Home Blog Page 220

ಧಾರವಾಡ| ಭೀಕರ ಅಗ್ನಿ ದುರಂತ; ಮೂರು ಅಂಗಡಿಗಳು ಸುಟ್ಟು ಕರಕಲು!

0

ಧಾರವಾಡ:- ಧಾರವಾಡ ನಗರದ ಮಾಳಮಡ್ಡಿ ಬಡಾವಣೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಶಾರ್ಟ್​​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂರು ಅಂಗಡಿಗಳು ಸುಟ್ಟು ಕರಕಲಾಗಿದೆ‌. ಹಣ್ಣಿನ ಅಂಗಡಿ ಸೇರಿ ಎರಡು ಅಂಗಡಿಗಳು ನಿರ್ನಾಮವಾಗಿದ್ದು, ಬೆಂಕಿ ಕಂಡು ಸ್ಥಳೀಯರು ಅದನ್ನು ಆರಿಸುವ ಯತ್ನ ಮಾಡಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದ್ದು, ದೊಡ್ದ ಅನಾಹುತ ತಪ್ಪಿದೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯ್ ರಾಜಕೀಯ ಪ್ರವೇಶಕ್ಕೂ ಮುನ್ನ ‘ಜನ ನಾಯಗನ್’ಗೆ ಸೆನ್ಸಾರ್ ಶಾಕ್? ಕೋರ್ಟ್ ಮೆಟ್ಟಿಲೇರಲು ಚಿತ್ರತಂಡ ಚಿಂತನೆ

ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ವಿವಾದಕ್ಕೆ ಸಿಲುಕಿದೆ. ರಿಲೀಸ್‌ಗೆ ಕೇವಲ ಮೂರು ದಿನ ಮಾತ್ರ ಉಳಿದಿದ್ದರೂ, ಸೆನ್ಸಾರ್ ಮಂಡಳಿ ಇನ್ನೂ ಸಿನಿಮಾಕ್ಕೆ ಪ್ರಮಾಣಪತ್ರ ನೀಡದೆ ವಿಳಂಬ ಮಾಡುತ್ತಿರುವುದು ಚಿತ್ರರಂಗದ ವಲಯದಲ್ಲಿ ಸಂಚಲನ ಮೂಡಿಸಿದೆ.

ಜನವರಿ 9ರಂದು ಬಿಡುಗಡೆಗೆ ಸಿದ್ಧವಾಗಿರುವ ‘ಜನ ನಾಯಗನ್’ ಸಿನಿಮಾವನ್ನು ಡಿಸೆಂಬರ್ 19ರಂದೇ ಸೆನ್ಸಾರ್ ಮಂಡಳಿ ವೀಕ್ಷಣೆ ಮಾಡಿತ್ತು. ವೀಕ್ಷಣೆಯ ವೇಳೆ ಕೆಲವು ದೃಶ್ಯಗಳಿಗೆ ಕತ್ತರಿ ಹಾಗೂ ಕೆಲ ಸಂಭಾಷಣೆಗಳಿಗೆ ಮ್ಯೂಟ್ ಮಾಡುವಂತೆ ಸೂಚನೆ ನೀಡಲಾಗಿತ್ತು. ಈ ಎಲ್ಲ ಬದಲಾವಣೆಗಳನ್ನು ಪೂರ್ಣಗೊಳಿಸಿ ತಂಡ ಮತ್ತೆ ಸಿನಿಮಾವನ್ನು ಮಂಡಳಿಗೆ ಸಲ್ಲಿಸಿದೆ. ಆದರೂ ತಿಂಗಳು ಕಳೆದರೂ ಸೆನ್ಸಾರ್ ಪತ್ರ ಸಿಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪೂಜಾ ಹೆಗ್ಡೆ ಹಾಗೂ ಮಮಿತಾ ಬೈಜು ನಟಿಸಿರುವ ಈ ಚಿತ್ರವನ್ನು ಎಚ್. ವಿನೋದ್ ನಿರ್ದೇಶನ ಮಾಡಿದ್ದು, ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಆಗಿದೆ. ಈ ಬಾರಿ ಕಥೆಯಲ್ಲಿ ರಾಜಕೀಯ ಅಂಶಗಳನ್ನು ಸೇರಿಸಲಾಗಿದೆ ಎನ್ನಲಾಗಿದ್ದು, ಇದೇ ವಿಷಯಕ್ಕೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು, ಸೆನ್ಸಾರ್ ಮಂಡಳಿಯ ನಡೆ ಉದ್ದೇಶಪೂರ್ವಕ ಹಾಗೂ ರಾಜಕೀಯ ಪ್ರೇರಿತ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜನವರಿ 6ರೊಳಗೆ ಪ್ರಮಾಣಪತ್ರ ಸಿಗದಿದ್ದರೆ ಕೋರ್ಟ್ ಮೆಟ್ಟಿಲೇರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.

ವಿಜಯ್ ಈ ಸಿನಿಮಾದ ಬಳಿಕ ಸಂಪೂರ್ಣವಾಗಿ ರಾಜಕೀಯಕ್ಕೆ ತೊಡಗಿಕೊಳ್ಳಲಿದ್ದು, ಈ ವರ್ಷ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಸಕ್ರಿಯ ಪಾತ್ರವಹಿಸುವ ನಿರೀಕ್ಷೆಯಿದೆ. ಇಂತಹ ಸಮಯದಲ್ಲಿ ‘ಜನ ನಾಯಗನ್’ ಸಿನಿಮಾ ಎದುರಿಸುತ್ತಿರುವ ಸೆನ್ಸಾರ್ ಅಡೆತಡೆಗಳು ಇನ್ನಷ್ಟು ಚರ್ಚೆಗೆ ಗ್ರಾಸವಾಗಿವೆ.

ಇನ್ನು, ವಿಜಯ್ ಅವರ ಕೊನೆಯ ಸಿನಿಮಾ ರಿಮೇಕ್ ಆಗಿರುವುದರ ಬಗ್ಗೆ ಅಭಿಮಾನಿಗಳಲ್ಲೂ ಬೇಸರ ವ್ಯಕ್ತವಾಗಿದೆ. ರಿಲೀಸ್‌ಗೆ ಮುನ್ನವೇ ವಿವಾದಗಳಿಂದ ಸುತ್ತುವರಿದಿರುವ ‘ಜನ ನಾಯಗನ್’ ಈಗ ಕೋರ್ಟ್ ಮೆಟ್ಟಿಲೇರಬಹುದೇ ಎಂಬುದೇ ಮುಂದಿನ ಕುತೂಹಲ.

ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್; ಚಿನ್ನ, ಬೆಳ್ಳಿ ಮತ್ತೆ ಹೆಚ್ಚಳ! ಗ್ರಾಂ ಎಷ್ಟು?

0

ಗೋಲ್ಡ್ ಪ್ರಿಯರಿಗೆ ಮತ್ತೆ ಬಿಗ್ ಶಾಕ್ ಎದುರಾಗಿದ್ದು, ಚಿನ್ನ, ಬೆಳ್ಳಿ ಮತ್ತೆ ಹೆಚ್ಚಳವಾಗಿದೆ.

ನಿನ್ನೆ ಗ್ರಾಮ್​ಗೆ 145 ರೂ ಏರಿದ್ದ ಚಿನ್ನದ ಬೆಲೆ ಇವತ್ತು 130 ರೂ ಹೆಚ್ಚಿದೆ. ಎರಡು ದಿನದಲ್ಲಿ 275 ರೂ ಬೆಲೆ ಏರಿಕೆ ಆಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಕೂಡ ಭರ್ಜರಿ ಹೆಚ್ಚಳ ಕಂಡಿದೆ. ನಿನ್ನೆ ಆರು ರೂ ಹೆಚ್ಚಿದ್ದ ಅದರ ಬೆಲೆ ಇಂದೂ ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,820 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,100 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 6ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,882 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,725 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,412 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 253 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,882 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,725 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 253 ರೂ.

ಚಿಕ್ಕಮಗಳೂರಿನಲ್ಲಿ ಕೆಎಫ್‌ಡಿ ಆತಂಕ: ಒಂದೇ ಗ್ರಾಮದಲ್ಲಿ ಇಬ್ಬರಿಗೆ ಸೋಂಕು!

0

ಚಿಕ್ಕಮಗಳೂರು: ಎನ್‌.ಆರ್‌.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದಲ್ಲಿ ಮತ್ತೋರ್ವ ಯುವಕನಿಗೆ ಮಂಗನ ಕಾಯಿಲೆ ಸೋಂಕು ದೃಢಪಟ್ಟಿದೆ. ಈ ಮೂಲಕ ಗ್ರಾಮದ ಇಬ್ಬರಲ್ಲಿ ಸೋಂಕು ಪತ್ತೆಯಾದಂತಾಗಿದೆ.

ಗ್ರಾಮದ 30 ವರ್ಷದ ಯುವಕನಿಗೆ ಕೆಎಫ್‌ಡಿ ಸೋಂಕು ಪತ್ತೆಯಾಗಿದ್ದು, ಸೋಂಕಿತ ಯುವಕನನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬ ವ್ಯಕ್ತಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಟ್ಟಿನಮನೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಯಾರಿಗಾದರೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿಳ್ಕೋಡಿ ಗ್ರಾಮದಲ್ಲಿ ಆರು ಮಂದಿಗೆ ಮಂಗನ ಕಾಯಿಲೆ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿತ್ತು.

ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ: 25 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್‌ʼನಲ್ಲಿ ವಿಚಾರಣೆ

0

ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 25 ವರ್ಷಗಳ ಬಳಿಕ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದೆ. ಈ ಪ್ರಕರಣದ ವಿಚಾರಣೆ ಜನವರಿ 21ರಂದು ನಡೆಯಲಿದೆ.

ಮಹಾರಾಷ್ಟ್ರ ಸರ್ಕಾರವು ಬೆಳಗಾವಿ ಸೇರಿದಂತೆ ಕರ್ನಾಟಕದ 865 ನಗರ, ಪಟ್ಟಣ ಮತ್ತು ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಅರ್ಜಿ ಸಲ್ಲಿಸಿತ್ತು. ಇದೀಗ ಆ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.

ಗಡಿ ವಿವಾದ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಅಲರ್ಟ್ ಆಗಿದ್ದು, ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ.

ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಅಶೋಕ ಹಿಂಚಗೇರಿ, ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಪರ ವಾದ ಮಂಡಿಸುವ ವಕೀಲ ನಿಶಾಂತ ಪಾಟೀಲ್, ಗಡಿ ಮತ್ತು ನದಿ ಸಂರಕ್ಷಣಾ ಆಯೋಗದ ಸದಸ್ಯ ಆರ್.ಬಿ. ಧರ್ಮೆಗೌಡ, ಕಾನೂನು ಇಲಾಖೆ ಅಪರ ಕಾರ್ಯದರ್ಶಿ ಕೆ.ಎಲ್. ಅಶೋಕ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಗಡಿ ವಿವಾದ ಅರ್ಜಿಯನ್ನು ತಿರಸ್ಕರಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಬಲವಾದ ವಾದ ಮಂಡಿಸಲು ಕರ್ನಾಟಕ ಕಾನೂನು ತಂಡ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಭೀಕರ ರಸ್ತೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು!

0

ದಾವಣಗೆರೆ:- ದಾವಣಗೆರೆಯ ಶಿರಮಗೊಂಡನಹಳ್ಳಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಜರುಗಿದೆ.

27 ವರ್ಷದ ಮಂಜುನಾಥ ಮೃತ ಬೈಕ್ ಸವಾರ. ಗದಗ ಜಿಲ್ಲೆಯ ಶಿಂಗ್ಲಿ ಗ್ರಾಮದ ಯುವಕ ಬೈಕಿನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.

ಡಿಕ್ಕೆ ಹೊಡೆದ ರಭಸಕ್ಕೆ ಮಂಜುನಾಥ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳಕ್ಕೆ ಸಂಚಾರಿ ಸಿಪಿಐ ಮಂಜುನಾಥ್ ಹಾಗೂ ದಕ್ಷಿಣ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧರ್ಮೇಂದ್ರ ಆಸ್ಪತ್ರೆಯಲ್ಲಿದ್ದಾಗ ನಮಗೆ ಕಿರುಕುಳ ನೀಡಲಾಗಿದೆ: ಹೇಮಾ ಮಾಲಿನಿ ಬೇಸರ

ಬಾಲಿವುಡ್ ದಿಗ್ಗಜ ಧರ್ಮೇಂದ್ರ ನವೆಂಬರ್ 24ರಂದು ನಿಧನರಾಗುವ ಮುನ್ನ, ಅವರ ಕುಟುಂಬ ಭಾರೀ ಮಾನಸಿಕ ಒತ್ತಡ ಮತ್ತು ಮಾಧ್ಯಮ ಕಿರುಕುಳವನ್ನು ಎದುರಿಸಿತ್ತು ಎಂಬ ವಿಚಾರ ಈಗ ಹೊರಬಂದಿದೆ. ಧರ್ಮೇಂದ್ರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದಾಗ, ಆಸ್ಪತ್ರೆ ಹೊರಗೆ ಪಾಪರಾಜಿಗಳು ನಿರಂತರವಾಗಿ ಜಮಾಯಿಸಿದ್ದರಿಂದ ಡಿಯೋಲ್ ಕುಟುಂಬ ಅಸಹಾಯ ಸ್ಥಿತಿಗೆ ತಲುಪಿತ್ತು.

ಆಸ್ಪತ್ರೆ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ, ಧರ್ಮೇಂದ್ರ ಅವರ ಚಿಕಿತ್ಸೆಯನ್ನು ಮನೆಯಲ್ಲಿಯೇ ಮುಂದುವರಿಸಲು ಕುಟುಂಬ ನಿರ್ಧರಿಸಿತು. ಆದರೆ ಅವರನ್ನು ಮನೆಗೆ ಕರೆತಂದ ಬಳಿಕವೂ ಪಾಪರಾಜಿಗಳು ಮನೆಯ ಹೊರಗೆ ನಿಂತು ಕುಟುಂಬದ ಚಲನವಲನಗಳನ್ನೆಲ್ಲ ಸೆರೆಹಿಡಿಯುತ್ತಿದ್ದರು ಎಂದು ಹೇಮಾ ಮಾಲಿನಿ ಆರೋಪಿಸಿದ್ದಾರೆ.

ಈ ನಿರಂತರ ಕಿರುಕುಳ ಸನ್ನಿ ಡಿಯೋಲ್‌ಗೆ ತೀವ್ರ ಆಕ್ರೋಶ ತರಿಸಿತ್ತು. ಭಾವನಾತ್ಮಕ ಒತ್ತಡದಲ್ಲಿದ್ದ ಸನ್ನಿ ಡಿಯೋಲ್, ಪಾಪರಾಜಿಗಳ ಮೇಲೆ ಕೋಪ ಹೊರಹಾಕಿದ್ದು ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿದ ಹೇಮಾ ಮಾಲಿನಿ, “ಆ ಸಮಯದಲ್ಲಿ ನಾವು ಎಲ್ಲರೂ ತುಂಬಾ ನೋವಿನ ಹಂತದಲ್ಲಿದ್ದೆವು. ಆದರೂ ಮಾಧ್ಯಮಗಳು ನಮ್ಮನ್ನು ಹಾಗೂ ನಮ್ಮ ಕಾರುಗಳನ್ನು ಹಿಂಬಾಲಿಸುತ್ತಿದ್ದವು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಧರ್ಮೇಂದ್ರ ಅವರ ನಿಧನ ಎಲ್ಲರಿಗೂ ದೊಡ್ಡ ಆಘಾತ. ಕಳೆದ ಒಂದು ತಿಂಗಳಿನಿಂದ ನಾವು ನಿರಂತರವಾಗಿ ಆಸ್ಪತ್ರೆ ಮತ್ತು ಮನೆ ನಡುವೆ ಓಡಾಡುತ್ತಿದ್ದೆವು. ಅವರು ಈ ಹಿಂದೆಯೂ ಹಲವು ಬಾರಿ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರು. ಈ ಬಾರಿಯೂ ಅವರು ಬದುಕುತ್ತಾರೆ ಎಂಬ ನಿರೀಕ್ಷೆಯಿತ್ತು” ಎಂದು ಹೇಮಾ ಮಾಲಿನಿ ಹೇಳಿದ್ದಾರೆ.

ಧರ್ಮೇಂದ್ರ ಅವರ ಅಂತಿಮ ದಿನಗಳಲ್ಲಿ ಕುಟುಂಬ ಎದುರಿಸಿದ ಈ ಅನುಭವ ಇದೀಗ ಬಾಲಿವುಡ್‌ನಲ್ಲಿ ಮಾಧ್ಯಮ ನೈತಿಕತೆ ಕುರಿತ ಚರ್ಚೆಗೆ ಕಾರಣವಾಗಿದೆ.

ಕ್ರಿಟಿಕಲ್ ಕೇರ್ ಯೂನಿಟ್‌ನಲ್ಲಿ ಖ್ಯಾತ ನಟ – ನಿರ್ದೇಶಕ ಭಾರತಿರಾಜ: ಚಿತ್ರರಂಗದಲ್ಲಿ ಆತಂಕ

ತಮಿಳು ಚಿತ್ರರಂಗದ ದಿಗ್ಗಜ ನಿರ್ದೇಶಕ ಭಾರತಿರಾಜ ಆರೋಗ್ಯ ಸ್ಥಿರವಾಗಿದ್ದರೂ ಇನ್ನೂ ಕ್ರಿಟಿಕಲ್ ಕೇರ್ ಯೂನಿಟ್ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟದ ತೀವ್ರ ತೊಂದರೆಯಿಂದ ಡಿಸೆಂಬರ್ 27ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರ ಕುರಿತು ಆಸ್ಪತ್ರೆ ಅಧಿಕೃತ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಿದೆ.

ಬುಲೆಟಿನ್ ಪ್ರಕಾರ, ಭಾರತಿರಾಜ ಅವರಿಗೆ ತೀವ್ರ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದ್ದು, ಅಂಗಾಂಗಗಳ ಕಾರ್ಯಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ವೈದ್ಯರ ತಜ್ಞ ತಂಡ ಅವರ ಮೇಲೆ ನಿರಂತರ ನಿಗಾ ವಹಿಸಿದ್ದು, ಸ್ಥಿತಿ ಸ್ಥಿರವಾಗಿದೆ ಎಂದರೂ ಸದ್ಯ CCU ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದೆ.

ಈ ಸುದ್ದಿಯ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹಲವು ಖ್ಯಾತ ನಿರ್ದೇಶಕರು, ನಿರ್ಮಾಪಕರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಎಆರ್ ಮುರುಗದಾಸ್, ಲಿಂಗುಸಾಮಿ, ಅಮೀರ್, ಸೀನು ರಾಮಸಾಮಿ, ಚಿತ್ರಾ ಲಕ್ಷ್ಮಣನ್, ಸೀಮನ್ ಸೇರಿದಂತೆ ಅನೇಕರು ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ.

84 ವರ್ಷದ ಭಾರತಿರಾಜ ಇತ್ತೀಚೆಗೆ ತಮ್ಮ ಪುತ್ರ, ನಟ-ನಿರ್ದೇಶಕ ಮನೋಜ್ ಭಾರತಿರಾಜ ಅವರನ್ನು ಕಳೆದುಕೊಂಡ ದುಃಖದಿಂದ ಹೊರಬರಲಾಗದೆ ಇದ್ದರು ಎನ್ನಲಾಗಿದೆ. 2025ರ ಮಾರ್ಚ್ 25ರಂದು ಮನೋಜ್ ಹೃದಯಾಘಾತದಿಂದ ನಿಧನರಾದ ಬಳಿಕ ಭಾರತಿರಾಜ ತೀವ್ರವಾಗಿ ಮನೋನೊಂದಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ಪದ್ಮಶ್ರೀ ಹಾಗೂ ಆರುಕ್ಕೂ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳ ಪುರಸ್ಕೃತರಾದ ಭಾರತಿರಾಜ, ಸ್ಟುಡಿಯೋ ಚಿತ್ರೀಕರಣಕ್ಕೆ ಬದಲಾಗಿ ನೈಜ ಗ್ರಾಮೀಣ ಬದುಕನ್ನು ಸಿನಿಮಾಗಳಲ್ಲಿ ತೋರಿಸಿ ತಮಿಳು ಚಿತ್ರರಂಗದ ಇತಿಹಾಸವನ್ನೇ ಬರೆದವರು. ನಾಲ್ಕು ದಶಕಗಳ ಕಾಲ ಹಲವು ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಈ ದಿಗ್ಗಜರ ಆರೋಗ್ಯ ವಿಚಾರ ಅಭಿಮಾನಿಗಳಲ್ಲಿ ತೀವ್ರ ಚಿಂತೆಯನ್ನು ಹುಟ್ಟಿಸಿದೆ.

ಸದ್ಯ ಎಲ್ಲೆಡೆಯಿಂದ ಭಾರತಿರಾಜ ಶೀಘ್ರ ಚೇತರಿಸಿಕೊಳ್ಳಲಿ ಎಂಬ ಹಾರೈಕೆಗಳು ಹರಿದು ಬರುತ್ತಿವೆ.

ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ ಇನ್ನಿಲ್ಲ!

0

ಪುಣೆ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ (81) ಇಂದು ಮುಂಜಾನೆ ಪುಣೆಯಲ್ಲಿ ನಿಧನರಾದರು.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಿನ ಜಾವ ಸುಮಾರು 3:30ಕ್ಕೆ ಕೊನೆಯುಸಿರೆಳೆದರು. ಕಲ್ಮಾಡಿ ಅವರು ಪತ್ನಿ, ಮಗ–ಸೊಸೆ, ಇಬ್ಬರು ವಿವಾಹಿತ ಪುತ್ರಿಯರು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಪುಣೆಯ ಎರಾಂಡ್‌ವಾನೆ ಪ್ರದೇಶದಲ್ಲಿರುವ ನಿವಾಸದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ನಂತರ ನವಿ ಪೇತ್‌ನಲ್ಲಿರುವ ವೈಕುಂಠ ಚಿತಾಗಾರದಲ್ಲಿ ಮಧ್ಯಾಹ್ನ 3:30ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ.

ಮಂಗಳೂರು ಮೂಲದ ಡಾ. ಕೆ. ಶಾಮರಾವ್ ಕಲ್ಮಾಡಿ ಮತ್ತು ಶಾಂತಾ ರಾವ್ ದಂಪತಿಯ ಪುತ್ರರಾಗಿದ್ದ ಸುರೇಶ್ ಕಲ್ಮಾಡಿಗೆ ಕೊಂಕಣಿ, ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ ಹಾಗೂ ತುಳು ಭಾಷೆಗಳ ಮೇಲೆ ಪಾಂಡಿತ್ಯವಿತ್ತು. 1960ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿದ ಅವರು 1964 ರಿಂದ 1972ರವರೆಗೆ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿದರು. ಬಳಿಕ 1972 ರಿಂದ 1974ರವರೆಗೆ ಎನ್‌ಡಿಎಯ ವಾಯುಪಡೆ ತರಬೇತಿ ಘಟಕದಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸಿ ಸ್ಕ್ವಾಡ್ರನ್ ಲೀಡರ್ ಹುದ್ದೆಯಲ್ಲಿ ವಾಯುಸೇನೆಯಿಂದ ನಿವೃತ್ತರಾದರು.

1977ರಲ್ಲಿ ಪುಣೆಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಲ್ಮಾಡಿ, 1982 ರಿಂದ 1996ರವರೆಗೆ ಮೂರು ಅವಧಿಗೆ ಶಾಸಕರಾಗಿದ್ದರು. 1998ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದು, 1996ರಲ್ಲಿ 11ನೇ ಮತ್ತು 2004ರಲ್ಲಿ 14ನೇ ಲೋಕಸಭೆಗೆ ಪುಣೆಯಿಂದ ಆಯ್ಕೆಯಾದರು. ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದ ಅವಧಿಯಲ್ಲಿ (1995–96) ಅವರು ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಲ್ಮಾಡಿ ಅವರು 1996 ರಿಂದ 2012ರವರೆಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ, 2000 ರಿಂದ 2013ರವರೆಗೆ ಏಷ್ಯನ್ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ.

‘ಓ ಮೈ ಗಾಡ್–3’ ಸಿನಿಮಾಗಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್ , ರಾಣಿ ಮುಖರ್ಜಿ

ಬಾಲಿವುಡ್‌ನಲ್ಲಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಭಾರೀ ಬಿಗ್ ಅನೌನ್ಸ್‌ಮೆಂಟ್ ಒಂದು ಹೊರಬಿದ್ದಿದೆ. ಅಕ್ಷಯ್ ಕುಮಾರ್ ಹಾಗೂ ರಾಣಿ ಮುಖರ್ಜಿ ‘ಓ ಮೈ ಗಾಡ್–3’ ಸಿನಿಮಾಗಾಗಿ ಕೈಜೋಡಿಸುತ್ತಿದ್ದು, 2026ಕ್ಕೆ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಕ್ಕಂತಾಗಿದೆ.

ಇದಕ್ಕೂ ಮೊದಲು ‘ಓ ಮೈ ಗಾಡ್’ ಪಾರ್ಟ್–1 ಮತ್ತು ಪಾರ್ಟ್–2 ಧಾರ್ಮಿಕ ವಿಚಾರಗಳನ್ನು ನೇರವಾಗಿ ಪ್ರಶ್ನಿಸಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಈಗ ಆ ಸರಣಿಯ ಮೂರನೇ ಭಾಗವೂ ಅಧಿಕೃತವಾಗಿ ಸೆಟ್ಟೇರಲು ಸಿದ್ಧವಾಗಿದ್ದು, ಈ ಬಾರಿ ಕಥೆ ಇನ್ನಷ್ಟು ಪವರ್‌ಫುಲ್ ಆಗಿರಲಿದೆ ಎನ್ನಲಾಗ್ತಿದೆ.

‘ಓ ಮೈ ಗಾಡ್–3’ನಲ್ಲಿ ಅಕ್ಷಯ್ ಕುಮಾರ್ ಜೊತೆಗೆ ರಾಣಿ ಮುಖರ್ಜಿ ಕಾಣಿಸಿಕೊಳ್ಳುತ್ತಿರುವುದು ಈ ಪ್ರಾಜೆಕ್ಟ್‌ ಮೇಲೆ ನಿರೀಕ್ಷೆ ಡಬಲ್ ಮಾಡಿದೆ. ಜೂನ್ ಅಥವಾ ಜುಲೈನಲ್ಲಿ ಶೂಟಿಂಗ್ ಶುರುವಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಸಿನಿಮಾ ಈಗಾಗಲೇ ಟ್ರೆಂಡ್ ಆಗುತ್ತಿದೆ.

ಅಮಿತ್ ರೈ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಬಾರಿ ಹಿಂದಿನ ಎರಡು ಭಾಗಗಳಿಗಿಂತಲೂ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ತಯಾರಾಗಲಿದ್ದು, ಅತಿದೊಡ್ಡ ತಾರಾಗಣ, ಭರ್ಜರಿ ಪ್ರೊಡಕ್ಷನ್ ಮೌಲ್ಯ ಹಾಗೂ ಹಲವು ಸರ್ಪ್ರೈಸ್‌ಗಳೊಂದಿಗೆ ‘ಓ ಮೈ ಗಾಡ್–3’ ಪ್ರೇಕ್ಷಕರ ಮುಂದೆ ಬರಲಿದೆ ಎನ್ನಲಾಗಿದೆ.

error: Content is protected !!