುಳಿದ ದೇವಾಲಯಗಳು ಎಲ್ಲೆಲ್ಲಿ ಇದ್ದವು ಎಂದು ಗುರುತಿಸುವದು ಬಹುದೊಡ್ಡ ಕೆಲಸವಾಗಿದೆ. ಹುದುಗಿಹೋದ ದೇವಾಲಯಗಳಲ್ಲಿ ಮರುಸೃಷ್ಟಿಸಬಹುದಾದ ದೇವಾಲಯ ಬಗ್ಗೆ ತಜ್ಞರು ಗಂಭೀರ ಆಲೋಚನೆ ಮಾಡುತ್ತಿದ್ದಾರೆ ಎಂದರು.

ಅನ್ವೇಷಣೆ ಸಂದರ್ಭದಲ್ಲಿ 5 ಹಳೆ ಬಾವಿಗಳು ಹೊಸದಾಗಿ ಸಿಕ್ಕಿದೆ ಹಾಗೂ 5 ಶಾಸನಗಳು ಲಭ್ಯವಾಗಿವೆ. ಅದರಲ್ಲಿ 3 ಶಾಸನಗಳು ಸಂಪೂರ್ಣ ಅಪ್ರಕಟಿತವಾಗಿದೆ. 2 ಅಪ್ರಕಟಿತವಾಗಿದೆ. ಈ ಕಾರ್ಯ ಎಲ್ಲರಲ್ಲೂ ಹುಮ್ಮಸ್ಸು ಹೆಚ್ಚಿಸಿದೆ. ಸರ್ಕಾರದ ಈ ಕೆಲಸದಿಂದ ಇತಿಹಾಸವಿರುವ ಗ್ರಾಮಗಳಲ್ಲಿ ಯಾವ ರೀತಿ ಕಾರ್ಯ ಕೈಗೊಳ್ಳಬಹುದು ಎನ್ನುವುದರ ಬಗ್ಗೆ ದಿಕ್ಸೂಚಿ ಸಿಕ್ಕಂತಾಗಿದೆ ಎಂದು ಹೇಳಿದರು.

ಇಂದು 13 ಗುಡಿಗಳನ್ನು ರಕ್ಷಿತ ಸ್ಮಾರಕ ಎಂದು ಪೋಷಿಸಲು ಸರ್ಕಾರ ನಿರ್ಣಯ ಕೈಗೊಂಡಿದೆ ಹಾಗೂ 1 ಮಠದಲ್ಲಿ ವಾಸ ಮಾಡುತ್ತಿರುವ ಮಾಲಿಕರು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಬಿಟ್ಟುಕೊಟ್ಟಿದ್ದಾರೆ. ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟ ಅವರಿಗೆ ಸರ್ಕಾರದಿಂದ ವಿಶೇಷ ಗೌರವ ನೀಡಲಾಗಿದೆ ಎಂದರು.

13 ಸ್ಮಾರಕಗಳ ಸಂರಕ್ಷಣಾ ಕಾರ್ಯ ಪ್ರಾರಂಭವಾಗಿದೆ. ಮೊದಲು ಭೂಮಿಯ ಮೇಲ್ಭಾಗದಲ್ಲಿ ಲಭ್ಯವಿರುವ ಸ್ಮಾರಕಗಳನ್ನು ಸಂಗ್ರಹಿಸುಲಾಗುತ್ತದೆ. ಆನಂತರ ಡಿಸೆಂಬರ್ ಅಂತ್ಯದ ಒಳಗೆ ಉತ್ಖನನ ಕೆಲಸ ಪ್ರಾರಂಭಿಸಲಾಗುತ್ತದೆ ಹಾಗೂ ಕೋಟೆಯನ್ನು ಅಭಿವೃದ್ಧಿಪಡಿಸಿ ಲಕ್ಕುಂಡಿಯನ್ನು ಪ್ರವಾಸೋದ್ಯಮ ತಾಣವನ್ನಾಗಿಸಿ, ಇತಿಹಾಸವನ್ನು ತಿಳಿಯಲು ಬರುವವರಿಗೆ ಶ್ರೇಷ್ಠ ಕೇಂದ್ರವನ್ನಾಗಿಸಿ, ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯದಿಂದ ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಪ್ರಯತ್ನ ಸಾಗಲಿದೆ ಎಂದು ತಿಳಿಸಿದರು.

ಶಾಸಕರಾದ ಸಿ.ಸಿ. ಪಾಟೀಲ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿಯ ಸದಸ್ಯ ಸಿದ್ಧಲಿಂಗೇಶ್ವರ ಎಚ್.ಪಾಟೀಲ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.

ಸ್ತ್ರೀ ದೌರ್ಜನ್ಯ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ: ನ್ಯಾಯಾಧೀಶ ಸತೀಶ ಎಂ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಮಾಜದಲ್ಲಿ ಮಹಿಳೆಯರಿಗೆ ಗೌರಯುತವಾದ ಸ್ಥಾನವಿದ್ದು, ಇಂದು ಎಲ್ಲ ರಂಗಳಗಳಲ್ಲಿಯೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಆದರೆ ಸಮಾಜದಲ್ಲಿ ನಡೆಯುವ ಮಹಿಳೆಯ ಮೇಲಿನ ದೌರ್ಜನ್ಯ ತಡೆಯುವುದು ಎಲ್ಲರ ಜವಾಬ್ದಾರಿಯಾಗಿದ್ದು, ಇದಕ್ಕಾಗಿ ವಿಶೇಷವಾದ ಕಾನೂನು ಸಹ ಇದೆ ಎಂದು ದಿವಾಣಿ ನ್ಯಾಯಾಧೀಶರಾದ ಸತೀಶ ಎಂ.ಹೇಳಿದರು.

ಅವರು ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಶಿರಹಟ್ಟಿ ಮತ್ತು ಲಕ್ಷೇಶ್ವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿರಹಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಹಿರೇಬಣದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಿಗೆ ಅವರ ಉದ್ಯೋಗ ಸ್ಥಳದಲ್ಲಿ, ಸಮಾಜದಲ್ಲಿ ದೌರ್ಜನ್ಯಗಳು ನಡೆಯುತ್ತವೆ. ಇದರಿಂದ ಮಹಿಳೆಯರು ಮಾನಸಿಕವಾಗಿ ಕುಗ್ಗುವದುಂಟು. ಆದರೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ತಡೆಗಾಗಿಯೇ ವಿಶೇಷ ಕಾನೂನುಗಳಿದ್ದು, ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಬಗ್ಗೆ ದೂರುಗಳು ಬಂದಲ್ಲಿ ಕಾನೂನು ಅಂತವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಸಮಾಜದಲ್ಲಿ ಮಹಿಳೆಯರನ್ನು ಸಮಾನತೆಯಿಂದ ನೋಡುವದು ಅವಶ್ಯವಾಗಿದೆ. ಇಂತಹ ಸಮಸ್ಯೆಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಹಿಳೆಯರನ್ನು ಗೌರವಿಸುವ ಮೂಲಕ ಅವರಿಗೆ ಸೂಕ್ತ ಅವಕಾಶ, ಸ್ವಾತಂತ್ರ್ಯ, ಗೌರವ ನೀಡುವ ಕಾರ್ಯವಾದರೆ ಮಾತ್ರ ದೌರ್ಜನ್ಯದ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.

ಸಹಾಯಕ ಸರ್ಕಾರಿ ಅಭಿಯೋಜಕಿ ಹೀನಾಕೌಸರ ಗಂಜಿಹಾಳ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಡಿ.ಪಿ.ಓ. ಮೃತ್ಯುಂಜಯ ಗುಡ್ಡಧಾನ್ವೇರಿ ವಹಿಸಿದ್ದರು. ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ,. ಪ್ಯಾನಲ್ ವಕೀಲರಾದ ಪಿ.ಎಂ. ವಾಲಿ, ವಿ.ಎಸ್. ಪಶುಪತಿಹಾಳ, ಆರ್.ಎಂ. ಕುರಿ ಪಾಲ್ಗೊಂಡಿದ್ದರು. ಅಂಗನವಾಡಿ ಮೇಲ್ವಿಚಾರಕಿ ನಂದಾ ನವಲೆ ಕಾರ್ಯಕ್ರಮ ನಿರ್ವಹಿಸಿದರು.

ಮುಹಮ್ಮದ್ ಪೈಗಂಬರ್ ಜಗತ್ತಿಗೆ ನೀಡಿದ ಕೊಡುಗೆಗಳನ್ನು ಅರ್ಥ ಮಾಡಿಕೊಳ್ಳಬೇಕು: ಹಸನಸಾಬ ತಟಗಾರ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮುಹಮ್ಮದ್ ಪೈಗಂಬರ್ ಮನುಕುಲದ ಪ್ರವಾದಿಯಾಗಿ, ಶಾಂತಿದೂತರಾಗಿ ಜಗತ್ತಿಗೆ ನೀಡಿದ ಕೊಡುಗೆಗಳನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಸನಸಾಬ ತಟಗಾರ ಹೇಳಿದರು.

ನಗರದ ರಾಜಾಬಕ್ಷಿ ದರ್ಗಾದ ಬುಕ್ಕಿಟಗಾರ ಹೊಲದಲ್ಲಿ ಡಿಸೆಂಬರ್ ೧೩ರಂದು ನಡೆಯಲಿರುವ ಗೌಸೆ ಆಜಂ ಕಾನ್ಪರೆನ್ಸ್ ಧಾರ್ಮಿಕ ಪ್ರವಚನದ ಪೋಸ್ಟರ್ ಶಾದಿಮಹಲ್‌ನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಇವತ್ತು ಸುಂದರ ಸಮಾಜವನ್ನು ನಾವು ಕಟ್ಟಬೇಕಾಗಿದೆ. ಆ ನಿಟ್ಟಿನಲ್ಲಿ ಪಟ್ಟಣದಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ ಅಣಿಯಾಗಿದ್ದೇವೆ ಎಂದರು. ಗೌಸೆ ಆಜಂ ಕಾನ್ಫರೆನ್ಸ್ ಕಮಿಟಿಯ ಸದಸ್ಯ ದಾವಲಸಾಬ ತಾಳಿಕೋಟಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಜಗತ್ತಿನ ಖ್ಯಾತ ವಾಗ್ಮಿಗಳು, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ವಂಶಸ್ಥರಾದ ಉತ್ತರಪ್ರದೇಶದ ಸೈಯದ್ ಮುಹಮ್ಮದ್ ಹಾಷ್ಮಿ ಮಿಯಾ ಅವರು ಆಗಮಿಸಿ ಪ್ರವಾದಿಗಳ ಕುರಿತು ಪ್ರವಚನ ನೀಡಲಿದ್ದಾರೆ. ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮ ಇತಿಹಾಸದಲ್ಲಿಯೇ ಮೊದಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ ಹಾಗೂ ಸುತ್ತಮುತ್ತಲಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದರು.

ಧರ್ಮ ಗುರುಗಳಾದ ಯಾಸೀನ ಮೌಲಾನ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೌಲಾನಾ ಖಲೀಲ ಅಹ್ಮದ ಖಾಜಿ, ರಫೀಕ್ ಮೌಲಾನ, ಕಾರ್ಯದರ್ಶಿ ಫಯಾಜ್ ತೋಟದ, ದಾದು ಹಣಗಿ, ನಾಸೀರ ಸುರುಪುರ, ಭಾಷಾ ಮುದಗಲ್ಲ, ಇಮ್ರಾನ್ ಅತ್ತಾರ, ಆರೀಫ್ ಮನಿಯಾರ, ಅಲಿ ಕಿಲ್ಲೆದಾರ, ಪಿ.ಕೆ. ಬಾಗವಾನ, ಎ.ಕೆ. ಕಾತರಕಿ, ಶಾಮೀದಸಾಬ ದಿಂಡವಾಡ, ರಸೂಲಸಾಬ ಆರಗಿದ್ದಿ, ಮೈಬುಸಾಬ ಚಿನ್ನೂರ, ಕೆ.ಸಿ. ಗೋಡೇಕಾರ, ಖಲಂದರ ಡಾಲಯತ, ಆಸೀಫ್, ಸಲೀಂ ಮಾನಿಯಾರ, ಸಲೀಂ ಕೊಪ್ಪಳ ಸೇರಿದಂತೆ ಸಮಾಜ ಭಾಂದವರು ಉಪಸ್ಥಿತರಿದ್ದರು.

ಹೊಳಗಟ್ಟಿಯನ್ನು ಭದ್ರಪಡಿಸಿ ಸ್ಮಾರಕವನ್ನಾಗಿ ರೂಪಿಸುವಂತೆ ಸಚಿವ ಎಚ್ ಕೆ ಪಾಟೀಲರಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಂದ 4 ಕೀ.ಮೀ ದೂರದಲ್ಲಿರುವ ಅಕ್ಕಮ್ಮ ಬಸಪ್ಪ ಕಟಿಗ್ಗಾರ ಅವರ ಜಮೀನಿನಲ್ಲಿ ಪ್ರಾಚ್ಯಾವಶೇಷಗಳಿಂದ ನಿರ್ಮಾಣವಾಗಿರುವ ಹೊಳಗಟ್ಟಿಯನ್ನು ಭದ್ರಪಡಿಸಿ ಸ್ಮಾರಕವನ್ನಾಗಿ ರೂಪಿಸಬೇಕೆಂದು ಇಲ್ಲಿಯ ರೈತರು ಒತ್ತಾಯಿಸಿದ್ದಾರೆ.

ಈ ಕುರಿತು ಹೊಳಗಟ್ಟಿ ಜಮೀನಿಗೆ ಭೇಟಿ ನೀಡಿದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲರಿಗೆ ಮನವಿ ಪತ್ರ ಸಲ್ಲಿಸಿದ ರೈತರು, ಲಕ್ಕುಂಡಿಯ ಗತ ವೈಭವವನ್ನು ಮರು ಸೃಷ್ಟಿಸಲು ಗ್ರಾಮದ ಮನೆ, ತಿಪ್ಪೆ, ಹಿತ್ತಲು, ಹೊಲದ ಬದುಗಳಲ್ಲಿ, ಕೆರೆಗಳಲ್ಲಿ, ಹೊಳಗಟ್ಟಿಗಳಲ್ಲಿ ಜೋಡಿಸಲಾಗಿರುವ ಪ್ರಾಚ್ಯಾವಶೇಷಗಳನ್ನು ಸಂಗ್ರಹ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಅದರಂತೆ ಲಕ್ಕುಂಡಿ ದಕ್ಷಿಣ ಭಾಗದ ಜಮೀನು ಸರ್ವೇ ನಂ-216ರ ಹಿಸ್ಸಾ 1ರಲ್ಲಿ ಅಕ್ಕಮ್ಮ ಬಸಪ್ಪ ಕಟಿಗ್ಗಾರ ಅವರ ಜಮೀನಿನಲ್ಲಿ ದೊಡ್ಡ ಪ್ರಮಾಣದ ಹೊಳಗಟ್ಟಿಯಿದೆ. ಈ ಹೊಳಗಟ್ಟಿಯನ್ನು ಹಿರಿಯರು ಪ್ರಾಚ್ಯ ವಸ್ತುಗಳ ಕಲ್ಲುಗಳಿಂದ ನಿರ್ಮಾಣ ಮಾಡಿದ್ದು ಕಂಡುಬಂದಿದೆ.

ಈ ಪ್ರಾಚ್ಯಾವಶೇಷಗಳ ಸ್ಮಾರಕಗಳನ್ನು ತೆರವುಗೊಳಿಸಿ ಸಂಗ್ರಹ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಈ ಹೊಳಗಟ್ಟಿಗೆ ನೂರಾರು ಹೆಕ್ಟೆರ್ ಜಮೀನುಗಳಿಂದ ಮಳೆಯ ನೀರು ಹರಿದು ಬರುತ್ತದೆ. ಈ ನೀರು ಬರುವುದರಿಂದ ನಮ್ಮೆಲ್ಲರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಈ ಹೊಳಗಟ್ಟಿ ಸರಿಪಡಿಸಲು ಸಾಕಷ್ಟು ಶ್ರಮ ಹಾಗೂ ಅಧಿಕ ಹಣ ಖರ್ಚು ಮಾಡಲಾಗಿದೆ.

ಈ ಹೊಳಗಟ್ಟಿಗೆ ಜೋಡಿಸಲಾಗಿರುವ ಪ್ರಾಚ್ಯಾವಶೇಷಗಳನ್ನು ತೆರೆವುಗೊಳಿಸದೇ ಇನ್ನಷ್ಟು ಭದ್ರಪಡಿಸಿ  ಸುಂದರ ತಾಣವನ್ನಾಗಿ ಮಾಡಿ ಲಕ್ಕುಂಡಿ ಆಗಮಿಸುವ ಪ್ರವಾಸಿಗರಿಗೆ ವಿಕ್ಷೀಸುವಂತಾಗಲು ಸರಕಾರ ಮುಂದಾಗಬೇಕೆಂದು ಸ್ಥಳೀಯರಾದ ರವಿರಾಜ ಕಟಿಗ್ಗಾರ, ಮಂಜುನಾಥ ಕಟಿಗ್ಗಾರ, ಮಲ್ಲಪ್ಪ ಮಂಗಳೂರು, ಯಲ್ಲಪ್ಪ ಮುಳ್ಳಾಳ, ಬಸವಣ್ಣಿಪ್ಪ ಶೇಡದ, ಮಹಾಂತೇಶಗೌಡ ಪಾಟೀಲ,  ಮುಜರಪ್ಪ ಜವಳಬೆಂಚಿ, ಈರಪ್ಪ ಸಾಲಮನಿ, ರಾಮಣ್ಣ ಕಲಾಲ, ವೀರಪ್ಪ ಗರ್ಜಪ್ಪನವರ, ಪ್ರಕಾಶ ಹಣವಾಳ, ಹುಲಗಪ್ಪ ಹಳ್ಳಿಕೇರಿ, ಪಾಲಾಕ್ಷಪ್ಪ ಹಣವಾಳ, ವೀರಯ್ಯ ಗಂಧದ, ಮಹಾಂತೇಶ ಕಮತರ, ಕೊಟ್ರಪ್ಪ ಬಳಿಗೇರ, ಈರಪ್ಪ ಕಮತರ, ಬಸಪ್ಪ ತಿಮ್ಮಾಪೂರ, ಮುತ್ತಪ್ಪ ಬಟ್ಟೂರ, ಮಲ್ಲಪ್ಪ ಗರ್ಜಪ್ಪನವರ, ನಿಂಗಪ್ಪ ಮಡಿವಾಳರ, ನೀಲಮ್ಮ ವಡ್ಡರ, ಕಲ್ಲಪ್ಪ ಅಂಬಕ್ಕಿ ಸೇರಿದಂತೆ ನೂರಾರು ರೈತರು ಮನವಿ ಮಾಡಿದರು.

ಎಲ್ಲೆಡೆ ಧಾರ್ಮಿಕ ಕಾರ್ಯ, ಚಿಂತನೆಗಳು ನಡೆದಾಗ ಮಾತ್ರ ಗ್ರಾಮಗಳು ಸುಧಾರಣೆಯಾಗಲು ಸಾಧ್ಯ: ಶ್ರೀಕಾಂತ ಕುಲಕರ್ಣಿ

0

ವಿಜಯಸಾಕ್ಷಿ ಸುದ್ದಿ, ರೋಣ: ಪ್ರಸಕ್ತ ದಿನಗಳಲ್ಲಿ ಧಾರ್ಮಿಕ ಚಿಂತನೆಗಳು ಅಗತ್ಯವಾಗಿದ್ದು, ಈ ದಿಶೆಯಲ್ಲಿ ಗ್ರಾಮದಲ್ಲಿ ನಡೆಯುತ್ತಿರುವ ಧಾರ್ಮಿಕ ಪ್ರವಚನ ಸಹಕಾರಿಯಾಗಿದೆ. ಎಲ್ಲೆಡೆ ಧಾರ್ಮಿಕ ಕಾರ್ಯಗಳು ಹಾಗೂ ಚಿಂತನೆಗಳು ನಡೆಯಬೇಕು. ಅಂದಾಗ ಮಾತ್ರ ಗ್ರಾಮಗಳು ಸುಧಾರಣೆಯಾಗಲು ಸಾಧ್ಯವಾಗುತ್ತದೆ ಎಂದು ಕೃ.ಪ.ಸ.ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಹೇಳಿದರು.

ಅವರು ರವಿವಾರ ಸಂಜೆ ಮಾರನಬಸರಿ ಗ್ರಾಮದ ಸರ್ವಧರ್ಮ ಸಮನ್ವಯ ಪೀಠದ ಧಾರ್ಮಿಕ ಪ್ರವಚನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರೊ. ಎಫ್.ಎಂ. ಹುಡೇದ ಹಾನಗಲ್ಲ ಕುಮಾರೇಶ್ವರರ ಕುರಿತು ಉಪನ್ಯಾಸ ನೀಡಿದರು. ಶಾಂತಮ್ಮ ಮರಾಠ ಅಧ್ಯಕ್ಷತೆ ವಹಿಸಿದ್ದರು. ಶಿವಮೂರ್ತಿ ಶ್ರೀಗಳು ಸಾನ್ನಿಧ್ಯ ಹಾಗೂ ಶಿವಯೋಗಿ ದೇವರು ಸಮ್ಮುಖ ವಹಿಸಿದ್ದರು. ಗದಿಗೆಯ್ಯ ದೇವರು ವಿರಕ್ತಮಠ ಪ್ರವಚನ ನೀಡಿದರು. ದಾಸೋಹ ಸೇವೆ ಸಲ್ಲಿಸಿದ ಮರಿಯಮ್ಮ ಅಯ್ಯಪ್ಪ ಹಾದಿಮನಿರವರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ಮೆಹೆಬೂಬ ಮೋತೆಖಾನ್, ಎಸ್‌ಡಿಎಂಸಿ ಅಧ್ಯಕ್ಷ ಕೂಡ್ಲೆಪ್ಪ ಹಡಪದ, ಗ್ರಾ.ಪಂ ಸದಸ್ಯರಾದ ದಿಲ್‌ಶ್ಯಾದಬೇಗಂ ದೋಟಿಹಾಳ, ಹನಮವ್ವ ತಳವಾರ, ನ್ಯಾಯವಾದಿ ಭರತಕುಮಾರ ಹಾದಿಮನಿ, ನಿವೃತ್ತ ಶಿಕ್ಷಕ ಎಸ್.ಬಿ. ಪೂಜಾರ, ಚಂದ್ರಶೇಖರಯ್ಯ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

IPL Auction 2025: ವಿಲ್​ ಜಾಕ್ಸ್​ ಖರೀದಿ ಮಾಡದ ಆರ್​​ಸಿಬಿ: ಪ್ರಾಂಚೈಸಿ ನಿರ್ಧಾರಕ್ಕೆ ಫ್ಯಾನ್ಸ್ ಸಿಡಿಮಿಡಿ!

0

ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್​ ಅವರಿಗೆ ಮಣೆ ಹಾಕಿದೆ. ಆರ್​​ಸಿಬಿ ಆಟಗಾರನಿಗೆ ಬರೋಬ್ಬರಿ 5.25 ಕೋಟಿ ನೀಡಿ ಖರೀದಿ ಮಾಡಿದೆ.

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್​ಸಿಬಿ, ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ತಂಡಕ್ಕೆ ಯಾವ್ಯಾವ ಆಟಗಾರರು ಬರಬೇಕೆಂದು ಅಭಿಮಾನಿಗಳು ಬಯಸಿದ್ದರೋ, ಆ ಯಾವ ಆಟಗಾರರನ್ನು ಆರ್​​ಸಿಬಿ ಖರೀದಿಸಿಲ್ಲ.

ಕೇವಲ 3 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದ ಆರ್​ಸಿಬಿ, ಮಿಕ್ಕ ಮೂವರು ಪ್ರಮುಖ ಆಟಗಾರರನ್ನು ಹರಾಜಿನಲ್ಲಿ ಆರ್​ಟಿಎಮ್ ಬಳಸಿಕೊಂಡು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು.

ಅಭಿಮಾನಿಗಳು ನಿರೀಕ್ಷಿಸಿದ್ದ ಆ ಹೆಸರಿನಲ್ಲಿ ಪ್ರಮುಖ ಹೆಸರೆಂದರೆ ಅದು ಇಂಗ್ಲೆಂಡ್​ನ ಸ್ಫೋಟಕ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್. ಅಭಿಮಾನಿಗಳ ಹೊರತಾಗಿ ಕ್ರಿಕೆಟ್ ಪಂಡಿತರು ಕೂಡ ಆರ್​ಸಿಬಿ, ವಿಲ್ ಜ್ಯಾಕ್ಸ್​ರನ್ನು ಆರ್​ಟಿಎಮ್ ಬಳಸಿ ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆಗಳು ಹುಸಿಯಾಗಿಸಿದೆ.

ಈ ಬಾರಿಯ ಮೆಗಾ ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾಗುವ ಆಟಗಾರರ ಪಟ್ಟಿಯಲ್ಲಿ ವಿಲ್ ಜ್ಯಾಕ್ಸ್ ಅವರ ಹೆಸರಿತ್ತು. ಅದರಂತೆ ಹರಾಜಿನ ಎರಡನೇ ದಿನ ಹರಾಜಿಗೆ ಬಂದ ವಿಲ್ ಜ್ಯಾಕ್ಸ್​ರನ್ನು ಖರೀದಿಸಲು ಮುಂಬೈ ಹಾಗೂ ಪಂಜಾಬ್ ನಡುವೆ ಪೈಪೋಟಿ ಏರ್ಪಟ್ಟಿತ್ತು.

ಅಂತಿಮವಾಗಿ ಮುಂಬೈ ಜ್ಯಾಕ್ಸ್​ಗೆ 5.25 ಕೋಟಿ ರೂ. ನೀಡಲು ಮುಂದಾಯಿತು. ಈ ವೇಳೆ ಆರ್​ಸಿಬಿ ಆರ್​ಟಿಎಮ್ ಬಳಸಿ ವಿಲ್ ಜ್ಯಾಕ್ಸ್​ರನ್ನು ಮತ್ತೆ ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂಬುದು ಎಲ್ಲರ ಧೃಡ ನಿರೀಕ್ಷೆಯಾಗಿತ್ತು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಯಾಗಿಸಿದ ಆರ್​ಸಿಬಿ, ಜ್ಯಾಕ್ಸ್ ಮೇಲೆ ಆರ್​ಟಿಎಮ್ ಬಳಸಲೇ ಇಲ್ಲ.

ಆರ್​ಸಿಬಿಯ ಈ ನಿರ್ಧಾರ ಕಂಡು ಒಂದು ಕ್ಷಣ ಇಡೀ ಮುಂಬೈ ಪಾಳಯವೇ ಅಚ್ಚರಿ ವ್ಯಕ್ತಪಡಿಸಿತು. ಕೆಲವು ಹೊತ್ತು ಅಚ್ಚರಿಯಿಂದಲೇ ಕುಳಿತಿದ್ದ ಮುಂಬೈ ತಂಡದ ಸದಸ್ಯರು, ಜ್ಯಾಕ್ಸ್ ನಮ್ಮ ತಂಡಕ್ಕೆ ಸೇರಿದರೆಂಬ ಸಂತಸದಲ್ಲಿ ಒಬ್ಬರನ್ನೊಬ್ಬರು ಕೈಕುಲುಕಿ ಹರ್ಷ ವ್ಯಕ್ತಪಡಿಸಿದರು.

ಶಾಸಕ ಜಿ.ಎಸ್. ಪಾಟೀಲರ ನಿಸ್ವಾರ್ಥ ಸೇವೆ ಮೆಚ್ಚುವಂತದ್ದು: ಶಿವಮೂರ್ತಿ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ರೋಣ: ಧಾರ್ಮಿಕ ಕಾರ್ಯಗಳಲ್ಲಿ ಶಾಸಕ ಜಿ.ಎಸ್. ಪಾಟೀಲ ಮುಂಚೂಣಿಯಲ್ಲಿದ್ದು, ಅವರ ನಿಸ್ವಾರ್ಥ ಸೇವೆ ಮೆಚ್ಚುವಂತದ್ದು ಎಂದು ಶಿವಮೂಗ್ಗ ಜಿಲ್ಲೆಯ ಹಿರೇಮಾಗಡಿ ಮುರಘಾ ಮಠ ಹಾಗೂ ಮಾರನಬಸರಿ ಗ್ರಾಮದ ಸರ್ವಧರ್ಮ ಸಮನ್ವಯ ಪೀಠದ ಪೂಜ್ಯರಾದ ಶಿವಮೂರ್ತಿ ಶ್ರೀಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ಗ್ರಾಮದ ಸರ್ವಧರ್ಮ ಸಮನ್ವಯ ಪೀಠದ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ತ ಜರುಗಿದ ಹೋಮ, ವಾಸ್ತು ಶಾಂತಿ, ಧಾರ್ಮಿಕ ಕಾರ್ಯಕ್ರಮದ ನಂತರ ಆಶೀರ್ವಚನ ನೀಡಿದರು.

ಶಾಸಕ ಜಿ.ಎಸ್. ಪಾಟೀಲರು ಹಾಗೂ ಕುಟುಂಬಸ್ಥರು ಯಾವುದೇ ಜಾತಿ, ಧರ್ಮಗಳನ್ನು ನೋಡದೆ ಸರ್ವಧರ್ಮದವರ ಆಚರಣೆಗಳಲ್ಲಿ ಭಾಗಿಯಾಗಿ ತಮ್ಮ ಧಾರ್ಮಿಕ ಸೇವೆಯನ್ನು ಸಲ್ಲಿಸುತ್ತಾರೆ. ಹೀಗಾಗಿ ಅವರೊಬ್ಬ ಧಾರ್ಮಿಕ ಚಿಂತಕ ಎನ್ನುವುದರಲ್ಲಿ ಸಂದೇಹವಿಲ್ಲ ಎಂದ ಶ್ರೀಗಳು, ಶಾಸಕ ಜಿ.ಎಸ್. ಪಾಟೀಲ ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಉತ್ತಂಗದತ್ತ ಸಾಗಿ ಮತಕ್ಷೇತ್ರ ಸೇರಿದಂತೆ ರಾಜ್ಯದ ಸೇವೆಗೈಯಲಿ ಎಂದು ಹಾರೈಸಿದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ದೇವರು ಎಲ್ಲರಿಗೂ ಒಂದೇ ಆಗಿದ್ದು, ಮನುಷ್ಯರಾದ ನಾವು ಅರ್ಥ ಮಾಡಿಕೊಂಡು ನಮ್ಮ ಜೀವನ ನಿರ್ವಹಿಸಬೇಕು. ಮಾರನಬಸರಿ ಗ್ರಾಮದ ಏಕತೆ ನಾಡಿಗೆ ಮಾದರಿಯಾಗಿದೆ. ಇಂತಹ ಗ್ರಾಮದಲ್ಲಿ ಸರ್ವಧರ್ಮ ಸಮನ್ವಯ ಪೀಠ ಸ್ಥಾಪನೆಯಾಗಿದ್ದು ಸ್ವಾಗತಾರ್ಹ. ಗ್ರಾಮ ಧಾರ್ಮಿಕ ಕಾರ್ಯಗಳಿಂದ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದರು.

ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದ ಶಾಸಕ ಪಾಟೀಲ ದಂಪತಿಗಳಿಗೆ ಶಿವಮೂರ್ತಿ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು. ಶಿವಯೋಗಿ ದೇವರು ಸಮ್ಮುಖ ವಹಿಸಿದ್ದರು. ಶರಣಪ್ಪ ಕುರಿ, ಶೇಖರಗೌಡ ಪಾಟೀಲ, ಮರ್ತುಜಸಾಬ ಮೋತೆಖಾನ್, ಈರಪ್ಪ ನಿಡಗುಂದಿ, ಅಡಿವೇಪ್ಪ ಜಿಗಳೂರ, ಎಸ್.ಎಚ್. ಹಾದಿಮನಿ, ಕಾಶೀಮಸಾಬ ದೋಟಿಹಾಳ, ಶಿವಕುಮಾರ ದಿಂಡೂರ, ಶಿವಶರಣಪ್ಪ ಅಬ್ಬಿಗೇರಿ, ವೀರಣ್ಣ ಶಾಖಾ, ಅಲ್ಲಾಸಾಬ ಮೋತೆಖಾನ್, ರಿಯಾಜ್ ಸವಡಿ, ರವಿ ಗಡಾದ, ಮಹ್ಮದ ಸವಡಿ, ಶ್ರೀಶೈಲ್ ಶಾಂತಗೀರಮಠ, ಚಂದ್ರಯ್ಯಜ್ಜ ಹಿರೇಮಠ, ವಿರೂಪಾಕ್ಷಪ್ಪ ಮರಡಿ, ಎಸ್.ಬಿ. ಪೂಜಾರ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

ನನಗೆ ಒಂದು ಲೈಫ್ ಅಂತ ಕೊಟ್ಟಿರೋದು ದರ್ಶನ್ ಸರ್: ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಧರ್ಮ ಭಾವುಕ!

0

ನನಗೆ ಒಂದು ಲೈಫ್ ಅಂತ ಕೊಟ್ಟಿರೋದು ದರ್ಶನ್ ಸರ್. ಅವರಿಗೆ ಬೇಲ್ ಸಿಕ್ಕ ವಿಚಾರ ತಿಳಿದು ಖುಷಿ ಆಗಿದೆ ಎಂದು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಧರ್ಮಕೀರ್ತಿ ಹೇಳಿದ್ದಾರೆ.

ಈ ಸಂಬಂಧ ಸಂದರ್ಶನ ಒಂದರಲ್ಲಿ ಮಾತನಾಡಿದ ಧರ್ಮಕೀರ್ತಿ, ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹೊರಗಿನ ವಿಚಾರ ನಮಗೆ ತಿಳಿಯುತ್ತಿರಲಿಲ್ಲ. ಮನೆಗೆ ಬಂದಾಗ ಫಸ್ಟ್ ಗುಡ್ ನ್ಯೂಸ್ ಸಿಕ್ಕಿದ್ದೇ ದರ್ಶನ್ ಸರ್‌ಗೆ ಬೇಲ್ ಆದ ವಿಚಾರ ತಿಳಿಯಿತು. ಈ ವಿಚಾರ ಕೇಳಿ ಖುಷಿಯಾಯಿತು. ಜೊತೆಗೆ ಅವರಿಗೆ ಬೆನ್ನು ನೋವಿದೆ ಆಪರೇಷನ್ ಮಾಡಬೇಕು ಎಂದಿದ್ದು ಬೇಜರಾಯಿತು.

ಅವರ ಫಾರ್ಮ್‌ಹೌಸ್‌ನಲ್ಲಿ ಕುದುರೆ ಓಡಿಸುವಾಗ ಆವಾಗಲೇ ಅವರಿಗೆ ಬೆನ್ನು ನೋವಿತ್ತು. ಸ್ಟಂಟ್ ಮಾಡುವಾಗಲೂ ಅವರಿಗೆ ಬೆನ್ನಿಗೆ ಎಷ್ಟು ನೋವಾಗುತ್ತಿತ್ತು ಎಂಬುದು ಗೊತ್ತಾಗುತ್ತಿತ್ತು. ಈ ಸಲ ಸ್ವಲ್ವ ಜಾಸ್ತಿ ಆಗಿರೋದು ಕೇಳಿ ನೋವಾಗಿದೆ. ಅವರು ಬೇಗ ಗುಣಮುಖರಾಗಲಿ ಅಂತ ಆಶಿಸುತ್ತೇನೆ ಎಂದು ಧರ್ಮ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ನೋಡಿದಾಗ ಕಾನೂನಿಗೆ ನಾವು ಯಾವಾಗಲೂ ತಲೆಬಾಗಲೇಬೇಕು. ಇದನ್ನು ಕೋರ್ಟ್ ನಿರ್ಧಾರ ಮಾಡುತ್ತೆ. ನನಗೆ ಒಂದು ಲೈಫ್ ಅಂತ ಕೊಟ್ಟಿರೋದು ದರ್ಶನ್ ಸರ್. ಸಿನಿಮಾರಂಗದಲ್ಲಿ ನಾನು ನಿಲ್ಲೋಕೆ ಅವರು ಕಾರಣ. ಅವರು ನನ್ನ ಶಕ್ತಿ. ನಾನು ದೇವರಲ್ಲಿ ಕೇಳಿಕೊಳ್ಳೋದು ಏನು ಅಂದರೆ ಇದೆಲ್ಲಾ ಆದಷ್ಟು ಬೇಗ ಸರಿ ಹೋಗಲಿ ಎಂದು ಧರ್ಮ ಹೇಳಿದ್ದಾರೆ.

ಲೋಕಾಯುಕ್ತ ಸರ್ಚ್ ವಾರಂಟ್ ವಿಚಾರ: ಐ ಡೋಂಟ್ ಕೇರ್ ಎಂದ ಬೈರತಿ ಸುರೇಶ್!

0

ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸರ್ಚ್ ವಾರಂಟ್ ವಿಚಾರಕ್ಕೆ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಲೋಕಾಯುಕ್ತ ಸರ್ಚ್ ವಾರಂಟ್ ವಿಚಾರದಲ್ಲಿ ನಾನೇನು ತಪ್ಪು ಮಾಡಿಲ್ಲ. ಐ ಡೋಂಟ್ ಕೇರ್. ಸರ್ಚ್ ವಾರಂಟ್ ಕೊಟ್ಟವರು ಯಾರು? ದಾಳಿ ಮಾಡಬೇಡಿ ಅಂತ ಲೋಕಾಯುಕ್ತವನ್ನು ತಡೆದವರು ಯಾರು? ಲೋಕಾ ಮೇಲೆ ಯಾರಾದ್ರೂ ಪ್ರೆಷರ್ ಹಾಕಲು ಆಗುತ್ತಾ? ಸಿಎಂ ಮೇಲೆ ಲೋಕಾಯುಕ್ತ ನೋಟಿಸ್ ಕೊಟ್ಟಿಲ್ವಾ? ಸಿಎಂ ಪತ್ನಿ ಪಾರ್ವತಿಗೆ, ಬಾಮೈದನಿಗೆ, ಅಧಿಕಾರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿಲ್ವಾ? ಏನು ನಡೆಯುತ್ತಿದೆ ನನಗೆ ಅರ್ಥವಾಗುತ್ತಿಲ್ಲ ಎಂದರು.

ನಮ್ಮ ಕೆಳಗಡೆ ಲೋಕಾಯುಕ್ತ ಇದೆಯಾ? ಯಾವ ಐಎಎಸ್ ಅಧಿಕಾರಿ ಯಾಕೆ ಫೈಲ್ ತೆಗೆದುಕೊಂಡು ಹೋಗಿದ್ದಾರೆ? ಅದಕ್ಕೇನಾದರೂ ಸಾಕ್ಷಿ ಇದೆಯಾ? ದೂರುದಾರನ ಪ್ರಶ್ನೆ ಏನು? ಲೋಕಾಯುಕ್ತ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ಅವರನ್ನು ಹೋಗಿ ಕೇಳಲಿ. ದಿನ ಬೆಳಗಾದರೆ ತನಿಖೆಯೊಳಗೆ ಮೂಗು ತೂರಿಸೋದು ಸರಿಯಾ? ನಮ್ಮದೇ ಅಧಿಕಾರಿ ಮೇಲೆ ನಂಬಿಕೆ ಇಲ್ಲ ಅಂದರೆ ಇನ್ಯಾರಿಂದ ತನಿಖೆ ಮಾಡಿಸಬೇಕು? ನಾನೇನು ತಪ್ಪು ಮಾಡಿಲ್ಲ, ಐ ಡೋಂಟ್ ಕೇರ್ ಎಂದು ಹೇಳಿದ್ದಾರೆ.

error: Content is protected !!