Home Blog Page 2109

ರಾಜೀ ಸಂಧಾನದಲ್ಲಿ ಪ್ರಕರಣ ಇತ್ಯರ್ಥವಾದರೆ ನ್ಯಾಯಾಲಯಕ್ಕೆ ನೀಡಿದ ಶುಲ್ಕ ಮರುಪಾವತಿ ಮಾಡಲಾಗುವುದು: ನ್ಯಾ.ಮೂ ಬಸವರಾಜ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಡಿಸೆಂಬರ್ ೧೪ರಂದು ರಾಷ್ಟಿçÃಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗುತ್ತಿದ್ದು,  ಸಾರ್ವಜನಿಕರು, ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸದಾವಕಾಶವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಿಡಿಯೋ ಕಾನ್ಫರನ್ಸ್ ಹಾಲ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜೀ ಸಂಧಾನದಲ್ಲಿ ಪಾಲ್ಗೊಂಡು ತಮಗಾಗುವ ಆರ್ಥಿಕ ಹೊರೆ ಹಾಗೂ ಸಮಯ ಪೋಲಾಗುವುದನ್ನು ತಪ್ಪಿಸಬಹುದಾಗಿದೆ. ರಾಜೀ ಸಂಧಾನದಲ್ಲಿ ಪ್ರಕರಣ ಇತ್ಯರ್ಥವಾದರೆ ನ್ಯಾಯಾಲಯಕ್ಕೆ ತುಂಬಿದ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು. ಪ್ರಕರಣ ರಾಜೀ ಆದಲ್ಲಿ ಉಭಯ ಪಕ್ಷಗಾರರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ, ಇಲ್ಲಿಗೆ ಪ್ರಕರಣ ಮುಕ್ತಾಯಗೊಂಡು ತಮ್ಮ ಮೊದಲಿನ ಬಾಂದsವ್ಯ ಉಳಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಗದಗ ಜಿಲ್ಲೆಯಲ್ಲಿ ರಾಜೀ ಸಂಧಾನಕ್ಕಾಗಿ ಪ್ರತಿಯೊಂದು ನ್ಯಾಯಾಲಯಕ್ಕೆ ಒಂದು ಬೆಂಚಿನAತೆ ಒಟ್ಟು ೧೪ ಬೆಂಚ್‌ಗಳನ್ನು ರಚಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಒಟ್ಟು ೧೯೮೯೬ ವಿವಿಧ ಚಾಲ್ತಿ ಪ್ರಕರಣಗಳಿದ್ದು, ಅದರಲ್ಲಿ ಈಗಾಗಲೇ ರಾಜೀ ಆಗಬಹುದಾದ ೨೮೨೧ ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ ಸಿವಿಲ್ ದಾವೆಗಳು ಅಂದರೆ ಜಮೀನುಗಳಿಗೆ ಸಂಬAಧಪಟ್ಟ ವ್ಯಾಜ್ಯಗಳು ಮನೆ ಹಾಗೂ ನಿವೇಶನಗಳಿಗೆ ಸಂಬAಧಪಟ್ಟ ವ್ಯಾಜ್ಯಗಳು, ¨ÀsÆಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ದರಖಾಸ್ತು ಅರ್ಜಿಗಳು, ಕಾರ್ಮಿಕ ಪ್ರಕರಣಗಳು, ಮರಳು ಕಳ್ಳ ಸಾಗಾಣಿಕೆೆ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಪ್ರಕರಣಗಳು, ವೈವಾಹಿಕ ಪ್ರಕರಣಗಳು ಹಾಗೂ ರಾಜೀ ಆಗಲು ಅರ್ಹವಿರುವ ಕ್ರಿಮಿನಲ್ ಕಂಪೌAಡೆಬಲ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳನ್ನು ರಾಜೀಗಾಗಿ ಗುರುತಿಸಲಾಗಿದೆ  ಎಂದು ತಿಳಿಸಿದರು.

ಪ್ರತಿದಿನ ರಾಜೀಗಾಗಿ ಆಯ್ಕೆ ಮಾಡಿದ ಪ್ರಕರಣಗಳನ್ನು ಸಂಬAದsಪಟ್ಟ ವಕೀಲರು ಹಾಗೂ ಪಕ್ಷಗಾರರೊಂದಿಗೆ ಮುಂಚಿತವಾಗಿಯೇ ರಾಜೀ ಸಂಧಾನದಿAದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಅವರ ಮನ ಒಲಿಸಿ ರಾಜೀ ಸಂಧಾನ ಮಾಡಿಕೊಳ್ಳಲು ತಿಳಿಯಪಡಿಸಲಾಗುವುದು. ಪ್ರಕರಣಗಳಿಗೆ ಸಂಬAದsಪಟ್ಟ ವಕೀಲರು, ಕಕ್ಷಿದಾರರು ಹಾಗೂ ವಿವಿದs ಇಲಾಖೆಗಳಿಗೆ ಸಂಬAದsಪಟ್ಟ ಅಧಿಕಾರಿಗಳು, ಇಲಾಖೆಗಳವರು ಡಿಸೆಂಬರ್ ೧೪ರಂದು ಜರುಗುವ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ಪಾಲ್ಗೊಂಡು ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಎಸ್. ಶಿವನಗೌಡ್ರ, ವಾರ್ತಾಧಿಕಾರಿ ವಸಂತ ಮಡ್ಲೂರ ಉಪಸ್ಥಿತರಿದ್ದರು.

Crime News: ಅನುಮಾನಾಸ್ಪದವಾಗಿ ವ್ಯಕ್ತಿ ಸಾವು; ಕಾರಿನಲ್ಲಿ ಸುಟ್ಟು ಕರಕಲಾದ ವ್ಯಕ್ತಿ ದೇಹ!

0

ಬೆಂಗಳೂರು:- ಕಾರಿನಲ್ಲಿದ್ದ ವ್ಯಕ್ತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರೋ ಘಟನೆ ಬ್ಯಾಡರಹಳ್ಳಿ ಠಾಣವ್ಯಾಪ್ತಿಯ ಮುದ್ದಯ್ಯನಪಾಳ್ಯ ಬಳಿ ನಡೆದಿದೆ.

ಕಾರಿನಲ್ಲಿ ಕುಳಿತುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೊ ಶಂಕೆ ವ್ಯಕ್ತವಾಗಿದೆ. ಮಧ್ಯಾಹ್ನ 3:30 ಕ್ಕೆ ನಡೆದಿರೋ ಘಟನೆ ನಡೆದಿದ್ದು, ಖಾಲಿ ಲೇಔಟ್ ನಲ್ಲಿ ಕಾರಿಗೆ ಬೆಂಕಿಹೊತ್ತಿಕೊಂಡಿದ್ದನ್ನ ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಹೋಗಿ ನೋಡಿದಾಗ ಕಾರಿನೋಳಗೆ ವ್ಯಕ್ತಿ ಇರೋದು ಪತ್ತೆಯಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ ಬಳಿಕ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.

ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸುತ್ತಿದ್ದು, ಸಾವನ್ನಪ್ಪಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಸ್ಯಾಂಡಲ್‌ವುಡ್‌ನ ಹಿರಿಯ ನಟ ಟಿ.ತಿಮ್ಮಯ್ಯ ವಿಧಿವಶ!

0

ಸ್ಯಾಂಡಲ್‌ವುಡ್‌ನ ಹಿರಿಯ ನಟ 92 ವರ್ಷದ ಟಿ.ತಿಮ್ಮಯ್ಯ ವಿಧಿವಶರಾಗಿದ್ದಾರೆ.

ಟಿ.ತಿಮ್ಮಯ್ಯ ಅವರು, ಖ್ಯಾತ ನಿರ್ದೇಶಕರಾದ ದೊರೆ ಭಗವಾನ್, ಸುನೀಲ್ ಕುಮರ್ ದೇಸಾಯಿ, ಭಾರ್ಗವ ಹೀಗೆ ಹಲವು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಚಲಿಸುವ ಮೋಡಗಳು, ಬಂಧನ, ಬೆಂಕಿಯ ಬಲೆ, ಕಾಮನಬಿಲ್ಲು, ಪರಮೇಶಿ ಪ್ರೇಮ ಪ್ರಸಂಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್. ಹೆಸರಾಂತ ನಿರ್ದೇಶಕರಾದ ದೊರೈ ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಭಾರ್ಗವ, ಸಂಗೀತಂ ಶ್ರೀನಿವಾಸ್ ರಾವ್, ಕೆವಿ ಜಯರಾಮ್ ಅವರೊಂದಿಗೆ ಕೆಲಸ ಮಾಡಿದ್ದಾರೆ.

ಇವರ ನಿಧನಕ್ಕೆ ಸಾಕಷ್ಟು ಗಣ್ಯರು ಸಂತಾಪ ಸೂಚಿಸಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

‘ಅಮರನ್’ ಸಿನಿಮಾ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ ದುಷ್ಕರ್ಮಿಗಳು

0

ಶಿವಕಾರ್ತಿಕೇಯನ್ ನಟನೆಯ ಅಮರನ್ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ವಿವಾದ ಹುಟ್ಟುಹಾಕುತ್ತಿದೆ. ಈ ಹಿಂದೆ ‘ಅಮರನ್’ ಜಾತಿಯ ಕಾರಣಕ್ಕೆ ಕೆಲವು ವಿವಾದಾದ್ಮಕ ಹೇಳಿಕೆಗಳು ಕೇಳಿಬಂದಿತ್ತು. ಇತ್ತೀಚೆಗೆ ಸಂಘಟನೆಯೊಂದು ಧರ್ಮದ ಕಾರಣಕ್ಕೆ ಸಿನಿಮಾದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿತು. ಇದೀಗ ‘ಅಮರನ್’ ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ.

ತಮಿಳುನಾಡಿನ ತಿರುನಾಲ್ವೇಲಿಯ ಅಲಂಗಾರ್ ಚಿತ್ರಮಂದಿರದಲ್ಲಿ ‘ಅಮರನ್’ ಸಿನಿಮಾ ಕಳೆದ ಎರಡು ವಾರಗಳಿಂದಲೂ ಪ್ರದರ್ಶನಗೊಳ್ಳುತ್ತಿತ್ತು. ಆದರೆ ಶನಿವಾರ ಬೆಳ್ಳಂಬೆಳಿಗ್ಗೆ ಬೈಕ್​ನಲ್ಲಿ ಬಂದ ಇಬ್ಬರು ಮೂರು ಪೆಟ್ರೋಲ್ ಬಾಂಬ್​ಗಳನ್ನು ಚಿತ್ರಮಂದಿರದ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಬೈಕ್​ನಲ್ಲಿ ಬಂದವರು ಪೆಟ್ರೋಲ್ ಬಾಂಬ್ ಎಸೆಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

‘ಅಮರನ್’ ಸಿನಿಮಾದ ನಾಯಕ ಪಾತ್ರ ಮೇಜರ್ ಮುಕುಂದನ್ ಅವರ ಜಾತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ ಎಂದು ಒಂದು ಸಮುದಾಯದ ಗುಂಪಿನವರು ಮೊದಲಿಗೆ ಆಕ್ಷೇಪ ಎತ್ತಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ನಿರ್ದೇಶಕ ರಾಜಕುಮಾರ್ ಪೆರಿಸ್ವಾಮಿ, ಕುಟುಂಬದ ಅಭಿಲಾಷೆಯ ಮೇರೆಗೆ ನಾವು ಜಾತಿಯನ್ನು ತೋರಿಸಿರಲಿಲ್ಲ ಎಂದಿದ್ದರು.

ಇತ್ತೀಚೆಗೆ ಎಸ್​ಡಿಪಿಐ ಸಂಘಟನೆ ಸಹ ‘ಅಮರನ್’ ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದ್ದು, ‘ಅಮರನ್’ ಸಿನಿಮಾದಲ್ಲಿ ಕಾಶ್ಮೀರದಲ್ಲಿ ಇರುವ ಮುಸ್ಲೀಮರೆಲ್ಲ ಉಗ್ರವಾದಿಗಳೇ ಎಂಬರ್ಥ ಬರುವಂತೆ ತೋರಿಸಲಾಗಿದೆ ಇದು ಸರಿಯಲ್ಲ ಎಂದಿದ್ದರು. ಕೆಲವೆಡೆ ಪ್ರತಿಭಟನೆಯೂ ನಡೆದಿದ್ದವು. ಇದೆಲ್ಲದರ ಮಧ್ಯೆ ಈಗ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದ್ದು, ಈ ಕೃತ್ಯವನ್ನು ಯಾರು? ಯಾವ ಕಾರಣಕ್ಕೆ ಮಾಡಿದ್ದಾರೆ ಎಂದು ತಿಳಿಯಬೇಕಿದೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‘ಅಮರನ್’ ಸಿನಿಮಾ ವಿರೋಧಿಸಿ ಈ ಕೃತ್ಯ ಎಸೆಗಲಾಗಿದೆ ಎಂದು ಖಾತ್ರಿಯಾಗಿ ಈಗಲೇ ಹೇಳಲಾಗದು ಎಂದಿರುವ ಪೊಲೀಸರು, ಚಿತ್ರಮಂದಿರ ಸ್ಥಳದ ವಿವಾದ ಕೆಲ ವರ್ಷಗಳಿಂದಲೂ ಚಾಲ್ತಿಯಲ್ಲಿದ್ದು, ಪೆಟ್ರೋಲ್ ಬಾಂಬ್ ದಾಳಿಗೆ ಬೇರೆ ಕಾರಣವೂ ಇರಬಹುದು ಎಂದಿದ್ದಾರೆ.

‘ಅಮರನ್’ ಸಿನಿಮಾ ನಿಜ ಘಟನೆ ಆಧರಿಸಿದ ಸಿನಿಮಾ ಆಗಿದೆ. ಮೇಜರ್ ಮುಕುಂದನ್ ಅವರ ಜೀವನ ಮತ್ತು ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಮುಕುಂದನ್ ಪಾತ್ರದಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದು, ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಅಕ್ಟೋಬರ್ 31 ರಂದು ಬಿಡುಗಡೆ ಆಗಿರುವ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡಿದ್ದಾರೆ.

11 ಲಕ್ಷ ಪಡಿತರ ಚೀಟಿ ರದ್ದು: ಶಾಸಕ ಸುನಿಲ್ ಕುಮಾರ್ ಆರೋಪ

0

ಕರ್ನಾಟಕದಲ್ಲಿ ಕಾಂಗ್ರೆಸ್​​ ಪಕ್ಷ ಘೋಷಣೆ ಮಾಡಿರುವ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಆದರೆ ಇದರಿಂದ ಸರ್ಕಾರಕ್ಕೆ ಸಾಕಷ್ಟು ಹೊರೆಯಾಗುತ್ತಿದೆ. ಈ ಹೊರೆಯನ್ನ ತಪ್ಪಿಸಲು ಸರ್ಕಾರ ಬಿಪಿಎಲ್ ಕಾರ್ಡ್​ಗಳನ್ನೇ ಕಡಿಮೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಹಾಗಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 11 ಲಕ್ಷ ಪಡಿತರ ಚೀಟಿಗಳನ್ನ ರದ್ದು ಮಾಡಲಾಗಿದೆ ಎಂದು ಬಿಜೆಪಿ ನಾಯಕ ಮಾಜಿ ಸಚಿವ ಶಾಸಕ ಸುನಿಲ್ ಕುಮಾರ್ ಗಂಭಿರ ಆರೋಪ ಮಾಡಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು 83 ರೇಷನ್ ಕಾರ್ಡ್​ಗಳು ರದ್ದು ಮಾಡಲಾಗಿದೆ. ಒಟ್ಟು 3925 ಬಿಪಿಎಲ್​ ಕಾರ್ಡ್‌ಗಳು ಎಪಿಎಲ್​ ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ. ಟ್ಯಾಕ್ಸ್ ಪಾವತಿಸುತ್ತಿದ್ದಾರೆ ಎಂಬ ಕಾರಣಕ್ಕೆ 3408 ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ.

1,20,000ಕ್ಕಿಂತ ಹೆಚ್ಚಿನ ಆದಾಯ ಕಾರಣದಿಂದ 415 ಬಿಪಿಎಲ್​ ಪಡಿತರ ಕಾರ್ಡ್‌ಗಳು ಎಪಿಎಲ್​  ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ. ಸರ್ಕಾರಿ ನೌಕರರು ಎಂಬ ಕಾರಣಕ್ಕೆ 102 ಕಾರ್ಡ್‌ಗಳು ಬದಲಾವಣೆ. ಅದೇ ರೀತಿಯಾಗಿ ಸಾವಿರಾರು ಕಾರ್ಡ್​ಗಳು ವಿವಿಧ ತಾಂತ್ರಿಕ ಕಾರಣದಿಂದ ಅಮಾನತು ಮಾಡಲಾಗಿದೆ.

ಕೋಲಾರದಲ್ಲಿ 6500 ಬಿಪಿಎಲ್ ಕಾರ್ಡ್​ಗಳನ್ನು ಎಪಿಎಲ್ ಕಾರ್ಡ್​ಗಳಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂಬ ಕಾರಣ ನೀಡಿ 3500 ಕಾರ್ಡ್, ಸರ್ಕಾರಿ ನೌಕರರು ಅಂತ 80 ಕಾರ್ಡ್ ಬಿಪಿಎಲ್​ನಿಂದ ಎಪಿಎಲ್​ಗೆ ಬದಲಾವಣೆ ಮಾಡಲಾಗಿದೆ.

1, 20,000 ಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದಾರೆ ಅಂತ 2900 ಪಡಿತರ ಕಾರ್ಡ್ ಪರಿವರ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ 6500 ಕಾರ್ಡುಗಳು ಎಪಿಎಲ್​ಗೆ ಕನ್ವರ್ಟ್ ಮಾಡಲು ಗುರುತು ಮಾಡಿ ಅಮಾನತ್ತಿನಲ್ಲಿಡಲಾಗಿದೆ. ಪರಿವರ್ತನೆ ಕಾರ್ಯ ಚಾಲ್ತಿಯಲ್ಲಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕಿ ಲತಾ ಮಾಹಿತಿ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲೂ‌ 2201 ಬಿಪಿಎಲ್ ಕಾರ್ಡ್​ಗಳು ಎಪಿಎಲ್​ಗೆ ಬದಲಾವಣೆ ಮಾಡಲಾಗಿದೆ. ಟ್ಯಾಕ್ಸ್ ಪಾವತಿ ಮಾಡುತ್ತಿದ್ದಾರೆ ಎಂಬ ಕಾರಣ ನೀಡಿ 1992 ಕಾರ್ಡ್​ಗಳು ಎಪಿಎಲ್​ಗೆ, ಸರ್ಕಾರಿ ನೌಕರರು ಅಂತ 31 ಕಾರ್ಡ್​ ಮತ್ತು 1, 20000 ಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದಾರೆ ಅಂತ 178 ಪಡಿತರ ಚೀಟಿ ಬದಲಾವಣೆ ಮಾಡಲಾಗಿದೆ. ಜಿಲ್ಲೆಯಾದ್ಯಾಂತ 2021 ಕಾರ್ಡ್​ಗಳು ಎಪಿಎಲ್​ಗೆ ಪರಿವರ್ತನೆ ಮಾಡಲಾಗಿದೆ.

ಇನ್ನು ವಿಜಯಪುರದಲ್ಲಿ 4359, ಬಾಗಲಕೋಟೆ ಜಿಲ್ಲೆಯಲ್ಲಿ 6299, ಶಿವಮೊಗ್ಗ ಜಿಲ್ಲೆಯಲ್ಲಿ 2346 ಯಾವುದೇ ಕಾರ್ಡ್ ರದ್ದು ಆಗಿಲ್ಲ. ಮೈಸೂರಿನಲ್ಲಿ 4,221, ಬಳ್ಳಾರಿ ಜಿಲ್ಲೆಯಲ್ಲಿ 1848, ಕಲಬುರಗಿ ಜಿಲ್ಲೆಯಲ್ಲೂ 1925, ಮಂಡ್ಯದಲ್ಲಿ 2824, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3019, ಚಿತ್ರದುರ್ಗ ಜಿಲ್ಲೆಯಲ್ಲಿ 1670, ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 1599 ಬಿಪಿಎಲ್​ನಿಂದ ಎಪಿಎಲ್​ ಕಾರ್ಡ್​ಗೆ ವರ್ಗಾವಣೆ ಮಾಡಲಾಗಿದೆ.

ಥರ್ಡ್ ಗ್ರೇಡ್ ರಾಜಕಾರಣಿಯ ಪ್ರಶ್ನೆಗೆ ನಾನು ಉತ್ತರ ಕೊಡಲ್ಲ: ರೇಣುಕಾಚಾರ್ಯ ವಿರುದ್ಧ ಯತ್ನಾಳ್ ಕಿಡಿ

0

ಹುಬ್ಬಳ್ಳಿ :ಕರ್ನಾಟಕದ ವಿವಿಧ ಜಿಲ್ಲೆಗಳ ರೈತರಿಗೆ ವಕ್ಫ್​​ ಬೋರ್ಡ್ ನೋಟಿಸ್​ ನೀಡಿದೆ. ಈ ವಿಚಾರವಾಗಿ ನವೆಂಬರ್​​ 25 ರಿಂದ ಡಿಸೆಂಬರ್​ 25ರವರೆಗೆ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ಅಭಿಯಾನವು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರ ಮುಂದಾಳತ್ವದಲ್ಲಿ ನಡೆಯಲಿದೆ. ಈ ಜನ ಜಾಗೃತಿ ಅಭಿಯಾನ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಬೇರೆ ಯಾವುದೇ ತಂಡ ಜಾಗೃತಿ ಅಭಿಯಾನ ಮಾಡಲು ನೈತಿಕ ಹಕ್ಕಿಲ್ಲ ಎಂದು ಯತ್ನಾಳ್ ಟೀಮ್ ವಿರುದ್ಧ ಕಿಡಿಕಾರಿದ್ದರು.

ಇದರ ಬೆನ್ನಲ್ಲೇ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​  ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಥರ್ಡ್ ಗ್ರೇಡ್ ರಾಜಕಾರಣಿಯ ಪ್ರಶ್ನೆಗೆ ನಾನು  ಉತ್ತರ ಕೊಡಲ್ಲ, ಹಾಗೂ ಹಾದಿ ಬೀದಿಲಿ ಹೋಗೋರಿಗೆ ನಾನು ಉತ್ತರ ಕೊಡಲ್ಲ. ಪಕ್ಷದಲ್ಲಿರುವವರಿಗೆ  ಯಾವ ವಕ್ಫ ಹೋರಾಟ ಬೇಕಾಗಿಲ್ಲ ಎಂದು ಪ್ರತಾಪ್ ಸಿಂಹ ಹೆಸರನ್ನು ಕೈ ಬಿಟ್ಟಿರೋದಕ್ಕೆ ಗರಂ ಆದರು.

ಇನ್ನೂ ವಿಜಯೇಂದ್ರ ಬಗ್ಗೆ ಮಾತನಾಡಿದ ಯತ್ನಳ್​ ಇದು ಅಪ್ಪ ಮಕ್ಕಳ ದಂಧೆ ಎಂದು ಹೇಳಿದರು. ಡಿಸೆಂಬರ್ 25 ಕ್ಕೆ ಜನಜಾಗೃತಿ ಸಭೆ ನಡೆಸುತ್ತಿದ್ದಾರೆ. ವಕ್ಪ್​ ಪ್ರವಾಸಕ್ಕೆ ಮೂರು ತಂಡಗಳನ್ನು ಮಾಡಿದ್ದಾರೆ. ಆದರೆ ಈ ತಂಡಗಳಿಗೆ ಅಪ್ಪ ಅವ್ವ ಯಾರು ಇಲ್ಲ ನಮ್ಮನ್ನು ನೋಡಿ ಮೂರು ತಂಡ ರಚನೆ ಮಾಡಿದ್ದಾರೆ. ಅವರಿಗೆ ವಕ್ಪ್ ಕಾಳಜಿ ಇಲ್ಲ, ಅವರಿಗೆ ಇರೋದು ಅಪ್ಪನ ತರಹ ಲೂಟಿ ಮಾತ್ರ ಎಂದು ಪರೋಕ್ಷವಾಗಿ ವಿಜಯೇಂಂದ್ರ ವಿರುದ್ದ ಕಿಡಿಕಾರಿದ್ದಾರೆ.

ಗ್ರಾಮ ಪಂಚಾಯಿತಿ ಉಪ ಚುನಾವಣೆ: ಇಬ್ಬರು ಅಭ್ಯರ್ಥಿಗಳು ಅವಿರೋಧ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರು ನಿಧನರಾಗಿ ತೆರವಾಗಿದ್ದ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.

ಅ ವರ್ಗಕ್ಕೆ ಮೀಸಲಾಗಿದ್ದ 7ನೇ ವಾರ್ಡಿಗೆ ಹನುಮಂತಪ್ಪ ಬಂಗಾರಿಯವರ ಹಾಗೂ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ 8ನೇ ವಾರ್ಡಿಗೆ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ನೀಲವ್ವ ಬಂಡಿ ಅವಿರೋಧವಾಗಿ ಆಯ್ಕೆಯಾದರು. 7ನೇ ವಾರ್ಡಿನಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಒಂದು ನಾಮಪತ್ರ ತಿರಸ್ಕೃತವಾಗಿದ್ದರಿಂದ ಹನುಮಂತಪ್ಪ ಆಯ್ಕೆಯಾದರು.

8ನೇ ವಾರ್ಡಿನಲ್ಲಿ ಮೂವರು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಇಬ್ಬರು ನಾಮಪತ್ರ ವಾಪಸ್ ಪಡೆದಿದ್ದರಿಂದ ನೀಲವ್ವ ಬಂಡಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ವೈ.ಎಚ್. ನದಾಫ್ ತಿಳಿಸಿದ್ದಾರೆ.

ಯೋಗೇಶ್ವರ್ ಯಾವಾಗ ಕಾಂಗ್ರೆಸ್ʼಗೆ ಕಾಲಿಟ್ರೋ ಆಗಲೇ ಅವರ ಪತನ ಶುರುವಾಯ್ತು: ಅಶ್ವಥ್ ನಾರಾಯಣ್

0

ಬೆಂಗಳೂರು: ಯೋಗೇಶ್ವರ್ ಯಾವಾಗ ಕಾಂಗ್ರೆಸ್ʼಗೆ ಕಾಲಿಟ್ರೋ ಆಗಲೇ ಅವರ ಪತನ ಶುರುವಾಯ್ತು ಎಂದು ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ​​ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್​ನವರು ನಿರಾಶರಾಗಿದ್ದಾರೆ. ಏನೂ ಅಭಿವೃದ್ಧಿ ಮಾಡದ ಈ ಸರ್ಕಾರವನ್ನು ಜನ ತಿರಸ್ಕರಿಸ್ತಾರೆ ಬೈಎಲೆಕ್ಷನ್ ಗಳಲ್ಲಿ ಸರ್ಕಾರ ಇದ್ದವರು ರಣತಂತ್ರ ಮಾಡೋದು ಸಹಜ,

ಆದರೆ ಈ ಬಾರಿ ಮೂರೂ ಕಡೆಯೂ ಕಾಂಗ್ರೆಸ್​ ಸರ್ಕಾರವನ್ನ ಜನ ತಿರಸ್ಕರಿಸ್ತಾರೆ. ಯೋಗೇಶ್ವರ್ ಯಾವಾಗ ಕಾಂಗ್ರೆಸ್ ಕಡೆಗೆ ಕಾಲಿಟ್ರೋ ಆಗಲೇ ಅವರ ಪತನ ಶುರುವಾಯ್ತು ಅಲ್ಲೀವರೆಗೂ ಅವರ ಪರ ಇದ್ದ ವಾತಾವರಣ ನಂತರ ಉಲ್ಟಾ ಆಯ್ತು ಎಂದು ಹೇಳಿದರು.

ಜಮೀರ್ ಅಹಮದ್ ಯಾವಾಗಲೂ ವಿವಾದಾತ್ಮಕ ಹೇಳಿಕೆ‌ ಕೊಡ್ತಾರೆ ಎಂದ ಅಶ್ವತ್​ನಾರಯಣ್​​, ಜಮೀರ್ ಹೇಳಿಕೆ ಯೋಗೇಶ್ವರ್​ಗೂ ಮಾರಕ ಆಗಿರಬಹುದು ಖಂಡಿತ ಜಮೀರ್ ಹೇಳಿಕೆ ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಪಾಠ ಕಲಿಸುತ್ತೆ ಇಡೀ ದೇವೇಗೌಡರ ಕುಟುಂಬ ಖರೀದಿ ಮಾಡೋದಾಗಿ ಜಮೀರ್ ಹೇಳಿಕೆಯಿಂದ ಜನ ಬೇಜಾರ್ ಆಗಿದ್ದಾರೆ ಎಂದರು.

ನೀರಿನ ಪೈಪ್ ಒಡೆದವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿಯ ಸೈಂಟ್ ಜಾನ್ಸ್ ಶಾಲೆ ಹತ್ತಿರವಿರುವ ರೈಲ್ವೆ ಜಾಗೆಯನ್ನು ಒತ್ತುವರಿ ಮಾಡಿಕೊಂಡು ನಗರಸಭೆಯ ಕಟ್ಟಡದಲ್ಲಿ ಸುಮಾರು 2-3 ವರ್ಷದಿಂದ ಅನಧಿಕೃತವಾಗಿ ಗೋಡೆ ಕಟ್ಟಿಕೊಂಡು ಬೋರ್‌ವೇಲ್ ಕೊರೆಯುವ ಸಂದರ್ಭದಲ್ಲಿ ಪೈಪ್ ಒಡೆದು ನೀರು ಪೋಲು ಮಾಡಿದ್ದಾರೆ ಎಂದು ಎಂದು ಎಮ್. ಸಲೀಮ್‌ ಅಹ್ಮದ ಮಾಳೇಕೊಪ್ಪ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇವರಿಗೆ ರೈಲ್ವೆ ಒತ್ತುವರಿ ಜಾಗೆಯಲ್ಲಿ ಬೋರ್‌ವೆಲ್ ತೆಗಸಲು ಅನುಮತಿ ಕೊಟ್ಟವರಾರು ಎಂದು ಪ್ರಶ್ನಿಸಿದ್ದಾರೆ. ಇದು ಒಂದು ಸಾರ್ವಜನಿಕರ ಆಸ್ತಿ. ನೀರಿನ ಬೀಡಿನ ಪೈಪ್ ಒಡೆದವರ ಮೇಲೆ ಎಫ್.ಐ.ಆರ್. ಮಾಡಬೇಕು ಮತ್ತು ರಿಪೇರಿಯ ಖರ್ಚನ್ನು ಸಂಬಂಧಿಸಿದವರಿಂದಲೇ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಎಲ್ಐಸಿಯೊಂದಿಗೆ ಜೀವನವನ್ನು ಭದ್ರಪಡಿಸಿಕೊಳ್ಳಲು ಜನರಿಗೆ ಸಲಹೆ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜೀವ ವಿಮಾ ನಿಗಮ ಧಾರವಾಡ ವಿಭಾಗ ಮಟ್ಟದ ಪ್ರತಿನಿಧಿಗಳಿಗೆ ಸ್ಪರ್ಧೆ, ನಮ್ಮ ನಡೆ ಪ್ರತಿನಿಧಿಗಳ ಮನೆಯ ಕಡೆ ಭೇಟಿ ಕಾರ್ಯಕ್ರಮದ ಅಂಗವಾಗಿ ಗದಗ ೧ನೇ ಶಾಖೆಯಿಂದ ೧೩ ಪ್ರತಿನಿಧಿಗಳು ಆಯ್ಕೆಯಾದ ಹಿನ್ನೆಲೆಯಲ್ಲಿ ಅವರವರ ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ ತಿಮ್ಮಾಪೂರ ಗ್ರಾಮದ ವಿಮಾ ಪ್ರತಿನಿಧಿಯಾದ ಯಲ್ಲಪ್ಪ ಎಚ್.ಬಾಬರಿ ಅವರ ಮನೆಗೆ ಭೇಟಿ ನೀಡಿ ದಂಪತಿಗಳನ್ನು ಸನ್ಮಾನಿಸಿ ಧಾರವಾಡ ವಿಭಾಗದ ಎಸ್‌ಡಿಎಂ ಬಿ.ಎಸ್. ಚಕ್ರವರ್ತಿ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು ದೇಶದಲ್ಲೇ ಅತಿ ದೊಡ್ಡ ವಿಮಾ ಸಂಸ್ಥೆಯಾಗಿದ್ದು, ಅದು ತನ್ನ ಗ್ರಾಹಕರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಇದೀಗ ತನ್ನ ಎಲ್ಲಾ ಪಾಲಿಸಿಗಳನ್ನು ಹೊಸದಾಗಿ ನವೀಕರಿಸಿದ್ದು, ಗ್ರಾಹಕರು ತಮ್ಮ ಮುಂದಿನ ಜೀವನವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಿ ಎಂದು ಹೇಳಿದರು.

ಎಂಎA ರತ್ನಪ್ರಭಾ ಮಾತನಾಡಿ, ಧಾರವಾಡ ವಿಭಾಗದಲ್ಲಿ ಗದಗ ೧ನೇ ಶಾಖೆಯ ವತಿಯಿಂದ ೧೩ ಪ್ರತಿನಿಧಿಗಳು ಆಯ್ಕೆಯಾಗಿದ್ದು ಸಂತಸದ ಸಂಗತಿ ಎಂದರು.

ಈ ಸಂದರ್ಭದಲ್ಲಿ ಎಂ.ಎಸ್. ಚಿದಾನಂದ, ಗದಗ ಶಾಖೆಯ ಮ್ಯಾನೇಜರ್ ಎಚ್.ಎಂ. ಭಜಂತ್ರಿ, ಉಪಶಾಖಾಧಿಕಾರಿ ಮಹಾಂತೇಶ ಪಾಲ್ಗೊಂಡಿದ್ದರು. ಪ್ರತಿನಿಧಿಗಳಾದ ಮಲ್ಲೇಶ ಬಸರಿಮರದ, ಉಮೇಶ್ ನವಲಗುಂದ, ವೀರೇಶ್ ಗುಗ್ರಿ, ಶಿವಾನಂದ ಮರಿಗೌಡ್ರು, ರಮೇಶ್ ಹಾದಿಮನಿ, ಫಕ್ರುದ್ದೀನ್ ಬಾಬು ಖಾನ್, ಆರ್.ಎಫ್. ಗಾಣಿಗೇರ, ಬಿ.ಆರ್. ಕುಲಕರ್ಣಿ, ಜ್ಯೋತಿ ಹಿರೇಮಠ, ರಾಜೇಶ್ವರಿ ಕುಲಾಲ್, ರಾಘವೇಂದ್ರ ಹೊಸಮನಿ, ಹನುಮಪ್ಪ ವಾಲ್ಮೀಕಿ ಇವರನ್ನು ಸನ್ಮಾನಿಸಲಾಯಿತು.

error: Content is protected !!