Home Blog Page 3068

ಅಗ್ನಿ ಅವಘಡ ಮೇವಿನ ಬಣವೆ ಭಸ್ಮ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ತಾಲ್ಲೂಕಿನ ಹಲಗೇರಿ ಗ್ರಾಮದಲ್ಲಿ ಗುರುವಾರ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಬಸಪ್ಪ ತಳವಾರ ಅವರಿಗೆ ಸೇರಿದ ಮೇವಿನ ಮತ್ತು ಶೇಂಗಾ ಬಳ್ಳಿಯ 2 ಬಣವೆಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಇಪ್ಪತ್ತರಿಂದ ಮೂವತ್ತು ಸಾವಿರ ರೂಪಾಯಿ ಮೌಲ್ಯದ ಮೇವು ಹಾಗೂ ಶೇಂಗಾ ಬಳ್ಳಿಯ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ವರ್ಷವಿಡೀ ಜಾನುವಾರುಗಳಿಗೆ ಮೇಯಿಸಲು ಇಟ್ಟುಕೊಂಡಿದ್ದ ಮೇವು ಸುಟ್ಟು ಕರಕಲಾಗಿದನ್ನು ಕಂಡು ರೈತನ ಕಣ್ಣೀರಿನ ಗೋಳಾಟ ಎಲ್ಲರ ಮನ ಕಲಕಿತು.

ಬಣವೆಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಗ್ರಾಮಸ್ಥರು, ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವ ಮೂಲಕ ಸಂಭವಿಸಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.

ಅಂದರ್-ಬಾಹರ್ ಜೂಜಾಟ; ಕೇಬಲ್ ಆಪರೇಟರ್ ಸಮೇತ ನಾಲ್ವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕೇಬಲ್ ಆಪರೇಟರ್ ಸೇರಿ ನಾಲ್ಕು ಜನ ಅಂದರ್-ಬಾಹರ್ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಮಾಡಿ ಬಂಧಿಸಿದ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ಡಿಪೋ ಬಳಿ ನಡೆದಿದೆ.

ಗಜೇಂದ್ರಗಡ ಠಾಣೆಯ ಪಿಎಸ್ಐ ಗುರುಶಾಂತ ದಾಸ್ಯಾಳ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದ ಕೇಬಲ್ ಆಪರೇಟರ್ ಬದರಿನಾಥ್ ವೆಂಕಪ್ಪ ರಾಠೋಡ, ನಾಗಪ್ಪ ಈರಪ್ಪ ಮಾಳೋತ್ತರ್, ಮಾಂತೇಶ್ ಶಂಕ್ರಪ್ಪ ರಾಠೋಡ, ರವಿ ಕೃಷ್ಣಪ್ಪ ರಾಠೋಡ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 3550 ರೂಪಾಯಿ ನಗದು ವಸದಪಡಿಸಿಕೊಂಡಿದ್ದು, ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಎಲ್ ಬೆಟ್ಟಿಂಗ್; ವರ್ತಕರು ಸೇರಿದಂತೆ ಒಂಬತ್ತು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಐಪಿಎಲ್ ಬೆಟ್ಟಿಂಗ್ ದಂದೆ ಜೋರಾಗಿದೆ. ದಿನವೂ ಸಣ್ಣ ಪುಟ್ಟ ಬುಕ್ಕಿಗಳಿಗೆ ಗಾಳ ಹಾಕಿ ಬಂಧಿಸುತ್ತಿದ್ದ ಪೊಲೀಸರು ಈಗ ಭಾರಿ ಕುಳಗಳು ಇರುವ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ಮಾಡಿದ್ದು ನಾಲ್ಕು ಜನ ವರ್ತಕರು, ಓರ್ವ ಫೋಟೋಗ್ರಾಫರ್ ಸೇರಿದಂತೆ 9 ಜನರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ, ಗದಗನ ದೊಡ್ಡ ಬುಕ್ಕಿ ಪರಾರಿಯಾಗಿದ್ದು ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ ರಸ್ತೆಯ ಕನ್ನಡ ಸಾಹಿತ್ಯ ಭವನದ ಹತ್ತಿರದ ಪರಿಸರ ಲೇವೋಟ್ ನಲ್ಲಿ ದೊಡ್ಡ ಮಟ್ಟದ ಐಪಿಎಲ್ ಬೆಟ್ಟಿಂಗ್ ದಂದೆ ನಡೆಯುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆಯ ಪಿಎಸ್ಐ ಅಜಿತಕುಮಾರ ಹೊಸಮನಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಇದನ್ನೂ ಓದಿ ಐಪಿಎಲ್ ಬೆಟ್ಟಿಂಗ್; ಬೆಟಗೇರಿಯ ತಿಪ್ಪಣಸಾ ಕಬಾಡಿ ಬಂಧನ

ಬಂಧಿತರು ಬುಧವಾರ ನಡೆದ ಸಿ ಎಸ್ ಕೆ ಹಾಗೂ ಎಸ್ ಆರ್ ಎಚ್ ನಡುವಿನ ಐಪಿಎಲ್ 20-20 ಪಂದ್ಯದಲ್ಲಿ ನೂರಕ್ಕೆ ಎರಡು ನೂರು ರೂಪಾಯಿ ಕೊಡುವುದಾಗಿ ಬೆಟ್ಟಿಂಗ್ ನಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಹುಲಕೋಟಿಯ ಕೆಚ್ ಬಿ ಕಾಲೋನಿಯ ಪ್ರಕಾಶ್ ವಿಶ್ವನಾಥಸಾ ಕಲಬುರ್ಗಿ, ಗದಗ ನಗರದ ಕಲಾಮಂದಿರ ರಸ್ತೆಯ ನಿವಾಸಿ ಶ್ರೀಕಾಂತ್ ಸಿದ್ದಲಿಂಗಪ್ಪ ಪೂಜಾರ, ಅಮರೇಶ್ವರ ನಗರದ ವೆಂಕಟೇಶ್ ದತ್ತೂಸಾ ಸಿದ್ಲಿಂಗ್, ಕುಷ್ಟಗಿ ಚಾಳ್ ನಿವಾಸಿ ಈರಪ್ಪ ಬೂದಪ್ಪ ಹನಮನಹಳ್ಳಿ, ಒಕ್ಕಲಗೇರಿ ಓಣಿಯ ಶಿವಶಂಕರ್ ರಾಜಶೇಖರ ಯಕಲಾಸಪೂರ, ಕೆ ಸಿ ರಾಣಿ ರಸ್ತೆಯ (ಲಿಂಬಣ್ಣವರ ಆಸ್ಪತ್ರೆ ಹತ್ತಿರ) ಬಸವರಾಜ್ ಗುಂಡಪ್ಪ ಕೌಡಿ, ಗಂಗಾಪೂರ ಪೇಟೆಯ ಮಲ್ಲೇಶ್ ಸಿದ್ದಪ್ಪ ಬಾರಕೇರ, ನಿಂಗಪ್ಪ ಭರಮಪ್ಪ ಮಡಿವಾಳರ, ಬೆಟಗೇರಿಯ ಕಬಾಡಿ ರಸ್ತೆಯ ತೆಗ್ಗಿನಪೇಟಿಯ ಪ್ರಮೋದ್ ಪ್ರಕಾಶ್ ಮಾನೇದ ಎಂದು ಗುರುತಿಸಲಾಗಿದೆ.

ಪ್ರಮುಖ ಬುಕ್ಕಿ ಎಸ್ ಎಮ್ ಕೃಷ್ಣಾ ನಗರದ ಅನಿಲ ಪರಸಪ್ಪ ಸಿದ್ದಮ್ಮನಹಳ್ಳಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರಿಂದ 24 ಸಾವಿರ ರೂಪಾಯಿ ನಗದು, ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ ಐಪಿಎಲ್ ಬೆಟ್ಟಿಂಗ್; ಶ್ರೀನಿವಾಸ, ಪ್ರದೀಪ್, ಸನಾವುಲ್ಲಾ ಸೇರಿದಂತೆ 7 ಜನರ ಬಂಧನ

ಆದರೆ ಹಲವು ಇಸ್ಪೀಟು ಪ್ರಕರಣಗಳಲ್ಲಿ ಅನಿಲ ಸಿದ್ದಮ್ಮನಹಳ್ಳಿ ಆರೋಪಿಯಾಗಿದ್ದು, ಕಳೆದ ವರ್ಷ ಬಿಂಕದಕಟ್ಟಿ ಬಳಿಯ ಅಂದರ್-ಬಾಹರ್ ಜೂಜಾಟದಲ್ಲಿ, ಮೂರು ತಿಂಗಳ ಹಿಂದೆ ಹೊಂಬಳ ರಸ್ತೆಯಲ್ಲಿ ನಡೆದ ಜೂಜಾಟದಲ್ಲಿ ಎಫ್ ಆಯ್ ಆರ್ ದಾಖಲಾಗಿದ್ವು, ಆದರೆ ಆ ಪ್ರಕರಣಗಳಲ್ಲೂ ಅನಿಲ ಸಿದ್ದಮ್ಮನಹಳ್ಳಿ ಪರಾರಿಯಾಗಿದ್ದ. ಈ ಪ್ರಕರಣದಲ್ಲೂ ಪರಾರಿಯಾಗಿದ್ದಾನೆ ಎಂದರೆ ಪರಾರಿಯಾಗವುದರಲ್ಲಿ ಚಾಣಾಕ್ಷತನ ತೋರುತ್ತಿದ್ದಾನೋ ಅಥವಾ ದಾಳಿ ಮಾಡುವ ಸಂದರ್ಭದಲ್ಲಿ ಕೆಲ ಪೊಲೀಸರೇ ಮಾಹಿತಿ‌ ನೀಡಿ ಆತ ಪರಾರಿಯಾಗಲು ಸಹಾಯ ಮಾಡುತ್ತಿದ್ದಾರೋ ಅನ್ನೋ ಮಾತುಗಳು ಕೇಳಿ ಬಂದಿವಿ.

ಈ ಬೆಟ್ಟಿಂಗ್ ಪ್ರಕರಣದಲ್ಲೂ ಪರಾರಿಯಾಗಿದ್ದು, ಇದರಲ್ಲಿ 10 ನೇ ಆರೋಪಿಯನ್ನಾಗಿ ಮಾಡಿದ್ದು ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನ ಮೂಡಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪೊಲೀಸರು ಪರಾರಿಯಾದ ಆರೋಪಿ ಅನಿಲ ಸಿದ್ದಮ್ಮನಹಳ್ಳಿ ಬಂಧನಕ್ಕೆ ಜಾಲ ಬೀಸಿದ್ದಾರೆ.

ಕೊರೊನಾ ಜಾಗೃತಿ ಮೂಲಕ ಜನ್ಮದಿನ ಆಚರಿಸಿಕೊಂಡ ಸಿ.ವಿ.ಸಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ಬಿಜೆಪಿ ರಾಷ್ಟ್ರೀಯ ಪರಿಷತ್ತು ಸದಸ್ಯ ಹಾಗೂ ಹಿರಿಯ ಮುಖಂಡ ಸಿ.ವಿ ಚಂದ್ರಶೇಖರ 53ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಸ್ವತಃ ತಾವೇ ಜನರಿಗೆ ಮಾಸ್ಕ್ ವಿತರಿಸಿ ಕೊರೊನಾದ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಎಚ್ಚರಿಕೆ ವಹಿಸಬೇಕು ಎಂದು ಜಾಗೃತಿ ಮೂಡಿಸುವ ಮೂಲಕ ಅಭಿಮಾನಿಗಳು ಸರಳವಾಗಿ ಸಿವಿಸಿಯವರ ಹುಟ್ಟುಹಬ್ಬವನ್ನು ಆಚರಿಸಿದರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಸಲ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸಲು ಕಾರ್ಯಕರ್ತರು, ಅಭಿಮಾನಿಗಳಿಗೆ ಕರೆ ನೀಡಿದ್ದೇನೆ ಎಂದು ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ ಹೇಳಿದರು.

ಸಿ ವಿ ಚಂದ್ರಶೇಖರ ರವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ನಗರದ ವೃದ್ಧಾಶ್ರಮದಲ್ಲಿ ಬ್ರೆಡ್, ಹಣ್ಣು, ಹಂಪಲು, ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಿಸಿದರು.

ಈ ಸಂಧರ್ಭದಲ್ಲಿ ಕಾರ್ಯಕರ್ತರಾದ ದೇವರಾಜ ಹಾಲಸಮುದ್ರ, ಪ್ರವೀಣ್ ಇಟಗಿ, ಅಭಿನಂದನ್ ತುಂಬಳ, ಜ್ಯೋತಿ ಬಸು, ಮಹೆಬೂಬ ಕುದರಿಮೊತಿ, ನಯೀಮ, ಸಂತೋಷ ಮ್ಯಾಗಳಮನಿ, ದೇವರಾಜ ಮನ್ನಾಪುರ, ವೀರೇಶ ಗೌಡ, ಅವಿನಾಶ ಮ್ಯಾಗಳಮನಿ, ಉಮೇಶ್ ಕುರುಡೆಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೋವಿಡ್ ರಿಸ್ಕ್ ಭತ್ಯೆ ಮಂಜೂರುಗೊಳಿಸಲು ಶುಶ್ರೂಷಕರ ಮನವಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕಳೆದ ವರ್ಷ ಪಿಪಿಇ ಕಿಟ್ ಧರಿಸಿ ಕೊರೊನಾ ರೋಗಿಗಳಿಗೆ ಆರೈಕೆ ಮಾಡಲಾಗಿದ್ದು, ಕೋವಿಡ್ ರಿಸ್ಕ್ ಭತ್ಯೆ ಇನ್ನೂ ಬಂದಿಲ್ಲ. ಸರಕಾರ ಕೂಡಲೇ ರಿಸ್ಕ್ ಭತ್ಯೆ ಬಿಡುಗಡೆಗೊಳಿಸಲು ಕೊಪ್ಪಳ ಕಿಮ್ಸ್‌ನ ಗುತ್ತಿಗೆ ಶುಶ್ರೂಷಕ ಸಿಬ್ಬಂದಿ ನೌಕರರ ಸಂಘದವರು ಸಚಿವ ಬಿ.ಸಿ.ಪಾಟೀಲಗೆ ಮನವಿ ಸಲ್ಲಿಸಿದರು.

ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಮುಖಂಡ ಶ್ರೀನಿವಾಸ ರಾಠೋಡ್ ಅವರು, ಕಳೆದ ವರ್ಷ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ 5 ಸಾವಿರ ರಿಸ್ಕ್ ಭತ್ಯೆ ನೀಡುವುದಾಗಿ ಹೇಳಿದ್ದ ಸರಕಾರ ಈವರೆಗೂ ಭತ್ಯೆ ಬಿಡುಗಡೆಗೊಳಿಸಿಲ್ಲ. ಈಗಲೂ ನಾವು ರಿಸ್ಕ್ ತೆಗೆದುಕೊಂಡು ಪಿಪಿಇ ಕಿಟ್ ಧರಿಸಲು ಸಿದ್ಧರಿದ್ದೇವೆ. ಸರಕಾರ ಕಖೆದ ವರ್ಷದ ಭತ್ಯೆ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಈ ವರ್ಷ ಕೋವಿಡ್ ರಿಸ್ಕ್ ಭತ್ಯೆಯ ಜೊತೆಗೆ 50 ಲಕ್ಷ ರೂಪಾಯಿ ಜೀವ ವಿಮೆ ನೀಡಬೇಕು. ಹಾಗೂ ಗುತ್ತಿಗೆ ಆಧಾರದಡಿ ಕಾರ್ಯ ನಿರ್ವಹಿಸುತ್ತಿರುವ ನಮ್ಮನ್ನು ಖಾಯಂಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.

ಈ ವೇಳೆ ಶುಶ್ರೂಷಕ ಸಂಘದ ಲಿಂಗರಾಜ ಎಂ.ಆರ್., ಮಂಜುನಾಥ.ಜಿ., ಅಂಬಿಕಾ ಬಂಡಿ, ಯಮನೂರಪ್ಪ ಡಿ.ಎಚ್. ಇತರರು ಇದ್ದರು.

ಬಡಜನರ ಚಿಕಿತ್ಸಾ ವೆಚ್ಚ ಭರಿಸಲು ಜನಪ್ರತಿನಿಧಿಗಳಿಗೆ ಸಚಿವ ಬಿ.ಸಿ.ಪಾಟೀಲ ಮನವಿ

-ಜಿಲ್ಲೆಯಲ್ಲಿ ಕೋವಿಡ್ ಮಾರಿ ನಿಯಂತ್ರಣಕ್ಕೆ ಯಾವುದೇ ಕೊರತೆ ಇಲ್ಲ

ಜನರು ಸಹ ಜಾಗೃತರಾಗಿ ಟೆಸ್ಟ್ ಮಾಡಿಸಿಕೊಳ್ಳಿ, ವೈರಸ್ ಪತ್ತೆಯಾದರೆ ಚಿಕಿತ್ಸೆ ಪಡೆಯಿರಿ.

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನನ್ನ ಕ್ಷೇತ್ರದ ಬಿಪಿಎಲ್ ಕಾರ್ಡ್ ಹೊಂದಿರುವ ಬಡಜನರಿಗೆ ಪಾಸಿಟಿವ್ ಬಂದು ಖಾಸಗಿ ಆಸ್ಪತ್ರೆಗಳಿಗೆ ದಾಖಲಾದರೆ ಅದಕ್ಕೆ ತಗುಲುವ ಸಂಪೂರ್ಣ ವೆಚ್ಚ ಭರಿಸುತ್ತಿದ್ದು, ಅದು ನನ್ನ ವೈಯಕ್ತಿಕ ನಿರ್ಧಾರ. ಇಲ್ಲಿನ ಜನಪ್ರತಿನಿಧಿಗಳಿಗೂ ಈ ಕುರಿತು ಮನವಿ ಮಾಡುವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ ಸಹಾಯ ಮಾಡುವುದು ಅವರವರ ವೈಯಕ್ತಿಕ ನಿರ್ಧಾರ. ಇಲ್ಲಿನ ಜನಪ್ರತಿನಿಧಿಗಳಿಗೂ ಬಡವರ ಸಂಕಷ್ಟ ನಿವಾರಣೆಗೆ ಕೈ ಜೋಡಿಸಲು ಮನವಿ ಮಾಡುತ್ತೇನೆ ಎಂದರು. ‌

ಕೇಸಸ್ ನಿಯಂತ್ರಣ ತಪ್ಪುತ್ತೆ ಅನ್ನೋ ಉದ್ದೇಶಕ್ಕೆ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈಗಾಗಲೇ ಸರಪಳಿ ಶುರುವಾಗಿದೆ. ಇದು ಕಟ್ ಆಗಲು 14-16 ದಿನಗಳು ಬೇಕು. ಕೊಪ್ಪಳ ಜಿಲ್ಲೆಯಲ್ಲೂ ಕೊರೊನಾ ಕೇಸಸ್ ಹೆಚ್ಚುತ್ತಿವೆ. ನಿತ್ಯ 350 ರಿಂದ 400 ಕೇಸಸ್ ಬರ್ತಿವೆ. ನಿನ್ನೆ ಜಿಲ್ಲೆಯಲ್ಲಿ ನಾಲ್ವರು ಪ್ರಾಣ ಬಿಟ್ಟಿದ್ದಾರೆ. ಕೊಪ್ಪಳ ಜಿಲ್ಲಾಡಳಿತ ಆಕ್ಸಿಜನ್, ವೆಂಟಿಲೇಟರ್, ಬೆಡ್ ಕೊರತೆ ಆಗದಂತೆ ಇಲ್ಲಿಯವರೆಗೆ ನೋಡಿಕೊಂಡಿದೆ. ಮುಂದಿನ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ಮುಗಿದ ತಕ್ಷಣ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆದು ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಾ ಹೋದರೆ ಅವುಗಳ ನಿಯಂತ್ರಣಕ್ಕೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆಗೆ ಹಾಜರಾಗುವ ಶಾಸಕರು, ಸಂಸದರು ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.

ಬೇರೆ ಬೇರೆ ಊರುಗಳಿಂದ ಬಂದಿರುವ ಗ್ರಾಮೀಣ ಭಾಗದ ಜನರನ್ನು ಇದುವರೆಗೂ ಟೆಸ್ಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪಿಡಿಓ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಭಾಗದ ಜನರ ಕೋವಿಡ್ ಟೆಸ್ಟ್ ಮಾಡಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಹಾಗೆನೇ ಜನರೂ ಸಹ ತಮ್ಮ ಸಂಸಾರದ ಹಿತದೃಷ್ಟಿಯಿಂದ, ಸಮಾಜದ ಹಿತದೃಷ್ಟಿಯಿಂದ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಈಗಾಗಲೇ ಜಿಲ್ಲೆಯಲ್ಲಿ 1655 ಜನರನ್ನು ಹೋಮ್ ಐಸೋಲೇಷನ್ ಮಾಡಲಾಗಿದೆ. ಈ ಹೋಮ್ ಐಸೋಲೇಷನ್ ಶ್ರೀಮಂತರಿಗೆ ಸರಿ ಹೊಂದುತ್ತೆ. ಅವರ ಮನೆಗಳು ದೊಡ್ಡದಾಗಿರುತ್ತವೆ.
ಬಡವರಿಗೆ ಹೋಮ್ ಐಸೋಲೇಷನ್ ಸರಿ ಹೋಗಲ್ಲ. ಯಾಕೆಂದರೆ ಅವರ ಮನೆಗಳು ಬಹುತೇಕ 20*30 ಅಳತೆಯದ್ದಾಗಿರುತ್ತವೆ. ಸಣ್ಣ ಜಾಗದಲ್ಲಿ ಐಸೋಲೇಷನ್ ಮಾಡುವುದರಿಂದ ವೈರಸ್ ಮನೆಯ ಇತರರಿಗೂ ಹರಡುವ ಸಾಧ್ಯತೆ ಹೆಚ್ಚು.
ಹಾಗಾಗಿ ಕೂಡಲೇ ಕೋವಿಡ್ ಸೆಂಟರ್ ತೆರೆದು ಬಡವರನ್ನು ಐಸೋಲೇಷನ್ ಮಾಡುವ ಬದಲು ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.

ಜಿಲ್ಲೆಯಲ್ಲಿ ಮಾರಿ ನಿಯಂತ್ರಣದ ನಿಟ್ಟಿನಲ್ಲಿ ಅಗತ್ಯ ಸಲಕರಣೆ, ಚಿಕಿತ್ಸಾ ಸಾಮಗ್ರಿಗಳ ಕೊರತೆ ಇಲ್ಲ. ರೆಮ್‌ಡಿಸಿವರ್ ಬೇಡಿಕೆ ಇದೆ. ಈಗಾಗಲೇ ಪೂರೈಕೆ ಆಗಿದೆ. ಇನ್ನೂ ಹೆಚ್ಚುವರಿಯಾಗಿ ಬೇಕಾಗಿದ್ದು, ಸರಕಾರಕ್ಕೆ ಕೇಳುತ್ತೇವೆ. ಸದ್ಯ ಯಾವುದೇ ತೊಂದರೆ ಇಲ್ಲ.

ಕಿನ್ನಾಳದಲ್ಲಿ‌ ನೂರಕ್ಕೂ ಹೆಚ್ಚು ಸೋಂಕಿತರು‌ ಕಂಡು ಬಂದಿದ್ದು, ಅವರೆಲ್ಲರೂ ಕೂಲಿ ಕೆಲಸಕ್ಕೆ ಹೋಗುತ್ತಿರುವ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ.ಸಿ.ಪಾಟೀಲ, ಆ ರೀತಿ ಆಗಿರಲಿಕ್ಕಿಲ್ಲ. ಯಾಕೆಂದರೆ ಈ ಸಲ ಕೋವಿಡ್ ವೈರಸ್ ಬಗ್ಗೆ ಜನ ಬಹಳಷ್ಟು ಭೀತಿಗೊಳಗಾಗಿದ್ದಾರೆ. ಜಾಗೃತಿ ಹೊಂದಿದ್ದಾರೆ. ಹಾಗೊಂದು ವೇಳೆ ಸೋಂಕು ಕಂಡು ಬಂದರೆ ಎಲ್ಲೂ ಹೊರಗಡೆ ಓಡಾಡದೇ ಕೋವಿಡ್ ಕೇರ್ ಸೆಂಟರ್‌ಗೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ಅವರು ಮನವಿ ಮಾಡಿದರು.

ಈ ವೇಳೆ ಸಂಸದ ಕರಡಿ ಸಂಗಣ್ಣ ಶಾಸಕ ರಾಘವೇಂದ್ರ ಹಿಟ್ನಾಳ, ಎಸ್‌ಪಿ ಟಿ.ಶ್ರೀಧರ್ ಸೇರಿದಂತೆ ಜನಪ್ರತಿನಿಧಿಗಳು, ಹಲವು ಅಧಿಕಾರಿಗಳು ಇದ್ದರು.

ಹೊರಗೆ ಬಾರದ ಡಿಸಿಗೆ ಹೇಳ್ತಿನಿ

ಎಲ್ಲಾ ಜಿಲ್ಲೆಗಳಲ್ಲೂ ಸ್ವತಃ ಜಿಲ್ಲಾಧಿಕಾರಿಗಳೇ ಹೊರಗಡೆ ಬಂದು ಕೋವಿಡ್ ನಿಯಂತ್ರಣ ಹಾಗೂ ಜಾಗೃತಿ ನೀಡುತ್ತಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೊರಗಡೆ ಬರ್ತಾ ಇಲ್ಲವಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ಡೀಸಿಯವರಿಗೆ ಹೇಳ್ತಿನಿ ಎಂದು ಸಚಿವ ಬಿ.ಸಿ.ಪಾಟೀಲ ಉತ್ತರಿಸಿದರು.


ಜಿಲ್ಲಾಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಪರಿಶೀಲನೆ

ಕೊಪ್ಪಳ ಜಿಲ್ಲಾಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆ ಹೊರಗೆ ಒರಗಿಕೊಂಡಿದ್ದ ರೋಗಿಯ ಯೋಗಕ್ಷೇಮ ವಿಚಾರಿಸಿದ ಸಚಿವ ಆರೋಗ್ಯ ಸಿಬ್ಬಂದಿ ಕರೆದು ರೋಗಿಯನ್ನು ಒಳಗೆ ದಾಖಲಿಸಿಕೊಳ್ಳಲು ಸೂಚಿಸಿದರು.

ಐಪಿಎಲ್ ಬೆಟ್ಟಿಂಗ್; ಬೆಟಗೇರಿಯ ತಿಪ್ಪಣಸಾ ಕಬಾಡಿ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಮಂಗಳವಾರ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 20-20 ಪಂದ್ಯದ ಮೇಲೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬೆಟಗೇರಿಯ ತೆಗ್ಗಿನಪೇಟಿ ನಿವಾಸಿ
ತಿಪ್ಪಣಸಾ ಯಶವಂತಸಾ ಕಬಾಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಕೋರ್ ಹಾಗೂ ಫಲಿತಾಂಶದ ಮೇಲೆ ನೂರು ರೂಪಾಯಿಗೆ ಎರಡು ನೂರು ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಗೆ ಕರೆ ಮಾಡಿ ಬೆಟ್ಟಿಂಗ್ ನಲ್ಲಿ ತೊಡಗಿದ್ದಾಗ ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಆತನಿಂದ 1600 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ.

ಆರೋಪಿ ತಿಪ್ಪಣಸಾ ಯಶವಂತಸಾ ಕಬಾಡಿ ತಾನು ಕಟ್ಟಿಸಿಕೊಂಡ ಹಣವನ್ನು ಬೆಟಗೇರಿಯ ಪರ್ವತಗೌಡ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ಕಿಶೋರ್ ಕುಮಾರ್ ಗಜಾನನಸಾ ಬದಿ ಎಂಬಾತನಿಗೆ ಕೊಡುವುದಾಗಿ ಹೇಳಿಕೆಯ ಹಿನ್ನೆಲೆಯಲ್ಲಿ ಆತನ ಮೇಲೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಕೋವಿಡ್ ನಿಯಮ ಉಲ್ಲಂಘನೆ; ಪಲ್ಲವಿ ಹೋಟೆಲ್‌ ಮೇಲೆ ಕೇಸ್

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಹೋಟೆಲ್ ನಲ್ಲಿ ಗ್ರಾಹಕರಿಗೆ ಉಪಹಾರ ಹಾಗೂ ಊಟ ಕೊಟ್ಟ ಆರೋಪದ ಹಿನ್ನೆಲೆಯಲ್ಲಿ ನಗರದ ಹೊಸಬಸ್ ನಿಲ್ದಾಣದ ಹತ್ತಿರದ ಪಲ್ಲವಿ ಹೋಟೆಲ್ ಮಾಲೀಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೋವಿಡ್ ನಿಯಮದಂತೆ ಹೋಟೆಲ್ ನಲ್ಲಿ ಗ್ರಾಹಕರಿಗೆ ಅವಕಾಶ ಇಲ್ಲ. ಕೇವಲ ಪಾರ್ಸಲ್ ಮಾತ್ರ ಕೊಡಬೇಕು.

ಹೋಟೆಲ್ ಗೆ ಡಿಎಆರ್ ಹೆಡ್ ಕ್ವಾರ್ಟರ್ಸ್ ನ ಶಶಿಧರ ಶರಣಪ್ಪ ಹಡಗಲಿ ಎಂಬ ಅಧಿಕಾರಿ ಭೇಟಿ ಕೊಟ್ಟ ಸಮಯದಲ್ಲಿ ಗ್ರಾಹಕರಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಂಡು ಬರಲಿಲ್ಲ. ಸ್ಯಾನಿಟೇಸರ್ ಮಾಡದೇ, ಥರ್ಮಲ್ ಸ್ಕ್ಯಾನರ್‌ ಹೋಟೆಲ್ ನಲ್ಲಿ ಇಡದೇ ಕೊರೋನಾ ಸೋಂಕು ಹರಡಲು ಪ್ರೇರೇಪಣೆ ನೀಡಿದ್ದಾರೆ ಎಂದು ಪಲ್ಲವಿ ಹೋಟೆಲ್ ಮಾಲೀಕ ಸುಧಾಕರ ಸಿದ್ದಯ್ಯ ಶೆಟ್ಟಿ ಎಂಬುವರು ಮೇಲೆ 2020 ರ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಕೋವಿಡ್ ನಿಯಮ ಉಲ್ಲಂಘನೆ; ನಸುಕಿನಲ್ಲಿ ಕಾಲಕಾಲೇಶ್ವರ ತೇರು ಎಳೆದ ಭಕ್ತರು!

ವಿಜಯಸಾಕ್ಷಿ ಸುದ್ದಿ, ಗದಗ

ಕೊರೋನಾ ಸೋಂಕಿನ ಎರಡನೇ ಅಲೆ ತಡೆಗಟ್ಟಲು ಜಿಲ್ಲಾಡಳಿತ ಜಿಲ್ಲೆಯಲ್ಲಿ ಜಾತ್ರೆ, ಉರುಸ್, ಮೆರವಣಿಗೆ, ರಾಜಕೀಯ ಸಭೆ, ಸಮಾರಂಭ ಸೇರಿದಂತೆ ಜನ ಗುಂಪಾಗಿ ಕೂಡದಂತೆ ನಿಷೇದಾಜ್ಞೆ ವಿಧಿಸಿದೆ.

ಆದರೆ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಕಾಲಕಾಲೇಶ್ವರ ಗ್ರಾಮದ ಖ್ಯಾತ ಕಾಲಕಾಲೇಶ್ವರ ಜಾತ್ರೆ ಸಾಂಗವಾಗಿ ನಡೆದಿದೆ. ಮಂಗಳವಾರ ನಸುಕಿನಲ್ಲಿ ನೂರಾರು ಭಕ್ತರು ರಥೋತ್ಸವ ನಡೆಸಿದ ಆರೋಪ ಕೇಳಿ ಬಂದಿದೆ. ಅದೂ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ತೇರು ಎಳೆದಿದ್ದಾರೆ ಎನ್ನಲಾಗಿದೆ. ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ನೂರಾರು ಜನರು ಸರಕಾರದ ಆದೇಶ ಉಲ್ಲಂಘಿಸಿ ತೇರು ಎಳೆದ ಪೋಟೋಗಳು ಈಗ ವೈರಲ್ ಆಗಿವೆ.

ಇದೇ ರೀತಿ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ ಬಡ್ನಿ ಗ್ರಾಮದಲ್ಲಿ ಮಾರುತಿ ದೇವರ ರಥೋತ್ಸವ ನಡೆಸಿದ ಆರೋಪದ ಮೇಲೆ ಗ್ರಾಮದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಹದಿಮೂರು ಜನರ ವಿರುದ್ಧ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದನ್ನು ಸ್ಮರಿಸಬಹುದು.

ಕೊರೋನಾ; ಸತತ ಎರಡನೇ ದಿನವೂ ನೂರರ ಗಡಿ ದಾಟಿದ ಸೋಂಕಿತರು

0

ವಿಜಯಸಾಕ್ಷಿ ಸುದ್ದಿ, ಗದಗ

ಏಪ್ರಿಲ್‌ 28 ಬುಧವಾರ ಜಿಲ್ಲೆಯಲ್ಲಿ ಮತ್ತೊಮ್ಮೆ ಕೊರೋನಾ ಸೋಂಕು ಸ್ಫೋಟಗೊಂಡಿದೆ. 129 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಎರಡನೇ ಅಲೆ ಸತತ ಎರಡನೇ ದಿನವೂ ಶತಕ ದಾಟಿದೆ.

ಇಂದಿನ 129 ಜನರಿಗೆ ಸೋಂಕು ತಗುಲುವ ಮೂಲಕ ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12448 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -77 , ಮುಂಡರಗಿ-02, ನರಗುಂದ-04, ರೋಣ-24, ಶಿರಹಟ್ಟಿ-15, ಹೊರಜಿಲ್ಲೆಯ-07 ಸೇರಿದಂತೆ 129 ಪ್ರಕರಣಗಳು ದೃಢಪಟ್ಟಿವೆ.

ಇದುವರೆಗೂ ಜಿಲ್ಲೆಯಲ್ಲಿ
141 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು 72 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 11657 ಜನರು ‌ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇಂದು ಜಿಲ್ಲೆಯಲ್ಲಿ 650 ಪ್ರಕರಣಗಳು ಸಕ್ರಿಯವಾಗಿದ್ದು, ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 196 ಜನರ ವರದಿ ಬರಲು ಬಾಕಿ ಇದೆ.

ಪರೀಕ್ಷೆಗಾಗಿ ಸಂಗ್ರಹಿಸಿದ 338811ಮಾದರಿಗಳಲ್ಲಿ 326167 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!