Home Blog Page 3144

ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ: ಸಂಸದೆ ಸುಮಲತಾ ಅಂಬರೀಷ್ ಪ್ರತಿಕ್ರಿಯೆ

0

ಮಂಡ್ಯ : ಮಂಡ್ಯದಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಮಂಡ್ಯದ ಹುಳ್ಳೇನಹಳ್ಳಿ ಸಮೀಪದ ಆಲೆಮನೆಯಲ್ಲಿ ನಡೆದ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಜಾಲದ ಪ್ರಕರಣ ತೀವ್ರ ಆಘಾತ ಮೂಡಿಸಿದೆ ಎಂದು ಬೇಸರಿಸಿದ್ದಾರೆ.

ಸಮಾಜದಲ್ಲಿ ಲಿಂಗ ಅನುಪಾತ ಕುಸಿಯುತ್ತಿದ್ದು, ಮಹಿಳೆಯರ ಸಂಖ್ಯೆ ಗಣನೀಯ ಇಳಿಕೆ ಕಾಣುತ್ತಿದೆ. ಪರಿಣಾಮ ರೈತರೂ ಸೇರಿದಂತೆ ಶ್ರಮಿಕ ವರ್ಗಕ್ಕೆ ಮದುವೆಯಾಗಲು ಹೆಣ್ಣಿನ ಕೊರತೆಯಂತಹ ಗಂಭೀರ ಸಮಸ್ಯೆಯೂ ತಲೆದೂರಿದೆ. ದಿಶಾ ಸಭೆಯಲ್ಲಿ ಈ ಕುರಿತಂತೆ ಚರ್ಚೆ ಮಾಡಿದ್ದರೂ, ಇಂಥದ್ದೊಂದು ಘಟನೆ ನಡೆದಿರುವುದು ಅತ್ಯಂತ ನೋವಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯಂತಹ ಪ್ರಕರಣಗಳ ಗಂಭೀರತೆಯ ಕುರಿತಂತೆ ಅರಿವು ಮೂಡಿಸಬೇಕಾದವರೆ, ಹೀನ ಕೃತ್ಯಯಲ್ಲಿ ಭಾಗಿಯಾಗಿದ್ದು ಮತ್ತಷ್ಟು ಆತಂಕ ತಂದಿದೆ. ಈ ಪ್ರಕರಣದ ಹಿಂದಿರುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುವೆ ಎಂದು ಸುಮಲತಾ ಆಗ್ರಹಿಸದ್ದಾರೆ.

ಜಾನಪದ ಕಲಾವಿದ ಪುಟ್ಟಸ್ವಾಮಿ ಚಿಕಿತ್ಸೆಗೆ ಸಿಎಂ ಸಿದ್ದರಾಮಯ್ಯ ನೆರವು.!

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಜನಸ್ಪಂದನ ಹೆಸರಿನಲ್ಲಿ ಜನತಾದರ್ಶನ ನಡೆಸುತ್ತಿದ್ದು, ಮೊದಲಿಗೆ ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಅಹವಾಲನ್ನು ಸ್ವೀಕರಿಸಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಪುಟ್ಟಸ್ವಾಮಿ ಅವರು ಹೃದ್ರೋಗ ಚಿಕಿತ್ಸೆಗಾಗಿ ನೆರವು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಟ್ಟಸ್ವಾಮಿ ಅವರಿಗೆ ನೆರವು ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚಿಸಿದರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನವನ್ನು ಆಯೋಜಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರು, ಮಹಿಳೆಯರು ಜನತಾ ದರ್ಶನಕ್ಕೆ ಆಗಮಿಸಿದ್ದು,

ಸಿಎಂ ಜನತಾದರ್ಶನಕ್ಕೆ ಬಿಗಿ ಪೊಲೀಸ್ ಕಾವಲು ನೇಮಿಸಲಾಗಿದೆ. ಅಹವಾಲು ಸ್ವೀಕಾರ ಮತ್ತು ಪರಿಶೀಲನೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಇತರೇ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 1,000 ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದಲ್ಲಿ ಹಾಜರಿದ್ದಾರೆ. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ನಡೆಯುತ್ತಿರುವ ಮೊದಲ ಪೂರ್ಣಾವಧಿ ಜನತಾ ದರ್ಶನ ಇದಾಗಿದೆ.

 

ಪುಡಿರೌಡಿಗಳನ್ನು ಕಟ್ಟಿಕೊಂಡು ದಾಂಧಲೆ ನಡೆಸುತ್ತಿದ್ದ ಆರೋಪಿ ಅರೆಸ್ಟ್!

0

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ & ಗ್ಯಾಂಗ್ ದಾಂಧಲೆ ಪ್ರಕರಣ ಹಿನ್ನೆಲೆಯಲ್ಲಿ  ಆರ್ ಟಿ. ಪೊಲೀಸರಿಂದ ರೌಡಿಶೀಟರ್ ಬೋಡ್ಕೆ ಇಮ್ರಾನ್  ಅರೆಸ್ಟ್ ಮಾಡಲಾಗಿದೆ.

ಡಿ‌ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಮೋದಿ ರೋಡ್  ನಲ್ಲಿ ನಡೆದಿದ್ದ ಘಟನೆ ಕೆಲವು ದಿನಗಳ ಹಿಂದೆ ಬಾರ್ ಗೆ ನುಗ್ಗಿ ಲಾಂಗ್ ತೋರಿಸಿ ದಾಂದಲೆ ಮಾಡಿದ್ದ ಇಮ್ರಾನ್ ಅಂಡ್ ಗ್ಯಾಂಗ್, ಬಳಿಕ ಬೀಡಾ ಅಂಗಡಿ ಮಾಲೀಕನಿಗೆ ಲಾಂಗ್ ತೋರಿಸಿ ಹಣ ವಸೂಲಿ ಮಾಡಿತ್ತು.

ಅಷ್ಟೇ ಅಲ್ಲದೇ ಮೋದಿ ರೋಡ್ ನಲ್ಲಿ ನಿಲ್ಲಿಸಿದ್ದ ಕಾರ್, ಆಟೋ ಜಖಂ ಮಾಡಿದ್ದ  ಕಿಡಿಗೇಡಿಗಳು  ಸಿಸಿಟಿವಿಯಲ್ಲಿ ರೌಡಿಶೀಟರ್ ಲಾಂಗ್ ಬಿಸೋ ಕೃತ್ಯ ಸೆರೆಯಾಗಿತ್ತು. ಟ್ಯಾಂಕ್ ಮುಲ್ಲಾ , ಹುಸೇನಾ ಮಸೀದಿ , ಪಿಎನ್ ಟಿ ಸರ್ಕಲ್ ನಲ್ಲೂ ಕೃತ್ಯ ಎಸಗಿದ್ರು. ಬೀಡಾ ಅಂಗಡಿ ಮಾಲೀಕ ಶಿವಣ್ಣ ಬಳಿ ಲಾಂಗ್ ತೋರಿಸಿ 6 ಸಾವಿರ ಕಸಿದು ಪರಾರಿಯಾಗಿದ್ರು.

ಸದ್ಯ ಆರೋಪಿಯನ್ನ ಬಂಧಿಸಿರುವ ಅರ್ ಟಿ. ನಗರ ಪೊಲೀಸರು  ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.

ಅಥಣಿಯಲ್ಲಿ ದಾರುಣ ಘಟನೆ: ವಿದ್ಯುತ್ ಶಾಕ್ ಹೊಡೆದು ತಂದೆ ಮಗ ಸ್ಥಳದಲ್ಲೇ ಸಾವು

0

ಅಥಣಿ: ಅಥಣಿಯಲ್ಲಿ ತಂದೆ ಮತ್ತು ಮಗನಿಗೆ ವಿದ್ಯುತ್ ತಗುಲಿ ಸ್ಥಳದಲ್ಲಿ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32) ಹಾಗೂ ಪ್ರೀತಮ ಮಲ್ಲಿಕಾರ್ಜುನ ಪೂಜಾರಿ (7) ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಧ್ಯಾಹ್ನ ಮೃತ ಮಲ್ಲಿಕಾರ್ಜುನ ತೋಟದಲ್ಲಿ ಬೋರ್ವೆಲ್ ಮೋಟಾರ್ ಪ್ರಾರಂಭಿಸಿ ಬೇರೆ ಕಡೆ ನೀರು ತಿರುವಿಗೆ ( ವಾಲ್ ಟರ್ನ್) ಮುಂದಾಗಿದ್ದಾರೆ, ಆದರೆ ಬೋರ್ವೆಲ್ ಹತ್ತಿರ ವಯರ್ ತುಂಡಾಗಿದ್ದು ಗಮನಿಸದೇ ವಿದ್ಯುತ್ ಕೈಗೆ ತಗೋಲಿ ಸಾವು ಸಂಭವಿಸಿದೆ, ಅಪ್ಪನನ್ನು ಉಳಿಸಲು ಹೋಗಿ ಮಗ ಪ್ರೀತಮ್ ಕೂಡ ಸ್ಥಳದಲ್ಲಿ ಮೃತಪಟ್ಟು ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ರಿಲೀಸ್..! ಹೇಗಿದೆ ಗೊತ್ತಾ ರಿಷಬ್ ಲುಕ್?

0

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಅಧ್ಯಾಯ 1 ಫಸ್ಟ್ ಲುಕ್ (First Look) ರಿಲಿಸ್ ಆಗಿದೆ. ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರಲಿರುವ ಚಿತ್ರದ ಫಸ್ಟ್ ಲುಕ್ ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ. ಅಘೋರಿ ಅವತಾರದಲ್ಲಿ ರಿಷಬ್ ಅಚ್ಚರಿ ಮೂಡಿಸುವಷ್ಟು ಕಂಡಿದ್ದಾರೆ. ಶಿವನ ಅವತಾರದ ಮತ್ತೊಂದು ರೂಪವಾಗಿ ರಿಷಬ್ ಬದಲಾಗಿದ್ದಾರೆ. ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿಯನ್ನು ಹಿಡಿದುಕೊಂಡಿರುವ ಪೋಸ್ಟರ್ ನಾನಾ ಚರ್ಚೆಗಳನ್ನು ಹುಟ್ಟು ಹಾಕುವಂತಿದೆ.

ಕಾಂತಾರ ಚಿತ್ರದ ಮೊದಲ ಅಧ್ಯಾಯಕ್ಕೆ  (Kantara Chapter 1) ಇಂದು ಮುಹೂರ್ತ ನಡೆದಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಚಿತ್ರತಂಡ ವಿಶೇಷ ಪೂಜೆಯನ್ನ ಮಾಡಿಸಲಿದೆ. ಉದ್ಭವಮೂರ್ತಿ ವಿನಾಯಕ ದೇವರಿಗೆ ಮೂಡು ಗಣಪತಿ ಸೇವೆ, ತ್ರಿಕಾಲ ಸೇವೆ, ಅನ್ನದಾನ ನಡೆಯಲಿದೆ. ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು ಬಣ್ಣ ಬಣ್ಣದ ಹೂವಿನಿಂದ ಸಿಂಗಾರ ಮಾಡಲಾಗಿದೆ.

ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿವೆ. ಸಿನಿಮಾ ಟೀಮ್ ಅಧಿಕೃತವಾಗಿ ಯಾವುದೇ ಮಾಹಿತಿ ಸಿಗದೇ ಇದ್ದರೂ, ಬಲ್ಲ ಮೂಲಗಳು ಮಾಹಿತಿಯನ್ನು ಹೊರ ಹಾಕುತ್ತಲೇ ಇವೆ. ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಹಿಟ್ ಆದ ನಂತರ ಹಲವು ಭಾಷೆಗಳಲ್ಲಿ ಅದನ್ನು ಡಬ್ ಮಾಡಲಾಯಿತು. ಆದರೆ, ಕಾಂತಾರ 2 ಬರೋಬ್ಬರಿ ಏಳು ಭಾಷೆಗಳಲ್ಲಿ ನಿರ್ಮಾಣವಾಗಲಿದೆಯಂತೆ. ಹಾಗಾಗಿ ಅದ್ಧೂರಿ ಮೇಕಿಂಗ್ ಕೂಡ ಇರಲಿದೆಯಂತೆ.

ದೇವಸ್ಥಾನದಲ್ಲಿ ಮತ್ತೆ ಕಳ್ಳತನ.! ಹುಂಡಿ ಹೊತ್ತೊಯ್ದ ಕಳ್ಳರು

0

ಮಂಡ್ಯ: ಕಳ್ಳರು ದೇವಸ್ಥಾನದ ಬೀಗ ಹೊಡೆದು ಹುಂಡಿ ಹೊತ್ತೊಯ್ದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಶಕ್ತಿದೇವತೆ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ತಡರಾತ್ರಿ ನಡೆದಿದೆ.  ಒಂದೇ ತಿಂಗಳಲ್ಲಿ ಒಂದೇ ದೇವಸ್ಥಾನದಲ್ಲಿ ಎರಡು ಬಾರಿ ಕಳ್ಳತನ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಶಕ್ತಿದೇವತೆ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ತಡರಾತ್ರಿ ಕಳ್ಳತನ ನಡೆದಿದ್ದು ಹುಂಡಿಯಲ್ಲಿದ್ದ ಹಣ ದೋಚಿ ಹುಂಡಿ ಬಿಸಾಕಿ ಕಳ್ಳರು ಪರಾರಿಯಾಗಿದ್ದಾರೆ. ಈ ದೇವಸ್ಥಾನ ಮಳವಳ್ಳಿಯ- ಬೆಂಗಳೂರು ರಸ್ತೆಯಲ್ಲಿ ಬರುತ್ತದೆ.

ತಡರಾತ್ರಿ ದೇವಸ್ಥಾನದ ಬೀಗ ಹೊಡೆದು ಒಳನುಗ್ಗಿ ಹುಂಡಿ ತೆಗೆದುಕೊಂಡು ಪರಾರಿಯಾಗಿದ್ದಾರೆ. ಮೊದಲಿಗೆ ಬೀಗ ಹೊಡೆದು ದೇವಸ್ಥಾನಕ್ಕೆ ನುಗ್ಗಿದ ಖದೀಮರು ದೇವಸ್ಥಾನದ ಫ್ಯೂಸ್ ಕಿತ್ತು, ದೊಣ್ಣೆಯಲ್ಲಿ ಬಲ್ಪ್ ಗಳನ್ನ ಹೊಡೆದು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೈಯಕ್ತಿಕ ದ್ವೇಷದ ಹಿನ್ನೆಲೆ: ಗ್ರಾ.ಪಂ ಉಪಾದ್ಯಕ್ಷರ ಪತಿ ಕೊಲೆ

0

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಹೋಬಳಿ ವ್ಯಾಪ್ತಿಯ ಚೋಳಶೆಟ್ಟಿಹಳ್ಳಿ ಗ್ರಾಮದ ವಾಸಿಯಾದ ರಾಮಕೃಷ್ಣಪ್ಪ.ಸಿ.ವಿ. (೪೬) ಎಂಬುವವರನ್ನು ವೈಯಕ್ತಿಕ ದ್ವೇಷದ ಹಿನ್ನೆಲೆ ಸಂಬಂಧಿಕರಿಂದ ಕೊಲೆಯಾದ ಘಟನೇ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗೌರಿಬಿದನೂರು ತಾಲ್ಲೂಕಿನ ಜಿ.ಕೊತ್ತೂರು ಗ್ರಾಮ ಪಂಚಾಯಿತಿ ಉಪಾದ್ಯಕ್ಷೆಯಾದ ಗಂಗರತ್ನಮ್ಮ ರವರ ಪತಿ ಮೃತ ದರ್ಯ ದೈವಿಯಾಗಿದ್ದು, ಈತ ಎಂದಿನಂತೆ ಚೋಳಶೆಟ್ಟಿಹಳ್ಳಿ ಗ್ರಾಮದ ಹಾಲು ಡೈರಿಗೆ ಬೆಳಿಗ್ಗೆ ಹಾಲು ಹಾಕಲು ಹೋಗಿದ್ದು, ಈ ಸಮಯದಲ್ಲಿ ಅಣ್ಣನ ಮಗ ನಾಗರಾಜು(ಅಲ್ಲೂರು) ಮಚ್ಚಿನಿಂದ ಏಕಾ ಏಕಿ ದಾಳಿ ಮಾಡಿದ್ದಾನೆ. ತೆಲೆಗೆ ತೀವ್ರವಾಗಿ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆರೋಪಿ‌ ಪರಾರಿಯಾಗಿದ್ದಾನೆ..

ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ನಾಗೇಶ್, ಗೌರೀಬಿದನೂರು ಸರ್ಕಲ್ ಇನ್ಸ್ ಪೆಕ್ಟರ್ ಸತ್ಯನಾರಾಯಣ, ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ

ಇಲಾಖೆಗಳ ವಿಲೀನಕ್ಕೂ , ಕಾಂಗ್ರೆಸ್ ನ ಗ್ಯಾರಂಟಿಗೂ, ಸಂಬಂಧ ಇಲ್ಲ: ಸತೀಶ್‌ ಜಾರಕಿಹೊಳಿ

0

ಬೆಳಗಾವಿ:- ಗ್ಯಾರಂಟಿ ಯೋಜನೆಗೂ, ಇಲಾಖೆಗಳ ವಿಲೀನಕ್ಕೂ, ನಂಟಿಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವುದಕ್ಕೂ, ಗ್ಯಾರಂಟಿ ಯೋಜನೆಗೂ ಯಾವುದೇ ಸಂಬಂಧವಿಲ್ಲ. ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವ ಪ್ರಕ್ರಿಯೆ 10 ವರ್ಷಗಳ ಹಿಂದಯೇ ನಡೆದಿದೆ ಎಂದರು

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅನುದಾನ ಕೊರತೆಯಾಗಿದ್ದಕ್ಕೆ ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆಯೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಲವು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇಲ್ಲ.

ಹಾಗಾಗಿ ಈ ಇಲಾಖೆಗಳನ್ನು ವಿಲೀನಗೊಳಿಸುವ ಬಗ್ಗೆ 10 ವರ್ಷಗಳ ಹಿಂದೆಯೇ ವರದಿ ಕೊಟ್ಟಿದ್ದಾರೆ. ಈ ರೀತಿ ಹಿಂದಿನ ಸರ್ಕಾರಗಳಲ್ಲೂ ವಿಲೀನ ಪ್ರಕ್ರಿಯೆ ನಡೆದಿವೆ. ಗ್ಯಾರಂಟಿ ಯೋಜನೆಗಳಿಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು. ಕಾಂತರಾಜ್‌ ಆಯೋಗದ ವರದಿ ಜಾರಿಯಾದರೆ ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆಯಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಯೋಗದವರು ನಮಗೆ ಇನ್ನೂ ವರದಿಯನ್ನೇ ಕೊಟ್ಟಿಲ್ಲ. ವರದಿ ನೀಡಿದ ನಂತರ, ಅದರ ಬಗ್ಗೆ ಚರ್ಚೆಯಾಗಬೇಕು. ಅದಕ್ಕೆ ಸುದೀರ್ಘ ಪ್ರಕ್ರಿಯೆ ಬಾಕಿ ಇದೆ ಎಂದು ಹೇಳಿದರು.

ಕಾಂತರಾಜ್‌ ಆಯೋಗದ ವರದಿಯಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆಯೇ? ಎಂಬ ಪ್ರಶ್ನೆಗೆಪ್ರತಿಕ್ರಿಯಿಸಿದ ಅವರು, ಈ ವರದಿ ನೀಡಲು ಇನ್ನೂ ಎರಡು ತಿಂಗಳು ಸಮಯಾವಕಾಶ ಕೇಳಿದ್ದಾರೆ‌. ವರದಿ ಬಂದ ಬಳಿಕ ನೋಡೋಣ. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಈ ಬಗ್ಗೆ ಚರ್ಚಿಸುತ್ತಾರೆ ಎಂದರು.

ಜಾತಿ ಗಣತಿಗೆ ಬಿಜೆಪಿ ವಿರೋಧ ಇಲ್ಲ: ಆರ್. ಅಶೋಕ್

0

ಶಿರಾ:- ಮಾಜಿ ಸಚಿವ ಆರ್‌. ಅಶೋಕ ಅವರು ಪ್ರತಿಕ್ರಿಯೆ ನೀಡಿ, ಜಾತಿ ಗಣತಿಗೆ ಬಿಜೆಪಿ ವಿರೋಧ ಇಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜಾತಿ ಗಣತಿಯನ್ನು ಬಿಜೆಪಿ ಎಂದೂ ವಿರೋಧ ಮಾಡುವುದಿಲ್ಲ. ಆದರೆ, ಜಾತಿ ಗಣತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ‌ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದರು. ವೀರಶೈವ ಎಂದು ಜಾತಿ ಒಡೆಯುವ ಕೆಲಸ ಮಾಡಿದ್ದ ಸಿದ್ದರಾಮಯ್ಯ ಈ ಬಾರಿ ಜಾತಿ, ಜಾತಿಗಳನ್ನು ಎತ್ತಿಕಟ್ಟುವ ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅವರ ಸಂಪುಟದ ಸದಸ್ಯರೇ ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಈಗಾಗಲೇ ಸೋರಿಕೆಯಾಗಿದ್ದು, ಅವೈಜ್ಞಾನಿಕವಾಗಿದೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್‌ ಪಡೆಯುವ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರ ಕೆಟ್ಟ ಸಂಪ್ರದಾಯ ಆರಂಭಿಸಿದೆ. ಸಂಪುಟ ಸಭೆಯನ್ನು ದುರುಪಯೋಗ ಮಾಡಿಕೊಂಡಿದೆ ಎಂದು ತರಾಟೆಗೆ ತೆಗೆದುಕೊಂಡರು. ಈ ಹಿಂದೆ ಲೋಕಾಯುಕ್ತ ಸಂಸ್ಥೆ ರದ್ದು ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ತಳಪಾಯ ಹಾಕಿದ ಭ್ರಷ್ಟಾಚಾರದ ರಾಯಭಾರಿ ಸಿದ್ದರಾಮಯ್ಯ ಎಂದರು.

ಜಾತಿ ಗಣತಿಯಲ್ಲಿ ಸಿಎಂ, ಡಿಸಿಎಂನಿಂದ ನ್ಯಾಯ ಸಿಗುವ ವಿಶ್ವಾಸ ಇದೆ: ಸಚಿವ ಚಲುವರಾಯಸ್ವಾಮಿ

0

ಮಂಡ್ಯ:- ಜಾತಿ ಗಣತಿಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಿಂದ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಜಾತಿ ಗಣತಿಯಿಂದ ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈ ರಾಜ್ಯದಲ್ಲಿ ಎಲ್ಲರಿಗೂ ನ್ಯಾಯಕೊಡಿಸುವ ಕೆಲಸ ಮಾಡುತ್ತಾರೆ ಎಂದರು.

ನನಗೆ ಸಿದ್ದರಾಮಯ್ಯ ನವರ ಮೇಲೆ ನಂಬಿಕೆ ಇದೆ. ಸಿದ್ದರಾಮಯ್ಯ ನವರು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡಿ ಜಾತಿಗಣತಿ ಜಾರಿಗೊಳಿಸುತ್ತಾರೆ. ವರದಿ ಸ್ವೀಕಾರವು ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು ಎಂದರು. ಮುಖ್ಯಮಂತ್ರಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ, ಎಲ್ಲ ಸಮಾಜದ ಅಹವಾಲು ಕೇಳಿದ್ದಾರೆ.

ಯಾವ ಸಮಾಜದ ಆತಂಕ ಇದೆ ಅದನ್ನ ಮುಖ್ಯಮಂತ್ರಿ ಮುಂದೆ ಪ್ರಸ್ತಾಪ ಮಾಡಲಾಗಿದೆ. ಇದನ್ನು ಕ್ರೂಢೀಕರಿಸಿ ಸೂಕ್ತ ತೀರ್ಮಾನ ಮಾಡುತ್ತಾರೆ, ವರದಿ ಸಲ್ಲಿಕೆ ಆದ ಮೇಲೆ ಆತಂಕ ಪಡಬೇಕು. ಆತಂಕ ಪಟ್ಟಿರುವುದು ಸೂಕ್ತವಾಗಿದೀಯಾ ಆಮೇಲೆ ಅದನ್ನ ಸರಿ ಮಾಡಬೇಕು. ವರದಿ ಬಂದ ಮೇಲೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಪಕ್ಷದವರೇ ಜಾತಿ ಗಣತಿ ವರದಿ ಜಾರಿಗೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿರೋಧ ಮಾಡಲು ಅವರು ಸ್ವತಂತ್ರ ಇದ್ದಾರೆ, ಅವರ ಅಭಿಪ್ರಾಯ ಹೇಳಿದ್ದಾರೆ, ಕ್ಯಾಬಿನೆಟ್‌ಗೆ ತಂದ ಮೇಲೆ ಸೂಕ್ತ ತೀರ್ಮಾನ ಮಾಡುತ್ತೇವೆ ಮಾಜಿ ಸಚಿವ ವಿ.ಸೋಮಣ್ಣ ವಿಚಾರವು ಅವರ ಪಕ್ಷದ ವಿಚಾರ ನಾನೇನು ಹೇಳಲು ಆಗುತ್ತೆ? ಅವರಿಗೆ ಬೇರೆ ಕ್ಷೇತ್ರದಲ್ಲಿ ನಿಲ್ಲಿಸಿ ಇರಿಸು‌ಮುರಿಸು ಮಾಡಿರುವುದು ಸತ್ಯ ಅದನ್ನ ಹೇಳಿದ್ದಾರೆ ಅಷ್ಟೇ ಎಂದು ಹೇಳಿ ಹೊರಟು ಹೋದರು.

error: Content is protected !!