Home Blog Page 3131

ಗುಡ್ ನ್ಯೂಸ್: ಮನೆಯ ಎರಡನೇ ಯಜಮಾನರಿಗೂ ಅನ್ನಭಾಗ್ಯ ಹಣ

0

ಬೆಂಗಳೂರು: ಮನೆಯ ಎರಡನೇ ಯಜಮಾನರಿಗೂ ಅನ್ನ ಭಾಗ್ಯ ಹಣ ನೀಡುವ ಮೂಲಕ ಆಹಾರ ಇಲಾಖೆ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದೆ. ಈ ಕುರಿತ ಡೀಟೈಲ್ಸ್ ಇಲ್ಲಿದೆ. ಸರ್ಕಾರ ನೀಡಿರುವ ಯೋಜನೆಗಳಲ್ಲಿ ಒಂದಲ್ಲ ಒಂದು ಕೊರತೆಗಳಿದ್ದು, ಅನ್ನ ಭಾಗ್ಯ ಯೋಜನೆ ಬಗ್ಗೆ ಯು ಸಾಕಷ್ಟು ದೂರುಗಳು ಬಂದಿವೆ.

ಅನ್ನ ಭಾಗ್ಯ ಯೋಜನೆ DBT ಪ್ರತಿ ತಿಂಗಳು 8 ರಿಂದ 10 ಸಾವಿರ ಜನರಿಗೆ ಸಿಗದೆ ದೂರುಗಳು ಹೆಚ್ಚಾಗುತ್ತಲೆ ಇತ್ತು.ಈ ಹಿಂದೆ ಕೇವಲ ಕೇವಲ ಕಾರ್ಡ್‌ನ ಮೊದಲ ಯಜಮಾನರಿಗೆ DBTಮೂಲಕ ಹಣ ಹಾಕಲಾಗುತ್ತಿತ್ತು. ಆದ್ರೀಗ ದೂರುಗಳು ಹೆಚ್ಚಾಗಿದ್ದರಿಂದ  ಮನೆಯ ಎರಡನೇ ಯಜಮಾನರಿಗೂ ಹಣ ಹಾಕುವುದಾಗಿ ನಿರ್ಧರಿಸಲಾಗಿದೆ.

ಈಗಾಗಲೇ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದ್ದು, ಅಧಿಕೃತವಾಗಿ ಈ ತಿಂಗಳಿನಿಂದ ಜಾರಿ ಮಾಡಲಾಗುತ್ತದೆ. ಇದರಿಂದ ಸುಮಾರು 9ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ದಾರರಿಗೆ ಇದರ ಲಾಭ ಸಿಗಲಿದೆ.

ಒಟ್ಟಿನಲ್ಲಿ ಯೋಜನೆಗಳು ಘೋಷಣೆ ಆಗಿ ಜಾರಿಗೆ ಬಂದರು ಸರಿಯಾಗಿ ಸಮರ್ಪಕವಾಗಿ ನಿರ್ವಹಣೆ ಆಗದೆ ದೂರುಗಳ ಸರಮಾಲೆಯೆ ಕಾಣುತ್ತಿದ್ದು ಇನ್ನು ಮುಂದೆ ಆದರು ಜನರಿಗೆ ಯೋಜನೆಗಳ ಪ್ರಯೋಜನ ಸರಿಯಾಗಿ ಸಿಗಲಿದೆಯ ನೋಡಬೇಕಿದೆ.

ಶಹರ ಪೊಲೀಸರ ಕಾರ್ಯಾಚರಣೆ; ಕುಖ್ಯಾತ ಅಂತರ್ ಜಿಲ್ಲಾ ಕಳ್ಳ ಮಚ್ಚರ್ ಅಂದರ್

ಗದಗ: ಕಳೆದ ವರ್ಷ ಗದಗ ನಗರದ ಹುಡ್ಕೋ ಕಾಲೋನಿಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಶಹರ ಠಾಣೆಯ ಪೊಲೀಸರು ಕುಖ್ಯಾತ ಅಂತರ್ ಜಿಲ್ಲಾ ‌ಕಳ್ಳನನ್ನು ಬಂಧಿಸಿದ್ದಾರೆ.

ಧಾರವಾಡದ ಶ್ರೀರಾಮನಗರದ‌ ನಿವಾಸಿ, ಸದ್ಯಕ್ಕೆ ಮಹಾರಾಷ್ಟ್ರದ ಮೀರಜ್‌ನಲ್ಲಿ‌ ವಾಸವಾಗಿದ್ದ ಮೊಹಮ್ಮದ್ ಹುಸೇನ್ @ ಮಚ್ಚರ್@ ಹನಿಸಿಂಣ್ ತಂದೆ ಗೌಸ್ ಶೇಖ್ ಎಂಬಾತನನ್ನು ಬಂಧಿಸಲಾಗಿದೆ.

ಬಂಧಿತನಿಂದ 71500 ರೂ. ಮೌಲ್ಯದ 30 ಗ್ರಾಮ್ ಬಂಗಾರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.

08-09-2022 ರ ಸಂಜೆ ಗದಗ ನಗರದ ಹುಡ್ಕೋ ಕಾಲೋನಿಯ ಎರಡನೇ ಕ್ರಾಸ್‌ ನಲ್ಲಿ ಮನೆ ಕಳ್ಳತನ ನಡೆದಿದೆ ಎಂದು ಮಾಲೀಕರಾದ ದೀಪಕ್ ಪವಾರ್ ಎನ್ನುವವರು ಶಹರ ಠಾಣೆಗೆ ದೂರು ನೀಡಿದ್ದರು.

ಕಳ್ಳತನ ಪ್ರಕರಣ ಪತ್ತೆ ಮಾಡಲು ಗದಗ ಎಸ್ಪಿ ಬಿ.ಎಸ್. ನೇಮಗೌಡ ಹಾಗೂ ಅಂದಿನ ಡಿವೈಎಸ್ಪಿ ಎಮ್.ಬಿ.ಸಂಕದ ಅವರ ಮಾರ್ಗದರ್ಶನದಲ್ಲಿ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಬಿ.ಪಾಟೀಲ್, ಪಿಎಸ್ಐ ಜಿ.ಟಿ ಜಕ್ಕಲಿ, ಎಎಸ್ಐ ವಾಯ್.ಬಿ. ಪಾಟೀಲ್, ಟೆಕ್ನಿಕಲ್ ಸೆಲ್‌ದ ಗುರು ಬೂದಿಹಾಳ, ಸಿಬ್ಬಂದಿಗಳಾದ ಎಸ್.ಎಸ್.ಮಾವಿನಕಾಯಿ,ಯು,ಎಫ್, ಸುಣಗಾರ,ಮೆಹಬೂಬ್ ವಡ್ಡಟ್ಟಿ, ಪ್ರವೀಣ್ ಕಲ್ಲೂರ, ಕೆ.ಡಿ.ಜಮಾದಾರ, ಪಿ.ಬಿ.ಮೂಲಿಮನಿ, ಅಂದಪ್ಪ ಹಣಜಿ, ಪಿ.ಎ.ಭರಮಗೌಡ್ರ, ವೀರಪ್ಪ ಗೌಡನಾಯ್ಕರ್ ತಂಡ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕಳ್ಳತನ ಪ್ರಕರಣ ಪತ್ತೆ ಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವೈಖರಿಗೆ ಎಸ್ಪಿ ಬಿ.ಎಸ್. ನೇಮಗೌಡ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೀದಿ‌ ನಾಯಿಗಳ ಕಾಟದಿಂದ ಸುಸ್ತಾದ ನಾಗರಿಕರು

0

ದಾವಣಗೆರೆ: ವಿನೋಬನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇಲ್ಲಿ ಸುಮಾರು 10 ರಿಂದ 15 ನಾಯಿಗಳಿದ್ದು, ರಸ್ತೆಯಲ್ಲಿ ಬರುತ್ತಿದ್ದಂತೆ ಜನರ ಮೇಲೆ ಎರಗುತ್ತಿವೆ. ಕೆಲವರನ್ನು ಈಗಾಗಲೇ ಕಚ್ಚಿ ಗಾಯಗೊಳಿಸಿದ್ದು, ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಪೋಷಕರು ಹೆದರುತ್ತಿದ್ದಾರೆ.

ಹಿಂಡು ಹಿಂಡಾಗಿ ಬರುವ ನಾಯಿಗಳು ರಸ್ತೆಯಲ್ಲಿ ಹೋಗುವವರಿಗೆ ಕಚ್ಚಿ ಗಾಯಗೊಳಿಸುತ್ತಿವೆ. ಭಯದ ವಾತಾವರಣದಲ್ಲಿ ಜನರು ಕಾಲ ಕಳೆಯುವಂತಾಗಿದೆ.

ಈಗಾಗಲೇ ಮಕ್ಕಳನ್ನು ಕಚ್ಚಿ ಗಾಯಗೊಳಿಸಿರುವ ನಾಯಿಗಳ ಕಾಟಕ್ಕೆ ಜನರು ಬೇಸತ್ತಿದ್ದಾರೆ. ಬೈಕ್ ಗಳ ಸೀಟ್ ಕವರ್ ಹಾಗೂ ಕಾರ್ ಗಳ ಕವರ್ ಗಳನ್ನು ಕಚ್ಚಿ ಹರಿದು ಹಾಕುತ್ತಿವೆ. ಆದಷ್ಟು ಬೇಗ ನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವ ಮಹಿಳೆಯರು, ಪುರುಷರೂ ಸಹ ನಾಯಿಗಳ ತೊಂದರೆಯಿಂದ ರಸ್ತೆಯಲ್ಲಿ ಹೋಗಲು ಭಯಪಡುತ್ತಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟವರು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳನ್ನು ನಾಯಿಗಳು ಬೆನ್ನತ್ತಿಕೊಂಡು ಹೋಗುತ್ತಿರುವುದು ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.

ಮಹಾನಗರ ಪಾಲಿಕೆಯ ಅಧಿಕಾರಿಗಳು ಸಬೂಬು ಹೇಳದೇ ಆದಷ್ಟು ಬೇಗ ನಾಯಿಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು. ಮಾಡದಿದ್ದರೆ ಮತ್ತಷ್ಟು ಸಮಸ್ಯೆ ಹೆಚ್ಚಾಗಲಿದೆ.

ಪರಿಸ್ಥಿತಿ ಗಂಭೀರಕ್ಕೆ ಹೋದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಆದಷ್ಟು ಬೇಗ ಈ ಸಮಸ್ಯೆಯಿಂದ ಮುಕ್ತಿ ಕೊಡಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯನಗರ: ಹಾವು ಕಚ್ಚಿ ರೈತ ಮಹಿಳೆ ಸಾವು..!

0

ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಸವಾನಾಳು ಗ್ರಾಮದಲ್ಲಿ ಹಾವು ಕಡಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ರತ್ನಮ್ಮ (45) ಮೃತ ದುರ್ದೈವಿ. ರತ್ನಮ್ಮ ಹೊಲದಲ್ಲಿ ಮೆಕ್ಕೆಜೋಳದ ಕಟಾವು ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಹಾವೊಂದು ರತ್ನಮ್ಮರ ಕಾಲಿಗೆ ಕಚ್ಚಿದೆ.

ಕೂಡಲೇ ಅವರನ್ನು ಅಲ್ಲಿದ್ದವರು ಕೊಟ್ಟೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲು ಮುಂದಾಗಿದ್ದಾರೆ. ಆದರೆ ಆದಾಗಲೇ ಹಾವಿನ ವಿಷ ಮೈಗೆ ಆವರಿಸಿದ್ದರಿಂದ ಮಾರ್ಗಮಧ್ಯೆಯೇ ಉಸಿರು ಚೆಲ್ಲಿದ್ದಾರೆ.

ಕೊಟ್ಟೂರು ತಾಲೂಕು ಆರೋಗ್ಯಾಧಿಕಾರಿ ಡಾ. ಬಸವೇಶ್ವರ ಅವರು ಮೃತಪಟ್ಟಿದ್ದಾಗಿ ಖಚಿತಪಡಿಸಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಪಿಡಿಓ ಆತ್ಮಹತ್ಯೆ ಯತ್ನ ಪ್ರಕರಣ; ಆರೋಪಿ ಬಂಧನಕ್ಕಾಗಿ ಪ್ರತಿಭಟನೆ

0

ಧಾರವಾಡ: ಪಿಡಿಓ ಆತ್ಮಹತ್ಯೆ ಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಪಂಚಾಯತ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಆರ್‌ಟಿಐ ಕಾರ್ಯಕರ್ತನ ಕಿರುಕುಳದಿಂದ ಪಿಡಿಓ ನಾಗರಾಜ್ ಅವರು ತೀವ್ರ ಮನನೊಂದು ಇಲಿ ಔಷಧ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಆರೋಪಿ ಬಂಧಿಸಿ ಎಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್… ‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ

0

ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಹಾಯ್ ನಾನ್ನ ಸಿನಿಮಾ ಇದೇ ಡಿಸೆಂಬರ್ 7ರಂದು ಪಂಚ ಭಾಷೆಯಲ್ಲಿ ರಿಲೀಸ್ ಆಗ್ತಿದೆ. ಈ ಹಿನ್ನೆಲೆ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಚಾರ ನಡೆಸುತ್ತಿರುವ ನಾನಿ ಇಂದು ಬೆಂಗಳೂರಿನಲ್ಲಿ ತಮ್ಮ ಚಿತ್ರದ ಪ್ರಮೋಷನ್ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಗೂ ಮುನ್ನ ಅವರು, ನಾಗವಾರದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆಗೆ ಭೇಟೆ ಕೊಟ್ಟು ಒಂದಷ್ಟು ಅವರ ಮನೆಯಲ್ಲಿ ಬ್ರೇಕ್ ಫಾಸ್ಟ್ ಸವಿದು ಕೆಲ ಕಾಲ ಸಮಯ ಕಳೆದಿದ್ದಾರೆ.ಶಿವಣ್ಣನ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ನಾನಿ ಸಿನಿಮಾ ಬಗ್ಗೆ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.

ನ್ಯಾಚುರಲ್ ಸ್ಟಾರ್ ನಾನಿ ಮಾತನಾಡಿ, ನನ್ನ ಹಿಂದಿನ ಸಿನಿಮಾ ದಸರಾಗೆ ನೀವು ಬೆಂಬಲ ಕೊಟ್ಟಿದ್ದೀರಾ. ಅದೇ ರೀತಿ ಹಾಯ್ ನಾನ್ನ ಚಿತ್ರಕ್ಕೂ ಸಪೋರ್ಟ್ ಮಾಡಿ. ಹಾಯ್ ನಾನ್ನ ಎಂದು ಕನ್ನಡದಲ್ಲಿ ಟೈಟಲ್ ಇಡಲು ಕಾರಣವೇನೆಂದರೆ, ಸೌತ್ ಇಂಡಸ್ಟ್ರೀಯ ಎಲ್ಲಾ ಭಾಷೆಯಲ್ಲಿಯೂ ಇದೆ ಟೈಟಲ್ ಇಡಲಾಗಿದೆ. ರಿವ್ಯೂ ಮಾಡಲು, ಬುಕ್ ಮೈಶೋನಲ್ಲಿ ಸಿನಿಮಾ ಹೆಸರು ಸರ್ಚ್ ಮಾಡಲು ಸುಲಭವಾಗಲಿದೆ ಎಂದು. ಹಿಂದಿಯಲ್ಲಿ ಹಾಯ್ ನಾನ್ನ ಎಂದು ಇಡಲು ಆಗುವುದಿಲ್ಲ. ನಾನ್ನ ಎಂದರೆ ತಾತ ಎಂದಾಗುತ್ತದೆ. ಹೀಗಾಗಿ ಹಿಂದಿಯಲ್ಲಿ ಹಾಯ್ ಪಾಪ್ಪ ಎಂದು ಇಡಲಾಗಿದೆ. ನನ್ನ ಕರಿಯರ್ ನ ಒಂದೊಳ್ಳೆ ಅದ್ಭುತ ಸಿನಿಮಾವಾಗಿದೆ ಎಂದು ತಿಳಿಸಿದರು.

‘ದಸರಾ’ ಚಿತ್ರದಲ್ಲಿ ಮಾಸ್ ಆಗಿ ಮಿಂಚಿದ್ದ ನಾನಿ ಈ ಚಿತ್ರದಲ್ಲಿ ಸಖತ್ ಕ್ಲಾಸ್ ಆಗಿ ಕಾಣಿಕೊಂಡಿದ್ದಾರೆ. ಚಿತ್ರದಲ್ಲಿ ನಾನಿ ಮಗಳ ಪಾತ್ರದಲ್ಲಿ ಹಿಂದಿ ಬಾಲನಟಿ ಬೇಬಿ ಕಿಯಾರಾ ಖನ್ನಾ ನಟಿಸಿದ್ದಾಳೆ. ನಾನಿಗೆ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಅಲ್ಲದೇ ವಿಶೇಷ ಪಾತ್ರದಲ್ಲಿ ಶ್ರುತಿ ಹಾಸನ್ ಮಿಂಚಲಿದ್ದು. ಜಯರಾಮ್ ಮತ್ತು ಪ್ರಿಯದರ್ಶಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೈರ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಮೋಹನ್ ಚೆರುಕೂರಿ, ವಿಜಯೇಂದ್ರ ರೆಡ್ಡಿ ತೀಗಲ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸಾನು ಜಾನ್ ವರ್ಗೀಸ್ ಐಎಸ್ಸಿ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ. ಪಂಚಭಾಷೆಗಳಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ದಕ್ಷಿಣ ರಾಜ್ಯಗಳ ಜನರಿಗೆ ತಲುಪುವ ಸಲುವಾಗಿ ಒಂದೇ ಟೈಟಲ್ ಇರಲಿ ಎಂದು ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ‘ಹಾಯ್ ನಾನ್ನ’ ಎಂದೇ ಶೀರ್ಷಿಕೆ ಇಡಲಾಗಿದೆ. ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದೊಂದಿಗೆ ಆರಂಭವಾಗಿರುವ ಈ ಸಿನಿಮಾ ಡಿಸೆಂಬರ್ 7ರಂದು ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಹಾಯ್ ನಾನ್ನ ಸಿನಿಮಾವನ್ನು ಶಾಲಿನಿ ಆರ್ಟ್ಸ್ ರಿಲೀಸ್ ಮಾಡುತ್ತಿದೆ.

ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರದ ಚೆಕ್​ ಹಸ್ತಾಂತರ

0

ಉಗ್ರರ ದಾಳಿಯ ವೇಳೆ ಮೃತಪಟ್ಟ ಕರ್ನಾಟಕದ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಿದೆ. ಈ ಸಂಬಂಧ ಸಿಎಂ ಆಫ್ ಕರ್ನಾಟಕ ಎಕ್ಸ್ ಮಾಡಿದ್ದು, ನಮ್ಮ ಸರ್ಕಾರ ಘೋಷಿಸಿದಂತೆ ಹುತಾತ್ಮ ಯೋಧ “ಕ್ಯಾಪ್ಟನ್ ಎಂ.ವಿ ಪ್ರಾಂಜಲ್” ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಹಸ್ತಾಂತರಿಸಲಾಗಿದೆ.

ಪ್ರಾಣವನ್ನು ಪಣಕ್ಕೆ ಇಟ್ಟು ದೇಶ ಕಾಯುವ ಯೋಧರ ಬಗ್ಗೆ ನಮಗೆ ಅಪಾರವಾದ ಗೌರವ-ಅಭಿಮಾನ ಇದೆ, ಅಷ್ಟೇ ಗೌರವ ಮತ್ತು ಕಾಳಜಿ ಯೋಧರ ಕುಟುಂಬ ವರ್ಗದ ಬಗ್ಗೆಯೂ ಇದೆ ಎಂದು ತಿಳಿಸಲಾಗಿದೆ. ಯೋಧರ ಸಾವು-ನೋವು ಮುಂದಿಟ್ಟುಕೊಂಡು ರಾಜಕಾರಣ ಮಾಡುವವರು ನಾವಲ್ಲ. ಕೆಲವರು ರಾಜಕೀಯ ದುರುದ್ದೇಶದಿಂದ ಸುಳ್ಳು ಸುದ್ದಿ ಸೃಷ್ಟಿಸಿ ಅಪಪ್ರಚಾರ ಮಾಡುವದರಲ್ಲಿಯೇ ವಿಕೃತ ಆನಂದ ಪಡುತ್ತಿದ್ದಾರೆ.

ಅಂತಹವರಿಗೆ ದೇವರು ಸದ್ಬುದ್ಧಿ ನೀಡಲಿ ಎಂದಷ್ಟೇ ಹಾರೈಸಬಲ್ಲೆ ಎಂದು ಸಿಎಂ ತಿಳಿಸಿದ್ದಾರೆ. ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಬಂದಾಗ ಅವರಿಗೆ ನಮನ ಸಲ್ಲಿಸಿದ್ದ ಸಿಎಂ, ರಾಜ್ಯ ಸರ್ಕಾರದಿಂದ 50 ಲಕ್ಷ ಪರಿಹಾರ ಧನ ನೀಡುವುದಾಗಿ ಘೋಷಣೆ ಮಾಡಿದ್ದರು. ಅಂತೆಯೇ ಇದೀಗ ರಾಜ್ಯ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ.

ತೋಟಗಾರಿಕಾ ಇಲಾಖಾ ಡಿಡಿ ಎರಡನೇ ಹೆಂಡತಿ ಮನೆ ಮೇಲೆ ಲೋಕಾ ರೇಡ್-ಚಿನ್ನ ಬೆಳ್ಳಿ ನಗದು ಸೀಜ್..!

0

ಚಿಕ್ಕಬಳ್ಳಾಪುರ: ರಾಮನಗರ ಜಿಲ್ಲೆಯ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮುನೇಗೌಡ ಸಂಬಂಧಿಸಿದ ಹಲವು ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕ ಕಾಲದಲ್ಲಿ ದಾಳಿ ಮಾಡಿದ್ದು, ಮುನೇಗೌಡರ ಎರಡನೇ ಪತ್ನಿಯ ನಿವಾಸ ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಬಳಿಯೂ ದಾಳಿ ನಡೆಸಲಾಗಿದೆ.

ದಾಳಿ ವೇಳೆ ಮುನೇಗೌಡ ಸಹ ಇದೇ ಮನೆಯಲ್ಲಿದ್ದು, ಹಲವು ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ವೇಳೆ 250 ಗ್ರಾಂ ಚಿನ್ನಾಭರಣ, 3 ಕೆಜಿ ಬೆಳ್ಳಿ, ಹಾಗೂ 66 ಸಾವಿರ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಅಂತ ಮಾಹಿತಿ ಸಿಕ್ಕಿದೆ.

ಇನ್ನೂ ಮುನೇಗೌಡ ಸ್ವಗ್ರಾಮ ಕೆಜಿ ಪುರದ ನಿವಾಸಗಳ ಮೇಲೂ ದಾಳಿ ನಡೆಸಲಾಗಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಚಿಕ್ಕಬಳ್ಳಾಪುರ ಎಸ್ಪಿ ರಾಮ್ ಅರಸಿದ್ದಿ ನೇತೃತ್ವದಲ್ಲಿ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.

ಇನ್ನೂ ಇದೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಾಕವೇಲು ಬಳಿಯ ವೆಂಕಟೇಶಪಲ್ಲಿ ಗ್ರಾಮದಲ್ಲೂ ಬೆಸ್ಕಾಂ ಜಾಗೃತ ದಳದ ಡಿಜಿಎಂ ಸುಧಾಕರ್ ರೆಡ್ಡಿ ಅವರ ಮಾವ ಕೃಷ್ಣಾರೆಡ್ಡಿ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಅರ್ಜುನ ಆನೆ ಅಂತ್ಯಕ್ರಿಯೆಗೆ ವಿರೋಧಿಸಿ ಸ್ಥಳೀಯರ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್

0

ಸಕಲೇಶಪುರ : ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರ್ಜುನ ಆನೆ ಅಂತ್ಯಕ್ರಿಯೆಗೆ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

8 ಬಾರಿ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಆನೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅರ್ಜುನ ಆನೆ ಹೆಸರಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ಸೂಕ್ತ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು, ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಜನರ ಮನವೊಲಿಕೆಗೆ ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಪ್ರತಿಭಟನೆಯನ್ನು ತೀವ್ರಗೊಳಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.

ಪೊಲೀಸರು ಲಾಠಿ ಬೀಸುತ್ತಿದ್ದಂತೆ ಪ್ರತಿಭಟನಾಕಾರರು, ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ದಬ್ಬಳ್ಳಿಕಟ್ಟೆಯಲ್ಲಿ ಅರ್ಜುನ ಮೃತಪಟ್ಟ ಸ್ಥಳದಲ್ಲಿಯೇ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದು 2 ಜೆಸಿಬಿಗಳ ಮೂಲಕ ಆಳವಾದ ಗುಂಡಿಗಳನ್ನು ತೆಗೆದು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

ಕಳ್ಳತನದ ಕೇಸಲ್ಲಿ ತಲೆಮರೆಸಿಕೊಂಡಿದ್ದ ಹಾಸನದ ದೇವೇಗೌಡ ಕೊನೆಗೂ ಅಂದರ್..!

0

ಬೆಂಗಳೂರು: ಕಳ್ಳತನದ ಕೇಸಲ್ಲಿ ತಲೆಮರೆಸಿಕೊಂಡಿದ್ದ ಹಾಸನದ ದೇವೇಗೌಡ 26 ವರ್ಷಗಳ‌ ಬಳಿಕ ಕೊನೆಗೂ ಅಂದರ್ ಆಗಿದ್ದಾನೆ. 1997 ರಲ್ಲಿ ಈತನ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.

ಮೂಲತಃ ಹಾಸನದ ಆಲೂರಿನವನಾದ ದೇವೇಗೌಡ ಆರೋಪಿಯಾಗಿದ್ದು, ದೇವೇಗೌಡನನ್ನು ಕೋರ್ಟ್ ಗೆ ಹಾಜರುಪಡಿಸಿ ಅಂತಾ ಅನೇಕ ಬಾರಿ ಕೋರ್ಟ್ ವಾರೆಂಟ್ ಜಾರಿಗೊಳಿಸಿತ್ತು.

ಆದ್ದರಿಂದ ಹಾಸನ, ಬೆಂಗಳೂರಿನಲ್ಲಿ ದೇವೇಗೌಡನಿಗಾಗಿ ಪೊಲೀಸರು ತಲಾಶ್ ನಡೆಸಿದ್ದರು. ಆದರೆ ವಾರೆಂಟ್ ಜಾರಿಯಾದ ಕೋರ್ಟ್ ಆವರಣದಲ್ಲೇ ಆರೋಪಿ ಕೆಲಸ ಮಾಡುತ್ತಿದ್ದ.

ಕೊನೆಗೆ ಸೆಷನ್ ಕೋರ್ಟ್ ಆವರಣದಲ್ಲೇ ಲಾಕ್ ಆಗಿದ್ದಾನೆ. 26 ವರ್ಷಗಳಿಂದ ಕಳ್ಳತನ ಕೇಸಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸದ್ಯ ಈತನನ್ನು ಬಂಧಿಸಿ ಕೋರ್ಟ್ ಗೆ ಕಾಮಾಕ್ಷಿಪಾಳ್ಯ ಪೊಲೀಸರು ಹಾಜರು ಪಡಿಸಿದ್ದಾರೆ.

error: Content is protected !!