Home Blog Page 2106

ಬೆಂಗಳೂರು: 18 ವರ್ಷದ ಯುವತಿ ನೇಣಿಗೆ ಶರಣು: ಪೊಲೀಸರಿಂದ ತನಿಖೆ ಚುರುಕು!

0

ಬೆಂಗಳೂರು:- 18 ವರ್ಷದ ಯುವತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.

ಭೀಮವ್ವ ಮೃತ ಯುವತಿ ಎನ್ನಲಾಗಿದೆ. ನಗರದ ಕುರುಬರಹಳ್ಳಿಯ 19 ನೇ ಮೈನ್ ನ ಮನೆಯಲ್ಲಿ ಯುವತಿ ನೇಣಿಗೆ ಶರಣಾಗಿದ್ದಾರೆ. ಭಾಗ್ಯಮ್ಮ , ಮಲ್ಲಣ್ಣ ದಂಪತಿಯ ಪುತ್ರಿ ಯಾಗಿರೊ ಭೀಮವ್ವ, ಮೂಲತಃ ಯಾದಗಿರಿ ಬಳಿಯ ಕ್ಯಾತನಾಳದವರಾಗಿದ್ದಾರೆ.

ಇನ್ನೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೋಲಿಸ್ರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಯುವತಿ, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಹೊಟ್ಟೆಪಾಡಿಗಾಗಿ ಯಾದಗಿರಿಯಿಂದ ಬೆಂಗಳೂರಿಗೆ ಬಂದು ಗಾರೆ ಕೆಲಸ ಮಾಡುತ್ತಿದ್ದಳು. ಎಂದಿನಂತೆ ತನ್ನ ತಾಯಿ ಜೊತೆ ಕೆಲಸ ಹೋಗಿ ಬಂದು ಏಕಾಏಕಿ ನೇಣಿಗೆ ಕೊರಳೊಡ್ಡಿದ್ದಾಳೆ.

ಭಾಗ್ಯಮ್ಮ- ಮಲ್ಲಣ್ಣ ದಂಪತಿಗೆ ಒಟ್ಟು ನಾಲ್ವರು ಹೆಣ್ಣು ಮಕ್ಕಳು. ಈ ಪೈಕಿ ಭೀಮವ್ವ ಹಿರಿಯ ಮಗಳಾಗಿದ್ದಳು. ಭೀಮವ್ವಳ ಕುಟುಂಬ ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು, ಭೀಮವ್ವ ಸಹ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಗಾರೆ ಕೆಲಸಕ್ಕೆ ಹೋಗುತ್ತಿದ್ದಳು. ಎಂದಿನಂತೆ ಇಂದು ಬೆಳಗ್ಗೆ ತಂದೆ-ತಾಯಿ ಜೊತೆ ಕೆಲಸಕ್ಕೆ ಹೋಗಿದ್ದ ಭೀಮವ್ವ, ಮಧ್ಯಾಹ್ನ ಮನೆಗೆ ಬಂದು ನೇಣಿಗೆ ಶರಣಾಗಿದ್ದಾಳೆ.

ಗಾರೇ ಕೆಲಸ ಮುಗಿಸಿಕೊಂಡು ತಾಯಿ ಜೊತೆಗೆ ಭೀಮವ್ವ ಮನೆಗೆ ಬಂದಿದ್ದಾಳೆ. ಬಳಿಕ ತಾಯಿ ಭಾಗ್ಯಮ್ಮ ಬೇರೆಯವರ ಮನೆ ಕೆಲಸಕ್ಕೆಂದು ಹೋಗಿದ್ದರೆ, ಮೂವರು ತಂಗಿಯರು ಮನೆ ಹೊರಗಡೆ ಆಟವಾಡಲು ಹೋಗಿದ್ದರು. ಆಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಭೀಮವ್ವ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀಲೇಔಟ್ ಪೊಲೀಸರ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Prahlad Joshi: ಸರ್ಕಾರ ದಿವಾಳಿ ಆಗಿರುವುದಕ್ಕೆ BPL ಕಾರ್ಡ್​ ಕಡಿತವೇ ಸಾಕ್ಷಿ: ಪ್ರಹ್ಲಾದ್ ಜೋಶಿ!

0

ಹುಬ್ಬಳ್ಳಿ:- ಸರ್ಕಾರ ದಿವಾಳಿ ಆಗಿರುವುದಕ್ಕೆ BPL ಕಾರ್ಡ್​ ಕಡಿತವೇ ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಸರ್ಕಾರ ದಿವಾಳಿಯಾಗುತ್ತಿರುವುದರಿಂದ ಬಿಪಿಎಲ್​ ಕಾರ್ಡ್​ ಕಡಿತ ಮಾಡಲಾಗುತ್ತಿದೆ. ದಿಢೀರ್ ಆಗಿ ಬಿಪಿಎಲ್​ ಕಾರ್ಡ್ ಏಕೆ ಕಡಿತ ಮಾಡುತ್ತಿದೆ ಗೊತ್ತಿಲ್ಲ. ಪ್ಲ್ಯಾನಿಂಗ್​ ಇಲ್ಲದೇ ಗ್ಯಾರಂಟಿ ಘೋಷಿಸಿದ್ದೇ ಇಷ್ಟಕ್ಕೆಲ್ಲ ಕಾರಣ ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದೇವೆ ಅಂತಾರೆ. ಆದರೆ ಒಂದೂ ಗ್ಯಾರಂಟಿ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಗ್ಯಾರಂಟಿ ಕೊಡಲು ಆಗದೇ ಬಿಡಲೂ ಆಗದ ಸ್ಥಿತಿ ಸರ್ಕಾರದ್ದು. ಬಹುತೇಕ ಎಲ್ಲ ಗ್ಯಾರಂಟಿಗಳು ಅರ್ಧಕ್ಕೆ ನಿಂತಿವೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯತ್ತ ಮುಖಮಾಡಿದೆ ಎಂದಿದ್ದಾರೆ.

ಸಚಿವ ಮುನಿಯಪ್ಪ ಅವರ ಜೊತೆ ನಾನು ಮಾತಾಡುತ್ತೇನೆ. 2013ರ ಕಾಯ್ದೆ ಪ್ರಕಾರ ನಿಯಮಗಳನ್ನು ಜಾರಿಗೆ ತಂದಿದ್ದೇವೆ. 5 ಕೆ.ಜಿ ಧಾನ್ಯವನ್ನು ಸಂಪೂರ್ಣ ಉಚಿತವಾಗಿ ಕೊಡುತ್ತಿದ್ದೇವೆ. ಕನಿಷ್ಠ ಬೆಂಬಲ ಬೆಲೆಯಡಿ ಗೋಧಿ, ಭತ್ತ ಇತ್ಯಾದಿಗಳನ್ನು ಖರೀದಿಸುತ್ತಿದ್ದೇವೆ. ಜೊತೆಗೆ ದರ ಕುಸಿತವಾಗುವ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿದ್ದೇವೆ. ಇಷ್ಟೆಲ್ಲ ಕೇಂದ್ರ ಸರ್ಕಾರ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಕಾರ್ಡ್ ಯಾಕೆ ಕಡಿತ ಮಾಡುತ್ತಿದೆಯೋ ಗೊತ್ತಿಲ್ಲ. ಬಡವರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಗದಗ: ತುಂಗಭದ್ರಾ ನದಿಯಲ್ಲಿ ಮತ್ತೊಂದು ಶವ ಪತ್ತೆ! ಬೆಚ್ಚಿಬಿದ್ದ ಜನ!

0

ಗದಗ:- ಇತ್ತೀಚೆಗೆ ತುಂಗಭದ್ರಾ ನದಿಯಲ್ಲಿ ಹೆಚ್ಚಾಗಿ ಶವಗಳು ತೇಲಿ ಬರುತ್ತಿದ್ದು, ಇಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ.

ಇಂದು ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿಯಲ್ಲಿ ಮತ್ತೊಂದು ಅನಾಮಧೇಯ ಶವ ತೇಲಿ ಬಂದಿದೆ. ತುಂಗಭದ್ರಾ ನದಿಯಲ್ಲಿ ಪದೇ ಪದೇ ಹೆಣಗಳು ತೇಲಿ ಬರುತ್ತಿದ್ದು, ಇಲ್ಲಿನ ಜನತೆ ಬೆಚ್ಚಿ ಬಿದ್ದಿದ್ದಾರೆ.

ನವೆಂಬರ್ 5 ರಂದು ಮೂರು ಮಕ್ಕಳ ನದಿಗೆ ಎಸೆದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಶವ ಪತ್ತೆಯಾಗಿದೆ.

ಇನ್ನೂ ಇದು ಆತ್ಮಹತ್ಯೆಯೋ, ಕೊಲೆಯೋ ಅನ್ನೋ ಅನುಮಾನ ಪೊಲೀಸರಿಗೆ ಶುರುವಾಗಿದೆ. ಸುಮಾರು 40 ವರ್ಷದ ವ್ಯಕ್ತಿಯ ಶವ ಇದಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಶಂಕರ್‌ರಾವ್ ಟೇಲರ್, ಮುಂಡರಗಿ ಅಂತ ಲೇಬಲ್‌ ಇರೋ ಶರ್ಟ್ ಹಾಕಿರುವುದು ಪೊಲೀಸರಿಂದ ತಿಳಿದು ಬಂದಿದೆ.

ಕೂಡಲೇ ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಹಾವೇರಿ: ಹಳೆ ಬ್ಯಾಲೆಟ್ ಬಾಕ್ಸ್​ಗಳ ಕಳ್ಳತನ ಪ್ರಕರಣ- ಐವರು ಅರೆಸ್ಟ್!

0

ಹಾವೇರಿ:- ಶಿಗ್ಗಾಂವಿ ಬೈ ಎಲೆಕ್ಷನ್ ವೇಳೆ ಅನುಮಾನಾಸ್ಪದ ಬ್ಯಾಲೆಟ್​ ಬಾಕ್ಸ್ ಪತ್ತೆ ಕೇಸ್ ಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಸಂತೋಷ ಮಾಳಗಿ, ಗಣೇಶ ಹರಿಜನ, ಮುತ್ತಪ್ಪ ದೇವಿಹೊಸೂರು, ಕೃಷ್ಣ ಹರಿಜನ ಮತ್ತು ಮಹ್ಮದ್ ಜಾವಿದ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 27 ಬ್ಯಾಲೆಟ್​ ಬಾಕ್ಸ್, ಕೃತ್ಯಕ್ಕೆ ಬಳಿಸಿದ 1 ಆಟೋ ಜಪ್ತಿ ಮಾಡಲಾಗಿದೆ.

ಯತ್ತಿನಹಳ್ಳಿ ಗ್ರಾಮದ ಬಳಿಯ ಕಾಲುವೆಯಲ್ಲಿ ಹಳೆಯ ಬ್ಯಾಲೆಟ್​ ಬಾಕ್ಸ್ ಸಿಕ್ಕಿದ್ದರಿಂದ ಗ್ರಾಮಸ್ಥರಿಗೆ ಆತಂಕ ಮತ್ತು ಅನುಮಾನ ವ್ಯಕ್ತಪಡಿಸಿದ್ದರು.

ಅಷ್ಟೇ ಅಲ್ಲದೆ ನಾಲ್ಕು ದಿನಗಳ ಹಿಂದಷ್ಟೆ ಶಿಗ್ಗಾಂವಿ ಉಪಚುನಾವಣೆಯ ಮತದಾನ ಮುಕ್ತಾಯ ಆಗಿತ್ತು. ಬ್ಯಾಲೆಟ್​ ಬಾಕ್ಸ್ ಕಳ್ಳತನವಾಗಿದ್ದು ಜಿಲ್ಲೆಯಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು.

ಆರೋಪಿಗಳು ಎಪಿಎಂಸಿ ಗೋಡೌನ್​ನ ಬೀಗ ಮುರಿದು ಕಳ್ಳತನ ಮಾಡಿದ್ದರು. ಇದೀಗ ಐವರು ಜನ ಕಳ್ಳರನ್ನ ಪತ್ತೆ ಮಾಡಿದ್ದು, ಪೊಲೀಸ್ ಇಲಾಖೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ದೇವರ ಸನ್ನಿಧಿಯಲ್ಲೇ ಹೊಡೆದಾಡಿಕೊಂಡ ಅರ್ಚಕರು: ಸ್ವಯಂ ಪ್ರೇರಿತ ದೂರು ದಾಖಲು!

0

ಕಲಬುರ್ಗಿ:- ದೇವರ ಸನ್ನಿಧಿಯಲ್ಲೇ ಅರ್ಚಕರು ಬಡಿದಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಜರುಗಿದೆ.

ದತ್ತನ ಪ್ರಾಂಗಣದಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರ ಸಮ್ಮುಖದಲ್ಲೇ ವಲ್ಲಭ್ ಪೂಜಾರಿ ಎಂಬ ಅರ್ಚಕನ ಮೇಲೆ ಕಾಲಿನಿಂದ ಒದ್ದು, ಹಲ್ಲೆ ನಡೆದಿದೆ. ವಲ್ಲಭ ಪೂಜಾರಿಗೆ ಕಾಲಿನಿಂದ ಒದ್ದು ಗುಂಡು ಪೂಜಾರಿ ಹಾಗೂ ಕಿರಣ್ ಪೂಜಾರಿ ಇಬ್ಬರು ಸೇರಿ ಹಲ್ಲೆ ಮಾಡಿದ್ದಾರೆ.

ಅರ್ಚಕರ ನಡುವಿನ ಹೊಡೆದಾಟ ಒದ್ದಾಟದ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದತ್ತನ ದೇವಸ್ಥಾನದ ಪೂಜೆ ಪ್ರತಿ ವರ್ಷ ಒಂದೊಂದು ಕುಟುಂಬ ನಿರ್ವಹಣೆ ಮಾಡುತ್ತೆ. ಈ ವರ್ಷ ವಲ್ಲಭ ಪೂಜಾರಿ ಕುಟುಂಬದಿಂದ ದತ್ತನ‌ ಪೂಜೆ ಪುನಸ್ಕಾರ ಕಾರ್ಯ ನಡೆಯುತ್ತಿತ್ತು.

ಇದೇ ವೇಳೆ ದತ್ತನ ಸನ್ನಿಧಿಗೆ ಬರುವ ಭಕ್ತರನ್ನ ದೇವಸ್ಥಾನದ ಒಳಗಡೆ ಬಿಟ್ಟು ಪೂಜೆ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದೆ. ಗುಂಡು ಪೂಜಾರಿ , ಕಿರಣ್ ಪೂಜಾರಿ ಕಡೆಯವರನ್ನ ಒಳಗಡೆ ಮೊದಲು ಬಿಡೋದಕ್ಕೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತೆರಳಿದ ಬಳಿಕ ಭಕ್ತರ ಸಮ್ಮುಖದಲ್ಲೆ ಹೊಡೆದಾಟ ನಡೆದಿದೆ.

ಸಾರ್ವಜನಿಕ ಸ್ಥಳದಲ್ಲಿ ಅರ್ಚಕರು ಹೊಡೆದಾಡಿಕೊಂಡ ಹಿನ್ನಲೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ತಾನೊಬ್ಬ ಸುಳ್ಳುರಾಮಯ್ಯ ಎಂದು ಸಿದ್ದರಾಮಯ್ಯ ಸಾಬೀತುಪಡಿಸಿದ್ದಾರೆ: ಆರ್ ಅಶೋಕ್!

0

ಬೆಂಗಳೂರು:- ತಾನೊಬ್ಬ ಸುಳ್ಳುರಾಮಯ್ಯ ಎಂದು ಸಿದ್ದರಾಮಯ್ಯ ಸಾಬೀತುಪಡಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ 40% ಕಮೀಷನ್ ವಿಚಾರವಾಗಿ ಮಾತನಾಡಿದ ಆರ್ ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ಸುಳ್ಳುರಾಮಯ್ಯ ಎಂದು ಹೆಸರು ಬದಲಾಯಿಸಿಕೊಳ್ಳಲಿ ಎಂದರು.

ಪ್ರಧಾನಿಯವರಿಂದ ಸಿದ್ದರಾಮಯ್ಯ ಸಾಕ್ಷಿ ಕೇಳ್ತಾರೆ, ಅವರಿಗೆ ನಾಚಿಕೆ ಆಗಬೇಕು. ಸಿದ್ದರಾಮಯ್ಯ, ಡಿಕೆಶಿ, ಅಂಬಿಕಾಪತಿ ಈ ಸುಳ್ಳಿನ ಮಹಲ್ ಕಟ್ಟಿದ್ದರು ಅದು ಈಗ ಕುಸಿದು ಬಿದ್ದಿದೆ. ರಾಜ್ಯದ ಜನತೆಗೆ ಸುಳ್ಳು ಹೇಳಿ, ತಾವು ಸುಳ್ಳುರಾಮಯ್ಯ ಎಂದು ಖುದ್ದು ಸಿಎಂ ಸಾಬೀತು ಪಡಿಸಿದ್ದಾರೆ.

ತಪ್ಪು ಮಾಡಿಲ್ಲ ಎಂದು ಸೈಟು ವಾಪಸ್ ಕೊಟ್ಟರು. ಈಗ ಅವರು ಮಾಡಿದ 40% ಕಮೀಷನ್ ಆರೋಪವೂ ಸುಳ್ಳಾಗಿದೆ. ಇನ್ಮುಂದೆ ಸಿದ್ದರಾಮಯ್ಯ ತಮ್ಮ ಹೆಸರನ್ನು ಸುಳ್ಳು ರಾಮಯ್ಯ ಎಂದು ಬದಲಾಯಿಸಿಕೊಳ್ಳಲಿ ಎಂದರು.

ನಾನು ಇವತ್ತಿಗೆ ಪ್ರತಿಪಕ್ಷ ನಾಯಕನಾಗಿ ಒಂದು ವರ್ಷವಾಗಿದೆ. ಹಾಗೇ ಇದೇ ಹೊತ್ತಿನಲ್ಲಿ ನಮ್ಮ ಸರ್ಕಾರದ ಮೇಲಿನ 40% ಕಮೀಷನ್ ಆರೋಪ ಸುಳ್ಳು ಎನ್ನುವುದು ಸಾಬೀತಾಗಿದೆ. ಕಮೀಷನ್ ಆರೋಪ ಮಾಡಿರುವುದು ಕಾಂಗ್ರೆಸ್‌ನ ಟೂಲ್‌ಕಿಟ್‌ನ ಭಾಗವಾಗಿದೆ.

ಇದುವರೆಗೆ 40% ಕಮೀಷನ್ ಆರೋಪಕ್ಕೆ ಕಾಂಗೆಸ್‌ನವರು ದಾಖಲೆ ಕೊಟ್ಟಿಲ್ಲ. ಆಧಾರರಹಿತ, ಸುಳ್ಳು ಆರೋಪ ಮಾಡಿದ್ದರು. ನಮ್ಮ ಮೇಲಿನ ಆರೋಪ ಸುಳ್ಳು ಎಂದು ಲೋಕಾಯುಕ್ತ ತನಿಖೆಯಿಂದಲೇ ಗೊತ್ತಾಗಿದೆ. ಈಗಿನ ಕಾಂಗ್ರೆಸ್ ಸರ್ಕಾರ 60% ಕಮೀಷನ್ ಸರ್ಕಾರ ಆಗಿದೆ ಎಂದು ಕಿಡಿಕಾರಿದ್ದಾರೆ.

ಎಚ್‌ಡಿಕೆಗೆ “ಕರಿಯ” ಹೇಳಿಕೆ ವಿವಾದ: ಜಮೀರ್ ವಿರುದ್ಧ ಸ್ವಪಕ್ಷದಿಂದಲೇ ಆಕ್ರೋಶ ವ್ಯಕ್ತ!

0

ಬೆಂಗಳೂರು:- ಜಮೀರ್ ಅಹಮ್ಮದ್ ಅವರು, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ಮಾತಾಡಿದ್ದು ಸರಿಯಲ್ಲ, ಇದನ್ನ ನಾನು ಕೂಡ ಖಂಡಿಸುತ್ತೇನೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಕುಮಾರಸ್ವಾಮಿ ಬಣ್ಣದ ಬಗ್ಗೆ ಜಮೀರ್ ಮಾತಾಡಿದ್ದು ಸರಿಯಲ್ಲ. ಜಮೀರ್ ಹೇಳಿಕೆ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರು ಹಾಗೆ ಮಾತನಾಡುವುದು ಸರಿಯಲ್ಲ. ಯಾರೂ ವೈಯಕ್ತಿಕವಾಗಿ ನಿಂದನೆ ಮಾಡಬಾರದು ಅಂತ ಹೇಳಿದ್ದಾರೆ ಎಂದರು.

ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತಾಡಿದ್ರು. ಖರ್ಗೆ ಮುಖ ಸುಟ್ಟು ಹೋದ ಹಾಗೆ ಕಾಣುತ್ತೆ. ಅವರ ಚರ್ಮ ಸುಟ್ಟು ಹೋಗಿದೆ, ಬ್ಲ್ಯಾಕ್ ಆಗಿದೆ ಅಂತ ಮಾತಾಡಿದ್ರು. ಆಗ ಯಾಕೆ ಬಿಜೆಪಿ-ಜೆಡಿಎಸ್ ನವರು ಅದನ್ನ ವಿರೋಧ ಮಾಡಲಿಲ್ಲ. ಅರಗ ಜ್ಞಾನೇಂದ್ರ ವಿರುದ್ದ ಏನಾದ್ರು ಮಾಡಿದ್ರಾ? ಇದು ರಾಷ್ಟ್ರೀಯ ಸುದ್ದಿ ಆಯ್ತಾ ಎಂದು ಪ್ರಶ್ನೆ ಮಾಡಿದರು.

ಜಮೀರ್ ಹೇಳಿಕೆಗೆ ನಾನು ಸಮರ್ಥನೆ ಮಾಡುವುದಿಲ್ಲ. ಈಗಾಗಲೇ ಸಿಎಂ, ಡಿಸಿಎಂ, ವರಿಷ್ಠರು ಚರ್ಚೆ ಮಾಡಿದ್ದಾರೆ. ಯಾರು ಕೂಡಾ ಬಣ್ಣದ ಬಗ್ಗೆ, ಹಾವ-ಭಾವದ ಬಗ್ಗೆ ಮಾತನಾಡುವುದು ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

Chitradurga: ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೇರಿ: ಸ್ಥಳೀಯರು ನಿರಾಳ!

0

ಚಿತ್ರದುರ್ಗ:- ಚಿತ್ರದುರ್ಗದಲ್ಲಿ ಜನರ ನೆಮ್ಮದಿ ಕೆಡಿಸಿದ್ದ ಚಿರತೆ ಸೆರೆಯಾಗಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ಚಿತ್ರದುರ್ಗ ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ಹಲವು ದಿನಗಳಿಂದ ಜನರ ನೆಮ್ಮದಿ ಕೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

ಕಳೆದ ಒಂದು ತಿಂಗಳಿಂದ ಕಡ್ಲೆಗುದ್ದು, ಸಿದ್ದಾಪುರ, ಕುರುಬರ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಚಿರತೆ ಇಂದು ಬೋನಿಗೆ ಬಿದ್ದಿದೆ.

ಈ ಚಿರತೆ ಹಲವು ಬಾರಿ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಸಂಜೆಯಾದರೆ ಗ್ರಾಮಸ್ಥರು ಮನೆಯಿಂದ ಹೊರ ಬರಲು ಸಹ ಭಯ ಪಡುವ ವಾತಾವರಣ ನಿರ್ಮಾಣವಾಗಿತ್ತು.

ಹೀಗಾಗಿ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನನ್ನು ಇಟ್ಟಿದ್ದರು. ಶನಿವಾರ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದ್ದು, ಅದನ್ನು ಸುರಕ್ಷಿತವಾಗಿ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಶಿಫ್ಟ್ ಮಾಡಲಾಗಿದೆ.

ಚನ್ನಪಟ್ಟಣದಲ್ಲಿ ನಿರೀಕ್ಷೆಗೂ ಮೀರಿ ನಿಖಿಲ್ ಗೆಲ್ತಾರೆ: ಡಾ ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಭವಿಷ್ಯ!

0

ತುಮಕೂರು:- ಇತ್ತೀಚೆಗೆ ನಡೆದ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು, ನಿರೀಕ್ಷೆಗೂ ಮೀರಿ ಗೆಲ್ತಾರೆ ಎಂದು ಡಾ ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಭವಿಷ್ಯ ನುಡಿದಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ನಿಖಿಲ್ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲ್ತಾರೆ. 2016 ರಲ್ಲಿ ಹೆಚ್ ಡಿ ದೇವೆಗೌಡರು ತುಮಕೂರು ತಾಲೂಕಿನ ಚಿನಗ ಗ್ರಾಮದಲ್ಲಿರುವ ಮುಕಾಬಿಂಕಾ ದೇವಿ ಅಮ್ಮನ ಸನ್ನಿಧಿಯಲ್ಲಿ ಚಂಡಿಕಾಯಾಗ ಮಾಡಿಸಿದ್ದರು. ಅದರ ಫಲ 2024 ಕ್ಕೆ ಲಭಿಸಿದೆ.

ಅಂದೇ ಮುಕಾಬಿಂಕಾ ದೇವಿ ನಿಖಿಲ್ ಕುಮಾರಸ್ವಾಮಿಯವರ ಭವಿಷ್ಯ ನುಡಿದಿತ್ತು. 2023 ರ ನಂತರ ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಶುರುವಾಗಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಅದರಂತೆ ನಿಖಿಲ್ ಕುಮಾರಸ್ವಾಮಿಗೆ 2023 ರಿಂದಲೇ ರಾಜಯೋಗ ಶುರುವಾಗಿದೆ.

ನಿಖಿಲ್ ಕುಮಾರಸ್ವಾಮಿ ಮೇಲೆ ಭಗವತಿಯ ಪರಿಪೂರ್ಣ ಆಶೀರ್ವಾದ ಆಗಿದೆ. ಅಮ್ಮನವರು ಒಪ್ಪಿಗೆ ಸೂಚಿಸಿದ್ದಾರೆ ಎಂದರು. ನಿಖಿಲ್ ಕುಮಾರಸ್ವಾಮಿಗೆ ಮುಂದಿನ ದಿನಗಳಲ್ಲಿ ಅಮ್ಮನ ಆಶೀರ್ವಾದ, ಜಯಶೀಲರಾಗುವಂತಹ ಎಲ್ಲಾ ಅನುಗ್ರಹವನ್ನ ಅಮ್ಮನವರು ಮಾಡಿಕೊಟ್ಟಿದ್ದಾರೆ.

ಈ ಬಾರಿ ಅಮ್ಮನವರ ಆಶಿರ್ವಾದ ಆಗಿರೋದ್ರಿಂದ ಖಂಡಿತವಾಗಿ ಗೆಲುವು ಖಚಿತವಾಗಿದೆ. ಅವರ ನಿರೀಕ್ಷೆಗೂ ಮಿರಿದ ಅಂತರದಿಂದ ಗೆಲುವ ಸಾಧಿಸಲಿದ್ದಾರೆ. ಯಾಕಂದ್ರೆ ಚಂಡಿಕಾಯಾಗದಲ್ಲಿ ಅಷ್ಟೊಂದು ರೀತಿಯಾದ ವಿಶೇಷತೆಗಳು ಇರುತ್ತೆ.

ಯಾರು ಅನುಷ್ಠಾನವನ್ನ ಮಾಡಿ ವಿಶೇಷವಾಗಿ ದೇವಿಗೆ ಪೂಜೆಯನ್ನ ಸಲ್ಲಿಸ್ತಾರೋ, ಅವರಿಗೆ ಪರಿಪೂರ್ಣವಾದ ಆಶಿರ್ವಾದ ಪರಿಪಾಪ್ತಿಯಾಗುತ್ತೆ. ಮಹಾಲಕ್ಷ್ಮಿ,ಮಹಾಕಾಳಿ, ಮಹಾ ಸರಸ್ಪತಿಯ ಸ್ವರೂಪಿಣಿಯಾಗಿರುವಂತಹ ಅಮ್ಮನವರ ಆಶಿರ್ವಾದ ಆಗಿರೋದ್ರಿಂದ. ಖಂಡಿತವಾಗಿ ಅವರ ಕುಟುಂಬಕ್ಕೆ ಒಳ್ಳೆಯ ಅನುಗ್ರಹ ಆಗುತ್ತೆ.

ಹಿಂದಿನ ಎಲ್ಲ ನೋವುಗಳನ್ನ ಮರೆಸಿ ಮುಂದಿನ ಜೀವನ ಸುಖಮಯವಾಗಿರುತ್ತೆ. ಪ್ರತಿಯೊಂದು ಅಧಿಕಾರ ಸಿಗಬೇಕಾದರೆ ರಾಜಯೋಗ ಇರಬೇಕು. ರಾಜಯೋಗ ಇಲ್ಲದೇ ಅಧಿಕಾರ ಸಿಗಲಿಕ್ಕೆ ಸಾಧ್ಯವಿಲ್ಲ. ಅದರಂತೆ ಅಮ್ಮನವರ ಆಶಿರ್ವಾದದಿಂದ ಈಗ ನಿಖಿಲ್ ಗೆ ರಾಜಯೋಗ ಸಿಕ್ಕಿದೆ. ಉನ್ನತ ಅಧಿಕಾರಗಳನ್ನ ಅನುಭವಿಸುವ ಅನುಗ್ರಹ ಪ್ರಾಪ್ತಿಯಾಗುತ್ತೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಇನ್ನೂ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ವಿಚಾರದಲ್ಲೂ ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಭವಿಷ್ಯ ನುಡಿದಿದ್ದರು. ಆಶ್ವಯುಜ ಮಾಸ ಅಂತ್ಯ ಕಾರ್ತಿಕ ಮಾಸದ ಪ್ರಾರಂಭದಲ್ಲಿ ದರ್ಶನ್ ಬೆಲ್ ಸಿಗುತ್ತೆ ಅದೇ ರೀತಿ ದರ್ಶನ್ ಜೈಲಿನಿಂದ ಹೊರಬಂದಿದ್ದಾರೆ. ಇದೀಗ ನಿಖಿಲ್ ಕುಮಾರಸ್ವಾಮಿ ಭವಿಷ್ಯವೂ ನಿಜವಾಗಲಿದೆ ಎಂದು ನಂಬಲಾಗಿದೆ.

ನಿಶ್ಚಿತಾರ್ಥದ ಸಂಭ್ರಮದಲ್ಲಿ ಡಾಲಿ: ಫೆ.16ಕ್ಕೆ ಮದುವೆ!

0

ನಟ ಡಾಲಿ ಧನಂಜಯ್‌‌‌ ಮನೆಯಲ್ಲಿ ಮದುವೆ ಶಾಸ್ತ್ರ ಪ್ರಾರಂಭವಾಗಿದೆ. ಅರಸಿಕೆರೆ ತಾಲೂಕು ಕಾಳೇನಹಳ್ಳಿಯಲ್ಲಿರುವ ಧನಂಜಯ್‌ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಮೈಸೂರಿನಲ್ಲಿ ಫೆ.16 ರಂದು ಮದುವೆ ಕಾರ್ಯಕ್ರಮ ನಡೆಯಲಿದೆ.

ಡಾಲಿ ಮತ್ತು ಧನ್ಯತಾ ಇಬ್ಬರು ಅನೇಕ ವರ್ಷಗಳ ಪರಿಚಯ, ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ, ಓದಿದ್ದು ಮೈಸೂರಿನಲ್ಲಿ. ಅರಸೀಕೆರೆ ಮೂಲದ ನಟ ಧನಂಜಯ ಓದಿದ್ದು ಕೂಡ ಮೈಸೂರಿನಲ್ಲಿಯೇ ಎನ್ನುವುದು ವಿಶೇಷ.

ಧನ್ಯತಾ ಮಿಡಲ್ ಕ್ಲಾಸ್ ಹುಡುಗಿ ಕಷ್ಟ ಪಟ್ಟು ಡಾಕ್ಟರ್ ಆಗಿದ್ದಾರೆ. ಅಲ್ಲದೆ ಅವರ ವರ್ಕ್ ಎಥಿಕ್ಸ್ ಯೋಚನೆಗಳು ನನಗೆ ಇಷ್ಟ ಆಯ್ತು ಎಂದು ಡಾಲಿ ವಾಹಿನಿಯೊಂದರ ಸಂದರ್ಶನದಲ್ಲಿ ಈ ಹಿಂದೆ ಹೇಳಿದ್ದರು.

ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನಡೆಯಲಿದೆ. ಮೈಸೂರು ಧನಂಜಯ ಮತ್ತು ಧನ್ಯತಾ ಇಬ್ಬರಿಗೂ ಭಾವನಾತ್ಮಕವಾಗಿ ಸಂಬಂಧ ಬೆಸೆದ ಸ್ಥಳ ಹಾಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ.

error: Content is protected !!