Home Blog Page 3137

ಗದಗದಲ್ಲಿ ಮಿತಿ ಮೀರಿದ ಬಿಡಾಡಿ ದನಗಳ ಹಾವಳಿ.! ವ್ಯಕ್ತಿ ಮೇಲೆ ಏಕಾಏಕಿ ಅಟ್ಯಾಕ್ – CCTVಯಲ್ಲಿ ಸೆರೆ

0

ಗದಗ: ಬೀಡಾಡಿ ದನಗಳು ನಗರದ ರಸ್ತೆಯನ್ನೇ ತಮ್ಮ ವಾಸಸ್ಥಳವನ್ನಾಗಿ ಮಾಡಿಕೊಂಡಿದ್ದರಿಂದ ರಸ್ತೆಗಳಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೀದಿ ದನಗಳ ಹಾವಳಿ ಮಿತಿ ಮೀರಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿ ಮೇಲೆ ಏಕಾಏಕಿ ಅಟ್ಯಾಕ್ ಮಾಡಲು ಮುಂದಾಗಿದೆ.

ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ.  ಗದಗದ ಬೆಟಗೇರಿಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಗೆ ಗೂಳಿ ಗುದ್ದೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಳೆದ 15 ದಿನಗಳಲ್ಲಿ 8 ಜನರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದೆ.

ಇದರಿಂದ ಜನರಿಗೆ ರಸ್ತೆಯಲ್ಲಿ ಓಡಾಡೋಕೂ ಹೆದರೋ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದಿ ದನಗಳನ್ನ ಶಿಫ್ಟ್ ಮಾಡದ ನಗರಸಭೆ ವಿರುಧ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಚೇಂಬರ್’ನಲ್ಲೇ ವಾಮಾಚಾರ..!

0

ಧಾರವಾಡ: ಪ್ರಜ್ಞಾವಂತರ ನಗರ ಎನಿಸಿಕೊಂಡಿರುವ ಅದರಲ್ಲೂ ಪ್ರತಿಷ್ಠಿತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಚೇಂಬರ್‌ನಲ್ಲೇ ವಾಮಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಕವಿವಿಯ ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಮಾ ಗುಂಡೂರಾವ್ ಎಂಬುವವರ ಚೇಂಬರ್‌ನಲ್ಲೇ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ.

ಈ ಘಟನೆಯಿಂದ ಆ ವಿಭಾಗದ ಪ್ರಾಧ್ಯಾಪಕರು ಬೆಚ್ಚಿಬಿದ್ದಿದ್ದಾರೆ. ಡಾ.ರಮಾ ಅವರ ಚೇಂಬರ್‌ನಲ್ಲಿ ಕಪ್ಪು ಬಣ್ಣದ ಮಾಟದ ಗೊಂಬೆ, ಮೂರು ಲಿಂಬೆಹಣ್ಣು ಹಾಗೂ ಅರಿಶಿನ, ಕುಂಕುಮ ಇಡಲಾಗಿದೆ. ಕಿಟಕಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಡಾ.ರಮಾ ಅವರು ರಜೆ ಮೇಲೆ ಹೋಗಿದ್ದರು. ಶುಕ್ರವಾರ ಬೆಳಿಗ್ಗೆ ತಮ್ಮ ಚೇಂಬರ್ ತೆಗೆದು ನೋಡಿದಾಗ ಅಲ್ಲಿ ವಾಮಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನು ಕಂಡು ಗಾಬರಿಯಿಂದ ಹೊರ ಬಂದ ರಮಾ ಅವರು ಇದರ ವಿರುದ್ಧ ಕುಲಪತಿಗಳಿಗೆ ದೂರು ನೀಡಿದ್ದಾರೆ. ಅದೇ ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಅನುಮಾನ ಹುಟ್ಟಿಕೊಂಡಿದ್ದು, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಆ ಚೇಂಬರ್ ಬಿಟ್ಟುಕೊಡುವ ವಿಚಾರವಾಗಿ ತಿಕ್ಕಾಟ ನಡೆದಿತ್ತು. ಆ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

‘800’-ಖ್ಯಾತ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್‌ ಜೀವನಗಾಥೆ ಜಿಯೊಸಿನಿಮಾದಲ್ಲಿ

0

ವೈವಿಧ್ಯಮಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಹೊಂದಿರುವ ಕಂಟೆಂಟ್‌ ಅನ್ನು ಜನರಿಗೆ ನೀಡುವಲ್ಲಿ JioCinema ಮುಂಚೂಣಿಯಲ್ಲಿದೆ. ಆ ಪ್ರಯತ್ನದ ಭಾಗವಾಗಿ ಇದೀಗ, ಮುತ್ತಯ್ಯ ಮುರಳೀಧರನ್‌ ಅವರ ಜೀವನವನ್ನಾಧರಿಸಿದ, ಎಂ.ಎಸ್‌. ಶ್ರೀಪತಿ ನಿರ್ದೇಶಿಸಿರುವ ‘800’ ಸಿನಿಮಾ JioCinemaದಲ್ಲಿ ಬಿಡುಗಡೆಗೊಳ್ಳುತ್ತಿದೆ.

ಇದೇ ಡಿಸೆಂಬರ್ 2ರಂದು JioCinema ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಸಿನಿಮಾ, ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ಬದುಕು ಮತ್ತು ಸಾಧನೆಗಳನ್ನು ಆಧರಿಸಿದ್ದು. ಟೆಸ್ಟ್‌ ಕ್ರಿಕೆಟ್‌ನಲ್ಲಿ 800 ವಿಕೆಟ್‌ಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿದ್ದ ಬೌಲರ್ ಬದುಕಿನ ತೆರೆ-ಮರೆಯ ಕಥೆಯನ್ನು ಹೇಳುವ ಈ ಸಿನಿಮಾ, ಕ್ರಿಕೆಟ್ ಪ್ರಿಯರಿಗಂತೂ ಮನರಂಜನೆಯ ಮೃಷ್ಟಾನ್ನವನ್ನೇ ಉಣಿಸುತ್ತದೆ.

ವಿವೇಕ್‌ ರಂಗಾಚಾರಿ ನಿರ್ಮಾಣದ ಈ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯವಿರುವುದು ವಿಶೇಷ. ಸ್ಪಿನ್ನರ್ ಬದುಕಿನ ಸ್ಟನ್ನಿಂಗ್ ಸ್ಟೋರಿ!: ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಕ್ರಿಕೆಟ್‌ ಬದುಕಿನ ಸಾಧನೆಗಳನ್ನು ಹೇಳುವ ‘800’ ಸಿನಿಮಾ, ಅವರ ಖಾಸಗಿ ಬದುಕಿನ ಸಂಕಷ್ಟಗಳನ್ನೂ ನೋಡುಗರ ಎದುರಿಗೆ ತೆರೆದಿಡುತ್ತದೆ. ಹಲವು ಸಂಕಷ್ಟಗಳು, ವಿವಾದಗಳನ್ನು ಹಾದು ಕ್ರಿಕೆಟ್‌ ಜಗತ್ತಿನ ಲೆಜೆಂಡ್ ಆದ ಸ್ಪೂರ್ತಿಕಥೆಯನ್ನು ಹೇಳುತ್ತದೆ.

ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ, ಎಸ್ಟೆಟ್‌ ಕೆಲಸಗಾರರಾಗಿ ದಕ್ಷಿಣ ಭಾರತದಿಂದ ಶ್ರೀಲಂಕಾಗೆ ವಲಸೆ ಬರುವ ಮುತ್ತಯ್ಯ ಮುರಳೀಧರನ್ ಅವರ ತಾತನ ಕುಟುಂಬ ನಂತರ ಅಲ್ಲಿಯೇ ನೆಲೆಗೊಳ್ಳುತ್ತದೆ. ಬಾಲ್ಯದಿಂದಲೇ ಕ್ರಿಕೆಟ್ ವ್ಯಾಮೋಹ ಬೆಳೆಸಿಕೊಂಡಿದ್ದ ಮುತ್ತಯ್ಯ, ಬದುಕಿನುದ್ದಕ್ಕೂ ತಮ್ಮ ನೆಚ್ಚಿನ ಕ್ರೀಡೆಗೆ ಮತ್ತು ತಮ್ಮ ತಾಯ್ನೆಲಕ್ಕೆ ತೋರಿದ ಬದ್ಧತೆ ಅನನ್ಯವಾದದ್ದು. ವೈಯಕ್ತಿಕ ಬದುಕಿನ ಸಂಕಷ್ಟ-ಸವಾಲುಗಳ ನಡುವೆಯೂ ಕ್ರಿಕೆಟ್‌ ಜಗತ್ತಿನಲ್ಲಿ ಅವರು ನಿರ್ಮಿಸಿದ ದಾಖಲೆಗಳು, ಕ್ರೀಡಾಪ್ರೇಮಿಗಳಿಗಷ್ಟೇ ಅಲ್ಲ,ಸಾಧನೆಯ ಹಾದಿ ಹಿಡಿಯುವ ಹಂಬಲ ಇರುವ ಎಲ್ಲರಿಗೂ ಸ್ಫೂರ್ತಿಯನ್ನು ನೀಡುವಂಥದ್ದು.

‘800’ ಸಿನಿಮಾದಲ್ಲಿ, ತಮಿಳಿನ ಯುವನಟ ಮಧುರ್ ಮಿತ್ತಲ್, ಮುತ್ತಯ್ಯ ಮುರಳೀಧರನ್ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಮಹಿಮಾ ನಂಬಿಯತಾರ್, ನಾಸರ್, ಆರುಲ್‌ದಾಸ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಮುತ್ತಯ್ಯ ಮುರಳೀಧರನ್ ಪಾತ್ರಕ್ಕೆ ಜೀವತುಂಬುವ ಅವಕಾಶ ಸಿಕ್ಕಿರುವುದು ಮಧುರ್ ಮಿತ್ತಲ್ ಅವರಿಗೆ ಸಾಕಷ್ಟು ಖುಷಿಕೊಟ್ಟಿದೆ. ತಮ್ಮ ಸಿನಿಮಾ JioCinemaದಲ್ಲಿ ಪ್ರೀಮಿಯರ್ ಆಗುತ್ತಿರುವ ಕುರಿತೂ ಅವರು ಅಷ್ಟೇ ಎಕ್ಸೈಟ್ ಆಗಿದ್ದಾರೆ.

‘ನಾನು ಚಿಕ್ಕಂದಿನಿಂದಲೂ ಕ್ರಿಕೆಟ್‌ ಅಭಿಮಾನಿಯಾಗಿದ್ದವನು. ಮುರಳೀಧರನ್ ಅವರ ಅಮೋಘ ಆಟವನ್ನು ನೋಡುತ್ತಲೇ ಬೆಳೆದವನು. ಈಗ ಅವರದ್ದೇ ಪಾತ್ರಕ್ಕೆ ತೆರೆಯ ಮೇಲೆ ಜೀವ ತುಂಬುವ ಅವಕಾಶ ಸಿಕ್ಕಿರುವುದು ನಿಜಕ್ಕೂ ನನಗೆ ಸಂದ ಬಹುದೊಡ್ಡ ಸಮ್ಮಾನ. ಈ ಪಾತ್ರಕ್ಕೆ ಗಟ್ಟಿತನವಿದೆ. ಇದೊಂದು ಸತತ ಪರಿಶ್ರಮ ಮತ್ತು ಬದ್ಧತೆಯ ಬದುಕನ್ನು ಬದುಕಿದ ವ್ಯಕ್ತಿಯ ಪಾತ್ರ. ಒಬ್ಬ ಕ್ರಿಕೆಟರ್ ಆಗಿ ಮುರಳೀಧರನ್ ಕೋಟ್ಯಂತರ ಜನರನ್ನು ಪ್ರಭಾವಿಸಿದ್ದಾರೆ.

ಇಂಥ ಸಾಧಕನ ಬದುಕನ್ನು ಜನರಿಗೆ ಪರಿಚಯಿಸುವುದೂ ಅಷ್ಟೇ ಮುಖ್ಯ. ಈ ಕೆಲಸವನ್ನು ‘800’ ತುಂಬ ಪರಿಣಾಮಕಾರಿಯಾಗಿ ಮಾಡಿದೆ. ಈಗ ಈ ಸಿನಿಮಾ JioCinemaದಲ್ಲಿ ಬಿಡುಗಡೆಯಾಗುತ್ತಿರುವುದು ನಿಜಕ್ಕೂ ನನಗೆ ತುಂಬ ಖುಷಿಯ ಸಂಗತಿ’ ಎನ್ನುತ್ತಾರೆ ನಟ ಮಧುರ್ ಮಿತ್ತಲ್. JioCinema ಒಟಿಟಿ ವೇದಿಕೆಯ ಮೂಲಕ ತಮ್ಮ ಜೀವನವನ್ನಾಧರಿಸಿದ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿರುವುದು ಮುತ್ತಯ್ಯ ಮುರಳೀಧರನ್ ಅವರನ್ನೂ ರೋಮಾಂಚಿತಗೊಳಿಸಿದೆ.

‘ನನ್ನ ಬದುಕಿನ ಕಥೆ, ಸ್ಫೂರ್ತಿದಾಯಕ ಸಿನಿಮಾ ಆಗುತ್ತಿರುವುದು ನಿಜಕ್ಕೂ ನನ್ನಲ್ಲಿ ವಿನೀತಭಾವ ಹುಟ್ಟಿಸಿದೆ. ಇದಕ್ಕೆ ಕಾರಣರಾದವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಸಿನಿಮಾಗೆ ತುಂಬ ಒಳ್ಳೆಯ ಪ್ರತಿಸ್ಪಂದನ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ದಾರಿಯಲ್ಲಿರುವ ಅಸಂಖ್ಯ ಯವ ಪ್ರತಿಭಾವಂತರಿಗೆ ಈ ಸಿನಿಮಾ ಸ್ಫೂರ್ತಿ ನೀಡಲಿ ಎಂದು ನಾನು ಹಾರೈಸುತ್ತೇನೆ.

ನನ್ನ ಪಾಲಿಗೆ ಕ್ರಿಕೆಟ್‌ ಎನ್ನುವುದು ಬದುಕಿನ ಕ್ರಮವೇ ಆಗಿತ್ತು. ದೇಶಕ್ಕಾಗಿ ಆಡುವ ಅವಕಾಶ ಸಿಕ್ಕಿದ್ದು ನನಗೆ ಸಂದ ದೊಡ್ಡ ಗೌರವ’’ ಎಂದು ಮುರಳೀಧರನ್‌ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.ಕ್ರಿಕೆಟ್ ಲೋಕದಲ್ಲಿ ದಂತಕಥೆಯಾದ ಮುತ್ತಯ್ಯ ಮುರಳೀಧರನ್ ಬದುಕಿನ ಕಥೆ, ‘800’ ಸಿನಿಮಾವನ್ನು ಡಿಸೆಂಬರ್ 2ರಿಂದ ಎಕ್ಸ್‌ಕ್ಲ್ಯೂಸಿವ್ ಆಗಿ ವೀಕ್ಷಿಸಿ, JioCinemaದಲ್ಲಿ!

ಬೆಂಕಿ ಅವಘಡಕ್ಕೆ ಸುಟ್ಟು ಕರಕಲಾದ ಕಂಟೇನರ್ ಲಾರಿ..! ತಪ್ಪಿದ ಅನಾಹುತ

0

ಧಾರವಾಡ: ರಸ್ತೆಯ ಮಧ್ಯೆ ಇದಕ್ಕಿಂದಂತೆ ಕಂಟೇನರ್ ಲಾರಿವೊಂದರಲ್ಲಿ ಬೆಂಕಿ ಹೊತ್ತಿಕೊಂಡು ಹೊತ್ತಿ ಉರಿದಿರುವ ಘಟನೆ ಧಾರವಾಡ ಹೊರವಲಯದ ಮಂಡಿಹಾಳ ಗ್ರಾಮದ ಕ್ರಾಸ್ ಬಳಿ ಮಧ್ಯ ರಾತ್ರಿ ನಡೆದಿದೆ. ಧಾರವಾಡ ಗೋವಾ ರಸ್ತೆಯ ಮಂಡಿಹಾಳ ಗ್ರಾಮದ ಕ್ರಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿಯ ನರ್ತನಕ್ಕೆ ಲಾರಿ ಸಂಪೂರ್ಣ ಸುಟ್ಟು ಹೋಗಿದೆ.

ಗೋವಾದಿಂದ ಧಾರವಾಡಕ್ಕೆ ಈ ಕಂಟೇನರ್ ಲಾರಿ ಬರುತ್ತಿತ್ತು ಎಂದು ತಿಳಿದು ಬಂದಿದೆ. ಧಾರವಾಡ ತಾಲೂಕಿನ ಮಂಡಿಹಾಳ ಗ್ರಾಮದ ಹತ್ತಿರ ಬರುತ್ತಿದಂತೆ ಇದಕ್ಕಿದಹಾಗೇ ಲಾರಿಯಲ್ಲಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.  ಕೂಡಲೇ ಲಾರಿಯ ಚಾಲಕ ತನ್ನ ವಾಹನವನ್ನು ರಸ್ತೆ ಪಕ್ಕ ನಿಲ್ಲಿಸಿ ಹೊರ ಬಂದಿದ್ದಾನೆ.

ರಸ್ತೆಯಲ್ಲಿ ಧಗ ಧಗನೆ ಹೊತ್ತಿ ಉರಿಯುತ್ತಿರುವುದನ್ನು ನೋಡಿದ ಸ್ಥಳೀಯ ವಾಹನ ಸವಾರರಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.‌ ಚಾಲಕನ ಮಾಹಿತಿ ಮೇರೆಗೆ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟ್ಟಿ ನೀಡಿ ಬೆಂಕಿ ನಂದಿಸಿದ್ದಾರೆ.‌ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ವೇಳೆ ಎಡವಟ್ಟು..!

0

ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಸಕ್ರೆಬೈಲು ಆನೆ ಬಿಡಾರ ಇತ್ತಿಚ್ಚಿನ ದಿನಗಳಲ್ಲಿ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿದೆ. ಬಾನುಮತಿ ಬಾಲ ಕಟ್ ಮಾಡಿದ ಸುದ್ದಿ ಮಾದ್ಯಮಗಳಲ್ಲಿ ಪ್ರಕಟವಾದ ನಂತರ ಬಿಡಾರದಲ್ಲಿ ನಡೆಯುವ ಯಾವೊಂದು ಘಟನಾವಳಿಗಳನ್ನುಮಾದ್ಯಮಗಳಿಗೆ ಸೋರಿಕೆಯಾಗದಂತೆ ಅಧಿಕಾರಿ ಸಿಬ್ಬಂದಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ಇಂತಹ ಕಠಿಣ ಸಂದರ್ಭದಲ್ಲಿಯೇ ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರವಾಸಿಗರು ಇರುವ ಸಂದರ್ಭದಲ್ಲಿಯೇ ಎಡವಟ್ಟೊಂದು ನಡೆದು ಹೋಗಿದ್ದು, ಆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿನ್ನೆ ಬಿಡಾರದಲ್ಲಿ ನವಜೋಡಿಗಳ ವೆಡ್ಡಿಂಗ್ ಶೂಟಿಂಗ್ ವೇಳೆ ಈ ಅಚಾತುರ್ಯ ನಡೆದಿದೆ.

ಕುಂತಿ ಆನೆ ಮುಂಬಂದಿಯಲ್ಲಿ ನವ ಜೋಡಿಗಳು ಹೋಗುವ ದೃಷ್ಯದ ವೇಳೆ ದ್ರುವ ಆನೆ ಮರಿ ಏಕಾಏಕಿ ತಾಯಿ ಕುಂತಿ ಬಳಿ ಬಂದಿದೆ. ಆಗ ತಕ್ಷಣ ಕುಂತಿ ತಿರುಗಿದಾಗ ಆಯತಪ್ಪಿ ಮಾವುತ ಸಂಶುದ್ದಿನ್ ಕೆಳಗೆ ಬಿದ್ದಿದ್ದಾನೆ. ಬಿದ್ದ ಸಂಶುದ್ದೀನ್ ಮತ್ತೆ ಏಳಲೇ ಇಲ್ಲ.ಕೈಗೆ ಹಾಗು ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಆಗ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ದೃಷ್ಯವನ್ನು ಬಿಡಾರಕ್ಕೆ ಬಂದಿದ್ದ ಪ್ರವಾಸಿಗರೊಬ್ಬರೂ ಸಂಪೂರ್ಣ ಚಿತ್ರೀಕರಿಸಿ ಸೋಷಿಯಲ್ ಮಿಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

ಬೈಕ್ ಹಾಗೂ ಪಿಕ್’ಅಪ್ ವಾಹನ ನಡುವೆ ಅಪಘಾತ: ಸವಾರ ಸ್ಥಳದಲ್ಲೇ ಸಾವು

0

ಚಾಮರಾಜನಗರ: ಬೈಕಿಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಸಮೀಪವಿರುವ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಮೂಡಲಹುಂಡಿ ಗ್ರಾಮದ ಮಹೇಂದ್ರ ( 33) ಸಾನ್ನಪ್ಪಿರುವ ದುರ್ಧೈವಿಯಾಗಿದ್ದು,

kA10 8499 ಪಿಕಪ್ ವಾಹನ ಮತ್ತು ಬೈಕ್ ಕೆ10 ವೈ 7760 ಮುಖಾಮುಖಿ ಡಿಕ್ಕಿಯಾಗಿದೆ. ಈ ಪರಿಣಾಮ ಅಪಘಾತದಲ್ಲಿ ಮಹೇಂದ್ರ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಗುಂಡ್ಲುಪೇಟೆ ಪೋಲೀಸರು ಭೇಟಿ ಪರಿಶೀಲನೆ ನಡೆಸಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

 

ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ವೈದ್ಯ ಸತೀಶ್ ನಿಗೂಢ ಸಾವು

0

ಹಾಸನ: ಹಾಸನ ಜಿಲ್ಲೆಯ ಕೊಣನೂರು ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಸತೀಶ್ ಅವರು ಶುಕ್ರವಾರ (ನಿನ್ನೆ) ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕುಶಾಲನಗರ ತಾಲ್ಲೂಕಿನ ಆನೆಕಾಡು ಗ್ರಾಮದ ಬಳಿ, ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಕಾರಿನಲ್ಲಿ ವೈದ್ಯ ಸತೀಶ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ಸತೀಶ್(47) ಅವರು ಮಂಡ್ಯ ಜಿಲ್ಲೆ ಪಾಂಡವಪುರ ಬಳಿಯ ಶಿವಳ್ಳಿ ಗ್ರಾಮದ ನಿವಾಸಿಯಾಗಿದ್ದು, ಇತ್ತೀಚಿಗೆ ಬೆಳಕಿಗೆ ಬಂದ 900 ಭ್ರೂಣ ಹತ್ಯೆ ಪ್ರಕರಣದಲ್ಲಿ ಅವರ ಹೆಸರು ಸಹ ಕೇಳಿಬಂದಿತ್ತು.

ಇನ್ನು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಸತೀಶ್ ಅವರ ಹೆಸರು ಹೇಳಿದ್ದರು ಎನ್ನಲಾಗಿದೆ. ಅಲ್ಲದೆ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವೈದ್ಯ ಸತೀಶ್ ಅವರು ತಲೆಮರೆಸಿಕೊಂಡಿದ್ದರು. ರಾಜ್ಯ ಸರ್ಕಾರ ಈಗ ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಸಿಕ್ಕಿಬಿಳುವ ಭಯದಿಂದ ವೈದ್ಯ ಸತೀಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವೈದ್ಯನ ಸಾವು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೂರು ಹಿಂಪಡೆಯದ ಕೆಆರ್‌ಎಸ್ ಪಾರ್ಟಿ ಅಧ್ಯಕ್ಷನ ಮೇಲೆ ಆಯುಷ್ ಇಲಾಖೆಯ ಅಧಿಕಾರಿ, ಬೆಂಬಲಿಗರಿಂದ ಹಲ್ಲೆ, ಕೊಲೆ ಬೆದರಿಕೆ ಆರೋಪ

ಗದಗ: ಆಯುಷ್ ಇಲಾಖೆಯ ಸಹಾಯಕ ಆಡಳಿತ ಅಧಿಕಾರಿಯ ವಿರುದ್ಧ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ
ಕೆಆರ್‌ಎಸ್ ಪಾರ್ಟಿ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಲಾಗಿದೆ ಎಂದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಅರ್‌ಎಸ್ ಪಾರ್ಟಿ ಅಧ್ಯಕ್ಷ ನೀಲಪ್ಪ ತಂದೆ ಹನಮಂತಪ್ಪ ಕಟಗಿ (31) ಎಂಬುವರು, ಆಯುಷ್ ಇಲಾಖೆಯ ಸಹಾಯಕ ಆಡಳಿತ ಅಧಿಕಾರಿ ಶ್ರೀಮತಿ ಸುಧಾ.ಎ.ಜಾಲಿಹಾಳ ಎಂಬುವರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ದೂರು ಹಿಂಪಡೆಯಲು ಶ್ರೀಮತಿ ಸುಧಾ ಎ. ಜಾಲಿಹಾಳ, ಚಂದ್ರು ಬಮ್ಮನಾಳ, ಡಾ:ಎಮ್.ಎಸ್.ಉಪ್ಪಿನ ಒತ್ತಡ ಹೇರಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ದೂರು ಹಿಂಪಡೆಯದೇ ಇದ್ದಾಗ 29/11/2023 ರ ರಾತ್ರಿ 11:30ರ ಸುಮಾರಿಗೆ, ಡಾ: ಎಮ್.ಎಸ್ ಉಪ್ಪಿನ, ರಾಜೇಸಾಬ ಕಾಗದಗಾರ, ಆನಂದ ಹಂಡಿ, ಆದಿ ಪಾಟೀಲ, ಅಮ್ಮಿನಬಾಹಿ ಸೇರಿದಂತೆ ಹೆಸರು, ವಿಳಾಸ ತಿಳಿಯದ ಇನ್ನೂ 5-6ಜನ ಆರೋಪಿತರು, ಫಿರ್ಯಾದಿ ನೀಲಪ್ಪನಿಗೆ ಹಲ್ಲೆ ಮಾಡುವ ಉದ್ದೇಶದಿಂದ ಆದರ್ಶ ನಗರದಲ್ಲಿರುವ ಮನೆಯ ಹತ್ತಿರ ಬಂದು, ಹೊರಗೆ ಕರೆದುಕೊಂಡು ಹೋಗಿ ಆರೋಪಿತರು ಕೈಕಡಗ, ಬ್ರಾಸ್ಲೇಟ್ ಇನ್ನಿತರ ವಸ್ತುಗಳಿಂದ ನೀಲಪ್ಪನ ತಲೆಗೆ, ಹೊಟ್ಟೆಗೆ, ಮರ್ಮಾಂಗಕ್ಕೆ, ಬೆನ್ನಿಗೆ, ಪಕ್ಕಡಿಗೆ ಹೊಡೆದು ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ, ದೂರು ಹಿಂಪಡೆಯದೇ ಹೋದಲ್ಲಿ ಕೊಲೆ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಕೆಆರ್‌ಎಸ್ ಪಾರ್ಟಿ ಅಧ್ಯಕ್ಷ ನೀಲಪ್ಪ ತಂದೆ ಹನಮಂತಪ್ಪ ಕಟಗಿ ಗದಗ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಕುರಿತು 0163/2023,, IPC 1860(U/s-143,147,148,323,324,109,504,506,149):the SC&ST (prevention of atrocities) amendment Act 2015(U/s-3(1)(r)(s)(2)(va)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ..!

0

ಮಂಡ್ಯ:  ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ರೈತನ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ರೈತ ಮೊಘಣ್ಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಅಡಗನಹಳ್ಳಿ ಗ್ರಾಮದ ರೈತ ಮೊಘಣ್ಣ (40) ದಾಳಿಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾರೆ.  ರೈತ ಮೊಘಣ್ಣ ಇಂದು ಬೆಳಿಗ್ಗೆ ತಮ್ಮ ಜಮೀನಿನಲ್ಲಿ ಕುರಿ ಮೇಯಿಸುವ ವೇಳೆ ಚಿರತೆಯೊಂದು ಕುರಿ ಮಂದೆ ಮೇಲೆ ಏಕಾಏಕಿ ದಾಳಿ ಮಾಡಿ ಕುರಿ ಮರಿಯೊಂದನ್ನು ಎತ್ತೋಯ್ಯುವ ವೇಳೆ ಅದನ್ನು ಬಿಡಿಸಿಕೊಳ್ಳಲು ರೈತ ಮೊಘಣ್ಣ ಯತ್ನಿಸಿದ್ದಾರೆ.

ಆದರೆ, ಚಿರತೆ ಕುರಿ ಮರಿ ಬಿಟ್ಟು ರೈತ ಮೊಘಣ್ಣ ಮೇಲೆ ದಾಳಿ ಮಾಡಿ ಕಿವಿ ಮತ್ತು ದೇಹದ ವಿವಿಧ ಭಾಗಗಳಲ್ಲಿ ಚಿರತೆ ಗಾಯಗೊಳಿಸಿ ಪರಾರಿಯಾಗಿದ್ದು, ರೈತ ಮೊಘಣ್ಣಗೆ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತಿಯಾಗಿ ಉಪ್ಪು ಸೇವಿಸುವುದರಿಂದ ಈ ಕಾಯಿಲೆಗಳು ನಿಮ್ಮನ್ನು ಕಾಡಬಹುದು..!

0

ಆಹಾರದ ರುಚಿಗಾಗಿ ಬಳಸುವ ಉಪ್ಪು ಹೆಚ್ಚಾದರೆ ರುಚಿ ಕೂಡ ಹೆಚ್ಚಾಗುತ್ತದೆ ಎನ್ನುವುದು ಸುಳ್ಳು. ಏಕೆಂದರೆ ನಿಮಗೆ ಅನುಭವವಾಗಿರುವ ಹಾಗೆ ಉಪ್ಪು ಹೆಚ್ಚಾದ ಯಾವುದೇ ಆಹಾರವನ್ನು ಬಾಯಲ್ಲಿ ಕೂಡ ಇಡಲು ಸಾಧ್ಯವಿಲ್ಲ. ಒಂದು ವೇಳೆ ತಿಂದರೂ ಕೂಡ ಅದರಿಂದ ಮುಂದಾಗುವ ಅನಾಹುತಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಕೆಲವರಿಗೆ ತಾತ್ಕಾಲಿಕ ವಾಗಿ ಆರೋಗ್ಯದ ತೊಂದರೆಗಳು ಎದುರಾದರೆ ಇನ್ನು ಕೆಲವರಿಗೆ ದೀರ್ಘಕಾಲದ ಆರೋಗ್ಯದ ಸಮಸ್ಯೆಗಳು ಕಂಡುಬರುತ್ತವೆ.

ಊತ: ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದಾಗ ದೇಹದಲ್ಲಿ ನೀರು ವಿಪರೀತವಾಗಿ ಶೇಖರಣೆಯಾಗುತ್ತದೆ.ಇದರಿಂದಾಗಿ . ಕೈ, ಕಾಲು ಮತ್ತು ಕಣಕಾಲುಗಳಲ್ಲಿ ಊತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ನಿಮ್ಮನ್ನು ಕಾಡಬಾರದೆಂದರೆ, ಉಪ್ಪನ್ನು ಮಿತಪ್ರಮಾಣದಲ್ಲಿ ಸೇವಿಸಿ.

ಕಿಡ್ನಿ ಸಮಸ್ಯೆ: ಅತಿಯಾದ ಉಪ್ಪು ಸೇವನೆಯು ಕಿಡ್ನಿಯನ್ನು ಹಾನಿಗೊಳಿಸಿ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು. ಉಪ್ಪಿನ ಅತಿಯಾದ ಸೇವನೆಯು ಮೂತ್ರದಲ್ಲಿ ಕ್ಯಾಲ್ಸಿಯಂ ಮಟ್ವವನ್ನು ಹೆಚ್ಚಿಸುತ್ತದೆ, ಇದು ಮೂತ್ರಪಿಂಡದ ಕಲ್ಲುಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ರಕ್ತದೊತ್ತಡ: ನಿಮ್ಮ ಆರೋಗ್ಯಕ್ಕೆ ಉಪ್ಪು ಬಹಳ ಮುಖ್ಯ. ಆದರೆ ಅದನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇರಿಸುವುದರಿಂದ ವ್ಯಕ್ತಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡಬಹುದು. ಅದಕ್ಕಾಗಿಯೇ ಆರೋಗ್ಯ ತಜ್ಞರು ಆಹಾರದಲ್ಲಿ ಉಪ್ಪನ್ನು ಮಿತ ಪ್ರಮಾಣದಲ್ಲಿ ಬಳಸಬೇಕೆಂದು ಸಲಹೆ ನೀಡುತ್ತಾರೆ.

  • ಹೃದಯದ ಆರೋಗ್ಯ: ಅತಿಯಾದ ಉಪ್ಪು ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಹೃದಯವನ್ನು ಆರೋಗ್ಯಕರವಾಗಿಡಲು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಮಿತಿಗೊಳಿಸಿ. ನೀವು ದಿನಕ್ಕೆ ಐದು ಗ್ರಾಂ ಗಿಂತ ಕಡಿಮೆ ಉಪ್ಪನ್ನು ಸೇವಿಸಿದರೆ, ಅದು ನಿಮ್ಮ ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿರ್ಜಲೀಕರಣ: ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ, ನಿರ್ಜಲೀಕರಣ ಸಮಸ್ಯೆಯನ್ನು ತಪ್ಪಿಸಲು ಆಹಾರದಲ್ಲಿ ಮಿತ ಪ್ರಮಾಣದ ಉಪ್ಪನ್ನು ಸೇರಿಸುವುದರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.

error: Content is protected !!