Home Blog Page 3133

‘133 ದಿನ 92 ಪ್ರಕರಣ, ಒಂದೂ ಸಾವಿಲ್ಲ; ಜಿಲ್ಲೆಯಲ್ಲಿ ಎರಡಂಕಿ ದಾಟದ ಸೋಂಕಿತರು

0

ಕೋವಿಡ್ 2ನೇ ಅಲೆಯ ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮ
ಕೊರೋನಾ ಲಸಿಕೆ ವಿತರಣೆ: ಜಿಲ್ಲೆಯಲ್ಲಿ ಶೇ.73ರಷ್ಟು ಸಾಧನೆ

ದುರುಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಎರಡಂಕಿ ದಾಟುತ್ತಿಲ್ಲ. ಕೊರೊನಾ ಸೋಂಕಿತರ ಇಳಿಕೆಯ ಜೊತೆಗೆ ಗುಣಮುಖರ ಸಂಖ್ಯೆಯೂ ಅಷ್ಟೇ ಶರವೇಗದಲ್ಲಿ ಏರಿಕೆಯಾಗುತ್ತಿದೆ.

ದಿನ ಒಂದಕ್ಕೆ ಕೇವಲ ಒಂದೆರೆಡು ಸಕ್ರಿಯ ಪ್ರಕರಣಗಳು ಮಾತ್ರ ವರದಿಯಾಗುತ್ತಿರುವುದು ಜಿಲ್ಲೆಯ ಜನರಲ್ಲಿ ಹರ್ಷವನ್ನುಂಟು ಮಾಡಿದೆ. ಅಲ್ಲದೇ, ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತದ ಕಾರ್ಯವೈಖರಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ದೇಶದಲ್ಲಿ ಲಾಕಡೌನ್ ಜಾರಿಯಾಗಿ ಒಂದು ತಿಂಗಳ ಬಳಿಕ ಕಳೆದ ವರ್ಷ ಏಪ್ರಿಲ್‌ನಲ್ಲಿ ಗದಗ ನಗರದ ರಂಗನವಾಡಿಯ ಮಹಿಳೆಯಲ್ಲಿ ಮೊದಲ ಕೊರೊನಾ ಸಕ್ರಿಯ ಪ್ರಕರಣ ಪತ್ತೆಯಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸುಮಾರು 65 ವರ್ಷದ ಮಹಿಳೆ ಏಪ್ರಿಲ್‌ನಲ್ಲೇ ಮೃತಪಟ್ಟಿದ್ದಳು. ಇದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿತ್ತು.

ಫೆ.23ರವರೆಗೆ ಜಿಲ್ಲೆಯಲ್ಲಿ ಒಟ್ಟು 2,40,767 ಜನರು ಕೊರೊನಾ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಒಟ್ಟು 2,47,107 ಮಾದರಿ ಸಂಗ್ರಹಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 2,35,940 ವರದಿಗಳು ನಕಾರಾತ್ಮಕವಾಗಿವೆ. ಇನ್ನೂ 156 ಜನರ ವರದಿ ಬರಲು ಬಾಕಿ ಇದ್ದು, ಒಟ್ಟು 11,011 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ, ಅಕ್ಟೋಬರ್ 15ರವರೆಗೆ ಒಟ್ಟು 141 ಜನರು ಕೊರೊನಾದಿಂದ ಮೃತಪಟ್ಟಿದ್ದು, ಸೋಂಕಿನಿಂದ ಒಟ್ಟು 10,862 ಗುಣಮುಖರಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 8 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 92 ಕೊರೊನಾ ಸಕಾರಾತ್ಮಕ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು 11,011 ಕೊರೊನಾ ಪ್ರಕರಣಗಳು ಪತ್ತೆಯಾದಂತಾಗಿವೆ. ಕಳೆದ ವರ್ಷ ಅಕ್ಟೋಬರ್ 15ರವರೆಗೆ ಕೊರೊನಾದಿಂದ ಸಾವು ಸಂಭವಿಸಿದ್ದು, ಜಿಲ್ಲೆಯಲ್ಲಿ ಇದೇ ಕೊನೆಯ ಸಾವಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಸುಮಾರು 133 ದಿನಗಳಿಂದ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿರುವ ವರದಿಯಾಗಿಲ್ಲ. ಇನ್ನು ಗಂಟಲು ದ್ರವದ ಮಾದರಿ ಪರೀಕ್ಷೆಗಳನ್ನು ನಿರಂತರವಾಗಿ ಮಾಡಲಾಗುತ್ತಿದ್ದು, ಪ್ರತಿದಿನ 1000ಕ್ಕೂ ಹೆಚ್ಚು ಗಂಟಲು ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಾದ್ಯಂತ ಕೊರೊನಾ ಲಸಿಕಾ ಕಾರ್ಯಕ್ರಮ ಆರಂಭಗೊಂಡಿದ್ದು, ಶೇ.73ರಷ್ಟು ಗುರಿ ಸಾಧಿಸಿದೆ.

ನೆರೆಯ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಭೀತಿಯ ಶುರುವಾಗಿರುವ ಬೆನ್ನಲ್ಲೆ ಈಗಾಗಲೇ ರಾಜ್ಯ ಸರಕಾರ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಈ ನಡುವೆಯೂ ಜಿಲ್ಲೆಯ ಕೊರೊನಾ ಪ್ರಕರಣಗಳ ಸಂಖ್ಯೆ ಸಮಾಧಾನ ತಂದಿದೆ. ಅಲ್ಲದೇ, ಕೋವಿಡ್-19 ಸೋಂಕಿನ ಎರಡನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

ಜಿಲ್ಲಾಡಳಿತ ಆರಂಭದಿಂದಲೂ ಕೊರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಕೈಗೊಂಡಿತ್ತು. ಕೊರೊನಾ ಸೋಂಕಿತರಿಗಾಗಿಯೇ ಪ್ರತ್ಯೇಕ ಆಸ್ಪತ್ರೆಯ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಸೋಂಕಿತರ ಮೇಲೆ ಹೆಚ್ಚು ನಿಗಾವಹಿಸಿತ್ತು. ಅಲ್ಲದೇ, ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ತ್ವರಿತವಾಗಿ ಪತ್ತೆ ಹಚ್ಚುವ ಮೂಲಕ ಕೊರೊನಾಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ.

ಕೊರೊನಾ ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಬರುವುದು ಅನುಮಾನ. ಆದರೂ, ಜಿಲ್ಲೆಯಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ

ಡಾ,ಸತೀಶ್ ಬಸರಿಗಿಡದ, ಡಿಎಚ್ಒ

ಜನರಲ್ಲಿ ಜಾಗೃತಿ

ನೆರೆಯ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ರಾಜ್ಯದಲ್ಲೂ ಕೋವಿಡ್-19 ಸೋಂಕು ಮರಳಿ ಅಬ್ಬರಿಸಬಹುದಾದ ಸಾಧ್ಯತೆಗಳಿದ್ದು, ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಜಿಲ್ಲಾಡಳಿತ ಕೊರೊನಾ ಕುರಿತು ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್ ಬಳಕೆಯ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗುತ್ತಿದೆ.

ಕಾಲಿಗೆ ಚಪ್ಪಲಿ ಹಾಕ್ಕೊಂಡೇ ಶಾಸಕರಿಂದ ಭೂಮಿಪೂಜೆ ; ಸಾರ್ವಜನಿಕರ ಆಕ್ರೋಶ


ವಿಜಯಸಾಕ್ಷಿ ಸುದ್ದಿ, ಗದಗ

ದ್ರುವಾ ಸರ್ಜಾ ಅಭಿನಯದ, ನಂದಕಿಶೋರ್ ನಿರ್ದೇಶನದ ಬಹು ನಿರೀಕ್ಷಿತ ಪೊಗರು ಕನ್ನಡ ಸಿನಿಮಾದಲ್ಲಿ ಪುರೋಹಿತರೊಬ್ಬರ ಮೇಲೆ ಖಳ ನಾಯಕನೊಬ್ಬ ಪಾದರಕ್ಷೆ ಹಾಕಿಕೊಂಡಿರುವ ಪಾದವನ್ನು ಭುಜದ ಮೇಲೆ ಇಟ್ಟಿದ್ದು, ರಾಜ್ಯದಾದ್ಯಂತ ವಿವಾದಕ್ಕೆ ಕಾರಣವಾಗಿದ್ದು, ಸಿನಿಮಾದ ಆ ದೃಶ್ಯವನ್ನೇ ಕಡಿತ ಮಾಡುವವರೆಗೂ ಬಂದು ತಲುಪಿದ ಬೆನ್ನಲ್ಲೇ ಇಲ್ಲೊಬ್ಬ ಬಿಜೆಪಿ ಶಾಸಕರು ಕಾಲಲ್ಲಿ ಚಪ್ಪಲಿ ಹಾಕಿಕೊಂಡೇ ಕಾಮಗಾರಿಯ ಭೂಮಿಪೂಜೆ ನೆರವೇರಸಿರುವ ಘಟನೆ ಬೆಳಕಿಗೆ ಬಂದಿದೆ.

ಬಿಜೆಪಿ ಅಂದ್ರೆ ಅದು ಹಿಂದೂ ಧರ್ಮದ ಪ್ರತಿಪಾದಕ ಪಕ್ಷ. ಅದರಲ್ಲಿನ ಶಾಸಕರೂ ಅಷ್ಟೇ ಹಿಂದೂ ಧರ್ಮದ ಪರಿಪಾಲಕರು ಮತ್ತು ಆರಾಧಕರು ಎಂದು ಬಣ್ಣಿಸಲಾಗುತ್ತದೆ. ಅಲ್ಲದೇ, ಪಕ್ಷದ ತತ್ವ ಸಿದ್ದಾಂತಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಯಾವುದೇ ಶುಭ ಸಂದರ್ಭಗಳಲ್ಲಿ, ಪೂಜಾ ಕೈಂಕರ್ಯಗಳಲ್ಲಿ ಪಾದಕ್ಕೆ ಪಾದರಕ್ಷೆ ಹಾಕಿಕೊಳ್ಳದೇ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ.

ಆದರೆ, ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಅವರು ಕಾಲಿಗೆ ಪಾದರಕ್ಷೆ ಹಾಕಿಕೊಂಡೇ ಭೂಮಿಪೂಜೆ ನೆರವೇರಿಸಿದ ಘಟನೆ ಬುಧವಾರ ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರದಲ್ಲಿ ನಡೆದಿದೆ.

ಲಕ್ಷ್ಮೇಶ್ವರದ ಪಂಪ ಸರ್ಕಲ್‌ನಿಂದ ಶ್ರೀಕ್ಷೇತ್ರ ಮುಕ್ತ್ತಿಮಂದಿರದವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಇಂತಹ ದೃಶ್ಯ ಕಂಡು ಬಂದಿತು. ಈ ಸಂದರ್ಭದಲ್ಲಿ ಓರ್ವ ಸ್ವಾಮೀಜಿಗಳು ಸೇರಿದಂತೆ ಹಲವರು ಇಂತಹ ದೃಶ್ಯವೊಂದಕ್ಕೆ ಸಾಕ್ಷಿಯಾದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಕಳೆದಹೋದ ಮರ್ಯಾದೆ ಮತ್ತೆ ಬರುವಂತೆ ದುರ್ಗದೇವಿಗೆ ಪತ್ರ ಬರೆದು ಬೇಡಿಕೊಂಡ ಭಕ್ತ

0

ವಿಜಯಸಾಕ್ಷಿ ಸುದ್ದಿ, ಗಂಗಾವತಿ

ಕಳೆದುಹೋದ ಮರ್ಯಾದೆ ಮಾನ ಸನ್ಮಾನಗಳು ಮತ್ತೆ ಬರಲು ಆಶೀರ್ವಾದ ಮಾಡುವಂತೆ ಭಕ್ತನೋರ್ವ ಗಂಗಾವತಿ ಗ್ರಾಮದೇವತೆ ದುರುಗಮ್ಮ ಹುಂಡಿಗೆ ಕಾಣಿಕೆ ಸಮೇತ ಪತ್ರ ಬರೆದು ಹಾಕಿದ್ದಾನೆ.

ದೇವತೆಯ ಕಾಣಿಕೆ ಪೆಟ್ಟಿಗೆ (ಹುಂಡಿ) ಎಣಿಕೆಯ ಸಂದರ್ಭದಲ್ಲಿ ಪತ್ರ ಕಂಡು ಬಂದಿದ್ದು ಏಲಕ್ಕಿ ಚಕ್ಕಿ ಸಮೇತ ಪತ್ರಕ್ಕೆ ಅರಿಷಿಣ ಕುಂಕುಮ ಹಚ್ಚಿ ಪತ್ರವನ್ನು ಹುಂಡಿಯಲ್ಲಿ ಹಾಕಿದ್ದಾರೆ.

ಸಿದ್ದಾಪುರದಲ್ಲಿ‌ ಪ್ಲಾಟ್ ಮಾರಾಟವಾಗಲಿ, ಅಕ್ಕ, ಅಣ್ಣ ತಮ್ಮನ ಮದುವೆಯಾಗಲಿ, ಕೋರ್ಟಿನಲ್ಲಿರುವ ಕೇಸ್ ಗೆದ್ದು ಹೊಲದ ಹಣ ಬೇಗನೆ ಬರಲಿ, ಇಡೀ ಕುಟುಂಬ ಕಷ್ಟದಿಂದ ಬೇಗನೆ ಹೊರಗೆ ಬರಲಿ ಎಂದು‌ ಪತ್ರದಲ್ಲಿ ಬರೆಯಲಾಗಿದೆ.

ಬುಧವಾರ ಹುಂಡಿಯ ಹಣ ಎಣಿಕೆ ಮಾಡಲಾಗಿದ್ದು ಒಟ್ಟು 2,10,070 ರೂ ಸಂಗ್ರಹವಾಗಿದೆ. ಕಳೆದ 5 ತಿಂಗಳ ಹಿಂದೆ ಹುಂಡಿ ಎಣಿಕೆ ಸಂದರ್ಭದಲ್ಲಿ 2,17.000 ರೂ ಹಣ ಸಂಗ್ರಹವಾಗಿತ್ತು
ಹುಂಡಿ ಎಣಿಕೆ ಸಂದರ್ಭದಲ್ಲಿ ಜೋಗದ ನಾರಾಯಣಪ್ಪ, ಬಿ.ಅಶೋಕ, ಬಿಚ್ಚಾಲಿ ಮಲ್ಲಿಕಾರ್ಜುನ, ವಾಮರಜ್ಯೋತಿ ವೆಂಕಟೇಶ ಗೀತಾವಿಕ್ರಂ ಸೇರಿ ಅನೇಕರಿದ್ದರು.

ಸರಿಯಾದ ಸಮಯಕ್ಕೆ ಬಾರದ ಬಸ್ಸುಗಳು; ಕಾಲೇಜು ವಿದ್ಯಾರ್ಥಿಗಳ ಪರದಾಟ

0

ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನೂರಾರು ವಿದ್ಯಾರ್ಥಿಗಳು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಗ್ರಾಮಾಂತರ ಭಾಗದ ಕಾಲೇಜ್ ವಿದ್ಯಾರ್ಥಿಗಳು ಬಸ್ಸುಗಳಿಲ್ಲದೇ ಪರದಾಟ ನಡೆಸುತ್ತಿತುವುದು ಕೊಪ್ಪಳ ಜಿಲ್ಲೆಯಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಏಕಾಏಕಿ ರಾಜ್ಯಹೆದ್ದಾರಿ ಬಂದ್ ಮಾಡಿ ಬಸ್ಸಗಳನ್ನು ತಡೆದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ಕುದರಮೋತಿ ಗ್ರಾಮದಲ್ಲಿ ಬಸ್ಸುಗಳು ನಿಲ್ಲಿಸದೆ ಹೋಗುತ್ತಿದ್ದು, ಇದರಿಂದ ಕಾಲೇಜುಗಳಿಗೆ ಹೋಗಲು ಸಮಸ್ಯೆಯಾಗುತ್ತಿತ್ತು. ಇದರಿಂದ ರೊಚ್ಚಿಗೆದ್ದ ನೂರಾರು ಕಾಲೇಜ್ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ, ಹತ್ತಾರು ಬಸ್ಸುಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಇನ್ನು ಈ ಬಗ್ಗೆ ಜಿಲ್ಲೆಯ KSRTC ವಿಭಾಗದ ಡಿಪೋ ಮ್ಯಾನೇಜರ್ ಗಳಲ್ಲಿ ಎಸ್ಎಫ್ಐ ಸಂಘಟನೆಯು ಮನವಿ ಮಾಡಿಕೊಂಡಿದ್ದು, ಜಿಲ್ಲೆಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಗ್ರಾಮಗಳಿಂದ ನಗರಕ್ಕೆ ಬಸ್ಸ್ ಗಳನ್ನು ಬಿಡಬೇಕು ಇಲ್ಲದಿದ್ದಲ್ಲಿ ನಿಮ್ಮ ಕಚೇರಿಯ ಮುಂದೆ ದಿನನಿತ್ಯ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಚ್ಚರಿಸಿದ್ದಾರೆ.

ಸರಿಯಾದ ಸಮಯಕ್ಕೆ ಬಾರದ ಬಸ್ಸುಗಳು. ಕಾಲೇಜು ವಿದ್ಯಾರ್ಥಿಗಳ ಪರದಾಟ. ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನೂರಾರು ವಿದ್ಯಾರ್ಥಿಗಳು

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಗ್ರಾಮಾಂತರ ಭಾಗದ ಕಾಲೇಜ್ ವಿದ್ಯಾರ್ಥಿಗಳು ಬಸ್ಸುಗಳಿಲ್ಲದೇ ಪರದಾಟ ನಡೆಸುತ್ತಿತುವುದು ಕೊಪ್ಪಳ ಜಿಲ್ಲೆಯಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಏಕಾಏಕಿ ರಾಜ್ಯಹೆದ್ದಾರಿ ಬಂದ್ ಮಾಡಿ ಬಸ್ಸಗಳನ್ನು ತಡೆದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ನಡೆದಿದೆ.
ಯಲಬುರ್ಗಾ ತಾಲೂಕಿನ ಕುದರಮೋತಿ ಗ್ರಾಮದಲ್ಲಿ ಬಸ್ಸುಗಳು ನಿಲ್ಲಿಸದೆ ಹೋಗುತ್ತಿದ್ದು, ಇದರಿಂದ ಕಾಲೇಜುಗಳಿಗೆ ಹೋಗಲು ಸಮಸ್ಯೆಯಾಗುತ್ತಿತ್ತು. ಇದರಿಂದ ರೊಚ್ಚಿಗೆದ್ದ ನೂರಾರು ಕಾಲೇಜ್ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ, ಹತ್ತಾರು ಬಸ್ಸುಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಇನ್ನು ಈ ಬಗ್ಗೆ ಜಿಲ್ಲೆಯ KSRTC ವಿಭಾಗದ ಡಿಪೋ ಮ್ಯಾನೇಜರ್ ಗಳಲ್ಲಿ ಎಸ್ಎಫ್ಐ ಸಂಘಟನೆಯು ಮನವಿ ಮಾಡಿಕೊಂಡಿದ್ದು, ಜಿಲ್ಲೆಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಗ್ರಾಮಗಳಿಂದ ನಗರಕ್ಕೆ ಬಸ್ಸ್ ಗಳನ್ನು ಬಿಡಬೇಕು ಇಲ್ಲದಿದ್ದಲ್ಲಿ ನಿಮ್ಮ ಕಚೇರಿಯ ಮುಂದೆ ದಿನನಿತ್ಯ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಚ್ಚರಿಸಿದ್ದಾರೆ..

ಕಾನೂನು ಬಾಹಿರ ಚಟುವಟಿಕೆ: ಗದಗ ಜಿಲ್ಲೆಯ ಮೂವರು ಸಮಾಜಘಾತುಕರ ಗಡಿಪಾರು

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ಈರಣ್ಣ ಶಂಕರಪ್ಪ ಸೀಮಿಕೇರೆ, ಶಿವನಗೌಡ ವೀರನಗೌಡ ಪಾಟೀಲ್ ಹಾಗೂ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮುಸ್ತಾಕ್ ಜಿನ್ನಾಸಾಬ್ ದೊಡ್ಡಮನಿ ಗಡಿಪಾರಾದ ಮಟಕಾ ಬುಕ್ಕಿಗಳಾಗಿದ್ದಾರೆ.

ಸಮಾಜಕ್ಕೆ ಧಕ್ಕೆ ಹಾಗೂ ಸ್ವಾಸ್ಥ್ಯ ಹಾಳು ಮಾಡುವಂತ ಒಸಿ/ ಮಟಕಾ ಜೂಜಾಟದಲ್ಲಿ ತೊಡಗಿದ್ದ ಹಾಗೂ ಜನರನ್ನು ಪ್ರೇರೇಪಿಸುವಂತ ಮೂವರು ವ್ಯಕ್ತಿಗಳನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ, ಗದಗ ಎಸ್ಪಿ ಯತೀಶ್ ಎನ್ ಆದೇಶ ಹೊರಡಿಸಿದ್ದಾರೆ.

ಇವರ ಗಡಿಪಾರು ಆದೇಶ ಮಾಡಿರುವ ಗದಗ ಎಸ್ಪಿ ಯತೀಶ್ ಎನ್, ಇವರು ಸಾರ್ವಜನಿಕ ಆಸ್ತಿ ಮತ್ತು ಜನರ ಜೀವಹಾನಿ ಮಾಡುವ ಕೃತ್ಯಗಳಲ್ಲಿ ತೊಡಗಿದ್ದಲ್ಲದೇ, ಕಾನೂನಿನ ಭಯವಿಲ್ಲದೇ ಕಾನೂನು ಬಾಹಿರ ಚಟುವಟಿಕೆ ಮುಂದುವರೆಸಿಕೊಂಡ ಬಂದ ಹಿನ್ನೆಲೆಯಲ್ಲಿ ಇವರನ್ನು ಗಡಿಪಾರು ಮಾಡಲಾಗಿದೆ ಎಂದಿದ್ದಾರೆ.

ಗಡಿಪಾರಾದ ವ್ಯಕ್ತಿಗಳಲ್ಲಿ ಈರಣ್ಣ ಸೀಮಿಕೆರಿ ಮೇಲೆ 5 ಪ್ರಕರಣಗಳಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದ್ದು, ಈತನನ್ನು ರಾಯಚೂರು ಜಿಲ್ಲೆಯ ಸಿಂಧನೂರಿಗೆ ಗಡಿಪಾರು ಮಾಡಲಾಗಿದೆ. ಶಿವನಗೌಡ ಪಾಟೀಲ್ ನಿಗೂ 5 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಈತನನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಮುಸ್ತಾಕ್ ದೊಡ್ಡಮನಿಗೆ ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಈತನನ್ನು ಬಳ್ಳಾರಿ ಜಿಲ್ಲೆ ಕೌಲ್ ಬಜಾರ್ ಗೆ ಗಡಿಪಾರು ಮಾಡಲಾಗಿದೆ.

ಈ ಬಗೆಯ ಕಾನೂನು ಬಾಹೀರಾ ಚಟುವಟಿಕೆಗಳಲ್ಲಿ ಯಾರಾದರೂ ತೊಡಗಿಕೊಂಡರೆ ಅವರಿಗೂ ಸಹ ಇದೇ ಬಗೆಯ ಶಿಕ್ಷೆ ಕಾದಿದೆ ಎಂದು ಎಸ್ಪಿ ಯತೀಶ್ ಎನ್ ಎಚ್ಚರಿಕೆ ನೀಡಿದ್ದಾರೆ.

ಕಾರ್ಮಿಕರ ಬಲಿ ಪಡೆದ ಘಟನೆಗೆ ಸರಕಾರವೇ ಹೊಣೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಶಿವಮೊಗ್ಗದ ಜಿಲೆಟಿನ್ ಸ್ಪೋಟದ ಆಘಾತ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಸ್ಫೋಟದ ದುರಂತ ಸಂಭವಿಸಿದ್ದು ತೀವ್ರ ಆಘಾತಕಾರಿ ದುರ್ಘಟನೆಯಾಗಿದೆ. ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಇದನ್ನು ತಪ್ಪಿಸಬಹುದಿತ್ತು. ಈ ಘಟನೆಗೆ ಸರಕಾರವೇ ಹೊಣೆಯಾಗಿದೆ. ಕೂಡಲೇ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆಗ್ರಹಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರೆ ಸಾಲದು, ಅವರ ಕುಟುಂಬಗಳ ನಿರ್ವಹಣೆಗೆ ಪರಿಹಾರ ಧನದ ಜೊತೆಗೆ ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ನೌಕರಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಶಿವಮೊಗ್ಗದ ಸ್ಫೋಟದ ನಂತರವೂ ಎಚ್ಚೆತ್ತುಕೊಳ್ಳದ ಸರ್ಕಾರ, ಅಕ್ರಮ ಕಲ್ಲು ಕ್ವಾರಿಗಳಿಗೆ, ಅಕ್ರಮ ಸ್ಫೋಟಕಗಳಿಗೆ ಕಡಿವಾಣ ಹಾಕುವ ಬದಲು ಬೆಂಬಲವಾಗಿದ್ದರ ಪರಿಣಾಮ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಜಿಲೆಟಿನ್ ಸ್ಫೋಟ ಸಂಭವಿಸಿದೆ. ಅದಕ್ಕೆ ನೇರ ಹೊಣೆ ಭೂ ಮತ್ತು ಗಣಿಗಾರಿಕೆ ಸಚಿವ ಮುರುಗೇಶ್ ನಿರಾಣಿ. ಕಲ್ಲು ಕ್ವಾರಿಯಲ್ಲಿ ನಡೆದ ಈ ಸ್ಫೋಟ ದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹೆಚ್ ವಿಶ್ವನಾಥ್ ಹಿಂದಿನ ಸರ್ಕಾರದ ಮಾನಸಿಕತೆಯಿಂದ ಹೊರ ಬಂದಿಲ್ಲವೆಂದು ಕಾಣುತ್ತದೆ :ವಿಜಯೇಂದ್ರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಸರ್ಕಾರ ಮತ್ತು ಆಡಳಿತದ ವ್ಯವ್ಯಸ್ಥೆ ಮೇಲೆ ವಿನಾಕಾರಣ ಆರೋಪ ಮಾಡುತ್ತಲೆ ದಿನದೂಡುತ್ತಿರುವ ಮಾಜಿ ಸಚಿವ ಹೆಚ್. ವಿಶ್ವನಾಥ್ ಈ ಹಿಂದಿನ (ಕಾಂಗ್ರೆಸ್) ಸರ್ಕಾರದ ಮಾನಸಿಕತೆಯಿಂದ ಹೊರ ಬಂದಿಲ್ಲವೆಂದು ಕಾಣುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕುಟುಕಿದರು.

ಹೆಚ್ ವಿಶ್ವನಾಥ್ ವಿರುದ್ಧ ಗುಡುಗಿದ ಬಿ.ವೈ.ವಿಜಯೇಂದ್ರ,
ಅಂಜನಾದ್ರಿ ಪರ್ವತದಿಂದ ಕಾರಟಗಿ ತೆರಳುವ ಮಾರ್ಗ ಮಧ್ಯೆ ಗಂಗಾವತಿ ಶಾಸಕ ಪರಣ್ಣ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದ ಬಹುತೇಕ ಎಲ್ಲ ಕೆಲಸಕ್ಕೆ ಹಣ ನೀಡಬೇಕಾದ ಸ್ಥಿತಿಯಿದೆ ಆದರೆ ವಿಶ್ವನಾಥ್ ನವರು ವಿನಾಕಾರಣ ಟೀಕೆ ಮಾಡ್ತಾ ಇದ್ದಾರೆ.
ಅವರಿಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅವರು ಸಚಿವರಿದ್ದಾಗ ಮಾಡಿದ ಕೆಲಸ ಹಾಗೂ ಆ ಮನಸ್ಥಿತಿಯಿಂದ ಇನ್ನು ವಿಶ್ವನಾಥ್ ಹೊರ ಬಂದಂತೆ ಕಾಣುತ್ತಿಲ್ಲ. ಸರ್ಕಾರದಲ್ಲಿ ಏನು ನಡೆಯತ್ತಿದೆ ಎಂಬುವುದರ ಬಗ್ಗೆ ಅವರಿಗೆ ಮಾಹಿತಿ ಕೊರತೆ ಇದ್ದಂತೆ ಕಾಣುತ್ತದೆ. ಮೈಸೂರು ಬಿಟ್ಟು ರಾಜ್ಯದ ನಾನಾ ಕಡೆಗಳಲ್ಲಿ ಪ್ರವಾಸ ಮಾಡಿದರೆ ಅವರಿಗೆ ರಾಜ್ಯದಲ್ಲಿ ಅಭಿವೃದ್ಧಿ ಹೇಗಾಗುತ್ತಿದೆ ಎಂಬ ಮಾಹಿತಿ ಸಿಗಲಿದೆ ಎಂದರು.

ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಆದ್ಯತೆ ಇಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಶ್ರಮದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಇರುವ ಇತಿಮಿತಿಯಲ್ಲಿ ಸಿಎಂ ಕೆಲಸ ಮಾಡುತ್ತಿದ್ದಾರೆ. ಅವರ ಆಡಳಿತದಲ್ಲಿ ಜಿಲ್ಲೆಗೆ ಆದ್ಯತೆ ನೀಡಲು ಪ್ರಯತ್ನಿಸುತ್ತಾರೆ ಎಂದರು

ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡೋರಿಗೆ ಉಪಚುನಾವಣೆಯಲ್ಲಿ ಸಿಗುತ್ತೆ ಉತ್ತರ: ವಿಜಯೇಂದ್ರ

ಅಪ್ಪ ರಾಜಾಹುಲಿ, ಮಗ ಬಾಹುಬಲಿ!

-ಕೊಪ್ಪಳ ಜಿಲ್ಲೆಯ ಅಂಜನ ಪರ್ವತ ದಕ್ಷಿಣ ಭಾರತದ ಅಯೋಧ್ಯೆ

-ದೊಡ್ಡ ಪಕ್ಷ ಎಂದು ಬೀಗುತ್ತಿದ್ದ ಕಾಂಗ್ರೆಸ್ ಸೋತು ಸುಣ್ಣವಾಗಿದೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮುಖಂಡರು ಬಿಜೆಪಿ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಾರೆ. ಮುಂಬರಲಿರುವ ಮಸ್ಕಿ, ಬಸವಕಲ್ಯಾಣ ಉಪಚುನಾವಣೆಯಲ್ಲಿ ಅವರಿಗೆ ಉತ್ತರ ಸಿಗುತ್ತೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನ ಪರ್ವತದಲ್ಲಿ ಶನಿವಾರ ಹನುಮನ ದರ್ಶನದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ಸುಖಾಸುಮ್ಮನೆ ಮಾತನಾಡೋರ ಸಂಖ್ಯೆ ಜಾಸ್ತಿಯಾಗಿದೆ. ಅಯೋಧ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದರೂ ವಿರೋಧಪಕ್ಷದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ದೇಶದ ಅತಿ ದೊಡ್ಡ ಪಕ್ಷ ಎಂದು ಬೀಗುತ್ತಿದ್ದ ಕಾಂಗ್ರೆಸ್ ಈಗ ಎಲ್ಲೆಡೆ ಸೋತು ಸುಣ್ಣವಾಗಿದೆ. ಅಸ್ತಿತ್ವ ಇಲ್ಲದ ಕಡೆಯೂ ಬಿಜೆಪಿ ಖಾತೆ ತೆರೆಯುತ್ತಿದೆ. ಜನರ ಒಲವು ಬಿಜೆಪಿ ಕಡೆಗಿದೆ ಎಂದರು.

ಭವ್ಯ ಭಾರತ ಕಟ್ಟುವ ಕನಸು ಪ್ರಧಾನಿ ನರೇಂದ್ರ ಮೋದಿಯವರದ್ದು. ಅವರ ಕನಸು ನನಸಾಗಿಸುವಲ್ಲಿ ಭಾರತೀಯರು ಕೈ ಜೋಡಿಸಬೇಕಿದೆ. ಅದೇ ರೀತಿ ರಾಜ್ಯದ ಕಲ್ಯಾಣಕ್ಕಾಗಿ ಲಕ್ಷಾಂತರ ಕಾರ್ಯಕರ್ತರ ತಪಸ್ಸಿನ ಫಲವಾಗಿ ಯಡಿಯೂರಪ್ಪ ಅವರು ಮತ್ತೊಮ್ಮೆ ರಾಜ್ಯದ ಸಿಎಂ ಆಗಿದ್ದಾರೆ. ನುಡಿದಂತೆ ನಡೆಯುವ ಶಕ್ತಿ ಇರುವ ಯಾರಾದರೂ ವ್ಯಕ್ತಿ ರಾಜ್ಯದಲ್ಲಿ ಇದ್ದಾರೆ ಎಂದರೆ ಅದು ಬಿ.ಎಸ್‌.ಯಡಿಯೂರಪ್ಪ ಮಾತ್ರ ಎಂದು ತಿಳಿಸಿದರು.

ಯಡಿಯೂರಪ್ಪ ಅವರ ವಿಜಯಯಾತ್ರೆಯು ಮಸ್ಕಿ, ಬಸವಕಲ್ಯಾಣ ಉಪಚುನಾವಣೆಯಲ್ಲೂ ಮುಂದುವರಿಯುತ್ತೆ. ಯಡಿಯೂರಪ್ಪ ಅವರಿಗೆ ಎಡರುತೊಡರು ಬಂದರೆ ಅವರು ಅಂಜನೇಯನನ್ನು ಪ್ರಾರ್ಥಿಸುತ್ತಾರೆ. ಅಂಜನಾದ್ರಿಗೂ ಶಿಕಾರಿಪುರಕ್ಕೂ ಅವಿನಾಭಾವ ಸಂಬಂಧ ಇದೆ. ರಾಜಕೀಯ ಏರುಪೇರುಗಳ ಮಧ್ಯೆಯೂ ಬಿಜೆಪಿ ಅಧಿಕಾರಕ್ಕೆ ಬಂದಿದೆ.

ಕೊರೋನಾದಿಂದ ಕತ್ತಲಲ್ಲಿ ಮುಳುಗಿದ ಜನರನ್ನು ಬೆಳಕಿನೆಡೆಗೆ ತಂದು ಅವರಿಗೆ ಧೈರ್ಯ ತುಂಬುವ ಕೆಲಸ ಸರಕಾರದಿಂದ ಆಗುತ್ತಿದೆ. ಜನರು ಸಂಕಷ್ಟಗಳಿಂದ ಮುಕ್ತವಾಗಲೆಂದು ಆಂಜನೇಯನಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಮುಖಂಡರಾದ ಸಾಗರ ಮುನವಳ್ಳಿ, ನವೀನ್ ಗುಳಗಣ್ಣವರ್, ಸಿ.ವಿ.ಚಂದ್ರಶೇಖರ್, ಅಮರೇಶ್ ಕರಡಿ, ಸಂತೋಷ ಕೆಲೋಜಿ ಮತ್ತಿತರರು ಇದ್ದರು.

ಶ್ರೀರಾಮಮಂದಿರದ ರೊಕ್ಕದ ಲೆಕ್ಕ ಬೇಕಾದವ್ರು ವಿ ಎಚ್ ಪಿ ಹೆಡ್ ಆಫೀಸ್ ಗೆ ಹೋಗಿ: ಮುತಾಲಿಕ್ ತಿರುಗೇಟು

ವಿಜಯಸಾಕ್ಷಿ ಸುದ್ದಿ, ಗದಗ

ಮಾಜಿ ಮುಖ್ಯಮಂತ್ರಿಗಳಿಬ್ಬರೂ ಶ್ರೀರಾಮನ ಕುರಿತು ವಿವಾದಾತ್ಮಕ ಬಾಲಿಶ್, ಕೀಳುಮಟ್ಟದ ಹೇಳಿಕೆ ನಿಲ್ಲಿಸಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತ್ತಾಲಿಕ್ ಸಿದ್ರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಿಮ್ಮ ಹೆಸರಿನಲ್ಲೂ ರಾಮ ಇದ್ದಾನೆ. ಎಂಬುದನ್ನು ಮರೆಯದಿರಿ. 30 ವರ್ಷದ ಲೆಕ್ಕ ಈಗ ಕೇಳ್ತಿರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರಿಗೆ, ನೀವು 2 ಬಾರಿ ಸಿಎಂ ಆಗಿದ್ದ ವೇಳೆಯ ಲೆಕ್ಕಾ ಕೊಡಿ. ಎಷ್ಟು ಕೊಟ್ಟು, ತೆಗೆದುಕೊಂಡು ರಾಜ್ಯಸಭಾ, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದಿರಿ ಅದರ ಲೆಕ್ಕಾ ಕೊಡಿ ನೋಡೋಣವೆಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಸಿದ್ದರಾಮಯ್ಯ ಅವರು ಎಲ್ಲಾ ಕಡೆ ದುಡ್ಡು ಹೊಡೆದು, ನುಂಗಿ ನೀರು ಕುಡಿದಿರುವುದರಿಂದ ಅವರಿಗೆ ಎಲ್ಲರೂ ಭ್ರಷ್ಟರೇ ಕಾಣಿಸ್ತಾರೆ. ಇದರಿಂದ ಹೊರಬನ್ನಿ ಎಂದು ವ್ಯಂಗ್ಯವಾಡಿದರು.

ಶ್ರೀರಾಮ ಮಂದಿರ ಬಗ್ಗೆ ಒಂದೊಂದು ರೂಪಾಯಿ ಲೆಕ್ಕವಿದೆ. ಲೆಕ್ಕಾ ಬೇಕಾದವರು ವಿಎಚ್‌ಪಿ ಹೆಡ್ ಆಫಿಸ್ ಗೆ ಹೋದ್ರೆ, ಬ್ಯಾಲೆನ್ಸ್ ಶೀಟ್ ಸಮೇತ ಲೆಕ್ಕಾ ಕೊಡ್ತಾರೆ. ಶ್ರೀರಾಮನ ವಿಷಯ, ಆರ್.ಎಸ್.ಎಸ್, ವಿಶ್ವ ಹಿಂದು ಪರಿಷತ್, ಶ್ರೀರಾಮ ಸೇನೆ ವಿಷಯದಲ್ಲಿ ಇಬ್ಬರು ಸಿಎಂಗಳು ಅನಾವಶ್ಯಕವಾಗಿ ಮಾತನಾಡಬೇಡಿ. ನಿಮ್ಮ ವಿವಾದಾತ್ಮಕ ಹೇಳಿಕೆ ನೂರು ಕೋಟಿ ರಾಮನ ಭಕ್ತರಿಗೆ ಅವಮಾನ ಮಾಡಿದಂತಾಗುತ್ತೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.

ಇನ್ನು ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದೆ. ಕೋರ್ಟ್ ತೀರ್ಪು ಎಲ್ರೂ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಆದ್ರೆ ಪದೇ ಪದೇ ಭಾಷಾಭಿಮಾನ, ರಾಜಕೀಯ ಕುರ್ಚಿ ಉಳಿಸಿಕೊಳ್ಳಲು ಹಾಗೂ ಬೇಳೆ ಬೇಯಿಸಿಕೊಳ್ಳಲು ಖ್ಯಾತೆ ತೆಗೆಯುತ್ತಿರುವುದು ಸರಿಯಲ್ಲ. ನಾಡು, ನುಡಿ, ನೆಲ, ಜಲ ವಿಷಯದಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಡಲು ಸಿದ್ಧ ಎಂದು ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದರು.

error: Content is protected !!