Home Blog Page 3143

DCM ವಿರುದ್ಧದ CBI ತನಿಖೆ ವಾಪಸ್ ವಿಚಾರ: ಹೆಚ್ ಕೆ ಪಾಟೀಲ್ ಹೇಳಿದ್ದೇನು ಗೊತ್ತಾ.?

0

ಗದಗ:- ಡಿಕೆ ಶಿವಕುಮಾರ್ ವಿರುದ್ಧ CBI ತನಿಖೆ ವಾಪಸ್ ವಿಚಾರವಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ಕೇಸ್ ವಿಚಾರದ ಸಂಪುಟ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ಹಿಂದಿನ ಸರ್ಕಾರ ಕಾನೂನು ಬಾಹಿರವಾಗಿ ತನಿಖೆಗೆ ಕೊಟ್ಟಿತ್ತು. ಕಾನೂನಿನ ಪ್ರಕಾರ ಸರಿಯಾಗಿ ಇರಲಿಲ್ಲ. ಸಂಪುಟ ನಿರ್ಣಯದ ಆದೇಶ ಹೊರಡಿಸಿದ ನಂತರ ಸೂಕ್ತ ಮಾಹಿತಿ ಸಿಗಲಿದೆ ಎಂದರು.

ಸ್ಪೀಕರ ಅನುಮತಿ ಇರಲಿಲ್ಲ, ಅಡ್ವೋಕೇಟ್ ಜನರಲ್ ಅಭಿಪ್ರಾಯದಂತಿಲ್ಲ. ಲಿಖಿತ ಆದೇಶ ಇರಲಿಲ್ಲ. ಇವೆಲ್ಲ ಕಾನೂನು ಬಾಹಿರ ಹೆಜ್ಜೆಗಳು. ಹೀಗಾಗಿ ಆಗಿನ ಸರ್ಕಾರದ ನಿರ್ಣಯವನ್ನ ಸಂಪುಟ ತಿರಸ್ಕಾರ ಮಾಡಿದೆ.

ಕೋರ್ಟ್ ನಲ್ಲಿ ಇರುವಾಗ ಮಾಡಬಾರದು ಅಂತಾ ನಿರ್ಬಂಧ ಇಲ್ಲ. ಸಚಿವ ಸಂಪುಟ ತನ್ನ ವ್ಯಾಪ್ತಿಯಲ್ಲಿ ಏನ್ ನಿರ್ಣಯ ಮಾಡ್ಬಹುದಿತ್ತೊ ಆ ನಿರ್ಣಯ ಮಾಡಿದೆ ಎಂದರು.

ಲೋಕಸಭೆ ಚುನಾವಣೆಗೆ ಹಿರಿಯ ಸಚಿವರನ್ನ ಕಣಕ್ಕಿಳಿಸುವ ವಿಚಾರವಾಗಿ ಮಾತನಾಡಿ, ನನ್ನ ಹೆಸರು ಪ್ರಸ್ತಾಪವಾಗಿರುವ ವಿಚಾರ ಗೊತ್ತಿಲ್ಲ. ಹೈಕಮಾಂಡ್ ನಿರ್ಣಯವನ್ನ ಎಲ್ಲ ಕಾರ್ಯಕರ್ತರು ಕೇಳಬೇಕಾಗುತ್ತದೆ. ಪ್ರಶ್ನೆ ನಮ್ಮ ಎದುರು ಇಲ್ಲದಿರುವಾಗ ಮಾತ್ನಾಡೋದು ಸರಿ ಅಲ್ಲ ಎಂದರು.

ಮಧು ಬಂಗಾರಪ್ಪ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ: ಕಾಂಗ್ರೆಸ್ ಪಕ್ಷದ ವಿರುದ್ಧ ಪೋಸ್ಟ್

0

ಬೆಂಗಳೂರು:- ಮಧು ಬಂಗಾರಪ್ಪ ಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಎಂಬ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಮಾಡಲಾಗಿದೆ.

ಅಲ್ಲದೆ, ಸಾವಿರಾರು ಕೋಟಿ ಹಗರಣ ನಡೆಸಿದ್ದನ್ನು ಮುಂದಿಟ್ಟುಕೊಂಡು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಅಣಕಿಸಿ ಪೋಸ್ಟ್ ಮಾಡಲಾಗಿದೆ.

ಫೇಸ್​ಬುಕ್​ ಗ್ರೂಪ್​ ಡಿಪಿಯಲ್ಲಿ ಮಧು ಬಂಗಾರಪ್ಪ ಪೋಟೋ ಇದ್ದು, 58 ಸಾವಿರ ಫಾಲೋವರ್​ಗಳಿದ್ದಾರೆ. ಈ ಪೇಸ್‌ಬುಕ್ ಗ್ರೂಪ್‌ ಅನ್ನು ಕುಂದಾಪುರ ವಿರಾಟ ಹೆಸರಿನ ಪೇಸ್‌ಬುಕ್ ಬಳಕೆದಾರರು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಅಣಕಿಸುವ ಪೋಸ್ಟ್​​ನಲ್ಲಿ “ಯೇ ಹೈ ಅಚ್ಚೇ ದಿನ್, ದೇಶವನ್ನು ನುಂಗಿ ನೀರು ಕುಡಿದಿದ್ದ ಕಾಂಗ್ರೆಸ್‌. ಬಹಳ ಜನ ಅಚ್ಚೇ ದಿನ್ ಎಲ್ಲಿ ಅಂತ ಕೇಳಿದ್ದರು. ಇದು ಅಚ್ಚೇ ದಿನ್ ನೋಡಿ ಖುಷಿ ಪಡಿ ಎಂದು ಬರೆದುಕೊಳ್ಳಲಾಗಿದೆ.

ಈ ಸಂಬಂಧ ಕಾಂಗ್ರೆಸ್ ಮುಖಂಡ ಜಿ.ಡಿ ಮಂಜುನಾಥ್ ಎಂಬವರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೂ ನಕಲಿ ಖಾತೆಯ ಬಿಸಿ ತಟ್ಟಿದೆ. ಅವರ ಹೆಸರಿನಲ್ಲಿ ಫೇಸ್​ಬುಕ್​ನಲ್ಲಿ ನಕಲಿ ಖಾತೆ ತೆರೆದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಚಿವರು, ಕಾಂಗ್ರೆಸ್ ಪಕ್ಷದ ವಿರುದ್ಧ ಪೋಸ್ಟ್ ಮಾಡಲಾಗಿದೆ.

ಅಚ್ಚೆದಿನ್ ಎಲ್ಲಿದೆ ಅಂತಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಎಲ್ಲಿ ಎಂದು ಕೇಳುತ್ತಲೇ ಇದ್ದಾರೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ನಕಲಿ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಶಾರುಖ್ ಡಂಕಿಯಲ್ಲಿ ಕುಸ್ತಿ ಸೀನ್… ಜವಾನ್ ನೆನಪಿಸಿಕೊಂಡಿದ್ದೇಕೆ ಫ್ಯಾನ್ಸ್…?

0

ಡಂಕಿ ಸಿನಿಮಾದ ಕ್ರೇಜ್ ಜೋರಾಗಿದೆ. ಟೀಸರ್ ಧೂಳ್ ಎಬ್ಬಿಸಿದೆ. ಡಂಕಿ ಡ್ರಾಪ್ 1 ಬಳಿಕ ಬಂದ ಡಂಕಿ ಡ್ರಾಪ್ 2 ಅಂದರೆ ಲುಟ್ ಪುಟ್ ಗಯಾ ಎಂಬ ಮೆಲೋಡಿ ಹಾಡು ಎಲ್ಲರ ಗಮನಸೆಳೆದಿದೆ. ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು ನಡುವಿನ ಪ್ರೇಮಗೀತೆ ಹಿಟ್ ಲೀಸ್ಟ್ ಸೇರಿದೆ. ಇದೀಗ ಈ ಹಾಡಿನ ಒಂದು ಸೀನ್ ಎಲ್ಲೆಡೆ ವೈರಲ್ ಆಗ್ತಿದ್ದು, ಕಿಂಗ್ ಖಾನ್ ಫ್ಯಾನ್ಸ್ ಹುಬ್ಬೇರಿಸಿದ್ದಾರೆ.

ಡಂಕಿ ಸಿನಿಮಾದ ಲುಟ್ ಪುಟ್ ಗಯಾ ಸಿಂಗಿಂಗ್ ನಂಬರ್ ನಲ್ಲಿ ಕುಸ್ತಿ ಅಖಾಡದಲ್ಲಿ ತಾಪ್ಸಿ ಶಾರುಖ್ ಎತ್ತಿ ಹಾಕುವ ದೃಶ್ಯವಿದೆ. ಅದೇ ರೀತಿ ಜವಾನ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಶಾರುಖ್ ರನ್ನು ಎತ್ತಿ ಕುಸ್ತಿ ಆಡುತ್ತಾರೆ. ಈ ಎರಡು ಸೀನ್ಸ್ ನೋಡಿ ಫ್ಯಾನ್ಸ್ ಕಿಂಗ್ ಖಾನ್ ಕುಸ್ತಿ ಹಿಂದೆ ಬಿದ್ದಿದ್ಯಾಕೆ ಎಂದು ಚರ್ಚೆ ನಡೆಸುತ್ತಿದ್ದಾರೆ.

‘ಡಂಕಿ’ ರಾಜ್‌ಕುಮಾರ್ ಹಿರಾನಿ ಬತ್ತಳಿಕೆಯಿಂದ ಬರುತ್ತಿರೋ ಮತ್ತೊಂದು ವಿಶಿಷ್ಠ ಸಿನಿಮಾ. ಭಾರತದ ಪಂಜಾಬ್‌ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಾನೂನು ಬಾಹಿರವಾಗಿ ಕೆನಡಾ ಹಾಗೂ ಅಮೆರಿಕಕ್ಕೆ ತೆರಳುವವರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ವಿದೇಶ, ಪ್ರೀತಿ, ಸ್ನೇಹ, ತಾಯ್ನಾಡು ಇಂತಹದ್ದೇ ಎಳೆಯನ್ನಿಟ್ಟುಕೊಂಡು ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ‘ಡಂಕಿ’ಗೆ ಕಥೆ ಹೆಣೆದಿದ್ದಾರೆ.

‘ಡಂಕಿ’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್‌ನಿಂದ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸುತ್ತಿದ್ದಾರೆ. ಮುಂದಿನ ತಿಂಗಳು ಡಿಸೆಂಬರ್ 22ಕ್ಕೆ ‘ಡಂಕಿ’ ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಬಳ್ಳಾರಿ: ಪಡಿತರ ಅಕ್ಕಿಗೆ ನ್ಯಾಯ ಬೆಲೆ ಅಂಗಡಿಯ ಮಾಲಿಕರಿಂದಲೇ ಕನ್ನ

0

ಬಳ್ಳಾರಿ:- ಅನ್ನಭಾಗ್ಯ ಯೋಜನೆಯ, ಪಡಿತರ ಅಕ್ಕಿಗೆ ನ್ಯಾಯ ಬೆಲೆಯ ಅಂಗಡಿಯ ಮಾಲಿಕರೆ ಕನ್ನ ಹಾಕಿರುವ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

ಬಡವರ ಹೊಟ್ಟೆ ತುಂಬಿಸುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದರೆ, ಇತ್ತ ಕಡೆ ಬಡವರಿಗೆ ತಲುಪುವ ಮಾರ್ಗದಲ್ಲಿಯೇ ಸೋರಿಕೆಯ ಮಾರ್ಗಗಳು ಬೆಳಕಿಗೆ ಬಂದಿವೆ. ಈ ಕುರಿತು ಒಂದು ಸ್ಟೋರಿಯನ್ನು ನೋಡೋಣ ಬನ್ನಿ.

• ನ್ಯಾಯ ಬೆಲೆ ಅಂಗಡಿಯ ಮಾಲೀಕರಿಂದಲೇ ಪಡಿತರದಾರರಿಗೆ ಮೋಸ,

• ಕಣ್ಮುಚಿ ಕುಳಿತ ಆಹಾರ ಇಲಾಖೆಯ ಅಧಿಕಾರಿಗಳು,

• ತಕ್ಕಡಿಯ ಅಳತೆಯಲ್ಲಿ ಗೋಲ್ ಮಾಲ್,

• 5 ಕೆಜಿ ತೂಕಕ್ಕೆ 4 ಕೆಜಿ ಅಕ್ಕಿ ವಿತರಣೆ,

• ಪಡಿತರದಾರರಿಂದ ತೀವ್ರ ವೀರೋಧ,

ರಾಜ್ಯದ ಜನರು ಯಾರು ಸಹ ಹಸಿವುನಿಂದ ಬಳಲಬಾರದು ಎಂದು ರಾಜ್ಯ ಸರ್ಕಾರ ಜಾರಿಗೆ ತಂದ ಈ ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕಳ್ಳಾರ ಕಾಟ ಹೆಚ್ಚಾಗಿದೆ. ಇಲ್ಲಿಯವರಗೆ ಕೇವಲ ಹೊರಗಿನ ಕಳ್ಳರನ್ನು ಮಾತ್ರ ನೋಡಿದ್ದು ಉಂಟು. ಆದರೆ ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಡಿ.ಅಂತಪುರ ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿಯ ಮಾಲಿಕರೆ ತಕ್ಕಡಿಯ ತೂಕದ ಅಳತೆಯಲ್ಲಿ ಗೋಲ್ ಮಾಲ್ ಮಾಡುವ ಮುಖಾಂತರ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಕಾರ್ಯಮಾಡಿದ್ದಾರೆ.

ಈ ಮೂಲಕ ಬೆಲಿಯೇ ಎದ್ದು ಹೊಲ ಮೈಯುವ ಕೆಲಸವಾಗಿದೆ ಎಂದು ಗ್ರಾಹಕರು ಹಿಡಿಶಾಪ ಹಾಕುತ್ತಿದ್ದಾರೆ.

ಎರಡು ದಿನಗಳಿಂದ ಗ್ರಾಹಕರಿಗೆ ಅಕ್ಕಿ ವಿತರಿಸುವ ಕಾರ್ಯ ಡಿ.ಅಂತಪುರ ಗ್ರಾಮದ ನ್ಯಾಯ ಬೆಲೆ ಅಂಗಡಿಯ ಮಾಲಿಕ ಮಾಡುತ್ತಿದ್ದು, ಡಿಜಿಟಲ್ ತೂಕದ ತಕ್ಕಡಿಯ ಮೂಲಕ ಗ್ರಾಹಕರಿಗೆ ವಿತರಿಸುವ ಕಾರ್ಯ ನಡೆಯುತಿತ್ತು. ಪ್ರತಿ ಗ್ರಾಹಕರಿಗೆ 5KG ತೂಕದಂತೆ ನೀಡುವ ಕಾರ್ಯ ಮಾಡಬೇಕಿತ್ತು. ಆದರೆ ಅದೇ ಅಕ್ಕಿಯನ್ನು ಬೇರೆ ಕಡೆ ತೂಕ ಮಾಡಿದಾಗ ಕೇವಲ 4 KG ಮಾತ್ರ ವಿತರಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ತಕ್ಕಡಿಯ ತೂಕದಲ್ಲಿ ಗೋಲ್‌ಮಾಲ್ ಮಾಡುವ ಮೂಲಕ ಪ್ರತಿಯೊಬ್ಬ ಗ್ರಾಹಕನ ಕಡೆಯಿಂದ 1 KG ಅಕ್ಕಿಯನ್ನು ಕದಿಯುವ ಕಾರ್ಯ ಮಾಡಲಾಗಿದೆ ಎಂದು ಗಂಭೀರ ಆರೋಪ ಪಡಿತರದಾರರಿಂದ ಕೇಳಿಬಂದಿದೆ. ಈ ಮೂಲಕ ಗ್ರಾಹಕರ ಹೊಟ್ಟೆ ಹೊಡೆಯುವ ಕಾರ್ಯವನ್ನು ನ್ಯಾಯಬೆಲೆ ಅಂಗಡಿಯ ಮಾಲಿಕ ಮಾಡಿದ್ದಾನೆ. ಈ ಕುರಿತು ನಿಗಾವಹಿಸಿದ ಗ್ರಾಹಕರು ಸ್ಥಳದಲ್ಲಿಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೂರು ದಾಖಲಿಸಲು ಮುಂದಾಗಿದ್ದಾರೆ.

ಈ ರೀತಿಯ ಆರೋಪಗಳು ಜಿಲ್ಲೆಯಾದ್ಯಾಂತ ಆಗಾಗ ಕೇಳಿ ಬರುತ್ತಿವೆ. ಸರ್ಕಾರ ಈ ರೀತಿಯ ಆರೋಪ ಕೇಳಿಬಂದ ನ್ಯಾಯ ಬೆಲೆ ಅಂಗಡಿಗಳ ಪರವಾನಿಗೆಯನ್ನು ಕೂಡಲೇ ರದ್ದುಪಡಿಸಿ, ಬ್ಲಾಕ್ ಲಿಸ್ಟ್ ಗೆ ಹಾಕಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.

ಆಗ ಮಾತ್ರ ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಬಹುದು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಕುರಿತು ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕಾಗಿದೆ.

ಮೈಸೂರು: ನರಭಕ್ಷಕ ಹುಲಿ ಸೆರೆ

0

ಮೈಸೂರು: ಕೆಲ ದಿನಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವ್ಯಾಪ್ತಿಯಲ್ಲಿ 50 ವರ್ಷದ ಮಹಿಳೆಯನ್ನು ಕೊಂದಿದ್ದ ಹುಲಿ ಇಂದು ಮಂಗಳವಾರ ನಸುಕಿನ ಜಾವ 1.40ರ ಸುಮಾರಿಗೆ ಸೆರೆ ಸಿಕ್ಕಿದೆ.

ಸೆರೆಸಿಕ್ಕ ಹತ್ತು ವರ್ಷದ ಗಂಡು ಹುಲಿ ಆರೋಗ್ಯವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಮೈಸೂರು ಸಮೀಪದ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ನವೆಂಬರ್ 24 ರಂದು ಮಹಿಳೆಯನ್ನು ಕೊಂದಿದ್ದ ಹುಲಿ ಎರಡು ಜಾನುವಾರುಗಳನ್ನು ಕೊಂದಿತ್ತು.

ಬೋನಿನೊಳಗೆ ಕಾದು ಕುಳಿತಿದ್ದ ಹಸುವನ್ನು ತಿನ್ನಲು ಬಂದಾಗ ಸೆರೆ ಹಿಡಿದಿದ್ದಾರೆ. ಬಿಟಿಆರ್ ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಎಸಿಎಫ್ ಪರಮೇಶ್ ಕಾರ್ಯಾಚರಣೆ ವೇಳೆ ಹಾಜರಿದ್ದರು.

ಪ್ಲೈಟ್ ಟಿಕೆಟ್ ಬುಕ್‌ ಮಾಡಿ ಹಣ ಗಳಿಸುವ ಆಮಿಷ: ಲಕ್ಷಾಂತರ ರೂ. ಹಣ ಕಳೆದುಕೊಂಡ ಉಪನ್ಯಾಸಕ..!

ಗದಗ: ಉಪನ್ಯಾಸಕರೊಬ್ಬರ ಮೊಬೈಲ್‌ನ ಟೆಲಿಗ್ರಾಮ್ ಖಾತೆಗೆ ಪ್ಲೈಟ್ ಟಿಕೆಟ್ ಬುಕ್ ಮಾಡಿ ಹಣ ಗಳಿಸಬಹುದು ಅಂತ ಮೆಸೇಜ್ ಕಳುಹಿಸಿ ಸೈಬರ್ ವಂಚಕನೊಬ್ಬ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.

ಗದಗ ನಗರದ ಗಂಗಿಮಡಿ ಕಾಲೋನಿ ನಿವಾಸಿ ಉಪನ್ಯಾಸಕರಾದ ತಿಮ್ಮಣ್ಣ ರಾಮಪ್ಪ ಇರಕಲ್ ಎಂಬುವರಿಗೆ ಅವರ Ashok irakall ನೇದರ ಟಿಲಿಗ್ರಾಮ್‌ ಖಾತೆಗೆ Click Register 2:Fill in the details and click register working website Link ; https://www.flight-networksite com/login *Please use the Invitation code: 2HZAV2 ಲಿಂಕನ್ನು ಕಳುಹಿಸಿ, ಯುಜರ್ ಐಡಿ ಕ್ರಿಯೆಟ್ ಮಾಡಿಸಿಕೊಂಡು ಟಾಸ್ಕ್‌ಗಳನ್ನು ಕೊಟ್ಟು ಟಾಸ್ಕ್‌ಗಳನ್ನು ಕಂಪ್ಲೀಟ್ ಮಾಡಲು ಹೇಳಿ ಹಂತ ಹಂತವಾಗಿ ಒಟ್ಟು 8,40,812/- ಹಣವನ್ನು ಹಾಕಿಸಿಕೊಂಡು ಅದರಲ್ಲಿ ಫಿರ್ಯಾದಿ ತಿಮ್ಮಣ್ಣ ಇರಕಲ್ ಅವರಿಗೆ 79,600 ಮರಳಿ ಜಮೆ ಮಾಡಿ , ಉಳಿದ 7,61,212ರೂ,ಗಳನ್ನು ಕೊಡದೆ ಮೋಸ ಮಾಡಲಾಗಿದೆ ಎಂದು
ಗದಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

0088/2023-INFORMATION TECHNOLOGY ACT 2008(u/s-66(d),66(c)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬರ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್ ರೈತರನ್ನು ಸತಾಯಿಸುತ್ತಿದೆ: ಆರ್ ಅಶೋಕ್

0

ಬಳ್ಳಾರಿ:- ಆರ್ ಅಶೋಕ್ ಅವರು ಬರವೀಕ್ಷಣೆ ಕೈಗೊಂಡಿದ್ದಾರೆ. ಬಳ್ಳಾರಿಯ ಸಂಡೂರು ತಾಲೂಕಿನ ಡಿ.ಅಂತಾಪುರ ಗ್ರಾಮದಲ್ಲಿ ಬರ ವೀಕ್ಷಣೆ ಮಾಡಿದ್ದಾರೆ. ಮಳೆಯಿಲ್ಲದ ಬೆಳೆ ಹಾನಿಯಾಗಿರೊ ಪ್ರದೇಶಗಳಿಗೆ ಭೇಟಿ ನೀಡಿ, ಆರ್‌.ಅಶೋಕ್ ಪರಿಶೀಲನೆ ಮಾಡಿದ್ದಾರೆ. ಬೆಳೆ ಹಾನಿಗೊಳಗಾದ ಜಮೀನಿನ ರೈತರ ಸಮಸ್ಯೆಯನ್ನು ಅಶೋಕ್ ಆಲಿಸಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಬರ ಸಮೀಕ್ಷೆಯನ್ನು ನಿಯಮ ಪ್ರಕಾರ ಮಾಡಿಲ್ಲ, ರೈತರ ಜಮೀನಿಗೆ ಭೇಟಿ ನೀಡದೆ ಸಮೀಕ್ಷೆ ವರದಿ ತಯಾರಿಸಲಾಗಿದೆ. ರಾಜ್ಯ ಸರ್ಕಾರವು ಕೂಡ ಬರ ಪರಿಹಾರ ನೀಡದೇ ರೈತರನ್ನು ಸತಾಯಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಆರ್.ಅಶೋಕ್ ಹರಿಹಾಯ್ದಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿಧನ

0

ಬೆಂಗಳೂರು:– ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಂಬಿಕಾಪತಿ ಅವರಿಗೆ ನಿನ್ನೆ ಸಂಜೆ 6:40 ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೆ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ

ಅಕ್ಟೋಬರ್​ದ 13 ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಆರ್​​. ಟಿ.ನಗರದ ಮಾಜಿ ಕಾರ್ಪೊರೇಟರ್ ​​​ಅಶ್ವತ್ಥಮ್ಮ, ಪತಿ ಆರ್​.ಅಂಬಿಕಾಪತಿ ಮತ್ತು ​ಅಶ್ವತ್ಥಮ್ಮ ಅವರ ಬಾಮೈದ ಪ್ರದೀಪ್​​ ಫ್ಯ್ಲಾಟ್​​​​​​ ಮೇಲೆ ದಾಳಿ ಮಾಡಿದ್ದರು. ಪರಿಶೀಲನೆ ವೇಳೆ ಅಂಬಿಕಾಪತಿಯ ಬೆಡ್​​ ರೂಮ್​ನ ಮಂಚದ ಕೆಳಗೆ 23 ಬಾಕ್ಸ್​​ನಲ್ಲಿ 500 ರೂ. ಮುಖಬೆಲೆಯ 42 ಕೋಟಿ ರೂ. ಕಂತೆ ಕಂತೆ ಹಣ ಪತ್ತೆಯಾಗಿತ್ತು. ಅಲ್ಲದೆ ಅಂಬಿಕಾಪತಿ ಮಗಳ ಮನೆ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದರು.

ಸದಾಶಿವ ಆಯೋಗದ ವರದಿ ಜಾರಿಗೆ ನಮ್ಮ ಒಪ್ಪಿಗೆ ಇಲ್ಲ: ಅರವಿಂದ ಲಿಂಬಾವಳಿ

0

ಹುಬ್ಬಳ್ಳಿ: ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಇದರ ಬಗ್ಗೆ ಭೋವಿ,ವಡ್ಡರ, ಕೊರಚ, ಕೊರಮ, ಭಜಂತ್ರಿ ಲಂಬಾಣಿಯವರು 2012 ರಿಂದ ಹೋರಾಟ ನಡೆಸಿದ್ದಾರೆ’ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಗೌರವಾಧ್ಯಕ್ಷ ಅರವಿಂದ ಲಿಂಬಾವಳಿ ತಿಳಿಸಿದರು.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿರೋಧಿಸಿ ಇಲ್ಲಿನ ಬಂಜಾರ ಭವನದಲ್ಲಿ ನಡೆದ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ‘ಆಂಧ್ರಪ್ರದೇಶ ಸರ್ಕಾರವು ಒಳಮೀಸಲಾತಿ ಕಲ್ಪಿಸಲು ಯತ್ನಿಸಿ ಎಡವಿದೆ. ಹೀಗಿದ್ದರೂ ರಾಜ್ಯದ ಕೆಲ ಸಚಿವರು ವರದಿ ಜಾರಿಗಾಗಿ ಒತ್ತಾಯಿಸುತ್ತಿರುವುದು ಖಂಡನೀಯ.

ಸಚಿವರ ಒತ್ತಾಯವನ್ನು ಜನರು ಒಪ್ಪಲ್ಲ’ ಎಂದರು. ವರದಿಯನ್ನು ವಿರೋಧಿಸುವ ಹೋರಾಟಕ್ಕೆ ರಾಜ್ಯದ ಲಂಬಾಣಿ, ಭೋವಿ, ಕೊರಚ, ಕೊರಮ, ಭಜಂತ್ರಿ ಸೇರಿ ಇತರೆ ಸಮುದಾಯದವರು ಕೈ ಜೋಡಿಸಬೇಕು. ನವೆಂಬರ್ 30ರಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ನಮ್ಮ ಬೇಡಿಕೆಯನ್ನು ಮುಂದಿಡೋಣ’ ಎಂದರು.

ಪ್ರೀತಿಸಿ ಕೈಕೊಟ್ಟ ಯುವಕ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ

0

ಶಿವಮೊಗ್ಗ :- ಪ್ರೀತಿಸಿ ಕೊನೆಗೆ ಯುವಕ ಕೈಕೊಟ್ಟ ಹಿನ್ನೆಲೆ ಮನನೊಂದ ಯುವತಿಯೊಬ್ಬಳು ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾರಿಗುಡ್ಡ ಬಡಾವಣೆಯಲ್ಲಿ ನಡೆದಿದೆ.

ಸುಧಾ ಮತ್ತು ಶ್ರೀಕಾಂತ್ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ಹೇಳಿ ಆಕೆಯೊಂದಿಗೆ ಶ್ರೀಕಾಂತ್ ದೈಹಿಕ ಸಂಪರ್ಕ ಕೂಡ ನಡೆಸಿದ್ದನು. ಕೊನೆಗೆ ಶ್ರೀಕಾಂತ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಮನನೊಂದು ಸುಧಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

error: Content is protected !!