Home Blog Page 2062

ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಗಿದೆ: ಮಾಜಿ ಶಾಸಕ ಪ್ರೀತಂಗೌಡ

0

ಹಾಸನ: 2024 ರ ನಂತರ ವಾಸ್ತು, ದಿಕ್ಕು, ದಿಸೆ ಎಲ್ಲಾ ಬದಲಾಗಿದೆ. ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಿಗಿದೆ ಎಂದು ಮಾಜಿಸಚಿವ ಎಚ್.ಡಿ.ರೇವಣ್ಣ ವಿರುದ್ಧ ಮಾಜಿ ಶಾಸಕ ಪ್ರೀತಂಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಭುವನೇಶ್ವರಿ ರಥ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

2024 ರ ನಂತರ ವಾಸ್ತು, ದಿಕ್ಕು, ದಿಸೆ ಎಲ್ಲಾ ಬದಲಾಗಿದೆ. ಅದರ ಶ್ರೇಯಸ್ಸು ಶ್ರೇಯಸ್‌ಪಟೇಲ್ ಅವರಿಗೆ ಸಲ್ಲುತ್ತದೆ. ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಗಿದೆ. ನಿಮ್ಮನ್ನೆಲ್ಲಾ ನೋಡಿದ ಮೇಲೆ ಹೊಳೆನರಸೀಪುರಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅನ್ನಿಸಿತು ಎಂದರು.

ಇಷ್ಟುದಿನ ಈ ಭಾಗದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ನಡೆಯುತ್ತದೆ ಎಂದರೆ, ಯಾವುದೋ ಒಂದು ಮನೆಗೆ, ಒಂದು ತೋಟದಲ್ಲಿ ಲೈಟ್ ಇರುತ್ತಿತ್ತು. ಇಡೀ ಹೊಳೆನರಸೀಪುರದಲ್ಲಿ ಲೈಟ್ ಇರುವುದನ್ನು ನಾನು ನೋಡಿರಲಿಲ್ಲ. ಈಗ ಹೊಳೆನರಸೀಪುರ ಪಟೇಲ್​ರ ತಾತನ ಕಾಲಕ್ಕೆ ಕೊಂಡೊಯ್ದಿದೆ. ಈ ಸಂದರ್ಭದಲ್ಲಿ ಪುಟ್ಟಸ್ವಾಮಿ ಗೌಡರನ್ನು ಸ್ಮರಿಸುತ್ತೇನೆ ಎಂದು ಪ್ರೀತಂ ಗೌಡ ಹೇಳಿದರು.

ನಮ್ಮ ಅವಧಿಯಲ್ಲಿ ರೈತರಿಗೆ ನೋಟಿಸ್ ಕೊಟ್ಟಿದ್ದರೆ ಕ್ರಮ ಆಗಲಿ: ಆರ್. ಅಶೋಕ್

0

ಬೆಂಗಳೂರು: ನಮ್ಮ ಅವಧಿಯಲ್ಲಿ ರೈತರಿಗೆ ನೋಟಿಸ್ ಕೊಟ್ಟಿದ್ದರೆ ಕ್ರಮ ಆಗಲಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಅವಧಿಯಲ್ಲಿ ತಪ್ಪಾಗಿದ್ದರೂ ಕ್ರಮ ಆಗಲಿ. ಕಾಂಗ್ರೆಸ್ ಅವಧಿಯಲ್ಲಿ ತಪ್ಪಾಗಿದ್ದರೂ ಕ್ರಮ ಆಗಲಿ ಎಂದರು.

ಇನ್ನೂ ನಾವೇನು ಅಧಿಕಾರಿಗಳ ರಕ್ಷಣೆ ಮಾಡುತ್ತಿಲ್ಲ. ನಮ್ಮ ಅವಧಿಯಲ್ಲಿ ಅಥವಾ ಕಾಂಗ್ರೆಸ್ ಅವಧಿಯಲ್ಲಿ ಅಧಿಕಾರಿಗಳು ತಪ್ಪಾಗಿ ವಕ್ಫ್ ನೋಟಿಸ್ ಕೊಟ್ಟಿದ್ದರೆ ಕ್ರಮ ಆಗಲಿ. ಈಗ ಪ್ರಶ್ನೆಯಾಗಿರುವುದು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆದರೆ ಇದು ತಪ್ಪು.

ಕಾಂಗ್ರೆಸ್ ಅವಧಿಯಲ್ಲಿ ರೈತರಿಗೆ ನೋಟಿಸ್ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮಾನ್ಪಾಡಿ ವರದಿಯಲ್ಲಿ ಕಾಂಗ್ರೆಸ್ ನಾಯಕರು ಒತ್ತುವರಿ ಮಾಡಿಕೊಂಡಿದ್ದರರು. ಅದಕ್ಕೆ ನೋಟಿಸ್ ಕೊಟ್ಟಿದ್ದೇವೆ. ನಮ್ಮ ಕಾಲದಲ್ಲಿ ರೈತರಿಗೆ ನೋಟಿಸ್ ಕೊಟ್ಟಿದ್ದರೆ ಅದೂ ತಪು ಎಂದು ಕಿಡಿಕಾರಿದರು.

ನಿಯಂತ್ರಣ ತಪ್ಪಿ ಕಾರು ಪಲ್ಟಿ: ಸ್ಥಳದಲ್ಲೇ ತಂದೆ ಸಾವು, ಮಗಳ ಸ್ಥಿತಿ ಗಂಭೀರ

0

ಹಾಸನ: ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ತಂದೆ ಸಾವನ್ನಪ್ಪಿ, ಮಗಳ ಸ್ಥಿತಿ ಗಂಭೀರವಾಗಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಕೊರಟಗೆರೆ ಗ್ರಾಮದಲ್ಲಿ ನಡೆದಿದೆ. ದಯಾನಂದ (46) ಮೃತ ವ್ಯಕ್ತಿಯಾಗಿದ್ದು, ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮಗಳು ನಿಶ್ಮಿತಾ (16) ಗಂಭಿರ ಗಾಯಗೊಂಡ ಬಾಲಕಿಯಾಗಿ ದ್ದಾಳೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ದಯಾನಂದ, ಬೇಲೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು.

ಭಾನುವಾರ ಚಿಕ್ಕಮಗಳೂರಿಗೆ ತೆರಳಿದ್ದ ದಯಾನಂದ, ಇಂದು ಮಗಳನ್ನು ಶಾಲೆಗೆ ಬಿಡಲು ಹಾಗೂ ಬಟ್ಟೆ ಅಂಗಡಿ ತೆರೆಯಲು ವಾಪಾಸ್ ಬೇಲೂರಿಗೆ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಡಿಕೆ ತೋಟಕ್ಕೆ ಕಾರು ಬಿದ್ದಿದೆ. ಈ ವೇಳೆ ಸ್ಥಳದಲ್ಲೇ ದಯಾನಂದ ಸಾವನ್ನಪ್ಪಿದ್ದು, ಮಗಳಿಗೆ ಬೇಲೂರಿನ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸೆಲೆಕ್ಟಿವ್ ಆಗಿ ರಾಜ್ಯ, ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಇವಿಎಂ ಹ್ಯಾಕ್ ಮಾಡ್ತಾರೆ: ಜಿ. ಪರಮೇಶ್ವರ್‌

0

ಬೆಂಗಳೂರು: ಸೆಲೆಕ್ಟಿವ್ ಆಗಿ ರಾಜ್ಯ, ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಇವಿಎಂ ಹ್ಯಾಕ್ ಮಾಡ್ತಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು ಮೊದಲಿಂದಲೂ ಇದನ್ನು ಹೇಳಿಕೊಂಡೇ ಬರುತ್ತಿದ್ದೇವೆ.

ಸೆಲೆಕ್ಟಿವ್ ಆಗಿ ರಾಜ್ಯ, ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಇವಿಎಂ ಹ್ಯಾಕ್ ಮಾಡ್ತಾರೆ. 2014 ರಿಂದಲೂ ಇದು ನಡೆದುಕೊಂಡು ಬರ್ತಿದೆ. ಮಹಾರಾಷ್ಟ್ರದಲ್ಲೂ ಆರೀತಿ ಆಗಿದೆ ಅಂತ ಚರ್ಚೆ ಆಗ್ತಿದೆ, ಅದನ್ನೇ ನಾನು ಹೇಳಿದ್ದು. ಬಿಜೆಪಿಯವರಿಗೆ ನನ್ನ ಹೇಳಿಕೆ ಸರಿಯಾಗಿ ಅರ್ಥ ಮಾಡಿಕೊಳ್ಳಲು ಹೇಳಿ ಎಂದು ಹೇಳಿದ್ದಾರೆ.

ಇನ್ನೂ ಮುಡಾದಲ್ಲಿ ಐಎಎಸ್ ಅಧಿಕಾರಿಯೊಬ್ರು 144 ದಾಖಲೆ ತೆಗೆದುಕೊಂಡು ಹೋದ ವಿಚಾರಕ್ಕೆ ಉತ್ತರಿಸಿದ ಅವರು, ಮುಡಾ ಪ್ರಕರಣದಲ್ಲಿ ತನಿಖೆ ನಡೀತಿದೆ. ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತೆ, ದಾಖಲೆ ತಗೊಂಡು ಹೋಗಿದ್ದಾರಾ? ಯಾರು ತಗೊಂಡು ಹೋದ್ರು? ಐಎಎಸ್ಸಾ? ಐಪಿಎಸ್ಸಾ? ಎಲ್ಲವೂ ತನಿಖೆಯಲ್ಲಿ ಬಯಲಾಗುತ್ತೆ. ತಪ್ಪು ಮಾಡಿದ್ರೆ ಕ್ರಮ ಆಗುತ್ತೆ ಎಂದು ಹೇಳಿದರು.

ಹಸೆಮಣೆ ಏರಲು ಸಜ್ಜಾದ ಮಿಲ್ಕಿ ಬ್ಯೂಟಿ: 2025ರಲ್ಲಿ ತಮ್ಮನ್ನಾ, ವಿಜಯ್ ವರ್ಮ್ ಮದುವೆ

ಟಾಲಿವುಡ್ ಬ್ಯೂಟಿ ತಮ್ಮನ್ನಾ ಹಾಗೂ ನಟ ವಿಜಯ್ ವರ್ಮ್ ಲವ್ ಸುದ್ದಿ ಗುಟ್ಟಾಗಿ ಉಳಿದಿಲ್ಲ. ಹೋದಲ್ಲಿ ಬಂದಲ್ಲೆಲ್ಲ ಕೈ ಕೈ ಹಿಡಿದುಕೊಂಡು ಸುತ್ತಾಡುವ ಜೋಡಿ ಆಗಾಗ ಫೋಟೋ ಶೂಟ್ ಕೂಡ ಮಾಡಿಸ್ತಿರ್ತಾರೆ. ಇದೀಗ ತಮ್ಮನ್ನಾ ಹಾಗೂ ವಿಜಯ್ ಹಸೆಮಣೆ ಏರಲು ಸಜ್ಜಾಗಿದ್ದು ಮದುವೆಗೆ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರಂತೆ. ಹೀಗಾಗಿ ಸದ್ಯ ಜೋಡಿ ಹೊಸ ಮನೆ ಹುಡುಕಾಟದಲ್ಲಿ ಬ್ಯುಸಿಯಾಗಿದ್ದಾರಂತೆ.

ಮೂಲಗಳ ಪ್ರಕಾರ ತಮ್ಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಬರುವ ವರ್ಷ ಅಂದ್ರೆ 2025ರಲ್ಲಿ ಮದುವೆಯಾಗುವುದು ಪಕ್ಕಾ ಎನ್ನಲಾಗುತ್ತಿದ್ದು. ಹೀಗಾಗಿ ಜೋಡಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಲ್ಯಾವಿಶ್ ಅಪಾರ್ಟ್​ಮೆಂಟ್​​ವೊಂದರಲ್ಲಿ ಸರಿಯಾದ ಮನೆಯನ್ನು ಹುಡುಕುವುದರಲ್ಲಿ ಈ ಜೋಡಿ ನಿರತವಾಗಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ತಮ್ಮನ್ನಾ ಭಾಟಿಯಾ ಆಗಲಿ, ವಿಜಯ್ ವರ್ಮಾ ಆಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಕೇವಲ ಮೌನ ಕಾಯ್ದುಕೊಂಡಿದ್ದಾರೆ. ಇಲ್ಲಿಯವರೆಗೂ ಅವರ ಮದುವೆಯ ಬಗ್ಗೆ ಎಲ್ಲಿಯೂ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಜೋಡಿಗಳು ಅಧಿಕೃತವಾಗಿ ಹೇಳಿದ ಬಳಿಕವೇ ಮದುವೆ ಸುದ್ದಿಗೆ ಸ್ಪಷ್ಟಮೆ ಸಿಗಲಿದೆ.

ಹಾಲು ಖರೀದಿ ವಿಚಾರದಲ್ಲಿ ರಾಜಕೀಯ: ನೂರಾರು ಲೀಟರ್ MILK ರಸ್ತೆಗೆ ಚೆಲ್ಲಿ ಮಹಿಳೆಯರ ಆಕ್ರೋಶ!

0

ಮಂಡ್ಯ:- ಹಾಲು ಖರೀದಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ಮಹಿಳೆಯರು ಸಿಡಿದೆದ್ದಿದ್ದು, ರಸ್ತೆಗೆ ಹಾಲು ಚೆಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಈ ಮೂಲಕ ಹೊಟ್ಟೆ ಸೇರಬೇಕಿದ್ದ ನೂರಾರು ಲೀಟರ್ ಹಾಲು ಮಣ್ಣು ಪಾಲಾಗಿದೆ. ಕೃಷಿ ಸಚಿವರ ಕ್ಷೇತ್ರದಲ್ಲೆ ಕೃಷಿಕರ ಬದುಕು ಮೂರಾಬಟ್ಟೆ ಆಗಿದ್ದು, ಈ ಎಲ್ಲಾ ದೃಶ್ಯ ಜಲ್ಲೆಯ ನಾಗಮಂಗಲ ತಾಲ್ಲೂಕಿನ ಕಾಡಂಕನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಹಾಲು ಖರೀದಿಸದಂತೆ ಮನ್ಮುಲ್ ಗೆ ಚಲುವರಾಯಸ್ವಾಮಿ ಅವರು ಸೂಚನೆ ಕೊಟ್ಟಿದ್ದಾರೆ ಎಂದು ಆರೋಪಿಸಿರುವ ಮಹಿಳೆಯರು, ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸಚಿವರು ದ್ವೇಷದಿಂದ ಹಾಲು ಖರೀದಿಸದಂತೆ ಮನ್ಮುಲ್ ಗೆ ಸೂಚನೆ ಆರೋಪ ಕೇಳಿ ಬಂದಿದ್ದು, ಇಂದು ಹಾಲು ಖರೀದಿಸದ ಹಿನ್ನೆಲೆ, ರಸ್ತೆಗೆ ಹಾಲು ಚೆಲ್ಲಿ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ.

ಇದೇ ವೇಳೆ ಗ್ರಾಮದ ಮಹಿಳೆಯರು, ಚಲುವರಾಯಸ್ವಾಮಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಹಾಲು ಖರೀದಿಸದ ಹಿನ್ನೆಲೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕ್ರೋಶ ಹೊರ ಹಾಕಿದ್ದಾರೆ.

ಇಂದಿನಿಂದ ಸಂಸತ್ ಅಧಿವೇಶನ: ವಕ್ಫ್ ಮಸೂದೆ ಮಂಡಿಸಲು ಬಿಜೆಪಿ ಸಜ್ಜು!

0

ನವದೆಹಲಿ:- ಇಂದಿನಿಂದ ಡಿಸೆಂಬರ್ 20 ರವರೆಗೆ ಲೋಕಸಭಾ ಅಧಿವೇಶನ ನಡೆಯಲಿದೆ.

ಅಧಿವೇಶನದಲ್ಲಿ ಒಟ್ಟು 16 ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇವುಗಳ ಪೈಕಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಖಚಿತವಾಗಿದೆ. ಜೊತೆಗೆ ಸರ್ಕಾರದ ಇನ್ನೊಂದು ಪ್ರಮುಖ ಯೋಜನೆಯಾಗಿರುವ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ ಬಗ್ಗೆ ಸರ್ಕಾರ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ ಅದನ್ನು ಕೂಡ ಯಾವುದೇ ಹಂತದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಸುಗಮ ಕಲಾಪದ ನಿಟ್ಟಿನಲ್ಲಿ ವಿಪಕ್ಷಗಳ ಸಹಕಾರ ಕೋರಲು ಸರ್ಕಾರ ಭಾನುವಾರ ಸರ್ವಪಕ್ಷಗಳ ಸಭೆ ಆಯೋಜಿಸಿತ್ತು. ಈ ವೇಳೆ ವಿಪಕ್ಷಗಳು, ಅಧಿವೇಶನದ ಅವಧಿಯಲ್ಲಿ ಅದಾನಿ ಹಗರಣದ ಕುರಿತು ತನಿಖೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ. ಇದರ ಜೊತೆಗೆ ಇತ್ತೀಚಿನ ಮಣಿಪುರ ಗಲಭೆ ವಿಷಯ, ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತಿತರೆ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.

ಈ ಮೂಲಕ ಮುಂದಿನ ಅಧಿವೇಶನ ಯಾವ ರೀತಿಯಲ್ಲಿ ಸಾಗಬಹುದು ಎನ್ನುವ ಕುರಿತು ಸುಳಿವು ನೀಡಿದಂತಾಗಿದ್ದು, ಮೊದಲ ದಿನದಿಂದಲೇ ಕಲಾಪಗಳು ಕಾವೇರುವ ನಿರೀಕ್ಷೆಯಿದೆ.

BBK11: ಬಿಗ್​ಬಾಸ್​ ಮನೆಯಿಂದ ಹೊರ ಬಂದ ಧರ್ಮ ಕೀರ್ತಿರಾಜ್​!

0

ಬಿಗ್​ಬಾಸ್​ ಮನೆಯಿಂದ ಈ ವಾರ ಧರ್ಮ ಕೀರ್ತಿರಾಜ್​ ಅವರು ಎಲಿಮಿನೇಟ್ ಆಗಿದ್ದಾರೆ. ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್​ ಆಗಿದ್ದರು. ಕೊನೆಯ ಕ್ಷಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಧರ್ಮ ಕೀರ್ತಿರಾಜ್​ ಮಾತ್ರ ಉಳಿದುಕೊಂಡಿದ್ದರು.

ಇದಾದ ಬಳಿಕ ಕಿಚ್ಚ ಸುದೀಪ್​ ಮನೆಯಿಂದ ಆಚೆ ಬರೋ ಸ್ಪರ್ಧಿ ಎಂದು ಧರ್ಮ ಕೀರ್ತಿರಾಜ್ ಅವರ ಹೆಸರು ಹೇಳಿದ್ದರು. ಧರ್ಮ ಕೀರ್ತಿರಾಜ್ ಅವರ ಹೆಸರನ್ನು ಹೇಳುತ್ತಿದ್ದಂತೆ ಎಲ್ಲಾ ಸ್ಪರ್ಧಿ ಬೇಸರಗೊಂಡರು. ಅಲ್ಲದೇ ಐಶ್ವರ್ಯ, ತ್ರಿವಿಕ್ರಮ್​, ಭವ್ಯಾ ಗೌಡ ಕಣ್ಣೀರು ಹಾಕಿದ್ದಾರೆ.

ಇನ್ನೂ ನವಗ್ರಹ ಸಿನಿಮಾ ಮೂಲಕ ಖ್ಯಾತಿ ಪಡೆದ ಹಿರಿಯ ನಟ ಕೀರ್ತಿ ರಾಜ್ ಅವರ ಮಗ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಬೆಟ್ಟದಷ್ಟು ನಿರೀಕ್ಷೆಗಳು ಮೂಡಿದ್ದವು. ಆದರೆ ಧರ್ಮ ಅವರು ತಾಳ್ಮೆಯಿಂದ ಇದ್ದದ್ದೇ ಅವರಿಗೆ ಮುಳುವಾಗಿದೆ ಅಂತಿದ್ದಾರೆ ಪ್ರೇಕ್ಷಕರು.

ಮನೆ ಮುಂದೆ ಕೂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ: ಕಟ್ ಆಯ್ತು 2 ಕಾಲುಗಳು!

0

ಬೆಂಗಳೂರು:- ರಾಜಾಜಿನಗರದ ಮಂಜುನಾಥ ನಗರದಲ್ಲಿ ಮನೆ ಮುಂದೆ ಕೂತಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯ 2 ಕಾಲುಗಳು ತುಂಡಾದ ಘಟನೆ ಜರುಗಿದೆ.

ಗಾಯಗೊಂಡ ವ್ಯಕ್ತಿಯನ್ನು ಮಂಜು ಎಂದು ಗುರುತಿಸಲಾಗಿದೆ. ಮಂಜು ಅವರು, ಮನೆ ಮುಂದೆ ಮೊಬೈಲ್ ನೋಡುತ್ತಾ ಕುಳಿತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಸದ್ಯ ಗಾಯಾಳು ಮಂಜುವನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ!

0

ಬೆಂಗಳೂರು:- ಕೊನೆಯ ಸೋಮವಾರದ ಹಿನ್ನೆಲೆ ನಗರದ ಹಲವೆಡೆ ಇಂದು ಸಂಚಾರ ಬಂದ್ ಇರಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಕಾರ್ತಿಕ ಮಾಸದ ಕೊನೆ ಸೋಮವಾರ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಬೇಗೂರಿನ ನಾಗಲಿಂಗೇಶ್ವರ ದೇವಾಲಯದಲ್ಲಿ ಇಂದು ಲಕ್ಷದೀಪೋತ್ಸವ ನಡೆಯಲಿದೆ. ಇದರಿಂದ ಬೇಗೂರಿನ ರಸ್ತೆಗಳಲ್ಲಿ ಹೆಚ್ಚಿನ ವಾಹನಸಂಚಾರ ದಟ್ಟಣೆ ಉಂಟಾಗಲಿದೆ. ಈ ಸಂಬಂಧ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿಲಾಗಿದೆ.

ಸಂಚಾರ ನಿರ್ಬಂಧ:-

ಬೇಗೂರು ರಸ್ತೆಯ ಪಿ.ಕೆ ಕಲ್ಯಾಣ ಮಂಟಪ ಜಂಕ್ಷನ್‌ನಿಂದ ಬೇಗೂರು ಕೊಪ್ಪ ರಸ್ತೆಯ ಏಕನಾ ಆಸ್ಪತ್ರೆ ಜಂಕ್ಷನ್​ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಮಣಿಪಾಲ್ ಕೌಂಟಿ ರಸ್ತೆಯ ಪಾಲ್ಕನ್ ಮಾರ್ಕೆಟ್ ಜಂಕ್ಷನ್‌ನಿಂದ ಬೇಗೂರು ನಾಗಲಿಂಗೇಶ್ವರ ದೇವಸ್ಥಾನದವರೆಗೆ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ.

ಡಿಎಲ್‌ಎಫ್ ರಸ್ತೆಯ ಡಿಎಲ್‌ಎಫ್ ಜಂಕ್ಷನ್‌ನಿಂದ ಬೇಗೂರು ಕೆರೆಕಟ್ಟೆ ಜಂಕ್ಷನ್‌ವರೆಗೆ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.

ಪರ್ಯಾಯ ಮಾರ್ಗಗಳು:-

ಬೊಮ್ಮನಹಳ್ಳಿ-ಹೊಂಗಸಂದ್ರದಿಂದ ಬೇಗೂರು ಕೊಪ್ಪ ರಸ್ತೆ ಕಡೆಗೆ ಬರುವ ವಾಹನ ಸವಾರರು ಪಿ.ಕೆ ಕಲ್ಯಾಣ ಮಂಟಪದ ಜಂಕ್ಷನ್ ಕಡೆಯಿಂದ ಬಲತಿರುವ ಪಡೆದು, ದೇವರಚಿಕ್ಕನಹಳ್ಳಿ ರಸ್ತೆ ಮಾರ್ಗವಾಗಿ ಚಲಿಸಿ ಎಡತಿರುವು ಪಡೆದು, ಡಿಯೋ ಹೈಟ್ಸ್ ಮಾರ್ಗವಾಗಿ ನ್ಯಾನಪ್ಪನಹಳ್ಳಿ ರಸ್ತೆಗೆ ಸಂಚರಿಸಿ, ಡಿಎಲ್‌ಎಫ್ ಜಂಕ್ಷನ್ ತಲುಪಿ, ಎಲೇನಹಳ್ಳಿ ಮುಖ್ಯ ರಸ್ತೆ ಮಾರ್ಗವಾಗಿ ಬೇಗೂರು-ಕೊಪ್ಪ ರಸ್ತೆಯನ್ನು ತಲಪಬಹುದಾಗಿದೆ. ಹಾಗೂ ಮಣಿಪಾಲ್ ಕೌಂಟಿ ರಸ್ತೆ ಕಡೆಗೆ ಚಲಿಸುವವರು ವಿಶ್ವಪ್ರಿಯ ಲೇಔಟ್ ಮುಖ್ಯರಸ್ತೆ ಮೂಲಕ ಚಿಕ್ಕ ಬೇಗೂರು ಮಾರ್ಗವಾಗಿ ಮಣಿಪಾಲ್ ಕೌಂಟಿ ರಸ್ತೆ ಕಡೆಗೆ ಸಂಚರಿಸಬಹುದು.

ಹೊಸೂರು ಮುಖ್ಯ ರಸ್ತೆ ಮತ್ತು ಮಣಿಪಾಲ್ ಕೌಂಟಿ ರಸ್ತೆ ಮಾರ್ಗವಾಗಿ ಬರುವ ವಾಹನ ಸವಾರರು, ಪಾಲ್ಕನ್ ಮಾರ್ಕೆಟ್ ಬಳಿ ಎಡ ತಿರುವು ಪಡೆದುಕೊಂಡು, ಎಇಸಿಎಸ್​ಸಿ-ಬ್ಲಾಕ್ ಮಾರ್ಗವಾಗಿ ಮೈಲಸಂದ್ರ ಮೂಲಕ ಬೇಗೂರು ಕೊಪ್ಪ ರಸ್ತೆ ಹಾಗೂ ಬನ್ನೇರುಘಟ್ಟ ಮುಖ್ಯ ರಸ್ತೆ ತಲುಪಬಹುದು.

ಬೇಗೂರು ಕೊಪ್ಪ ರಸ್ತೆ ಮೂಲಕ ಬೇಗೂರು ಮಾರ್ಗವಾಗಿ ಬರುವ ವಾಹನ ಸವಾರರು, ಏಕನಾ ಆಸ್ಪತ್ರೆ ಜಂಕ್ಷನ್ ಬಳಿ ಎಡತಿರುವು ಪಡೆದು, ಡಿಎಲ್‌ಎಫ್ ರಸ್ತೆ ಮೂಲಕ ನ್ಯಾನಪ್ಪನಹಳ್ಳಿ ಮಾರ್ಗವಾಗಿ, ದೇವರಚಿಕ್ಕನಹಳ್ಳಿ, ಬೊಮ್ಮನಹಳ್ಳಿ ಮತ್ತು ಹೊಂಗಸಂದ್ರ ಕಡೆಗೆ ಸಾಗಬಹುದಾಗಿದೆ.

ಡಿಎಲ್‌ಎಫ್ ಮಾರ್ಗವಾಗಿ ಬೇಗೂರು ಸರ್ಕಲ್ ಕಡೆಗೆ ಬರುವ ವಾಹನ ಸವಾರರು, ಡಿಎಲ್‌ಎಫ್ ಜಂಕ್ಷನ್ ಬಳಿ ಎಡ ತಿರುವು ಪಡೆದುಕೊಂಡು, ನ್ಯಾನಪ್ಪನಹಳ್ಳಿ ರಸ್ತೆ ಮೂಲಕ ಡಿಯೋಡೈಟ್ಸ್ ಲೇಔಟ್ ರಸ್ತೆ ಹಾಗೂ ದೇವರಚಿಕ್ಕನಹಳ್ಳಿ ರಸ್ತೆ ಮೂಲಕ ಹೊಂಗಸಂದ್ರ, ಬೊಮ್ಮನಹಳ್ಳಿ ಕಡೆಗೆ ಸಂಚರಿಸಬಹುದು.

error: Content is protected !!