Home Blog Page 3141

ಯುವಕ ಯುವತಿಯರೇ ಎಚ್ಚರ..! ಕೆಲಸ ಕೊಡಿಸೋ ನೆಪದಲ್ಲಿ 20 ಕೋಟಿ ಪಂಗನಾಮ..!

0

ಬೆಂಗಳೂರು : ಅದೊಂದು ಖತರ್ನಾಕ್ ಗ್ಯಾಂಗ್. ಆಂದ್ರ ಮೂಲದ ನಿರುದ್ಯೋಗ ಯುವಕ , ಯುವತಿಯರನ್ನೇ ಟಾರ್ಗೆಟ್ ಮಾಡ್ತಿದ್ರು. ಕೆಲಸ ಕೊಡಿಸ್ತೀವಿ ಅಂತಾ ಲಕ್ಷ ಲಕ್ಷ ಹಣ ಪೀಕಿ ಪರಾರಿಯಾಗಿದ್ರು. ಅದೇ ಗ್ಯಾಂಗ್ ಈಗ ಪೊಲೀಸರ ಬಲೆಗೆ ಬಿದ್ದಿದ್ದೆ. ಹೌದು ಕೆಲಸ ಕೊಡಿಸುವ ನೆಪದಲ್ಲಿ ನಿರುದ್ಯೋಗಿ ಯುವಕ, ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಲಕ್ಷ ಲಕ್ಷ ಹಣ ಪೀಕಿ ಪಂಗನಾಮ ಹಾಕುತ್ತಿದ್ದ ಗ್ಯಾಂಗ್‌ ಪೊಲೀಸರಿಗೆ ಅಥಿತಿಯಾಗಿದ್ದಾರೆ.

ಆಂಧ್ರಮೂಲದ  ಪವನ್ ಕುಮಾರ್ ಕೊಲ್ಲಿ ಎಂಬಾತ ಸಾಮಾನ್ಯದವನಲ್ಲ. ಕೆಲಸ ಅರಸಿ ಬರುವ ಆಂದ್ರ ಮೂಲದವ್ರೇ ಈತನ ಟಾರ್ಗೆಟ್. ಕೆಲಸ ಕೊಡಿಸ್ತೀನಿ ಅಂತಾ ಒಂದು ಸಾವಿರಕ್ಕೂ ಅಧಿಕ ಜನರಿಂದ ಲಕ್ಷ ಲಕ್ಷ ಪೀಕಿ ಸುಮಾರು 20 ಕೋಟಿಗೂ ಅಧಿಕ ಹಣ ಪಡೆದು ಪಂಗನಾಮ ಹಾಕಿದ್ದಾನೆ.

ಕಂಪನಿ ಸೇರಿಕೊಳ್ಳಲು ಮೂವತ್ತು ಜನ ಹಣದೊಂದಿಗೆ ರೆಡಿ ಇದ್ದಾರೆ. ಬೆಂಗಳೂರು ಬಂದರೆ ಕೆಲಸ ಆಗುತ್ತೆ ಅಂತಾ ಹೇಳಿದ್ದೆ ತಡ. ದೆಹಲಿಯಲ್ಲಿ ಅವತಿದ್ದ ಈತ ತಕ್ಷಣ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಪ್ರತ್ಯಕ್ಷವಾಗಿಬಿಟ್ಟಿದ್ದ.‌ ಸಿಕ್ಕಿದ್ದೇ ಚಾನ್ಸ್ ಅಂದುಕೊಂಡವರು ಆತನನ್ನ ಲಾಕ್ ಮಾಡಿ ಲಾಡ್ಜ್ ವೊಂದರಲ್ಲಿ ಕೂಡಿಹಾಕಿದ್ರು.

ಅಲ್ಲಿಯೂ ಚಾಲಾಕಿ ಬುದ್ಧಿ ತೋರಿದ ಆಸಾಮಿ ಡಯಲ್ 112 ಗೆ ಕರೆ ಮಾಡಿ ನನ್ನನ್ನ ಕಿಡ್ನಾಪ್ ಮಾಡಿದ್ದಾರೆ ಕಾಪಾಡಿ ಎಂದು ಪುಂಗಿ ಊದಿದ್ದನು. ವೈಟ್ ಫೀಲ್ಡ್ ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಅಸಲಿಯತ್ತು ಬಯಲಾಗಿದೆ.

ಸಂತ್ರಸ್ಥರಿಂದ ಹಣ ಪಡೆದು ಆರೋಪಿ ಪವನ್ ಕುಮಾರ್ ಕೊಲ್ಲಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ. ಪವನ್ ಬಂಧನವಾಗಿದ್ದು ಉಳಿದಿಬ್ಬರು ಆರೋಪಿಗಳಾದ ಮಧು ಮತ್ತು ರತ್ನಕಾಂತ್ ಬಂಧನಕ್ಕೆ ಬಲೆ ಬೀಸಲಾಗಿದೆ.

ನನ್ನ ಮೇಲೆ, ನಮ್ಮವರ ರೇಡ್ ಮಾಡಿ ಕೊಡಬಾರದ ಹಿಂಸೆ ಕೊಟ್ರು: ಡಿ.ಕೆ. ಶಿವಕುಮಾರ್

0

ಬೆಂಗಳೂರು : ನನಗೆ ಏನು ಗೊತ್ತಿಲ್ಲ, ನಾನೀಗ ಸಮ್ಮಿಟ್ ಅಲ್ಲಿ ಇದ್ದೀನಿ. ಕರ್ನಾಟಕ ಸಮೃದ್ಧ ಮಾಡುವ ಸಲುವಾಗಿ ನಾವೆಲ್ಲರೂ ಪ್ರಯತ್ನ ಪಡುತಿದ್ದೇವೆ. ಸಾವಿರಾರು ಜನ ದೇಶ-ವಿದೇಶದಿಂದ ಇಲ್ಲಿಗೆ ಬಂದಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 370 ಜನ ಸಿಆರ್​ಪಿಎಫ್ ಪೊಲೀಸರನ್ನ ಕರೆದುಕೊಂಡು ಬಂದಿದ್ರು. ಈಗಲ್ಟನ್ ನಲ್ಲಿ ನನ್ನ ಮೇಲೆ, ನಮ್ಮವರ ಮೇಲೆ ರೇಡ್ ಮಾಡಿದ್ರು. ನನಗೆ ಕೋರ್ಟ್ ಮೇಲೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ನನಗೆ ಕೊಡಬಾರದ ನೋವು ಕೊಟ್ಟಿದ್ದಾರೆ. ಈಗಲ್ಟನ್ ರೆಸಾರ್ಟ್​ನಲ್ಲಿ ನಾನು ಪಕ್ಷದ ಕೆಲಸವೇ ಮಾಡಿದ್ದು, ರೇಡ್ ಮಾಡಿ ಕೊಡಬಾರದ ಹಿಂಸೆ ಕೊಟ್ರು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನನಗೆ ಏನು ಗೊತ್ತಿಲ್ಲ, ನಾನೀಗ ಸಮ್ಮಿಟ್ ಅಲ್ಲಿ ಇದ್ದೀನಿ. ಕರ್ನಾಟಕ ಸಮೃದ್ಧ ಮಾಡುವ ಸಲುವಾಗಿ ನಾವೆಲ್ಲರೂ ಪ್ರಯತ್ನ ಪಡುತಿದ್ದೇವೆ. ಸಾವಿರಾರು ಜನ ದೇಶ-ವಿದೇಶದಿಂದ ಇಲ್ಲಿಗೆ ಬಂದಿದ್ದಾರೆ. ನ್ಯಾಯಾಲಯದಲ್ಲಿ ಏನಾಗಿದೆ ಅಂತ ಗೊತ್ತಿಲ್ಲ. ಸೋ ನಾನು ಮಾತನಾಡಲ್ಲ. ಎಲ್ಲರ ಮಾತನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ, ಸಮಯ ಬಂದಾಗ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.

ಇವತ್ತು ಚುನಾವಣೆ ನಡೆದರೂ ರಾಜ್ಯದಲ್ಲಿ 135-136 ಬಿಜೆಪಿ ಸೀಟು ಬರುತ್ತದೆ: ಬಿ.ಎಸ್ ಯಡಿಯೂರಪ್ಪ

0

ಬೆಂಗಳೂರು:  ಬಿ.ವೈ ವಿಜಯೇಂದ್ರ  ಅವರು ರಾಜ್ಯಾಧ್ಯಕ್ಷರಾದ ಬಳಿಕ ರಾಜ್ಯದ ಉದ್ದಗಲಕ್ಕೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಅಲ್ಲದೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಮಾತನಾಡಿದ ಅವರು,

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಅಧಿಕಾರಕ್ಕೆ ಇರಲು ಹಕ್ಕಿಲ್ಲ ರಾಜೀನಾಮೆ ಕೊಟ್ಟು ಹೋಗಿ ಅಂತಿದ್ದಾರೆ ಎಂದರು.

ಇವತ್ತು ಚುನಾವಣೆ ನಡೆದರೂ ರಾಜ್ಯದಲ್ಲಿ 135-136 ಬಿಜೆಪಿ ಸೀಟು ಬರುತ್ತದೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಅಂತಹ ವಾತಾವರಣ ಸೃಷ್ಟಿಯಾಗಿದೆ. ಮಾಧ್ಯಮದಲ್ಲಿ ಬಂದ ವರದಿ ಆಧಾರದ ಮೇಲೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಈಗ ಚುನಾವಣೆ ನಡೆದರೂ ಸ್ಪಷ್ಟ ಬಹುಮತ ಬರೋದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಬಿ.ಆರ್ ಪಾಟೀಲ್ ಪತ್ರ ವಿಚಾರ: ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದೇನು..?

0

ಬೆಂಗಳೂರು : ಸಚಿವರು ಹೆದರಿಸುತ್ತಿದ್ದಾರೆ. ಮಂತ್ರಿಗಳು ಮಾತ್ರವಲ್ಲ ಅವರ ಪಿಎಗಳೂ ಕೂಡ ಓಪನ್ ಆಗಿ ದಂಧೆ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನೆಮ್ಮದಿಯ ಸರ್ಕಾರ ಅಂತ ಹೇಳುತ್ತಿದ್ದಾರೆ. ನೆಮ್ಮದಿ ಕಳೆದುಕೊಂಡು ಕೂತಿದ್ದಾರೆ. ನಮ್ಮ ಅವಧಿಯ ದುಡ್ಡು ತಗೊಂಡಿದ್ದಾರೆ ಎಂದು ಕುಟುಕಿದ್ದಾರೆ.

ಬಿ.ಆರ್ ಪಾಟೀಲ್ ಪತ್ರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಸರ್ಕಾರದ ಬಗ್ಗೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಪದೇ ಪದೆ ಹೇಳುತ್ತಾ ಬಂದಿದ್ದೇವೆ. ನಿಮ್ಮ ಶಾಸಕರೇ ನಿಮ್ಮ ವಿರುದ್ಧ ದಂಗೆ ಎದ್ದಿದ್ದಾರೆ ಅಂತ. ಯಾವುದೂ ಇಲ್ಲ ಅಂದ್ರು. ಎರಡನೇ ಬಾರಿ ಬಿ.ಆರ್ ಪಾಟೀಲ್ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.

DK Shivakumar: ಹೈಕೋರ್ಟ್’ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್’ಗೆ ತಾತ್ಕಾಲಿಕ ರಿಲೀಫ್

0

ಬೆಂಗಳೂರು: ಡಿ.ಕೆ.ಶಿವಕುಮಾರ್‌ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆ ವಹಿಸಿ ಹೊರಡಿಸಿದ್ದ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಆ ಮೂಲಕ ಡಿ.ಕೆ.ಶಿವಕುಮಾರ್‌ಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಬುಧವಾರ ಹೈಕೋರ್ಟ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ವಿಚಾರಣೆ ನಡೆಯಿತು. ಸಿಜೆ ಪಿ.ಬಿ.ವರಾಲೆ, ಕೃಷ್ಣ ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಾಯಿತು.

ವಿಚಾರಣೆ ವೇಳೆ ಸರ್ಕಾರದ ಆದೇಶವನ್ನು ಎಜಿ ಶಶಿಕಿರಣ್‌ ಶೆಟ್ಟಿ ಅವರು ಹೈಕೋರ್ಟ್‌ ಗಮನಕ್ಕೆ ತಂದರು. ಈ ವೇಳೆ ಸಿಬಿಐ ಪರ ಪ್ರಸನ್ನ ಕುಮಾರ್‌ ಹಾಗೂ ಡಿ.ಕೆ.ಶಿವಕುಮಾರ್‌ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹಾಜರಿದ್ದರು. ಸಿಬಿಐಗೆ ಅನುಮತಿ ನೀಡಿರುವ ಅನುಮೋದನೆ ಹಿಂಪಡೆಯಲಾಗಿದೆ ಎಂದು ಮನು ಸಿಂಘ್ವಿ ಕೋರ್ಟ್‌ ಗಮನಕ್ಕೆ ತಂದರು.

ಸರ್ಕಾರದ ಆದೇಶ ಪ್ರತಿಯನ್ನು ಓದಿದ ಹೈಕೋರ್ಟ್‌, ನೀವು ಈಗ ಹೊಸ ತೀರ್ಮಾನ ತೆಗೆದುಕೊಂಡು ಬಂದಿದ್ದೀರಿ. ಇದು ಕಾನೂನುಬದ್ಧವಾಗಿದ್ಯಾ ಎಂದು ಸಿಜೆ ಪ್ರಶ್ನಿಸಿದರು. ಈ ಹಿಂದೆ ರಾಜ್ಯ ಸರ್ಕಾರದ ಅನುಮತಿ ಇರಲಿಲ್ಲ. ರಾಜ್ಯ ಸರ್ಕಾರ ಕೆಲವೊಂದು ನಿಯಮ ಉಲ್ಲಂಘನೆ ಮಾಡಿದೆ ಎಂದು ಶಶಿಕಿರಣ್‌ ಶೆಟ್ಟಿ ಜೊತೆ ಬಂದಿದ್ದ ಕಪಿಲ್‌ ಸಿಬಲ್‌ ವಾದಿಸಿದರು.

ಒಂದು ಪಕ್ಷ ಅಧಿಕಾರ ಹೊಂದಿರಬಹುದು. ‘ಬಿ’ ಪಕ್ಷ ಅಧಿಕಾರಕ್ಕೆ ಬರಬಹುದು. ಈ ರೀತಿ ಪದೇ ಪದೆ ಆದರೆ, ಇದು ಆಡಳಿತಕ್ಕೆ ಅಡ್ಡಿ ಉಂಟು ಮಾಡುವುದಿಲ್ಲವೇ? ಪ್ರತಿ ಪಕ್ಷ ಬದಲಾದಾಗ ಈ ರೀತಿ ಆದೇಶ ಮಾಡಿದರೆ ತನಿಖೆ ಮೇಲೆ ಪ್ರಭಾವ ಬೀರುವುದಿಲ್ಲವೇ ಎಂದು ಹೈಕೋರ್ಟ್‌ ಪ್ರಶ್ನಿಸಿತು. ಸರ್ಕಾರ ಕಾನೂನುಬದ್ಧವಾಗಿ ಈ ಪ್ರಕರಣ ವಾಪಸ್‌ ಪಡೆದುಕೊಂಡಿದೆ ಎಂದು ಕಪಿಲ್‌ ಸಿಬಲ್‌ ವಾದ ಮಂಡಿಸಿದರು. ಆದರೆ ಸಿಬಿಐ ಪರ ವಕೀಲರು ಸರ್ಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಆದೇಶ ಈ ಹಂತದಲ್ಲಿ ಅಸಮಂಜಸ ಎಂದು ಸಿಬಿಐ ಪರ ವಕೀಲರು ಹೇಳಿದರು.

ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡಿ, ಜನರ ಕಷ್ಟಕ್ಕೆ ಸ್ಪಂದಿಸಬೇಕು: ಸಭಾಪತಿ ಹೊರಟ್ಟಿ

0

ಧಾರವಾಡ: ಶಾಸಕ ಬಿ.ಆರ್.ಪಾಟೀಲ ಅವರು ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಪತಿ ಬಸವರಾಜ ಹೊರಟ್ಟಿ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಆರ್.ಪಾಟೀಲ ಅವರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ. ಕಲಾಪದ ವೇಳೆ ಅದರ ಬಗ್ಗೆ ಮಾತನಾಡಿದರೆ ಅವಕಾಶ ಕೊಡುತ್ತೇನೆ. ಚರ್ಚೆಗೆ ಅವಕಾಶ ನೀಡುತ್ತೇನೆ. ಅಧಿವೇಶನದ ವೇಳೆ ಮಂತ್ರಿಗಳು ಸ್ಪಂದಿಸಿಲ್ಲ ಎಂದಿದ್ದಾರೆ. ಅದಕ್ಕಾಗಿ ಮಂತ್ರಿಗಳು ಹೆಚ್ಚಿನ ಸಮಯ ಅಧಿವೇಶನದಲ್ಲಿ ಕುಳಿತುಕೊಳ್ಳಬೇಕು. ಜಿಲ್ಲಾ ಪ್ರವಾಸ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು.

ಶಾಸಕರು ಕೇಳುವ ಪ್ರಶ್ನೆಗಳಿಗೆ ಸಚಿವರು ಸರಿಯಾದ ಉತ್ತರ ನೀಡುವ ತಯಾರಿ ಮಾಡಿಕೊಂಡು ಬರಬೇಕು. ವಿವಿಧ ಕಾರ್ಯಕ್ರಮಗಳು ಜಾರಿಯಾಗುವಂತೆ ಕೆಲಸ ಮಾಡಬೇಕು. ದುರ್ದೈವದ ಸಂಗತಿ ಈಗ ಕೆಲಸ ಬಹಳ ಕಡಿಮೆಯಾಗಿವೆ. ಇದು ಸುಧಾರಣೆ ಆಗಬೇಕು. ಉತ್ತರ ಕರ್ನಾಟಕದ ಬಗ್ಗೆ ಅಧಿವೇಶನದಲ್ಲಿ ಹೆಚ್ಚು ಚರ್ಚೆಗಳಾಗಬೇಕಿದೆ. ಡಿ.5, 6 ರಂದು ಪ್ರಶ್ನೋತ್ತರ ಬಳಿಕ ಉತ್ತರ ಕರ್ನಾಟಕ ಚರ್ಚೆ ಬಗ್ಗೆ ಸಮಯ ನೀಡುತ್ತೇನೆ ಎಂದರು.

ಯಾರು ಏನು ಬೇಕಾದರೂ ಕೇಳಬಹುದು. ಅದನ್ನು ಅಜೆಂಡಾದಲ್ಲಿ ಹಾಕಿಸಿದ್ದೇನೆ. ಈ ಹಿಂದೆ ಅಧಿವೇಶನದಲ್ಲಿ ಗುರುವಾರ, ಶುಕ್ರವಾರ ಮಾತ್ರ ಚರ್ಚೆಗೆ ಅವಕಾಶವಿತ್ತು. ಆಗ ಸಮಯ ಸಿಗುತ್ತಿರಲಿಲ್ಲ. ಚರ್ಚೆ ಸರಿಯಾಗಿ ಆಗುತ್ತಿರಲಿಲ್ಲ. ರಾಜ್ಯದ ಯಾವುದೇ ಶಾಸಕರು ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದರೆ ಅದಕ್ಕೆ ಅವಕಾಶ ಕೊಡುತ್ತೇನೆ. ಪಕ್ಷಬೇಧ ಮರೆತು, ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಅವಕಾಶ ಕೊಡುತ್ತೇನೆ. ಸರ್ಕಾರಕ್ಕೆ ಮಾರ್ಗದರ್ಶನ ಕೊಡುವ ಕೆಲಸ ಮಾಡುತ್ತೇನೆ. ಶಾಸಕರೂ ಹೆಚ್ಚಿನ ಸಂಖ್ಯೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು ಎಂದರು.

ವಿರೋಧಪಕ್ಷದ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧ: ಮುಖ್ಯ ಮಂತ್ರಿ ಸಿದ್ದರಾಮಯ್ಯ

0

ಹಾವೇರಿ, ನವೆಂಬರ್ 29 : ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿರೋಧಪಕ್ಷದವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಪಕ್ಷದ ವರಿಷ್ಠರಿಗೆ ಅಂತಿಮ ಪಟ್ಟಿ

ನಿಗಮಮಂಡಳಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ಅಧ್ಯಕ್ಷರ ನೇಮಕಾತಿಗೆ ಮೊದಲ ಹಂತದಲ್ಲಿ ಶಾಸಕರನ್ನು ಪರಿಗಣಿಸಲಾಗುವುದು. ನಾನು ಹಾಗೂ ಉಪಮುಖ್ಯಮಂತ್ರಿಗಳು ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಪಕ್ಷದ ವರಿಷ್ಠರಿಗೆ ನೀಡಲಾಗಿದ್ದು, ಅನುಮತಿಯನ್ನು ನಿರೀಕ್ಷಿಸಲಾಗಿದೆ ಎಂದರು.

150 ದಿನಗಳ ಉದ್ಯೋಗ ನೀಡಲು ಕೇಂದ್ರವಿನ್ನೂ ಒಪ್ಪಿಗೆ ಸೂಚಿಸಿಲ್ಲ :

ಬರಪರಿಹಾರದಲ್ಲಿ ರೈತರ ಪಾಲಿನ ಮೊತ್ತದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಬೆಳೆಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ನಿಗದಿಯಾಗಿರುವ ಪರಿಹಾರ ಮೊತ್ತವನ್ನು ನೀಡಲಾಗುವುದು. ಹಾವೇರಿ ಜಿಲ್ಲೆಗೆ ಕುಡಿಯುವ ನೀರು, ಮೇವು, ಉದ್ಯೋಗ ಸೇರಿದಂತೆ ವಿವಿಧ ಕಾರ್ಯಗಳಿಗೆ 226 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಎಲ್ಲಾ ಜಿಲ್ಲಾಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ ಬರಗಾಲದ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವುದಲ್ಲದೇ, ಕುಡಿಯುವ ನೀರಿಗೆ ಕೊರತೆ ಬರದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಎನ್ ಆರ್ ಜಿ ಎಸ್ ಅಡಿ ಬರಗಾಲದ ಪರಿಸ್ಥಿತಿಯಲ್ಲಿ 150 ಮಾನವದಿನಗಳ ಉದ್ಯೋಗ ನೀಡುವ ಕೇಂದ್ರದ ನಿಯಮವಿದೆ. ಈ ಕ್ರಮಕ್ಕೆ ಕೇಂದ್ರ ಸರ್ಕಾರದವರು ಅನುಮತಿ ನೀಡಬೇಕಿದ್ದು, ಇದುವೆರಗೆ ಈ ಅನುಮತಿಯನ್ನು ನೀಡಿಲ್ಲ ಎಂದರು.

ರಾಜ್ಯದ ದುಡ್ಡು ರಾಜ್ಯಕ್ಕೆ ನೀಡುತ್ತಿಲ್ಲ:

ಇಡೀ ದೇಶದಲ್ಲಿ 12 ರಾಜ್ಯಗಳಲ್ಲಿ ಬರಗಾಲ ಪರಿಸ್ಥಿತಿಯಿದೆ. ರಾಜ್ಯಕ್ಕೆ ಬರ ಅಧ್ಯಯನಕ್ಕಾಗಿ ಕೇಂದ್ರ ತಂಡ ಪರಿಶೀಲಿಸಿದೆ. ಆದರೂ ಕೇಂದ್ರದಿಂದ ಬರಪರಿಹಾರ ಬಿಡುಗಡೆಯಾಗಿಲ್ಲ. ರಾಜ್ಯದ ದುಡ್ಡನ್ನು ರಾಜ್ಯಕ್ಕೆ ಬಿಡುಗಡೆ ಮಾಡುತ್ತಿಲ್ಲ ಎಂದರು.

ಚಾಂಗಲೇರಾ: ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಂಡೆಪ್ಪ ಖಾಶೆಂಪುರ್ ಭಾಗಿ

0

ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸುಕ್ಷೇತ್ರ ಚಾಂಗಲೇರಾ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.

ಚಾಂಗಲೇರಾ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿದ ಅವರು, ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಈ ವೇಳೆ ದೇವಸ್ಥಾನ ಸಮಿತಿಯವರು ಬಂಡೆಪ್ಪ ಖಾಶೆಂಪುರ್ ರವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ್ ಹೆಡೆ, ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯ ಅಧಿಕಾರಿಗಳು, ದೇವಸ್ಥಾನ ಸಮಿತಿಯ ಮುಖಂಡರು, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.

ಶಕ್ತಿ ಯೋಜನೆ ಎಫೆಕ್ಟ್: ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವಿನ ಕಿರಿಕ್

0

ಬೆಂಗಳೂರು:- ಕಾಂಗ್ರೆಸ್ ನ ಶಕ್ತಿ ಯೋಜನೆಯ ಸಮಸ್ಯೆ ಒಂದಲ್ಲ ಎರಡಲ್ಲ. ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವಿನ ಕಿರಿಕ್ ವಿಡಿಯೋ ವೈರಲ್ ಆಗಿದೆ. ಶಕ್ತಿ ಯೋಜನೆಯಡಿ ನಿತ್ಯ ಲಕ್ಷಾಂತರ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಬಟ್ ಸ್ಮಾರ್ಟ್ ಕಾರ್ಡ್ ವಿಳಂಬವಾಗ್ತಿರೋದ್ರಿಂದ ಸಮಸ್ಯೆ ಹೆಚ್ಚಳವಾಗುತ್ತಿದೆ.

ಹೀಗಾಗಿ ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವೆ ತಪ್ಪದ ಕಿರಿಕ್ ಉಂಟಾಗಿದೆ. ಟಿಕೆಟ್ ತಗೊಂಡ ಜಾಗದಲ್ಲಿಯೇ ಇಳಿಬೇಕೆಂದು ಕಂಡಕ್ಟರ್ ಸೂಚನೆ ನೀಡಿದ್ದಾರೆ ಬೇರೆ ಜಾಗದಲ್ಲಿ ಇಳಿದ್ರೆ ಚೆಕಿಂಗ್ನವರು ಬಂದಾಗ ನಮಗೆ ನೋಟಿಸ್ ಕೊಡ್ತಾರೆ ಎಂದು ಕಂಡಕ್ಟರ್ ಅಳಲು ತೋಡಿಕೊಂಡಿದ್ದಾರೆ. ಬಟ್ ಎಮರ್ಜೆನ್ಸಿ ಸಮಯದಲ್ಲಿ ಅರ್ಧ ದಾರಿಯಲ್ಲಿ ಇಳಿಬೇಕಾಗುತ್ತೆಂದು ಮಹಿಳಾ ಪ್ರಯಾಣಿಕರು ವಾದ ಮಾಡಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ಟಿಕೆಟ್ ತಗೊಂಡ ಜಾಗದಲ್ಲಿಯೇ ಇಳಿಯಕ್ಕಾಗಲ್ಲವೆಂದು ಲೇಡಿ ಆಕ್ರೋಶ ಹೊರ ಹಾಕಿದ್ದಾರೆ. ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವಿನ ಮಾತಿನ ಕಾಳಗದ ವಿಡಿಯೋ ವೈರಲ್ ಆಗಿದೆ.

CCB ಬಲೆಗೆ ಬಿದ್ದ ಪ್ರಾದೇಶಿಕ ಸೆನ್ಸಾರ್ ಅಧಿಕಾರಿ

0

ಬೆಂಗಳೂರು:- ಸಿಸಿಬಿ ಅಧಿಕಾರಿಗಳ ಬಲೆಗೆ ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಬಿದ್ದಿದ್ದಾರೆ. ಕನ್ನಡ ಚಲನಚಿತ್ರವೊಂದಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಲಂಚ ಪಡೆಯುವಾಗ ಸಿಸಿಬಿ ಅಧಿಕಾರಿಗಳ ಕೈಗೆ ನೇರವಾಗಿ ಸಿಕ್ಕಿಬಿದ್ದಿದ್ದಾರೆ.

ಸೆನ್ಸಾರ್ ಮಂಡಳಿಯ ಅಧಿಕಾರಿ ಪ್ರಶಾಂತ್ ಕುಮಾರ್. ‘ಅಡವಿ’ ಹೆಸರಿನ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ನಿರ್ಮಾಪಕರಿಗೆ ಪ್ರಶಾಂತ್ ಕುಮಾರ್ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಹಾಗಾಗಿ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕರೂ ಆಗಿರುವ ಟೈಗರ್ ನಾಗ್, ನಟ ಆಸ್ಕರ್ ಕೃಷ್ಣ ಸಿಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರು. ಇದೀಗ ಲಂಚ ಪಡೆಯುವಾಗಲೇ ಅಧಿಕಾರಿ ಪ್ರಶಾಂತ್ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಮಲ್ಲೇಶ್ವರಂ ಎಸ್.ಆರ್.ವಿ ಸ್ಟುಡಿಯೋದಲ್ಲಿ ರೀಜನಲ್ ಆಫೀಸರ್ ಅನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಹೊಸ ನಿರ್ಮಾಪಕರನ್ನು ಟಾರ್ಗೆಟ್ ಮಾಡಿ ಸತಾಯಿಸಿ ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ ಹಣ ಪೀಕುತಿದ್ದ ಎನ್ನಲಾಗಿದೆ.

‘ಅಡವಿ’ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ಒಂದು ವಾರದಿಂದ ಸತಾಯಿಸುತ್ತಿದ್ದ, ಸೆನ್ಸಾರ್ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಸಿಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ನಿರ್ದೇಶಕ ನಿರ್ಮಾಪಕ ಟೈಗರ್ ನಾಗ್ ಸಿಸಿಬಿ ಕಚೇರಿಗೆ ತೆರಳಿ ದೂರು ನೀಡಿದ್ದರು.

ನಿನ್ನೆ ಸಂಜೆ 6 ರ ಸುಮಾರಿನಲ್ಲಿ ಅಧಿಕಾರಿ ಪ್ರಶಾಂತ್ ಕುಮಾರ್, ಟೈಗರ್ ನಾಗ್​ರಿಂದ ಲಂಚ ಪಡೆಯುವ ಸಮಯದಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಲ್ಲೇಶ್ವರಂನ ಎಸ್ ಆರ್ ವಿ ಥಿಯೇಟರ್ ನಲ್ಲಿ ವ್ಯವಸ್ಥಿತವಾಗಿ ದಾಳಿ ನಡೆದಿದೆ. ಹತ್ತಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಸಿವಿಲ್ ಡ್ರಸ್ ನಲ್ಲಿ ಬಂದು ಲಂಚ ಪಡೆಯುವಾಗಲೇ ಪ್ರಶಾಂತ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

error: Content is protected !!