Home Blog Page 3096

ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಸಚಿವ ಮಾಧುಸ್ವಾಮಿ: ನೀರು ಕೇಳಿದ ಗ್ರಾಮಸ್ಥರಿಗೆ ಅಸಂವಿಧಾನಿಕ ಪದ ಬಳಕೆ

0

ವಿಜಯಸಾಕ್ಷಿ ಸುದ್ದಿ, ತುಮಕೂರು: ಸಚಿವ ಮಾಧುಸ್ವಾಮಿ ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಘಟನೆ ನಡೆದಿದೆ. ಗ್ರಾಮಸ್ಥರು ನೀರು ಕೇಳಿದ್ದಕ್ಕೆ ಅವಾಚ್ಯ ಶಬ್ದದಿಂದ ಸಚಿವರು ನಿಂದಿಸಿದ್ದಾರೆ.

ಜಿಲ್ಲೆಯ ಶಿರಾ ತಾಲೂಕಿನ ಗೋಪಾಲದೇವರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೀರು, ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ, ಗ್ರಾ.ಪಂ. ಚುನಾವಣೆಯನ್ನು ಈ ಗ್ರಾಮಸ್ಥರು ಬಹಿಷ್ಕರಿಸಿದ್ದರು.

ಇನ್ನು ಚುನಾವಣೆ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವ ಮಾಧುಸ್ವಾಮಿ, ಚುನಾವಣೆ ಬಹಿಷ್ಕರಿಸಿದ್ದಕ್ಕೆ ಕುಪಿತಗೊಂಡು ಆಕ್ರೋಷ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ, ಹೇಮಾವತಿ ನೀರು ಕೇಳಿದ ರೈತರಿಗೆ ತರಾಟೆ ತೆಗೆದುಕೊಂಡರು.

ಅಷ್ಟೇ ಅಲ್ಲದೇ ನೆರದಿದ್ದವರಿಗೆ ಅಸಂವಿಧಾನಿಕ ಪದಗಳ ಬಳಸಿ ಅವಾಜ್ ಹಾಕಿದರು. ಶೇಷೇನಹಳ್ಳಿ ಕೆರೆ,ದೊಡ್ಡ ಅಗ್ರಹಾರ ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕು ಅಂತಾ ರೈತರು ಒತ್ತಾಯಿಸಿದ್ದರು. ಮಾಧುಸ್ವಾಮಿ ಅವರು ಬಾಯಿ ಹರಿಬಿಟ್ಟ ವಿಡಿಯೋ ಈಗ ವೈರಲ್ ಆಗಿದೆ.

ಕುಡಿದ ಮತ್ತಿನಲ್ಲಿ ಜೀವ ತೆಗೆದರಾ ತಹಸೀಲ್ದಾರ್?

0

ವಿಜಯಸಾಕ್ಷಿ ಸುದ್ದಿ, ತುಮಕೂರು: ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಯುವಕನ ಸಾವಿಗೆ ತಹಸೀಲ್ದಾರ್ ಒಬ್ಬರು ಕಾರಣರಾಗಿದ್ದಾರಾ ಎನ್ನುವ ಅನುಮಾನ ಬರುವಂತ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮದ್ಯದ ಮತ್ತಿನಲ್ಲಿ ಹರೀಶ್(25) ಎಂಬ ಯುವಕನಿಗೆ ಪಾವಗಡ ತಹಸೀಲ್ದಾರ್ ನಾಗರಾಜು ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹರೀಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಪಾವಗಡ-ಮಡಕಶಿರಾ ರಸ್ತೆಯ ರಾಜವಂತಿ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಗಾಯಗೊಂಡಿದ್ದ ಹರೀಶ್ ನನ್ನು ಆಸ್ಪತ್ರೆಗೆ ಸೇರಿಸುವ ಸೌಜನ್ಯವನ್ನೂ ತಹಸೀಲ್ದಾರ್ ನಾಗರಾಜು ತೋರಿಸದೇ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದು ರಾಜವಂತಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ತಡೆಯಲು ಹೋದ ಗೂರ್ಖಾ ಥಳಿಸಿ ಪರಾರಿಯಾದ ದರೋಡೆಕೊರರು

ವಿಜಯಸಾಕ್ಷಿ ಸುದ್ದಿ, ನರಗುಂದ

ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಗೂರ್ಖಾ ಮೇಲೆ ನಾಲ್ಕೈದು ಜನರ ಇದ್ದ ತಂಡ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ
ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಬೆಳಗಿನ ಜಾವ ನಡೆದಿದೆ.

ನೇಪಾಳ ಮೂಲದ ನರ್ಸಿಂಗ್ ಹರೀಶಸಿಂಗ್ ಸೌಧ್ ಎಂಬ (60) ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ.

ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿ ಕಳ್ಳತನ ಮಾಡುವುದನ್ನು ತಡೆಯಲು ಮುಂದಾಗಿದ್ದಕ್ಕೆ ದುಷ್ಕರ್ಮಿಗಳು ರಾಡ್ ಸೇರಿದಂತೆ ಮಾರಾಕಾಸ್ತ್ರಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ತೀವ್ರ ಗಾಯಗೊಂಡ ಗೂರ್ಖಾನನ್ನು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

ನರ್ಸಿಂಗ್ ಹರೀಶಸಿಂಗ್ ಸೌದ್ ಕಳೆದ 40 ವರ್ಷಗಳಿಂದ ಪಟ್ಟಣದಲ್ಲಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ.

ಸುದ್ದಿ ತಿಳಿದ ವ್ಯಾಪಾರಸ್ಥರು ಮಾರುಕಟ್ಟೆ ಪ್ರದೇಶದಲ್ಲಿ ಜಮಾವಣೆಗೊಂಡಿದ್ದು, ಪದೇ ಪದೇ ಕಳ್ಳತನ ಪ್ರಕರಣ ನಡೆಯುತ್ತಿದ್ದರೂ ಕಳ್ಳರನ್ನು ಹಿಡಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಾವಿಯಲ್ಲಿ ಶವ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಕೊಲೆ ಮಾಡಿದ್ದವರೀಗ ಪೊಲೀಸರ ಅತಿಥಿ

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ: ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದ, ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ನಿವಾಸಿ ಶಿವಮ್ಮ ಎಂಬಾಕೆಯ ಶವ ಬಾವಿಯಲ್ಲಿ ಪತ್ತೆಯಾದ ಪ್ರಕರಣಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಂತೆ ಇಬ್ಬರು ಯುವಕರನ್ನು ಕೊಳ್ಳೇಗಾಲ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಶಿವು ಹಾಗೂ ರಾಜು ಬಂಧಿತ ಆರೋಪಿಗಳಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಮಧುವನಹಳ್ಳಿ ಗ್ರಾಮದ ಶಿವಮ್ಮ ನೆರೆ ಮನೆಯವರಾದ ನಂಜಮಣಿ ಎಂಬುವರಿಗೆ 1 ಲಕ್ಷ ರೂಪಾಯಿ ಸಾಲ ನೀಡಿದ್ದರು. ಕೊಟ್ಟಿದ್ದ ಸಾಲದ ಹಣವನ್ನು ವಾಪಸ್ ಕೇಳಿದಾಗ ನಂಜುಮಣಿ ಪದೇ ಪದೇ ನೆಪ ಹೇಳುತ್ತಿದ್ದರು ಎನ್ನಲಾಗಿದ್ದು, ಮೂರು ದಿನಗಳ ಹಿಂದೆ ಶಿವಮ್ಮ ಬಹಿರ್ದೆಸೆಗೆ ತೆರಳಿದ್ದ ವೇಳೆ ಕಾಲಿಗೆ ಕಲ್ಲು ಕಟ್ಟಿ ಗ್ರಾಮದ ಬಾವಿಗೆ ಬಿಸಾಡಿದ್ದಾರೆ ಎನ್ನಲಾಗಿದೆ.

ಶನಿವಾರ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾಲ ಪಡೆದಿದ್ದ ನಂಜಮಣಿಯ ಮಗ ಶಿವು ಹಾಗೂ ಸ್ನೇಹಿತ ರಾಜು ಎಂಬುವವರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಶಿವಮ್ಮ ಅವರ ಕುಟುಂಬಸ್ಥರೂ ದೂರು ನೀಡಿದ್ದರು.

ದೂರು ಬಂದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಗ್ರಾಮೀಣ ಪೊಲೀಸರು ಹತ್ಯೆ ಮಾಡಿರುವ ಶಂಕೆಯ ಮೇಲೆ ಶಿವು ಮತ್ತು ರಾಜು ಎಂಬ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಆರೋಪಕ್ಕೆ ಜಾರಕಿಹೊಳಿ ಪುರಾವೆ: ಬಿಜೆಪಿಯಲ್ಲಿ ಅತೃಪ್ತಿ ತಾಂಡವ, ಜ.೨೦ ರಂದು ರಾಜಭವನ ಚಲೋ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಆಪರೇಷನ್ ಕಮಲಕ್ಕೆ ಯೋಗೀಶ್ವರ್ ಕೋಟ್ಯಾಂತರ ರೂಪಾಯಿ ಸಾಲ ಮಾಡಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳುವ ಮೂಲಕ ಈವರೆಗಿನ ನಮ್ಮ ಆರೋಪಕ್ಕೆ ಪುರಾವೆ ಒದಗಿಸಿದ್ದು, ಆಪರೇಷನ್ ಕಮಲದ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ಸತ್ಯ ಸಂಗತಿ ಬಹಿರಂಗಪಡಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಶಾಸಕರು ಬಿಜೆಪಿ ಸೇರಿದ್ದರೆ ಯೋಗೀಶ್ವರ್ ೯ ಕೋಟಿ ರೂಪಾಯಿ ಸಾಲ ಮಾಡುವ ಅಗತ್ಯವೇನಿತ್ತು?. ಈ ಆರೋಪ ನಾವು ಮಾಡಿದ್ದರೆ ವಿರೋಧ ಪಕ್ಷಗಳು ಸುಳ್ಳು ಹೇಳುತ್ತಿವೆ ಎಂದು ನಿರಾಕರಿಸಬಹುದಿತ್ತು. ಈಗ ಅವರದ್ದೇ ಪಕ್ಷದ ಸಚಿವರು ಹೇಳಿದ್ದಾರಲ್ಲಾ, ಇದಕ್ಕೆ ಏನನ್ನುತ್ತಾರೆ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ರಾಜ್ಯದಲ್ಲಿ ಸರ್ಕಾರವೇ ಜೀವಂತವಾಗಿಲ್ಲ. ಇನ್ನು ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಮಾಡಿದರೆ ಜನರ ಮೇಲೆ ಯಾವ ಪರಿಣಾಮ ಬೀರಲು ಸಾಧ್ಯ. ಬಿಜೆಪಿಯಲ್ಲಿ ಒಳಜಗಳ, ಭ್ರಷ್ಟಾಚಾರ, ಅತೃಪ್ತಿ ತಾಂಡವವಾಡುತ್ತಿದೆ. ಹೀಗಿರುವಾಗ ಅಭಿವೃದ್ದಿ ಕೆಲಸಗಳು ದೂರದ ಮಾತು ಎಂದು ಸಿದ್ದರಾಮಯ್ಯ ಟೀಕಿಸಿದರು.

ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಪಡೆಯುವುದು ಪ್ರತಿಯೊಬ್ಬ ಶಾಸಕನ ಹಕ್ಕಾಗಿದೆ. ಹೀಗಿದ್ದಾಗ ಬ್ಲಾಕ್‌ಮೇಲ್ ಮಾಡುವ ಅಗತ್ಯವೇನಿದೆ.

ಚಾಮರಾಜಪೇಟೆ ಕ್ಷೇತ್ರಕ್ಕೆ ಶಾಸಕ ಜಮೀರ್‌ಅಹ್ಮದ್ ಕೇಳಿದಷ್ಟು ಸಿಎಂ ಅನುದಾನ ನೀಡಿದ್ದರೆ, ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಅರ್ಥವಿರುತ್ತಿತ್ತು. ಮಂತ್ರಿಗಿರಿ ಕೈತಪ್ಪಿದ್ದರಿಂದ ಹತಾಶರಾಗಿ ಆಡಿರುವ ಮಾತುಗಳಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಯತ್ನಾಳ್‌ಗೆ ತಿರುಗೇಟು ನೀಡಿದರು.

ಕೃಷಿಗೆ ಮಾರಕವಾದ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಕಾಂಗ್ರೆಸ್ ಪಕ್ಷ ಶುಕ್ರವಾರ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಸಂಕ್ರಾಂತಿ ಹಬ್ಬದ ಕಾರಣಕ್ಕೆ ರಾಜ್ಯದಲ್ಲಿ ನಾವು ನಿನ್ನೆ ಪ್ರತಿಭಟನೆ ಮಾಡಿಲ್ಲ. ಹಾಗಾಗಿ ಜ.೨೦ ರಂದು ‘ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಭಯ ಮತ್ತು ಅರಾಜಕತೆ ಸೃಷ್ಟಿಸಲು ಸಂಚು ಆರೋಪ: ರೈತ ಮುಖಂಡನಿಗೆ ಎನ್‌ಐಎಯಿಂದ ಸಮನ್ಸ್ ಜಾರಿ

ವಿಜಯಸಾಕ್ಷಿ ಸುದ್ದಿ, ಅಮೃತಸರ್

ಕೃಷಿ ಕಾನೂನುಗಳ ವಾಪಸಾತಿಗೆ ಆಗ್ರಹಿಸಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿರುವ ರೈತ ಸಂಘಟನೆಗಳ ಪೈಕಿ ಒಂದಾಗಿರುವ ಲೋಕ್ ಭಲಾಯಿ ಇನ್ಸಾಫ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಬಲದೇವ್ ಸಿಂಗ್ ಸಿರ್ಸಾ ಅವರಿಗೆ ರಾಷ್ಟ್ರೀಯ ತನಿಖಾ ಏಜನ್ಸಿ ಸಮನ್ಸ್ ಜಾರಿಗೊಳಿಸಿದೆ.

ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ನಾಯಕ ಗುರ್ಪತ್ವಂತ್ ಸಿಂಗ್ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳನ್ವಯ ದಾಖಲಾಗಿರುವ ಪ್ರಕರಣ ಸಂಬಂಧ ಸಿರ್ಸಾಗೆ ಸಮನ್ಸ್ ಜಾರಿ ಮಾಡಿದೆ.

ಜ.17ರಂದು ಎನ್‌ಐಎಯ ಹೊಸದಿಲ್ಲಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ. ‘ಸರ್ಕಾರದ ವಿರುದ್ಧ ಬಂಡಾಯವೆಬ್ಬಿಸಲು ಜನರನ್ನು ಪ್ರಚೋದಿಸುತ್ತಿದ್ದಾರೆ. ಭಯ ಮತ್ತು ಅರಾಜಕತೆ ಸೃಷ್ಟಿಸಲು ಸಂಚು ಹೂಡಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ.

‘ರೈತರ ಪ್ರತಿಭಟನೆಯ ಹಳಿ ತಪ್ಪಿಸಲು ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಬಲದೇವ್ ಸಿಂಗ್ ಸಿರ್ಸಾ ಆರೋಪಿಸಿದ್ದಾರೆ.
‘ಸರ್ಕಾರ ಮೊದಲು ಸರ್ವೋಚ್ಛ ನ್ಯಾಯಾಲಯದ ಮೂಲಕ ರೈತರ ಪ್ರತಿಭಟನೆ ಹಳಿ ತಪ್ಪಿಸಲು ಯತ್ನಿಸಿತ್ತು, ಇದೀಗ ಎನ್‌ಐಎ ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

‘ರೈತರ ಹೋರಾಟದ ಭಾಗವಾಗಿರುವ ಹಲವು ಜನರ ವಿರುದ್ಧವೂ ಸಮನ್ಸ್ ಜಾರಿ ಮಾಡಿದೆ. ಇದು ರೈತರನ್ನು ಹೆದರಿಸುವ ಯತ್ನ. ಆದರೆ, ಇದು ನಮ್ಮನ್ನು ಬಾಧಿಸದು, ನಾವು ಜಗ್ಗುವುದಿಲ್ಲ. ಆದರೆ ಜ.26ರ ಕಿಸಾನ್ ಪೆರೇಡ್‌ಗೆ ಅಡ್ಡಿಯುಂಟು ಮಾಡಲು ಎನ್‌ಐಎ ಹಗಲು ರಾತ್ರಿ ಶ್ರಮಿಸುತ್ತಿದೆ. ಪ್ರತಿಭಟನೆಗೆ ಕೆಟ್ಟ ಹೆಸರು ತರಲು ಸರ್ಕಾರವೂ ಕಂಕಣ ಬದ್ಧವಾಗಿದೆ ಎಂದು ಬಲದೇವ್ ಸಿಂಗ್ ಸಿರ್ಸಾ ದೂರಿದರು.

ಸಿಡಿ ವಿಚಾರಕ್ಕೆ ಸಿಎಂ ಯಾಕಿಷ್ಟು ವೀಕ್? ಮೊದಲು ದನದ ಮಾಂಸ ರಫ್ತು ಮಾಡೋರನ್ನ ಜೈಲಿಗೆ ಹಾಕಿ: ಶಾಸಕ ರಾಘವೇಂದ್ರ ಹಿಟ್ನಾಳ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಸಿಡಿ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಇದನ್ನ ಸ್ವತಃ ಬಿಜೆಪಿ ಶಾಸಕರೇ ಹೇಳಿದಾರೆ. ಅದೇನು ಅನ್ನೋದು ಮೊದಲು ತನಿಖೆ ಆಗಲಿ. ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಯಾಕಿಷ್ಡು ವೀಕ್ ಆಗಿದ್ದಾರೊ ಗೊತ್ತಿಲ್ಲ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಕೊಪ್ಪಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಕೆಸರೆರೆಚಾಟ ಶುರುವಾಗಿದೆ. ಈ ಸರಕಾರ ಬಹಳ ದಿನ‌ ಉಳಿಯಲ್ಲ ಅಂತ ಬಿಜೆಪಿ ಶಾಸಕರೇ ಹೇಳ್ತಿದಾರೆ. ಸಿಡಿ ಇದ್ದರೆ ಬಿಡುಗಡೆ ಮಾಡಲಿ. ಸತ್ಯಾಸತ್ಯತೆ ಹೊರಗೆ ಬರಲಿ. ಸಿಡಿ ವಿಚಾರವಾಗಿ ನನಗೆ ಗೊತ್ತಿಲ್ಲ. ಬಿಜೆಪಿ ಶಾಸಕರೇ ಸಿಡಿ ವಿಚಾರ ಬಹಿರಂಗ ಪಡಿಸಿದ್ದಾರೆ. ನಮಗೂ ಸಂಶಯ ಬಂದಿದೆ. ಈ ಬಗ್ಗೆ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದರು.
ಈ ಸರಕಾರಕ್ಕೆ ದಪ್ಪಚರ್ಮ. ವಿರೋಧಪಕ್ಷವಾಗಿ ಕಾಂಗ್ರೆಸ್ ಸಮರ್ಥವಾಗಿ ಕೆಲಸ ಮಾಡ್ತಿದೆ. ದನದ ಮಾಂಸ ತಿನ್ನೋರನ್ನ ಜೈಲಿಗೆ ಹಾಕ್ತಿನಿ ಅನ್ನೋರು ಮಾಂಸ ರಫ್ತು ಮಾಡೋರನ್ನ ಜೈಲಿಗೆ ಯಾಕೆ ಹಾಕಲ್ಲ? ದನದ ಮಾಂಸ ಅತಿ ಹೆಚ್ಚು ರಫ್ತು ಮಾಡುವ ರಾಜ್ಯ ಯಾವುದು ಗೊತ್ತಿಲ್ವಾ?ಪ್ರತಿಯೊಬ್ಬ ತಿಂಗಳು ಎಂದು ಶಾಸಕ‌ ಹಿಟ್ನಾಳ ಪ್ರಶ್ನಿಸಿದರು.
ಅಸಮಾಧಾನ‌ ಬರೀ ಕಾಂಗ್ರೆಸ್‌ನಲ್ಲಲ್ಲ, ಬಿಜೆಪಿಯಲ್ಲಿ ಎಷ್ಟು ಜನ ಅಸಮಾಧಾನಿತರು ಇದಾರೆ ಅನ್ನೋದನ್ನ ಮಾಧ್ಯಮದಲ್ಲಿ ನೀವೇ ತೋರಸ್ತಿದಿರಲ್ಲ. ಅನುದಾನ ಹಂಚಿಕೆಯಲ್ಲಿ ಸರಕಾರ ಎಷ್ಟು ತಾರತಮ್ಯ ಮಾಡ್ತಿದೆ ಅನ್ನೋದನ್ನ ಸ್ವತಃ ಬಿಜೆಪಿ ಶಾಸಕ ಯತ್ನಾಳ ಅವರೇ ಹೇಳಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ನಂತರ ಹೈಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿತು. ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟು ವರ್ಷವಾದರೂ ಒಂದು ರೂಪಾಯಿ ಅನುದಾನ ಕೊಡಲಿಲ್ಲ.
ಹೈದ್ರಾಬಾದ್ ಕರ್ನಾಟಕ ಹೆಸರಿದ್ದಾಗ ಪ್ರತಿ ವರ್ಷ 1,100 ಕೋಟಿ ರೂಪಾಯಿ ಅನುದಾನ ಬರುತ್ತಿತ್ತು.
ಈ ಭಾಗ ಕಲ್ಯಾಣ ಕರ್ನಾಟಕ ಆದ ನಂತರ ಅಭಿವೃದ್ಧಿಯಲ್ಲಿ ಒಂದು ವರ್ಷ ಹಿಂದುಳಿದಂತಾಗಿದೆ.
ಈ ಸರಕಾರ ಕೊರೊನಾ ನೆಪದಲ್ಲಿ 8 ತಿಂಗಳು ಕಳೆದಿದೆ. ಕೊರೊನಾ ಕ್ರಮಕ್ಕಾಗಿ ಸುಮಾರು 5 ಸಾವಿರ ಕೋಟಿ ಖರ್ಚು ಮಾಡಿರುವ ಸರಕಾರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ದೇಶದ ಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತಾಗಲಿ. ಅನೇಕರು ಕೋವಿಡ್‌ನಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಈಗ ಲಸಿಕೆ ಬಂದಿರುವುದು ಸ್ವಾಗತಾರ್ಹ. ಶೀಘ್ರವೇ ಎಲ್ಲರಿಗೂ ಲಸಿಕೆ ಸಿಗುವಂತೆ ರಾಜ್ಯ ಮತ್ತು‌ ಕೇಂದ್ರ ಸರಕಾರ ಮಾಡಲಿ ಎಂದು ಶಾಸಕ‌ ರಾಘವೇಂದ್ರ ಹಿಟ್ನಾಳ ಒತ್ತಾಯಿಸಿದರು.

ಅಸಮಾಧಾನ ಇದ್ದರೆ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಲಿ: ಸಂಗಣ್ಣ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಅನ್ಯಾಯ, ಅಸಮಾಧಾನ ಇದ್ರೆ ಪಕ್ಷದ ಚೌಕಟ್ಟಿನಲ್ಲಿ ಬಗೆ ಹರಿಸಿಕೊಳ್ಳಬೇಕು ಎಂದು ಶನಿವಾರ
ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಸುದ್ದಿಗಾರರಿಗೆ ತಿಳಿಸಿದರು.
ಈ ವಿಷಯ ತಿಳಿಸಿ ಮಾತನಾಡಿದ ಅವರು, ಹಾಗೇನಾದರೂ ಸಮಸ್ಯೆ ಇದ್ದರೆ ಪಕ್ಷದ ವರಿಷ್ಠರು, ಹೈಕಮಾಂಡ್ ಬಳಿ ಹೇಳಬೇಕು. ಅದನ್ನ ಬಿಟ್ಟು ಈ ರೀತಿ ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ, ಮುಖಂಡರಿಗೆ ಮುಜುಗರ ತರಬಾರದು ಎಂದು ಕಿಡಿ ಕಾರಿದರು.
ಯಾವ ಕಾರಣಕ್ಕೆ ಯತ್ನಾಳ ಅವರಿಗೆ ನೀಡಲಾಗಿದ್ದ ಭದ್ರತೆ ಹಿಂಪಡೆದಿದ್ದಾರೊ ಗೊತ್ತಿಲ್ಲ. ಸಿಡಿ ಇದ್ದರೆ ಮೊದಲು ಹೊರಗೆ ಬರಲಿ, ಆಮೇಲೆ ತನಿಖೆ ಆಗೇ ಆಗುತ್ತೆ ಎಂದರು.
ಪಂಚಮಸಾಲಿ ಸಮಾಜದ ಪಾದಯಾತ್ರೆ ಕೊಪ್ಪಳಕ್ಕೆ ಬರ್ತಾ ಇದೆ. ನಾನು ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವೆ. ಪಾದಯಾತ್ರೆ ಶುರುವಾಗುವ ಮುನ್ನವೇ ಸಚಿವ ಸಿ.ಸಿ.ಪಾಟೀಲ ಜೊತೆಗೂಡಿ ಸಿಎಂ ಭೇಟಿಯಾಗಿದ್ದೇವೆ.
ಪಾದಯಾತ್ರೆಯಿಂದ ತೊಂದರೆ ಆಗುತ್ತೆ, ಸರಕಾರಕ್ಕೂ ಮುಜುಗರ ಅಂತ ಹೇಳಿದ್ದೇವೆ ಎಂದು ತಿಳಿಸಿದರು.
ಪಂಚಮಸಾಲಿ ಶ್ರೀಗಳೊಂದಿಗೆ ಮಾತನಾಡುವಂತೆ ಸಿಎಂಗೆ ಮನವಿ ಮಾಡಿಕೊಂಡಿದ್ದೇವೆ. ಶೀಘ್ರದಲ್ಲೇ ಮಾತನಾಡುವುದಾಗಿ ಸಿಎಂ ಭರವಸೆ ನೀಡಿದಾರೆ ಎಂದು ಕರಡಿ ಸಂಗಣ್ಣ ತಿಳಿಸಿದರು.

ಗುಂಡಿಕ್ಕಿ ಕೆಇಬಿ ನೌಕರನ ಹತ್ಯೆ!

0

ವಿಜಯಸಾಕ್ಷಿ ಸುದ್ದಿ, ಹಾಸನ: ಗುಂಡಿಕ್ಕಿ ಕೆಇಬಿ ನೌಕರನ ಹತ್ಯೆ ಮಾಡಿರುವ ದಾರುಣ ಘಟನೆ ಹಾಸನ ತಾಲೂಕಿನ ಹೂವಿನಹಳ್ಳಿ ಕಾವಲು ಬಳಿ ನಡೆದಿದೆ.

ಅರೇಕಲ್ಲು ಹೊಸಳ್ಳಿ ಗ್ರಾಮದ ಸಂತೋಷ್ (36) ಕೊಲೆಯಾದ ವ್ಯಕ್ತಿಯಾಗಿದ್ದು, ಗ್ರಾಮದ‌ ಬಳಿಯ ಹೊಲದಲ್ಲಿ ಶವ ಪತ್ತೆಯಾಗಿದೆ. ಕಳೆದ ರಾತ್ರಿ ಪಾರ್ಟಿ ಮುಗಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಶವದ ಪಕ್ಕದಲ್ಲಿ ಬಿದ್ದಿರುವ ಮದ್ಯದ ಬಾಟಲ್ ಹಾಗೂ ಊಟದ ಪ್ಯಾಕೆಟ್ ಗಳಿಂದ ಪೊಲೀಸರು ಈ ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆಗ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಚುಚ್ಚುಮದ್ದು ಲಸಿಕೆ ವಿತರಣೆ ಆರಂಭ: ಮೊದಲ ದಿನ ಏಳನೂರು ಜನರಿಗೆ ಲಸಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್ ಲಸಿಕೆ ವಿತರಣೆಗೆ
ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಕೋವಿಡ್ ಚುಚ್ಚುಮದ್ದು ಲಸಿಕೆ ವಿತರಣೆ ಶುರುವಾಗಿದೆ.

ಈಗಾಗಲೇ ಜಿಲ್ಲೆಗೆ 5500 ಡೋಸ್ ಲಸಿಕೆ ಆಗಮಿಸಿದ್ದು, ನಗರದ ದುಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಏಳು ಕೇಂದ್ರಗಳಲ್ಲಿ ಲಸಿಕೆ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

7 ಕೇಂದ್ರಗಳಲ್ಲಿ ತಲಾ 100 ಜನರಂತೆ, 700 ಜನರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇದಕ್ಕಾಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚುಚ್ಚುಮದ್ದು ವೀಕ್ಷಣಾ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

error: Content is protected !!