Home Blog Page 2112

ಬದುಕಿನ ಗೊಂದಲಗಳಿಗೆ ಗೀತೆಯಲ್ಲಿ ಪರಿಹಾರ: ಪ್ರವಚನ ಭಾಸ್ಕರ ಡಾ.ಪಾವಗಡ ಪ್ರಕಾಶರಾವ್

0

ವಿಜಯಸಾಕ್ಷಿ ಸುದ್ದಿ, ಗದಗ: ಭಗವದ್ಗೀತೆಯು ಕುರುಕ್ಷೇತ್ರದ ಯುದ್ಧಭೂಮಿಗೆ ಮಾತ್ರ ಸೀಮಿತವಾದ ಬೋಧೆಯಲ್ಲ. ಬದಲಿಗೆ ಪ್ರತಿಯೊಬ್ಬ ಮನುಷ್ಯನೂ ತನ್ನ ದೈನಂದಿನ ಜೀವನದಲ್ಲಿ ಎದುರಿಸುವ ಮಾನಸಿಕ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ. ಬದುಕಿನ ಗೊಂದಲಗಳಿಗೆ ಪರಿಹಾರ ಸಿಗಲು ಭಗವದ್ಗೀತೆಯ ಪಾರಾಯಣ ದಿವ್ಯ ಔಷಧ ಎಂದು ಪ್ರವಚನ ಭಾಸ್ಕರ ಡಾ.ಪಾವಗಡ ಪ್ರಕಾಶರಾವ್ ನುಡಿದರು.

ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತೆ ಪ್ರವಚನದ ೫ನೇ ದಿನದ ಉಪನ್ಯಾಸ ನೀಡುತ್ತಾ ಮಾತನಾಡಿ, ಭಗವದ್ಗೀತೆಯು ಕೇವಲ ಮಹಾಭಾರತದ ಕಥಾನಕವಲ್ಲ, ಬದಲಿಗೆ ಜೀವನ ಸಾರ್ಥಕಗೊಳಿಸುವ, ಮೋಕ್ಷ ಪ್ರಾಪ್ತಿ ನೀಡುವ ಶಾಸ್ತ್ರವಾಗಿದೆ ಎಂದರು.

ಪ್ರಪಂಚದಲ್ಲೇ ಅತೀ ಸುದೀರ್ಘ ಮತ್ತು ಆಳವಾದ ಸಾಹಿತ್ಯ ಹೊಂದಿರುವ ಭಗವದ್ಗೀತೆಯನ್ನು ವ್ಯಾಸ ಮಹರ್ಷಿಗಳು ಸ್ವತಃ ರಚಿಸಲಿಲ್ಲ, ಬದಲಿಗೆ ವಿದ್ಯಾದೇವರೆನಿಸಿದ ಗಣಪತಿಯ ಹತ್ತಿರ ಹೇಳುತ್ತಾ ಬರೆಸಿದರು. ವ್ಯಾಸ ಮಹರ್ಷಿಗಳ ಮೂಲ ಹೆಸರು ಕೃಷ್ಣದ್ವೆöÊಪಾಯನ ಎಂದಾಗಿದ್ದು, ಕೃಷ್ಣನೇ ಅವರಲ್ಲಿ ಪ್ರವಹಿಸಿ ಮಹಾಭಾರತವನ್ನು ಸೃಜಿಸಿದ ಎಂಬ ನಂಬಿಕೆ ಇದೆ ಎಂದರು.

ಭಾರತೀಯ ಸಂಸ್ಕೃತಿಯನ್ನು ವಿರೂಪಗೊಳಿಸಲು ಬಯಸುವ, ಭಾರತೀಯ ಜ್ಞಾನವನ್ನು ಒಪ್ಪದ ಕೆಲವು ವಿದೇಶಿ ಮನಸ್ಥಿತಿಗಳು ಭಗವದ್ಗೀತೆಯ ಕುರಿತು ಇಲ್ಲಸಲ್ಲದ ಪೂರ್ವಾಗ್ರಹಗಳನ್ನು ತೇಲಿಬಿಟ್ಟು ಗೊಂದಲ ಸೃಷ್ಟಿಸುತ್ತಿದ್ದು, ಶ್ರೀಕೃಷ್ಣನಲ್ಲಿ ಪರಿಪೂರ್ಣ ನಂಬಿಕೆ ಇಲ್ಲದೇ ಸಂದೇಹಪೂರ್ವಕವಾಗಿ ಭಗವದ್ಗೀತೆ ಸಾರ ತಿಳಿಯಲು ಅಸಾಧ್ಯ ಎಂದರು.

ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ. ಯರಿಗೇರಿ, ಡಾ.ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ.ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು. ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿದರು.

ಗದಗ ಪ್ರಿಮಿಯರ್ ಲೀಗ್-೨ನೇ ಆವೃತ್ತಿ ಫೈನಲ್ ಪಂದ್ಯ ಉದ್ಘಾಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಿಮಲ್ ರೆಸಾರ್ಟ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಗದಗ ಪ್ರಿಮಿಯರ್ ಲೀಗ್-೨ನೇ ಆವೃತ್ತಿ ಫೈನಲ್ ಪಂದ್ಯವನ್ನು ಕಾಂಗ್ರೆಸ್‌ನ ಯುವ ಮುಖಂಡ ಕೃಷ್ಣಗೌಡ ಪಾಟೀಲ, ವಿಮಲ್ ರೆಸಾರ್ಟ್ ಮಾಲಕ ಪ್ರಕಾಶ ಶಾ ಉದ್ಘಾಟಿಸಿದರು.

ಕ್ರಷರ್ಸ್ ಹಾಗೂ ಟೈಟನ್ಸ್ ನಡುವೆ ನಡೆದ ಪಂದ್ಯದಲ್ಲಿ ಟೈಟನ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಪ್ರಸಾದ ಕಲಬುರ್ಗಿ ೪೩, ಸಚಿನ್ ಜೋಗಿನ ೪೦, ಪವನ ಶಳ್ಳೇದ ೩೧ ರನ್ ಮಾಡಿ, ೧೫೭ ರನ್ ಗಳಿಸಿದರು. ರಾಮು ಬೆನಹಾಳ, ಕಾರ್ತಿಕ ಬಾಗಲಕೋಟ ತಲಾ ೨ ವಿಕೆಟ್ ಪಡೆದರು.

ಬ್ಯಾಟಿಂಗ್‌ಗೆ ಇಳಿದ ಕ್ರಷರ್ಸ್ ತಂಡದ ರಾಮು ಬೆನಹಾಳ ೨೩, ಅನಿತ್ ೨೨, ವೈಭವ ಬದಿ ೨೧ ರನ್ ಮಾಡಿದರು. ಸಮೀರ ಗುಳೇದಗುಡ್ಡ ೩, ಕಾರ್ತಿಕ ಹಂಸನೂರ ೨, ಜೈದ್ ಅತ್ತಾರ ೨ ವಿಕೆಟ್ ಪಡೆದರು. ಇದರೊಂದಿಗೆ ಕ್ರಷರ್ಸ್ ತಂಡ ಪಂದ್ಯವನ್ನು ಗೆದ್ದಿತು. ಪಂದ್ಯ ಪುರಷೋತ್ತಮ ಪ್ರಶಸ್ತಿಯನ್ನು ರಾಮು ಬೆನಹಾಳ ಪಡೆದರು. ಈ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ವಿನಯ ಬಾರಕೇರ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ ಪಡೆದರು. ಅತೀ ಹೆಚ್ಚು ವಿಕೆಟ್ ಪಡೆದ ಪವನ ಕೊರಳಿ ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಜೈದ್ ಅತ್ತಾರ ಪಡೆದರು. ಯಮರ್ಜಿಂಗ್ ಫ್ಲೇಯರ್ ಆಗಿ ಪ್ರಜ್ವಲ್ ಮಿಟ್ಟಿ ಪ್ರಶಸ್ತಿ ಪಡೆದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆನಂದ ಪೋತ್ನಿಸ್, ಪಿ.ಆರ್. ಅಡವಿ, ಪ್ರಕಾಶ, ರಫೀಕ್ ಸೊಪ್ಪಿ, ವಿಕಾಸ ಜೈನ್, ಶೈಲೇಶ ಶಾ, ಬಸೀರ ನದೀಮ್ ಮುಲ್ಲಾ, ಸಮೀರ ನದೀಮ್ ಮುಲ್ಲಾ, ಅಭಿಷೇಕ ಹೊನ್ನಾವರ, ಕಿರಣ ಮಾಳೆಕೊಪ್ಪ ಪಾಲ್ಗೊಂಡಿದ್ದರು.

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಅಮಿತಾಭ್ ಬಚ್ಚನ್ ಗೆ ಆಹ್ವಾನ

0

ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಯನ್ನು ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಅದ್ದೂರಿ ಜಾತ್ರೆಯನ್ನು ಕಣ್ಮುಂಬಿಕೊಳ್ಳಲು ಪ್ರತಿ ವರ್ಷ ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಈಬಾರಿಯ ಗವಿಸಿದ್ದೇಶ್ವರ ಜಾತ್ರೆಗೆ ಅಮಿತಾಭ್ ಬಚ್ಚನ್ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ಈಗಾಗಲೇ ಗವಿಸಿದ್ದೇಶ್ವರ ಮಠದ ಆಡಳಿತ ಮಂಡಳಿ ಅಮಿತಾಭ್​ ಗೆ ಆಹ್ವಾನ ಪತ್ರ ನೀಡಿದೆ.

ಗವಿಸಿದ್ದೇಶ್ವರ ಮಠದ ಆಡಳಿತ ಮಂಡಳಿಯವರು ಇತ್ತೀಚೆಗೆ ಅಮಿತಾಭ್​ ಬಚ್ಚನ್ ಅವರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಪ್ರೀತಿಯಿಂದ ಆಮಂತ್ರಣ ಪತ್ರಿಕೆ ಸ್ವೀಕರಿಸಿ ಈ ಅಮಿತಾಭ್ ಬಚ್ಚನ್ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ, ಅವರು ಈ ಜಾತ್ರೆಗೆ ಬರೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಗವಿಸಿದ್ದೇಶ್ವರ ಮಠದ ಜಾತ್ರೆ ದಕ್ಷಿಣ ಭಾರತದ ಕುಂಭ ಮೇಳ ಎಂದೆ ಖ್ಯಾತಿ ಪಡೆದಿದೆ. ಜನವರಿ 15ರಂದು ಈ ಜಾತ್ರೆ ನಡೆಯಲಿದೆ. ಒಂದೊಮ್ಮೆ ಅಮಿತಾಭ್ ಬಚ್ಚನ್ ಜಾತ್ರೆಗೆ ಆಗಮಿಸಿದರೆ ಇದರ ಮೆರಗು ಮತ್ತಷ್ಟು ಹೆಚ್ಚಲಿದೆ.

ಪ್ರತಿ ವರ್ಷವೂ ಗವಿಸಿದ್ದೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರುತ್ತದೆ. ಲಕ್ಷಾಂತರ ಮಂದಿ ಜಾತ್ರೆಗೆ ಆಗಮಿಸುತ್ತಾರೆ. ಬರುವ ಎಲ್ಲಾ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ. ಅನ್ನ ದಾಸೋಹವನ್ನು ಮಠದ ವತಿಯಿಂದಲೇ ನೆರವೇರಿಸಲಾಗುತ್ತದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದರೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಅನ್ನೋದು ವಿಶೇಷ.

 

ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಸಚಿವ ಬೋಸರಾಜು

0

ರಾಯಚೂರು: ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ ಎಂದು ಸಚಿವ ಬೋಸರಾಜು ಹೇಳಿದ್ದಾರೆ. ನಗರದಲ್ಲಿ ಶಕ್ತಿ ಯೋಜನೆಯನ್ನು ಪುರುಷರಿಗೂ ವಿಸ್ತರಿಸುವ ಯೋಚನೆ ಸರ್ಕಾರಕ್ಕಿದೆ ಎಂದು ಡಿಕೆ ಶಿವಕುಮಾರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಬೋಸರಾಜು, ಜನ ಕೇಳ್ತಿದ್ದಾರೆ, ಅದರೆ ಬಜೆಟ್ ಮಂಡನೆಗೆ ಇನ್ನೂ ಕಾಲಾವಕಾಶವಿದೆ, ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ ಎಂದರು.

ಇನ್ನೂ ಕಾಂಗ್ರೆಸ್ ಪಕ್ಷವನ್ನು ಜನ ಓಡಾಡಿಸಿ ಹೊಡೆಯುವ ದಿನ ದೂರವಿಲ್ಲ ಎಂದು ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ ಹೇಳಿರುವುದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಬೋಸರಾಜು, ಬಿಜೆಪಿಯವರೇ ಈಶ್ವರಪ್ಪರನ್ನು ಒದ್ದು ಮನೇಲಿ ಕೂಡಿಸಿದ್ದಾರೆ ಮತ್ತು ಚುನಾವಣೆಗೆ ನಿಂತಾಗ ಜನ ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದಾರೆ, ಅವರೇನು ನಮ್ಮನ್ನು ಒದ್ದು ಓಡಿಸೋದು, ನಮ್ಮ ಪಕ್ಷಕ್ಕೆ 140 ವರ್ಷಗಳ ಇತಿಹಾಸವಿದೆ, ಆಡಳಿತ ನಡೆಸಿದ ಅನುಭವ ಇದೆ ಎಂದು ಹೇಳಿದರು.

 

Uttar Pradesh: ರಸ್ತೆ ಅಪಘಾತದಲ್ಲಿ ನವಜೋಡಿ ಸೇರಿ 7 ಮಂದಿ ಸಾವು!

0

ಉತ್ತರ ಪ್ರದೇಶ:- ರಸ್ತೆ ಅಪಘಾತದಲ್ಲಿ ನವಜೋಡಿ ಸೇರಿ 7 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಜರುಗಿದೆ.

ಇಂದು ಬಿಜ್ನೋರ್‌ನಲ್ಲಿ ಭಾರೀ ಮಂಜು ಕವಿದ್ದಿತ್ತು. ಈ ವೇಳೆ ಮದುವೆ ಮುಗಿಸಿ ಬರುತ್ತಿದ್ದವರ ವಾಹನ ವೇಗವಾಗಿ ಬಂದು ಟೆಂಪೋಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಏಳು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಿನ್ನೆ ಸಂಜೆ ಜಾರ್ಖಂಡ್‌ನಲ್ಲಿ ಮದುವೆ ಸಂಭ್ರಮ ನಡೆದಿತ್ತು. ಬಿಜ್ನೋರ್‌ನ ಧಂಪುರದಲ್ಲಿರುವ ವರನ ಮನೆಗೆ ಹಿಂದಿರುಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-74ರಲ್ಲಿ ಅವರಿದ್ದ ವಾಹನ ಟೆಂಪೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಹಳ್ಳಕ್ಕೆ ಬಿದ್ದಿವೆ.

ವಾಹನದಲ್ಲಿ ವಧು, ವರ, ಅವರ ಚಿಕ್ಕಮ್ಮ ಮತ್ತು ಅವರ ಸಹೋದರ ಸೇರಿದಂತೆ 11 ಮಂದಿ ಇದ್ದರು ಎಂದು ಹೇಳಲಾಗಿದೆ. ಅಪಘಾತದಲ್ಲಿ ದಂಪತಿಗಳು ಮತ್ತು ಅವರ ನಾಲ್ವರು ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ. ಉಳಿದವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ದಟ್ಟ ಮಂಜಿನಿಂದಾಗಿ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ ಆ ಕಾರಣದಿಂದಲ್ಲೇ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ.

DCM ಡಿಕೆಶಿ ವಿರುದ್ಧ ಸಿಡಿದೆದ್ದ ಜಯನಗರ ಜನತೆ: ನಾಳೆ ಉಗ್ರ ಹೋರಾಟ!

0

ಬೆಂಗಳೂರು:- ʼನನ್ನ ತೆರಿಗೆ ನನ್ನ ಹಕ್ಕುʼ ಹೆಸರಿನಲ್ಲಿ ಹೋರಾಟಕ್ಕೆ ಕರೆ ಕೊಟ್ಟಿರುವ ಜಯನಗರದ ಸಂಘ ಸಂಸ್ಥೆಗಳು, DCM ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಜಯನಗರ ನಿವಾಸಿಗಳ ಆಕ್ರೋಶದ ಕಟ್ಟೆ ಒಡೆದಿದ್ದು, ಅವರಿಂದ ಆದ ಅನ್ಯಾಯವನ್ನು ಖಂಡಿಸಿ ಜಯನಗರ 70 ಸಂಘಟನೆಯ ಸದಸ್ಯರು ನನ್ನ ತೆರಿಗೆ ನನ್ನ ಹಕ್ಕು ಹೆಸರಿನಲ್ಲಿ ಭಾನುವಾರ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಿದ್ದಾರೆ.

ಪ್ರತಿಭಟನೆಗೆ ಸಂಬಂಧಿಸಿದಂತೆ ಮಾತನಾಡಿದ ಜಯನಗರ ಶಾಸಕ ರಾಮಮೂರ್ತಿ ಅವರು, ಅನುದಾನ ವಿಚಾರವನ್ನು ಕೇಳಿದ್ದಕ್ಕೆ ನನ್ನ ಮುಂದೆ ತಗ್ಗಿ ಬಗ್ಗಿ ನಡೆಯಬೇಕು ಎಂದು ಹೇಳಿದ್ದಾರೆ. ನಾನು ನನ್ನ ಕ್ಷೇತ್ರದ ಜನರು, ಗುರು ಹಿರಿಯರ ಮುಂದೆ ತಗ್ಗಿ ಬಗ್ಗಿ ನಡೆಯುತ್ತೇನೆ. ಜಯನಗರ ಜನರು ತೆರಿಗೆ ಪಾವತಿಸುತ್ತಿದ್ದಾರೆ. ಈ ಕಾರಣಕ್ಕೆ ನನ್ನ ತೆರಿಗೆ ನನ್ನ ಹಕ್ಕು ಹೆಸರಿನಲ್ಲಿ ಬೃಹತ್‌ ಹೋರಾಟವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ: ಅಕ್ರಮವಾಗಿ ವಿದೇಶದಿಂದ ಸಾಗಾಟ ಮಾಡ್ತಿದ್ದ ಪ್ರಾಣಿಗಳು ವಶಕ್ಕೆ

0

ಬೆಂಗಳೂರು: ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ವಿದೇಶದಿಂದ ಸಾಗಾಟ ಮಾಡ್ತಿದ್ದ ಪ್ರಾಣಿಗಳನ್ನು ವಶಕ್ಕೆ ಪಡೆದಿದ್ದಾರೆ. ಟ್ರಾಲಿ ಬ್ಯಾಗ್ ನಲ್ಲಿ ದೊಡ್ಡ ಆಮೆ, ನಕ್ಷತ್ರ ಆಮೆ, ಕೆಂಪು ಪಾದದ ಆಮೆ, ಹಲ್ಲಿ, ಕೆಂಪು ಇಲಿ ಸೇರಿದಂತೆ ವಿವಿಧ ಬಗೆಯ ಪ್ರಾಣಿಗಳನ್ನು ಅಡಗಿಸಿಟ್ಟಿದ್ದರು.

40 ಬಾಕ್ಸ್‌ಗಳಲ್ಲಿದ್ದ ವಿವಿಧ ಬಗೆಯ ಪ್ರಾಣಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಾಣಿಗಳನ್ನ ತಂದಿದ್ದ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಏರ್‌ಪೋರ್ಟ್‌ನಲ್ಲಿ ಪರಿಶೀಲನೆ ವೇಳೆ ಬಾಕ್ಸ್‌ನಲ್ಲಿ ಪ್ರಾಣಿಗಳಿರುವುದು ಪತ್ತೆ ಆಗಿದೆ. ಕೌಲಲಾಂಪುರದಿಂದ MHO192 ವಿಮಾನದಲ್ಲಿ ಅಕ್ರಮವಾಗಿ ಪ್ರಾಣಿಗಳನ್ನು ತಂದಿದ್ದರು. ಸದ್ಯ ಅಕ್ರಮ ಪ್ರಾಣಿಗಳ ಸಾಗಾಟ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ವೇಶ್ಯಾವಾಟಿಕೆ ಶಂಕೆ: ಪಬ್ಲಿಕ್ ನಲ್ಲೇ ಮಹಿಳೆ ಬಟ್ಟೆ ಹರಿದು ವಿಕೃತಿ! ನೆರೆಮನೆಯವರಿಂದ ಹಲ್ಲೆ!

0

ಬೆಳಗಾವಿ:- ವೇಶ್ಯಾವಾಟಿಕೆ ನಡೆಸುತ್ತಿದ್ದಾಳೆ ಎಂದು ಆರೋಪಿಸಿ ಮಹಿಳೆ ಮೇಲೆ ನೆರೆಮನೆಯವರು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಜರುಗಿದೆ.

ಬೆಳಗಾವಿಯಲ್ಲಿ ನಡೆದ ಈ ಅಮಾನವೀಯ ಘಟನೆ ಮನುಕುಲವೇ ತಲೆ ತಗ್ಗಿಸುವಂತಿದೆ. ಮಹಿಳೆಯು, ಬೆಳಗಾವಿಯ ವಡ್ಡರವಾಡಿಯ ಮನೆಯೊಂದರಲ್ಲಿ ಬಾಲಕಿಯೊಬ್ಬಳ ಜತೆ ನಾಲ್ಕು ವರ್ಷಗಳಿಂದ ವಾಸವಾಗಿದ್ದಾರೆ. ಅಲ್ಲೇ ಪಕ್ಕದಲ್ಲಿ ವಾಸವಿರುವ ಮತ್ತೊಂದು ಕುಟುಂಬದವರು, ಮಹಿಳೆಯ ವಿರುದ್ಧ ವೇಶ್ಯಾವಾಟಿಕೆಯ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮನೆಗೆ ನುಗ್ಗಿ ತಾಯಿ, ಮಗಳನ್ನು ಹೊರಗೆ ಎಳೆದು ತಂದು ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ಸಂಬಂಧ ಇಲ್ಲದವರೆಲ್ಲಾ ಆ ಮಹಿಳೆಯರ ಮನೆಗೆ ಬಂದು ಹೋಗುತ್ತಾರೆ. ಮಹಿಳೆಯರು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ನೆರೆ ಮನೆಯವರು ತಾಯಿ-ಮಗಳನ್ನ ಮನೆ ಬಿಡಿಸಲು ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ ಮಾಡಲಾಗಿದೆ. ಘಟನೆಯ ದೃಶ್ಯ ಮೊಬೈಲ್ ಫೋನ್​ನಲ್ಲಿ ರೆಕಾರ್ಡ್ ಆಗಿದೆ.

ಹಲ್ಲೆಗೊಳಗಾದ ಬಳಿಕ ಮಹಿಳೆಯು ದೂರು ನೀಡಲು ಸಮೀಪದ ಮಾಳಮಾರುತಿ ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, 2 ದಿನ ಪೊಲೀಸ್ ಠಾಣೆಗೆ ಅಲೆದರೂ ದೂರು ಸ್ವೀಕರಿಸಲು ನಿರಾಕರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಮಹಿಳೆ, ‘ಜೀವ ಭಯ ಇದೆ, ರಕ್ಷಣೆ ಕೊಡಿ’ ಎಂದು ಮನವಿ ಬೆಳಗಾವಿ ಕಮಿಷನರ್​ಗೆ ದೂರು ನೀಡಿದ್ದರು. ನಂತರ ಇದೀಗ ಕಮಿಷನರ್​ ಸೂಚನೆ ಮೇರೆಗೆ ಶುಕ್ರವಾರ ರಾತ್ರಿ ಮೂವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

ಗಂಡು ಮಗುವಿನ ತಂದೆಯಾದ ಹಿಟ್ ಮ್ಯಾನ್: ರೋಹಿತ್ ಮನೆಯಲ್ಲಿ ಸಂಭ್ರಮ!

0

ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಶುಕ್ರವಾರ ರಾತ್ರಿ ಹಿಟ್ ಮ್ಯಾನ್ ಪತ್ನಿ ರಿತಿಕಾ ಸಜ್ದೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದರೊಂದಿಗೆ ಹಿಟ್​ಮ್ಯಾನ್​ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ​ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ಲಭ್ಯರಾಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಮಗನ ಜನನದ ನಂತರ, ರೋಹಿತ್ ಶರ್ಮಾ ಈಗ ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಗೆ ರೋಹಿತ್ ಆಸ್ಟ್ರೇಲಿಯಾಕ್ಕೆ ಬರಲು ಸಾಧ್ಯವಾಗದಿದ್ದರೆ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಸ್ವದೇಶದಲ್ಲೇ ಟೀಂ ಇಂಡಿಯಾ ವೈಟ್‌ವಾಶ್ ಅನುಭವಿಸಿತು. WTC ಫೈನಲ್‌ಗೆ ಅರ್ಹತೆ ಪಡೆಯಲು ಮೆನ್ ಇನ್ ಬ್ಲೂ ಆಸ್ಟ್ರೇಲಿಯಾದಲ್ಲಿ ನಾಲ್ಕು ಅಥವಾ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ.

ಇನ್ನೂ ಕ್ರಿಕೆಟಿಗ ರೋಹಿತ್‌ ಶರ್ಮಾ ದಂಪತಿಗೆ ಗಂಡು ಮಗು ಜನಿಸಿರುವುದಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

ಅಕ್ರಮ ಆಸ್ತಿಗಳಿಕೆ ಪ್ರಕರಣ: ಸಚಿವ ಜಮೀರ್ ಗೆ “ಲೋಕಾ” ನೋಟಿಸ್!

0

ಬೆಂಗಳೂರು :- ರಾಜ್ಯ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ನೋಟಿಸ್ ಜಾರಿ ಆಗಿದ್ದು, ಡಿಸೆಂಬರ್ 3 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ನಗರದಲ್ಲಿರುವ ತಮ್ಮ ಮನೆಗೆ ಬಂದು ಲೋಕಾಯುಕ್ತ ಇನ್‌ಪೆಕ್ಟ‌ರ್ ನೀಡಿದ್ದ ನೋಟಿಸ್ ಅನ್ನು ಸಚಿವ ಜಮೀರ್‌ ಸ್ವೀಕರಿಸಿದ್ದು, ಸೂಕ್ತ ದಾಖಲೆಗಳೊಂದಿಗೆ ಖುದ್ದು ಹಾಜರಾಗುವಂತೆ ಸಚಿವರಿಗೆ ಪೊಲೀಸರು ಸೂಚಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಜಮೀರ್ ವಿರುದ್ಧ ಎಸಿಬಿಯಲ್ಲಿ ಜಾರಿ ಇ.ಡಿ. ವರದಿ ಆಧರಿಸಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಾಗಿತ್ತು.

ತರುವಾಯ ಎಸಿಬಿ ರದ್ದುಗೊಂಡ ನಂತರ ಆ ಪ್ರಕರಣದ ಮುಂದುವರೆದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಕೈಗೆತ್ತಿಕೊಂಡಿದ್ದರು. ಪ್ರಾಥಮಿಕ ಹಂತದ ತನಿಖೆ ಮುಗಿಸಿದ ಪೊಲೀಸರು, ಈಗ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ವಿಚಾರಣೆಗೆ ಹಾಜರಾಗಲು ಸಚಿವರಿಗೆ ಸೂಚಿಸಲಾಗಿದೆ.

error: Content is protected !!