Home Blog Page 3139

ಖ್ಯಾತ ಹಿರಿಯ ನಟಿ ಆರ್.ಸುಬ್ಬಲಕ್ಷ್ಮಿ ನಿಧನ

0

ಮಲೆಯಾಳಂನ ಹಿರಿಯ ನಟಿ ಆರ್.ಸುಬ್ಬಲಕ್ಷ್ಮಿ ನಿಧನರಾಗಿದ್ದಾರೆ. 87ರ ವಯಸ್ಸಿನ ಈ ಹಿರಿ ಜೀವ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸಿನಮಾ ರಂಗದಲ್ಲಿ ಮಾತ್ರವಲ್ಲ, ಚಿತ್ರಕಲೆ ಮತ್ತು ಸಂಗೀತ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಸುಬ್ಬಲಕ್ಷ್ಮಿ.

ಮಲಯಾಳಂನ ಅನೇಕ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿದ್ದ ಸುಬ್ಬಲಕ್ಷ್ಮಿ ಅವರು, ಇತ್ತೀಚಿನ ದಿನಗಳಲ್ಲಿ ಅಜ್ಜಿ ಪಾತ್ರಕ್ಕೆ ಫಿಕ್ಸ್ ಆಗಿದ್ದರು. ಸಾಕಷ್ಟು ಚಿತ್ರಗಳಲ್ಲಿ ಅಜ್ಜಿಯಾಗಿಯೇ ಫೇಮಸ್ ಆದವರು. ಪಾಂಡಿಪ್ಪ, ನಂದನಂ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು. ನಟಿಯ ನಿಧನಕ್ಕೆ ನಟರು ಮಾತ್ರವಲ್ಲ, ಕೇರಳದ ಮುಖ್ಯಮಂತ್ರಿಗಳು ಕೂಡ ಸಂತಾಪ ಸೂಚಿಸಿದ್ದಾರೆ. ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.

 

ಪಾರ್ಕಿಂಗ್ ವಿಚಾರಕ್ಕೆ ಅವಾಚ್ಯ ಶಬ್ಧಗಳಿಂದ ನಿಂದನೆ: ಯುವತಿ ದೂರು ಕೊಟ್ರೂ ಡೋಂಟ್ ಕೇರ್

0

ಬೆಂಗಳೂರು:- ಸಂಜಯ್ ನಗರ ಠಾಣಾ ವ್ಯಾಪ್ತಿಯಲ್ಲಿ ಮನೆ ಮುಂದೆ ಕಾರು ಪಾರ್ಕಿಂಗ್ ಮಾಡಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಅನಾಮಿಕ ವ್ಯಕ್ತಿ ಯುವತಿಗೆ ಕೆಟ್ಟ ಪದಗಳಿಂದ ನಿಂದಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಯುವತಿಯ ಸ್ನೇಹಿತರು ಸಮಾಧಾನ ಮಾಡುವ ಪ್ರಯತ್ನಪಟ್ಟರೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಯುವತಿ ಸ್ನೇಹಿತನಿಂದ ಎಕ್ಸ್ ನಲ್ಲಿ ಕಮಿಷನರ್ ಗೆ ಟ್ಯಾಗ್ ಮಾಡಿ ಸಂಜಯ್ ನಗರ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪೊಲೀಸರಿಗೆ ವಿಡಿಯೋ ಸಮೇತ ದೂರು ಕೊಟ್ಟರು ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದ ಬಗ್ಗೆ ಆರೋಪ ಮಾಡಲಾಗಿದೆ.

ಸರ್ಕಾರದಿಂದ ಗುಡ್ ನ್ಯೂಸ್..! ಹೊಸ ರೇಶನ್ ಕಾರ್ಡ್ ಅರ್ಜಿಗೆ ಅವಕಾಶ ಕಲ್ಪಿಸಿದ ಆಹಾರ ಇಲಾಖೆ

0

ಬೆಂಗಳೂರು: ಹೊಸ ರೇಷನ್ ಕಾರ್ಡ್ ಅರ್ಜಿ ಪಡೆಯುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಕೊಟ್ಟಿದೆ. ಏನಾಪ್ಪಾ ಅಂದ್ರೆ ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ ಕಲ್ಪಿಸಿದೆ. ಹೌದು ಆಹಾರ ಇಲಾಖೆ ಡಿಸೆಂಬರ್ 3ರಂದು ಹೊಸ ರೇಶನ್ ಕಾರ್ಡ್ ಅರ್ಜಿ‌ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಹೊಸ ರೇಶನ್ ಕಾರ್ಡ್ ಅರ್ಜಿಗೆ ಕೇವಲ ಒಂದು ದಿನವ ಅವಕಾಶ ಕೊಟ್ಟಿದ್ದು ಡಿಸೆಂಬರ್ 3ರಂದು 11ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಮಾತ್ರ ಅರ್ಜಿಗೆ ಕಾಲಾವಕಾಶ ನೀಡಲಾಗಿದೆ. ಹೆಚ್ಚಿನ ಅರ್ಜಿ ಸಲ್ಲಿಕೆ‌ಯಾಗುವ ಹಿನ್ನೆಲೆ ಕಡಿಮೆ ಸಮಯಾವಕಾಶ ಕೊಟ್ಟ ಆಹಾರ ಇಲಾಖೆ ಎಲ್ಲರಿಗೂ ಭಾನುವಾರ ಅರ್ಜಿ ಕೊಡುವ ಹಿನ್ನೆಲೆ ಅಂದೇ ಹೊಸ ರೇಷನ್ ಮಾಡಿಸಲು ಅವಕಾಶ ನೀಡಲಾಗಿದೆ.

 

ಹಣಕ್ಕಾಗಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಪುತ್ರ: ಮಗ ಅರೆಸ್ಟ್

0

ಕಲಬುರಗಿ :- ಹಣ ಕೊಡಲಿಲ್ಲ ಅಂತ ಹೆತ್ತ ತಾಯಿಯನ್ನೇ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಪಾಪಿ ಪುತ್ರ ಬಸವರಾಜ್ ಆರೋಪಿಯಾಗಿದ್ದು, ತನ್ನ ತಾಯಿ ರತ್ನಾಬಾಯಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ರಾಘವೇಂದ್ರ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ದೇವರ ಹೆಸರಲ್ಲಿ ಭವಿಷ್ಯ ಹೇಳ್ತಾ ಜೀವನ ಮಾಡ್ತಿದ್ದ ರತ್ನಾಬಾಯಿ ಕೆಲ ದಿನಗಳ ಹಿಂದಷ್ಟೇ ಕೊಲೆಯಾಗಿದ್ಲು. ಪ್ರಕರಣದ ಬೆನ್ನತ್ತಿದ ಪೋಲೀಸರು ವೃದ್ಧೆಯ ಮಗ ಹಾಗು ಕೊಲೆಗೆ ಸಹಕಾರ ನೀಡಿದ ಶರ್ಫುದ್ದೀನ್ ಇಬ್ಬರನ್ನು ಬಂಧಿಸಿದ್ದಾರೆ.

 

ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗ್ತಾರೆ: ಕೆಎಸ್​ ಈಶ್ವರಪ್ಪ

0

ಗದಗ:- ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗ್ತಾರೆ ಇದರಲ್ಲಿ ನೋ ಡೌಟ್ ಎಂದು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಲೋಕಸಭೆ ಚುನಾವಣೆ ಬಳಿಕ ಮತ್ತೆ ಡಿಸಿಎಂ ಡಿಕೆ ಶಿವಕುಮಾರ್​​ ಜೈಲಿಗೆ ಹೋಗುತ್ತಾರೆ. ಡಿಕೆ ಶಿವಕುಮಾರ್ ಮನೆಯಲ್ಲಿ ಸಿಬಿಐ ರೇಡ್ ಆದಾಗ ನೂರಾರು ಕೋಟಿ ರೂ. ಅಕ್ರಮ‌ ದಾಖಲೆಗಳು ಸಿಕ್ತು. ವಿಚಾರಣೆ ಮುಗಿದು ಚಾರ್ಜಶಿಟ್ ಹಾಕುವಂಥ ಸಂದರ್ಭ ಇತ್ತು. ತಮ್ಮ ಕೈಯಲ್ಲಿ ಸರ್ಕಾರ ಇದೆ ಅಂತಾ ಹೈಕಮಾಂಡ್ ಒತ್ತಡಕ್ಕೆ ಒಳಗಾಗಿದ್ದರು ಎಂದಿದ್ದಾರೆ.

ಹೈಕಮಾಂಡ್ ಕೈಗೊಂಬೆಯಾಗಿ ಡಿಕೆ ಶಿವಕುಮಾರ್​ ಮೇಲಿನ ಕೇಸನ್ನು ವಿತ್ ಡ್ರಾ ಮಾಡಿದರು. ತಾತ್ಕಾಲಿಕ ರಿಲೀಫ್ ಅಷ್ಟೇ ಸಿಕ್ಕಿದೆ. ಆದರೆ ಎಫ್​ಐಆರ್​ ವಿತ್ ಡ್ರಾ ಮಾಡಿಲ್ಲ. ಲೋಕಸಭೆ ಚುನಾವಣೆ ಬಳಿಕ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ.

ಐಟಿ, ಇಡಿ, ಸಿಬಿಐ ಇವೆಲ್ಲ ಸ್ವಾಯತ್ತ ಸಂಸ್ಥೆಗಳು. ಹಾಗಾದರೆ ಕಾಂಗ್ರೆಸ್‌ನಲ್ಲಿದ್ದು ಎಷ್ಟು ಬೇಕಾದರೂ ಲೂಟಿ‌ ಮಾಡಬಹುದಾ. ಯಾವುದೇ‌ ಕಾರಣಕ್ಕೂ ಕಾಂಗ್ರೆಸ್​ನವರನ್ನು ಮುಟ್ಟಬಾರದು ಅಂತ‌ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಇಡೀ ದೇಶದಲ್ಲಿ ಸಿಬಿಐನವರು ಎಲ್ಲ ಪಕ್ಷದವರನ್ನ ಮುಟ್ಟಿದ್ದಾರೆ. ಸಾವಿರಾರು‌ ಕೋಟಿ ರೂ. ಸಿಗುತ್ತಿರುವುದು ಕಾಂಗ್ರೆಸ್​ನಲ್ಲಿ ಎಂದು ಕಿಡಿಕಾರಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಪಸ್ ಬಿಜೆಪಿಗೆ ಬರಬೇಕು ಎನ್ನುವ ಅಪೇಕ್ಷೆಯಿದೆ. ಜಗದೀಶ ಶೆಟ್ಟರ್​ ನನ್ನ ಆತ್ಮೀಯ ಸ್ನೇಹಿತ. ಅವರಪ್ಪ ಕೂಡ ಬಿಜೆಪಿಯಲ್ಲಿದ್ದವರು. ಜನಸಂಘದಿಂದ ಕಾಲದಿಂದಲೂ‌ ಬಂದವರು. ಹಿಂದುತ್ವದ ರಕ್ತ ಅವರ ಮೈಯಲ್ಲಿ ಹರಿಯುತ್ತಿದೆ. ಇನ್ನೇನು ಸ್ವಲ್ಪ ದಿನಕ್ಕೆ ನಮ್ಮ ಕಡೆಗೆ ಬರುತ್ತಾರೆ ಎಂದು ಹೇಳಿದ್ದಾರೆ.

ನಿಮ್ಹಾನ್ಸ್’ನಲ್ಲಿ ಮಗು ಸಾವು ಘಟನೆ ಸಂಬಂಧ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು..?

0

ಬೆಂಗಳೂರು:– ನಿಮ್ಹಾನ್ಸ್​​ನಲ್ಲಿ ಮಗು ಸಾವು ಘಟನೆ ಸಂಬಂಧ ವರದಿ ಕೇಳಿದ್ದು, ಬಳಿಕ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಿಮ್ಹಾನ್ಸ್​ನಲ್ಲಿ ಹಾಸನ ಮೂಲದ ಮಗು ಸಾವು ಮತ್ತು ಪ್ರತಿಭಟನೆ ವಿಚಾರವಾಗಿ ವರದಿ ಕೇಳಿದ್ದೇನೆ. ಅಧಿಕಾರಿಗಳು ವರದಿ ಕೊಟ್ಟ ನಂತರ ಮುಂದೇನು ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ನಮ್ಮ‌ ಕಡೆಯಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಅಂತ ವೈದ್ಯರು ಹೇಳಿದ್ದಾರೆ. ಎರಡೂ ಕಡೆಯವರ ಜೊತೆ ಮಾತನಾಡುತ್ತೇವೆ. ಲೋಪಗಳು ಆಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ನಿಮ್ಹಾನ್ಸ್ ಮೇಲೆ ಬಹಳ ಒತ್ತಡ ಇದೆ. ಸಾಕಷ್ಟು ರೋಗಿಗಳು ರಾಜ್ಯಾದ್ಯಂತ ಬರುತ್ತಾರೆ. ಕೆಲವೊಮ್ಮೆ ಬೆಡ್​ಗಳು ಸಿಗಲ್ಲ. ನಾನೂ ಕೆಲವೊಮ್ಮೆ ಪ್ರಯತ್ನ ಪಟ್ಟಾಗ ಬೆಡ್ ಸಿಕ್ಕಿಲ್ಲ. ಇದಕ್ಕೆ ಏನದರೂ ಪರ್ಯಾಯ ವ್ಯವಸ್ಥೆ ಕುರಿತು ಚರ್ಚೆ ಮಾಡುತ್ತೇವೆ ಎಂದರು.

ಪತ್ನಿಗೆ ಚಾಕುವಿನಿಂದ ಇರಿದು ಆತ್ಮಹತ್ಯೆ ಮಾಡಿಕೊಂಡ ಪತಿ..!

0

ಮೈಸೂರು: ಪತ್ನಿಗೆ ಚಾಕುವಿನಿಂದ ಇರಿದು ಪತಿ ತಾನೂ ಆತ್ಮಹತ್ಯೆ ಮಾಡಿಕೊಂಡ‌ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಮುತ್ತಿನ ಮುಳ್ಸೋಗೆ ಗ್ರಾಮದಲ್ಲಿ ನಡೆದಿದೆ.

ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಶ್ವೇತ ಹಾಗೂ ಪ್ರಸನ್ನ ಒಂದೇ ಗ್ರಾಮದವರಾಗಿದ್ದರು. ಸಂಸಾರದಲ್ಲಿ ಸಾಮರಸ್ಯವಿಲ್ಲದ ಕಾರಣ ಬೇರೆಯಾಗಿದ್ದರು.

ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದೀಗ ಪತ್ನಿ ಶ್ವೇತಾಗೆ‌ ಮನಬಂದಂತೆ ಇರಿದ ಪ್ರಸನ್ನ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಸಂಬಂಧ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹಸುಗೂಸುಗಳ ಮಾರಾಟ ಜಾಲದ ಬಂಧನ ಕೇಸ್..! 6 ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ

0

ಬೆಂಗಳೂರು: ಹಸುಗೂಸು ಮಾರಾಟದ ಪ್ರಕರಣ ಸಂಬಂಧ ಆರೋಪಿಗಳು ಇದುವರೆಗೆ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ವಿಚಾರ ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಮಾರಾಟ ಮಾಡಿದ ಮಕ್ಕಳ ಪೈಕಿ 50-60 ಮಕ್ಕಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಿದರೆ, ಉಳಿದ ಮಕ್ಕಳನ್ನು ತಮಿಳುನಾಡಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ.

ಹಸುಗೂಸು ಮಾರಾಟ ಪ್ರಕರಣ ಸಂಬಂಧ ಬಂಧಿತ ಎಂಟು ಆರೋಪಿಗಳನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅದರಂತೆ, ಆರೋಪಿಗಳು ಕಳೆದ 6 ವರ್ಷಗಳಲ್ಲಿ 250 ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿದ ವಿಚಾರವನ್ನು ಬಾಯಿಬಿಟ್ಟಿದ್ದಾರೆ. ಪೈಕಿ ಕೇವಲ 50-60 ಮಕ್ಕಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಿದರೆ, ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟಮಾಡಿದ್ದಾರೆ.

ಆರೋಪಿಗಳು ವಿಚಾರವನ್ನು ಬಾಯಿಬಿಡುತ್ತಿದ್ದಂತೆ ಮತ್ತಷ್ಟು ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಕರ್ನಾಟಕದಲ್ಲಿ ಮಾರಾಟ ಆಗಿರುವ ಮಕ್ಕಳ ಬಗ್ಗೆ ಆರೋಪಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ 10 ಮಕ್ಕಳ ಸುಳಿವು ಸಿಕ್ಕಿದ್ದು, ಉಳಿದ ಮಕ್ಕಳನ್ನು ಎಲ್ಲಿ, ಯಾರಿಗೆ ಮಾರಾಟ ಮಾಡಲಾಗಿದೆ ಎಂದು ವಿಚಾರಣೆ ನಡೆಸುತ್ತಿದ್ದಾರೆ.

ಈ ವರ್ಷ ಹೊಸದಾಗಿ 188 ಇಂದಿರಾ ಕ್ಯಾಂಟೀನ್’ಗಳನ್ನು ಆರಂಭಿಸಲಾಗುತ್ತದೆ: ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ರಾಜ್ಯದ ಜನರ ಅನುಕೂಲಕ್ಕಾಗಿ ಈ ವರ್ಷ ಹೊಸದಾಗಿ 188 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಇಂದು ಶಾಸಕರ ಭವನದ ಆವರಣದಲ್ಲಿ ಸಂತ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,

ಬೆಂಗಳೂರಿನಲ್ಲಿ 225 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು. ಇದಲ್ಲದೇ ಅಗತ್ಯ ಇರುವ ಕಡೆ ಕ್ಯಾಂಟೀನ್ ಆರಂಭಿಸಲಾಗುವುದು. ಇಂದಿರಾ ಕ್ಯಾಂಟೀನ್‌ಗೆ ಜಾಗದ ಕೊರತೆ ಇರುವ ಕಡೆ ಸಂಚಾರಿ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು ಎಂದರು.

ರಾಜ್ಯದ ಜನತೆಗೆ ಕನಕದಾಸ ಜಯಂತಿಯ ಶುಭಾಶಯ ಕೋರಿದ ಸಿಎಂ, ”ಕನಕದಾಸರು ಸಮಾಜ ಸುಧಾರಕರಾಗಿದ್ದರು. ಸಾಹಿತ್ಯದ ಮೂಲಕ ಮಾನವೀಯತೆ ಸಾರಿದ್ದರು.ವಿಶ್ವಮಾನವನ ಜಯಂತಿಯನ್ನು ಇಂದು ಸರ್ಕಾರ ಆಚರಿಸುತ್ತಿದೆ’ ಎಂದು ಹೇಳಿದರು.

ಲೈಂಗಿಕ ಕಿರುಕುಳದ ಆರೋಪ: ವಿಮ್ಸ್ ನಿರ್ದೇಶಕ ಸೇರಿ ಮೂವರ ವಿರುದ್ಧ ದೂರು!

0

ಬಳ್ಳಾರಿ : ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆ ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಸೇರಿ ಮೂವರ ವಿರುದ್ಧ ದೂರು ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ವಿಮ್ಸ್ ಆಸ್ಪತ್ರೆಯ ಟ್ರಾಮಾಕೇರ್‌ನಲ್ಲಿ ಸಿಸ್ಟಂ ಇನ್‌ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆನ್ನುವ ಮಾಹಿತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನೇಮಕಾತಿ ಆದೇಶ ಪ್ರತಿ ನೀಡುವಂತೆ ನಿರ್ದೇಶಕರ ಕಚೇರಿಗೆ ಹೋಗಿದ್ದ ಮಹಿಳೆಗೆ ಪತ್ರ ನೀಡುವ ವೇಳೆ ಕೈ ಚಾಚಿ ಅಪ್ಪಿಕೊಳ್ಳಲು ಪ್ರಯತ್ನಿಸಿದ ವೇಳೆ ಹೊರಗಡೆ ಓಡಿ ಬಂದಿರುವುದಾಗಿ ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ. ಅಲ್ಲದೆ ಟ್ರಾಮಾಕೇರ್ ಸೂಪರಿಡೆಂಟ್ ಡಾ.ಶಿವುನಾಯ್ಕ, ಟ್ರಾಮಾ ಕೇರ್‌ನಲ್ಲಿ ಕೆಲಸಮಾಡುತ್ತಿರುವ ಮಹಿಳೆಯೊಬ್ಬರ ಮೇಲೂ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನ.27ರಂದು ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!