Home Blog Page 3140

ಮಂಡ್ಯ: ಒಂಟಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಆರೋಪಿ ಬಂಧನ

0

ಮಂಡ್ಯ: ರಸ್ತೆಯಲ್ಲಿ ಹೋಗುತ್ತಿದ್ದ ಒಂಟಿ ಮಹಿಳೆಯರಿಗೆ  ಬೈಕ್’​​ನಲ್ಲಿ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಮಂಡ್ಯ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆರಗೋಡು ಗ್ರಾಮದ ಚಂದ್ರಶೇಖರ್ ಆರಾಧ್ಯ (35)ಬಂಧಿತ ಆರೋಪಿ. ಚಂದ್ರಶೇಖರ ಹೆಲ್ಮೆಟ್ ಧರಿಸಿ ಬೈಕ್​ನಲ್ಲಿ ಬಂದು ರಸ್ತೆಯಲ್ಲಿ ಹೋಗ್ತಿದ್ದ ಒಂಟಿ ಮಹಿಳೆಯರಿಗೆ ಕಿರುಕುಳ‌ ಕೊಡುತ್ತಿದ್ದನು. ಚಂದ್ರಶೇಖರ ಕಳೆದ ಒಂದು ತಿಂಗಳಿಂದ ಹಲವೆಡೆ ವಿಕೃತವಾಗಿ ನಡೆದುಕೊಂಡಿದ್ದನು.

ಬುಧವಾರ ಸಂಜೆ ರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದಾನೆ. ಈ ವೇಳೆ ಆರೋಪಿಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರಿಂದ ಮಾಹಿತಿ ಪಡೆದ ಪೊಲೀಸರು ಸಿಸಿಕ್ಯಾಮರಾ ದೃಶ್ಯಾವಳಿ ಆಧರಿಸಿ ಚಂದ್ರಶೇಖರ್​ನನ್ನು ಬಂಧಿಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭ್ರೂಣ ಹತ್ಯೆ ಅಮಾನವೀಯ ಘಟನೆ: ಹೆಚ್ ಡಿ ಕುಮಾರಸ್ವಾಮಿ

0

ಬೆಂಗಳೂರು:- ಭ್ರೂಣ ಹತ್ಯೆ ಒಳ್ಳೆಯ ಬೆಳವಣಿಗೆ ಅಲ್ಲ. ಇದೊಂದು ಅಮಾನವೀಯ ಘಟನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಭ್ರೂಣ ಹತ್ಯೆ ಪ್ರಕರಣ ನಡೆದಿರುವುದು ಅಮಾನವೀಯ. ಈ ಪ್ರಕರಣದಿಂದಾಗಿ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಇಂತಹ ಅಮಾನವೀಯ ಕೆಲಸಗಳಿಗೆ ಬೆಂಬಲ ಕೊಡಬಾರದು. ಇದು ನಮ್ಮ ವೈವಸ್ಥೆಯ ವೈಫಲ್ಯ. ಮುಂದೆ ಈ ರೀತಿಯ ಪ್ರಕರಣ ಮರುಕಳಿಸದಂತೆ ಮನವಿ ಮಾಡುತ್ತೇನೆ ಎಂದರು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. 21ನೇ ಶತಮಾನದಲ್ಲೂ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಮನೋಭಾವ ಸರಿಯಲ್ಲ ಎಂದರು.

ಇನ್ನೂ ರಾಜ್ಯ ಸರ್ಕಾರವು ಬರ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಸಚಿವರುಗಳ ಮೇಲಿನ ಆರೋಪಗಳ ಕುರಿತು ಬೆಳಗಾವಿ ಅಧಿವೇಶನದ್ಲಲಿ ಬಿಜೆಪಿ ಜೊತೆಗೂಡಿ ಜಂಟಿ ಹೋರಾಟ ನಡೆಸುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಬರ ನಿರ್ವಹಣೆ ಮಾಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ. ಈ ಬಗ್ಗೆ ನನಗೆ ತಿಳುವಳಿಕೆ ಇಲ್ಲ ಎಂದು ಅವರು ಹೇಳಿದ್ದಾರೆ. ಹಾಗಾದರೆ ಬರ ನಿರ್ವಹಣೆ ವಿಷಯದಲ್ಲಿ ಅವರು ಏನು ಆಡಿದ್ದಾರೆ ಎಂಬುದನ್ನು ಹೇಳಲಿ ಎಂದರು.

ತಾಯಿಯ ಸ್ಥಾನದಲ್ಲಿ ನಿಂತು ನಿಮ್ಮ ಬೇಡಿಕೆ ಈಡೇರಿಸುತ್ತೇನೆ: ವಿಶೇಷಚೇತನ ಮಕ್ಕಳಿಗೆ ಸಚಿವೆ ಹೆಬ್ಬಾಳಕರ್ ಭರವಸೆ.

0

ಬೆಳಗಾವಿ : ವಿಶೇಷಚೇತನ ಮಕ್ಕಳೆಂದರೆ ದೇವರ ಮಕ್ಕಳು, ಕರುಣಾಮಯಿಗಳು, ನಿಮ್ಮ ಉಜ್ವಲ ಭವಿಷ್ಯಕ್ಕೆ ಸರ್ಕಾರ ಕಂಕಣಬದ್ಧವಾಗಿ ನಿಲ್ಲುತ್ತದೆ. ತಾಯಿಯ ಸ್ಥಾನದಲ್ಲಿ ನಿಂತು ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗುದುಕೊಳ್ಳುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿಯಲ್ಲಿ ಬುಧವಾರ ವಿಕಲಚೇತನರ ಕ್ರೀಡಾಸ್ಪರ್ಧೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು. ವಿಕಲಚೇತನರು ಯಾವುದೇ ವಿಷಯದಲ್ಲಿ ಹಿಂದೆ ಉಳಿಯಬಾರದೆಂದು ಇಲಾಖೆ ನಿರಂತರವಾಗಿ ನಿಮ್ಮ ಜೊತೆ ನಿಂತು ಕೆಲಸ ಮಾಡುತ್ತಿದೆ. ಇಲಾಖೆಯಿಂದ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. ನಿಮಗೆ ಸಂಬAಧಿಸಿದ ಯಾವುದೇ ಪ್ರಸ್ತಾವಣೆಗಳು ೨೪ ಗಂಟೆಗಳಲ್ಲಿ ಕ್ಲಿಯರ್ ಆಗಬೇಕೆಂದು ಸೂಚನೆಯನ್ನು ನೀಡಿದ್ದೇನೆ ಎಂದ ಸಚಿವರು, ಈ ವಿಶೇಷ ಮಕ್ಕಳ ಭವಿಷ್ಯದ ಸಲುವಾಗಿ ಕೆಲಸ ಮಾಡುತ್ತಿರುವ ಎಲ್ಲ ಶಿಕ್ಷಕರಿಗೂ ಸಹ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಯುವಸಬಲೀಕರ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ವಿಕಲಚೇತನರ ಇಲಾಖೆಯ ಕಲ್ಯಾಣಾಧಿಕಾರಿ ನಾಮದೇವ ಬಿಳ್ಕರ್, ಯುವರಾಜ ಕದಂ, ಶಂಕರಗೌಡ ಪಾಟೀಲ, ವಿಶೇಷ ಚೇತನ ಶಾಲೆಗಳ ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಬಾಯ್‌ಫ್ರೆಂಡ್ ಫೋನ್ ನಲ್ಲಿ 13 ಸಾವಿರ ನಗ್ನ ಫೋಟೋ: ಠಾಣೆ ಮೆಟ್ಟಿಲೇರಿದ ಯುವತಿ

0

ಬೆಂಗಳೂರು:- ಬಾಯ್‌ಫ್ರೆಂಡ್ ಫೋನ್‌ನಲ್ಲಿ ತನ್ನ ಹಾಗೂ ವಿವಿಧ ಮಹಿಳೆಯರ 13 ಸಾವಿರ ನಗ್ನ ಫೋಟೋಗಳನ್ನು ಕಂಡ ಯುವತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ವೈಟ್ ಫೀಲ್ಡ್ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಯುವತಿಯು ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕಳೆದ ನಾಲ್ಕು ತಿಂಗಳನಿಂದ ಯುವಕನೊಬ್ಬನೊಂದಿಗೆ ಸಂಬಂಧದಲ್ಲಿದ್ದರು. ಆತ ಸಹ ಐದು ತಿಂಗಳುಗಳಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಇಬ್ಬರು ಸಂಬಂಧದಲ್ಲಿದ್ದ ಸಂದರ್ಭದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ತಮ್ಮಿಬ್ಬರ ಕೆಲ ಆತ್ಮೀಯ ಕ್ಷಣಗಳ ವಿಡಿಯೋವನ್ನ ಸಂತ್ರಸ್ತೆ ಡಿಲೀಟ್ ಮಾಡಲು ಮುಂದಾಗಿದ್ದರು. ಪ್ರಿಯತಮನ ಫೋನ್ ಅನ್ನು ಆತನಿಗೆ ತಿಳಿಯದೇ ತೆಗೆದುಕೊಂಡು ಫೋಟೋ ಗ್ಯಾಲರಿ ತೆರೆದಿದ್ದರು.

ಈ ವೇಳೆ ತನ್ನ, ತನ್ನ ಸಹದ್ಯೋಗಿಯೊಬ್ಬಳು ಸೇರಿದಂತೆ ವಿವಿಧ ಮಹಿಳೆಯರ ಸುಮಾರು 13 ಸಾವಿರ ನಗ್ನ ಫೋಟೋಗಳು ಆತನ ಫೋನ್​​ನಲ್ಲಿ ಪತ್ತೆಯಾಗಿವೆ.

ಈ ಎಲ್ಲ ಫೋಟೋಗಳನ್ನ ನೋಡಿ ವಿಚಲಿತಳಾದ ಆಕೆ ತಕ್ಷಣ ಆತನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾಳೆ. ಅಲ್ಲದೇ ತಕ್ಷಣವೇ ಕಂಪನಿಯ ಲೀಗಲ್ ಎಕ್ಸಿಕ್ಯುಟಿವ್​ಗೆ ಮಾಹಿತಿ ರವಾನಿಸಿದ್ದಾರೆ. ಅದರನ್ವಯ‌ ನವೆಂಬರ್ 23ರಂದು‌ ಕಂಪನಿಯ ಪ್ರತಿನಿಧಿಯೊಬ್ಬರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು‌ ಬಂಧಿಸಿದ್ದಾರೆ.

ಪದವಿ ಪಡೆದಿದ್ದ ಕೇರಳ ಮೂಲದ ವಿದ್ಯಾರ್ಥಿ ಹಾವು ಕಡಿದು ಸಾವು!

0

ತುಮಕೂರು: ರಾಜ್ಯದಲ್ಲಿ ಹಾವು ಕಡಿತಕ್ಕೆ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪದವಿ ಪಡೆದ ವಿದ್ಯಾರ್ಥಿ ಹಾವು ಕಡಿದು ಸಾವನ್ನಪ್ಪಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ನಿನ್ನೇ ಸಾಹೇ ಘಟಿಕೋತ್ಸವದಲ್ಲಿ ಪದವಿ ಪಡೆದಿದ್ದ ಕೇರಳ ಮೂಲದ ಅದಿತ್ ಬಾಲಕೃಷ್ಣನ್ ವಿದ್ಯಾರ್ಥಿಯಾಗಿದ್ದು,

ನಿನ್ನೇ ಪಾರ್ಕಿನಲ್ಲಿ ಹಾವು ಕಡಿದಿರುವ ಶಂಕೆಯಾಗಿದೆ. ಹಾವು ಕಡಿತ ಗಮನಿಸದೇ ಮನೆಗೆ ಬಂದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮೃತನ ಶವ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಾವು ಯಾವುದೇ ಆಪರೇಷನ್ ಕಮಲ ಮಾಡಲ್ಲ: ಎಂ ಪಿ ರೇಣುಕಾಚಾರ್ಯ

0

ದಾವಣಗೆರೆ: ಸ್ವಯಂಕೃತ ಅಪರಾಧದಿಂದ ಸರ್ಕಾರ ಪತನವಾಗತ್ತೆ. ನಾವು ಯಾವುದೇ ಆಪರೇಷನ್ ಕಮಲ ಮಾಡಲ್ಲ. ಆಡಳಿತ ವೈಫಲ್ಯದಿಂದ ಕಾಂಗ್ರೆಸ್ ಶಾಸಕರೇ ರಾಜೀನಾಮೆ ನೀಡುತ್ತಾರೆ ಎಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ದಲ್ಲಿ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಚುನಾವಣೆ ಮುಂಚೆ ಘೋಷಣೆಗಳನ್ನ ಮಾಡಿದ್ದರು. ಆದ್ರೆ, ಯಾವುದು ಸರಿಯಾಗಿ ಜಾರಿ ಮಾಡಲಿಲ್ಲ ಇದರಿಂದ ಮಹಿಳೆಯರು ಸೇರಿ ಎಲ್ಲರು ಬೇಸತ್ತು ಹೋಗಿದ್ದಾರೆ.

ಇನ್ನೂ ಸಚಿವ ಜಮೀರ್ ಅಹ್ಮದ್ ವಿರುದ್ದ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಜಮೀರ್ ಅಹ್ಮದ್ ಒಬ್ಬ ಹುಚ್ಚ ಆತ ಹುಚ್ಚನಂತೆ ಮಾತನಾಡುತ್ತಾನೆ. ಪುಲ್ವಾಮ ಘಟನೆ ಮತ್ತು ನರೇಂದ್ರ ಮೋದಿ ಆಡಳಿತವನ್ನ ಬ್ರಿಟಿಷ್ ರಿಗೆ ಹೋಲಿಕೆ ಮಾಡುತ್ತಾರೆ. ಶಾಸಕ ಬಾಲಕೃಷ್ಣ ಗೆ ನಾಚಿಕೆ ಆಗಬೇಕು, ರಾಜ್ಯದ ಜನರ ಕ್ಷಮೆ ಕೇಳಬೇಕು. ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಅಂತಾರೆ, ಕೆಲ ಶಾಸಕರು ಇಂಥವರೇ ಸಿಎಂ ಆಗಬೇಕೆಂದು ಹೇಳುತ್ತಿದ್ದಾರೆ. ಶಕ್ತಿ ಯೋಜನೆಗೆ ಬಸ್ ಇಲ್ಲ ಮಹಿಳೆಯಾರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಎಂ ಪಿ ರೇಣುಕಾಚಾರ್ಯ ಕಿಡಿಕಾರಿದರು.

ಖದೀಮರ ಕೈ ಚಳಕ: ದೇವಸ್ಥಾನದ ಬೆಳ್ಳಿ ಕಿರೀಟ, ಚಿನ್ನದ ಸರ ಕಳ್ಳತನ

0

ಶಿರಹಟ್ಟಿ: ದೇವಸ್ಥಾನವೊಂದರ ಬೀಗ ಮುರಿದ ಕಳ್ಳರು, ಚಿನ್ನದ ಸರ ಹಾಗೂ ಬೆಳ್ಳಿ ಕಿರೀಟವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳಲಮ್ಮ ದೇವಸ್ಥಾನದಲ್ಲಿ ಈ ಕಳ್ಳತನ ಜರುಗಿದ್ದು, ಅಂದಾಜು ಒಂದು ಕೆಜಿ ತೂಕದ ಬೆಳ್ಳಿ ಕಿರೀಟ, 20 ಗ್ರಾಂ ಚಿನ್ನದ ಸರ ಕಳ್ಳತನ ಮಾಡಲಾಗಿದೆ.

ದೇವಸ್ಥಾನ ನವೀಕರಣ ಮಾಡಲಾಗುತ್ತಿದ್ದು, ಸಿಸಿ ಟಿವಿ ಬಂದ್ ಮಾಡಲಾಗಿದೆ.

ಸಿಸಿಟಿವಿ ಬಂದ್ ಆಗಿದ್ದನ್ನು ಗಮನಿಸಿ ಖದೀಮರು ಈ ಕೃತ್ಯ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಶಿರಹಟ್ಟಿ ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್ಐ ರಿತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೈಕ್ ಅಪಘಾತದಲ್ಲಿ ಪೊಲೀಸ್ ಪೇದೆ ಸಾವು..!

0

ತುಮಕೂರು:-ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟ ಬಳಿ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಪೊಲೀಸ್ ಪೇದೆ ಸೇರಿ ಇಬ್ಬರು ಸಾವನ್ನಪ್ಪಿದ ಘಟನೆ ಜರುಗಿದೆ. ಮಹೇಶ್,ಚಂದ್ರಯ್ಯ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು. ಮೃತ ಮಹೇಶ್,ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಪೇದೆ ಎನ್ನಲಾಗಿದೆ. ನಿನ್ನೆ ತಡರಾತ್ರಿ ಸಂಬಂಧಿಗಳ ಮದುವೆಗೆ ಮೂವರು ಬಂದಿದ್ದರು.

ಮದುವೆ ಮುಗಿಸಿ ಬೈಕ್ ನಲ್ಲಿ ವಾಪಸ್ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಮೇಲೆ ಬಿದ್ದು ಅಪಘಾತ ಸಂಭವಿಸಿದೆ. ಬೈಕ್ ನಲ್ಲಿದ್ದ ಮತ್ತೋರ್ವ ಗಾಯಾಳು ಭರತ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಷ್ಠಿತ ಬ್ರಾಂಡ್ ಹೆಸರನ್ನ ನಕಲಿಸಿ ಬಟ್ಟೆ ಮಾರಾಟ: ಸಿಸಿಬಿ ದಾಳಿ

0

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಷ್ಠಿತ ಬ್ರಾಂಡ್ ಹೆಸರನ್ನ ನಕಲಿಸಿ ಬಟ್ಟೆ ಮಾರುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ದಾಳಿ ನಡೆಸಿದೆ. ರಾಜಧಾನಿ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಸಿಸಿಬಿ ಜಪ್ತಿ ಮಾಡಿದೆ. ದಾಳಿ ವೇಳೆ ಬರೋಬ್ಬರಿ1.5ಕೋಟಿ ಮೌಲ್ಯದ ಬಟ್ಟೆಯನ್ನು ಸಿಸಿಬಿ ಸೀಜ್ ಮಾಡಿದೆ. ಅರ್ಮನಿ, ಬರ್ಬರಿ, ಗ್ಯಾಂಟ್ ಸೇರಿದಂತೆ ಪ್ರತಿಷ್ಠಿತ ಬ್ರಾಂಡ್ ಗಳ ಬಟ್ಟೆ ಎಂದು ಅಕ್ರಮ ಮಾರಾಟ ಮಾಡಲಾಗುತ್ತಿತು.

ಪಟೆಲ್ ಎಕ್ಸ್ಪೋರ್ಟ್ ಹಾಗೂ ಆರ್ ಬಿ ಫ್ಯಾಷನ್ ಗೋಡೌನ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ವೇಳೆ ಬೇರೆ ಬೇರೆ ಕಡೆಯೂ ಇದೇ ರೀತಿ ಫೇಕ್ ಬ್ರಾಂಡ್ ಗೋಡೌನ್ ಹೊಂದಿರೋದು ಬೆಳಕಿಗೆ ಬಂದಿದೆ. ಎಸ್ ಆರ್ ನಗರ, ಮಾಗಡಿ ರೋಡ್, ಬೇಗೂರು ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ನಕಲಿ ಬ್ರಾಂಡ್ ಬಟ್ಟೆಯ ಗೋಡೌನ್ ಇರೋದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಸಿಸಿಬಿ ಟೀಮ್ ತನಿಖೆ ಮುಂದುವರೆಸಿದೆ.

BREAKING: ಬೆಳ್ಳಂಬೆಳಗ್ಗೆ ಸಿನಿಮೀಯ ರೀತಿಯಲ್ಲಿ ಶಾಲಾ ಶಿಕ್ಷಕಿ ಅಪಹರಣ

0

ಹಾಸನಮದುವೆಯಾಗಲು ನಿರಾಕರಿಸಿದಳೆಂದು ದುರುಳರು ಶಾಲಾ ಶಿಕ್ಷಕಿಯನ್ನೇ ಅಪಹರಿಸಿರುವ ಘಟನೆ ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಇಂದು ಬೆಳಗ್ಗೆ ನಡೆದಿದೆ. ಅರ್ಪಿತಾ, ಅಪಹರಣಕ್ಕೊಳಗಾದ ಶಿಕ್ಷಕಿ.

ಶಿಕ್ಷಕಿ ಕೆಲಸ ಮಾಡುತ್ತಿದ್ದ ಶಾಲೆ ಮುಂಭಾಗ ದುರುಳರು ಅಪಹರಿಸಿದ್ದಾರೆ.ಇನ್ನೋವಾ ಕಾರಿನಲ್ಲಿ ಬಂದು ಅಪಹರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶಿಕ್ಷಕಿ ಪ್ರತಿರೋಧ ತೋರಿದರೂ ಕಿರಾತಕರು ಬಿಟ್ಟಿಲ್ಲ. ಕಳೆದ 15 ದಿನಗಳ ಹಿಂದೆ ಅರ್ಪಿತಾಳ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಮಾಡಲು ಮನೆಗೆ ಬಂದಿದ್ದ ರಾಮು ಎಂಬ ವ್ಯಕ್ತಿ ಮತ್ತವನ ಪೋಷಕರು ಅಪಹರಣ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇವರು ಅರ್ಪಿತಾ ಸಂಬಂಧಿ ಎಂದು ಹೇಳಲಾಗಿದೆ. ಮದುವೆ ಪ್ರಸ್ತಾಪ ಮಾಡಿದಾಗ, ಅರ್ಪಿತಾ ಹಾಗೂ ಮನೆಯವರು ಒಪ್ಪಿಗೆ ನೀಡಿಲ್ಲ. ಮದುವೆಗೆ ಒಪ್ಪಲಿಲ್ಲವೆಂದು ಅಪಹರಣಕ್ಕೆ ಸಂಚು ರೂಪಿಸಿದ್ದ ಕಿರಾತಕರು, ಇಂದು ಬೆಳಗ್ಗೆ ಎಂದಿನಂತೆ ಶಿಕ್ಷಕಿ ಅರ್ಪಿತಾ ಶಾಲೆಗೆ ಹೊರಟ ಸಂದರ್ಭದಲ್ಲಿ ಇನ್ನೋವಾ ಕಾರಿನಲ್ಲಿ ಬಂದ ದುರುಳರು ಅಪಹರಿಸಿದ್ದಾರೆ.

ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

error: Content is protected !!