Home Blog Page 3109

ತಾಯಿಗಾಗಿ ದೇವಾಲಯವನ್ನೇ ನಿರ್ಮಿಸಿದ ಶಾಸಕ!

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಇಂದು ವಿಶ್ವ ತಾಯಂದಿರ ದಿನ. ತಾಯಿಯನ್ನೇ ದೇವರು ಎಂದು ಪ್ರೀತಿಸುವ ಜನರ ಮಧ್ಯೆ, ತಾಯಿ – ತಂದೆಯನ್ನು ಬೀದಿಗೆ ಎಸೆಯುವ ಮಕ್ಕಳೂ ಸಮಾಜದಲ್ಲಿ ಹೆಚ್ಚಿದ್ದಾರೆ. ಇವರೆಲ್ಲರಿಗೂ ಮಾದರಿ ಎಂಬಂತೆ ಸದ್ಯ ಇಲ್ಲೊಬ್ಬ ಮಹಾನುಭಾವ ತಾಯಿಗೆ ದೇವಾಲಯವನ್ನೇ ಕಟ್ಟಿಸಿದ್ದಾರೆ. ಅದೂ ಶಾಸಕ ಎಂಬುವುದು ಇನ್ನು ವಿಶೇಷ.

ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜೂಗೌಡ ಅವರ ತಾಯಿಯ ಮೇಲಿನ ಪ್ರೀತಿ ಎಲ್ಲರ ಕಣ್ಣಾಲೆ ಒದ್ದೆ ಮಾಡಿಸುವುದರಲ್ಲಿ ಸಂಶಯವೇ ಇಲ್ಲ. ತಾಯಿ ಬದುಕಿದ್ದಾಗ ತೋರಿಸಿದ ಪ್ರೀತಿಯನ್ನೇ ಇಂದಿಗೂ ಉಳಿಸಿಕೊಂಡಿದ್ದಾರೆ. ರಾಜೂಗೌಡರು ತಮ್ಮ ತಾಯಿ ತಿಮ್ಮಮ್ಮ ಅವರ ನೆನಪಿಗಾಗಿ ಸ್ವಂತ ಗ್ರಾಮದಲ್ಲಿ ದೇವಾಲಯವನ್ನೇ ನಿರ್ಮಿಸಿದ್ದಾರೆ.
ಅವರ ಸ್ವಗ್ರಾಮ ಕೊಡೆಕಲ್ ನಲ್ಲಿರುವ ಜಮೀನಿನಲ್ಲಿ ತಾಯಿಯ ದೇವಸ್ಥಾನ ನಿರ್ಮಿಸಿದ್ದಾರೆ. ಅಲ್ಲದೇ ಅವರ ತಾಯಿ ಪ್ರೀತಿಯಿಂದ ಸಾಕಿದ್ದ ಗೋವುಗಳಿಗಾಗಿ ಗೋಶಾಲೆ, ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಅವರ ತಾಯಿ ನಡೆದಾಡುವ ಈ ಸ್ಥಳ ಇಂದು ಶಾಂತಿಧಾಮವಾಗಿದೆ. ಇದರೊಂದಿಗೆ ತಾಯಿಯ ಸಮಾಧಿಯ ಹತ್ತಿರವೇ ಶಾಸಕರು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.

ರಾಜೂಗೌಡ ಅವರು ಶಾಸಕರಾಗಲು ಅವರ ತಾಯಿ ತಿಮ್ಮಮ್ಮ ಮತ್ತು ಅವರ ತಂದೆ ಶಂಭುನಗೌಡ ಅವರ ಶ್ರಮ ಸಾಕಷ್ಟಿದೆ. ರಾಜೂಗೌಡ ಸುರಪುರಕ್ಕೆ ಮಾತ್ರ ಶಾಸಕರು. ಆದರೆ, ಸುರಪುರ ಕ್ಷೇತ್ರದ ಜನತೆಗೆ ತಿಮ್ಮಮ್ಮನವರೇ ಶಾಸಕಿ. ಕ್ಷೇತ್ರದ ಬಡವರ ಕಷ್ಟಕ್ಕೆ ತಿಮ್ಮಮ್ಮನವರು ಆಸರೆಯಾಗಿದ್ದರು. ಕಷ್ಟ ಹೇಳಿಕೊಂಡು ಮನೆಗೆ ಬಂದವರನ್ನು ಅವರು ಎಂದಿಗೂ ಬರಿಗೈಯಲ್ಲಿ ಕಳುಹಿಸಿಲ್ಲ. ಕೈಯಾರೇ ಊಟ ಬಡಿಸಿ ಅವರ ಕಷ್ಟ ಆಲಿಸಿ, ಸಹಾಯ ಮಾಡಿ ಕಳುಹಿಸಿದ್ದಾರೆ. ಅಲ್ಲದೆ ಶಾಸಕ ರಾಜೂಗೌಡ ಮತ್ತು ಅವರ ಸಹೋದರ ಬಬ್ಲುಗೌಡ ದೊಡ್ಡವರಾಗಿ ಬೆಳೆದಿದ್ದರೂ ಪ್ರತಿ ದಿನ ತಾಯಿಯ ಕೈ ತುತ್ತು ತಿನ್ನುತ್ತಿದ್ದರು.

ವಯೋಸಹಜ ಖಾಯಿಲೆಯಿಂದ ಶಾಸಕರ ತಾಯಿ ಹಿಂದಿನ ವರ್ಷ ನಿಧನರಾಗಿದ್ದಾರೆ. ತಾಯಿಯ ಪ್ರೀತಿ ಸದಾ ನಮ್ಮೊಂದಿಗೆ ಇರಲಿ ಎಂದು ಭಾವಿಸಿದ್ದ ಶಾಸಕರು ರಾಜಸ್ಥಾನದಿಂದ ವಿಶೇಷ ಕಲ್ಲುಗಳನ್ನು ತರಿಸಿ ಆಂಧ್ರದ ಶಿಲ್ಪಿಗಳಿಂದ ತಾಯಿಯ ಮೂರ್ತಿ ತಯಾರಿಸಿ ದೇವಸ್ಥಾನ ನಿರ್ಮಿಸಿದ್ದಾರೆ.

ಪ್ರತಿದಿನ ಶಾಸಕರೇ ತಾಯಿಯ ಮೂರ್ತಿಯನ್ನು ಶುದ್ಧಗೊಳಿಸಿ, ಪೂಜೆ ಸಲ್ಲಿಸುತ್ತಾರೆ. ಸದ್ಯ ರಾಜುಗೌಡರಂತೆ ಅವರ ಮಗ ಕೂಡ ಇದೇ ಕಾರ್ಯ ಮುಂದುವರೆಸಿದ್ದಾರೆ. ಅಜ್ಜಿಯ ಸೇವೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿರುತ್ತಾರೆ. ತಂದೆ – ತಾಯಿ ದುಡ್ಡಿನಲ್ಲಿ ಶೋಕಿ ಮಾಡಿ, ಅವರನ್ನು ಕೊನೆಗಾಲದಲ್ಲಿ ಕೈ ಬಿಡುವ ಮಕ್ಕಳ ಮುಂದೆ ಶಾಸಕರ ಈ ಪ್ರೀತಿ ನಿಜಕ್ಕೂ ಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತದೆ.

ಮೋದಿಯಿಂದಾಗಿ ಪಾಕಿಸ್ತಾನ, ಕಾಂಗೋನಂತಹ ರಾಷ್ಟ್ರಗಳು ನಮಗೆ ಸಹಾಯ ಮಾಡುತ್ತೇವೆ ಎನ್ನುವಂತಾಗಿದೆ; ಶಿವಸೇನೆ ಕಿಡಿ

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಮಹಾಮಾರಿಯಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರದ ವಿರುದ್ಧ ಶಿವಸೇನೆ ತೀವ್ರ ಟೀಕೆ ಮಾಡಿದೆ.

ದೇಶದಲ್ಲಿ ಕೊರೊನಾ ನಿಭಾಯಿಸುವುದರಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಣ್ಣ ಸಣ್ಣ ರಾಷ್ಟ್ರಗಳು ಕೂಡ ಸಹಾಯ ಹಸ್ತ ಚಾಚಲು ಮುಂದೆ ಬರುತ್ತಿವೆ. ಆದರೆ, ಮೋದಿ ಸರ್ಕಾರವು ಬಹುಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಿಸಲು ಮುಂದಾದ ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಗೊಳಿಸುವುದಕ್ಕೂ ಸಿದ್ಧವಿಲ್ಲ ಎಂದು ಟೀಕಿಸಿದೆ.

ಇಂದು ನಾವು ಕೊರೊನಾ ವಿರುದ್ದ ಹೋರಾಡುವ ಶಕ್ತಿ ಗಳಿಸಿಕೊಂಡಿದ್ದರೆ, ಅದಕ್ಕೆ ಈ ಹಿಂದಿನ 70 ವರ್ಷಗಳಲ್ಲಿ ಪಂಡಿತ್ ನೆಹರು, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಸೃಷ್ಟಿಸಲಾದ ವ್ಯವಸ್ಥೆಯೇ ಕಾರಣ. ಈ ವ್ಯವಸ್ಥೆ ಭಾರತ ಸಂಕಷ್ಟದ ಕಾಲವನ್ನು ನಿಭಾಯಿಸುವುದಕ್ಕೆ ಸಾಧ್ಯವಾಗಿದೆ ಎಂದು ಹೊಗಳಿದ್ದಾರೆ.

ಇಡೀ ವಿಶ್ವವೇ ಭಾರತದ ಸೋಂಕಿನಿಂದ ವಿಶ್ವಕ್ಕೆ ಅಪಾಯವಿದೆ ಎಂದು ಹೇಳುತ್ತಿದೆ. ವಿಶ್ವ ಸಂಸ್ಥೆ ಕೂಡ ಸಹಾಯ ಮಾಡಬೇಕೆಂದು ಕರೆ ನೀಡಿದೆ. ಬಾಂಗ್ಲಾದೇಶ 10 ಸಾವಿರ ರೆಮಿಡಿಸಿವರ್ ಔಷಧ ಕಳುಹಿಸಿದೆ. ಭೂತಾನ್ ವೈದ್ಯಕೀಯ ಆಕ್ಸಿಜನ್ ಕಳಿಸಿದೆ. ನೇಪಾಳ, ಮ್ಯಾನ್ಮಾರ್ ಹಾಗೂ ಶ್ರೀಲಂಕಾಗಳಂತಹ ಚಿಕ್ಕ ರಾಷ್ಟ್ರಗಳೂ ದೇಶಕ್ಕೆ ಸಹಾಯ ಮಾಡತ್ತಿವೆ.

ಬೇರೆ ರಾಷ್ಟ್ರಗಳ ಸಹಾಯಕ್ಕೆ ಕೈ ಚಾಚುತ್ತಿದ್ದ ಪಾಕಿಸ್ತಾನ, ಕಾಂಗೋ, ರುವಾಂಡಾಗಳಂತಹ ರಾಷ್ಟ್ರಗಳು ಕೂಡ ಇಂದು ಭಾರತಕ್ಕೆ ಸಹಾಯ ಮಾಡುತ್ತೇವೆ ಎಂಬ ಮಾತುಗಳನ್ನು ಹೇಳುತ್ತಿವೆ. ಇದು ಆಳುವವರ ತಪ್ಪಾದ ನೀತಿಗಳ ಪರಿಣಾಮ ಎಂದು ಶಿವಸೇನೆ ಮೋದಿ ಸರ್ಕಾರದ ವಿರುದ್ಧ ಗುಡುಗಿದೆ.

ಕೊರೊನಾ ಲಸಿಕೆಯ ಮೇಲೆಯೂ ಜಿಎಸ್ ಟಿ ವಿಧಿಸುತ್ತಿರುವ ಮೋದಿ ಸರ್ಕಾರ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದ್ದರಿಂದ ಪ್ರತಿ ದಿನ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಸದ್ಯ ಕೊರೊನಾ ಲಸಿಕೆಗೂ ಜಿಎಸ್ಟಿದ ವಿಧಿಸುತ್ತಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ಮಹಾಮಾರಿಯಿಂದಾಗಿ ಜನರು ಸಾಕಷ್ಟು ಸಂಕಟ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜನರ ಸಹಾಯಕ್ಕೆ ಮುಂದೆ ಬರಬೇಕಾಗಿರುವ ಪ್ರಧಾನಿ ಮೋದಿ, ತೆರಿಗೆ ವಸೂಲಿ ಮಾಡಿ ಜನರನ್ನು ಮತ್ತಷ್ಟು ಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಲಸಿಕೆಯ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಈಗಾಗಲೇ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಪ್ರಶ್ನಿಸಿವೆ. ಇದೀಗ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ವ್ಯಾಕ್ಸಿನ್ ಮೇಲೆ ಶೇ.5 ರಷ್ಟು ಜಿಎಸ್ಟಿದ ವಿಧಿಸಿದ್ದಕ್ಕೆ ರಾಜ್ಯ ಸರ್ಕಾರಗಳು ಪ್ರತಿ ಡೋಸ್‍ ಗೆ ರೂ. 20ರಷ್ಟು ತೆರಿಗೆಯನ್ನು ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಭರಿಸಬೇಕಾಗಿದೆ. ದೇಶದಲ್ಲಿಯೇ ತಯಾರಾದ ಕೊರೊನಾ ಲಸಿಕೆಗೆ ಜಿಎಸ್ಟಿನ ವಿಧಿಸುತ್ತಿರುವುದಕ್ಕೆ ರಾಜಸ್ಥಾನ, ಛತ್ತಿಸ್ಗದಡ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸಹ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ವ್ಯಾಕ್ಸಿನ್ ಮೇಲಿನ ಜಿಎಸ್ಟಿಸ ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ.

ಇಲ್ಲಿ ಪತಿ ಶಾಸಕ…ಪತ್ನಿ ತಹಸೀಲ್ದಾರ್!

ವಿಜಯಸಾಕ್ಷಿ ಸುದ್ದಿ, ಬೀದರ್

ಇತ್ತೀಚೆಗಷ್ಟೇ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಶಾಸಕರಾಗಿರುವ ಶರಣು ಸಲಗಾರ ಹಾಗೂ ಅವರ ಪತ್ನ ಜನರ ಮನ ಗೆದ್ದಿದ್ದಾರೆ.

ಶಾಸಕರು ಹಾಗೂ ಅವರ ಪತ್ನಿ ಸಾವಿತ್ರಿ ಸಲಗಾರ ಕೋವಿಡ್ ನ ಈ ಸಂದರ್ಭದಲ್ಲಿ ಕ್ಷೇತ್ರದ ಜನರ ಮಧ್ಯೆ ಕಾರ್ಯ ನಿರ್ವಹಿಸುತ್ತಿರುವಾಗ ನಿಯಮಗಳನ್ನು ಪಾಲಿಸುತ್ತಿರುವ ಪರಿ ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿದೆ. ಇವರು ಪ್ರಚಾರ ಪ್ರಿಯರಲ್ಲ. ತಾವಾಯಿತು. ತಮ್ಮ ಕೆಲಸವಾಯಿತು. ಮನೆಯಲ್ಲಿ ಪತಿ ಶರಣು ಸಲಗಾರ ಅವರ ಪತ್ನಿ ಸಾವಿತ್ರಿ ಅವರು ತಹಸೀಲ್ದಾರ್. ಪತಿಯ ಹಾಗೂ ಮನೆಯ ಕೆಲಸಗಳನ್ನು ಮುಗಿಸಿಕೊಂಡು ತಹಸೀಲ್ದಾರ್ ಡ್ಯೂಟಿಗೆ ಹಾಜರಾಗುತ್ತಾರೆ.

ಬಹುಶಃ ರಾಜ್ಯದಲ್ಲಿ ಗಂಡ ಶಾಸಕ ಹಾಗೂ ಪತ್ನಿ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಏಕೈಕ ಜೋಡಿ ಇದೇ ಇರಬಹುದು.

ಪ್ರತಿಸಲ ಮಾತನಾಡುವಾಗಲೂ ಸಲಗಾರ ಅವರ ಪತ್ನಿ, ನಾನು ತಹಸೀಲ್ದಾರ್ ಆಗಲು ನನ್ನ ಪತಿ ತುಂಬಾ ಕಷ್ಟ ಪಟ್ಟಿದ್ದಾರೆ. ಇಂತಹ ಪತಿಯನ್ನು ಪಡೆಯಲು ನಾನೇ ಧನ್ಯ ಎಂದು ಹೇಳುತ್ತಿರುತ್ತಾರೆ. ಶಾಸಕರು ಹಾಗೂ ಪತ್ನಿ ಒಂದೇ ಕ್ಷೇತ್ರದಲ್ಲಿ ಇರುವುದರಿಂದಾಗಿ ಕ್ಷೇತ್ರದ ಅಭಿವೃದ್ಧಿಗೂ ಸಾಕಷ್ಟು ಸಹಾಯವಾಗುತ್ತದೆ ಎಂದು ಜನ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಿದ್ದಾರೆ.

ರಾಜ್ಯದಲ್ಲಿ ಇಂದು ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಶನಿವಾರವೂ ಕೂಡ ದಾಖಲೆಯ ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಬರೋಬ್ಬರಿ 47,563 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಬರೋಬ್ಬರಿ 482 ಜನ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಇಂದು 21,534 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದಲ್ಲಿ 285 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಇಂದು 34,881 ಜನ ಗುಣಮುಖರಾಗಿ ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಸೋಂಕಿತರ ಒಟ್ಟು ಸಂಖ್ಯೆ 18,86,448ಕ್ಕೆ ಏರಿಕೆ ಕಂಡಿದೆ. ಮೃತರ ಸಂಖ್ಯೆ 18,286 ಏರಿಕೆ ಕಂಡಿದೆ.

ಇಂದು ರಾಜ್ಯದ ಬಾಗಲಕೋಟೆ 1563, ಬಳ್ಳಾರಿ 940, ಬೆಳಗಾವಿ 991, ಬೆಂಗಳೂರು ಗ್ರಾಮಾಂತರ 958ಬೆಂಗಳೂರು ನಗರ 21534 ಬೀದರ್ 311, ಚಾಮರಾಜನಗರ 691, ಚಿಕ್ಕಬಳ್ಳಾಪುರ 711, ಚಿಕ್ಕಮಗಳೂರು 356, ಚಿತ್ರದುರ್ಗ 116, ದಕ್ಷಿಣ ಕನ್ನಡ 1,513 ದಾವಣಗೆರೆ 538, ಧಾರವಾಡ 323, ಗದಗ 341, ಹಾಸನ 996 ಹಾವೇರಿ 169, ಕಲಬುರಗಿ 1,661 ಕೊಡಗು 765,

ಕೋಲಾರ 903, ಕೊಪ್ಪಳ600, ಮಂಡ್ಯ 1,225, ಮೈಸೂರು 2,294, ರಾಯಚೂರು 894, ರಾಮನಗರ 407, ಶಿವಮೊಗ್ಗ 547, ತುಮಕೂರು 2,419 ಉಡುಪಿ 1,043 , ಉತ್ತರ ಕನ್ನಡ 1,034 , ವಿಜಯಪುರ525 ಮತ್ತು ಯಾದಗಿರಿಯಲ್ಲಿ 718 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

14 ದಿನಗಳ ಲಾಕ್ ಡೌನ್; ಮತ್ತಷ್ಟು ರೂಲ್ಸ್ ಪ್ರಕಟಿಸಿದ ರಾಜ್ಯ ಸರ್ಕಾರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಹೀಗಾಗಿ ರಾಜ್ಯದಲ್ಲಿನ ಜನತೆಗೆ ಆತಂಕ ಮನೆ ಮಾಡುತ್ತಿದೆ. ಇನ್ನೊಂದೆಡೆ ಸರ್ಕಾರವು ದಿನಕ್ಕೊಂದು ಆದೇಶ ಹೊರಡಿಸುವ ಮೂಲಕ ಜನರಲ್ಲಿ ಆತಂಕದ ಜೊತೆಗೆ ಗೊಂದಲ ಸೃಷ್ಟಿಸುತ್ತಿದೆ.

ರಾಜ್ಯದಲ್ಲಿ ಈಗಾಗಲೇ 14 ದಿನಗಳ ಲಾಕ್ ಡೌನ್ ಘೋಷಣೆಯಾಗಿದೆ. ಲಾಕ್ ಡೌನ್ ಮಾರ್ಗಸೂಚಿಯನ್ನು ಕೂಡ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ಇದೀಗ ಈ ಮಾರ್ಗಸೂಚಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಮತ್ತೆ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಈ ಹಿಂದೆ ಮದುವೆಗೆ 50 ಜನರಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಅದರ ಮಿತಿಯನ್ನು ಇಳಿಕೆ ಮಾಡಿದೆ. ಕೇವಲ 40 ಜನರಿಗಷ್ಟೇ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಮದುವೆಗಳನ್ನು ಕಲ್ಯಾಣ ಮಂಟಪದಲ್ಲಿ ನೆರವೇರಿಸಲು ಅವಕಾಶ ಇಲ್ಲ. ಹೀಗಾಗಿ ತಮ್ಮ ತಮ್ಮ ಮನೆಗಲ್ಲಿಯೇ ಮಾಡಿಕೊಳ್ಳಬೇಕಾಗಿದೆ. ಮದುವೆಯಲ್ಲಿ ಭಾಗವಹಿಸುವವರಿಗೆ ಸ್ಥಳೀಯಾಡಳಿತಗಳಿಂದ ಪಾಸ್ ವಿತರಿಸಬೇಕು.

ಅಲ್ಲದೇ, ಈ ಆದೇಶದಲ್ಲಿ ಕಬ್ಬಿಣದ ಅದಿರು, ಗಣಿಗಾರಿಕೆಗೆ ಹಾಗೂ ಸಿಮೆಂಟ್ ಬಳಸುವ ಲೈಮ್ ಸ್ಟೋನ್ ತಯಾರಿಕೆಗೆ ಅನುಮತಿ ನೀಡಲಾಗಿದೆ.

ಗದಗ ಜಿಲ್ಲೆಗೆ ವಕ್ಕರಿಸಿದ ಕೊರೊನಾ; ಒಂದೇ ದಿನ ದಾಖಲೆಯ 341 ಜನರಿಗೆ ಸೋಂಕು, ಇಬ್ಬರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 08 ಶನಿವಾರ ಗದಗ ಜಿಲ್ಲೆಗೆ ವಕ್ರದೃಷ್ಟಿ ಬಿದ್ದಿದೆ. ಇದೇ ಮೊದಲ ಬಾರಿಗೆ ಒಂದೇ ದಿನ 341 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಶನಿವಾರದ ವರದಿಯಂತೆ ಕೋವಿಡ್ ನಿಂದ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ.

ಇಂದಿನ 341 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 14376 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -199, ಮುಂಡರಗಿ-46, ನರಗುಂದ-15, ರೋಣ-28, ಶಿರಹಟ್ಟಿ-32, ಹೊರಜಿಲ್ಲೆಯ-21 ಸೇರಿದಂತೆ 341 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಮಾಹಿತಿಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ.

ಗದಗ ನಗರದ 47 ವರ್ಷದ ವ್ಯಕ್ತಿ ಮೇ 03 ರಂದು ಶ್ವಾಸಕೋಶ ತೊಂದರೆಯಿಂದಾಗಿ ಜಿಮ್ಸ್ ಗೆ ದಾಖಲಾಗಿದ್ದರು. ಕೋವಿಡ್ ಕಾರಣದಿಂದ ಮೇ 05 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಇನ್ನೊಬ್ಬರು ಧಾರವಾಡ ಜಿಲ್ಲೆಯ ನಾಯ್ಕನೂರು ನಿವಾಸಿ 80 ವರ್ಷದ ವೃದ್ಧೆ ಮೇ 6 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಕೋವಿಡ್ ಕಾರಣದಿಂದ ಹೃದಯಘಾತವಾಗಿ ಮೇ 7 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.
ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
154 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 180 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 12989 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1232 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 189 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ರಸ್ತೆಯಲ್ಲಿ ಅನಗತ್ಯವಾಗಿ ವಾಹನ ಓಡಿಸಿದರೆ ಕಠಿಣ ಕ್ರಮ; ಎಸ್ಪಿ ಯತೀಶ್ ಖಡಕ್ ಎಚ್ಚರಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್-19 ಎರಡನೇ ಅಲೆ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸುವುದು ಕಡ್ಡಾಯ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ಮೇ 10ರ ಬೆಳಗ್ಗೆ 6 ರಿಂದ ಮೇ 24ರ ಬೆಳಗಿನ 6ರ ವರೆಗೆ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯ ಸರಪಳಿ ತುಂಡರಿಸಲು ಸರ್ಕಾರದಿಂದ ಜಾರಿಗೊಳಿಸಿರುವ ಪರಿಷ್ಕೃತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕುರಿತು ಜಿಲ್ಲೆಯಾದ್ಯಂತ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದ್ದು, ಜಿಲ್ಲೆಯ ಎಲ್ಲ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಆಯಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ, ಪಿಕ್ಸ್ ಪಾಯಿಂಟ್ ಗಳಲ್ಲಿ ಸೂಕ್ತ ಬಂದೋಬಸ್ತ್ ನಿಯೋಜಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಉಪಯೋಗ ಮಾಡಿಕೊಂಡು ವೈರಸ್ ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕಿದೆ. ತುರ್ತು ಸಂದರ್ಭ ಹೊರತುಪಡಿಸಿ ಸಾರ್ವಜನಿಕರು ವಿನಾಕಾರಣ ವಾಹನಗಳನ್ನು ತೆಗೆದುಕೊಂಡು ರಸ್ತೆ ಸಂಚಾರ ಮಾಡಕೂಡದು. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡದೇ ಸರ್ಕಾರ ನಿಗದಿಪಡಿಸಿದ ಅವಧಿಯಲ್ಲಿ ಮಾತ್ರ ಪಾದಚಾರಿಯಾಗಿ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಹೋಟೆಲ್ ಸಿಬ್ಬಂದಿಯವರೇ ಸಾರ್ವಜನಿಕ ಮನೆಗಳಿಗೆ ಉಪಹಾರ ತಲುಪಿಸಬಹುದಾಗಿದೆ. ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆ ಹಾಗೂ ಅಂತರ ಜಿಲ್ಲೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸಿದ್ದು, ಇಲಾಖೆ ವತಿಯಿಂದ ಯಾವುದೇ ಪಾಸ್‌ಗಳನ್ನು ವಿತರಿಸುತ್ತಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.

ಆಸ್ಪತ್ರೆಯಿಂದ ತಪ್ಪಿಸಿಕೊಂಡು ಭತ್ತದ ಗದ್ದೆಯಲ್ಲಿ ಅವಿತುಕೊಂಡಿದ್ದ ಸೋಂಕಿತ

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ : ಇಲ್ಲೊಬ್ಬ ಕೊರೊನಾ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಭತ್ತದ ಗದ್ದೆಯಲ್ಲಿ ಅವಿತು ಕುಳಿತಿದ್ದ ಘಟನೆ ನಡೆದಿದೆ.

ಇಲ್ಲಿಯ ಗಾಂಧಿ ಬಜಾರ್ ನ ನಿವಾಸಿ 48 ವರ್ಷದ ವ್ಯಕ್ತಿಗೆ ಸೋಂಕು ಅಂಟಿಕೊಂಡಿತ್ತು. ಹೀಗಾಗಿ ಆ ವ್ಯಕ್ತಿಯನ್ನು ಕುಟುಂಬಸ್ಥರು ಎನ್.ಎಚ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಪಡೆಯುತ್ತಿದ್ದ ಈ ವ್ಯಕ್ತಿ ಆಸ್ಪತ್ರೆ ಸಿಬ್ಬಂದಿ ಯಾಮಾರಿಸಿ ನಾಪತ್ತೆಯಾಗಿದ್ದಾನೆ. ಆಸ್ಪತ್ರೆಯಿಂದ ತಪ್ಪಿಸಿಕೊಂಡು ಭತ್ತದ ಗದ್ದೆಯಲ್ಲಿ ಅವಿತ ಈ ಸೋಂಕಿತನನ್ನು ಸಾಕಷ್ಟು ಕಷ್ಟ ಪಟ್ಟು ಆಸ್ಪತ್ರೆಯ ಸಿಬ್ಬಂದಿ ಹುಡುಕಿದ್ದಾರೆ.

ಸೋಂಕಿತ ನಾಪತ್ತೆಯಾಗುತ್ತಿದ್ದಂತೆ ಸಿಬ್ಬಂದಿ ಕೆಲ ಹೊತ್ತು ಆತಂಕಕ್ಕೆ ಒಳಗಾಗಿದ್ದರು. ಆ ನಂತರ ಹುಡುಕಾಟ ನಡೆಸಿದ್ದಾರೆ. ಆತ ಎಲ್ಲಿಯೂ ಪತ್ತೆಯಾಗದ ಕಾರಣ ಆಸ್ಪತ್ರೆಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭತ್ತದ ಗದ್ದೆಯ ಕೆಡೆಗೆ ತೆರಳಿದ್ದು ತಿಲಿದಿದೆ. ಹೀಗಾಗಿ ಅತ್ತ ಸಿಬ್ಬಂದಿ ತೆರಳಿ ಹುಡುಕಾಟ ನಡೆಸಿದ್ದಾರೆ. ಪತ್ತೆಯಾದ ಸೋಂಕಿತನನ್ನು ಸಿಬ್ಬಂದಿ ಮತ್ತೆ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಸುಧಾಕರ್ ವಿರುದ್ಧ ಗುಡುಗಿದ ರೇಣುಕಾಚಾರ್ಯ!

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ನೀವು ಉತ್ತಮ ಕೆಲಸಗಳನ್ನು ಮಾಡಿದ್ದರೆ ನಿಮ್ಮ ಜವಾಬ್ದಾರಿಗಳನ್ನು ಏಕೆ ಬೇರೆಯವರಿಗೆ ಹಂಚಿಕೆ ಮಾಡುತ್ತಿದ್ದಿವಿ ಎಂದು ಶಾಸಕ ರೇಣುಕಾಚಾರ್ಯ ಅವರು ಸಚಿವ ಸುಧಾಕರ್ ವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರುಗಳು ತಾವು ಕೆಲಸ ಮಾಡುತ್ತಿದ್ದೇವೋ ಅಥವಾ ಇಲ್ಲವೋ ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರಿಗೆ ಯಾವ ಜವಾಬ್ದಾರಿ ಇದೆ ಎಂದು ನಾವಾಗಲಿ ಅಥವಾ ಸಿಎಂ ಆಗಲಿ ಹೇಳುವುದಲ್ಲ. ಅವರೇ ಅರ್ಥ ಮಾಡಿಕೊಳ್ಳಬೇಕು ಎಂದು ತಮ್ಮ ಪಕ್ಷದ ಸಚಿವರ ವಿರುದ್ಧವೇ ಗುಡುಗಿದ್ದಾರೆ.

ಸಿಎಂ ಅವರು ಹಗಲು – ರಾತ್ರಿ ತಮ್ಮ ಇಳಿಯ ವಯಸ್ಸಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಸಚಿವರು ಸರ್ಕಾರ ಹಾಗೂ ಸಿಎಂ ಅವರಿಗೆ ಗೌರವ ಸಿಗುವಂತಹ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

error: Content is protected !!