Home Blog Page 3103

ಮಗಳೊಂದಿಗೆ 1200 ಕಿ.ಮೀ ಸೈಕಲ್ ನಲ್ಲಿಯೇ ಕ್ರಮಿಸಿ ಸುದ್ದಿಯಾಗಿದ್ದ ವ್ಯಕ್ತಿ ಇನ್ನಿಲ್ಲ!

ವಿಜಯಸಾಕ್ಷಿ ಸುದ್ದಿ, ಪಾಟ್ನಾ

ಕೊರೊನಾ ಲಾಕ್ ನ್ ಸಂದರ್ಭದಲ್ಲಿ ಸೈಕಲಿನಲ್ಲಿಯೇ ಮಗಳೊಂದಿಗೆ 1,200 ಕಿ.ಮೀ ಕ್ರಮಸಿ ಸುದ್ದಿಯಾಗಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೋಹನ್ ಪಾಸ್ವಾನ್ ಎಂಬುವವರೇ ಸಾವನ್ನಪ್ಪಿರುವ ವ್ಯಕ್ತಿ. ದರ್ಭಾಂಗ ಜಿಲ್ಲೆಯಲ್ಲಿರುವ ಮನೆಯಲ್ಲಿಯೇ ಮೋಹನ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹಿಂದಿನ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ 7ನೇ ತರಗತಿಯ ವಿದ್ಯಾರ್ಥಿನಿ ತನ್ನ ತಂದೆಯನ್ನು ಸೈಕಲ್ ನಲ್ಲಿಯೇ ಕೂರಿಸಿಕೊಂಡು 1,200 ಕಿ.ಮೀ ಕ್ರಮಿಸಿ ಧೈರ್ಯ ತೋರಿದ್ದಳು.

ದೆಹಲಿಯಿಂದ ಬಿಹಾರ ಜಿಲ್ಲೆಯ ದರ್ಭಾಂಗಕ್ಕೆ ಸೈಕಲ್ ನಲ್ಲಿಯೇ ತನ್ನ ತಂದೆಯನ್ನು ಜ್ಯೋತಿ ಎಂಬ ಬಾಲಕಿ ಕರೆದುಕೊಂಡು ಹೋಗಿದ್ದಳು. ಈ ಮಧ್ಯೆ ಹಲವು ಏಳು- ಬೀಳುಗಳನ್ನು ಎದುರಿಸಿಕೊಂಡು ತನ್ನ ತಂದೆಯ ಜೊತೆ ಕೊನೆಗೂ ಊರು ಸೇರಿದ್ದಳು.

ನಾವು ತುಂಬಾನೇ ಬಡವರಾಗಿದ್ದು, ನಮ್ಮ ಕೈಯಲ್ಲಿ ಅಲ್ಪ-ಸ್ವಲ್ಪ ಹಣವಿತ್ತು. ಬಾಡಿಗೆ ಮನೆಯಲ್ಲಿದ್ದ ನಮ್ಮನ್ನು ಮಾಲೀಕ ಹಣ ಪಾವತಿಸಲು ಒತ್ತಾಯಿಸಿದ್ದರು. ಇಲ್ಲವೆಂದಲ್ಲಿ ಮನೆ ಖಾಲಿ ಮಾಡಬೇಕು ಎಂದು ಹೇಳಿದ್ದರು. ಹೀಗಾಗಿ ಊರಿಗೆ ಹೋಗಲು ಮುಂದಾಗಿದ್ದೇವು. ಟ್ರಕ್ ಚಾಲಕನ ಬಳಿ ನಮ್ಮನ್ನು ಕರೆದೊಯ್ಯುವಂತೆ ಕೇಳಿಕೊಂಡೆವು. ಆಗ ಆತ ರೂ. 6 ಸಾವಿರ ನೀಡಬೇಕು ಎಂದು ತಿಳಿಸಿದ. ಆದರೆ, ನಮ್ಮ ಬಳಿ ಹಣವಿರಲಿಲ್ಲ. ರೂ. 500 ನೀಡಿ ಒಂದು ಸೈಕಲ್ ಖರೀದಿಸಿ ಅದರಲ್ಲಿಯೇ ದರ್ಭಾಂಗಕ್ಕೆ ತಲುಪಿದೇವು ಎಂದು ಜ್ಯೋತಿ ಕುಮಾರಿ ಹೇಳಿದ್ದಳು.

ಜ್ಯೋತಿಯ ತಂದೆ ದೆಹಲಿಯಲ್ಲಿ ಇ-ರಿಕ್ಷಾ ಚಾಲಕರಾಗಿದ್ದರು. ಕೊರೊನಾದಿಂದ ರಿಕ್ಷಾವನ್ನು ಮಾಲೀಕನಿಗೆ ಕೊಟ್ಟಿದ್ದಾರೆ. ಆ ನಂತರ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುತ್ತಿದ್ದರು. ಕಾಲಿನಿಂದ ಬಳಲುತ್ತಿದ್ದ ಜ್ಯೋತಿ ತಂದೆಗೆ ನಡೆದಾಡಲು ಕಷ್ಟವಾಗುತ್ತಿತ್ತು. ಅವರ ಬಳಿ ರೂ. 600 ಮಾತ್ರ ಇತ್ತು. ದಾನಿಗಳ ನೆರವಿನಿಂದ ಹಾಗೂ ಕ್ಯಾಂಪ್ ಗಳು ನೀಡುವ ಆಹಾರದ ಮೂಲಕ ದಿನಕಳೆಯುತ್ತಿದ್ದೆವು ಎಂದಿದ್ದಳು. ಆದರೆ, ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಜಾಗದ ಸಮಸ್ಯೆ – ಎರಡು ಕುಟಂಬಗಳ ನಡುವೆ ಮಾರಾಮಾರಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು, ಒಂದು ಗುಂಪಿನ ಮೂವರು ಹಾಗೂ ಇನ್ನೊಂದು ಗುಂಪಿನ ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಆದರೆ,ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಈ ಗುಂಪುಗಳ ನಡುವೆ ಆಗಾಗ ಜಾಗದ ಕುರಿತು ತಕರಾರು ನಡೆಯುತ್ತಿತ್ತು. ಆದರೆ ಇಂದು ಇದೇ ಕಾರಣಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಗಬ್ಬೂರು ಬೈಪಾಸ್ ಬಳಿಯ ಹತ್ತಿರವಿರುವ ಆಟೋಮೊಬೈಲ್ ಹಿಂದಿನ ಜಾಗವೇ ಕಲಹದ ಮೂಲ ಕಾರಣ ಎನ್ನುತ್ತಾರೆ ಸ್ಥಳೀಯರು.

ಸೋಮವಾರ ಮತ್ತೆ ಇದೆ ವಿಚಾರ ವಿಕೋಪಕ್ಕೆ ಹೋಗಿ ವಾಗ್ವಾದ ನಡೆದು ಮಾರಣಾಂತಿಕವಾಗಿ ಹೊಡೆದಾಡಿಕೊಂಡ ಘಟನೆ ನಡೆದಿದೆ.

ಪಾಲಿಕೆಯ ಮಾಜಿ ಸದಸ್ಯ ಬಸೀರ ಅಹ್ಮದ್ ಗುಡ್ಮಾಲ್ ಕುಟುಂಬ ಹಾಗೂ ಆಸೀಪ್ ದಡವಾಡ್ ಕುಟುಂಬದ ಮಧ್ಯೆ ಜಾಗೆಯ ಬಗ್ಗೆ ಇರುವ ಹಳೆ ವೈಷಮ್ಯ ಹೊಗೆಯಾಡುತ್ತಿದೆ. ಇಂದು ಇದೇ ವಿಚಾರ ವಿಕೋಪಕ್ಕೆ ತಿರುಗಿ ಎರಡು ಗುಂಪಿನ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆಸೀಪ್ ದಡವಾಡ್, ಇರ್ಫಾನ್, ಸಾಬೀರ್ ಹಾಗೂ ಅವರ ಸಹಚರರು, ರಿಯಾಜ್ ಆಹ್ಮದ್ ಗುಡ್ಮಾಲ್, ಶಬ್ಬೀರ್ ಅಹ್ಮದ್ ಗುಡ್ಮಾಲ್ ಎಂಬುವವರ ಮಧ್ಯೆಯೇ ಹೊಡೆದಾಟ ನಡೆದಿದೆ. ಈ ಸಂದರ್ಭದಲ್ಲಿಯೇ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ.

ಈ ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬಸೀರ್ ಗುಡ್ಮಾಲ್ ಅವರು, ಸಮಾಜ ಸೇವೆಗೆ ಎಂದೇ ಬಳಕೆಯಾಗುತ್ತಿದ್ದ ಆಂಬುಲೇನ್ಸ್ ಸಮೇತ ಘಟನಾ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಗುಡ್ಮಾಲ್ ಕುಟುಂಬದವರು ಅಂಬುಲೇನ್ಸ್ ನಲ್ಲಿ ಮಾರಕಾಸ್ತ್ರಗಳನ್ನು ತುಂಬಿಕೊಂಡು ಬಂದು ನಮ್ಮ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಡವಾಡ್ ಪರಿವಾರದವರು ಆರೋಪಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕಸಬಾ ಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ವೈದ್ಯರು ನಾಯಿ, ಬೆಕ್ಕಿ ಏನು ಹೆಸರಿಟ್ಟಿದ್ದಾರೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮುದ್ದಿನ ನಾಯಿ ಹಾಗೂ ಬೆಕ್ಕಿನ ಮರಿಗೆ ಇಲ್ಲೊಬ್ಬ ವ್ಯಕ್ತಿ ವಿಚಿತ್ರವಾಗಿ ಹೆಸರಿಟ್ಟಿರುವ ಘಟನೆ ನಡೆದಿದೆ.

ಈ ವೈದ್ಯ ತಮ್ಮ ನಾಯಿ ಹಾಗೂ ಬೆಕ್ಕಿನ ಮರಿಗೆ ವ್ಯಾಕ್ಸಿನ್ ಹೆಸರನ್ನು ಇಟ್ಟಿದ್ದಾರೆ. ಸೈಬೀರಿಯನ್ ಹಸ್ಕಿ ನಾಯಿ ಹಾಗೂ ಪರ್ಷಿಯನ್ ಕ್ಯಾಟ್ ಬೆಕ್ಕಿನ ಮರಿಗಳಿಗೆ ಕೊರೊನಾ ವ್ಯಾಕ್ಸಿನ್ ಹೆಸರು ಇಟ್ಟಿದ್ದಾರೆ. ಸೈಬೀರಿಯನ್ ಹಸ್ಕಿ ನಾಯಿಗೆ ಕೋವಿಶೀಲ್ಡ್ ಹಾಗೂ ಪರ್ಷಿಯನ್ ಬೆಕ್ಕಿಗೆ ಕೋವ್ಯಾಕ್ಸಿನ್ ಹೆಸರು ಇಟ್ಟಿದ್ದಾರೆ.

ಪ್ರೀತಿಯ ನಾಯಿ ಹಾಗೂ ಬೆಕ್ಕಿನ ಮರಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎಂದು ಹೆಸರಿಟ್ಟಿದ್ದು, ಸದ್ಯ ಈ ಹೆಸರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಡಾಕ್ಟರ್ ಕಿರಣ್ ತೋಟಂಬೈಲ್ ಎಂಬುವವರೇ ತಮ್ಮ ನಾಯಿ ಮರಿ ಹೂಗ ಬೆಕ್ಕಿಗೆ ಈ ರೀತಿಯ ಹೆಸರು ಇಟ್ಟಿದ್ದಾರೆ. ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಕಿರಣ್ ತೋಟಂಬೈಲ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರೂ ಪ್ರವೃತ್ತಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದಾರೆ.

ಇವರು ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿ.ತು ಯುವಕರ ಸಂಘ, ಒಲವೇ ಮಂದಾರ-2 ಸಿನಿಮಾಗೆ ಕಿರಣ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸದ್ಯ ಇವರು ಬಿಜಿಎಸ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ ಆಗಿ ವೃತ್ತಿಯಲ್ಲಿ ನಿರತರಾಗಿದ್ದಾರೆ.

ಮಗನಿಗಾಗಿ 280 ಕಿ.ಮೀ ಸೈಕಲ್ ತುಳಿದ ತಂದೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ಲಾಕ್ ಡೌನ್ ನಿಂದಾಗಿ ಜನರು ಅನುಭವಿಸುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ತಂದೆಯೊಬ್ಬರು ಮಗನಿಗಾಗಿ ಮಗನ ಔಷಧಿಗಾಗಿ ಬರೋಬ್ಬರಿ 280 ಕಿ.ಮೀಟರ್ ಸೈಕಲ್ ತುಳಿದು ಬಂದಿರುವ ಮನಕಲುಕುವ ಘಟನೆ ವರದಿಯಾಗಿದೆ.

ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಗಾಣಿಗನಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಮಹಾನ್ ತಂದೆ ಮಗನಿಗಾಗಿ ಬರೋಬ್ಬರಿ ಮೂರು ದಿನಗಳ ಕಾಲ ಸೈಕಲ್ ತುಳಿದಿದ್ದಾರೆ. ಗಾರೆ ಕೆಲಸಗಾರ ಮಾಡುತ್ತಿದ್ದ ಆನಂದ್ ಎಂಬ ವ್ಯಕ್ತಿಯಿಂದಲೇ ಈ ಸಾಹಸ ನಡೆದಿದೆ.

ಇವರು ತಮ್ಮ ಮಗನಿಗಾಗಿ ನೂರಾರು ಕಿ.ಮೀ ಸೈಕಲ್ ತುಳಿದು ಔಷಧಿ ತಂದಿದ್ದಾರೆ. ಇವರ ಮಗ ಮಾನಸಿಕ ವಿಶೇಷ ಚೇತನನಾಗಿದ್ದ. ಹೀಗಾಗಿ ಈ ಮಗುವಿಗೆ 10 ವರ್ಷಗಳಿಂದ ಮಾತ್ರ ತೆಗೆದುಕೊಳ್ಳುತ್ತಿದ್ದ. ಅವರ ಮಗನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಒಮ್ಮೆ ಮಾತ್ರೆ ತಪ್ಪಿದರೆ ಮತ್ತೆ 18 ವರ್ಷಗಳ ಕಾಲ ನಿರಂತರ ಮಾತ್ರೆ ನೀಡಬೇಕು.

ಆದರೆ, ಆತನ ಔಷಧಿ ಮನೆಯಲ್ಲಿ ಖಾಲಿಯಾಗಿತ್ತು. ಆದರೆ, ಮಾತ್ರೆ ತರಬೇಕು ಎಂದರೆ ಲಾಕ್ ಡೌನ್ ಅಡ್ಡವಾಗಿದೆ. ಲಾಕ್ ಡೌನ್ ನಿಂದಾಗಿ ವಾಹನ ಸೌಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ತಂದೆ ಸೈಕಲ್ ಏರಿದ್ದಾರೆ. ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ನಂತರ ಅಲ್ಲಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ತೆರಳಿ ಮಾತ್ರೆ ಪಡೆದು ತಂದಿದ್ದಾರೆ. ಈ ತಂದೆ ಪ್ರತಿ ದಿನ 70 ಕಿ.ಮೀ ಸೈಕಲ್ ತುಳಿದು ಔಷಧಿ ತಂದಿದ್ದಾರೆ.

ಈ ಔಷಧಿ ನಿಮ್ಹಾನ್ಸ್ ಹೊರತು ಪಡಿಸಿದರೆ, ಬೇರೆಲ್ಲೂ ಸಿಗುವುದಿಲ್ಲ. ನಿಮ್ಹಾನ್ ಗೆ ತೆರಳಲು ಸುತ್ತಮುತ್ತಲ ಜನರ ಬಳಿ ಇವರು ಬೈಕ್ ಕೇಳಿದ್ದಾರೆ. ಒಂದು ದಿನ ಮಾತ್ರ ತಪ್ಪಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ ಬೈಕ್ ಕೊಡಿ ಎಂದು ಅಂಗಲಾಚಿದ್ದಾರೆ. ಆದರೆ, ಯಾರೂ ಮಾನವೀಯತೆ ಮೆರೆಯುವ ಪ್ರಯತ್ನ ಮಾಡಿಲ್ಲ. ಹೀಗಾಗಿಯೇ ಇವರೇ ಸೈಕಲ್ ಏರಿ ಮಗನಿಗೆ ಔಷಧಿ ತಂದಿದ್ದಾರೆ.

ತಂದೆಯೊಂದಿಗೆ ಮಾತನಾಡಲು ನಿರಾಕರಿಸಿದ ಸಿಡಿ ಲೇಡಿ!

ವಿಜಯಸಾಕ್ಷಿ ಸುದ್ದಿ, ಧಾರವಾಡ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ತಂದೆ ಧಾರವಾಡ ಹೈಕೋರ್ಟ್ ಪೀಠಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ತಮ್ಮ ಮಗಳನ್ನು ಮಾತನಾಡುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದರು. ಆದರೆ, ಯುವತಿ ಇದಕ್ಕೆ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಸಂತ್ರಸ್ಥ ಯುವತಿಯ ಅರ್ಜಿ ಪರಿಗಣಿಸಿದ ಹೈಕೋರ್ಟ್ ಪೀಠ, ಯುವತಿ ಇರುವ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಲು ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿತ್ತು. ಹೀಗಾಗಿ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಅವರು ಜಂಟಿ ರಿಜಿಸ್ಟ್ರಾರ್ ವರಲಕ್ಷ್ಮೀ ಅವರೊಂದಿಗೆ ಸಿಡಿ ಲೇಡಿ ನಿವಾಸಕ್ಕೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಂದೆಯೊಂದಿಗೆ ಸಮಾಲೋಚಿಸಲು ಯುವತಿಗೆ ಅವಕಾಶ ನೀಡಲಾಯಿತು. ಆದರೆ, ಸಿಡಿ ಲೇಡಿ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಅಲ್ಲದೇ, ಈ ಸಂದರ್ಭದಲ್ಲಿ ಅಕ್ರಮ ಬಂಧನದ ಆರೋಪವನ್ನು ಕೂಡ ಯುವತಿ ನಿರಾಕರಿಸಿದ್ದಾರೆ.

ಪರಿಸ್ಥಿತಿ ಎಲ್ಲವೂ ಸರಿ ಹೋದ ನಂತರ ನಾನು ತಂದೆಯ ಜೊತೆ ಮಾತನಾಡುತ್ತೇನೆ. ಈಗ ಮಾತನಾಡುವುದಿಲ್ಲ ಎಂದು ಕೋರ್ಟ್ ಗೆ ಮನವರಿಕೆ ಮಾಡಿದರು. ಅಲ್ಲದೇ, ಅಕ್ರಮ ಬಂಧನದ ಆರೋಪ ನಿರಾಕರಿಸಿದ ಹಿನ್ನೆಲೆಯ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ಪೀಠವು ಇತ್ಯರ್ಥಪಡಿಸಿತು.

ಸೋಮವಾರವೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ; ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ನಿನ್ನೆಯಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ ಇಂದು ನಾಲ್ವರು ಮೃತಪಟ್ಟಿದ್ದಾರೆ. ಇವತ್ತು 240 ಜನರಿಗೆ ಸೋಂಕು ತಗುಲಿದೆ.

ಇಂದಿನ 240 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 23566 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -89, ಮುಂಡರಗಿ-21, ನರಗುಂದ-16, ರೋಣ-63, ಶಿರಹಟ್ಟಿ-49, ಹೊರಜಿಲ್ಲೆಯ-02 ಸೇರಿದಂತೆ 240 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 250 ಕ್ಕೇರಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಸೋಮನಕಟ್ಟಿ ನಿವಾಸಿ 68 ವರ್ಷದ ವ್ಯಕ್ತಿ ಮೇ-28 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 29 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ಹುಡ್ಕೋ ನಿವಾಸಿ 86 ವರ್ಷದ ವ್ಯಕ್ತಿ ಮೆ,26 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 27 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ನರೇಗಲ್ ನಿವಾಸಿ 43 ವರ್ಷದ ವ್ಯಕ್ತಿ ಮೇ 27 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 28 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಮೇಗೂರು ನಿವಾಸಿ 70 ವರ್ಷದ ವ್ಯಕ್ತಿ ಮೇ 27 ರಂದು ನರಗುಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಅಂದೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 397 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 20786 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2530 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 193 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಜೂನ್ 7 ರವರೆಗೂ ಸಂಪೂರ್ಣ ಲಾಕ್ ಡೌನ್ ಮುಂದುವರಿಕೆ; ಸಚಿವ ಸಿ ಸಿ ಪಾಟೀಲ್

ವಿಜಯಸಾಕ್ಷಿ ಸುದ್ದಿ, ಗದಗ

ಜೂನ್ ಒಂದರವರೆಗೂ ಇದ್ದ ಲಾಕ್ ಡೌನ್ 7 ನೇ ತಾರೀಖಿನವರೆಗೂ ಮುಂದುವರೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.

ನಾಳೆ ಹಾಗೂ ನಾಡಿದ್ದು ಅಂದರೆ ಜೂನ್ 1 ಹಾಗೂ 2 ರಂದು‌ ದಿನಸಿ ಖರೀದಿ, ಮಾಂಸ ಖರೀದಿಗೆ ಅವಕಾಶ ನೀಡಲಾಗಿದೆ ಎಂದ ಸಚಿವರು, ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಅದರೊಳಗೆ ದಿನಸಿ ಖರೀದಿ ಮಾಡಬೇಕು ಎಂದರು. ಇನ್ನುಳಿದ ದಿನಗಳಲ್ಲಿ ಹೋಂಡಿಲೆವರಿಗೆ ಮಾತ್ರ ಅವಕಾಶ‌ ನೀಡಲಾಗಿದೆ.

ಜೂನ್ 7 ರವರೆಗೂ ಹಾಲು ಮೊಸರು ಖರೀದಿಗೆ ಪ್ರತಿದಿನ ಬೆಳಿಗ್ಗೆ 6 ರಿಂದ 8 ರವರೆಗೆ ಮಾತ್ರ ಅವಕಾಶ ಒದಗಿಸಲಾಗಿದೆ. ತರಕಾರಿ ಮಾರಾಟಕ್ಕೆ ತಳ್ಳುಗಾಡಿಯಲ್ಲಿ ಮಾತ್ರ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಿಗೆ ಕೋವಿಡ್ ನಿಯಮಾವಳಿ ಪಾಲಿಸಿ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶವಿದೆ.

ಕೃಷಿ ಸಂಬಂಧಿತ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 12 ರವರೆಗೆ ಅವಕಾಶ ನೀಡಲಾಗಿದೆ.

ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಹೋಟೆಲ್ ಗಳು ಬಂದ್ ಇರಲಿವೆ.

ಜಿಲ್ಲೆಯ ಎಲ್ಲಾ ವೈನ್ ಶಾಪ್ ಬಾರ್ ರೆಸ್ಟೋರೆಂಟ್ ಗಳ ತೆರವಿಗೆ ಅನುಮತಿ ನೀಡಲಾಗಿಲ್ಲ ಎಂದರು.

ಈ ಮೊದಲೇ ಅನುಮತಿ ಪಡೆದ ಮದುವೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ವೃದ್ಧಾಪ್ಯ ವೇತನಕ್ಕಾಗಿ 2 ಕಿ.ಮೀ ನಡೆದುಕೊಂಡು ಬಂದ ಅಜ್ಜಿ!

ವಿಜಯಸಾಕ್ಷಿ ಸುದ್ದಿ, ಗದಗ

ಒಂದೆಡೆ ಕೊರೊನಾ ಲಾಕ್ ಡೌನ್. ಇನ್ನೊಂದೆಡೆ ತುತ್ತು ಅನ್ನಕ್ಕೂ ಪರದಾಟ. ಇವುಗಳ ಮಧ್ಯೆ ಜನರು ಸದ್ಯ ಬದುಕು ನಡೆಸುತ್ತಿದ್ದಾರೆ. ಈ ಸಮಸ್ಯೆಗಳ ಮಧ್ಯೆ ಇರುವ ಅಜ್ಜಿಯೊಬ್ಬರು ವೃದ್ಧಾಪ್ಯ ವೇತನಕ್ಕಾಗಿ 2 ಕಿ.ಮೀ ದೂರ ನಡೆದುಕೊಂಡು ಬಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಲಾಕ್ ಡೌನ್ ನಿಂದಾಗಿ ಅಜ್ಜಿ ಆರ್ಥಿಕವಾಗಿ ಜರ್ಜರಿತವಾಗಿದ್ದರು. ಸದ್ಯ ಯಾವುದೇ ವಾಹನಗಳ ವ್ಯವಸ್ಥೆ ಇಲ್ಲ. ಹೀಗಾಗಿ ಅಜ್ಜಿಯೊಬ್ಬರು ಪೋಸ್ಟ್ ಆಫೀಸಿಗೆ ಎರಡು ಕಿ.ಮೀ ನಡೆದುಕೊಂಡೇ ಬಂದಿದ್ದಾರೆ.
ನಗರದ ಹಳೇ ಡಿಸಿ ಆಫೀಸ್ ಸರ್ಕಲ್ ಬಳಿ ಪೊಲೀಸರು ಅಜ್ಜಿಯನ್ನು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಅಜ್ಜಿಯ ನೋವು ಕೇಳಿದ ಪೊಲೀಸರು ಇಂದು ಪೋಸ್ಟ್ ಆಫೀಸ್ ಬಂದ್ ಇದೆ. ಸದ್ಯ ಅವು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದಾಗ ಅಜ್ಜಿ ಮರಳಿ ಹೋಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 5 ದಿನಗಳ ಕಠಿಣ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ವಾಹನ ಸೌಕರ್ಯವಿಲ್ಲ. ಕೈಯಲ್ಲಿ ಹಣ ಇಲ್ಲದ ಕಾರಣ, ಇಲ್ಲಿಯ ಭಜಂತ್ರಿ ನಗರದಿಂದ ಅಜ್ಜಿ ಯಲ್ಲವ್ವ ಭಜಂತ್ರಿ ನಡೆದುಕೊಂಡು ಬಂದಿದ್ದರು. ಕಿವಿ ಕೇಳದ ಕಾರಣಕ್ಕೆ ಅಜ್ಜಿ ಪರದಾಟ ನಡೆಸಿದ್ದರು. ಕೊನೆಗೆ ಅಜ್ಜಿಗೆ ಪೊಲೀಸರು ತಿಳಿ ಹೇಳಿ ಮರಳಿ ಕಳುಹಿಸಿದ್ದಾರೆ.

ವಿಜಯಸಾಕ್ಷಿ ಇಂಪ್ಯಾಕ್ಟ್! ವಿಕೃತಕಾಮಿಯ ಹೆಡೆಮುರಿ ಕಟ್ಟಿದ ಮಹಾಂತೇಶ್ ಹೂಳಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ರಾಜು ದಖನಿ

ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಹೀಳಾ ರೋಗಿಯ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಕೃತ ಕಾಮಿಯಯನ್ನ ಹೆಡೆಮುರಿ ಕಟ್ಟುವಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿದ್ಯಾನಗರ ಇನ್ಸ್‌ಪೆಕ್ಟರ್ ಮಹಾಂತೇಶ ಹೂಳಿ ಯಶಸ್ಸು ಕಂಡಿದ್ದಾರೆ.

ಈ ಕುರಿತು ವಿಜಯಸಾಕ್ಷಿ ಪತ್ರಿಕೆ ಹಾಗೂ ವೆಬ್ ಸುದ್ದಿ ಪ್ರಕಟಿಸಿತ್ತು. ಈ ಸುದ್ದಿ ಗಮನಿಸಿದ ಪೊಲೀಸರು ಕಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ. 19ರಂದು ಆಂಧ್ರ ಮೂಲದ ಮಹಿಳೆಯೊಬ್ಬರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಲ್ಲಿಯ ಖ್ಯಾತ ವೈದ್ಯ ಡಾ. ಕ್ರಾಂತಿಕಿರಣ ಅವರ ಒಡೆತನದ ಬಾಲಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ಆ ಸಂದರ್ಭದಲ್ಲಿ ಮಹಿಳೆಗೆ ಇದೇ ಆಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನ್ ಕೊಠಡಿಗೆ ವಾರ್ಡ್ ಬಾಯ್ ಕರೆದುಕೊಂಡು ಹೊಗಿದ್ದ. ಕೊಠಡಿಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ವಿಕೃತಿ ಮೆರೆದಿದ್ದ. ಕೃತ್ಯ ಬಯಲಿಗೆ ಬರುತ್ತಿದ್ದಂತೆ ಆರೋಪಿ ಅಶೋಕ, ಆಸ್ಪತ್ರೆಯಿಂದ ಪರಾರಿಯಾಗಿದ್ದ.

ಆದರೆ, ಪ್ರಕರಣದ ಜಾಡು ಬೆನ್ನು ಹತ್ತಿದ್ದ ವಿದ್ಯಾನಗರದ ಸೂಪರ್ ಕಾಪ್‌ ಮಹಾಂತೇಶ ಹೂಳಿ ಅವರು ಘಟನೆ ನಡೆದ ನಾಲ್ಕು ದಿನಗಳಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಅಣ್ಣಿಗೇರಿ ಮೂಲದ ಅಶೋಕ ಹಲಗಿ ಎಂದು ಗುರುತಿಸಲಾಗಿದೆ. ಆದರೆ, ಆರೋಪಿಯ ಮುಖದ ಮೇಲೆ ಗಂಭೀರ ಸ್ವರೂಪದ ಗಾಯದ ಗುರುತುಗಳು ಪತ್ತೆಯಾಗಿವೆ. ಈ ಕುರಿತು ವಿಚಾರಿಸಿದಾಗ ಕಳೆದ ಎರಡು ದಿನಗಳ ಹಿಂದೆಯೇ ಬೈಕ್ ಮೆಲಿಂದ ಬಿದ್ದಿರುವ ಕುರಿತು ಆರೋಪಿ ಹೇಳಿದ್ದಾನೆ. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಲು ಮುಂದಾಗದ ಆಸ್ಪತ್ರೆ ಸಿಬ್ಬಂದಿ, ಆಸ್ಪತ್ರೆಗೂ ಹಾಗೂ ಆತನಿಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.

ಖ್ಯಾತ ನರರೋಗ ತಜ್ಞ, ಸಮಾಜ ಪರ ಕಾಳಜಿ ಹೊಂದಿರುವ ಡಾಕ್ಟರ್ ಕ್ರಾಂತಿ ಕಿರಣ್ ಅವರು ಕಳೆದ ಹತ್ತು ವರ್ಷಗಳಿಂದ ಇಂತಹ ಘಟನೆ ಬಾಲಾಜಿ ಆಸ್ಪತ್ರೆಯಲ್ಲಿ ನಡೆದಿರಲಿಲ್ಲ. ಆದರೆ ಇಂತಹ ಘಟನೆ ಸಂಭವಿಸಿದಾಗ ಜನರಲ್ಲಿ ಸಹಜವಾಗಿಯೇ ಆತಂಕ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಂದೆ ಬರ್ತಡೆಗೆ ಕೇಕ್ ತರಲು ಬಂದವರ ಬೈಕ್ ಜಪ್ತಿ!

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ಜಾರಿಯಾದರೂ ಜನರಿಗೆ ಮಾತ್ರ ಬುದ್ಧಿ ಬರುತ್ತಿಲ್ಲ. ಇಡೀ ರಾಜ್ಯದಲ್ಲಿ ಇನ್ನೂ ಸೋಂಕು ತನ್ನ ಅಟ್ಟಹಾಸ ಮೆರೆಯುತ್ತಿದೆ. ಈ ಸನ್ನಿವೇಶದಲ್ಲಿಯೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹತೋಟಿಗೆ ಬರುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ಲಾಕ್ ಡೌನ್ ಗೆ ಜಿಲ್ಲಾಡಳಿತ ಮುಂದಾಗಿದೆ. ಆದರೂ ಜನ ಮಾತ್ರ ಅನಾವಶ್ಯಕವಾಗಿ ಓಡಾಡುತ್ತಿರುವುದನ್ನು ಮಾತ್ರ ಬಿಡುತ್ತಿಲ್ಲ.

ಕಠಿಣ ಲಾಕ್ ಡೌನ್ ಮಧ್ಯೆಯೂ ತಂದೆಯ ಬರ್ತಡೇ ಕೇಕ್ ತರುವುದಕ್ಕಾಗಿ ಇಬ್ಬರು ಯುವಕರು ವಿನಾಕಾರಣ ರಸ್ತೆಗೆ ಬಂದಿದ್ದರು. ಇದನ್ನು ಕಂಡ ಕೂಡಲೇ ಬೈಕ್ ತಡೆದ ಪೊಲೀಸರು, ಬೈಕ್ ವಶಕ್ಕೆ ಪಡೆದಿದ್ದಾರೆ.
ಈ ಕೇಕ್ ನಿಮಗೆ ಯಾರು ಕೊಟ್ಟರು ಹೇಳಿ ಎಂದು ಪೊಲೀಸರು ಪ್ರಶ್ನಿಸಿದಾಗ ಯುವಕರು, ಇಲ್ಲ ಸರ್ ಮನೆಯಲ್ಲಿಯೇ ತಯಾರಿಸಿದ್ದು, ನಾವು ಬೇಕರಿಯಲ್ಲಿ ತಂದಿಲ್ಲ. ಬೈಕ್ ಕೊಡಿ ಸರ್ ಇನ್ನೊಮ್ಮೆ ಮನೆಯಿಂದ ಹೊರಗೆ ಬರುವುದಿಲ್ಲ ಎಂದು ಗೋಳಾಡಿದರು. ಎಷ್ಟೇ ಗೋಳಾಡಿದರೂ ಪೊಲೀಸರು ಮಾತ್ರ ಬೈಕ್ ನೀಡಲಿಲ್ಲ.

ಈ ಘಟನೆ ನಗರದ ಹಳೇ ಡಿಸಿ ಕಚೇರಿ ಸರ್ಕಲ್ ಬಳಿ ನಡೆದಿದೆ. ಟ್ರಾಫಿಕ್ ಪೊಲೀಸರು ಬೈಕ್ ನ್ನು ತಡೆದು ಸೀಜ್ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ಜಾರಿಯಲ್ಲಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಇದರ ಮಧ್ಯೆಯೂ ಹೊರಗೆ ಬರುತ್ತಿರುವವರ ಬೈಕ್ ಗಳನ್ನು ಸೀಜ್ ಮಾಡಲಾಗುತ್ತಿದೆ.

error: Content is protected !!