Home Blog Page 3138

ಅಪರಿಚಿತ ವಾಹನ ಡಿಕ್ಕಿ: ಚಿರತೆ ಸಾವು

0

ಮಂಡ್ಯ: ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಮೃತಪಟ್ಟಿರುವ ಘಟನೆ ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಗ್ರಾಮದ ಬಳಿಯ ಮಳವಳ್ಳಿ-ಕೊಳ್ಳೇಗಾಲ ಹೆದ್ದಾರಿಯಲ್ಲಿ ನಡೆದಿದೆ.

ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ‌ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಚಿರತೆ ರಸ್ತೆ ಬದಿ ಹಾರಿ ಬಿದ್ದಿದೆ. ಸುಮಾರು ಮೂರು ವರ್ಷದ ಗಂಡು ಚಿರತೆ ಸಾವಿಗೀಡಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಲೆಗಳಿಗೆ ಬಂದಿರುವುದು ಹುಸಿ ಬಾಂಬ್ ಕರೆ; ಪೋಷಕರು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ: ಡಿ.ಕೆ.ಶಿವಕುಮಾರ್

0

ಬೆಂಗಳೂರು: “ಬೆಂಗಳೂರಿನ‌ 15 ಶಾಲೆಗಳಿಗೆ ಬಂದಿರುವ ಬಾಂಬ್‌ ಬೆದರಿಕೆ ಹುಸಿ ಕರೆಯಾಗಿದ್ದು. ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಹುಸಿ ಬಾಂಬ್ ಕರೆ ಪಡೆದಿದ್ದ ನೀವ್ ಅಕಾಡೆಮಿಗೆ ಭೇಟಿ ನೀಡಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಹುಸಿ ಬೆದರಿಕೆ ಹಾಕಿದವರನ್ನು 24 ಗಂಟೆಯೋಳಗೆ ಪತ್ತೆ ಮಾಡಲಾಗುವುದು ಪೊಲೀಸರು ಈಗಾಗಲೆ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೂ ಹೀಗೆ ಆಗಿತ್ತು. ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಬಂದಿರುವ ಸುದ್ದಿ ತಿಳಿದ ಕೂಡಲೆ ಗಾಬರಿಯಾಯಿತು. ನನಗೆ ಪರಿಚಯವಿರುವ ಕೆಲವು ಶಾಲೆಗಳಿಗೆ ಹೀಗೆ ಇ- ಮೇಲ್‌ ಸಂದೇಶದ ಮೂಲಕ ಬೆದರಿಕೆ ಬಂದಿದೆ. ಪೋಲಿಸ್ ಆಯುಕ್ತರು ಈಗಾಗಲೆ ಸುದ್ದಿಗೋಷ್ಠಿ ನಡೆಸಿ ಇದು ಹುಸಿ ಬಾಂಬ್‌ ಬೆದರಿಕೆ ಎಂದು ಮಾಹಿತಿ ನೀಡಿದ್ದಾರೆ. ಪೋಷಕರು ಆತಂಕದಲ್ಲಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಧೈರ್ಯದಿಂದ ಇರಬೇಕು” ಎಂದರು.

“ಈಗಾಗಲೆ ಬಾಂಬ್‌ ನಿಷ್ಕ್ರಿಯದಳ ಸ್ಥಳ ಪರಿಶೀಲನೆ ನಡೆಸಿದೆ. ಪೊಲೀಸ್‌ ಭದ್ರತೆ ಇರುವ ಕಾರಣ ನಮ್ಮ ಮನೆ ಹತ್ತಿರ ಹೀಗೆ ಆಗುವ ಸಾಧ್ಯತೆ ಕಡಿಮೆ. ಆದರೂ ಇದು ಪ್ರಮುಖ ಪ್ರದೇಶವಾದರಿಂದ ಸ್ವಲ್ಪ ಎಚ್ಚರದಿಂದ ಇರಬೇಕು. ಬೆಂಗಳೂರು ಜನತೆಗೆ ಯಾವ ಆತಂಕ ಬೇಡ ಕೆಲವು ದುಷ್ಕರ್ಮಿಗಳಿಂದ ಈ ಬೆದರಿಕೆ ಕರೆ ಬಂದಿದ್ದು, 24 ಗಂಟೆಯೊಳಗೆ ಆರೋಪಗಳನ್ನು ಪತ್ತೆ ಹಚ್ಚುತ್ತೇವೆ” ಎಂದರು. ಬೆಂಗಳೂರು ಹಬ್ಬ ನಡೆಯುವ ಸಂದರ್ಭದಲ್ಲೆ ಹೀಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ ಎಂದು ಕೇಳಿದಾಗ, “ಕೆಲವರು ಕಿಡಿಗೇಡಿಗಳು ಈ ರೀತಿ ಚೇಷ್ಟೆ ಮಾಡುತ್ತಾರೆ, ಹಬ್ಬ ಅದರ ಪಾಡಿಗೆ ಅದು ನಡೆಯುತ್ತದೆ” ಎಂದು ತಿಳಿಸಿದರು.

ಸೈಬರ್‌ ಕ್ರೈಂ ಪೊಲೀಸರಿಗೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಹೇಳುತ್ತಿರಾ ಎಂದು ಕೇಳಿದಾಗ “ಸೈಬರ್‌ ಕ್ರೈಂ ವಿಭಾಗದವರು ಸಕ್ರಿಯವಾಗಿದ್ದಾರೆ. ತಕ್ಷಣ ಕ್ರಮಕೈಗೊಂಡು ಸಂಬಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದ್ದಾರೆ. ನನಗೂ ಫೋನಿನ ಮೂಲಕ ಮಾಹಿತಿ ನೀಡುತ್ತಿದ್ದಾರೆ. ನಮ್ಮ ಮನೆ ಮುಂದೆ ಕೂಡ ಕಾರ್ಯಚರಣೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.

ಈ ರೀತಿ ಹುಸಿ ಬಾಂಬ್‌ ಕರೆ ಮತ್ತೆ ಮತ್ತೆ ಏಕೆ ಕೇಳಿಬರುತ್ತಿದೆ ಎಂದು ಕೇಳಿದಾಗ, “ಇದು ದಿಕ್ಕು ತಪ್ಪಿಸುವಂತಹ ಕೆಲಸ. ಈಗ ಪರಿಕ್ಷೆ ಸಮಯ ಆದ ಕಾರಣ ಹೀಗಾಗಿರಬಹುದು. ಈ ಹಿಂದೆ ಕೊಡ ವಿಮಾನ ತಡವಾಗಿದೆ ಎಂದು ಈ ರೀತಿ ಕರೆ ಮಾಡಿರುವ ಘಟನೆ ನಡೆದಿತ್ತು. ಕೆಲವೊಮ್ಮೆ 10 ಹುಸಿ ಕರೆಗಳ ಪೈಕಿ ಒಂದು ಟಾರ್ಗೆಟ್ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಹುಸಿ ಕರೆಗಳನ್ನು ನಾವು ನಿರ್ಲಕ್ಷಿಸುವುದಿಲ್ಲ. ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಕೈಗೊಳ್ಳುತ್ತೇವೆ” ಎಂದರು.

”ದಿ ಗೋಟ್ ಲೈಫ್” ಸಿನಿಮಾ ರಿಲೀಸ್ ಡೇಟ್ ಫಿಕ್ಸ್

0

ಪೃಥ್ವಿ ರಾಜ್ ಸುಕುಮಾರನ್ ಅಭಿನಯದ ದಿ ಗೋಟ್ ಲೈಫ್, ದಿ ಎಪಿಕ್ ಟೇಲ್ ಆಫ್ ದಿ ಗ್ರೇಟೆಸ್ಟ್ ಸರ್ವೈವಲ್ ಅಡ್ವೆಂಚರ್ ಸಿನಿಮಾಗೆ ರಿಲೀಸ್ ಡೇಟ್ ಫಿಕ್ಸ್ ಆಗಿದೆ. 2024ರ ಏಪ್ರಿಲ್ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ರಾಷ್ಟ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶನದ ಸಿನಿಮಾ. ದಿ ಗೋಟ್ ಲೈಫ್ ಚಿತ್ರದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.ಬ್ಲೆಸ್ಸಿ ನಿರ್ದೇಶನದ ಈ ಸಿನಿಮಾವನ್ಬು ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದೆ. ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಪ್ರಸಿದ್ಧ ಅರಬ್ ನಟರಾದ ತಾಲಿಬ್ ಅಲ್ ಬಲೂಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋಟ್ ಲೈಫ್ ಅಕಾಡೆಮಿ ಪ್ರಶಸ್ತಿ ವಿಜೇತರಾದ ಎ.ಆರ್.ರೆಹಮಾನ್ ಮತ್ತು ರೆಸುಲ್ ಪೂಕುಟ್ಟಿ ಅವರ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವಿದೆ.

ಚಿತ್ರದ ಅದ್ಭುತ ದೃಶ್ಯಗಳನ್ನು ಸುನಿಲ್ ಕೆ.ಎಸ್ ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಮಲಯಾಳಂ ಚಿತ್ರೋದ್ಯಮದ ಅತಿದೊಡ್ಡ ಸಿನಿಮಾ ಎನಿಸಿದೆ. ಅ‌ಂದಹಾಗೆ ಈ ಚಿತ್ರ ಮಲಯಾಳಂ ಸಾಹಿತ್ಯ ಪ್ರಪಂಚದ ಅತ್ಯಂತ ಜನಪ್ರಿಯ ಕಾದಂಬರಿ ‘ಆಡು ಜೀವಿತಂ’ ಆಧರಿಸಿದೆ, ಇದು ವಿದೇಶಿ ಸೇರಿದಂತೆ 12 ವಿವಿಧ ಭಾಷೆಗಳಲ್ಲಿ ಅನುವಾದಗೊಂಡಿದೆ.

ಬರಹಗಾರ ಬೆನ್ಯಾಮಿನ್ ಬರೆದಿರುವ ಈ ಕಾದಂಬರಿ 90 ರ ದಶಕದಲ್ಲಿ ಅದೃಷ್ಟ ಹುಡುಕಿ ವಲಸೆ ಬಂದ ನಜೀಬ್ ಎಂಬ ಯುವಕನ ನೈಜ ಕಥೆಯನ್ನು ಹೊಂದಿದೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಬ್ಲೆಸ್ಸಿ, “ದಿ ಗೋಟ್ ಲೈಫ್ ಎಲ್ಲೆಡೆ ಸಲ್ಲುವ ಕಥೆ. ನಿರೂಪಣೆ ಸಲುವಾಗಿ ಸಾಜಷ್ಟು ಶ್ರಮ ವಹಿಸಿ ಕೆಲಸ ಮಾಡಿದ್ದೇನೆ. ಕಾದಂಬರಿಯನ್ನು ಸಿನಿಮಾ ಮಾಡುವಾಗ ಅನೇಕ ಸವಾಲು ಎದುರಾದವು. ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ಕೊಡುವ ಪ್ರಯತ್ನ ಮಾಡಿದ್ದೇನೆ ಎನ್ನುತ್ತಾರೆ. ಅಂದಹಾಗೆ, ಗೋಟ್ ಲೈಫ್ ಏಪ್ರಿಲ್ 10 ರಂದು ಹಿಂದಿ, ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

ಬಸ್ ಸೌಲಭ್ಯಕ್ಕಾಗಿ ಎಬಿವಿಪಿ ಪ್ರತಿಭಟನೆ; ಬಸ್ ಗಾಜು ಜಖಂ, ಪೊಲೀಸರ ಜೊತೆ ವಾಗ್ವಾದ

0

ಗದಗ: ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಸರಿಯಾಗಿ ಕಲ್ಪಿಸುವಂತೆ ಒತ್ತಾಯಿಸಿ ಎಬಿವಿಪಿ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಗದಗ ನಗರದ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬಸ್ ನಿಲ್ದಾಣದ ಒಳಗೆ ಬರುತ್ತಿದ್ದ ಬಸ್ ತಡೆಯಲು ಮುಂದಾಗಿದ್ದ ವೇಳೆ ಬಸ್‌ನ ಮುಂದಿನ‌ ಗಾಜು ಜಖಂಗೊಂಡಿದೆ.

ಆದರೆ ‌ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳೇ ಗಾಜು ಜಖಂಗೊಳಿಸಿದ್ದಾರೆ ಎಂದು ಸಿಟ್ಟಾದ ಸಾರಿಗೆ ಸಿಬ್ಬಂದಿ ಹಾಗೂ ಪೊಲೀಸರು ಪ್ರತಿಭಟನಾಕಾರರ ಜೊತೆಗೆ ಮಾತಿನ ಚಕಮಕಿ ನಡೆಸಿದರು.

ಗಾಜು ಜಖಂಗೊಳ್ಳಲು ನೀವೆ ಕಾರಣ ಎಂದು ಎಬಿವಿಪಿ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡರು.

ಆದರೆ ಗಾಜು ಜಖಂಗೊಳ್ಳಲು ನಾವು ಕಾರಣರಲ್ಲ. ಬಸ್ ತಡೆಯಲು ಮುಂದಾದಾಗ ಚಾಲಕ ಮೈಮೇಲೆ ಬಂದಾಗ ತಡೆದಿದ್ದೇವೆ. ಗಾಜು ಮೊದಲೆ ಒಡೆದಿತ್ತು ಎಂದು ಕಾರ್ಯಕರ್ತರು ಪ್ರತಿವಾದಿಸಿದರು. ಇದರಿಂದಾಗಿ ಕೆಲಕಾಲ ಗೊಂದಲ ನಿರ್ಮಾಣವಾಯಿತು.

ತಾಜ್ ಹೋಟೆಲ್ ಮೇಲಿನ ದಾಳಿ ಮಾದರಿಯಲ್ಲೇ ಬೆದರಿಕೆ ಸಂದೇಶಗಳು ಬಂದಿವೆ: ಆರ್.ಅಶೋಕ್

0

ಬೆಂಗಳೂರು: ಮುಂಬೈ ತಾಜ್ ಹೋಟೆಲ್ ಮೇಲಿನ ದಾಳಿ ಮಾದರಿಯಲ್ಲೇ ನಗರದ ಶಾಲೆಗಳ ಮೇಲೆ ಅಟ್ಯಾಕ್ ಮಾಡುವ ಬೆದರಿಕೆ ಸಂದೇಶಗಳು ಬಂದಿವೆ. ಭಾರತೀಯರು ಮುಸ್ಲಿಮರನ್ನು ಅವಹೇಳನ ಮಾಡುತ್ತಿದ್ದಾರೆ ಎಂದೇ ಈ ರೀತಿ ಸಂದೇಶಗಳನ್ನು ಕಳಿಸುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಯಾರು ಈ ರೀತಿ ಸಂದೇಶ ಕಳಿಸಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಸಂದೇಶದಿಂದ ಶಾಲೆಯ ಮಕ್ಕಳ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಳಿಕ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಶಾಲೆಗಳ ಬಳಿ ಪರಿಸ್ಥಿತಿ ವೀಕ್ಷಣೆಗೆ ಅವರು ತೆರಳಿದ್ದಾರೆ.

ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಇ- ಮೇಲ್ ಮೂಲಕ ಬಸವೇಶ್ವರ ನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ ನಗರದ 20ಕ್ಕೂ ಹೆಚ್ಚು ಶಾಲೆಗಳಿಗೆ ಆಗಂತುಕರು ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

 

ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು..?

0

ಬೆಂಗಳೂರು: ಶಾಲೆಗಳಿಗೆ ಅನಾಮಧೇಯ ವ್ಯಕ್ತಿಗಳು ಬಾಂಬ್ ಬೆದರಿಕೆ ಒಡ್ಡಿರುವುದು ಕಳವಳಕಾರಿ. ಮಕ್ಕಳು, ಪೋಷಕರು ತೀವ್ರವಾಗಿ ಕಳವಳಗೊಂಡಿದ್ದು, ಅವರಲ್ಲಿ ಭೀತಿ ಸೃಷ್ಟಿಸಿ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ದುರುದ್ದೇಶದಿಂದಲೇ ದುಷ್ಟಶಕ್ತಿಗಳು ಇಂತಹ ಹುನ್ನಾರ ನಡೆಸಿರಬಹುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರವು ಯಾವುದೇ ಕಾರಣಕ್ಕೂ ಈ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು. ಪೋಷಕರು ಮಕ್ಕಳನ್ನು ಧೈರ್ಯವಾಗಿ ಶಾಲೆಗಳಿಗೆ ಕಳಿಸುವಂತಹ ಸುರಕ್ಷತೆ, ಭದ್ರತೆಯ ಖಾತರಿಯನ್ನು ನೀಡಬೇಕು. ಈ ಬೆದರಿಕೆಗಳ ಬಗ್ಗೆ ಅಮೂಲಾಗ್ರ ತನಿಖೆ ನಡೆಸಿ, ಇದರ ಹಿಂದೆ ಯಾರಿದ್ದಾರೆ? ಮೂಲ ಯಾವುದು ಎನ್ನುವುದನ್ನು ಪತ್ತೆ ಹಚ್ಚಿ ದುಷ್ಟರ ಹೆಡೆಮುರಿ ಕಟ್ಟಬೇಕು. ಈ ಬಗ್ಗೆ ಕೇಂದ್ರ ಸರಕಾರದ ನೆರವು ಪಡೆಯುವ ಬಗ್ಗೆ ರಾಜ್ಯ ಸರಕಾರ ಮೀನಾಮೇಷ ಎಣಿಸಬಾರದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಡಿವೈಡರ್’ಗೆ ಲಾರಿ ಡಿಕ್ಕಿಯಾಗಿ ಮತ್ತೊಂದು ಲಾರಿಗೆ ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು

0

ತುಮಕೂರು:  ಡಿವೈಡರ್’ಗೆ ಲಾರಿ ಡಿಕ್ಕಿಯಾಗಿ ಮತ್ತೊಂದು ಲಾರಿಗೆ ಡಿಕ್ಕಿಯಾಗಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಶಿರಾ ತಾಲೂಕಿನ ಜೋಗಿಹಳ್ಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ. ಟೈಯರ್ ಗಳನ್ನ ತುಂಬಿಕೊಂಡು ಹೋಗ್ತಿದ್ದ ಲಾರಿ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದಿದ್ದು ಬಳಿಕ ಮತ್ತೊಂದು ಲಾರಿಗೆ ಡಿಕ್ಕಿಯಾಗಿ ಅಪಘಾತ ಹೊಂದಿದೆ.

ತುಮಕೂರು ಕಡೆಯಿಂದ ಶಿರಾದ ಕಡೆ ಹೋಗ್ತಿದ್ದ ಲಾರಿ ಹಾಗೆ ಶಿರಾ ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಮತ್ತೊಂದು ಲಾರಿ ಎರಡು ಒಂದಕ್ಕೊಂದು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಭಯಂಕರ ಆಕ್ಸಿಡೆಂಟ್ ಆಗಿ ಟೈಯರ್ ತುಂಬಿಕೊಂಡು ಹೋಗ್ತಿದ್ದ ಲಾರಿ ಚಾಲಕ ಸಾವನ್ನಪ್ಪಿದ್ದಾನೆ. ಅದೃಷ್ಟಾವಶಾತ್ ಇನ್ನೊಂದು ಲಾರಿ ಚಾಲಕನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ.ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಿಶೀಲನೆ ನಡೆಯುತ್ತಿದೆ.

ಕಾಂಗ್ರೆಸ್’ನ ತುಷ್ಟೀಕರಣ ಪರಿಣಾಮದಿಂದ ಮುಸ್ಲಿಂರು ನಮ್ಮದೇ ರಾಜ್ಯ ಎನ್ನುವ ಭ್ರಮೆಯಲ್ಲಿದ್ದಾರೆ: ಮುತಾಲಿಕ್

0

ಧಾರವಾಡ: ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎನ್ನುವುದರ ಜೊತೆಗೆ ಬಾಂಬ್ ಬೆದರಿಕೆ ಹಾಕಿ ಬೆಂಗಳೂರಿನ ವಿವಿಧ ಶಾಲೆಗಳಿಗೆ ಈ-ಮೇಲ್ ಬಂದ ವಿಚಾರವಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿರುವ ಅವರು, ಬೆಂಗಳೂರಿನ 17 ಶಾಲೆಗಳಿಗೆ ಈ ರೀತಿ ಈ-ಮೇಲ್ ಹಾಕಲಾಗಿದೆ.

ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಮುಂದಾಗಿ ಎಂಬ ಸಂದೇಶ ಕಳುಹಿಸಲಾಗಿದೆ. ಇಡೀ ಹಿಂದೂಗಳಿಗೆ ಇವರು ಈ ರೀತಿಯ ಆಹ್ವಾನ ನೀಡಿದ್ದಾರೆ. ಈ ದೇಶವನ್ನು ಇಸ್ಲಾಂ ಮಾಡುತ್ತೇವೆ. ಖಡ್ಗದ ಆಧಾರದ ಮೇಲೆ ಮತಾಂತರ ಮಾಡುತ್ತೇವೆ ಎಂದಿದ್ದಾರೆ. ಮುಜಾಹಿದ್ದೀನ್ ಎಂಬ ಹಿಂದೂ ವಿರೋಧಿಯಿಂದ ಈ ರೀತಿಯ ಮೇಲ್ ಬಂದಿದೆ ಎಂದಿದ್ದಾರೆ. ಇದು ಬಹು ದೊಡ್ಡ ಆತಂಕದ ಸಂಗತಿ.  ಇದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ. ಕಾಂಗ್ರೆಸ್‌ನ ತುಷ್ಟೀಕರಣ ಪರಿಣಾಮದಿಂದ ಮುಸ್ಲಿಂರು ನಮ್ಮದೇ ರಾಜ್ಯ ಎನ್ನುವ ಭ್ರಮೆಯಲ್ಲಿದ್ದಾರೆ.

ಶಾಲಾ, ಕಾಲೇಜುಗಳಿಗೆ ಬೆದರಿಕೆ ಬರುತ್ತಿರುವುದು ಗಂಭೀರ ವಿಚಾರ. ಜನರು ತಮ್ಮ ಸುರಕ್ಷತೆ ಬಗ್ಗೆ ವಿಚಾರ ಮಾಡಬೇಕು. ಈ ಮೇಲ್ ಎಲ್ಲಿಂದ ಯಾರಿಗೆ ಬಂದಿದೆ ಎಂಬುದನ್ನು ಪತ್ತೆ ಮಾಡಬೇಕು. ಇದೊಂದು ಭಯೋತ್ಪಾದನೆಗೆ ಸಂಬಂಧಪಟ್ಟಿದ್ದು. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಘಟನೆಗಳು ಆಗುವ ಬಗ್ಗೆ ಮೇಲ್‌ನಲ್ಲಿ ಸೂಚನೆ ಇದೆ. ಸರ್ಕಾರ ಇಂತವರನ್ನು ಹದ್ದುಬಸ್ತಿನಲ್ಲಿ ಇಡಬೇಕು. ಇವರನ್ನು ಒದ್ದು ಒಳಗೆ ಹಾಕಬೇಕು. ಮೂರ್ತಿ ಉಪಾಸಕರನ್ನು ಕೊಲ್ಲಬೇಕು ಎಂದು ಕುರಾನ್‌ನಲ್ಲಿ ಬರೆಯಲಾಗಿದೆ. ಇದಕ್ಕೆ ಪುಷ್ಠಿಯಾಗಿ ಈ ಮೇಲ್ ಬಂದಿದೆ. ಇದನ್ನು ನಾನು ವಿರೋಧಿಸುತ್ತೇನೆ ಎಂದಿದ್ದಾರೆ.

BJP ಸರಕಾರ ನನ್ನ ವಿರುದ್ಧದ ಸುಳ್ಳು ಕೇಸ್‌ ವಾಪಸ್ ಪಡೆಯಲಿಲ್ಲ: ಜನಾರ್ಧನ್ ರೆಡ್ಡಿ

0

ಗಂಗಾವತಿ:- BJP ಸರಕಾರ ನನ್ನ ವಿರುದ್ಧದ ಸುಳ್ಳು ಕೇಸ್‌ಗಳನ್ನು ವಾಪಸ್ ಪಡೆಯಲಿಲ್ಲ ರೆಡ್ಡಿ ಹೇಳಿದ್ದಾರೆ, ಈ ಸಂಬಂಧ ಮಾತನಾಡಿದ ಅವರು,ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಗೆ ಸಂಪೂರ್ಣ ಬಹುಮತವಿಲ್ಲದಿದ್ದರೂ ಕಷ್ಟಪಟ್ಟು ಅಧಿಕಾರ ಕೊಡಿಸಿದೆ. ನನ್ನ ಸಂಕಷ್ಟ ಕಾಲದಲ್ಲಿ ಬಿಜೆಪಿ ಹೈಕಮಾಂಡ್ ನನ್ನ ನೆರವಿಗೆ ಬರಲಿಲ್ಲ. ಕೇಸ್‌ಗಳನ್ನು ವಾಪಸ್ ಪಡೆಯಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಪ್ರಸ್ತುತ ಡಿ.ಕೆ. ಶಿವಕುಮಾರ್ ಅವರ ಬೆನ್ನಿಗೆ ನಿಂತು ಬಹುತೇಕ ಕೇಸ್‌ಗಳನ್ನು ವಾಪಸ್ ಮಾಡಿಸುತ್ತಿದೆ ಎಂದರು.

ರಾಜಕೀಯ ಸ್ವಾರ್ಥ ಹಾಗೂ ಮುಖ್ಯಮಂತ್ರಿಯಾಗುವ ಆಸೆಯಿಂದ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿ ಅಧಿಕಾರ ಪಡೆದಿದ್ದಾರೆ. ಅವರಿಗೂ ಗೊತ್ತು, ನಾನು ಏನೂ ತಪ್ಪು ಮಾಡಿಲ್ಲ ಎಂದು. ನಾನು ಸೋನಿಯಾ ಗಾಂಧಿಯವರಿಗೆ ತಲೆ ಬಾಗಿಸಲಿಲ್ಲ ಎಂಬ ಕಾರಣಕ್ಕೆ ಏನೂ ತಪ್ಪು ಮಾಡದಿದ್ದರೂ ಜೈಲಿಗೆ ಹೋಗಬೇಕಾಯಿತು. ನಂತರ ನನ್ನಿಂದ ಉಪಕಾರ ಪಡೆದು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಬಂದ ಬಿಜೆಪಿ , ವ್ಯಕ್ತಿಗಳು ಹಾಗೂ ಹೈಕಮಾಂಡ್ ನನ್ನ ವಿರುದ್ಧ ರಾಜ್ಯ ಸರಕಾರ ದಾಖಲಿಸಿದ್ದ ಕೇಸ್‌ಗಳನ್ನು ವಾಪಸ್ ಪಡೆಯಲಿಲ್ಲ ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.

ಛೇ ಇವೆಳೆಂಥಾ ದೊಡ್ಡಮ್ಮ..! ತಂಗಿಯ ಮಗನನ್ನೇ ಕೊಂದು ಹೂತು ಹಾಕಿದ ಪಾತಕಿ

0

ಚಿಕ್ಕಬಳ್ಳಾಪುರ: ತಂಗಿ ಮೇಲಿನ ಸೇಡಿಗೆ ಆಕೆಯ ಮಗುವನ್ನೇ ಕೊಂದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮುತ್ತಕದಹಳ್ಳಿಯಲ್ಲಿ ನಡೆದಿದೆ. ಅಂಬಿಕಾ ಎಂಬಾಕೆ ಕೊಲೆ ಪಾತಕಿಯಾಗಿದ್ದಾಳೆ. ಅಂಬಿಕಾಳ ಸಿಟ್ಟಿಗೆ ಮುಗ್ದ ಮಗುವೊಂದು ಪ್ರಾಣ ಬಿಟ್ಟಿದೆ. ಅಂಬಿಕಾ ಹಾಗೂ ಅನಿತಾ ಇಬ್ಬರು ಅಕ್ಕ ತಂಗಿಯರು. ತಂಗಿ ಅನಿತಾ ಮೇಲಿನ ಕೋಪಕ್ಕೆ ಆಕೆಯ ಮಗನನ್ನು ಕೊಲೆ ಮಾಡಿ ಹೂತು ಹಾಕಿದ್ದಾಳೆ.

ಅಂಬಿಕಾಳ ಅನೈತಿಕ ಸಂಬಂಧಗಳಿಗೆ ತಂಗಿ ಅನಿತಾ ಅಡ್ಡಿಯಾಗುತ್ತಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಅಂಬಿಕಾ, ತಂಗಿ ಮೇಲಿನ ಕೋಪಕ್ಕೆ ಆಕೆ ಮಗನನ್ನು ಕೊಲೆ ಮಾಡಿದ್ದಾಳೆ. ಸ್ಥಳಕ್ಕೆ ಪೆರೆಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

error: Content is protected !!