ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರ್ಕಾರ ಮೇಜರ್ ಸರ್ಜರಿ ನಡೆಸಿದೆ. 23 ಮಂದಿ ಐಪಿಎಸ್ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದ್ದು, 20 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಡಿಐಜಿಪಿಯಾಗಿ ಬಡ್ತಿ ಪಡೆದ ಅಧಿಕಾರಿಗಳು:
ಭೀಮಾಶಂಕರ್ ಗುಳೇದ್ (ಸಿಐಡಿ – ಆರ್ಥಿಕ ಅಪರಾಧ), ಇಲಕ್ಕಿಯ ಕರುಣಾಕರನ್ (ವೈರ್‌ಲೆಸ್), ವೇದಮೂರ್ತಿ (ರಾಜ್ಯ ಗುಪ್ತಚರ), ಕೆ.ಎಂ. ಶಾಂತರಾಜು (ಐಎಸ್‌ಡಿ), ಹನುಮಂತರಾಯ (ಎಸ್‌ಎಚ್‌ಆರ್‌ಸಿ), ಡಿ. ದೇವರಾಜು (ಪೊಲೀಸ್ ತರಬೇತಿ), ಡಾ. ಸಿರಿ ಗೌರಿ (ಕರ್ನಾಟಕ ಲೋಕಾಯುಕ್ತ), ಡಾ. ಕೆ. ಧರಣಿದೇವಿ (ಗುಪ್ತಚರ), ಎಸ್. ಸವಿತಾ (ಗೃಹರಕ್ಷಕ ದಳ), ಸಿ.ಕೆ. ಬಾಬಾ (ಕೆಎಸ್‌ಆರ್‌ಪಿ), ಅಬ್ದುಲ್ ಅಹದ್ (ನಿರ್ದೇಶಕರು, ಬಿಎಂಟಿಸಿ),
ಎಸ್. ಗಿರೀಶ್ (ಎಎನ್‌ಟಿಎಫ್), ಎಂ. ಪುಟ್ಟಮಾದಯ್ಯ (ಪ್ರಾಂಶುಪಾಲ, ಪಿಟಿಸಿ ಕಲಬುರಗಿ), ಟಿ. ಶ್ರೀಧರ್ (ಪೊಲೀಸ್ ಮುಖ್ಯ ಕಚೇರಿ), ಎ.ಎನ್. ಪ್ರಕಾಶ್ ಗೌಡ (ಎಸ್‌ಎಎಫ್), ಜಿನೇಂದ್ರ ಖನಗಾವಿ (ಕಾರಾಗೃಹ), ಜೆ.ಕೆ. ರಶ್ಮಿ (ರೈಲ್ವೆ), ಟಿ.ಪಿ. ಶಿವಕುಮಾರ್ (ಎಸ್‌ಸಿಆರ್‌ಬಿ), ವಿಷ್ಣುವರ್ಧನ್ (ನಿರ್ದೇಶಕ, ಕೆಪಿಎ), ಡಾ. ಸಂಜೀವ್ ಎಂ. ಪಾಟೀಲ್ (ಡಿಐಜಿಪಿ – ಜನರಲ್ ಅಪ್‌ಗ್ರೇಡ್), ಕೆ. ಪರಶುರಾಮ (ಸಿಟಿಆರ್‌ಎಸ್), ಹೆಚ್.ಡಿ. ಆನಂದ್ ಕುಮಾರ್ (ಸೈಬರ್ ಕಮಾಂಡ್), ಕಲಾ ಕೃಷ್ಣಸ್ವಾಮಿ (ಅಪರಾಧ – ಅಪ್‌ಗ್ರೇಡ್).
ಐಜಿಪಿಯಾಗಿ ಬಡ್ತಿ:
ಡಾ. ಎಂ.ಬಿ. ಬೋರಲಿಂಗಯ್ಯ (ದಕ್ಷಿಣ ವಲಯ), ಅಜಯ್ ಹಿಲೋರಿ (ಹೆಚ್ಚುವರಿ ಪೊಲೀಸ್ ಆಯುಕ್ತ – ಅಪರಾಧ ವಿಭಾಗ, ಬೆಂಗಳೂರು) ತಮ್ಮ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು:
ಚಂದ್ರಕಾಂತ್ ಎಂ.ವಿ (ಬೆಂಗಳೂರು ಗ್ರಾಮಾಂತರ), ಸೈದುಲು ಅಡಾವತ್ (ವೈಟ್‌ಫೀಲ್ಡ್ ಡಿಸಿಪಿ), ಯತೀಶ್ ಎನ್ (ಪಶ್ಚಿಮ ವಿಭಾಗ ಡಿಸಿಪಿ), ಕೆ. ರಾಮರಾಜನ್ (ಬೆಳಗಾವಿ), ಬಿ. ನಿಖಿಲ್ (ಶಿವಮೊಗ್ಗ), ಅರುಣಾಂಗ್ಶು ಗಿರಿ (ರಾಯಚೂರು), ಶುಭನ್ವಿತಾ (ಹಾಸನ), ಮಿಥುನ್ ಕುಮಾರ್ (ಈಶಾನ್ಯ ವಿಭಾಗ ಡಿಸಿಪಿ), ವಿಕ್ರಮ್ ಆಮ್ಟೆ (ಪೂರ್ವ ವಿಭಾಗ ಡಿಸಿಪಿ), ಜಿತೇಂದ್ರ ಕುಮಾರ್ ದಯಾಮ್ (ಚಿಕ್ಕಮಗಳೂರು), ಕನ್ನಿಕಾ ಸುಕ್ರಿವಾಲ್ (ಕೋಲಾರ),
ಬಿಂದು ಮಣಿ (ಕೊಡಗು), ಮೊಹಮ್ಮದ್ ಸುಜೀತಾ ಎಂ.ಎಸ್ (ಆಗ್ನೇಯ ವಿಭಾಗ ಡಿಸಿಪಿ), ಶೋಭಾರಾಣಿ (ಮಂಡ್ಯ), ಸಾರಾ ಫಾತಿಮಾ (ರೈಲ್ವೆ), ಮುತ್ತುರಾಜು ಎಂ (ಚಾಮರಾಜನಗರ), ಡಾ. ಕವಿತಾ ಬಿ.ಟಿ (ಸಿಐಡಿ), ಸಜೀತ್ (ಸಿಐಡಿ), ಪವನ್ ನೆಜ್ಜೂರ್ (ಬಳ್ಳಾರಿ). ಮೈಸೂರು ಎಸ್‌ಪಿ ಆಗಿ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.