Home Blog Page 2098

‌Crime News: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್.!

0

ಬೆಂಗಳೂರು: ಹಲಸೂರು ಗೇಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅರೆಸ್ಟ್‌ ಮಾಡಿದ್ದಾರೆ. ಪ್ರವೀಣ್ ಬಂಧೀತ ಆರೋಪಿಯಾಗಿದ್ದು, ಓರಿಸ್ಸಾ, ಮಹಾರಾಷ್ಟ್ರದಿಂದ ಗಾಂಜಾ ತರಿಸುತ್ತಿದ್ದ ಆರೋಪಿ,

ಬನ್ನಪ್ಪ ಪಾರ್ಕ್ ಬಳಿ ಪರಿಚಯಸ್ಥರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸಿದಾಗ ಲಾಕ್ ಆಗಿದ್ದಾನೆ. ಆರೋಪಿಯಿಂದ 7 ಲಕ್ಷ ಮೌಲ್ಯದ 12 ಕೆಜಿ ಗಾಂಜಾ, ಒಂದು ಬೈಕ್ ಸೀಜ್ ಮಾಡಲಾಗಿದ್ದು, ಈ ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

 

ವಾರದಿಂದ ಇಳಿಕೆ ಕಂಡಿದ್ದ ಚಿನ್ನದ ದರ ದಿಢೀರ್ ಏರಿಕೆ: ಗೋಲ್ಡ್ ಪ್ರಿಯರು ಕಂಗಾಲು!

0

ಕಳೆದ ಸಾಕಷ್ಟು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ದಿಢೀರ್ ಏರಿಕೆ ಆಗಿದ್ದು, ಗೋಲ್ಡ್ ಪ್ರಿಯರು ಕಂಗಾಲಾಗಿದ್ದಾರೆ.

22 ಕ್ಯಾರಟ್ ಚಿನ್ನದ ಬೆಲೆ 7,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆ 7,700 ರೂ ಗಡಿ ದಾಟಿದೆ. ಬೆಳ್ಳಿ ಬೆಲೆ ಚೆನ್ನೈ ಮೊದಲಾದೆಡೆ 100 ರೂ ಗಡಿ ದಾಟಿದೆ. ಬೆಂಗಳೂರಿನಲ್ಲಿ ಬೆಲೆ 91 ರೂಗಿಂತ ತುಸು ಹೆಚ್ಚಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 70,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,070 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,150 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 70,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,150 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ:-

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,650 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,070 ರೂ
18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,810 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 91.50 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,650 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,070 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 91.50 ರೂ.

ಭಕ್ತಿ ಪ್ರಧಾನ ‘ಶರಣರ ಶಕ್ತಿ’ ಸಿನಿಮಾ ನ.22ಕ್ಕೆ ರಾಜ್ಯಾದ್ಯಂತ ರಿಲೀಸ್

ಶ್ರೀಶಾ ಫಿಲ್ಮ್ ಹುಬ್ಬಳ್ಳಿ ಅರ್ಪಿಸುವ  ‘ಶರಣರ ಶಕ್ತಿ’ ತಡಿವ್ಯಾರ ನೋಡು ! ಭಕ್ತಿ ಪ್ರಧಾನ ಕನ್ನಡ ಚಲನಚಿತ್ರ ನ.೨೨ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ದಿಲೀಪ ಶರ್ಮ ಹೇಳಿದರು.  

ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ನಿರ್ಮಿಸಿ ನಿರ್ದೇಶಿಸಿರುವ ಸಂಪೂರ್ಣ ಉತ್ತರ ಕರ್ನಾಟಕದ ೧೪೦ಕ್ಕೂ ಮಿಕ್ಕಿ ಕಲಾವಿದರೇ ಇರುವ ಚಿತ್ರವಾಗಿದೆ. ವಿಶ್ವಗುರು ಬಸವಣ್ಣ ಹಾಗೂ ಚಿನ್ಮಯಿಜ್ಞಾನಿ ಚನ್ನಬಸವಣ್ಣ ಅವರ ೧೨ನೇ ಶತಮಾನದ ಸಮಾನತೆ ಸಾರುವ ಬಹು ನಿರೀಕ್ಷಿತ ಭಕ್ತಿಪ್ರಧಾನ ಚಿತ್ರ ಇದಾಗಿದೆ. ಕಾಯಕದಲ್ಲಿ ನಿರತರಾದ ಅನೇಕ ಶರಣರನ್ನು ತೋರಿಸುವ ಚಿತ್ರವೇ ಶರಣರ ಶಕ್ತಿಯಾಗಿದೆ ಎಂದರು.

ಮಿಶ್ರಿಕೋಟಿ, ಕಾಮಧೇನು, ಗಂಜಿಗಟ್ಟಿ, ಹುಬ್ಬಳ್ಳಿ, ಧಾರವಾಡ, ಉಳವಿ, ಬಸವಕಲ್ಯಾಣ, ಬೀದರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶರಣರು ಸಂಚರಿಸಿದ ಹಾದಿಗಳನ್ನು ಗುರುತಿಸಿ ಚಿತ್ರೀಕರಣ ನಡೆಸಲಾಗಿದೆ.     ಜಗಜ್ಯೋತಿ ಬಸವಣ್ಣನವರಾಗಿ ಮಂಜುನಾಥಗೌಡ್ರು ಪಾಟೀಲ, ಚನ್ನಬಸವಣ್ಣನವರಾಗಿ ರಂಜನ್‌ರಾಜ್, ಅಕ್ಕನಾಗಮ್ಮ ಪಾತ್ರದಲ್ಲಿ ಆರಾಧನಾ ಕುಲಕರ್ಣಿ, ಗಂಗಾAಬಿಕೆಯಾಗಿ ಸಂಗೀತಾ ವಸಂತ, ನೀಲಾಂಬಿಕೆ ಅಮೃತಾ ಸವಡಿ ಜೋಶಿ, ಅಕ್ಕಮಹಾದೇವಿಯಾಗಿ ರಮ್ಯಾ ಗೌಡ್ರು, ಬಿಜ್ಜಳನಾಗಿ ರಾಘವೇಂದ್ರ ಕಬಾಡಿ, ಅಲ್ಲಮಪ್ರಭುವಾಗಿ ಮಂಜುನಾಥಯ್ಯ ಬಿ.ಎಮ್, ಸಿದ್ಧರಾಮರಾಗಿ ಸಚಿನ್ ಮಾಗಣಗೇರಿ, ಮಾಜಿಶಾಸಕ, ರಂಗಕರ್ಮಿ ರಾಮಕೃಷ್ಣ ದೊಡ್ಡಮನಿ ಹರಳಯ್ಯನಾಗಿ, ವಿಶ್ವೇಶ್ವರಿ ಹಿರೇಮಠ ಕಲ್ಯಾಣಮ್ಮನಾಗಿ, ಪಾಲಿಕೆ ಸದಸ್ಯ ಚೇತನ ಹಿರೆಕೆರೂರ ಬಿಜ್ಜಳನ ಮಗನಾಗಿ, ಮೀನಾಕ್ಷಿ ಒಂಟಮೂರಿ ದಾನಮ್ಮನಾಗಿ, ಸುರೇಶ ಗೋಕಾಕ ಮಲ್ಲಯ್ಯನಾಗಿ, ಶರಣೆ ಸಂಕವ್ವೆಯಾಗಿ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಡಾ.ಶ್ರುತಿ ಹೆಗಡೆ, ಪತ್ರಕರ್ತರಾದ ರವಿಕಾಂತ ಅಂಗಡಿ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ…ಎಂದು ಮಾಹಿತಿ ನೀಡಿದರು.

ರಸ್ತೆ ಅಪಘಾತ: ಕಂಟೇನರ್ ಲಾರಿ ಹರಿದು ವೃದ್ಧ ಸಾವು!

0

ನೆಲಮಂಗಲ: ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ಜರುಗಿದೆ.

ಆಗಳಕುಪ್ಪೆ ನಿವಾಸಿ 75 ವರ್ಷದ ಕೆಂಪರಂಗಯ್ಯ ಮೃತ ವೃದ್ಧ. ಪಾದಚಾರಿ ವೃದ್ಧನ ಮೇಲೆ ಕಂಟೇನರ್ ಲಾರಿ ಹರಿದು ಈ ದುರ್ಘಟನೆ ಸಂಭವಿಸಿದೆ. ತುಮಕೂರು ಕಡೆಯಿಂದ ದೊಡ್ಡಬಳ್ಳಾಪುರ ಮಾರ್ಗದಲ್ಲಿ ಲಾರಿ ತೆರಳುತ್ತಿತ್ತು. ಈ ವೇಳೆ ಪಾದಚಾರಿಗೆ ಗುದ್ದಿದ ಪರಿಣಾಮ, ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ವೃದ್ಧ ನರಳಾಡಿ ಸಾವನ್ನಪ್ಪಿದ್ದಾರೆ.

ಘಟನೆ ಹಿನ್ನೆಲೆ, ಲಾರಿ ಹಾಗೂ ಚಾಲಕನನ್ನು ಡಾಬಸ್ ಪೇಟೆ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಅಪಘಾತದಿಂದ ಸ್ಥಳದಲ್ಲಿ ಸಂಚಾರ ಅಸ್ತವ್ಯಸ್ತ ಉಂಟಾಗಿದ್ದು, ಡಾಬಸ್ ಪೇಟೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ನ.29ಕ್ಕೆ `ಸಿಂಹರೂಪಿಣಿ’ ಸಿನಿಮಾ ರಿಲೀಸ್

0

ನೈಜ ಘಟನೆ ಆಧಾರಿತ `ಸಿಂಹರೂಪಿಣಿ’ ಚಲನಚಿತ್ರ ನ. ೨೯ರಂದು ಉತ್ತರ ಕರ್ನಾಟಕ ಭಾಗದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ, ಸಾಹಿತಿ ಕಿನ್ನಾಳ ರಾಜ್ ಹೇಳಿದರು.

ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾರಮ್ಮದೇವಿಗೆ ಬಲಿ ಕೊಡುವ ಕಥೆಯನ್ನು ಹೊಂದಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಿದೆ. ಚಿತ್ರದ ಎರಡನೆ ಭಾಗದಲ್ಲಿ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ವಿಶಿಷ್ಟವಾಗಿ ಕಟ್ಟಿಕೊಡಲಾಗಿದೆ. ಚಿತ್ರ ಈಗಾಗಲೇ ಬೆಂಗಳೂರು ಭಾಗದಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ 29ರಂದು ಉತ್ತರ ಕರ್ನಾಟಕ ಭಾಗದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಈ ಸಿನಿಮಾದಲ್ಲಿ ಗದಗ ಬೆಟಗೇರಿ ಮೂಲದ ಬಾಲಪ್ರತಿಭೆ ಸಾಯಿಸಮೀಕ್ಷಾ ಅಭಿನಯಿಸಿದ್ದಾರೆ. ೪೫ಕ್ಕೂ ಹೆಚ್ಚು ದೊಡ್ಡ ನಟರ ದಂಡು ಚಿತ್ರದಲ್ಲಿದೆ. ಅದರ ಜೊತೆಗೆ ಸ್ಥಳೀಯ ಕಲಾವಿದರೂ ಇದ್ದಾರೆ. ಚಿತ್ರದ ಚಿತ್ರೀಕರಣ ದೊಡ್ಡಬಳ್ಳಾಪುರ ಸಮೀಪ ನಡೆದಿದ್ದು, ಉತ್ತರ ಕರ್ನಾಟಕದ ಜನ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕ್ಯಾದಿಗೊಪ್ಪ, ಮಂಜುನಾಥ ದಾಮೋದರ, ಚಂದ್ರಪ್ಪ ಚಂದ್ರಶೇಖರ, ಬಾಲನಟಿ ಸಾಯಿಸಮೀಕ್ಷಾ, ಶ್ರೀದೇವಿ ಬಂಡಾ, ರಾಜು ಲಕ್ಷೆ ಲಕ್ಷೆö್ಮÃಶ್ವರಮಠ ಉಪಸ್ಥಿತರಿದ್ದರು.

ಜಿ20 ಶೃಂಗಸಭೆ: ಬಡತನ, ಆಹಾರ, ಜಾಗತಿಕ ಆಡಳಿತ ಸುಧಾರಣೆಗಳ ಧ್ವನಿಯಾದ ಪ್ರಧಾನಿ ಮೋದಿ

0

ಬ್ರೆಜಿಲ್: ಜಾಗತಿಕ ಸಂಘರ್ಷಗಳಿಂದ ಉಂಟಾದ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟಿನಿಂದ ಜಾಗತಿಕ ದಕ್ಷಿಣದ ದೇಶಗಳು ಹೆಚ್ಚು ಪ್ರತಿಕೂಲ ಪರಿಣಾಮ ಎದುರಿಸಿವೆ ಮತ್ತು ಜಿ 20 ಇದನ್ನು ಪರಿಹರಿಸುವತ್ತ ಗಮನಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್ ನಲ್ಲಿ ಆಯೋಜಿಸಿದ 19ನೇ ಜಿ20 ನಾಯಕರ ಶೃಂಗಸಭೆಯಲ್ಲಿ ಹೇಳಿದರು.

ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗ್ಲೋಬಲ್ ಸೌತ್‌ಗಾಗಿ ಧ್ವನಿ ಎತ್ತಿದ್ದಾರೆ. ಈ ಪ್ರದೇಶದ ಸವಾಲುಗಳು ಮತ್ತು ಆದ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಮಾತ್ರ ಜಾಗತಿಕ ವೇದಿಕೆಯಲ್ಲಿ ನಡೆಯುತ್ತಿರುವ ಚರ್ಚೆಗಳು ಯಶಸ್ವಿಯಾಗಲು ಸಾಧ್ಯ ಎಂದು ಮೋದಿ ಒತ್ತಿ ಹೇಳಿದ್ದಾರೆ.

“ಜಾಗತಿಕ ಸಂಘರ್ಷಗಳಿಂದ ಉಂಟಾದ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟಿನಿಂದ ಜಾಗತಿಕ ದಕ್ಷಿಣದ ದೇಶಗಳ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು ಜಾಗತಿಕ ದಕ್ಷಿಣದ ಸವಾಲುಗಳು ಮತ್ತು ಆದ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಮಾತ್ರ ನಮ್ಮ ಚರ್ಚೆಗಳು ಯಶಸ್ವಿಯಾಗುತ್ತವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಆದ್ಯತೆ ನೀಡಿರುವುದು ಅತ್ಯಂತ ತೃಪ್ತಿಯ ವಿಷಯವಾಗಿದೆ. ನಾವು ಅಂತರ್ಗತ ಅಭಿವೃದ್ಧಿ, ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಯುವ ಶಕ್ತಿಯ ಮೇಲೆ ಕೇಂದ್ರೀಕರಿಸಿದ್ದೇವೆ. ಗ್ಲೋಬಲ್ ಸೌತ್‌ನ ಭರವಸೆಗಳು ಮತ್ತು ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಬಾವಿಗೆ ಬಿದ್ದ ಬೆಕ್ಕಿನ ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿ

0

ವಿಜಯಸಾಕ್ಷಿ ಸುದ್ದಿ, ರೋಣ: ಸಮೀಪದ ಜಕ್ಕಲಿ ಗ್ರಾಮದ ಮೆಣಸಗಿಯವರ ಓಣಿಯ ಮಹೇಶ ಮೇಟಿ ಇವರ ಮನೆ ಹತ್ತಿರದ ಪಾಳುಬಿದ್ದ ಬಾವಿಯಲ್ಲಿ ಕಳೆದ ಒಂದು ವಾರದಿಂದ ಸಾಕು ಬೆಕ್ಕೊಂದು ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿತ್ತು. ಈ ವಿಷಯ ತಿಳಿದು ಸ್ಥಳೀಯ ಪತ್ರಕರ್ತ ಸಂಗಮೇಶ ಮೆಣಸಗಿ ರೋಣ ಅಗ್ನಿ ಶಾಮಕ ಠಾಣಾಧಿಕಾರಿಗೆ ಕರೆ ಮಾಡಿ ಬೆಕ್ಕಿನ ಪ್ರಾಣ ರಕ್ಷಿಸುವಂತೆ ಮನವಿ ಮಾಡಿದ್ದರು.

ರೋಣ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಗ್ಯಾನಪ್ಪ ಹನಮಪ್ಪ ಮಾಗಿಯವರು ತಮ್ಮ ಸಿಬ್ಬಂದಿ ಚಾಲಕ ಗೋವಿಂದ ಪೂಜಾರಿಯವರೊಂದಿಗೆ ಸ್ಥಳಕ್ಕೆ ಆಗಮಿಸಿ, ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಬೆಕ್ಕನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿ ಮಾನವೀಯತೆ ಮೆರೆದ್ದಿದಾರೆ.

ಓಣಿಯ ಜನ ಬಾವಿಗೆ ಬಿದ್ದ ಬೆಕ್ಕಿನ ಗೋಳಾಟ ನೋಡಿ ನಿತ್ಯ ಹಾಲು ಮತ್ತು ಅನ್ನವನ್ನು ಬಕೀಟ್ ಮೂಲಕ ನೀಡಿದ್ದಾರೆ. ಸ್ಥಳೀಯ ನಿವಾಸಿ ಶೇಖರ ಯಾವಗಲ್ಲ ಪತ್ರಕರ್ತನಿಗೆ ವಿಷಯ ತಿಳಿಸಿದ್ದರು.  ಕಳಕಪ್ಪ ಹೊಗರಿ ಪ್ರಾಣ ಪಣಕ್ಕಿಟ್ಟು ಸುರಕ್ಷಿತವಾಗಿ ಬೆಕ್ಕಿನ ಪ್ರಾಣ ರಕ್ಷಿಸಿದ ಸಾಹಸಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಈ ರಕ್ಷಣಾ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ದಳವರೊಂದಿಗೆ ಗ್ರಾಮಸ್ಥರಾದ ಶೇಖರ ಯಾವಗಲ್ಲ, ವಿನಾಯಕ ಉಮತಾರ, ವಿನಾಯಕ ಅಥಣಿ, ರವಿ ಆದಿ, ಸಮರ್ಥ ಮೇಟಿ, ಪ್ರಭುರಾಜ ರೇಣುಕಮಠ, ಮುತ್ತುರಾಜ ಮೇಟಿ, ವಿಶ್ವನಾಥ ಬುಳ್ಳಾ ಶಿವಾನಂದ ಯಾವಗಲ್ಲ ಸೇರಿದಂತೆ ಅನೇಕರು ಇದ್ದರು.

ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಟೈಟಲ್ ಟೀಸರ್ ರಿಲೀಸ್

ರಿಷಯ್ ಶೆಟ್ಟಿ ನಟನೆಯ ಕಾಂತಾರ ಚಾಪ್ಟರ್ 1 ನೋಡಲು ಪ್ರತಿಯೊಬ್ಬರು ಕಾಯ್ತಿದ್ದಾರೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತೇ, ಯಾವಾಗ ಕಣ್ಮುಂಬಿಕೊಳ್ಳುತ್ತೇವೆ ಎಂಬ ಕಾತರಿಸ್ತಿದ್ದಾರೆ. ಇದೀಗ ‘ಕಾಂತಾರ ಚಾಪ್ಟರ್ 1’ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದ್ದು ರಿಷಬ್ ಶೆಟ್ಟಿ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೀಸರ್ ನಿಂದ ಅಭಿಮಾನಿಗಳು ಸಿನಿಮಾಗಾಗಿ ಮತ್ತಷ್ಟು ಕುತೂಹಲದಿಂದ ಕಾಯುವಂತಾಗಿದೆ.

ಕಾಂತಾರ ಚಾಪ್ಟರ್​ 1 ಸಿನಿಮಾ ಟೀಸರ್ ಆರಂಭದಲ್ಲಿ ಕಾಂತಾರ ಸಿನಿಮಾದ ದೃಶ್ಯವಿದೆ. ಬೆಳಕಲ್ಲಿ ಕಣ್ಣ ಮುಂದೆ ಇರೋದೆಲ್ಲಾ ಕಾಣುತ್ತೆ ಆದ್ರೆ, ಇದು ಬೆಳಕಲ್ಲ ದರ್ಶನ. ಇದು ಹಿಂದೆ ನಡೆದಿದ್ದು, ಮುಂದೆ ನಡೆಯೋದನ್ನು ತೋರಿಸುವ ಬೆಳಕು, ಕಣ್ತದಾ.. ಎಂಬ ಅಶರೀರವಾಣಿ ಕೇಳಿ ಬರುತ್ತೆ. ಬಳಿಕ ಕಾಂತಾರ ಚಾಪ್ಟರ್​ ಒನ್​ ದೃಶ್ಯ ಬರಲಿದೆ.

ಬೆಂಕಿಯಲ್ಲಿ ಬರೆದ ವೃತ್ತಾಕಾರದ ಕೆಳಗೆ ದೊಡ್ಡ ಗುಹೆ ಭಾಸವಾಗುತ್ತೆ. ಆ ಗುಹೆಯಲ್ಲಿ ರಕ್ತಸಿಕ್ತಕೊಂಡ ವ್ಯಕ್ತಿ ಇರುತ್ತಾನೆ. ಆತನೇ ನಟ ರಿಷಬ್ ಶೆಟ್ಟಿ, ಮೈತುಂಬಾ ರಕ್ತವಿರುತ್ತೆ. ಕೈಯನ್ನು ಬಿಗಿ ಮಾಡುವ, ಉಸಿರೆಳೆಯುವ ಸೀನ್ ಕೂಡ ಅದ್ಬುತ ಎನಿಸಿತ್ತು. ರುದ್ರಾಕ್ಷಿ ಹಾರ ಧರಿಸಿದ ರಿಷಬ್​ ತಲೆ ಎತ್ತಿ ಕಣ್ಣು ಬಿಡುವ ಈ ದೃಶ್ಯ ನೋಡಿದ್ರೆ ಸಾಕು ಒಂದು ಕ್ಷಣ ಮೈಜುಮ್​ ಅನಿಸುತ್ತೆ. ಭಕ್ತಿ-ಭಾವ ಮೂಡಿಸೋ ಹಿನ್ನೆಲೆ ಸಂಗೀತ ದೈವ ಲೋಕಕ್ಕೆ ಕರೆದೊಯ್ಯುವಂತಿದೆ.

ಭಯಂಕರವಾಗಿ ಕಾಣುವ ರಿಷಬ್ ಹಣೆಯಲ್ಲಿ ರಕ್ತ, ಕಣ್ಣಲ್ಲಿ ಕಿಚ್ಚು ಕಾಣಿಸಿಕೊಂಡಿದೆ. 2025 ಅಕ್ಟೋಬರ್ 2ರಂದು ರಿಷಬ್ ಶೆಟ್ಟಿ ಅಬ್ಬರಿಸೋದು ಪಕ್ಕಾ ಎನ್ನಲಾಗ್ತಿದೆ. 7 ಭಾಷೆಗಳಲ್ಲೂ ಟೈಟಲ್​ ತೋರಿಸಲಾಗಿದೆ. ಟೈಟಲ್​ ಟೀಸರ್ ಕೂಡ ಸಖತ್ ವೈರಲ್ ಆಗ್ತಿದೆ.

2025ರ ಅಕ್ಟೋಬರ್ 2ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದೆ. ಏಕಕಾಲಕ್ಕೆ ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಯ ಮೇಲೆ ಬರಲಿದೆ ಎಂದು ಈಗಾಗಲೇ ಹೊಂಬಾಳೆ ಸಂಸ್ಥೆ ಘೋಷಿಸಿದೆ.

ನಕ್ಸಲ್ ಕ್ಯಾಪ್ಟನ್ ವಿಕ್ರಂ ಗೌಡ ಎನ್ಕೌಂಟರ್ ಅನಿವಾರ್ಯವಾಗಿತ್ತು: ಸಚಿವ ಜಿ ಪರಮೇಶ್ವರ್!

0

ಬೆಂಗಳೂರು:- ನಕ್ಸಲ್ ಕ್ಯಾಪ್ಟನ್ ವಿಕ್ರಂ ಗೌಡ ಎನ್ಕೌಂಟರ್ ಅನಿವಾರ್ಯವಾಗಿತ್ತು ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ವಿಕ್ರಮ್ ಗೌಡ ಎಂಬ ಗ್ರೇಡೆಡ್ ನಕ್ಸಲ್‌ನನ್ನು ನಕ್ಸಲ್ ನಿಗ್ರಹ ಪಡೆ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ಆತನನ್ನು ಪೊಲೀಸರು ಹುಡುಕುತ್ತಿದ್ದರು. ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. ಈ ಹಿಂದೆ ನಡೆದ ಅನೇಕ ಎನ್‌ಕೌಂಟರ್​ಗಳಲ್ಲಿ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ ಎಂದರು.

ನಿನ್ನೆ ಸಂಜೆ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ. ಆತನ ಚಲನವಲನಗಳನ್ನು ಪೊಲೀಸರು ಗಮನಿಸುತ್ತಿದ್ದರು. ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಸೋಮವಾರ ರಾತ್ರಿ ಖಚಿತ ಮಾಹಿತಿ‌ ಮೇರೆಗೆ ಕಾರ್ಯಾಚರಣೆ ಮಾಡಿದ್ದಾರೆ. ಆತ ಆತ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದ. ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಆತನ ಜತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದಾರೆ. ಆ ಭಾಗದಲ್ಲಿ ಕೂಂಬಿಂಗ್ ಮುಂದುವರೆದಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.

ನಾವು ರಾಜ್ಯದಲ್ಲಿ ನಕ್ಸಲ್ ಕಾಲ ಮುಗಿಯಿತು ಅಂದುಕೊಂಡಿದ್ದೆವು. ಆದರೆ, ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು ಪತ್ತೆ ಆದರು. ನಂತರ ಅವರಿಬ್ಬರೂ ತಪ್ಪಿಸಿಕೊಂಡು ಹೋದರೆಂದು ಕೂಂಬಿಂಗ್ ಆಪರೇಷನ್ ನಡೆಸಲಾಯ್ತು. ಕಳೆದ ಒಂದು ವಾರದಿಂದ ಕೂಂಬಿಂಗ್ ನಡೆಯುತ್ತಿತ್ತು. ಆಗ ಇದ್ದಕಿದ್ದ ಹಾಗೆ ವಿಕ್ರಂ ಗೌಡ ಬರುವ ಮಾಹಿತಿ ಸಿಕ್ಕಿತ್ತು. ಆತನ ಎನ್‌ಕೌಂಟರ್ ಮಾಡುವುದು ಆ ಸಂದರ್ಭದಲ್ಲಿ ಪೊಲೀಸರಿಗೆ ಅನಿವಾರ್ಯವಾಯಿತು ಎಂದು ಅವರು ತಿಳಿಸಿದರು.

Rape Case: ಭಿಕ್ಷೆ ಬೇಡುತ್ತಿದ್ದ ಯುವಕನಿಂದ 75 ವರ್ಷದ ಮುದುಕಿ ಮೇಲೆ ರೇಪ್!

0

ಕಲಬುರ್ಗಿ:- ಭಿಕ್ಷೆ ಬೇಡುತ್ತಿದ್ದ ಯುವಕನಿಂದ 75 ವರ್ಷದ ಮುದುಕಿ ಮೇಲೆ ರೇಪ್ ನಡೆದಿರುವ ಘಟನೆ ಜಿಲ್ಲೆ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಗ್ರಾಮದಲ್ಲಿ ಜರುಗಿದೆ.

ಫಕೀರ ತಯ್ಯಬ್ ಎಂಬ ಯುವಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯೊಳಗೆ ನುಗ್ಗಿ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ತಯ್ಯಬ್ ಭಿಕ್ಷಾಟನೆ ಮಾಡುತ್ತಾ ಊರೂರು ಸುತ್ತುತ್ತಿದ್ದ. ಸದ್ಯ ಪರಾರಿಯಾಗಿರುವ ತಯ್ಯಬ್‌ನನ್ನು ಪತ್ತೆಹಚ್ಚುವ ಸಲುವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಲ್ಲದೇ ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!