Home Blog Page 3080

ಹಕ್ಕಿ ಜ್ವರವಿಲ್ಲ, ಬಿಂದಾಸ್ ಆಗಿ ಕೋಳಿ ತಿನ್ನಿ; ಸಚಿವ ಪ್ರಭು ಚವ್ಹಾಣ

ವಿಜಯಸಾಕ್ಷಿ ಸುದ್ದಿ, ಬೀದರ್

ರಾಜ್ಯದಲ್ಲಿ ಹಕ್ಕಿ ಜ್ವರವಿಲ್ಲ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌವಾಹ ಸ್ಪಷ್ಟಡಿಸಿದರು.

ಈ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೋಳಿ ತಿನ್ನುವವರೆಗೆ ಯಾವುದೇ ಆತಂಕವಿಲ್ಲ. ಬಿಂದಾಸ್ ಆಗಿ ಕೋಳಿ ತಿನ್ನಿ ಎಂದರು.

ಕೇರಳದ ಗಡಿಯಲ್ಲಿ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಿ ತೀವ್ರ ನಿಗಾವಹಿಸಲಾಗಿದೆ. ಪರಿಸ್ಥಿತಿ ಎದುರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸಚಿವ ಪ್ರಭು ಚೌವಾಹ ಹೇಳಿದರು.

ಯಲಬುರ್ಗಾ ಶಾಸಕ ಆಚಾರ್‌ಗೆ ಒಲಿದು ಬಂತಾ ಮಂತ್ರಿ ಭಾಗ್ಯ? ಶಾಸಕ ಹಾಲಪ್ಪ ಆಚಾರ್ ನಿವಾಸಕ್ಕೆ ಡಿಸಿಎಂ ಸವದಿ ದಿಢೀರ್ ಭೇಟಿ

-ಈಗ ಮಂತ್ರಿಯಾಗಿ, ಮುಂದಿನ ಸಲ ಕ್ಷೇತ್ರ ಬಿಟ್ಟು ಕೊಡಬೇಕೆಂಬ ಕಂಡಿಷನ್?

ವಿಜಯಸಾಕ್ಷಿ ವಿಶೇಷ ಸುದ್ದಿ,
ಕೊಪ್ಪಳ: ಸಂಪುಟ ಪುನರ್ರಚನೆ ಅಥವಾ ವಿಸ್ತರಣೆ ಕುರಿತು ಸಿಎಂ ಬಿಎಸ್‌ವೈ ದೆಹಲಿ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದ್ದು, ಬಿಎಸ್‌ವೈ ಬಯಸಿರುವ ನೂತನ ಮಂತ್ರಿಗಳ ಪಟ್ಟಿಯಲ್ಲಿ ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಬಸಪ್ಪ ಆಚಾರ್ ಹೆಸರು ಸಹ ಇದೆ ಎನ್ನಲಾಗಿದೆ.

ರವಿವಾರ ಸಂಜೆ ಡಿಸಿಎಂ ಲಕ್ಷ್ಮಣ ಸವದಿ ಶಾಸಕ ಹಾಲಪ್ಪ ಆಚಾರ್ ಅವರ ಮಸಬಹಂಚಿನಾಳ ನಿವಾಸಕ್ಕೆ ದಿಢೀರ್ ಭೇಟಿ ನೀಡಿ, ಕೆಲ ಕಾಲ ಚರ್ಚಿಸಿ ತೆರಳಿರುವುದು ಜಿಲ್ಲೆಗೆ ಮಂತ್ರಿಭಾಗ್ಯ ಸಿಗುವ ಕನಸಿಗೆ ರೆಕ್ಕೆ ಪುಕ್ಕ ಕಟ್ಟಿದಂತಾಗಿದೆ.

ಶಾಸಕ ಹಾಲಪ್ಪ ಆಚಾರ್ ಅವರನ್ನು ಸಚಿವರನ್ನಾಗಿಸುವ ಮೂಲಕ ಮುಂದಿನ ಚುನಾವಣೆಗೆ ಕ್ಷೇತ್ರ ಬಿಟ್ಟುಕೊಡಬೇಕೆಂಬ ಮಾತುಕತೆ ನಡೆಯಿತು ಎನ್ನಲಾಗಿದೆ. ಶಾಸಕರ ಪ್ರತಿಕ್ರಿಯೆ ಪಡೆಯಲು ಸಾಕಷ್ಟು ಪ್ರಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ.

ಮಹಾಮಂಡಳದ ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ಸಯ್ಯದ್ ನದಾಫ ನೇಮಕ

0

ವಿಜಯಸಾಕ್ಷಿ ಸುದ್ದಿ, ನವಲಗುಂದ

ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ನವಲಗುಂದ ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ಸಯ್ಯದ್ ನದಾಫ ನೇಮಕ ನೇಮಕಾಗೊಂಡಿದ್ದಾರೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಆದೇಶ ಪ್ರತಿಯೊಂದನ್ನು ನೀಡಿ ಸನ್ಮಾನಿಸಿ ಮಾತನಾಡಿದ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಜಾಕ್ ನದಾಫ್, ಸಧ್ಯದ ದಿನಮಾನದಲ್ಲಿ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೋರಾಟ ಹಾಗೂ ಸಂಘಟನೆ ಅನಿವಾರ್ಯ ಆಗಿರುವುದು ತಮಗೆ ತಿಳಿದ ವಿಷಯ.

ಪಿಂಜಾರ್ ಸಮಾಜದ ಶ್ರೇಯೋಭಿವೃದ್ಧಿಗೆ ಸಂಘಟನೆಯ ಮೂಲಕ ಘನ ಸರ್ಕಾರದ ಗಮನ ಸೆಳೆಯುವುದು ಅವಶ್ಯಕ ಹಾಗೂ ಅನಿವಾರ್ಯ. ಈ ನಿಟ್ಟಿನಲ್ಲಿ ಸಮಾಜದ ಯುವ ಹೋರಾಟಗಾರ ಸಯ್ಯದ್ ನದಾಫ ಇವರು ತಮ್ಮ ಕ್ರಿಯಾಶೀಲತೆ ಮತ್ತು ಸಂಘಟನೆಗೆ ತಮ್ಮ ಕಾರ್ಯ ವೈಖರಿ ಹಾಗೂ ಸಮರ್ಪಣಾ ಭಾವನೆಯನ್ನು ಗೌರವಿಸಿ ತಮ್ಮನ್ನು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ನವಲಗುಂದ ತಾಲೂಕು ಕಾರ್ಯಾಧ್ಯಕ್ಷರಾಗಿ ಸಯ್ಯದ್ ನದಾಫ
ಇವರ ನೇಮಕ ಬಹಳ ಸಂತೋಷ ವೆನಿಸುತ್ತದೆ ಎಂದು ಹೇಳಿದರು.

ತಮ್ಮ ಆಯ್ಕೆಯ ಉದ್ದೇಶ ಸಮುದಾಯದ ಸಂಘಟನೆ ಹಿನ್ನೆಲೆ, ಹೋರಾಟ, ಸಂಘಟನ ಚಾತುರ್ಯ ಹಾಗೂ ನಾನಾ ಜವಾಬ್ದಾರಿ ನಿರ್ವಹಣೆ ಮೂಲಕ ಈಗಾಗಲೇ ತಾಲ್ಲೂಕಿನಲ್ಲಿ ಗುರುತಿಸಿಕೊಂಡವರು ಎಂದು ಡಾ. ಅಬ್ದುಲ್ ರಜಾಕ್ ಹೇಳಿದರು.

ಇನ್ನೂ ಮಹಾಮಂಡಳದ ಕಾರ್ಯಾಧ್ಯಕ್ಷರಾಗಿ ಆದೇಶ ಪ್ರತಿ ಸ್ವೀಕರಿಸಿ ಮಾತನಾಡಿದ ಸಯ್ಯದ್ ನದಾಫ್, ಹೋರಾಟದ ಜೊತೆ ತಾಲ್ಲೂಕಿನಲ್ಲಿ ಸಂಘಟನೆಗೆ ಒತ್ತು ನೀಡಲಾಗುವುದು, ಅಷ್ಟೇ ಅಲ್ಲ ಈ ತಾಲೂಕು ಕಾರ್ಯಧ್ಯಕ್ಷ ಹುದ್ದೆ ಸಂಘಟನ ಕಾರ್ಯಕ್ಕೆ ವರದಂತೆ ಹೌದು. ಹಾಗಾಗಿ ಮಹಾಮಂಡಳದ ಪದಾಧಿಕಾರಿಗಳೊಂದಿಗೆ ಹೋರಾಟದ ಚಟುವಟಿಕೆಗಳೊಂದಿಗೆ ಸಂಘಟನೆಗೆ ಒತ್ತು ನೀಡುವ ಹೊಣೆಗಾರಿಕೆ ಹೆಚ್ಚಾಗಿರುತ್ತದೆ.
ಎಂದರು.

ಸಮುದಾಯದ ಸಂಘಟನೆ ಮಹಾಮಂಡಳದ ಸಿದ್ಧಾಂತ ಪ್ರತಿ ಪಾದಿಸಿ ಯುವಜನತೆ ಸೇರಿದಂತೆ ತಳಮಟ್ಟದಿಂದ ಸಮುದಾಯವನ್ನು ಕಟ್ಟಿ ಗಟ್ಟಿಗೊಳಿಸಿ ಸಂಘಟನೆ ಬಲಪಡಿಸುತ್ತೇನೇ ಎಂದು ಸಯ್ಯದ್ ಹೇಳಿದರು.

ಈ ಸಂದರ್ಭದಲ್ಲಿ ಸಮುದಾಯದ ಹಿರಿಯರಾದ ಖಾದರಸಾಬ್ ನದಾಫ್, ಪೀರಸಾಬ್ ನದಾಫ್, ನಬಿಸಾಬ ನದಾಫ್, ರಾಜು ನದಾಫ್, ಬಸನಗೌಡ ಪಾಟೀಲ್, ರಾಜು ಕೊಣ್ಣೂರ್ ಹಾಗೂ ಸಮುದಾಯದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.

ಗುಜರಾತ್‌ನ ಹನುಮ ದೇಗುಲಕ್ಕೆ ಅಂಜನಾದ್ರಿಯ ಶಿಲೆ, ಮೂರ್ತಿ ಒಯ್ದ ರಾಜ್ಯಪಾಲರು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಗುಜರಾತ್‌ನ ಆನಂದ್ ಜಿಲ್ಲೆಯ ರಾಜ್ಯಪಾಲರ ಸ್ವಗ್ರಾಮ ಲಂಬಾವೇಲಾದಲ್ಲಿ ನಿರ್ಮಾಣ ಆಗುತ್ತಿರುವ ಆಂಜನೇಯನ ದೇಗುಲಕ್ಕೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಶಿಲೆ ಹಾಗೂ ಹನುಮ ಮೂರ್ತಿಯನ್ನು ರಾಜ್ಯಪಾಲ ವಜೂಭಾಯಿ ರೂಢಬಾಯಿ ವಾಲಾ ತೆಗೆದುಕೊಂಡು ತೆರಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರಾಮಭಕ್ತರು ಎಷ್ಟಿದ್ದಾರೊ, ಅಷ್ಟೇ ಹನುಮಭಕ್ತರೂ ಇದ್ದಾರೆ. ಅಂತೆಯೇ ಹನುಮನಿಗೆ ನಿತ್ಯಪೂಜೆ, ಭಕ್ತಕೋಟಿ ನಡೆದುಕೊಳ್ಳುತ್ತಾರೆ. ನಮ್ಮ ಸ್ವಗ್ರಾಮದಲ್ಲಿ ನಿರ್ಮಾಣ ಆಗುತ್ತಿರುವ ಆಂಜನೇಯನ ದೇವಸ್ಥಾನಕ್ಕೆ ಹನುಮ ಜನಿಸಿದ ಸ್ಥಳ ಅಂಜನಾದ್ರಿಯ ಶಿಲೆ, ಮೂರ್ತಿಯನ್ನು ಒಯ್ಯಲಾಗುತ್ತಿದೆ ಎಂದರು.

ನಿನ್ನ ಕೆಲಸವನ್ನು ನಿಷ್ಕಲ್ಮಶವಾಗಿ ಮಾಡು, ಪ್ರತಿಫಲವನ್ನು ಭಗವಂತನಿಗೆ ಬಿಡು ಎನ್ನುವುದಕ್ಕೆ ಮಾರುತಿ ಸಾಕ್ಷಿ. ಇಲ್ಲಿನ ಅಂಜನಾದ್ರಿ ಪೂಜಾ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಲಾರೆ. ಇಲ್ಲಿನ ಆಡಳಿತ ಅದನ್ನು ಬಗೆ ಹರಿಸುತ್ತದೆ ಎಂದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಎಸ್ಪಿ ಡಿ. ಶ್ರೀಧರ್, ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

ಗಣರಾಜ್ಯೋತ್ಸವದ ಅಂಗವಾಗಿ ಜೆಸ್ಕಾಂ ಕ್ರೀಡಾಕೂಟಕ್ಕೆ ಚಾಲನೆ

0

ವಿಜಯಸಾಕ್ಷಿ ಸುದ್ದಿ ಕಾರಟಗಿ
ಪಟ್ಟಣದ ಕೆಪಿಟಿಸಿಎಲ್ ಮತ್ತು ಜೇಸ್ಕಾಂ ವತಿಯಿಂದ ಕಾರಟಗಿ ಉಪವಿಭಾಗದ ಆವರಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಅಧಿಕಾರಿಗಳ ಮತ್ತು ನೌಕರರು ಹಾಗೂ ಗುತ್ತಿಗೆದಾರರು ಮತ್ತು ಗ್ರಾಮ-ವಿದ್ಯುತ್-ಪ್ರತಿನಿಧಿಗಳ ಉಪಸ್ಥಿತಿಯಲ್ಲಿ 2021ನೇ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅರುಣ್ ಕುಮಾರ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಕ್ರೀಡಾಕೂಟವನ್ನು ಕ್ರಿಕೆಟ್ ಆಡುವುದರ ಮೂಲಕ ಪ್ರಾರಂಭಿಸಲಾಯಿತು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನಾಗರಾಜ ಕುರೇಕೊಪ್ಪ ಮತ್ತು ಗಂಗಾವತಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಲ್ಲಾಭಕ್ಷಿ ಗುತ್ತಿಗೆದಾರರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (659) ಅಧ್ಯಕ್ಷ ನರಸಪ್ಪ. ಮತ್ತು ನವಲಿ ಶಾಖಾಧಿಕಾರಿಗಳಾದ ನಾಗಪ್ಪ, ಶ್ರೀರಾಮನಗರದ ಪ್ರಸಾದ್ ಮತ್ತು ಶಂಕ್ರಮ್ಮ ಪ್ರಭಾವತಿ ಕ್ರೀಡಾಕೂಟದಲ್ಲಿ ಎಲ್ಲಾ ಕೆಪಿಟಿಸಿಎಲ್ ಮತ್ತು ಜೆಸ್ಕಾಂ ಸಿಬ್ಬಂದಿ ವರ್ಗ ಲೈನ್ ಮ್ಯಾನ್ ಗಳು ಭಾಗವಹಿಸಿದ್ದರು.

ಡಿಕೆಶಿಗೆ ಜನ ಬೆಂಬಲವಿಲ್ಲ, ಸಿದ್ರಾಮಯ್ಯನವರೇ ಅವರ ಕಾರ್ಯಶೈಲಿ ಒಪ್ಪುತ್ತಿಲ್ಲ: ಸಂಸದೆ ಶೋಭಾ

ವಿಜಯಸಾಕ್ಷಿ ಸುದ್ದಿ, ಮಂಗಳೂರು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೋತು, ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಹಾಗಾಗಿ ಡಿಕೆಶಿ ಸಿದ್ದರಾಮಯ್ಯ ಆತಂಕಗೊಂಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಕಾಂಗ್ರೆಸ್ ನಾಯಕರನ್ನು ಕುಟಕಿದರು.

ಮಂಗಳೂರಿನಲ್ಲಿ ಈ ಮೇಲಿನಂತೆ ಹೇಳಿದ ಅವರು, ಕೊರೊನಾದಂತಹ ಸಂದಿಗ್ದ ಸ್ಥಿತಿಯಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿದ್ದರೂ ಕಾಂಗ್ರೆಸ್ ಅನಾವಶ್ಯಕವಾದ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.

ಡಿಕೆಶಿ ಬಿಜೆಪಿ ಯಾತ್ರೆ ಅನುಸರಿಸೋಕೆ ಹೋಗಿದ್ದಾರೆ. ಅವರಿಗೆ
ಜನಬೆಂಬಲ‌ವಿಲ್ಲ. ಸಿದ್ದರಾಮಯ್ಯನವರೇ ಡಿಕೆಶಿ ಕಾರ್ಯಶೈಲಿ ಒಪ್ಪುತ್ತಿಲ್ಲ.
ಕಾಂಗ್ರೆಸ್ ನಲ್ಲಿ ಗೊಂದಲವಿದ್ದು,
ಗೊಂದಲ ಮರೆಮಾಚಲು ಬಿಜೆಪಿ ಮೇಲೆ ಅನಗತ್ಯ ಆರೋಪ ಮಾಡುತ್ತಿದೆ ಎಂದು ದೂರಿದರು.

ಸಿದ್ದರಾಮಯ್ಯ ಗೋಮಾಂಸ ಸೇವನೆ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದರು, ಒಂದು ಸಮುದಾಯವನ್ನು ಓಲೈಸಲು ಸಿದ್ದರಾಮಯ್ಯ ಪ್ರಯತ್ನ ಪಡುತ್ತಿದ್ದು, ನಾಟಕವಾಡುತ್ತಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ಗೊಂದಲದಲ್ಲಿದ್ದಾರೆ ಎಂದು
ಹೇಳಿದರು.

ಬೈಕ್ ಗೆ ಟಿಪ್ಪರ್ ಡಿಕ್ಕಿ, ವ್ಯಕ್ತಿ ಸ್ಥಳದಲ್ಲೇ ಸಾವು: ಗ್ರಾಮಸ್ಥರ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಗದಗ

ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ನಡೆದಿದೆ.

ಅಡವಿಸೋಮಾಪೂರ ಗ್ರಾಮದ ಪೀರಸಾಬ ಕುಮನೂರ (55) ಸ್ಥಳದಲ್ಲೆ ಮೃತಪಟ್ಟಿರುವ ದುರ್ದೈವಿ.

ರಸ್ತೆ ಕಾಮಗಾರಿಗೆ ಮಣ್ಣು ಸಾಗಿಸುತ್ತಿದ್ದ BSCPL ಒಡೆತನದ ವಾಹನ ಇದಾಗಿದ್ದು, ನಿತ್ಯ ಸಾಮರ್ಥ್ಯಕ್ಕಿಂತ ಮಿತಿಮೀರಿ ಮಣ್ಣು ಸಾಗಿಸುತ್ತಿವೆ. ಟಿಪ್ಪರ್ ಗಳ ಹಾವಳಿಯಿಂದ ಇಲ್ಲಿನ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.

ಇನ್ನು ಬೈಕ್ ಗೆ ಡಿಕ್ಕಿ ಹೊಡೆದದ್ದರಿಂದ ಸ್ಥಳೀಯರು ರಸ್ತೆ ತಡೆ ನಡೆಸಿ
BSCPL ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.

ಸಾರಿಗೆ ಡಿಸಿ ಹಿರೇಮಠ ರಿಂದ ಕೊಲೆ ಬೆದರಿಕೆ: ಪ್ರಕರಣ ದಾಖಲು

ವಿಜಯಸಾಕ್ಷಿ ಸುದ್ದಿ, ಗದಗ

ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕೆಎಸ್‌ಆರ್ ಟಿಸಿ ಡಿಸಿ ಫಕ್ಕೀರಯ್ಯ ಹಿರೇಮಠ ಅವರ ವಿರುದ್ಧ ರೈತರೊಬ್ಬರು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಕುಂಬಾರಗಟ್ಟಿ ಪ್ಲಾಟ್ ನ ಚಿದಾನಂದ ಹರಿಜನ ಎಂಬುವವರೇ ದೂರು ನೀಡಿದವರು.

ಅನೇಕ ವರ್ಷಗಳಿಂದ ನ್ಯಾಯಯುತ ಹೋರಾಟ ಮತ್ತು ಸಂಘಟನೆ ಮಾಡಿಕೊಂಡು ಬಂದಿದ್ದೇನೆ. ಕಳೆದ ಸೆಪ್ಟೆಂಬರ್ ೧೨ ರಂದು ಹೋರಾಟದ ಬಗ್ಗೆ ಕೇಳಲು ಹೋದಾಗ ಸಾರಿಗೆ ಡಿಸಿ ಫಕ್ಕೀರಯ್ಯ ಅವರು, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೇ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಿನ್ನೆ (ಜ.೮) ರಂದು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗದಗ ಶಹರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕಾಲಿಕ ಸುರಿದ ಮಳೆ, ನೆಲಕಚ್ಚಿದ ಬೆಳೆ; ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕು ಸೇರಿದಂತೆ ಹಲವಡೆ ತಡರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು, ಸೂಕ್ತ ಪರಿಹಾರ ನೀಡದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಜಿಲ್ಲೆಯಾದ್ಯಂತ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಠಿಸಿದೆ. ಈ ವರುಣನ ಆರ್ಭಟಕ್ಕೆ ಬಿಳಿಜೋಳ, ಕಡಲೆ, ಗೋಧಿ, ಹತ್ತಿ ಬೆಳೆಗಳು ನೆಲಕ್ಕುರುಳಿ ನಾಶವಾಗಿವೆ. ಇನ್ನು ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಮಳೆಗಾಳಿಗೆ ನೆಲಕ್ಕುರಿಳಿದ್ದು, ಧರೆಗುರುಳಿದ ಬೆಳೆ ಕಂಡು ರೈತ ಕಣ್ಣೀರು ಹಾಕುತ್ತಿದ್ದಾರೆ. ಈಗಾಗಲೇ ಕೆಲವು ಬೆಳೆ ಕಟಾವಿಗೆ ಬಂದಿದ್ದು, ಇನ್ನು ಕೆಲವು ಬೆಳೆ ಕಾಳುಕಚ್ಚುವ ಸಂದರ್ಭದಲ್ಲಿ ಜಮೀನಿನಲ್ಲಿ ನೀರು ನಿಂತು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಪ್ರಸಕ್ತ ಸಾಲಿನ ಮುಂಗಾರುನ ಹಂಗಾಮಿನಲ್ಲಾದ ಅತಿವೃಷ್ಠಿಯಿಂದ ಬೆಳೆಗಳೆಲ್ಲಾ ಹಾಳಾಗಿದ್ದವು. ಇದೀಗ ಹಿಂಗಾರು ಹಂಗಾಮಿನಲ್ಲೂ ಬೆಳೆಗಳು ಹಾನಿಗೊಳಗಾಗಿದ್ದು, ಸಾಲಸೂಲ ಮಾಡಿರುವ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕೀಡಾಗಿದ್ದಾರೆ. ಅಲ್ಲದೇ, ಪ್ರಕೃತಿ ವಿಕೋಪದಿಂದಾಗಿ ಜಾನುವಾರುಗಳಿಗೆ ಮೇವು ಇಲ್ಲದೆ, ರೈತರ ಹೊಟ್ಟೆಗೆ ಹಿಟ್ಟು ಇಲ್ಲದೆ ಬದುಕುವುದು ದುಸ್ತರವಾಗುತ್ತಿದೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಲ್ಲೂ ನೂರಾರು ಹೆಕ್ಟೆರ್ ಪ್ರದೇಶ ಹಾನಿಗೊಳಗಾಗಿದ್ದು, ಇನ್ನೂವರೆಗೂ ಪರಿಹಾರ ಬೆಳೆಗಳಿಗೆ ಸೂಕ್ತ ಪರಿಹಾರ ವಿತರಿಸಿಲ್ಲ. ಈಗಲೂ ಅಕಾಲಿಕ ಮಳೆಯಿಂದ ಆಹಾನಿಯಾಗಿದ್ದು, ಮುಂಗಾರು ಮತ್ತು ಮುಂಗಾರು ಮಳೆಯಿಂದಾಗಿರುವ ನಷ್ಟ ಭರಿಸಬೇಕು ಎಂದು ರೈತರು ಆಗ್ರಹಿಸಿದರು.

ಪದೇ ಪದೇ ಸಂಭವಿಸುತ್ತಿರುವ ಪ್ರಕೃತಿ ವಿಕೋಪದಿಂದಾಗಿ ಬೆಳೆ ನಾಶವಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಿ, ಸೂಕ್ತ ಪರಿಹಾರ ನೀಡಬೇಕು.

ಶಂಕರ್‌ಗೌಡ್ರ ಎಂ.ಜಯನಗೌಡ್ರ, ರೈತ

ಗೊಂದಲ ಸೃಷ್ಟಿಸಿದ ಮಾಜಿ ಸಚಿವ ರಾಯರಡ್ಡಿ! -ರಾಯರಡ್ಡಿಗೆ ಧಿಕ್ಕಾರ, ಹಾಲಪ್ಪ ಆಚಾರ್‌ಗೆ ಜೈಕಾರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ದೇಶದ ಮೊದಲ ಟಾಯ್ ಕ್ಲಸ್ಟರ್ ಭೂಮಿ ಪೂಜೆ ಸಮಾರಂಭ ಕೆಲ ಕಾಲ ಗೊಂದಲದ ಗೂಡಾಗಿ ಆತಂಕಕ್ಕೆ ಎಡೆ ಮಾಡಿಕೊಟ್ಟಿತು. ಇದಕ್ಕೆ ಕಾರಣ ಮಾಜಿ ಸಚಿವ ಬಸವರಾಜ ರಾಯರಡ್ಡಿ!

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಭಾಷಣ ಮಾಡುವಾಗ ನನ್ನ ಗಂಟಲು ಸರಿ ಇಲ್ಲ. ಒಂದು ನಿಮಿಷ ಮಾತಾಡ್ತಿನಿ. ನನ್ನ ಭಾಷಣವನ್ನು ಶಾಸಕ‌ ಮಿತ್ರ ಅಮರೇಗೌಡ ಬಯ್ಯಾಪುರ ಓದುತ್ತಾರೆ ಎಂದದ್ದೇ ತಡ.. ಕಸಿವಿಸಿಗೊಂಡ ಮಾಜಿ ಸಚಿವ ಬಸವರಾಜ ರಾಯರಡ್ಡಿ ನಾನು ಮಾತಾಡ್ತಿನಿ ಅಂತ ಎಲ್ಲಿ ಹೇಳಿದಿನಿ ಅಂತ ವಿನಾಕಾರಣ ತಗಾದೆ ತೆಗೆದು ವೇದಿಕೆ ಮೇಲೆ ಗೊಂದಲ ಸೃಷ್ಟಿಸಿದರು. ರಾಯರಡ್ಡಿ ಅವರ ಈ ವರ್ತನೆ ವೇದಿಕೆ ಮೇಲಿದ್ದವರಿಗೆ ಮುಜುಗರ ತಂದರೆ ವೇದಿಕೆ ಮುಂಭಾಗದಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಆಕ್ರೋಶ ತಂದಿತು‌.

ರಾಯರಡ್ಡಿ ಅವರ ಈ ವರ್ತನೆಯಿಂದ ಕೆಂಡಾಮಂಡಲರಾದ ಕಾರ್ಯಕರ್ತರು ಕಾರ್ಯಕ್ರಮದಿಂದ ಎದ್ದು ನಡಿ ಎಂದು ಕೂಗಿದರು. ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಜೊತೆಗೆ ರಾಯರಡ್ಡಿಗೆ ಧಿಕ್ಕಾರ ಎಂದು‌ ಕೂಗಿದ ಕಾರ್ಯಕರ್ತರು ಶಾಸಕ ಹಾಲಪ್ಪ ಆಚಾರ್‌ಗೆ ಜೈಕಾರ ಹಾಕಿದರು.

ಒಟ್ಟಾರೆ ಸಿಎಂ ಸಮ್ಮುಖದಲ್ಲಿ ಈ ಗೊಂದಲ ಉಂಟಾಗಿದ್ದು, ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಪರಿಸ್ಥಿತಿ ತಿಳಿಗೊಳಿಸಿದರು.

error: Content is protected !!