Home Blog Page 3133

BSY ಬೀಗರ ಮನೆ ಮೇಲೆ ಲೋಕಾ ದಾಳಿ: ದಾಖಲೆ ಪರಿಶೀಲನೆ

0

ಕಲಬುರಗಿ:- ಇಂದು ಬೆಳ್ಳಂ ಬೆಳಗ್ಗೆ ಮಾಜಿ ಸಿಎಂ ಬಿಎಸ್ವೈ ಬೀಗರ ಮನೆ ಮೇಲೆ ದಾಳಿಯಾಗಿದೆ. ಕಲಬುರಗಿಯ ಕರುಣೇಶ್ವರ ನಗರದಲ್ಲಿರುವ ಡಾ ಪ್ರಭುಲಿಂಗ ಮಾನ್ಕರ್ ನಿವಾಸದ ಮೇಲೆ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ನಿಯ ಸಹೋದರರಾಗಿರುವ ಡಾ.ಪ್ರಭುಲಿಂಗ ಮಾನ್ಕರ್ ಪ್ರಸ್ತುತ ಯಾದಗಿರಿ DHO ಆಗಿದ್ದಾರೆ. ಕಲಬುರಗಿ ಯಾದಗಿರಿ ಅಲ್ಲದೇ ಗಬ್ಬೂರಿನಲ್ಲಿರುವ ಫಾರ್ಮ್ ಹೌಸ್ ಮೇಲೂ ದಾಳಿಯಾಗಿದ್ದು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

ದಾಖಲೆಗಳನ್ನ ಕಲೆ ಹಾಕುತ್ತಿರುವ ತಂಡ ಆಸ್ತಿಪಾಸ್ತಿ ಸೇರಿ ಎಲ್ಲದರ ಲೆಕ್ಕಾಚಾರ ನಡೆಸಿದ್ದು ಸಂಜೆ ವೇಳೆಗೆ ಸಂಪೂರ್ಣ ಮಾಹಿತಿ ಸಿಗಲಿದೆ ಅಂತ ಹೇಳಲಾಗ್ತಿದೆ.

ವಿಜಯಪುರ ಗೋದಾಮು ದುರಂತ: 3 ಮೃತದೇಹಗಳು ಪತ್ತೆ

0

ವಿಜಯಪುರ:  ರಾಜಗುರು ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಮೆಕ್ಕೆಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಇಂಡಸ್ಟ್ರೀಸ್‌ನ ಗೋದಾಮಿನಲ್ಲಿ ಈ ದುರಂತ ಸಂಭವಿಸಿದೆ.

ರಾಜೇಶ್ ಮುಖಿಯಾ(25), ರಾಮ್ರೀಜ್ ಮುಖಿಯಾ(29), ಶಂಭು ಮುಖಿಯಾ(26) ಮೃತ ಕಾರ್ಮಿಕರು. ಅವಶೇಷಗಳ ಅಡಿಯಲ್ಲಿ ಇನ್ನೂ 6-7 ಮಂದಿ ಸಿಲುಕಿದ್ದು, ಮೃತಪಟ್ಟಿರುವ ಶಂಕೆಯೂ ವ್ಯಕ್ತವಾಗಿದೆ.

ಎನ್‌ಡಿ‌ಆರ್‌ಎಫ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಮೃತ ಕಾರ್ಮಿಕರೆಲ್ಲರೂ ಬಿಹಾರ ಮೂಲದವರು ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಆ ಕಾರ್ಮಿಕರು ಇದೇ ಇಂಡಸ್ಟ್ರೀಜ್‍ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಬೆಳ್ಳಂಬೆಳಿಗ್ಗೆ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ; ಚಾಲಕ ಗಂಭೀರ

0

ಗದಗ: ಬೆಟಗೇರಿಯ ಹುಯಿಲಗೋಳ ಕ್ರಾಸ್ ಬಳಿ ಬೆಳ್ಳಂಬೆಳಿಗ್ಗೆ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಚಾಲಕ ಗಾಯಗೊಂಡಿದ್ದು, ವಿದ್ಯುತ್ ಕಡಿತಗೊಂಡಿದೆ.

ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಕಿತ್ತು ಬಂದಿದ್ದು,‌ ಆದರೆ ಯಾವುದೇ ಅನಾಹುತ ಆಗಿಲ್ಲ.

ಚಾಲಕ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬೆಟಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಟಗೇರಿ ಪೊಲೀಸ್ ಠಾಣೆಯ ಕೂಗಳತೆಯಲ್ಲಿ ಈ ಘಟನೆ ಜರುಗಿದೆ. ಬೆಟಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪ್ರತಿಭಟನೆ ಸ್ವರೂಪ ಪಡೆದ ಪಿಡಿಓ ಆತ್ಮಹತ್ಯೆ ಯತ್ನ ಪ್ರಕರಣ

0

ಧಾರವಾಡ: ಆರ್‌ಟಿಐ ಕಾರ್ಯಕರ್ತರೊಬ್ಬರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಗಿಣಿವಾಲದ ಅವರ ಪ್ರಕರಣ ಇದೀಗ ಪ್ರತಿಭಟನೆ ಸ್ವರೂಪ ಪಡೆದುಕೊಂಡಿದೆ.

ಪಿಡಿಓ ಆತ್ಮಹತ್ಯೆ ಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಆರ್‌ಟಿಐ ಕಾರ್ಯಕರ್ತನ ಕಿರುಕುಳದಿಂದ ಪಿಡಿಓ ನಾಗರಾಜ್ ಅವರು ತೀವ್ರ ಮನನೊಂದು ಇಲಿ ಔಷಧ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದೀಗ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ನಾಗರಾಜ್ ಅವರಿಗೆ ನ್ಯಾಯ ಕೊಡಿಸಬೇಕು. ಇನ್ನೂ ಅನೇಕ ನೌಕರರು ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ.

ಈ ರೀತಿಯ ಒತ್ತಡಕ್ಕೆ ಸಿಲುಕಿ ಸಾವನ್ನಪ್ಪುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಭದ್ರತೆಯೇ ಇಲ್ಲದಂತಾಗಿದೆ. ಸರ್ಕಾರಿ ನೌಕರರಿಗೆ ಮಾನಸಿಕ ಕಿರುಕುಳ ಆಗದಂತೆ ನೋಡಿಕೊಳ್ಳಬೇಕು.

ವಿನಾಕಾರಣ ಕಿರುಕುಳ ನೀಡುವವರಿಗೆ ಕಠಿಣ ಕ್ರಮ ಜಾರಿ ಮಾಡಬೇಕು ಎಂದು ನೌಕರರು ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಚೆನ್ನೈನಲ್ಲಿ ಚಂಡಮಾರುತ: ವಿಮಾನಗಳು ಬೆಂಗಳೂರಿಗೆ ಡೈವರ್ಟ್

0

ಬೆಂಗಳೂರು: ತಮಿಳುನಾಡಿನಲ್ಲಿ ಮೈಚಾಂಗ್ ಚಂಡಮಾರುತದ ಅಬ್ಬರ ಶುರುವಾಗಿದ್ದು, ಚೆನೈನಲ್ಲಿ ಭಾರಿ ಮಳೆಯಿಂದ ವಿಮಾನಗಳು ಡೈವರ್ಟ್ ಆಗಿದೆ. ಚೆನೈ ವಿಮಾನ ನಿಲ್ಥಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಡೈವರ್ಟ್ ಆಗಿದ್ದು, ಕಳೆದ ರಾತ್ರಿಯಿಂದ ಈ ವರೆಗೂ 27 ವಿಮಾನಗಳು ಡೈವರ್ಟ್ ಆಗಿದೆ. ಚೆನೈನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಬೆಂಗಳೂರಿಗೆ ಡೈವರ್ಟ್ ಆಗಿದ್ದು,

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳು ಡೈವರ್ಟ್ಆಗಿದೆ.ಮುಂಜಾನೆಯಿಂದ ಪ್ರಯಾಣಿಕರು ಏರ್ಪೋಟ್ ‌ನಲ್ಲೇ ಉಳಿದಿದ್ದು, ಎಮಿರೇಟ್ಸ್, ಲೂಪ್ತಾನ್ಸ, ಏರ್ ಇಂಡಿಯಾ ಏಕ್ಸಪ್ರೇಸ್, ಸೇರಿದಂತೆ 27 ವಿಮಾನಗಳಿವೆ. ಮಳೆ ಕಡಿಮೆಯಾದ್ರೆ ಮತ್ತೆ ವಿಮಾನಗಳು ಚೆನೈಗೆ ಹೋಗ್ತಾವೆ ಎಂದು ಜನರು ಕಾದು ಕುಳಿತಿದ್ದಾರೆ. ಬೆಂಗಳೂರಿನಿಂದ ಚೆನೈಗೆ ತೆರಳುವ ವಿಮಾನಗಳು ಸಹ ರದ್ದಾಗಿದೆ.

ನೂರಾರು ಪತ್ರಗಳನ್ನು ಚೆಲ್ಲಿ KPSC ಬೋರ್ಡ್ ವಿರುದ್ಧ ಸಿಡಿದ ಅಭ್ಯರ್ಥಿಗಳು

0

ಬೆಂಗಳೂರು: ಕೆಪಿಎಸ್​​ಸಿ ಬೋರ್ಡ್ ಮುಂದೆ, ವಿದ್ಯಾರ್ಥಿಗಳು ನೂರಾರು ಪತ್ರಗಳನ್ನು ಚೆಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಗ್ರೂಪ್ ಎ, ಬಿ, ಸಿ ನಲ್ಲಿರುವ ವಿವಿಧ ಹುದ್ದೆಗಳಿಗಾಗಿ ಎಕ್ಸಾಂ ನಡೆದು ಎರಡು ಮೂರು ವರ್ಷಗಳು ಆಗಿದೆ. ಕೆಪಿಎಸ್​ಸಿ ನೋಟಿಫಿಕೇಶನ್, ಫೈನಲ್ ಲಿಸ್ಟ್ ಬಿಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಆರು ತಿಂಗಳಿಂದ ಪ್ರತಿದಿನ ಮನವಿ ಕೊಟ್ಟಿದೀವಿ ಆದರೆ ಸ್ಪಂದಿಸುತ್ತಿಲ್ಲ.

ಕೆಪಿಎಸ್​ಸಿ ಒಂದು ಎಕ್ಸಾಂ ಪಾಸ್ ಆಗ್ಬೇಕು ಅಂದ್ರೆ ಕಷ್ಟ ಇದೆ. ಸಾಕಷ್ಟು ಜನ ಬಡ ವಿದ್ಯಾರ್ಥಿಗಳು ಇದರಲ್ಲಿ ಎಕ್ಸಾಂ ಬರೆಯೋಕೆ ರೆಡಿಯಾಗಿದ್ದಾರೆ. ಟೈಂ ಟು ಟೈಂ ಎಕ್ಸಾಂ ನಡೆಸ್ಬೇಕು. ಆದ್ರೆ ಇವ್ರು ಹೋಲ್ಡ್ ಮಾಡ್ತಿರೋದಕ್ಕೆ ಕಾರಣ ಏನು ಗೊತ್ತಿಲ್ಲ. ಇವರ ಉದ್ದೇಶ ಏನು ಗೊತ್ತಿಲ್ಲ ಎಂದು ಪ್ರತಿಭಟನನಿರತ ಆಭ್ಯರ್ಥಿಗಳು ಕೆಪಿಎಸ್ ಸಿ ಬೋರ್ಡ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಂಡ ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯ..!

0

ಬಳ್ಳಾರಿ: ನಿನ್ನೆ ರಾತ್ರಿ ಕ್ಷುಲಕ ಕಾರಣಕ್ಕೆ ಪ್ರಾರಂಭವಾದ ಗಂಡ ಹೆಂಡತಿಯ ಜಗಳ ಇಂದು ಬೆಳ್ಳಂಬೆಳ್ಳಗೆ ಕೊಲೆಯಲ್ಲಿ ಅಂತ್ಯವಾಗಿದೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಠಾಣಾ ವ್ಯಾಪ್ತಿಯ ಬಲಕುಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಇಂದು ಬೆಳ್ಳಂಬೆಳ್ಳಗೆ ಸುಮಾರು 3:30 ಸಮಯದಲ್ಲಿ ಗಂಡ ರಸೂಲ್(35), ನಿದ್ರಾವಸ್ಥೆಯಲ್ಲಿದ ಹೆಂಡತಿ ಮೈಮೂನ್ (25) ಕುತ್ತಿಗೆಗೆ ಕೊಡಲಿಯಿಂದ ಹಾಕಿದ ಎಟಿಗೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ.

ಗಂಡ ಹೆಂಡತಿಯ ಜಗಳದ ನಡುವೆ ಕೂಸು ಬಡವಾಯಿತು ಎನ್ನುವ ಗಾದೆ ಮಾತಿನಂತೆ, ಈ ದಂಪತಿಯ ಎರಡು ಗಂಡು ಹುಡುಗರು ಅನಾಥವಾಗಿವೆ. ಎರಡು ಕಿಡ್ನಿ ಕಳೆದುಕೊಂಡಿದ್ದ ಗಂಡ (ಆರೋಪಿ) ರಸೂಲ್ ಗೆ ಮೈಮೂನ್ ಳು ಪ್ರತಿದಿನ ಕೂಲಿ ಕೆಲಸಕ್ಕೆ ಹೋಗಿ ಗಂಡನಿಗೆ ಚಿಕಿತ್ಸೆ ಕೊಡಿಸುತ್ತಿದ್ದಳು.

ಅಂತವಳನ್ನು ಸಾಯಿಸುವ ಕೆಲಸ ಮಾಡಿದ ಗಂಡ ರಸೂಲ್ ಗೆ ಗ್ರಾಮಸ್ಥರು ಹಿಡಿ ಶಾಪ ಹಾಕಿದರು.

ನಾಪತ್ತೆಯಾಗಿದ್ದ ಸಿಪಿ ಯೋಗೇಶ್ವರ್ ಬಾವ ಮಹದೇವಯ್ಯ ಅವರ ಶವ ಪತ್ತೆ..!

0

ಚಾಮರಾಜನಗರ: ಬಿಜೆಪಿ ಎಂಎಲ್​ಸಿ ಸಿಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರು ಶವವಾಗಿ ಪತ್ತೆಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಬಳಿ ನಿರ್ಜನ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹದೇವಯ್ಯನವರ ಮೃತದೇಹ ಪತ್ತೆಯಾಗಿದೆ.

ಬೆಡ್​​ಶೀಟ್ ಹೊದಿಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹದೇವಯ್ಯ ಅವರನ್ನು ಕೊಲೆ ಮಾಡಲಾಗಿದೆ. ಕೊಲೆಯಾದ ಸ್ಥಳದಿಂದ 6 ಕಿಲೋ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಪೊಲೀಸರು ಮೃತದೇಹವನ್ನು ಪತ್ತೆಹಚ್ಚಿದ್ದಾರೆ.

8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇನ್ನಿಲ್ಲ.!

0

ಹಾಸನ: 8 ಬಾರಿ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಯಸಳೂರು ಬಳಿ ನಡೆದಿದೆ.

ನಾಲ್ಕು ಸಾಕಾನೆಗಳೊಂದಿಗೆ ಇಂದು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ.

ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಸಾಕಾನೆ ಅರ್ಜುನ ಒಂಟಿಸಲಗದ ಜೊತೆ ಕಾಳಗಕ್ಕಿಳಿದಿದೆ. ಮದಗಜಗಳ ಕಾಳಗದಲ್ಲಿ ಅರ್ಜುನ ಸಾವನ್ನಪ್ಪಿದೆ.

ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ಮಾವುತರು ಅರ್ಜುನನ ಮೇಲಿನಿಂದ ಇಳಿದು ಓಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಕೀಲರ ಮೇಲೆ ಪೊಲೀಸ್ರ ಹಲ್ಲೆ: ಲಾಠಿ ಸುಟ್ಟು ಧರಣಿ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

0

ಹಾಸನ: ಚಿಕ್ಕಮಗಳೂರು ವಕೀಲರ ಸಂಘದ ವಕೀಲರ ಮೇಲೆ ಪೋಲಿಸರು ನಡೆಸಿದ ಹಲ್ಲೆ ಮತ್ತು ಅದೇ ಪೋಲಿಸರು ಪೋಲಿಸ್ ಲಾಠಿಯನ್ನು ಸುಟ್ಟು ಧರಣಿ ನಡೆಸುತ್ತಿರಿರುವ ಬಗ್ಗೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ವಕೀಲರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರದ ಹೊಸ ಬಸ್ ನಿಲ್ದಾಣ ಎದುರು ಇರುವ ಜಿಲ್ಲಾ ವಕೀಲರ ಸಂಘದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ನೂತನ ಮೇಲ್ ಸೇತುವೆ ಮೇಲೆ ಬಂದು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಇದೆ ವೇಳೆ ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಪೂರ್ಣಚಂದ್ರ ತೇಜಸ್ವಿ ಮಾಧ್ಯಮದೊಂದಿಗೆ ಮಾತನಾಡಿ, ಚಿಕ್ಕಮಗಳೂರು ವಕೀಲರ ಸಂಘದ ಸದಸ್ಯರಾದ ವಕೀಲ ಪ್ರೀತಮ್ ರವರು ಎಲ್ಮೇಟ್ ಧರಿಸಿಲ್ಲ ಎಂಬ ಕಾರಣಕ್ಕೆ ಆತನ ಬೈಕ್ ಕೀಯನ್ನು ಅಕ್ರಮವಾಗಿ ತೆಗೆದುಕೊಂಡಾಗ ಏಕೆ ಹೀಗೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ವಕೀಲರನ್ನು ಠಾಣೆಯ ಒಳಗೆ ಕರೆದುಕೊಂಡು ಹೋಗಿ ಪೋಲಿಸ್ ಸಿಬ್ಬಂದಿಗಳು ೬ ಜನರು ಅಮಾನುಷವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದುಷ್ಕೃತ್ಯದ ವಿರುದ್ಧ ಚಿಕ್ಕಮಗಳೂರು ವಕೀಲರ ಸಂಘವು ಪ್ರಶ್ನಿಸಿ ಹೋರಾಟ ಮಾಡಿದ್ದರ ಅನ್ವಯ ಈ ಪ್ರಕರಣ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡವಳಿ ಹಂತದಲ್ಲಿದ್ದರೂ ಸಹ ಚಿಕ್ಕಮಗಳೂರು ಪೋಲಿಸರು ರಸ್ತೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಬ್ದಾರಿಯಲ್ಲಿರುವ ಪೋಲಿಸರು ಧರಣಿ ಮಾಡಿರುವುದು ದುರದುಷ್ಟಕರ ಮತ್ತು ಕಾನೂನಿಗೆ ವಿರುದ್ಧವಾಗಿರುತ್ತದೆ ಎಂದರು.

ವೃತ್ತಿನಿರತ ಮತ್ತು ಗೌರವ ಕಾಪಾಡುವ ಪೋಲಿಸ್ ಲಾಠಿಯನ್ನು ನಡು ರಸ್ತೆಯಲ್ಲಿ ಬಿಸಾಡಿ ಬೆಂಕಿ ಹಚ್ಚಿ ತೊಡೆ ತಟ್ಟಿ ವಕೀಲರನ್ನು ಅವಹೇಳನಕಾರಿಯಾಗಿ ನಿಂದಿಸಿ ವಕೀಲರುಗಳ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮೀಡಿಯಾದ ಮುಂದೆ ನೇರವಾಗಿ ಹೇಳಿಕೆ ನೀಡುತ್ತಿರುವುದು ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಲಿ ಪೋಲಿಸರು ಮುಂದಾಗಿರುತ್ತಾರೆ ಎಂದು ಆರೋಪಿಸಿದರು.

ವಕೀಲರಲ್ಲದೆ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸಿರುವುದು ಕಾನೂನಿನ ನೇರ ಉಲ್ಲಂಘನೆಯಾಗಿರುವುದರಿಂದ ಗೃಹ ಮಂತ್ರಿಗಳು ಪುಂಡ ಪೋಲಿಸ್ ಅಧಿಕಾರಿ ಮತ್ತು ಪೇದೆಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ನ್ಯಾಯ ವ್ಯವಸ್ಥೆಯನ್ನು ಬುಡ ಮೇಲೆ ಮಾಡಲು ಹೋರಾಟಿರುವ ಪೋಲಿಸ್ ದುಂಡವರ್ತನೆಗೆ ಕ್ರಮ ಜರುಗಿಸಬೇಕೆಂದು ಹಾಸನ ಜಿಲ್ಲಾ ವಕೀಲರ ಸಂಘದಿಂದ ಮನವಿ ಮಾಡುವುದಾಗಿ ಹೇಳಿದರು.

error: Content is protected !!