Home Blog Page 3045

ಹಲವು ಜಿಲ್ಲೆಗಳಿಗೆ ನೂತನ ಉಸ್ತುವಾರಿ ಸಚಿವರ ನೇಮಕ ಮಾಡಿದ ಸರ್ಕಾರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯ ಸರ್ಕಾರವು ವಿವಿಧ ಜಿಲ್ಲೆಗಳಿಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಚಿವ ಸಂಪುಟ ವಿಸ್ತರಣೆಯಾದ ನಂತರ ಸರ್ಕಾರವು ಜಿಲ್ಲಾ ಉಸ್ತುವಾರಿಗಳ ನೇಮಕ ಮಾಡಿರಲಿಲ್ಲ. ಅಲ್ಲದೇ, ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದೆ.

ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಇನ್ನುಳಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರನ್ನು ಬಾಗಲಕೋಟೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರನ್ನು ಬೀದರ್,

ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಅವರನ್ನು ಕೋಲಾರ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನು ಕಲಬುರಗಿ ಹಾಗೂ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ್ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಎಲ್ಲ ವಯೋಮಾನದವರಲ್ಲಿಯೂ ಕಂಡು ಬರುತ್ತಿದೆ ಸೋಂಕು!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ದೇಶದಲ್ಲಿ ಮಹಾಮಾರಿಯು ಎಲ್ಲರನ್ನೂ ನಡುಗಿಸುತ್ತಿದೆ. ಅದರಲ್ಲಿಯೂ ಮಹಾರಾಷ್ಟ್ರದಲ್ಲಂತೂ ಅದರ ತೀವ್ರತೆ ಹೇಳತೀರದಾಗಿದೆ. ಸದ್ಯ ಈ ರಾಜ್ಯದಲ್ಲಿ ಮತ್ತೊಂದು ಸಮಸ್ಯೆ ಕಾಡುತ್ತಿದೆ.

ಇಲ್ಲ 10 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ಕೇವಲ ಒಂದು ತಿಂಗಳಲ್ಲಿಯೇ ರಾಜ್ಯದಲ್ಲಿನ ಶೇ. 51ರಷ್ಟ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಏ. 3 ರ ವರೆಗೂ ರಾಜ್ಯದಲ್ಲಿ 10 ವರ್ಷದೊಳಗಿನ 1,34,470 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೇವಲ 25 ದಿನಗಳಲ್ಲಿ 75,387 ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದು, ಶೇ.51ರಷ್ಟು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

10 ವರ್ಷದೊಳಗಿನ ಶೇ. 3.04ರಷ್ಟು ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. 11 – 20ರ ವಯಸ್ಸಿನ ಶೇ. 6.80ರಷ್ಟು ಹಾಗೂ 21 – 30 ರ ವಯಸ್ಸಿನವರಲ್ಲಿ ಶೇ. 17.51ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

31-40 ವರ್ಷದವರಲ್ಲಿಯೇ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ಶೇ. 22.09ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 61 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಲ್ಲಿ ಶೇ. 17.15ರಷ್ಟಿದೆ.

ಆಸ್ಸಾಂನಲ್ಲಿ ಭಾರೀ ಅಂತರ ಕಾಯ್ದುಕೊಂಡ ಬಿಜೆಪಿ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಅಸ್ಸಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಸದ್ಯದ ಅಂಕಿ- ಸಂಖ್ಯೆಯಂತೆ ಎನ್ ಡಿಎ ಮೈತ್ರಿಕೂಟ 72 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಯುಪಿಎ ಮೈತ್ರಿಕೂಟ 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಮುಖಭಂಗ ಅನುಭವಿಸುತ್ತಿದೆ.
ಅಸ್ಸಾಂ ನಲ್ಲಿ ಎನ್ ಡಿಎ ಹಾಗೂ ಯುಪಿಎ ನೇರಾನೇರ ಸ್ಪರ್ಧೆ ಏರ್ಪಡಬಹುದು ಎನ್ನುವ ಲೆಕ್ಕಾಚಾರ ಇತ್ತು. ಎನ್ ಡಿಎ ಆ ಲೆಕ್ಕಾಚಾರವನ್ನ ಬುಡಮೇಲು ಮಾಡಿದೆ.

ಇನ್ನೂ ಯುಪಿಎ ಮೈತ್ರಿಕೂಟ ಫಲಿತಾಂಶಕ್ಕೂ ಮುನ್ನವೇ ತಮ್ಮ ಅಭ್ಯರ್ಥಿಗಳನ್ನ ಆಪರೇಷನ್ ಮೂಲಕ ಕೊಂಡೊಯ್ಯುವ ಭೀತಿಯಿಂದ ಹಿಡಿದಿಟ್ಟುಕೊಂಡಿತ್ತು. ಆದರೆ ಬಿಜೆಪಿ ಆ ಚಿತ್ರಣವನ್ನೇ ಬದಲಾಯಿಸಿಬಿಟ್ಟಿದೆ.

ಕೊರೊನಾ ಮಹಾಮಾರಿಗೆ ವಾರಿಯರ್ ಬಲಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಇಲ್ಲಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್ ಒಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ.

ಇಲ್ಲಿಯ ಭವಾನಿ ನಗರದ ಸೋಫಿಯಾ ಪೀಟರ್ ಕನವಳ್ಳಿ(45) ಮಹಾಮಾರಿಗೆ ಬಲಿಯಾದ ದುರ್ದೈವಿ. ಇವರು ಪತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇವರು ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ 16 ವರ್ಷಗಳಿಂದ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಸೋಫಿಯಾ ಅವರು ಹಗಲು – ರಾತ್ರಿ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಏ. 23ರಂದು ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರಲ್ಲಿ ಏ. 29ರಂದು ಏಕಾಏಕಿ ಉಸಿರಾಟದ ತೊಂದರೆಯಾಗಿ ಸಾವನ್ನಪ್ಪಿದ್ದಾರೆ.

ಸೋಫಿಯಾ ಅವರ ನಿಧನಕ್ಕೆ ಇಡೀ ಕಿಮ್ಸ್ ಸಿಬ್ಬಂದಿ ಕಂಬನಿ ಮಿಡಿದಿದೆ.

ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಗೆಲುವು ಸಾಧಿಸುವರೇ?

ವಿಜಯಸಾಕ್ಷಿ ಸುದ್ದಿ, ಚೆನ್ನೈ

ತಮಿಳುನಾಡು ಚುನಾವಣೆಯಲ್ಲಿ ಯಾವಾಗಲೂ ಸೆಲೆಬ್ರಿಟಿಗಳದ್ದೇ ಸದ್ದು. ಈ ವರ್ಷದ ಚುನಾವಣೆಯಲ್ಲಿ ಸ್ವಂತ ಪಕ್ಷ ಕಟ್ಟಿ ನಟ ಕಟ್ಟಿ ಕಮಲ್ ಹಾಸನ್ ಹೆಚ್ಚು ಸದ್ದು ಮಾಡಿದ್ದರು. ಅಲ್ಲದೇ, ತಮ್ಮ ಐಪಿಎಸ್ ಗೆ ರಾಜೀನಾಮೆ ನೀಡಿ ಅಣ್ಣಾಮಲೈ ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದರು.

ಸದ್ಯ ಕೊಯಮತ್ತೂರು ದಕ್ಷಿಣದಲ್ಲಿ ಸ್ಪರ್ಧೆ ಮಾಡಿದ್ದ ಕಮಲ ಹಾಸನ್ ಗೆ ಆರಂಭಿಕ ಹಿನ್ನಡೆಯಾಗಿದೆ. ಅರವಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಿಂಗಂ ಅಣ್ಣಾಮಲೈ ಗೆ ಆರಂಭಿಕ ಮುನ್ನಡೆ ಸಿಕ್ಕಿದೆ. ಥೌಸಂಡ್ ಲೈಟ್ಸ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ ಖುಷ್ಬೂ ಅವರು ಮುನ್ನಡೆ ಸಾಧಿಸಿದ್ದಾರೆ.

ದೀದಿ ಸ್ಪರ್ಧೆ ಮಾಡಿದ್ದ ನಂದಿಗ್ರಾಮದ ಮೇಲೆಯೇ ಎಲ್ಲರ ಕಣ್ಣು! ಅಷ್ಟಕ್ಕೂ ಅಲ್ಲಿನ ಹಿಂದಿನ ಶಾಸಕರು ಯಾರು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಕೋಲ್ಕತ್ತಾ

ಸದ್ಯ ಐದು ರಾಜ್ಯಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಇಡೀ ದೇಶದ ಜನರ ಕಣ್ಣು ಪಶ್ಚಿಮ ಬಂಗಾಳದ ನಂದಿಗ್ರಾಮದ ಮೇಲಿದೆ. ಏಕೆಂದರೆ ಸಿಎಂ ಮಮತಾ ಬ್ಯಾನರ್ಜಿ ಅವರು ಅಲ್ಲಿ ಸ್ಪರ್ಧೆ ಮಾಡಿದ್ದಾರೆ. ಅಷ್ಟೇ ಅಲ್ಲ ದೀದಿ ತಮ್ಮ ಆಪ್ತನ ವಿರುದ್ಧ ಸ್ಪರ್ಧೆ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಹಾಗೂ ಅವರ ಮಾಜಿ ಆಪ್ತ ಸುವೇಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಹೀಗಾಗಿ ಅವರ ವಿರುದ್ಧವೇ ದೀದಿ ಸ್ಪರ್ಧೆ ಮಾಡಿದ್ದಾರೆ.
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲುತ್ತಾರೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೂಡ ಸೋಲುತ್ತಾರೆ ಎಂದು ಬಿಜೆಪಿ ಚುನಾವಣಾ ಪ್ರಚಾರ ಮಾಡಿತ್ತು. ಮಮತಾ ಬ್ಯಾನರ್ಜಿ ಮಾತ್ರ ಯಾವುದೇ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡದೆ ಕೇವಲ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ್ದರು.

ಈ ಕ್ಷೇತ್ರದಲ್ಲಿ ಈ ಹಿಂದೆ ಸುವೇಂದು ಅಧಿಕಾರಿ ತಂದೆ ಶಾಸಕರಾಗಿದ್ದರು. ಈಗ ಸತತ ಮೂರು ಬಾರಿ ಸುವೇಂದು ಅಧಿಕಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಹಜವಾಗಿ ಈ ಕ್ಷೇತ್ರದ ಮೇಲೆ ಸುವೇಂದು ಅಧಿಕಾರಿಯ ಪ್ರಭಾವವೇ ಜಾಸ್ತಿಯಿದೆ. ಆದರೂ ದೀದಿ ತಮ್ಮ ಹಠ ಬಿಡಲಿಲ್ಲ.

ದ್ರಾವಿಡ ನೆಲದಲ್ಲಿ ಡಿಎಂಕೆ…ಬಂಗಾಳದಲ್ಲಿ ದೀದಿ….ದೇವರ ನಾಡಿನಲ್ಲಿ ಎಲ್ ಡಿಎಫ್ ಮುಂದೆ!

ವಿಜಯಸಾಕ್ಷಿ ಸುದ್ದಿ, ಚೈನ್ನೈ

ದೇಶದಲ್ಲಿನ ಐದು ರಾಜ್ಯಗಳ ವಿಧಾನಸಭ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಎಲ್ಲೆಡೆ ಪ್ರಗತಿಯಲ್ಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಆರಂಭಿಕ ಮುನ್ನಡೆ ಪಡೆದಿದ್ದು, ಕೇರಳದಲ್ಲಿ ಎಲ್ ಡಿಎಫ್ ಮುಂದಿದೆ.

ತಮಿಳುನಾಡಿನಲ್ಲಿ ಒಟ್ಟು 234 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದೆ. ಈ ಪೈಕಿ ಈಗಾಗಲೇ ಡಿಎಂಕೆ 50 ಮತ್ತು ಎಐಎಡಿಎಂಕೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇದರಿಂದ ಡಿಎಂಕೆ ಭಾರೀ ಮುನ್ನಡೆ ಕಾಯ್ದುಕೊಂಡಂತಾಗಿದೆ.
ಕೇರಳದಲ್ಲಿ 140 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಎಲ್ ಡಿಎಫ್ 38, ಯುಡಿಎಫ್ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಎಲ್ ಡಿಎಫ್ ಮುನ್ನಡೆ ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಲ್ಲಿ ಟಿಎಂಸಿ 58 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 55 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪುದುಚೇರಿಯಲ್ಲಿ ಬಿಜೆಪಿ 1, ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅಸ್ಸಾಂನಲ್ಲಿ 126 ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ 4, ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಈ ಸಮಯದಲ್ಲಿ ರಾಜ್ಯದಲ್ಲಿ ಇರಲಿದೆಯಂತೆ ಮೂರನೇ ಅಲೆ; ಜನ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸೋಂಕಿನ ಎರಡನೇ ಅಲೆ ಈಗಾಗಲೇ ಜನರನ್ನು ಸಾಕಷ್ಟು ಆತಂಕಕ್ಕೆ ದೂಡಿದೆ. ಇದರ ಮಧ್ಯೆಯೂ ರಾಜ್ಯದಲ್ಲಿ ಮೂರನೇ ಅಲೆಯ ಮಾತು ಕೇಳಿ ಬರುತ್ತಿದ್ದು, ಜನ ಬೆಚ್ಚಿ ಬೀಳುವಂತಾಗಿದೆ.

ಸದ್ಯ ರಾಜ್ಯದಲ್ಲಿ ಪ್ರತಿ ದಿನ 40 ಸಾವಿರದ ಆಸುಪಾಸಿನಲ್ಲಿ ಸೋಂಕಿತರ ಸಂಖ್ಯೆ ದಾಖಲಾಗುತ್ತಿದೆ. ಈ ಸಂದರ್ಭದಲ್ಲಿ ಇದೇ ವರ್ಷದ ಅಕ್ಟೋಬರ್ ತಿಂಗಳ ಸಮಯದಲ್ಲಿ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಾಂತ್ರಿಕ ಸಲಹಾ ಸಮಿತಿಯ ವಿಶ್ಲೇಷಕರ ತಂಡ ನೀಡಿರುವ ವರದಿಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ರಾಜ್ಯದಲ್ಲಿ ಮೇ ಹಾಗೂ ಜುಲೈ ತಿಂಗಳವರೆಗೆ 2ನೇ ಅಲೆಯೇ ಇರಲಿದ್ದು, ಆದಾದ ನಂತರ ಮೂರನೇ ಅಲೆ ಇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಯುರೋಪಿಯನ್ ರಾಷ್ಟ್ರಗಳಲ್ಲಿ ಕೊರೊನಾ ಪರಿಸ್ಥಿತಿ ಗಮನಿಸಿದರೆ ಖಂಡಿತವಾಗಿಯೂ ರಾಜ್ಯದಲ್ಲಿಯೂ ಮೂರನೇ ಅಲೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈಗಿನಿಂದಲೇ ಜನರು ಎಚ್ಚರ ವಹಿಸಬೇಕು ಎಂದು ತಜ್ಞರು ಕಿವಿ ಮಾತು ಹೇಳಿದ್ದಾರೆ.

ಲಸಿಕೆ ಪಡೆದುಕೊಳ್ಳುವುದರ ನಡುವೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುದ್ಧವಾಗಿ ತೊಳೆಯುವುದು ಸೇರಿದಂತೆ ಕೊವಿಡ್-19 ತೊಲಗಿಸಲು ವೈದ್ಯರು ನೀಡಿರುವ ಸಲಹೆಗಳನ್ನು ಚಾಚು ತಪ್ಪದೆ ಜನರು ನಿರ್ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ರಾಜ್ಯದ ಕೆಲವು ಪ್ರದೇಶಗಲ್ಲಿ ಭರ್ಜರಿ ಮಳೆ; ಕೆಲವೆಡೆ ಅವಾಂತರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಗದಗ ಜಿಲ್ಲೆಯೂ ಸೇರಿದಂತೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಅಲ್ಲದೇ, ಹಲವು ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಕಲಬುರಗಿ ಜಿಲ್ಲೆಯಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾರೆ.

ಗದಗ ತಾಲೂಕಿನ ಹೊಂಬಳ, ವೆಂಕಟಾಪೂರ ಜಿಲ್ಲೆಯ ನರಗುಂದದಲ್ಲೂ ಮಳೆಯಾಗಿದೆ. ನರಗುಂದದ ಯಡಿಯೂರು ಸಿದ್ಧಲಿಂಗೇಶ್ವರ ಶಾಲೆಯ ಆವರಣದಲ್ಲಿನ ತಿಂಗಿನ ಮರಕ್ಕೆ ಬೆಂಕಿ ಬಿದ್ದಿದೆ. ಹಾವೇರಿ ಜಿಲ್ಲೆಯಲ್ಲಿ ಮೂರು ತೆಂಗಿನ ಮರಗಳು ಹೊತ್ತಿ ಉರುದಿವೆ. ದಾವಣಗೆರೆಯಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿವೆ. ಹುಬ್ಬಳ್ಳಿ, ಹಾವೇರಿ, ಕಲಬುರಗಿ, ದಾವಣಗೆರೆ ಹಾಗೂ ಮಲೆನಾಡು ಪ್ರದೇಶ, ಕರಾವಳಿ ಪ್ರದೇಶದ ಹಲವು ಭಾಗಗಳಲ್ಲಿ ಮಳೆ ಭರ್ಜರಿಯಾಗಿ ಸುರಿದಿದೆ.

ಕಲಬುರಗಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಹೀಗಾಗಿ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾನೆ. ಭೋಜರಾಜ ಅತನೂರೆ (54) ಸಾವಿಗೀಡಾದ ದುರ್ದೈವಿ ರೈತ. ದಾವಣಗೆರೆ ಜಿಲ್ಲೆಯ ಹರಿಹರ, ಹರಪ್ಪನಹಳ್ಳಿ ಸೇರಿದಂತೆ ಹಲವು ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ.

ಹಾವೇರಿ ನಗರದ ಹತ್ತರಗೇರಿ ಓಣಿಯಲ್ಲಿ ಸಿಡಿಲು ಬಡಿದು ಮೂರು ತೆಂಗಿನ ಮರಗಳು ಹೊತ್ತಿ ಉರಿದಿವೆ. ತಕ್ಷಣವೇ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹುಬ್ಬಳ್ಳಿ ನಗರ ಹಾಗೂ ಸುತ್ತಮುತ್ತಲಿನ ಕೆಲವು ಹಳ್ಳಿಗಳಲ್ಲಿ ಮಳೆ ಸುರಿದಿದೆ. ನಗರದ ತುಂಬಾ ಮಳೆ ಉತ್ತಮವಾಗಿ ಸುರಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಜನರು ಪರದಾಟ ನಡೆಸಿದ್ದಾರೆ. ಅಲ್ಲದೇ, ರಸ್ತೆಗಳು ತುಂಬಿ ಹರಿದಿವೆ. ಶಿವಮೊಗ್ಗ ಹಾಗೂ ಮಡಿಕೇರಿ ಸುತ್ತಮುತ್ತ ಮಳೆ ಉತ್ತಮವಾಗಿ ಸುರಿದ ವರದಿಯಾಗಿದೆ.

ಪಂಜಾಬ್ ಗೆ ಗೆಲುವಿನ ಸಿಹಿ ಉಣಿಸಿದ್ದ ಬ್ರಾರ್ ಆಟಕ್ಕೆ ಮನಸೋತ ಯುವರಾಜ್!

ವಿಜಯಸಾಕ್ಷಿ ಸುದ್ದಿ, ಅಹ್ಮದಾಬಾದ್

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏ. 30ರಂದು ನಡೆದಿದ್ದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ತಂಡ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಭರ್ಜರಿಯಾಗಿ ಜಯ ಗಳಿಸಿದೆ.

ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದ ಬೆಂಗಳೂರು ತಂಡವನ್ನು ಸತತ ಸೋಲನ್ನು ಕಂಡಿದ್ದ ಪಂಜಾಬ್ ಬರೋಬ್ಬರಿ 34 ರನ್ ಗಳ ಅಂತರದಿಂದ ಭರ್ಜರಿಯಾಗಿ ಜಯಗಳಿಸಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಪಂಜಾಬ್‌ ನ ಸ್ಪಿನ್ನರ್ ಹರ್‌ಪ್ರೀತ್‌ ಬ್ರಾರ್.

ಈ ಆವೃತ್ತಿಯ ಪ್ರಥಮ ಪಂದ್ಯವಾಡಿರುವ ಬ್ರಾರ್, ಆರ್‌ ಸಿಬಿಯ ಪ್ರಮುಖ ವಿಕೆಟ್‌ ಗಳನ್ನು ಕೆಡವಿ ಪಂಜಾಬ್‌ ಪಾಲಿಗೆ ಭರ್ಜರಿ ಜಯ ಧಕ್ಕಿಸಿ ಕೊಟ್ಟರು. ಬ್ರಾರ್, ವಿರಾಟ್ ಕೊಹ್ಲಿ (35 ರನ್), ಗ್ಲೆನ್ ಮ್ಯಾಕ್ಸವೆಲ್ (0), ಎಬಿ ಡಿ ವಿಲಿಯರ್ಸ್ (3) ಸೇರಿದಂತೆ ಪ್ರಮುಖ ಮೂರು ವಿಕೆಟ್ ಗಳನ್ನು ಕಿತ್ತರು. ಅಲ್ಲದೇ, ಬ್ಯಾಟಿಂಗ್ ನಲ್ಲಿ ಕೂಡ ಅಜೇಯ 25ರನ್ (17 ಎಸೆತ) ಅಮೋಘ ಪ್ರದರ್ಶನ ನೀಡಿ ತಂಡದ ಮೊತ್ತ ಹಿಗ್ಗುವಂತೆ ಮಾಡಿದ್ದರು.

ಅವರ ವಿರೋಚಿತ ಪ್ರದರ್ಶನಕ್ಕೆ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್‌ ಟ್ವೀಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹರ್‌ಪ್ರೀತ್ ಬ್ರಾರ್ ಪ್ರದರ್ಶನಕ್ಕೆ ಖುಷಿಯಾಗಿದೆ. ಗುಣಮಟ್ಟದ ಬ್ಯಾಟ್ಸಮನ್ ಗಳ ವಿಕೆಟ್ ಪಡೆಯುವುದು ಮತ್ತು ಪಂದ್ಯದ ಕೊನೆಯಲ್ಲಿ ಅಗತ್ಯ ರನ್‌ ಕೊಡುಗೆ ನೀಡಿದ್ದು ಖುಷಿಯಾಗಿದೆ ಎಂದು ಯುವಿ ಟ್ವೀಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೇ, ರಾಜ್ಯ ಕ್ರಿಕೆಟ್‌ ನ ವಿಚಾರಕ್ಕೆ ಬಂದರೆ ನಿನ್ನ ಮೇಲಿನ ಟೀಕೆಗಳಿಗೆ ಉತ್ತರಿಸಲು ಉತ್ತಮ ವಿಧಾನವಿದು. ಮ್ಯಾಚ್ ವಿನ್ನರ್ ಆಟಗಾರನ ನೀಡಿ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್, ಹರ್ಭಜನ್‌ ಸಿಂಗ್ ಒಳ್ಳೆಯ ಕೆಲಸ ಮಾಡಿದಿರಿ ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!