Home Blog Page 3025

ನಡೆಯುತ್ತಲೇ ಜನ ಸಾಯುತ್ತಾರಂತೆ! ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀ!

ವಿಜಯಸಾಕ್ಷಿ ಸುದ್ದಿ, ಹಾಸನ

ಕೋಡಿಮಠದ ಶ್ರೀಗಳು ಭಯಾನಕ ಭವಿಷ್ಯ ನುಡಿದಿದ್ದಾರೆ. ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಬರಲಿದೆ ಎಂಬ ಭಯಾನಕ ಭವಿಷ್ಯ ನುಡಿದಿದ್ದಾರೆ. ಅರಸೀಕೆರೆಯ ಕೋಡಿಮಠದಲ್ಲಿ ಮಾತನಾಡಿದ ಶ್ರೀ, ಸದ್ಯ ದೇಶ ಕಾಡುತ್ತಿರುವ ಕೊರೊನಾ ದೂರವಾಗಲು ಸುಮಾರು 10 ವರ್ಷಗಳು ಬೇಕಾಗಬಹುದು. ಭೂಮಿಯಲ್ಲಿ ಈಗಾಗಲೇ ಕೋಟ್ಯಂತರ ಜನರ ಶವ ಹೂತು ಹಾಕಲಾಗಿದೆ. ಅದೇ ವಿಷವಾಗಿ ಭೂಮಿಯಿಂದ ಹೊರ ಬರಲಿದೆ. ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಮುಂದೆ ಬರಲಿದೆ ಎಂದು ಹೇಳಿದ್ದಾರೆ.

ಈ ರೋಗ ಕೊರೊನಾಕ್ಕಿಂತಲೂ ಭಯನಕವಾಗಿದೆ. ಈ ವರ್ಷ “ಕುಂಭದಿ ಗುರು ಬರಲು ತುಂಬುವವು ಕೆರೆ ಕಟ್ಟೆ, ಶಂಭುವಿನ ಪದಸಾಕ್ಷಿ ಡಂಬವೆನ್ನೆಲು ಬೇಡಿದೆನಾ’ ಅಂದರೆ, ಪ್ರಳಯದ ಮಳೆ ಆಗಲಿದೆ. ಮಿಂಚಿನಿಂದ ದುರ್ಯೋಗ ಇದೆ. ಜಗತ್ತಿನಲ್ಲಿ ಅಪಾಯಕಾರಿ ಘಟನೆಯೊಂದು ನಡೆಯಲಿದೆ. ಇದರ ಜೊತೆಗೆ ರಾಜಕೀಯ ಭೀತಿ ಎದುರಾಗಲಿದೆ. ಜಗತ್ತಿನಲ್ಲಿ ದೊಡ್ಡ ದೊಡ್ಡ ತಲೆಗಳು ಉರುಳಲಿವೆ” ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಸಾಮೂಹಿಕ ಸಾವುಗಳು ಸಂಭವಿಸಲಿವೆ. ಸತ್ತು ಹೂಳಲ್ಪಟ್ಟವರು ಕೂಡ ಮಾತನಾಡುತ್ತಾರೆ. ಅದನ್ನು ನೋಡಬಹುದು, ನೀವು ಅವರ ಜೊತೆ ಮಾತನಾಡಲು ಸಾಧ್ಯವಿಲ್ಲ. ಇಂಥ ಪ್ರೇತಾತ್ಮಗಳು ಸದ್ಯದಲ್ಲಿಯೇ ಕಂಡರೂ ಕಾಣಿಸದಂತಾಗುತ್ತದೆ. ಆದರೆ, ರಾಜ್ಯಕ್ಕೆ ಅಷ್ಟೊಂದು ದೊಡ್ಡ ಮಟ್ಟದ ತೊಂದರೆಗಳು ಆಗುವುದಿಲ್ಲ ಎಂದು ಹೇಳಿದ್ದಾರೆ.

ಆಹಾರ, ಪಾನೀಯಗಳು ಆರೋಗ್ಯಕ್ಕೆ ಅಷ್ಟೊಂದು ಸುರಕ್ಷಿತವಲ್ಲ; ನೆಸ್ಲೆ

ವಿಜಯಸಾಕ್ಷಿ ಸುದ್ದಿ ನವದೆಹಲಿ

ವಿಶ್ವದಲ್ಲಿನ ಅತಿ ದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ನೆಸ್ಲೆ ಕಂಪನಿ ಸತ್ಯವೊಂದನ್ನು ಒಪ್ಪಿಕೊಂಡಿದೆ.

ತಮ್ಮ ಕಂಪನಿಯ ಶೇ. 60ರಷ್ಟು ಮುಖ್ಯ ಆಹಾರ ಮತ್ತು ಪಾನೀಯಗಳು ಆರೋಗ್ಯಕ್ಕೆ ಅಷ್ಟೊಂದು ಸುರಕ್ಷಿತವಲ್ಲ. ಆರೋಗ್ಯ ಮಾನ್ಯತೆ ವ್ಯಾಖ್ಯಾನಕ್ಕೆ ಅನುಗುಣವಾಗಿಲ್ಲ. ಎಷ್ಟೇ ನವೀಕರಮ ಮಾಡಿದರೂ ಅವು ಆರೋಗ್ಯಕರವಲ್ಲ ಎಂದು ಹೇಳಿಕೊಂಡಿದೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ.

ಸಾಕು ಪ್ರಾಣಿಗಳ ಆಹಾರ, ವೈದ್ಯಕೀಯ ಪೌಷ್ಟಿಕಾಂಶಗಳನ್ನು ಹೊರತು ಪಡಿಸಿದರೆ, ನಮ್ಮ ಕಂಪನಿಯ ಶೇ. 37ರಷ್ಟು ಆಹಾರ ಮತ್ತು ಪಾನೀಯಗಳು ಮಾತ್ರ ಆಸ್ಟ್ರೇಲಿಯಾದ ಹೆಲ್ತ್ ರೇಟಿಂಗ್ ವ್ಯವಸ್ಥೆಯಿಂದ 3.5 ಸ್ಟಾರ್ ಪಡೆದಿವೆ ಎಂದು ನೆಸ್ಲೆ ಕಂಪನಿ ತಿಳಿಸಿರುವುದಾಗಿ ವರದಿಯಾಗಿದೆ.

ಕಿಟ್ ಕ್ಯಾಟ್ ಚಾಕಲೇಟ್, ಮ್ಯಾಗಿ ಸೇರಿದಂತೆ ಹಲವು ತಿನಿಸುಗಳು ದೇಶದಲ್ಲಿ ದೊಡ್ಡ ಮಟ್ಟದ ಹೆಸರು ಪಡೆದಿವೆ. ಸದ್ಯ ಈ ಕಂಪನಿ, ಸತ್ಯ ಒಪ್ಪಿಕೊಂಡಿದೆ. ಇದರೊಂದಿಗೆ 3.5 ಅಥವಾ ಅದಕ್ಕಿಂತ ಹೆಚ್ಚು ಸ್ಟಾರ್ ಗಳು ಬಂದರೆ ಆರೋಗ್ಯ ಮಾನ್ಯತೆ ಪಡೆದ ವ್ಯಾಖ್ಯಾನಕ್ಕೆ ಅನುಗುಣವಾಗಿದ್ದಂತೆ ಎಂದು ತಾನೇ ಹೇಳಿಕೊಂಡಿದೆ.

ಇದರೊಂದಿಗೆ ನೆಸ್ಲೆ ಕಂಪನಿಯ ಶೇ. 60ರಷ್ಟು ಆಹಾರ ಉತ್ಪನ್ನಗಳು ಆರೋಗ್ಯ ಮಾನ್ಯತೆ ತಲುಪಲು ವಿಫಲವಾಗಿವೆ. ಅಲ್ಲದೇ, ಶುದ್ಧ ಕಾಫಿ ಹೊರತು ಪಡಿಸಿದರೆ ಶೇ. 96ರಷ್ಟು ಪಾನೀಯಗಳು ಕೂಡ ಆರೋಗ್ಯ ಮಾನ್ಯತೆ ಪಡೆಯಲು ವಿಫಲವಾಗಿವೆ. ಶೇ. 99ರಷ್ಟು ಮಿಠಾಯಿ ಹಾಗೂ ಐಸ್ ಕ್ರೀಂ ಕೂಡ ಮಾನ್ಯತೆಯ ವ್ಯಾಖ್ಯಾನಕ್ಕೆ ಅನುಗುಣವಾಗಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ನಮ್ಮ ಆಹಾರ ಉತ್ಪನ್ನಗಳನ್ನು ಮತ್ತಷ್ಟು ಆರೋಗ್ಯಯುಕ್ತ ಮಾಡಲು ನಾವು ದಶಕಗಳಿಂದಲೂ ಪ್ರಯತ್ನ ಮಾಡುತ್ತಿದ್ದೇವೆ. ಉಪ್ಪು ಮತ್ತು ಸೋಡಿಯಂ ಬಳಕೆಯ ಪ್ರಮಾಣ ಕಡಿಮೆ ಮಾಡಿದ್ದೇವೆ. ಎಷ್ಟೇ ಪ್ರಯತ್ನಿಸಿದರೂ ಕೆಲವೊಂದಿಷ್ಟು ಆಹಾರಗಳು ಮಾನ್ಯತೆಯ ವ್ಯಾಖ್ಯಾನಕ್ಕೆ ಅನುಗುಣಕ್ಕೆ ಬರುವುದಿಲ್ಲ ಎಂದು ಕೂಡ ಕಂಪನಿ ಒಪ್ಪಿಕೊಂಡಿದೆ.

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಸಭೆ- ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಇಷ್ಟಿದ್ದರೂ ಕಾಂಗ್ರೆಸ್ ಪಕ್ಷದ ಮುಖಂಡರೂ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಾಜಿ‌ ಸದಸ್ಯರೊಬ್ಬರು ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಇವರು ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವ ಮೂಲಕ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡ ಪಾಲಿಕೆಯ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರು ಎಂಬುವವರೇ ಕೊವಿಡ್ ನಿಯಮ ಗಾಳಿಗೆ ತೂರಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅಲ್ಲದೇ, ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ಬಹುತೇಕರು ಮಾಸ್ಕ್ ಹಾಕಿಕೊಳ್ಳದೆ ಸಾಮಾಜಿಕ ಅಂತರ ಕಾಪಾಡದೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಅಲ್ತಾಫ್ ನವಾಜ್ ಕಿತ್ತೂರ ಅವರು ಹಳೇ ಹುಬ್ಬಳ್ಳಿಯ ಅಲ್ತಾಪ್ ಪ್ಲಾಟ್ ಮಸೀದಿಯಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಇಳಿ ಮುಖವಾಗುತ್ತಿದೆ‌. ಆದರೂ ಜಿಲ್ಲೆಯಲ್ಲಿ ಜೂ. 7ರವರೆಗೆ ಕಠಿಣ ಲಾಕ್ ಡೌನ್ ನ್ನು ಜಿಲ್ಲಾಡಳಿತ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಹುಟ್ಟು ಹಬ್ಬ ಆಚರಿಸಿಕೊಂಡಿರುವ ನಾಯಕರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಸಭೆ- ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಇಷ್ಟಿದ್ದರೂ ಕಾಂಗ್ರೆಸ್ ಪಕ್ಷದ ಮುಖಂಡರೂ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಾಜಿ‌ ಸದಸ್ಯರೊಬ್ಬರು ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಇವರು ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವ ಮೂಲಕ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡ ಪಾಲಿಕೆಯ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರು ಎಂಬುವವರೇ ಕೊವಿಡ್ ನಿಯಮ ಗಾಳಿಗೆ ತೂರಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅಲ್ಲದೇ, ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ಬಹುತೇಕರು ಮಾಸ್ಕ್ ಹಾಕಿಕೊಳ್ಳದೆ ಸಾಮಾಜಿಕ ಅಂತರ ಕಾಪಾಡದೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಅಲ್ತಾಫ್ ನವಾಜ್ ಕಿತ್ತೂರ ಅವರು ಹಳೇ ಹುಬ್ಬಳ್ಳಿಯ ಅಲ್ತಾಪ್ ಪ್ಲಾಟ್ ಮಸೀದಿಯಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಇಳಿ ಮುಖವಾಗುತ್ತಿದೆ‌. ಆದರೂ ಜಿಲ್ಲೆಯಲ್ಲಿ ಜೂ. 7ರವರೆಗೆ ಕಠಿಣ ಲಾಕ್ ಡೌನ್ ನ್ನು ಜಿಲ್ಲಾಡಳಿತ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಹುಟ್ಟು ಹಬ್ಬ ಆಚರಿಸಿಕೊಂಡಿರುವ ನಾಯಕರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಆತಂಕ ಮೂಡಿಸುತ್ತಿದೆ ಬ್ಲ್ಯಾಕ್ ಫಂಗಸ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಒಂದೇ ದಿನ 38 ಜನರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆಯಾಗಿದ್ದು, ಒಟ್ಟು 51 ಜನರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಬ್ಲ್ಯಾಕ್ ಫಂಗಸ್ ಸೋಂಕು 1,370 ಜನರಿಗೆ ತಗುಲಿದೆ. ಇವರಲ್ಲಿ 27 ಜನರು ಗುಣಮುಖರಾದರೆ, 1,292 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದ ಬೆಂಗಳೂರು- 557, ಧಾರವಾಡ- 156, ಕಲಬುರ್ಗಿ- 104, ಬಾಗಲಕೋಟೆ-70, ವಿಜಯಪುರ- 57, ಬಳ್ಳಾರಿ- 42, ರಾಯಚೂರು- 46, ಶಿವಮೊಗ್ಗ- 38, ದಕ್ಷಿಣಕನ್ನಡ, ಮೈಸೂರು ತಲಾ 35, ಚಿತ್ರದುರ್ಗ 34, ದಾವಣಗೆರೆ 26, ಬೆಂಗಳೂರು ಗ್ರಾಮಂತರ 20, ಕೊಪ್ಪಳ 16, ಗದಗ 11, ಉಡುಪಿ 10, ತುಮಕೂರು 10, ಹಾಸನ 9 ಮತ್ತು ಹಾವೇರಿ 8 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ.

ರಾಜ್ಯದ ಬಹುತೇಕ ಎಲ್ಲ ಭಾಗದಲ್ಲೂ ಬ್ಲ್ಯಾಕ್ ಫಂಗಸ್ ಹಬ್ಬಿದ್ದು, ಒಟ್ಟು 1370 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ.

2024ರ ವಿಶ್ವಕಪ್ ನಲ್ಲಿ ಆಡುವ ತಂಡಗಳ ಸಂಖ್ಯೆ ಹೆಚ್ಚಿಸಿದ ಐಸಿಸಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಐಸಿಸಿಯು ಪುರುಷರ ವಿಶ್ವಕಪ್ ಕ್ರಿಕೆಟ್ ನ 2024 ರಿಂದ 2031ರ ವರೆಗಿನ ಶೆಡ್ಯೂಲ್ ಗಳನ್ನು ಬಿಡುಗಡೆ ಮಾಡಿದೆ.
ಇದರ ಪ್ರಕಾರ 2027 ಹಾಗೂ 2031ರಲ್ಲಿ 14 ತಂಟಗಳ ಟೂರ್ನಿ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ. ಅಲ್ಲದೇ, ಮಿನಿ ವಿಶ್ವಕಪ್ ಎಂದೇ ಕರೆಯಿಸಿಕೊಳ್ಳುವ ಚಾಂಪಿಯನ್ಸ್ ಟ್ರೋಫಿಗೆ ಮಾನ್ಯತೆ ನೀಡುವ ಕುರಿತು ಕೂಡ ಐಸಿಸಿ ಹೇಳಿದೆ. ಈ ಟೂರ್ನಿಯನ್ನು 2025 ಹಾಗೂ 2029ರಲ್ಲಿ ಆಯೋಜಿಸಲಾಗುವುದು. ಈ ಟೂರ್ನಿಗಳಲ್ಲಿ 8 ತಂಡಗಳು ಭಾಗವಹಿಸಲಿವೆ ಎಂದು ಐಸಿಸಿ ತಿಳಿಸಿದೆ.


ಇತ್ತೀಚೆಗಷ್ಟೇ ಮುಕ್ತಾಯವಾಗಿರುವ ಐಸಿಸಿ ವಿಶ್ವಕಪ್ – 2019ರಲ್ಲಿ 10 ತಂಡಗಳು ಭಾಗವಹಿಸಿದ್ದವು. ಆದರೆ, ಅದಕ್ಕೂ ಮೊದಲು ನಡೆದಿದ್ದ 2019ರ ವಿಶ್ವಕಪ್ ನಲ್ಲಿ 14 ತಂಡಗಳು ಭಾಗವಹಿಸಿದ್ದವು. ಹೀಗಾಗಿ 2027 ಹಾಗೂ 2031ರಲ್ಲಿಯೂ 14 ತಂಟಗಳ ಟೂರ್ನಿ ನಡೆಸಲು ಐಸಿಸಿ ನಿರ್ಧರಿಸಿದೆ.

2027 ಹಾಗೂ 2031ರಲ್ಲಿ ನಡೆಯುವ ಪುರುಷರ ವಿಶ್ವಕಪ್ ಪಂದ್ಯಾವಳಿಯಲ್ಲಿ 14 ತಂಡಗಳಿಂದ ಒಟ್ಟು 54 ಪಂದ್ಯಗಳು ನಡೆಯಲಿವೆ. 2024, 2026, 2028, 2030ರಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲ್ಲಿದ್ದು, 20 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ.

2015ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ನಡೆದ ವಿಶ್ವಕಪ್ ಸಂದರ್ಭದಲ್ಲಿ 14 ತಂಡಗಳು ಭಾಗವಹಿಸಿದ್ದವು. ಆದರೆ, 2019ರಲ್ಲಿ ನಡೆದ ವಿಶ್ವಕಪ್ ವೇಳೆ ತಂಡಗಳ ಸಂಖ್ಯೆಯನ್ನು 10ಕ್ಕೆ ಇಳಿಸಲಾಗಿತ್ತು. ಆಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

2021ರ ಟಿ20 ವಿಶ್ವಕಪ್ ಟೂರ್ನಿಗೆ ಯುಎಇನ ಮಧ್ಯ ಪ್ರಾಚ್ಯದಲ್ಲೊಂದು ಸ್ಥಳ ಸಿಗಬಹುದಾದ ಸಾಧ್ಯತೆ ಬಗ್ಗೆ ಗಮನ ಹರಿಸಿ ಎಂದು ಐಸಿಸಿ ಆಡಳಿತ ಮಂಡಳಿಯು ನಿರ್ವಹಣಾ ಸಮಿತಿಗೆ ಸೂಚಿಸಿದೆ. ಟೂರ್ನಿ ಟೂರ್ನಿ ಎಲ್ಲಿಯೇ ನಡೆದರೂ ಬಿಸಿಸಿಐಯೇ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಅದರ ಆಯೋಜಕವೆನಿಸಿಕೊಳ್ಳುವುದು ಎಂದು ತನ್ನ ಅಧಿಕೃತ ಪ್ರಕಟಣೆಯಲ್ಲಿ ಐಸಿಸಿ ಹೇಳಿದೆ.

ರಾಜ್ಯದಲ್ಲಿ ವಿಸ್ತರಣೆಯಾಗುವುದೇ ಲಾಕ್ ಡೌನ್?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯ ಸೇರಿದಂತೆ ದೇಶದಲ್ಲಿ ಸೋಂಕಿನ ಆರ್ಭಟ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದಲ್ಲಿ ಜೂ. 7ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಆ ನಂತರವೂ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆಯ ಕುರಿತು ಚರ್ಚೆಗಳು ರಾಜ್ಯ ಸರ್ಕಾರದಲ್ಲಿ ನಡೆಯುತ್ತಿವೆ. ಇಂದು ಸರ್ಕಾರ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ಲಾಕ್ ಡೌನ್ ಕುರಿತು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಇಂದು ಉನ್ನತ ಮಟ್ಟದ ತಜ್ಞರ ಜೊತೆ ಲಾಕ್ ಡೌನ್ ಕುರಿತು ಸಿಎಂ ಅವರು ತಮ್ಮ ಕೃಷ್ಣಾ ನಿವಾಸದಲ್ಲಿ ಸಂಜೆ 4.30ಕ್ಕೆ ಸಭೆ ನಡೆಸಲಿದ್ದಾರೆ. ಆ ನಂತರ ಸಂಜೆ 6ಕ್ಕೆ ಕೊರೊನಾ ತಜ್ಞರು ನೀಡಿರುವ ವರದಿ ಕುರಿತು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಕಾವೇರಿ ನಿವಾಸದಲ್ಲಿ ಚರ್ಚೆ ನಡೆಸಲಿದ್ದಾರೆ.

ಈಗಾಗಲೇ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಹಲವರು ಪ್ರಮುಖ ಸಚಿವರು ಜೂ. 7ರ ನಂತರವೂ ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತು ಒಲವು ತೋರಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ ಅವರು ಜೂ. 7ರ ನಂತರ ಹಂತ ಹಂತವಾಗಿ ಅನ್ ಲಾಕ್ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಹೀಗಾಗಿ ತಜ್ಞರ ವರದಿಯೊಂದಿಗೆ ಸಚಿವರ ಅಭಿಪ್ರಾಯಗಳ ಕುರಿತು ಸಂಜೆ ಚರ್ಚೆಯಾಗಲಿದೆ. ಈ ಸಂದರ್ಭದಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಬೇಕಾ? ಬೇಡವಾ? ಎಂಬುವುದನ್ನು ನಿರ್ಧರಿಸುವ ಸಾಧ್ಯತೆ ಇದೆ.

ತಜ್ಞರು, ಕೊರೊನಾ ಸೋಂಕನ್ನು ನಿಯಂತ್ರಿಸಲು ಇವರು ಏಕೈಕ ಮಾರ್ಗ ಲಾಕ್ ಡೌನ್ ಮಾತ್ರ. ಹೀಗಾಗಿ ಲಾಕ್ಡೌನ್ ಅನ್ನು ಕಟ್ಟು ನಿಟ್ಟಾಗಿ ಜಾರಿಗೆ ತನ್ನಿ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಅಲ್ಲದೆ, ಜೂನ್ ಕೊನೆಯವರೆಗೆ ಲಾಕ್ ಡೌನ್ ಇದ್ದರೆ ಒಳ್ಳೆಯದು ಎಂದು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಲಾಕ್ ಡೌನ್ ಮುಂದುವರೆಯುವ ಸಾಧ್ಯತೆಯೇ ದಟ್ಟವಾಗಿದೆ.

ಈಗಾಗಲೇ ರಾಜ್ಯ ಹಾಗೂ ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಜೂ. 7ರ ನಂತರ ಲಾಕ್ ಡೌನ್ ಸಡಿಲಿಕೆ ಮಾಡಿ, ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ.

ಇನ್ನೂ ಬಹುತೇಕ ಸಚಿವರು ಲಾಕ್ ಡೌನ್ ವಿಸ್ತರಣೆಯ ಕುರಿತು ಸಲಹೆ ನೀಡಿದ್ದಾರೆ. ಹೀಗಾಗಿ ಇಂದಿನ ಸಭೆಯಲ್ಲಿ ಲಾಕ್ ಡೌನ್ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಬಹುದು ಎನ್ನಲಾಗುತ್ತಿದೆ.

ಅವ್ವನೂ ಇಲ್ಲ, ಅಪ್ಪಾನೂ ಇಲ್ಲ, ಅವ್ವನ ಹೊಟ್ಟ್ಯಾನ ಪಾಪುನೂ ಇಲ್ಲ ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುವ ತಬ್ಬಲಿ ಮಗು

ವಿಜಯಸಾಕ್ಷಿ ಸುದ್ದಿ, ರಾಯಚೂರು

ಮಹಾಮಾರಿ ರಾಜ್ಯದಲ್ಲಿ ಸಾಕಷ್ಟು ಪ್ರಾಣಗಳನ್ನು ಬಲಿ ಪಡೆದಿದೆ. ಇದರಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಹಲವು ಮಕ್ಕಳು ಅನಾಥರಾಗಿದ್ದಾರೆ. ಈ ಹೆಮ್ಮಾರಿಯಿಂದ ಜಿಲ್ಲೆಯಲ್ಲಿನ ಒಂದು ಮಗು ಕೂಡ ತಬ್ಬಲಿಯಾಗಿದೆ.

ದೇವದುರ್ಗದ ನಾಲ್ಕು ವರ್ಷದ ಪುಟ್ಟ ಬಾಲಕ ಗಿರೀಶ್ ಒಂದೇ ತಿಂಗಳ ಅಂತರಲ್ಲಿ ತಂದೆ – ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥನಾಗಿದ್ದಾನೆ. ಮಹಾಮಾರಿಯಿಂದಾಗಿ ತಂದೆ ದೇವೇಂದ್ರಪ್ಪ ಏ. 27ರಂದು ಸಾವನ್ನಪ್ಪಿದ್ದರೆ, ತಾಯಿ ಚಂದ್ರಕಲಾ ಮೇ. 14ರಂದು ಸಾವನ್ನಪ್ಪಿದ್ದರು.

ಕೊರೊನಾದಿಂದ ಒದ್ದಾಡುತ್ತಿದ್ದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಚಂದ್ರಕಲಾ ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಮಹಾಮಾರಿಯ ಅಟ್ಟಹಾಸದ ಎದುರು ವೈದ್ಯರ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹೀಗಾಗಿ ಚಂದ್ರಕಲಾ ಅವರು ಉಳಿಯಲಿಲ್ಲ. ಅದರೊಂದಿಗೆ ಮಗುವೂ ಉಳಿಯಲಿಲ್ಲ. ಇದರಿಂದಾಗಿ ಈ ದಂಪತಿಯ ಮೊದಲ ಮಗ ಅನಾಥವಾಗಿದ್ದಾನೆ.

ದೇವದುರ್ಗದ ಗೌಸ್ ಮೊಹಮದ್ ಕಾಲೋನಿ ನಿವಾಸಿಗಳಾದ ದೇವೇಂದ್ರಪ್ಪ ಹಾಗೂ ಚಂದ್ರಕಲಾ ಸಾವಿನಿಂದಾಗಿ ಅವರ ಮಗುವಿಗೆ ದಿಕ್ಕು ತೋಚದಂತಾಗಿದೆ. ಸದ್ಯ ಈ ಮಗು ಅಜ್ಜ, ಅಜ್ಜಿ ಹಾಗೂ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆಯುತ್ತಿದೆ.

ಗಾಳಿ ಪಟ ಹಾರಿಸಲು ಹೋಗಿದ್ದ ಬಾಲಕ ಕೆರೆಯಲ್ಲಿ ಬಿದ್ದು ಸಾವು!

ವಿಜಯಸಾಕ್ಷಿ ಸುದ್ದಿ, ಗದಗ

ಗಾಳಿ ಪಟ ಹಾರಿಸಲು ಹೋಗಿದ್ದ ಬಾಲಕ ಕಾಲು ಜಾರಿ ಕೆರೆಯ ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆ ಸಂಜೆ ಕೆರೆಯ ದಡದಲ್ಲಿ ಬಾಲಕ ಗಾಳಿ ಪಟ ಹಾರಿಸಲು ಹೋಗಿದ್ದ. ಈ ಸಂದರ್ಭದಲ್ಲಿ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾನೆ. ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಜಿಲ್ಲೆಯ ರೋಣ ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಭೀರಪ್ಪ ಹನುಮಪ್ಪ ಹೊನ್ನೂರ್(5) ಸಾವನ್ನಪ್ಪಿದ ದುರ್ದೈವಿ ಬಾಲಕ. ಗ್ರಾಮದಲ್ಲಿನ ಕುಡಿಯುವ ನೀರಿನ ಕೆರೆಯಲ್ಲಿಯೇ ಈ ಬಾಲಕ ಬಿದ್ದಿದ್ದಾನೆ.
ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಮೃತ ದೇಹವನ್ನು ಸ್ಥಳೀಯರು ಕೆರೆಯಿಂದ ಹೊರ ತೆಗೆದಿದ್ದಾರೆ. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಲಾಕ್ ಡೌನ್ ನಿಂದಾಗಿ ಬಾಗಿಲು ಹಾಕಿರುವ ಪುಸ್ತಕ ಮಳಿಗೆಗೆ ಬೆಂಕಿ!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೊರೊನಾ ಲಾಕ್ ಡೌನ್ ನಿಂದಾಗಿ ಸದ್ಯ ಅಂಗಡಿ – ಮುಂಗಟ್ಟುಗಳು ಬಂದ್ ಆಗಿವೆ. ಅದರಲ್ಲಿಯೂ ಲಾಕ್ ಡೌನ್ ಘೋಷಣೆಯಾದಾಗಿನಿಂದಲೂ ಬುಕ್ ಸ್ಟಾಲ್ ಗಳು ಬಾಗಿಲನ್ನೇ ತೆರೆದಿಲ್ಲ. ಹೀಗೆ ಬಾಗಿಲು ಹಾಕಿದ್ದ ಬುಕ್ ಸ್ಟಾಲ್ ಗೆ ಬೆಂಕಿ ಬಿದ್ದಿದ್ದು, ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಈ ಘಟನೆನ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿಯ ಬಿವಿಬಿ ಎಂಜನೀಯರಿಂಗ್ ಕಾಲೇಜಿನ ಎದುರಿಗಿರುವ ಕಾಂಪ್ಲೆಕ್ಸ್ ನಲ್ಲಿನ ರೂಪಾ ಬುಕ್ ಸ್ಟಾಲ್ ಮಳಿಗೆಗೆ ಬೆಂಕಿ ಹತ್ತಿದ್ದು, ಒಳಗಿರುವ ಎಲ್ಲ ಬಗೆಯ ಪುಸ್ತಕಗಳು ಹಾಗೂ ವಸ್ತುಗಳು ಸುಟ್ಟು ಕರಕಲಾಗಿವೆ.
ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಕೂಡೇ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದರಿಂದ ಸಮಯಕ್ಕೆ ಸಾರಿಯಾಗಿ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!