Home Blog Page 2099

ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಎಷ್ಟೊಂದು ಲಾಭವಿದೆ ನಿಮಗೆ ಗೊತ್ತೆ..? ಈ ಸ್ಟೋರಿ ನೋಡಿ

0

ಭಾರತೀಯ ಗೂಸ್‌ಬೆರ್ರಿ ಎಂದೂ ಕರೆಯಲ್ಪಡುವ ಆಮ್ಲಾ ಅಥವಾ ಬೆಟ್ಟದ ನೆಲ್ಲಿಕಾಯಿಯು, ಮಳೆಗಾಲದಲ್ಲಿ ಕಂಡುಬರುವ ಆರೋಗ್ಯಕರ ಹಣ್ಣು. ಈ ಸಣ್ಣ, ಹಸಿರು ಹಣ್ಣಿನಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿದ್ದು, ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೀಗಾಗಿಯೇ ಇದನ್ನು ಸೂಪರ್ ಫುಡ್ ಎಂದು ಸಹ ಕರೆಯಲಾಗುತ್ತದೆ. ಅದರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚು ಪ್ರಮಾಣದಲ್ಲಿ ಬೇಕಾದ ಮಳೆಗಾಲದಲ್ಲಿ ಇದರ ಬಳಕೆಯು ಬಹಳ ಒಳ್ಳೆಯದು.

ರೋಗ ಶಮನಕಾರಿ ಗುಣವಿರುವ ಬೆಟ್ಟದ ನೆಲ್ಲಿಕಾಯಿಯ ಮನೆಮದ್ದು:

  • ನೆಲ್ಲಿಕಾಯಿ ಪುಡಿ ಎರಡು ಚಮಚ, ಜೀರಿಗೆ ಪುಡಿ ಅರ್ಧ ಚಮಚ ಮತ್ತು ಕಲ್ಲು ಸಕ್ಕರೆ ಇವುಗಳನ್ನು ಮಿಶ್ರ ಮಾಡಿ ದಿನಕ್ಕೆರಡು ಬಾರಿ ಸೇವಿಸಿದರೆ ಅಸಿಡಿಟಿ ಸಮಸ್ಯೆಯೂ ನಿವಾರಣೆಯಾಗುತ್ತದೆ.
  • ನೆಲ್ಲಿಕಾಯಿ ಬೀಜದ ಕಷಾಯ ತಯಾರಿಸಿ ಆರಿಸಿ ಶೋಧಿಸಿ ಕಣ್ಣಿಗೆ ಎರಡು ಹನಿ ಹಾಕಿದರೆದರೆ ಕಣ್ಣು ನೋವು ಗುಣಮುಖವಾಗುತ್ತದೆ.
  • ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದಲ್ಲಿ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಕಣ್ಣು ನೋವಿಗೆ ಪರಿಣಾಮಕಾರಿಯಾಗಿದೆ.
  • ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಅಕ್ಕಿ ತೊಳೆದ ನೀರಿನಲ್ಲಿ ಕಲಸಿ ದಿನಕ್ಕೆರಡು ಬಾರಿ ಸೇವಿಸಿದರೆ ಬಿಳಿ ಮುಟ್ಟು ನಿವಾರಣೆಯಾಗುತ್ತದೆ.
  • ನಾಲ್ಕು ಚಮಚ ನೆಲ್ಲಿಕಾಯಿ ರಸಕ್ಕೆ ಒಂದು ಚಮಚ ಅಶ್ವಗಂಧ ಪುಡಿ ಒಂದು ಚಮಚ ಜೇನುತುಪ್ಪ ಅಥವಾ ಅರ್ಧ ಚಮಚ ತುಪ್ಪ ಸೇರಿಸಿ ಸೇವಿಸಿ ನಂತರ ಹಾಲು ಕುಡಿದರೆರೆ ಕಣ್ಣು ನೋವಿನ ಸಮಸ್ಯೆಯೂ ಶಮನವಾಗುತ್ತದೆ.
  •  ನೆಲ ನೆಲ್ಲಿಯನ್ನು ಬಾಯಿಗೆ ಹಾಕಿ ಅಗಿದು, ಬಿಸಿನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲುನೋವು ಕಡಿಮೆಯಾಗುತ್ತದೆ.
  • ನೆಲ್ಲಿಕಾಯಿ ರಸ ಮತ್ತು ಜೀರಿಗೆ ಪುಡಿಯನ್ನು ಮಜ್ಜಿಗೆಯಲ್ಲಿ ಬೆರೆಸಿ, ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಗುಣಮುಖವಾಗುತ್ತದೆ.
  • ಉರಿಮೂತ್ರ ಸಮಸ್ಯೆಯಿರುವವರು ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಮಿಶ್ರಣ ಮಾಡಿ, ಬೆಳಗ್ಗಿನ ಹೊತ್ತು ಮೂರು ದಿನಗಳ ಕಾಲ ಸೇವಿಸಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
  • ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯಲ್ಲಿ ಕಲಸಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆಯು ವಾಸಿಯಾಗುತ್ತದೆ.

 

ಉಡುಪಿಯಲ್ಲಿ ಗುಂಡಿನ ಸದ್ದು – ನಕ್ಸಲ್‌ ಕ್ಯಾಪ್ಟನ್ ವಿಕ್ರಂ ಗೌಡ ಹತ್ಯೆ!

0

ಉಡುಪಿ:- ಉಡುಪಿಯಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದ್ದು, ನಕ್ಸಲ್‌ ಕ್ಯಾಪ್ಟನ್ ವಿಕ್ರಂ ಗೌಡನನ್ನು ಎನ್‌ಕೌಂಟರ್‌ ಮಾಡಿ ಕೊಲೆ ಮಾಡಲಾಗಿದೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ಕಾರ್ಯಕರ್ತ ವಿಕ್ರಂ ಗೌಡನನ್ನು ಎನ್‌ಕೌಂಟರ್‌ ಮಾಡಲಾಗಿದೆ.

ನಕ್ಸಲ್ ನಾಯಕ ವಿಕ್ರಂಗೌಡ ಕಬ್ಬಿನಾಲೆ ಮೂಲದವನಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ಹೀಗಾಗಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಆರಂಭಿಸಿತ್ತು.

ಕಬ್ಬಿನಾಲೆ ಅರಣ್ಯದಲ್ಲಿ ನಡೆದ ಎನ್ಕೌಂಟರ್ನೊಂದಿಗೆ ಉಡುಪಿ ಭಾಗದಲ್ಲಿ 13 ವರ್ಷಗಳ ನಂತರ ಗುಂಡಿನ ಮೊರತೆ ಕೇಳಿದಂತಾಗಿದೆ. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಅಷ್ಟರಲ್ಲಿ ನಕ್ಸಲರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ವಿಕ್ರಂ ಗೌಡ ಹತನಾದರೆ, ಉಳಿದ ನಕ್ಸಲರು ಪರಾರಿಯಾಗಿದ್ದಾರೆ.

ನಕ್ಸಲರ ನೇತ್ರಾವತಿ ದಳದ ನಾಯಕ ವಿಕ್ರಂ ಗೌಡ. ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತೆಬೈಲ್ ಅರಣ್ಯ ಪ್ರದೇಶದ ಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ.

ಬಿಗ್ ಬಾಸ್ ಸ್ಪರ್ಧಿ ಅನುಷಾ ರೈ ಲವ್ ಬ್ರೇಕಪ್ ಆಗಿದ್ದು ಯಾಕೆ!? ನಟಿ ಹೇಳಿದ್ದು ಹೀಗೆ!?

0

ಈ ವಾರ ಬಿಗ್ ಬಾಸ್​ ಮನೆಯಿಂದ ಅನುಷಾ ರೈ ಔಟ್​ ಆಗಿದ್ದು, ಕಣ್ಣೀರು ಹಾಕುತ್ತಾ ಅನುಷಾ ರೈ ದೊಡ್ಮನೆಯಿಂದ ಹೊರಗೆ ಹೋಗಿದ್ದಾರೆ.

ದೊಡ್ಮನೆಯಿಂದ ಹೊರ ಬಂದ ಬಳಿಕ ನಟಿ ಅನುಷಾ ರೈ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಈ ವೇಳೆ ತಮ್ಮ ಮೊದಲ ಪ್ರೀತಿ ಹಾಗೂ ಬ್ರೇಕಪ್‌ ಬಗ್ಗೆ ಮಾತನಾಡಿದ್ದಾರೆ.

ದೇವರಾಣೆ ನನಗೆ ಕ್ರಶ್‌ ಎನ್ನುವುದು ಆಗಿಲ್ಲ. ನನಗೆ ಯಾರನ್ನ ನೋಡಿ ಸಹ ಕ್ರಶ್ ಅಂತಾ ಅನಿಸಿಲ್ಲ. ಕ್ರಶ್‌ ಅಂತೆಲ್ಲಾ ಆ ರೀತಿ ಎಲ್ಲಾ ಗೊತ್ತಾಗುತ್ತಿರಲಿಲ್ಲ. ಆ ರೀತಿ ಭಾವನೆಗಳೆಲ್ಲಾ ಇರಲಿಲ್ಲ. ಆದರೆ ಓದು ಮುಗಿಲು ಇನ್ನೂ ಒಂದು ವರ್ಷ ಇದ್ದಾಗ ಒಬ್ಬ ಇಷ್ಟ ಆದ’ ಎಂದು ನಟಿ ಅನುಷಾ ರೈ ತಮ್ಮ ಮೊದಲ ಕ್ರಶ್ ಹಾಗೂ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

ಮೊದಲೆಲ್ಲಾ ತುಂಬಾ ಲವ್‌ ಪ್ರಪೋಸ್‌ ಬರುತ್ತಿತ್ತು. ಆದರೆ ಈಗ ಯಾರೂ ಮಾಡುತ್ತಿಲ್ಲ. ಈಗ ಲವ್‌ ಮಾಡಬೇಕು ಅನಿಸುತ್ತಿದೆ. ಆದರೆ ಈಗ ಯಾರೂ ಪ್ರಪೋಸ್‌ ಮಾಡುತ್ತಿಲ್ಲ. ಆದರೆ ಕಾಲೇಜಿನಲ್ಲಿದ್ದಾಗ ತುಂಬಾ ಲವ್‌ ಪ್ರಪೋಸ್‌ಗಳು ಬರುತ್ತಿದ್ದವು. ಅದು ಅಸಲಿನೋ ನಕಲಿನೋ ನನಗಂತೂ ಗೊತ್ತಿಲ್ಲ. ತುಂಬಾ ಪ್ರಪೋಸ್‌ಗಳು ಬರುತ್ತಿದ್ದವು’ ಎಂದರು.

ಒಬ್ಬ ಪ್ರಪೋಸ್ ಮಾಡಿದ, ಅವನು ಊಹಿಸೋಕು ಆಗದೇ ಇರುವ ತರ ಟಾರ್ಚರ್‌. ಅವನು ಸತ್ತು ಹೋಗುತ್ತೇನೆ ಅದು ಇದು ಅಂದಾಗ ನೋಡೋಣ ಅಂತಾ ಒಪ್ಪಿಕೊಂಡೆ. ಆಮೇಲೆ ಅವನು ಟಾರ್ಚರ್‌ ಶುರುವಾಯ್ತು. ನೀನು ಹಾಗೆ ಇರಬೇಡ, ಹೀಗೆ ಇರಬೇಡ, ವಾಟ್ಸಪ್‌ ಬಳಸಬೇಡ, ಏನೇನೋ ಹೇಳುತ್ತಿದ್ದ. ಹುಡುಗರ ಜೊತೆ ಎಲ್ಲಾ ಮಾತಡಬೇಡ ಅಂತಿದ್ದ. ಯಾಕೆ ಅವರ ಜೊತೆ ಇರುತ್ತೀಯಾ ಅಂತೆಲ್ಲಾ ಪ್ರಶ್ನೆ ಮಾಡುತ್ತಿದ್ದ. ನಾನು ಫ್ರೆಂಡ್ಸ್‌ ಜೊತೆ ಇರುವುದನ್ನೇ ಅವನು ಕೆಟ್ಟ ರೀತಿಯಲ್ಲಿ ಯೋಚನೆ ಮಾಡಿ ಜಗಳ ಮಾಡದ ಅದಕ್ಕೆ ಬಿಟ್ಟೆ. ನಿನ್ನ ಸಹವಾಸ ಬೇಡ. ಲವ್‌ ಬೇಡ ಏನೂ ಬೇಡ ಅಂತಾ ಬಿಟ್ಟೆ’ ಎಂದು ಅನುಷಾ ರೈ ಬ್ರೇಕಪ್‌ ಸ್ಟೋರಿ ಬಿಚ್ಚಿಟ್ಟಿದ್ದಾರೆ.

ಇನ್ನೂ ಬಿಗ್ ಬಾಸ್ ಕನ್ನಡ ಸೀಸನ್ 11ರ 50ನೇ ದಿನಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಿಗ್ ಬಾಸ್ ಮನೆಯಿಂದ ಅನುಷಾ ರೈ ಹೊರಬಿದ್ದಿದ್ದಾರೆ. ಇಬ್ಬರು ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ.

ತಿರುಪತಿ ಹೋಗುವವರಿಗೆ ಸಿಕ್ತು ಗುಡ್ ನ್ಯೂಸ್: ಇನ್ಮುಂದೆ ಎರಡರಿಂದ ಮೂರು ಗಂಟೆಯಲ್ಲೇ ಸಿಗಲಿದೆ ತಿಮ್ಮಪ್ಪನ ದರ್ಶನ!

0

ಅಮರಾವತಿ:- ತಿರುಮಲಕ್ಕೆ ಹೋಗುವ ಭಕ್ತರಿಗೆ ಟಿಟಿಡಿ ಸಿಹಿ ಸುದ್ದಿ ಕೊಟ್ಟಿದೆ. ಏನಿದು ಅಂತ ಯೋಚನೆ ಮಾಡುತ್ತಿದ್ದೀರಾ? ನೀವು ಇದನ್ನು ಖಚಿತವಾಗಿ ತಿಳಿದಿರಬೇಕು. ಇದರಿಂದ ಅನೇಕ ಜನರು ನಿರಾಳರಾಗುತ್ತಾರೆ ಎಂದು ನಿರೀಕ್ಷಿಸಬಹುದು.

ಎಸ್, ಇನ್ಮುಂದೆ ಎರಡರಿಂದ ಮೂರು ಗಂಟೆಯಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಸಿಗಲಿದ್ದು, ಈ ಮೂಲಕ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಗುಡ್ ನ್ಯೂಸ್ ನೀಡಿದೆ.

ಕೇವಲ 2ರಿಂದ 3 ಗಂಟೆಯೊಳಗೆ ಸಾಮಾನ್ಯ ಭಕ್ತರು ದೇವರ ದರ್ಶನ ಪಡೆಯುವಂತೆ ಬದಲಾವಣೆ ತರಲು ಎಐ ಮತ್ತು ಆಧುನಿಕ ತಂತ್ರಜ್ಞಾನ ಬಳಸಲು ಕ್ರಮಕೈಗೊಳ್ಳಲಾಗಿದೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರಿಗೆ ತೊಂದರೆ, ಕಿರಿಕಿರಿ ಉಂಟಾಗದಂತೆ ದರ್ಶನ ಲಭ್ಯವಾಗಲು ಈ ಯೋಜನೆ ರೂಪಿಸಲಾಗಿದೆ.

ಟಿಟಿಡಿ ಆಡಳಿತ ಮಂಡಳಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಶ್ರೀವಾಣಿ ಟ್ರಸ್ಟ್ ಅನ್ನು ವಜಾಗೊಳಿಸಿದೆ. ಟಿಟಿಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯಧರ್ಮೀಯ ನೌಕರರನ್ನು ವಿಆರ್‌ಎಸ್ ಅಥವಾ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಈ ಕುರಿತು ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಸ್ಪಷ್ಟಪಡಿಸಿದ್ದಾರೆ.

Babar Azam: ಕಿಂಗ್ ಕೊಹ್ಲಿಯ ಶ್ರೇಷ್ಠ ದಾಖಲೆ ಮುರಿದ ಬಾಬರ್!

0

ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂ, ಕಿಂಗ್ ಕೊಹ್ಲಿಯ ಅಪರೂಪದ ದಾಖಲೆಯನ್ನು ಮುರಿದಿದ್ದಾರೆ.

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ನಡುವೆ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಈ ಶ್ರೇಷ್ಠವಾದ ದಾಖಲೆ ಬರೆದಿದ್ದಾರೆ.

ಉಭಯ ತಂಡಗಳ ನಡುವೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಬಾಬರ್, ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಕೇವಲ 28 ಎಸೆತಗಳಲ್ಲಿ 41 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮೈದಾನಕ್ಕಿಳಿದ ಬಾಬರ್ ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಈ ಇನ್ನಿಂಗ್ಸ್​ನಿಂದಾಗಿ ಇಷ್ಟು ದಿನ ಕೊಹ್ಲಿ ಹೆಸರಿನಲ್ಲಿದ್ದ ಈ ದಾಖಲೆ ಇದೀಗ ಬಾಬರ್ ಪಾಲಾಗಿದೆ.

ಆಸೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 41 ರನ್‌ಗಳ ಇನ್ನಿಂಗ್ಸ್‌ ಆಡಿದ ಬಾಬರ್, ಇದೀಗ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಕ್ರಿಕೆಟ್‌ನ ಅತ್ಯಂತ ಕಡಿಮೆ ಸ್ವರೂಪದಲ್ಲಿ ಬಾಬರ್ ಇದುವರೆಗೆ 4192 ರನ್ ಆಗಿದ್ದು, ಈ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದೆ ಹಾಕಿದ್ದಾರೆ.

ಕೊಲ್ಕತ್ತಾದಲ್ಲಿ ಭೀಕರ ಹತ್ಯೆ: ಮರ್ಮಾಂಗ ಕತ್ತರಿಸಿ ಶಿಕ್ಷಕನ ಬಾಯಲ್ಲಿ ತುರುಕಿದ ಹಂತಕರು!

0

ಕೊಲ್ಕತ್ತಾ:- ಕೊಲ್ಕತ್ತಾದ ಅಲಿಪುರ್ದಾರ್‌ನ ಜಯಗಾಂವ್‌ನಲ್ಲಿ ಶಿಕ್ಷಕನೋರ್ವನ ಭೀಕರ ಹತ್ಯೆ ನಡೆದಿದ್ದು, ಜನನಾಂಗಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಮೃತ ಶಿಕ್ಷಕನ ಹೆಸರು ಶಾಂತಬೀರ್ ಲಾಮಾ ಎಂದು ತಿಳಿದು ಬಂದಿದೆ.

ಮಾಹಿತಿ ಪ್ರಕಾರ, ಶಿಕ್ಷಕನ ಗುಪ್ತಾಂಗವನ್ನು ಕತ್ತರಿಸಿ ಬಾಯಿಗೆ ತುರುಕಲಾಗಿದೆ. ಶಾಂತಬೀರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರ ವಿರುದ್ಧ ಅವರ ಕುಟುಂಬವು ಕೊಲೆ ಪ್ರಕರಣವನ್ನು ದಾಖಲಿಸಿದೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಲಿಪುರ್ದೂರ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಶನಿವಾರ ಬೆಳಗ್ಗೆ ಶಾಲೆಯ ಮುಂಭಾಗದಲ್ಲಿ ಶಾಲಾ ಶಿಕ್ಷಕನ ರಕ್ತಸಿಕ್ತ ಶವ ಪತ್ತೆಯಾಗಿದೆ. ಅವರ ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಅಲಿಪುರ್ದೂರ್ ಜಿಲ್ಲೆಯ ಜೈಗಾಂವ್ ಪೊಲೀಸ್ ಠಾಣೆಯು ಘಟನೆಯ ತನಿಖೆಯನ್ನು ಪ್ರಾರಂಭಿಸಿದೆ.

ಚಿತ್ರದುರ್ಗ ಪೊಲೀಸರ ಕಾರ್ಯಾಚರಣೆ: 6 ಬಾಂಗ್ಲಾದೇಶ ಪ್ರಜೆಗಳು ಅರೆಸ್ಟ್!

0

ಚಿತ್ರದುರ್ಗ:- ಚಿತ್ರದುರ್ಗ ಪೊಲೀಸರು ಕಾರ್ಯಾಚರಣೆ ನಡೆಸಿ 6 ಬಾಂಗ್ಲಾದೇಶ ಪ್ರಜೆಗಳನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಖಾಸಗಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದು, ವಶಕ್ಕೆ ಪಡೆದವರನ್ನು ಪೊಲೀಸರು ಚಿತ್ರದುರ್ಗದ ಕೋಟೆ, ಗ್ರಾಮಾಂತರ ಠಾಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಬಂಡಾರು ನೇತೃತ್ವದಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಬಹುತೇಕರ ಬಳಿ ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ.

ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ಸಿಪಿಐ ಗುಡ್ಡಪ್ಪ ಮತ್ತು ವೆಂಕಟೇಶ್ ಅವರು ಇಂದು ನಗರದಲ್ಲಿ ಗಾರ್ಮೆಂಟ್ಸ್‌ಗಳ ಮೇಲೆ ದಾಳಿ ಮಾಡಿದರು. ಈ ವೇಳೆ ವಿದೇಶಿ ಪ್ರಜೆಗಳನ್ನು ಅರೆಸ್ಟ್ ಮಾಡಿದ್ದಾರೆ.

ಚಳಿಗಾಲದಲ್ಲಿ ಗೀಸರ್ ಬಳಸುವಾಗ ಆಗುತ್ತೆ ಈ ಪ್ರಾಬ್ಲಂ: ಎಚ್ಚರವಹಿಸಿ, ಈ ಟಿಪ್ಸ್ ಫಾಲೋ ಮಾಡಿ!

0

ಗೀಸರ್ ಮನೆಯಲ್ಲಿ ಬಳಸುವ ಸಾಮಾನ್ಯ ಗೃಹೋಪಯೋಗಿ ಉಪಕರಣವಾಗಿದೆ. ಇದು ಸ್ನಾನ ಮಾಡುವುದಕ್ಕೆ, ಸ್ವಚ್ಛಗೊಳಿಸುವುದಕ್ಕೆ ಮತ್ತು ವಸ್ತುಗಳನ್ನು ತೊಳೆಯುವುದಕ್ಕೆ ಹೀಗೆ ಮುಂತಾದ ಕೆಲಸಗಳಿಗಾಗಿ ಬಿಸಿನೀರನ್ನು ನೀಡುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡುವ ಅಭ್ಯಾಸ ಇರುವವರಿಗೆ ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದು ತುಂಬಾ ಕಷ್ಟದ ಕೆಲಸ. ಅದಕ್ಕಾಗಿಯೇ ಜನರು ನೀರನ್ನು ಬಿಸಿ ಮಾಡಲು ಗೀಸರ್ ಅನ್ನು ಬಳಸುತ್ತಾರೆ. ಆದರೆ ಗೀಸರ್ ಬಳಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ಗೀಸರ್ ನಿಂದಾಗಿ ಅಪಘಾತಗಳೂ ಸಂಭವಿಸುತ್ತಿರುವುದು ಹಲವು ಬಾರಿ ಕಂಡು ಬಂದಿದೆ. ಅದಕ್ಕಾಗಿಯೇ ಗೀಸರ್ ಬಳಸುವಾಗ ನೀವು ಯಾವ ವಿಷಯಗಳತ್ತ ಗಮನ ಹರಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

ದೀರ್ಘಕಾಲದವರೆಗೆ ಗೀಸರ್ ಆನ್ ಇಡಬೇಡಿ:

ನೀವು ಗೀಸರ್ ಅನ್ನು ಆನ್ ಮಾಡಿದಾಗ ಕೆಲವೇ ನಿಮಿಷಗಳಲ್ಲಿ ನೀರು ಬಿಸಿಯಾಗುತ್ತದೆ. ಇದರಿಂದಾಗಿ ನೀವು ಸುಲಭವಾಗಿ ಸ್ನಾನ ಮಾಡಬಹುದು. ಆದರೆ ಅನೇಕ ಬಾರಿ ಜನರು ಅದನ್ನು ಆನ್ ಮಾಡಿದ ನಂತರ ಅದನ್ನು ದೀರ್ಘಕಾಲದವರೆಗೆ ಆಫ್ ಮಾಡುವುದಿಲ್ಲ. ಗೀಸರ್ ದೀರ್ಘಕಾಲ ಆನ್ ಆಗಿರುತ್ತದೆ. ಅಂತಹ ಸಂದರ್ಭದಲ್ಲಿ ಕೆಲವೊಮ್ಮೆ ಗೀಸರ್ ಕೂಡ ಸ್ಫೋಟಗೊಳ್ಳುತ್ತದೆ. ಅದಕ್ಕಾಗಿಯೇ ನೀವು ಗೀಸರ್ ಬಳಸುವಾಗ ಅದು ದೀರ್ಘಕಾಲ ಆನ್ ಇರದಂತೆ ನೋಡಿಕೊಳ್ಳಿ. ನೀರು ಬಿಸಿಯಾದ ಕೂಡಲೆ ಗೀಸರ್ ಆಫ್ ಮಾಡುವುದು ಬಹಳ ಮುಖ್ಯ.

ಪ್ರಮಾಣೀಕೃತ ಕಂಪನಿಯಿಂದ ಮಾತ್ರ ಖರೀದಿಸಿ:

ಸಾಮಾನ್ಯವಾಗಿ ಜನರು ಸ್ವಲ್ಪ ಹಣವನ್ನು ಉಳಿಸಲು ಅಗ್ಗದ ಗೀಸರ್​ಗಳನ್ನು ಖರೀದಿಸುತ್ತಾರೆ. ಇದು ನಂತರ ಅವರಿಗೆ ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಏಕೆಂದರೆ, ಸ್ಥಳೀಯ ಕಂಪನಿಗಳ ಗೀಸರ್‌ಗಳಲ್ಲಿ ಸುರಕ್ಷತಾ ಮಾನದಂಡಗಳ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವುದಿಲ್ಲ. ಅಂತಹ ಗೀಸರ್‌ಗಳು ಹಾಳಾಗುವ ಸಾಧ್ಯತೆಗಳು ಹೆಚ್ಚು. ಅವುಗಳಲ್ಲಿ ಅಪಘಾತದ ಭಯವೂ ಇರುತ್ತದೆ. ಅದಕ್ಕಾಗಿಯೇ ನೀವು ಗೀಸರ್ ಖರೀದಿಸುವಾಗ ಪ್ರಮಾಣೀಕೃತ ಕಂಪನಿಯಿಂದ ಗೀಸರ್ ಖರೀದಿಸುತ್ತಿದ್ದೀರಾ ಎಂದು ಪರಿಶೀಲಿಸಿ.

ಬಾತ್​ರೂಂ ಮೇಲ್ಭಾಗದಲ್ಲಿ ಗೀಸರ್ ಅಳವಡಿಸಿಕೊಳ್ಳಿ:

ಬಾತ್​ರೂಂನಲ್ಲಿ ಗೀಸರ್ ಅನ್ನು ಸರಿಯಾದ ಸ್ಥಳದಲ್ಲಿ ಅಳವಡಿಸುವುದು ಬಹಳ ಮುಖ್ಯ. ಏಕೆಂದರೆ ಗೀಸರ್‌ನಿಂದ ಉಂಟಾಗುವ ಹೆಚ್ಚಿನ ಅಪಘಾತಗಳು ಗೀಸರ್‌ ಮೇಲೆ ನೀರು ಬೀಳುವುದರಿಂದ ಸಂಭವಿಸುತ್ತವೆ. ಅದಕ್ಕಾಗಿಯೇ ನೀವು ಸ್ನಾನಗೃಹದ ಮೇಲ್ಭಾಗದಲ್ಲಿ ನೀರು ತಲುಪಲು ಸಾಧ್ಯವಾಗದ ಸ್ಥಳದಲ್ಲಿ ಗೀಸರ್ ಅನ್ನು ಅಳವಡಿಸಬೇಕು.

ಭಾರತೀಯ ಸಂಸ್ಕೃತಿಯಲ್ಲಿ ಆಯುರ್ವೇದಕ್ಕೆ ಮಹತ್ವದ ಸ್ಥಾನವಿದೆ: ಡಾ. ಐ.ಬಿ. ಕೊಟ್ಟೂರಶೆಟ್ಟಿ

0

ವಿಜಯಸಾಕ್ಷಿ ಸುದ್ದಿ, ರೋಣ: ಭಾರತೀಯ ಸಂಸ್ಕೃತಿಯಲ್ಲಿ ಆಯುರ್ವೇದಕ್ಕೆ ಮಹತ್ವದ ಸ್ಥಾನವಿದೆ. ಆರೋಗ್ಯ ಸುಧಾರಿಸುವಲ್ಲಿ ಆಯುರ್ವೇದ ಸಹ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಐ.ಬಿ. ಕೊಟ್ಟೂರಶೆಟ್ಟಿ ಹೇಳಿದರು.

ರೋಣ ನಗರದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಆಯುರ್ವೇದ ದಿನಾಚರಣೆ ಹಾಗೂ ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಆಯುರ್ವೇದಕ್ಕೆ, ಧನ್ವಂತರಿಗೆ ವಿಶೇಷವಾದ ಸ್ಥಾನವಿದೆ. ಈ ಪುರಾತನ ವೇದ ಗ್ರಂಥಗಳಲ್ಲಿ ವಿಷ್ಣುವಿನ ಅವತಾರವಾದ ಧನ್ವಂತರಿ ದೇವರನ್ನು ಆಯುರ್ವೇದ ಶಾಸ್ತçದ ದೇವರು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ದೇವತೆಗಳ ವೈದ್ಯ ಮತ್ತು ಸಕಲ ಜೀವರಾಶಿಗಳಿಗೆ ಆರೋಗ್ಯದ ವರವನ್ನು ನೀಡುವ ಭಗವಾನ್ ಧನ್ವಂತರಿಯ ಆರಾಧನೆಯನ್ನು ಭಾರತೀಯರು ಇಂದಿಗೂ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.

ಪ್ರಾಧ್ಯಾಪಕ ಡಾ. ಎಸ್.ಬಿ. ಬನಿ ಮಾತನಾಡಿ, ರೋಗ ಬರದಂತೆ ಮುಂಜಾಗ್ರತೆ ಕೈಗೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ನಿತ್ಯ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕಾದರೆ ಆರೋಗ್ಯ ಬಹಳ ಮುಖ್ಯವಾಗಿದೆ. ಪ್ರಾಕೃತಿಕವಾಗಿ ಸಿಗುವ ಆಯುರ್ವೇದ ಚಿಕಿತ್ಸೆಗೆ ಮಹತ್ವ ನೀಡಬೇಕಿದೆ ಎಂದರು.

ಪ್ರಾಧ್ಯಾಪಕ ಡಾ. ಪಿ.ಬಿ. ತುರ್ಬೇನ್ ಮಾತನಾಡಿ, ಆಯುರ್ವೇದದ ಚಿಕಿತ್ಸಾ ವ್ಯವಸ್ಥೆಯು ಆರೋಗ್ಯಕ್ಕೆ ಅನುಗುಣವಾದ ಉತ್ತಮ ಆರೋಗ್ಯ ಸಂಪತ್ತನ್ನು ನೀಡುತ್ತದೆ. ಆಯುರ್ವೇದವು ಆರೋಗ್ಯ ಮತ್ತು ಕ್ಷೇಮವು ಮನಸ್ಸು, ದೇಹ, ಚೈತನ್ಯ ಮತ್ತು ಪರಿಸರದ ನಡುವಿನ ಸೂಕ್ಷ್ಮ ಸಮತೋಲನವನ್ನು ಅವಲಂಬಿಸಿರುತ್ತದೆ ಎಂಬ ನಂಬಿಕೆಯನ್ನು ಆಧರಿಸಿದೆ. ಆಯುರ್ವೇದ ಔಷಧದ ಮುಖ್ಯ ಗುರಿಯು ಉತ್ತಮ ಆರೋಗ್ಯವನ್ನು ಉತ್ತೇಜಿಸುವುದಾಗಿದೆ ಎಂದರು.

ಈ ವೇಳೆ ನರೇಗಲ್ ಪಟ್ಟಣದ ಸಂಜೀವಿನಿ ಕ್ಲಿನಿಕ್ ಆರಂಭಿಸಿ ಹಾಗೂ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ೨೫ ವರ್ಷಗಳನ್ನು ಪೂರೈಸಿ ಈಗಲೂ ಸೇವೆಯಲ್ಲಿ ನಿರತರಾಗಿರುವ ವೈದ್ಯ ಡಾ. ಶಿವಯ್ಯ ಎ.ರೋಣದ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಡಾ. ಎಂ.ಎA. ಕಟ್ಟಿಮನಿ, ಡಾ. ಜಿ.ಐ. ಹಿರೇಮಠ, ಎಸ್.ಎನ್. ಕುಷ್ಟಗಿ, ಡಾ. ಎಸ್.ಐ. ಬಾರಕೇರ, ಡಾ. ಬಿ.ವಿ. ಪೊಲೀಸ್‌ಪಾಟೀಲ, ದ್ರವ್ಯಗುಣ ವಿಜ್ಞಾನದ ಮುಖ್ಯಸ್ಥರಾದ ಡಾ. ಶಿವಯ್ಯ ಎ.ರೋಣದ, ಡಾ. ವಿನೋದ, ಡಾ. ನಾಗರಾಜ, ಡಾ. ಚಪ್ಪನಮಠ, ಡಾ. ರಾಕೇಶ ಇದ್ದರು. ಡಾ. ಎಸ್.ಎಸ್. ಬನಿ ನಿರೂಪಿಸಿದರು, ಡಾ. ಆನಂದ ಎಚ್.ಕೇರಿಯವರ ವಂದಿಸಿದರು.


 

ಪಾದಯಾತ್ರೆಯಿಂದ ಪುಣ್ಯ ಲಭಿಸುವುದರ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ: ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಧರ್ಮ ಜಾಗೃತಿಗಾಗಿ ಓಣಿಗಳಲ್ಲಿ ಇಂದಿನಿಂದ ಪ್ರಾರಂಭವಾಗಿರುವ ಪಾದಯಾತ್ರೆಯಿಂದ ವೈಯಕ್ತಿಕವಾಗಿ ಪುಣ್ಯ ಲಭಿಸುವುದರ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ಪಟ್ಟಣದ ವಾರ್ಡುಗಳಲ್ಲಿ ಪ್ರಾರಂಭವಾದ ಪಾದಯಾತ್ರೆಗೆ ಹಿರೇಮಠದಲ್ಲಿ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಬೆಳಗಿನ ಅವಧಿಯಲ್ಲಿ ಶಿವನಾಮವನ್ನು ಸ್ಮರಿಸುತ್ತ, ಜಯಘೋಷಗಳನ್ನು ಕೂಗುತ್ತ ಓಣಿಗಳಲ್ಲಿ ಪಾದಯಾತ್ರೆ ಮಾಡುವುದೇ ಒಂದು ಸೊಗಸಾದ ಅನುಭವ. ಇದಕ್ಕೆ ಸಿದ್ಧರಾಗಿ ಬಂದಿರುವ ನಿಮ್ಮನ್ನೆಲ್ಲ ಕಂಡು ಸಂತಸವಾಗಿದೆ. ಜಾತ್ರಾಮಹೋತ್ಸವ ನಡೆಯುವವರೆಗೂ ಈ ಪಾದಯಾತ್ರೆ ನಡೆಯುತ್ತದೆ. ನೀವೆಲ್ಲ ಇದೇ ಸಂಭ್ರಮದಿಂದ ಪಾಲ್ಗೊಳ್ಳಿ ಎಂದು ಶ್ರೀಗಳು ತಿಳಿಸಿದರು.

ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಪುರಾಣ ಪ್ರವಚನಕಾರರಾದ ಪಂ. ಅನ್ನದಾನ ಶಾಸ್ತಿçಗಳು, ಪ. ಪಂ. ಅಧ್ಯಕ್ಷ ಫಕೀರಪ್ಪ ಮಳ್ಳಿ, ಡಾ. ಆರ್.ಕೆ. ಗಚ್ಚಿನಮಠ, ಪ್ರಕಾಶ ಪಲ್ಲೇದ, ಶಿಕ್ಷಕ ವಿ.ವಿ. ಅಣ್ಣಿಗೇರಿ, ಸಂಗನಾಳ ವಿರುಪಾಕ್ಷಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಈಶ್ವರ ಬೆಟಗೇರಿ, ಓಣಿಯ ಅನೇಕ ಮಹಿಳೆಯಯರು, ಗಣ್ಯರು ಪಾಲ್ಗೊಂಡಿದ್ದರು.

ಪಾದಯಾತ್ರೆಗಾಗಿ ಪ್ರತಿ ಓಣಿಯಲ್ಲಿ ಮಹಿಳೆಯರು ಮನೆಯ ಮುಂದೆ ಥಳಿ ಸಿಂಪಡಿಸಿ, ರಂಗವಲ್ಲಿ ಹಾಕಿ ಶ್ರೀಗಳನ್ನು ಸ್ವಾಗತಿಸಿಕೊಂಡ ದೃಶ್ಯ ಮನಮೋಹಕವಾಗಿತ್ತು. ಹಿರೇಮಠದ ಓಣಿಯಿಂದ ಪ್ರಾರಂಭವಾದ ಪಾದಯಾತ್ರೆಯು ಜೊಂಡಿಗೇರಿ ಓಣಿ, ದರಗಾ ಓಣಿ, ತ್ರಿಪುರಾಂತಕೇಶ್ವರ ದೇವಸ್ಥಾನ, ಶ್ರೀ ಗಣೇಶ ಗುಡಿ ಓಣಿ ಮೂಲಕ ಹಾದು ಗುಡಿ ಓಣಿಗೆ ಬಂದು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.

error: Content is protected !!