Home Blog Page 3145

ಡಿಸಿಎಂ ಡಿಕೆಶಿಯ ಸಿಬಿಐ ತನಿಖೆ ಪ್ರಕರಣ ವಾಪಸ್ ವಿಚಾರ: ಸಚಿವ ಮಧು ಬಂಗಾರಪ್ಪ ಹೇಳಿದ್ದೇನು!?

0

ಗದಗ:- ಡಿಸಿಎಂ ಡಿಕೆಶಿಯ ಸಿಬಿಐ ತನಿಖೆ ಪ್ರಕರಣ ಹಿಂಪಡೆದ ವಿಚಾರವಾಗಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಗದಗ್ ನಲ್ಲಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಸೇಫ್ ಅಂತ ಯಾಕೆ ಹೇಳ್ತೀರಾ..? ಕಾನೂನಿನಲ್ಲಿ ಮಾಡಬಾರದು ಅಂತ ರೂಲ್ಸ್ ಏನಾದ್ರು ಇದೆನಾ !?ರೂಲ್ಸ್ ಇಲ್ಲ ಅಂದ್ರೆ ಯಾಕೇ ನೀವು ಸೇಫ್ ಅಂತೀರಾ. ವಿರೋಧ ಪಕ್ಷದವರಿಗೆ ಅದನ್ನು ಬಿಟ್ಟು ಬೇರೆ ಕೆಲಸ ಇಲ್ಲ ಕಾನೂನು ಸಚಿವರು ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದ್ದಾರೆ. ಇದರ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅವಶ್ಯಕತೆ ಇಲ್ಲಾ ಎಂದರು.

ಇದೇ ವೇಳೆ ಜಾತಿ ಜನಗಣತಿ ವಿಚಾರವಾಗಿ ಮಾತನಾಡಿ, ನಾನಂತೂ ನೋಡಿಲ್ಲ. ಯಾರು ಕೊಡಬಾರದು ಅಂತ ಹೇಳಿಲ್ಲ. ಇನ್ನೂ ಹೊರಗಡೆ ಬಂದಿಲ್ಲ. ಅದು ಬಂದ ಮೇಲೆ ಒಳ್ಳೆಯ ರೀತಿ ಚರ್ಚೆ ಆಗಬಹುದು. ವಿರೋಧಿಸುವವರ ವೈಯಕ್ತಿಕ ವಿಚಾರಕ್ಕೆ ಬಿಟ್ಟಿದ್ದು, ಕಾಂಗ್ರೆಸ್ ಪಕ್ಷದ ನಿರ್ಧಾರ ಜಾತಿ ಗಣತಿ ಆಗಬೇಕು. ನ್ಯಾಯಬದ್ಧವಾಗಿ ಆಗಲಿ. ಜಾತಿ ಗಣತಿ ಆಗಬೇಕು ಅನ್ನೋದು ನಮ್ಮದು ಮತ್ತು ರಾಹುಲ್ ಗಾಂಧಿಯವರೂ ಕೂಡಾ ಹೇಳಿದ್ದಾರೆ ಎಂದರು.

ಬಿಎಸ್‌’ವೈ ಬಗ್ಗೆ ಮಾತಾಡಿದ್ರೆ ನಾನು ಸುಮ್ನಿರಲ್ಲ: ರೇಣುಕಾಚಾರ್ಯ

0

ದಾವಣಗೆರೆ:- ಬಿಎಸ್‌ವೈ ಬಗ್ಗೆ ಮಾತಾಡಿದ್ರೆ ನಾನು ಸುಮ್ನಿರಲ್ಲ ಎಂದು ಸೋಮಣ್ಣ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲರಾಗಿದ್ದಾರೆ. ಮಾಜಿ ಸಚಿವ ವಿ ಸೋಮಣ್ಣ ದೆಹಲಿಗೆ ತೆರಳಲಿರುವ ವಿಚಾರ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಿಗೆ ಬೇಕಾದರೂ ಹೋಗಲಿ. ಅದರೆ ಬಿಎಸ್‌ವೈ ಬಗ್ಗೆ ಮಾತನಾಡಿದ್ರೆ ನಾನು ಸುಮ್ನಿರಲ್ಲ. ಬಿಎಸ್ ವೈ ಕರೆದು ಹೊಡೆದರೂ ಚಿಂತೆಯಿಲ್ಲ. ನಾನು ಹೀಗೆ ಮಾತಾಡುತ್ತೇನೆ ಎಂದರು.

ವಿ ಸೋಮಣ್ಣ ಸಿದ್ದಗಂಗಾಮಠಕ್ಕೆ ಹೋಗಿದ್ದ ಶ್ರೀಗಳ ದರ್ಶನಕ್ಕೆ ಅಲ್ಲಿ ರಾಜಕೀಯ ಮಾಡಲಿಕ್ಕೆ ಅಲ್ಲ. ಮಠದಲ್ಲಿ ಬಿಎಸ್‌ವೈ ಮಾತಾಡುವ ಅವಶ್ಯಕತೆ ಏನಿತ್ತು? ವಿ ಸೋಮಣ್ಣ ಸಿದ್ದಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದಾರೆ. ವಿನಾಕಾರಣ ಬಿಎಸ್ ವೈ ಬಗ್ಗೆ ಮಾತನಾಡೋದು ಸರಿಯಲ್ಲ. ವಿಧಾನ ಸಭೆ ಸೋಲು ಹೊಡೆತವನ್ನು ವರಿಷ್ಠರು ನೋಡಿದ್ದಾರೆ. ಹೀಗಾಗಿ ವಿಜಯೇಂದ್ರರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದಿದ್ದೇ ಬಿಎಸ್ ವೈ. ಬಿಎಸ್ ವೈ ರೆಡಿ ಮೇಡ್ ಫುಡ್ ಅಲ್ಲ.

ಸೋಮಣ್ಣ ಬಂದಿದ್ದು ಕಾಂಗ್ರೆಸ್‌ನಿಂದ. ಅವರಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಅವರು ಕಾಂಗ್ರೆಸ್ ನಿಂದ ಬಂದು ಅಧಿಕಾರ ಅನುಭವಿಸಿದ್ದಾರೆ. ಚುನಾವಣೆಯಲ್ಲಿ ಸೋತರು ಸಹ ಎಂಎಲ್ ಸಿ ಆಗಿ ಅಧಿಕಾರ ಅನುಭವಿಸಿದ್ದಾರೆ. ಬಿಎಸ್‌ವೈ ನಿಮ್ಮನ್ನೂ ಸಚಿವರನ್ನಾಗಿ ಮಾಡಿದ್ದೇ ತಪ್ಪಾ? ಕಾಂಗ್ರೆಸ್ ನಿಂದ ಬಂದು ಸಚಿವರಾಗಲಿಲ್ಲವೇ? ಆಗ ನಮಗೇನು ಸಾಮಾರ್ಥ್ಯ ಇರಲಿಲ್ಲವೆ? ನಿರಂತರವಾಗಿ ಅಧಿಕಾರ ಅನುಭವಿಸಿ ಈಗ ಬಿಎಸ್‌ವೈ ವಿರುದ್ಧ ಮಾತಾಡ್ತೀರಾ? ಎಂದು ವಾಗ್ದಾಳಿ ನಡೆಸಿದರು.

ಯತ್ನಾಳ್, ಸೋಮಣ್ಣ ಅಸಮಾಧಾನ ವಿಚಾರ: ಮಾಜಿ ಶಾಸಕ ಪ್ರೀತಂಗೌಡ ಹೇಳಿದ್ದೇನು..?

0

ಬೆಂಗಳೂರು: ಯಾರಿಗೆ ಎಷ್ಟೇ ಅಸಮಾಧಾನ ಇದ್ದರೂ ಮೋದಿ ಅವರನ್ನ ಮತ್ತೆ ಪ್ರಧಾನಿ ಮಾಡಲು ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಪ್ರೀತಂಗೌಡ ಪಕ್ಷದ ಅಸಮಾಧಾನಿತರಿಗೆ ಕರೆ ನೀಡಿದ್ದಾರೆ. ಬಿಜೆಪಿಯಲ್ಲಿ ಯತ್ನಾಳ್, ಸೋಮಣ್ಣ ಅಸಮಾಧಾನ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು,

ರಾಜಕಾರಣದಲ್ಲಿ ಸೋಮಣ್ಣ, ಯತ್ನಾಳ್ ಹಿರಿಯರಿದ್ದಾರೆ. ಜೆಡಿಎಸ್ ಜೊತೆ ಹೊಂದಾಣಿಕೆ ಆದಾಗ ಎಫೆಕ್ಟ್ ಆದ ಮೊದಲ ವ್ಯಕ್ತಿ ಪ್ರೀತಂಗೌಡ. ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು ಅಂತ ಇಚ್ಚೆ ಪಟ್ಟಿದ್ದೇವೆ. ಅದಕ್ಕಾಗಿ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ. ಅದಕ್ಕೆ ಸೋಮಣ್ಣ, ಯತ್ನಾಳ್ ಹೊರತಲ್ಲ ಎಂದರು.

ಸೋಮಣ್ಣ ಮತ್ತು ಯತ್ನಾಳ್ ಕೂಡ ಮೋದಿ ಪ್ರಧಾನಿಯಾಗಿ ಆಗಬೇಕು ಅಂತ ಹೇಳಿದ್ದಾರೆ. ಕಾಲಕ್ರಮೇಣ ಎಲ್ಲವೂ ಸರಿಯಾಗಲಿದೆ. ಮೋದಿ ಅವರನ್ನ ಪ್ರಧಾನಮಂತ್ರಿ ಮಾಡೋಣ. ಲೋಕಸಭಾ ಚುನಾವಣೆಗೆ ಬಹಳ ಹೆಚ್ಚಿನ ಶಕ್ತಿಯನ್ನು ಸೋಮಣ್ಣ, ಯತ್ನಾಳ್ ಕೂಡ ಮಾಡ್ತಾರೆ. ಸ್ವಲ್ಪ ಅಸಮಾಧಾನ ಇರುತ್ತದೆ. ಎಲ್ಲವೂ ಮುಂದೆ ಸರಿ ಹೋಗಲಿದೆ ಎಂದರು.

ಹಿರಿಯ ನಟಿ ಲೀಲಾವತಿ ಮನೆಗೆ ನಟ ದರ್ಶನ್ ಭೇಟಿ: ಆರೋಗ್ಯ ವಿಚಾರಣೆ

0

ಬೆಂಗಳೂರು: ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಿರಿಯ ನಟಿ ಲೀಲಾವತಿ ಅವರ ಮನೆಗೆ  ಭೇಟಿ ನೀಡಿದ್ದಾರೆ. ನಟಿ ಲೀಲಾವತಿ ಅವರನ್ನ ದರ್ಶನ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ವಯಸ್ಸಿನ ಕಾರಣದಿಂದ ಹಾಸಿಗೆ ಹಿಡಿದಿರುವ ಲೀಲಾವತಿ ಅವರನ್ನ ನಟ ದರ್ಶನ್ ಭೇಟಿಯಾಗಿ ವಿನೋದ್ ರಾಜ್ ಬಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ಕೆಲ ಹೊತ್ತು ಲೀಲಾವತಿ ಅವರ ಮನೆಯಲ್ಲಿದ್ದು ವಿನೋದ್ ರಾಜ್ ಬಳಿ ಸಾಕಷ್ಟು ವಿಚಾರಗಳ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಗೆ ತೆರಳಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಅರ್ಜುನ್ ಸರ್ಜಾ ಕೂಡ ಇತ್ತೀಚೆಗೆ ಅದೇ ಕೆಲಸ ಮಾಡಿದ್ದರು. 87 ವರ್ಷದ ಹಿರಿಯ ನಟಿ ಲೀಲಾವತಿಯವರು ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ

ಆರ್ಥಿಕ ಸ್ಥಿತಿಗತಿಗೆ ಸರಿ ಹೋಗುವುದಾದರೆ ಆ ವರದಿ ಬರಲಿ: ಆರಗ ಜ್ಞಾನೇಂದ್ರ

0

ಶಿವಮೊಗ್ಗ: ಆರ್ಥಿಕ ಸ್ಥಿತಿಗತಿಗೆ ಸರಿ ಹೋಗುವುದಾದರೆ ಆ ವರದಿ ಬರಲಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಒಕ್ಕಲಿಗರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದ್ದು, ಈ ವರದಿಯನ್ನು ಮನೆ ಬಾಗಿಲಿಗೆ ಹೋಗಿ ತಯಾರಿಸಲಾಗಿಲ್ಲ. ಬದಲಿಗೆ ಯಾವುದೋ ಕಂಪನಿಗೆ ಕೊಟ್ಟು ಏನೇನೋ ಮಾಡಿ ಆ ವರದಿ ತಯಾರು ಮಾಡಿದ್ದಾರೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.

ಜಾತಿ ಜನಗಣತಿ ವರದಿ ಬಗ್ಗೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ಶಾಸಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ನಾನು ಸಹ ಭಾಗವಹಿಸಿದ್ದೆ. ಒಕ್ಕಲಿಗ ಸಮಾಜಕ್ಕೆ ಇನ್ನೊಂದು ವರ್ಗಕ್ಕೆ ಏನು ಸಿಗಬಾರದು ಎಂಬ ಚಿಂತನೆ ಇಲ್ಲ ಎಂದರು. ಜಾತಿ ಜನಗಣತಿ ವರದಿ ತಯಾರಾಗಿ 8 ವರ್ಷ ಕಳೆದಿದೆ. 2017 ರ ಕೊನೆಯಲ್ಲಿ ಈ ವರದಿ ತಯಾರಾಗಿದೆ.

ಅಂದಿನ ಮುಖ್ಯಮಂತ್ರಿ ಆ ವರದಿಯನ್ನು ಸ್ವೀಕಾರ ಮಾಡಿರಲಿಲ್ಲ. ಇವತ್ತು ಅದೇ ಮುಖ್ಯಮಂತ್ರಿ ಸ್ವೀಕಾರ ಮಾಡುತ್ತೇನೆ ಅಂತಿದ್ದಾರೆ ಎಂದರು. ಈ ಹಿಂದೆ ನೀವು ಅಧಿಕಾರದಲ್ಲಿ ಇದ್ದಾಗ ಏಕೆ ವರದಿ ಸ್ವೀಕರಿಸಲಿಲ್ಲ? ಈ ವರದಿಯಲ್ಲಿ ಏನೋ ಇದೆ ಎಂಬುದು ನಿಮಗೆ ಗೊತ್ತಿದೆ. ನಮ್ಮ ಎಲ್ಲಾ ಸಮುದಾಯದ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗೆ ಸರಿ ಹೋಗುವುದಾದರೆ ಆ ವರದಿ ಬರಲಿ. ವರದಿ ಬರುವುದಾಗಿದ್ದರೆ 5 ವರ್ಷದ ಹಿಂದೆಯೇ ಬರುತ್ತಿತ್ತು. ಅದೊಂದು ರಾಜಕಾರಣದ ಆಟ ಆಗಬಾರದು ಎಂದರು.

ಕಾಂಗ್ರೆಸ್ ಸರ್ಕಾರ ಬೀಳುತ್ತೆ ಅನ್ನೋದನ್ನ ನಾನು ಒಪ್ಪಲ್ಲ: ಶ್ರೀರಾಮುಲು

0

ಕೋಲಾರ: ರಾಜ್ಯದ ಜನ ಕಾಂಗ್ರೆಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ನಡೆಯಲಿ ಬಿಡಿ. ಸರ್ಕಾರಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದು ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಕೋಲಾರದ ಮುಳಬಾಗಿಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.

ಸರ್ಕಾರ ಬೀಳುತ್ತೆ ಅನ್ನೋದನ್ನ ನಾನು ಒಪ್ಪಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ನಡಿಯಲಿ ಬಿಡಿ. ಇನ್ನೂ ಯಾವುದೇ ಆಪರೇಷನ್ ಕಮಲ ಮಾಡುವುದಕ್ಕೆ ಹೋಗುವುದಿಲ್ಲ, ಬಹುಮತದೊಂದಿಗೆ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದು ನುಡಿದಿದ್ದಾರೆ.

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಸಿಗದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ..!

0

ಮಂಗಳೂರು: ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ  ಬಹುಮಾನ ಸಿಗದ ವಿಚಾರಕ್ಕೆ ಖಿನ್ನತೆಗೊಳಗಾದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡಜಿಲ್ಲೆಯ ಸಂಪ್ಯದಲ್ಲಿನಡೆದಿದೆ.

ನಿಶಾ (17) ಸಾವನ್ನಪ್ಪಿದ ವಿದ್ಯಾರ್ಥಿನಿ. ಈಕೆ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಒಂದು ವಾರದ ಹಿಂದೆ ವಿಷ ಸೇವಿಸಿದ್ದಳು.

ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಕಳೆದ ಎರಡು ವಾರಗಳ ಹಿಂದೆ ಬಿಹಾರದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ನಡೆದಿದ್ದು, ನಿಶಾ ರನ್ನಿಂಗ್ ರೇಸ್‌ನಲ್ಲಿ ಭಾಗವಹಿಸಿದ್ದರು. ಅದರಲ್ಲಿ ಬಹುಮಾನ ಸಿಗದಿದ್ದಕ್ಕೆ ನಿಶಾ ಬೇಸರಗೊಂಡಿದ್ದಳು.

ಬಳಿಕ ಖಿನ್ನತೆಗೊಳಗಾಗಿ ತೋಟಕ್ಕೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿದ್ದು, ತೀವ್ರ ವಾಂತಿ ಬಂದ ಕಾರಣಕ್ಕೆ ಮನೆಯವರು ವಿಚಾರಿಸಿದಾಗ ಕೀಟನಾಶಕ ಸೇವಿಸಿದ ವಿಚಾರ ಬೆಳಕಿಗೆ ಬಂದಿತ್ತು.

ಕಲಬುರ್ಗಿಯಲ್ಲಿ ರಂಗೇರಿದ ಕಾರ್ತಿಕ ದೀಪೋತ್ಸವ

0

ಕಲಬುರಗಿ:- ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಕಾರ್ತೀಕ್ ಮಾಸದ ಪ್ರಯುಕ್ತ ದೀಪೋತ್ಸವ ಅರ್ಚಕರಾದ ಗುಂಡಾಚಾರ್ಯ ಜೋಶಿ ನರಿಬೊಳ ಅವರ ನೇತೃತ್ವದಲ್ಲಿ ನೆರವೇರಿತು.

ಕಾರ್ತೀಕ ಮಾಸದ ಪ್ರಯುಕ್ತ ಪ್ರತಿದಿನವೂ ಸಂಜೆ ದೀಪೋತ್ಸವ, ಭಜನೆ, ಶ್ರೀ ರಾಮತಾರಕ ಮಂತ್ರ ಜಪ, ಮಾಹಾಮಂಗಳಾರತಿ, ಮಂತ್ರಪುಷ್ಪ ನೆರವೇರುತ್ತಿದೆ, ಡಿಸೆಂಬರ್ 12 ರವರೆಗೂ ದೀಪೋತ್ಸವ ನಡೆಯಲಿದೆ ಎಂದು ಅರ್ಚಕರು ತಿಳಿಸಿದರು.

ಜಯತೀರ್ಥ ಮಹಿಳಾ ಮಂಡಳಿಯ ಸದಸ್ಯರು, ಗೋಪಾಲರಾವ, ಶಾಮರಾವ ಕುಲಕರ್ಣಿ, ಪ್ರಮೋದ ಪಂಥ, ಗುರುರಾಜ, ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.

ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ: ರೌಡಿ ಕಾಲಿಗೆ ಗುಂಡು

0

ಹುಬ್ಬಳ್ಳಿ: ರೌಡಿಯೊಬ್ಬ ಹಿಡಿಯಲು ಬಂದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದು, ಪೊಲೀಸರು ಪ್ರತಿಯಾಗಿ ಆತನ ಕಾಲಿಗೆ ಗುಂಡು ಹಾರಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಕೊಲೆಗೆ ಯತ್ನ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸತೀಶ ಗೋನಾ ಎಂಬಾತನ ಕಾಲಿಗೆ ಗುಂಡೇಟು ಬಿದ್ದಿದೆ.

ಹೆಂಡತಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸತೀಶ ಗೋನಾ ತಲೆಮರೆಸಿಕೊಂಡು ತಿರುಗಾಡುತ್ತಿದ್ದ. ಶನಿವಾರ ಗದಗ ರಸ್ತೆಯಲ್ಲಿ ಈತ ಇದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ‌ ಹಿಡಿಯಲು ಹೋದಾಗ, ಅವರ ಮೇಲೆ ಕಲ್ಲು ತೂರಿದ್ದಲ್ಲದೆ, ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆ ಶಹರ ಠಾಣೆ ಇನ್ಸ್‌ಪೆಕ್ಟರ್ ರಫಿಕ್ ತಹಶೀಲ್ದಾರ್ ಹಲ್ಲೆಗೆ ಮುಂದಾದ ರೌಡಿಯನ್ನು ತಡೆಯಲು ಆತನ ಕಾಲಿಗೆ ಫೈರ್ ಮಾಡಿ ಬಂಧಿಸಿದ್ದಾರೆ. ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರೌಡಿಶೀಟರ್ ನ ದಾಳಿಯಿಂದಾಗಿ ಶಹರ ಠಾಣೆ ಪಿಎಸ್ ಐ ವಿನೋದ ಮತ್ತು ಪೇದೆ ಜಗದೀಶ ಎಂಬುವರಿಗೆ ಗಾಯವಾಗಿದ್ದು, ಅವರು ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳ ಹಾಗೂ ಕಿಮ್ಸ್ ಆಸ್ಪತ್ರೆಗೆ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ.

ಬಿಜೆಪಿಯಲ್ಲಿ ಯಡಿಯೂರಪ್ಪರಿಗೆ ಆದ ಸ್ಥಿತಿ ವಿಜಯೇಂದ್ರಗೂ ಆಗಲಿದೆ -ಸಚಿವ ತಿಮ್ಮಾಪುರ

0

ಬಾಗಲಕೋಟೆ:- ಬಿಎಸ್‌ವೈಗೆ ಆದ ಸ್ಥಿತಿ ವಿಜಯೇಂದ್ರನಿಗೂ ಬರಲಿದೆ ಎಂದು ಸಚಿವ ತಿಮ್ಮಾಪುರ ಭವಿಷ್ಯ ನುಡಿದಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಾಕಷ್ಟು ನಾಯಕರಿಗೆ ಅನ್ಯಾಯ ಮಾಡಿದ್ದು, ನಮ್ಮ ಯಡಿಯೂರಪ್ಪ ಸಾಹೇಬರನ್ನು ಈ ಮುಂಚೆ ಯಾವ ರೀತಿಯಾಗಿ ಪಕ್ಷವು ನಡೆಸಿಕೊಂಡಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ಪರಿಸ್ಥಿತಿ ಅವರ ಮಗನಿಗೂ ಬರಲಿದೆ ಎಂದು ಭವಿಷ್ಯ ನುಡಿದರು.

ಲಿಂಗಾಯತರು, ದಲಿತರು ಎಲ್ಲ ಸರ್ವ ಜನಾಂಗದವರನ್ನು ತುಳಿಯುವ ವ್ಯವಸ್ಥೆ ಬಿಜೆಪಿಯಲ್ಲಿದೆ. ಯಾರನ್ನೂ ಸಹ ಅವರು ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ಎಲ್ಲ ಮುಖಂಡರ ಪರಿಸ್ಥಿತಿಯೂ ಬಿಜೆಪಿಯಲ್ಲಿ ಹಾಗೆಯೇ ಇದೆ.

ಇತ್ತೀಚೆಗೆ ವಿಧಾನಸಭೆ ಚುನಾವಣೆಯಲ್ಲಿ ವಿ.ಸೋಮಣ್ಣ ಅವರಿಗೆ ಬೇಕೆಂದಲೇ 2 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ, ಕ್ಷೇತ್ರ ಬದಲಿಸಿ ಅವರನ್ನು ಸೋಲಿಸಲಾಗಿದೆ. ಇಂಥ ಪಕ್ಷದಲ್ಲಿ ಇರುವುದು ಎಲ್ಲ ನಾಯಕರಿಗೂ ಬೇಡವಾಗಿದೆ ಎಂದರು.

ಹಿಂದು-ಮುಸ್ಲಿಂ ಗಲಾಟೆ ಮಾಡಿಸುವುದೇ ಬಿಜೆಪಿಯವರ ಮುಖ್ಯ ಕೆಲಸವಾಗಿದೆ. ತಮ್ಮ ಸ್ವಾರ್ಥ ಸಾಧನೆಗೆ ಬಿಜೆಪಿ ಹೈಕಮಾಂಡ್‌ ಮುಖಂಡರು ಎಲ್ಲರನ್ನೂ ಬಲಿಕೊಡುತ್ತಿದ್ದಾರೆ. ಅಧಿಕಾರದ ಲಾಲಸೆಗೆ ಏನು ಬೇಕಾದರೂ ಮಾಡಲು ಅವರು ಸಿದ್ಧರಾಗಿದ್ದಾರೆ ಎಂದು ಆರೋಪಿಸಿದರು.

ನಮ್ಮ ರಾಜ್ಯದ ಜನ ಬುದ್ಧಿವಂತರಾಗಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗೆ ತಕ್ಕಪಾಠ ಕಲಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಮಣ್ಣುಮುಕ್ಕಿಸಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನೇ ಗೆಲ್ಲಿಸಲಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

error: Content is protected !!