Home Blog Page 3130

ಭಾರತ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ: ಬಂಡೆಪ್ಪ ಖಾಶೆಂಪುರ್

0

ಬೀದರ್ (ಡಿ.06): ವಿಶ್ವದಲ್ಲೇ ಎಲ್ಲಾ ಸಂವಿಧಾನಗಳಿಗಿಂತ ಶ್ರೇಷ್ಠ ಸಂವಿಧಾನ ಯಾವುದಾದರೂ ಇದ್ದರೆ ಅದು ಬಾಬಾ ಸಾಹೇಬರು ರಚಿಸಿದ ಹಿಂದುಸ್ತಾನ್ (ಭಾರತ) ಸಂವಿಧಾನವಾಗಿದೆ. ಅಂತಹ ಸಂವಿಧಾನವನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಸಂವಿಧಾ‌ನ ಶಿಲ್ಪಿ, ಮಹಾನ್ ಚೇತನ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ರವರ 67ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಬೀದರ್ ನಗರದ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಲ್ ಬಳಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಾಬಾ ಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.

ಎಲ್ಲರೂ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಿಕೊಂಡು ಹೋಗಬೇಕಾಗಿದೆ. ಬಾಬಾ ಸಾಹೇಬರು ಆ ಕಾಲದಲ್ಲಿ ಓದಿ, ಬರೆದು ವಿದೇಶಗಳಿಗೆ ಹೋಗಿ ಪದವಿ ಗಳಿಸಿ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ಅವರೇ ನಮ್ಮೆಲ್ಲರಿಗೆ ಪ್ರೇರಣೆಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲೇ ನಾವೆಲ್ಲರೂ ಸಾಗಬೇಕಾಗಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಈ ಸಂದರ್ಭದಲ್ಲಿ ಜ್ಞಾನಸಾಗರ್ ಬಂತೇಜಿ, ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಮ್, ಸಮಾಜ ಕಲ್ಯಾಣ ಇಲಾಖೆಯ ಡಿಡಿ ಸಿಂಧು, ಪ್ರಮುಖರಾದ ಮಾರುತಿ ಬೌದ್ಧೆ, ಬಾಬು ಪಾಶ್ವಾನ್,

ಅನಿಲ್ ಕುಮಾರ್, ಬಾಬುರಾವ್ ಕಾರ್ಬಾರಿ, ಬಸವರಾಜ್ ಮಾಳ್ಗೆ, ಅಮೃತರಾವ್ ಚಿಮ್ಕೊಡೆ, ಅಭಿ ಕಾಳೆ, ಅಂಬಾದಾಸ್ ಗಾಯಕವಾಡ, ಶಿವಕುಮಾರ್ ನಿಲಿಕಟ್ಟೆ, ಶ್ರೀಪತಿರಾವ್ ದಿನ್ನೆ, ಅರುಣಕುಮಾರ್ ವರ್ಮಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪ್ರಮುಖರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದರು.

ವಿಡಿಯೋ ಕಾನ್ಫರೆನ್ಸ್ ವೇಳೆ ಅನುಚಿತ ವರ್ತನೆ: FIR ದಾಖಲು

0

ಬೆಂಗಳೂರು:- ನಗರದಲ್ಲಿ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ಚಿತ್ರ ಪ್ರದರ್ಶನ ಮಾಡಿದ ಅಪರಿಚಿತರ ವಿರುದ್ಧ FIR ದಾಖಲಾಗಿದೆ. ಕಲಾಪದ ಲಿಂಕ್ ಮೂಲಕ ಭಾಗವಹಿಸಿದ ಅಪರಿಚಿತರಿಂದ‌ ಕೃತ್ಯವೆಸಗಲಾಗಿದೆ. ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಕಚೇರಿಯ ಎನ್. ಸುರೇಶ್​ ಎಂಬುವವರಿಂದ ದೂರು ನೀಡಿದ್ದು,

ನ್ಯಾಯಾಲಯದ ಕಲಾಪಕ್ಕೆ‌ ಅಡ್ಡಿಪಡಿಸಿದ ಹಿನ್ನೆಲೆ ಐ.ಟಿ. ಕಾಯ್ದೆ ಸೆ. 67, 67(A) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಅಶ್ಲೀಲ ಚಿತ್ರ ಪ್ರದರ್ಶಿಸಿ ಅನುಚಿತ ವರ್ತನೆ ತೋರಿದ್ದಾರೆ. ಹೈಕೋರ್ಟ್​ನ ಸೈಬರ್ ಭದ್ರತೆಗೆ ಆತಂಕ ಎದುರಾದ ಹಿನ್ನೆಲೆ ತಾತ್ಕಾಲಿಕವಾಗಿ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಕಲಾಪ ಅಮಾನತು ಮಾಡಲಾಗಿದೆ.

ಬಿಜೆಪಿಗೆ 4 ವರ್ಷ ಅಧಿಕಾರದಲ್ಲಿದ್ದು, ಗುಂಡಿ ಮುಚ್ಚಲಾಗಲಿಲ್ಲ: ಸಿಎಂ ಸಿದ್ದರಾಮಯ್ಯ

0

ಬೆಳಗಾವಿ: ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದು ಗುಂಡಿ ಮುಚ್ಚಲಾಗಲಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದರು. ಬ್ರಾಂಡ್ ಬೆಂಗಳೂರು ಕುರಿತಂತೆ ಬಿಜೆಪಿ ಸರಿಯಾಗಿ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿರುವ ಬಗ್ಗೆ ಮಾತನಾಡಿ ನಾವು ಅಧಿಕಾರಕ್ಕೆ ಬಂದು 6 ತಿಂಗಳಾಯಿತು. ಬಿಜೆಪಿ ಬ್ರಾಂಡ್ ಬೆಂಗಳೂರು ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು ಉಚ್ಚ ನ್ಯಾಯಾಲಯ ಅವರಿಗೆ ಗುಂಡಿ ಮುಚ್ಚಿಲ್ಲ ಎಂದು ಛೀಮಾರಿ ಹಾಕಿದೆ.

ಅವರಿಗೆ ಬೆಂಗಳೂರಿನ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ ಎಂದರು. ಉತ್ತರ ಕರ್ನಾಟಕದಲ್ಲಿ ಸದನ ನಡೆಯುತ್ತಿದ್ದು ಸಚಿವರು ತೆಲಂಗಾಣದಲ್ಲಿದ್ದಾರೆ ಎಂಬ ಹೇಳಿಕೆಗೆ ಉತ್ತರಿಸಿದ.ಮುಖ್ಯ ಮಂತ್ರಿಗಳು ಎಲ್ಲರೂ ಅಲ್ಲಿಲ್ಲ, ಒಂದಿಬ್ಬರು ಹೋಗಿದ್ದಾರೆ ರಾಜಕೀಯವನ್ನೂ ಮಾಡಬೇಕಲ್ಲ ಎಂದರು. ಜಮೀರ್ ಅಹ್ಮದ್ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರು ಬರಬೇಕಷ್ಟೇ. ಬಹುತೇಕ ಜನ ವಾಪಸ್ಸು ಬಂದಿದ್ದಾರೆ ಎಂದರು.

ಯತ್ನಾಳ್ ಹೇಳಿಕೆ ಸಣ್ಣ ವಿಷಯವಲ್ಲ, ಹುಚ್ಚರಂತೆ ವರ್ತನೆ ಮಾಡುತ್ತಾರೆ: ಹಿಂಡಸಗೇರಿ ಆಕ್ರೋಶ

0

ಹುಬ್ಬಳ್ಳಿ: ಬಸನಗೌಡ ಪಾಟೀಲ ಯತ್ನಾಳ ಹುಚ್ಚರಂತೆ ವರ್ತನೆ ಮಾಡುತ್ತಿದ್ದಾರೆ.ಈ ವಿಷಯ ಕೇಳಿ ನನಗೆ ಬಹಳ ಆಶ್ಚರ್ಯ ಆಗಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಮತ್ತು ಮುಸ್ಲಿಂ ಧರ್ಮಗುರುಗಳ ಸಮಾವೇಶದ ಉಸ್ತುವಾರಿ ಎ.ಎಮ್.ಹಿಂಡಸಗೇರಿ ಹೇಳಿದರು.

ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಯತ್ನಾಳ ಅವರ ಹೇಳಿಕೆ ಸಣ್ಣ ವಿಷಯ ಅಲ್ಲ.ಸರ್ಕಾರದ ಎಲ್ಲಾ ಜನ ಪ್ರತಿನಿಧಿಗಳು ಬಂದಿದ್ದರು. ಯತ್ನಾಳ ಅವರ ಮನಸ್ಸು ಸ್ಥಿರವಾಗಿಲ್ಲ. ಅವರ ಪಕ್ಷದ ವಿರುದ್ದವೇ ಯತ್ನಾಳ ಅವರು ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಾರೆ. ಐಎಸ್ಐ ಉಗ್ರರ ಜೊತೆಗೆ ನಂಟು ಇದ್ದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸತ್ಯಕ್ಕೆ ದೂರವಾದದ್ದು, ನಾನು ಖಂಡಿಸುತ್ತೆನೆ ಎಂದರು.

ಅವರಿಗೆ ಒಳ್ಳೆ ಬುದ್ಧಿ ಕೊಡಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೇನಿ. ರಾಜಕೀಯವಾಗಿ ಮಾತನಾಡಲಿ, ಆದರೆ ಧಾರ್ಮಿಕವಾಗಿ ಮಾತನಾಡೋದು ಸರಿಯಲ್ಲ. ಅಲ್ಲಿ ಅನೇಕ ಗುರುಗಳು ಬಂದು ಎಲ್ಲಾ ಧರ್ಮಗಳಲ್ಲಿ ಶಾಂತಿ ನೆಲೆಸಬೇಕು ಅನ್ನೋ ಉದ್ದೇಶದಿಂದ ಮಾಡಿದ್ವಿ. ನಮ್ಮಲ್ಲಿ ಶೈಕ್ಷಣಿಕವಾಗಿ ಅಲ್ಪಸಂಖ್ಯಾತರೂ ಹಿಂದುಳಿದಿದ್ದಾರೆ. ಯಾರೇ ಆಗಲಿ ಧಾರ್ಮಿಕವಾಗಿ ಮಾತನಾಡಬಾರದು ಎಂದು ಅವರು ಹೇಳಿದರು.

ಲಿಡ್ಕರ್‌’ಗೆ ಡಾಲಿ ಧನಂಜಯ ರಾಯಭಾರಿ: ಅಧಿಕೃತ ಘೋಷಣೆ ಮಾಡಿದ ಸಿಎಂ

0

ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ದ ರಾಯಭಾರಿಯಾಗಿ ನಟ ಡಾಲಿ ಧನಂಜಯ್ ಅವರನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ನಟ ಧನಂಜಯ ಅವರನ್ನು ಲಿಡ್ಕರ್ ರಾಯಭಾರಿ ಘೋಷಿಸಿದರು. ಇದೇ ಮೊದಲ ಬಾರಿಗೆ ಲಿಡ್ಕರ್ ಗೆ ರಾಯಭಾರಿಯನ್ನು ಆಯ್ಕೆ ಮಾಡಿದ್ದು ವಿಶೇಷ.

ಸ್ಯಾಂಡಲ್‌ವುಡ್ ನಲ್ಲಿ ನಟನಾಗಿ ನಿರ್ಮಾಪಕನಾಗಿ ಡಾಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ಸ್ಟಾರ್. ನಟನೆ, ನಿರ್ಮಾಣದ ಜೊತೆಗೀಗ ಧನಂಜಯ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಚರ್ಮ ಕುಶಲಕರ್ಮಿಗಳ ಕುಟುಂಬದ ನೆರವಿಗೆನಿಂತಿದ್ದಾರೆ.

ವಿಶೇಷ ಎಂದರೆ ಲಿಡ್ಕರ್ ರಾಯಭಾರಿಯಾಗಲು ಧನಂಜಯ ಅವರು ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದಿಲ್ಲ. ಉಚಿತವಾಗಿ ಲಿಡ್ಕರ್ ಬ್ರಾಂಡ್ ಪ್ರಮೋಟ್ ಮಾಡುವ ಮೂಲಕ ಧನಂಜಯ್ ಮಾದರಿಯಾಗಿದ್ದಾರೆ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 67ನೇ ಪುಣ್ಯ ಸ್ಮರಣೆ ದಿನವೇ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿತ್ತು. ಸಿಎಂ ಸಿದ್ದರಾಮಯ್ಯ ಮತ್ತು ಧನಂಜಯ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಪ್ರಾರಂಭಿಸಿದರು.

ಲಿಡ್ಕರ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ರಾಯಭಾರಿಯನ್ನ ಆಯ್ಕೆ ಮಾಡಿ ಈ ನಿಗಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರಕ್ಕೆ ಡಾಲಿ ರಾಯಾಭಾರಿಯಾಗುವ ಮೂಲಕ ಬಡವರ ಮಕ್ಕಳು ಬೆಳಿಬೇಕು ಎನ್ನುವುದನ್ನು ಮತ್ತೆ ಸಾರಿ ಹೇಳಿದ್ದಾರೆ.

ಯಾವಾಗ ಕರೆ ಬರುತ್ತದೆಯೋ ಆಗ ದೆಹಲಿಗೆ ಹೋಗುತ್ತೇನೆ: ಬಸನಗೌಡ ಪಾಟೀಲ್ ಯತ್ನಾಳ್

0

ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನ ಕಟ್ಟಿಹಾಕಲು ವಿಪಕ್ಷ ಬಿಜೆಪಿ ಸಜ್ಜಾಗಿದೆ. ಆದ್ರೆ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷಕ್ಕೆ ವಿಪಕ್ಷದಂತಾಗಿದ್ದಾರೆ. ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಕೆಲ ಬಿಜೆಪಿ ಶಾಸಕರು ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಪಟ್ಟಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಸಹ ಇದೆ. ಇನ್ನು ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತ್ನಾಳ್, ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ. ಆದ್ರೆ, ಉಚಿತ ಮಾತ್ರ ಅಲ್ಲ, ಹಣ ಕೊಟ್ಟು ಟಿಕೆಟ್ ಪಡೆದು ಹೋಗಬೇಕು ಎಂದರು.

ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ನಾನಾಗಿಯೇ ದೆಹಲಿಗೆ ಹೋಗಲ್ಲ, ಕರೆ ಬಂದ ಮೇಲೆ ಹೋಗುತ್ತೇನೆ. ಯಾವಾಗ ಕರೆ ಬರುತ್ತದೆಯೋ ಆಗ ದೆಹಲಿಗೆ ಹೋಗುತ್ತೇನೆ. ಶಾಸಕ ರಮೇಶ್ ಜಾರಕಿಹೊಳಿಸೇರಿದಂತೆ ಹಲವರಿಗೆ ಹೇಳಿರಬಹುದು. ಇಬ್ಬರು ಮಹಾನುಭಾವರಿಂದ ಕರ್ನಾಟಕದಲ್ಲಿ ಪರಿಸ್ಥಿತಿ ಬಂದಿದೆ. ದೆಹಲಿಯ ಒಬ್ಬರು, ಕರ್ನಾಟಕ ಒಬ್ಬರು ಇದ್ದಾರೆ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು.

ಮದುವೆ ಫಿಕ್ಸ್ ಆಗಿದ್ದ ಆಟೋ ಚಾಲಕನ ಬರ್ಬರ ಹತ್ಯೆ..!

0

ಬೆಂಗಳೂರು:- ಬೆಂಗಳೂರಿನ ಟಿಂಬರ್​ಲೇಔಟ್​ನಲ್ಲಿ ಆಟೋ ಚಾಲಕ ಇನ್ನೇನು ಬ್ರಹ್ಮಚರ್ಯದಿಂದ ಗೃಹಸ್ತಾಶ್ರಮಕ್ಕೆ ಕಾಲಿಡುತ್ತಿರಬೇಕು ಎನ್ನುವಷ್ಟರಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಂದಿರುವ ಘಟನೆ ಜರುಗಿದೆ.

24 ವರ್ಷದ ಅರುಣ್ ಕೊಲೆಯಾದ ದುರ್ದೈವಿ. ಮುಂದಿನ ತಿಂಗಳು ಮದುವೆ ಫಿಕ್ಸ್ ಆಗಿತ್ತು. ಆದ್ರೆ, 10ಕ್ಕೂ ಹೆಚ್ಚು ದುಷ್ಕರ್ಮಿಗಳು ಅರಣ್​ನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ಪರಿಶೀಲಿಸಿದ್ದು, ಕೊಲೆಗೆ ಕಾರಣವೇನು ಎನ್ನುವುದನ್ನು ತನಿಖೆ ಕೈಗೊಂಡಿದ್ದಾರೆ.

ಆಟೋ ಚಾಲಕ ಅರುಣ್ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಆ ಪ್ರೀತಿಯೊಂದಿಗೆ ಮದುವೆಯಾಗಿ ಸಂಸಾರ ಶುರು ಮಾಡಬೇಕಿದ್ದ. ಅದಕ್ಕೆ ಅಂತಾಲೇ ಮುಂದಿನ ತಿಂಗಳು ಮದುವೆ ಫಿಕ್ಸ್​ ಆಗಿತ್ತು ಎಂದು ತಿಳಿದು ಬಂದಿದೆ.

ಪ್ರಾಣ ಕಳೆದುಕೊಂಡ ಜಾಗದಲ್ಲಿಯೇ ಅರ್ಜುನನ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಅಂಬಾರಿ ಹೊತ್ತ ಅರ್ಜುನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ದಸರಾ ಆನೆ ಅರ್ಜುನ ಪ್ರಾಣ ಕಳೆದುಕೊಂಡ ಜಾಗ ಹಾಗೂ ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಅಂಬಾರಿ ಹೊತ್ತ ಅರ್ಜುನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅರ್ಜುನನ ಸಾವಿನ ಕುರಿತು ಸಂಪೂರ್ಣ ಮಾಹಿತಿ ಕೇಳಿದ್ದೇನೆ.

ಅರ್ಜುನ ಆನೆ ಸಕಲೇಶಪುರದಲ್ಲಿ ಎಲ್ಲಿ ಪ್ರಾಣ ಕಳೆದುಕೊಂಡಿದ್ನೋ ಅಲ್ಲಿಯೇ ಸ್ಮಾರಕ ಮಾಡುತ್ತೇವೆ. ಹಾಗೂ ಹೆಗ್ಗಡದೇವನಕೋಟೆಯಲ್ಲಿಯೂ ಸ್ಮಾರಕ ಮಾಡಲು ತಿಳಿಸಿದ್ದೇವೆ ಎಂದರು. ಅರ್ಜುನ ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದವನ ಅಚಾನಕ್ ಸಾವಾಗಿದೆ. ಆತ ಇನ್ನೂ ಹೆಚ್ಚು ಕಾಲ ಬದುಕಬೇಕಿತ್ತು, ಇನ್ನೊಂದು ಆನೆ ಕಾರ್ಯಾಚರಣೆಗೆ ಅರ್ಜುನ ನನ್ನ ಉಪಯೋಗಿಸಿದ ಕಾರಣ ಸಾವನಪ್ಪಿದೆ ಎಂದು ಸಿಎಂ ಹೇಳಿದರು.

2 ವರ್ಷದ ಪುಟ್ಟ ಹೆಣ್ಣು ಮಗುವಿನ ಮೃತದೇಹ ಮೋರಿಯಲ್ಲಿ ಪತ್ತೆ..!

0

ಬೆಂಗಳೂರು:- ಮೋರಿಯಲ್ಲಿ 2 ವರ್ಷದ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಬಳಿಯಲ್ಲಿ ನಡೆದಿದೆ.

ಚಾಪೆ ಹಾಕಿ ಮಗುವನ್ನು ಮಲಗಿಸಿದ ರೀತಿಯಲ್ಲಿ ಮಗು ಪತ್ತೆಯಾಗಿದೆ. ಆದರೆ ಮಗುವಿನ ದೇಹದ ಮೇಲೆ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಇದು ಕೊಲೆಯೊ ಅಥವಾ ಸಹಜ ಸಾವುವೋ ತಿಳಿದು ಬಂದಿಲ್ಲ. ಮಗುವಿನ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

ಭ್ರೂಣಹತ್ಯೆ ತಡೆಗೆ ಪೊಲೀಸ್ ಇಲಾಖೆಯಿಂದ ನೂತನ ಪ್ಲ್ಯಾನ್

0

ಬೆಂಗಳೂರು;- ಭ್ರೂಣಹತ್ಯೆ ತಡೆಗೆ ರಾಜ್ಯದಲ್ಲಿ ಪೊಲೀಸ್ ಇಲಾಖೆ ಹೊಸ ನಿಯಮ ಜಾರಿಗೆ ತರಲು ಇದೀಗ ಚಿಂತನೆ ನಡೆಸಿದೆ.

ಇನ್ಮುಂದೆ 6 ತಿಂಗಳು ಮತ್ತು ನಂತರದ ಭ್ರೂಣ ಹತ್ಯೆ ಮಾಡಿದರೆ ಕೊಲೆ ಕೇಸ್​ ದಾಖಲಿಸಲು ಪೊಲೀಸ್ ಇಲಾಖೆ ಪ್ಲ್ಯಾನ್ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಇನ್ಮುಂದೆ 6 ತಿಂಗಳು ಮತ್ತು ನಂತರದ ಭ್ರೂಣ ಹತ್ಯೆ ಮಾಡಿದರೆ ಕೊಲೆ ಕೇಸ್​ ದಾಖಲಿಸಲು ಪೊಲೀಸ್ ಇಲಾಖೆ ಪ್ಲ್ಯಾನ್ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಭ್ರೂಣ ಹತ್ಯೆ ಮಾಡಿದ್ರೆ ಐಪಿಸಿ 302 ಅಡಿ ಕೇಸ್ ದಾಖಲಿಸಿಕೊಳ್ಳಲು ಚಿಂತನೆಗಳು ನಡೆದಿದ್ದು, ಈ ಹೊಸ ನಿಯಮ ಜಾರಿಗೆ ತರುವ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿದ್ದಾರೆ. ಕೊಲೆ ಪ್ರಕರಣ ದಾಖಲು ಮಾಡಲು ಕರಡು ತಯಾರಿಸುವ ಬಗ್ಗೆ ಚರ್ಚೆಗಳು ನಡೆದಿದ್ದು,

ಕರಡು ಸಿದ್ದಪಡಿಸಿ ಜಾರಿಗೆ ತರುವಂತೆ ಆರೋಗ್ಯ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ಒಂದು ವೇಳೆ ಇದು ಜಾರಿಗೆ ಬಂದರೆ ಆರು ತಿಂಗಳು ಮತ್ತು ನಂತರದ ಭ್ರೂಣ ಹತ್ಯೆ ಮಾಡಿದರೆ ಅಂತರವರ ವಿರುದ್ಧ ಐಪಿಸಿ 302 ಅಡಿಯಲ್ಲಿ ಕೇಸ್ ದಾಖಲಾಗಲಿದೆ. ಈ ಮೂಲಕ ಭ್ರೂಣ ಹತ್ಯೆ ತಡೆಗಟ್ಟಲು ಪೊಲೀಸ್ ಇಲಾಖೆ ಈ ರೀತಿಯಾಗಿ ಮುಂದಾಗಿದೆ.

error: Content is protected !!