Home Blog Page 3162

ನಮ್ಮ ಪಾರ್ಟಿಯಲ್ಲಿ ಲಿಂಗಾಯತ ನಾಯಕರು ಇಲ್ವಾ: ಸಚಿವ ಹೆಚ್​.ಕೆ. ಪಾಟೀಲ್ ಗರಂ

0

ಗದಗ: ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಳಿಕ ಲಿಂಗಾಯತ ಸಮಾಜ ಒಗ್ಗೂಡುವಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಗರಂ ಆದ ಕಾನೂನು ಸಚಿವ ಹೆಚ್​ಕೆ ಪಾಟೀಲ್, ನಿಮ್ಮ ಮನಸ್ಸಿಗೆ ಬಂದ ಹಾಗೇ ಲೆಕ್ಕ ಹಾಕಿದರೆ ನಡೆಯಲ್ಲ. ಲಿಂಗಾಯತ ಸಮುದಾಯದ ನಾಯಕರು ಯಾರೂ ಅಂತ ಪ್ರಶ್ನೆ ಮಾಡಿದರು.

ಗದಗನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇವತ್ತು ಶಾಮನೂರ ಶಿವಶಂಕರಪ್ಪನವರು ಲಿಂಗಾಯತ ನಾಯಕರು. ಶಾಮನೂರ ಜಾಗತಿಕ ಅಧ್ಯಕ್ಷರು. ನಮ್ಮ ಪಾರ್ಟಿಯಲ್ಲಿ ಲಿಂಗಾಯತ ನಾಯಕರು ಇಲ್ವಾ? ಈಶ್ವರ ಖಂಡ್ರೆ, ಎಂ ಬಿ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಲಿಂಗಾಯತ ನಾಯಕರು ಅಲ್ವಾ? ಇವರ‌್ಯಾರು ಲಿಂಗಾಯತ ನಾಯಕರು ಕಾಣಲ್ವಾ ಎಂದರು.

ವಿಜಯೇಂದ್ರನ ಅಧ್ಯಕ್ಷ ಮಾಡುವ ಮೂಲಕ ಪ್ರಧಾನಿ ಮೋದಿ ಘರ್ಜನೆ ನಿಂತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಪರಿವಾರ ರಾಜಕೀಯ ಕುರಿತು ಮಾತನಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದ ಸಚಿವ ಪಾಟೀಲ, ಮೋದಿ ಕೂಡ ಅವಕಾಶವಾದಿ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಈಗಾಗಲೇ ಅವರ ಪಕ್ಷದಲ್ಲಿ ಅಸಮಾಧಾನ, ಅಪಸ್ವರ ಆರಂಭವಾಗಿದೆ ಎಂದರು.

ಬೆಲ್ಲದ, ಯತ್ನಾಳ, ಸಿ ಟಿ ರವಿ, ಹೇಗೆ ಮಾತನಾಡಿದ್ದಾರೆ ಎನ್ನುವುದನ್ನು ನೀವು ನೋಡಿದ್ದಿರಿ, ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ತೊಂದರೆ, ಅಪಾಯ ಯಾವುದ ಆಗೋದಿಲ್ಲ ಎಂದರು.

ಬಿ. ಎಸ್ ಯಡಿಯೂರಪ್ಪ ಅವರು ಬೇರೆ, ಅವರ ಮಗ ಬೇರೆ ಎಂದ ಸಚಿವ ಪಾಟೀಲ, ಯಡಿಯೂರಪ್ಪ ಅವರಿಗೆ ಸುಮಾರು 50 ವರ್ಷಗಳ ಕಾಲ ಹೋರಾಟದ ಬದುಕು ಇದೆ. ಅವರು ಹೋರಾಟದ ಹಿನ್ನಲೆಯಲ್ಲಿ ನಾಯಕರಾಗಿ ಹೊರಹೊಮ್ಮಿದವರು ಎಂದರು.

ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ಆಪಾದನೆ ಮಾಡ್ತಾ ಇದ್ದರು, ಈವಾಗ ಕುಟುಂಬ ರಾಜಕಾರಣದ ಕುರಿತು ಏನಂತ ಆಪಾದನೆ ಮಾಡ್ತಾರೆ ಎಂದು ಪ್ರಶ್ನಿಸಿದ ಸಚಿವ ಪಾಟೀಲ, ಬಿಜೆಪಿ ನೈತಿಕ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಿ.ಬಿ.ಅಸೂಟಿ, ಪ್ರಭು ಬುರಬುರೆ, ಅಶೋಕ ಮಂದಾಲಿ, ಬರಕತ್ ಮುಲ್ಲಾ, ವಿನೋದ ಶಿದ್ಲಿಂಗ್, ಶಿವರಾಜ್ ಕೋಟಿ, ಮಹ್ಮದ ಶಾಲಗಾರ, ಸಯ್ಯದ್ ಖಾಲಿದ್ ಕೊಪ್ಪಳ, ಯೂಸುಫ್ ಡಂಬಳ, ಅನ್ವರ ಶಿರಹಟ್ಟಿ ಸೇರಿದಂತೆ ಅನೇಕರಿದ್ದರು.

ಬಿಗ್ ಬಾಸ್ ಸ್ಪರ್ಧಿ ತನಿಷಾ ವಿರುದ್ಧ ಎಫ್ಐಆರ್ ದಾಖಲು

0

ಬೆಂಗಳೂರುಕಲರ್ಸ್‌ ಕನ್ನಡ ವಾಹಿನಿಯಿಂದ ನಡೆಸಲಾಗುತ್ತಿರುವ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ನ ಸ್ಪರ್ಧಿ ತನಿಷಾ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್‌ಟಿ) ದೌರ್ಜನ್ಯ ಕಾಯ್ದೆಯಡಿ ಬೆಂಗಳೂರು ಹೊರವಲಯದ ಕುಂಬಳಗೋಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಹೌದು, ಕನ್ನಡ ಬಿಗ್‌ಬಾಸ್‌ ಸೀಸನ್‌ 10 ರಿಯಾಲಿಟಿ ಶೋನ ಸ್ಪರ್ಧಿ ವರ್ತೂರು ಸಂತೋಷ್‌ ಅವರು ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಕಾರಣದಿಂದಾಗಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಅವರನ್ನು ಬಂಧಿಸಿ ಒಂದು ವಾರಗಳ ಕಾಲ ಜೈಲಿಗಟ್ಟಿದ್ದರು.

ಈಗ ಪುನಃ ಬಿಗ್‌ಬಾಸ್‌ನ ಇನ್ನೊಬ್ಬ ಕಂಟೆಸ್ಟಂಟ್‌ ತನಿಷಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈಗ ತನಿಷಾ ವಿರುದ್ಧ ಎಸ್‌ಸಿ/ ಎಸ್ಟಿ ದೌರ್ಜನ್ಯ ಕಾಯ್ದೆಯಡಿ  ಕೇಸ್ ದಾಖಲು ಮಾಡಲಾಗುದೆ.

ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವರಿಂದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಅವರ ದೂರನ್ನು ಆಧರಿಸಿ  ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಅವಹೇಳನಕಾರಿ ಪದ ಬಳಕೆ ಆರೋಪ ಮಾಡಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಡಿಗೆ ಬರುವ ಬೋವಿ ಜನಾಂಗಕ್ಕೆ ಧಾರಾವಾಹಿ ನಟಿ ತನಿಷಾ ಅವರು ಅವಮಾನ ಮಾಡಿದ್ದಾರೆಂದು ದೂರು ನೀಡಲಾಗಿದೆ.

ಆದ್ದರಿಂದ ನಟಿ ತನಿಷಾ ಕುಪ್ಪುಂಡ ವಿರುದ್ದ ದೂರು ದಾಖಲಿಸಿ ಅವರ ವಿರುದ್ಧ ಕ್ರಮವನ್ನು ಕೈಗೊಂಡು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು ಎಂದು ಆಗ್ರಹಿಸಲಾಗಿದೆ.

 

ಅಸೂಯೆಗೆ ಮದ್ದಿಲ್ಲ, ಪಾಪ ಕುಮಾರಸ್ವಾಮಿಗೆ ತಡೆದುಕೊಳ್ಳಲು ಆಗ್ತಿಲ್ಲ; ಡಿಕೆ ಶಿವಕುಮಾರ್​

0

ಬೆಂಗಳೂರು: ಹೆಚ್​ಡಿ ಕುಮಾರಸ್ವಾಮಿಕ್ಕೆ ನಿವಾಸದ ದೀಪಾಲಂಕಾರಕ್ಕೆ ವಿದ್ಯುತ್ ಕಳ್ಳತನ ಆರೋಪ ಕೇಳಿಬಂದಿತ್ತು. ಇದಕ್ಕೆ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್​ ಮಾಡಿ ನೋಟಿಸ್ ನೀಡಲಿ, ದಂಡ ಕಟ್ಟುತ್ತೇನೆಂದು ಎಂದರು. ಈ ವಿಚಾರವಾಗಿ  ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಹೆಚ್​.ಡಿ.ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ನಮ್ಮ ಸೋಷಿಯಲ್ ಮೀಡಿಯಾ ತಂಡ ಅದರ ಡ್ಯೂಟಿ ಮಾಡಿದೆ. ಅಚಾತುರ್ಯವೋ, ಕಳ್ಳತನವೋ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬೆಸ್ಕಾಂ ಏನು ಕಾನೂನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ತಾರೆ. ಇದಕ್ಕೆ ನಾವು ಮಧ್ಯಪ್ರವೇಶ ಮಾಡುವ ಅವಶ್ಯಕತೆ ಇಲ್ಲ.  ಕಾಂಪೌಂಡ್ ನಾನು ಹಾಕಿದ್ನಾ, ಅವರು ಹಾಕಿದರೋ ದೂರು ಕೊಡಲಿ. ಅಸೂಯೆಗೆ ಮದ್ದಿಲ್ಲ, ಪಾಪ ಕುಮಾರಸ್ವಾಮಿಗೆ ತಡೆದುಕೊಳ್ಳಲು ಆಗ್ತಿಲ್ಲ ಎಂದು ವಾಗ್ದಾಳಿ ಮಾಡಿದರು.

ಲೋಕಸಭಾ ಚುನಾವಣೆಯಲ್ಲಿ ಜಯಬೇರಿ ಬಿಜೆಪಿ ಭಾರಿಸಬೇಕು: ಬಿವೈ ವಿಜಯೇಂದ್ರ

0

ಕೋಲಾರಲೋಕಸಭಾ ಚುನಾವಣೆಯಲ್ಲಿ ಜಯಬೇರಿ ಬಿಜೆಪಿ ಭಾರಿಸಬೇಕು. ರಾಜ್ಯದಲ್ಲೂ ಬಿಜೆಪಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬೇಕು. ಮೂರನೇ ಬಾರಿಗೆ ಪ್ರಧಾನಿ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು. ಪಕ್ಷದಲ್ಲಿ ಹಿರಿಯರಿದ್ದರೂ ಸಹ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ.

ಬಿವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವುದು ನಮ್ಮ ರಾಷ್ಟ್ರೀಯ ನಾಯಕರ ತೀರ್ಮಾನ. ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಎಲ್ಲಾ ಶಾಸಕರುಗಳು ಭಾಗವಹಿಸುತ್ತಾರೆ. ಶಾಸಕಾಂಗ ಪಕ್ಷದ ಸಭೆಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬರಲಿದ್ದಾರೆ ಎಂದು ಬಿವೈ ವಿಜಯೇಂದ್ರ ಹೇಳಿದರು.

ಧಾರವಾಡದಲ್ಲಿ ಇಸ್ಪೀಟ್ ರೇಡ್: ಕಾಂಗ್ರೆಸ್ ಯುವ ಮುಖಂಡ ರಾಹುಲ್ ಅಷ್ಟಗಿ ಪೊಲೀಸ್ ವಶಕ್ಕೆ

0

ಧಾರವಾಡ: ದೀಪಾವಳಿ ಹಬ್ಬದ ಅಂಗವಾಗಿ ಅಂದರ್ ಬಾಹರ್ ಆಡುತ್ತಿದ್ದ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಅಷ್ಟಗಿ ಸೇರಿದಂತೆ 12 ಜನರನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಅಂದರ್ ಮಾಡಿದ್ದಾರೆ.

ಧಾರವಾಡದ ಲಕ್ಷ್ಮೀ ಚಿತ್ರಮಂದಿರದ ಬಳಿ ಇರುವ ಫೈನಾನ್ಸ್ ಕಚೇರಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಅಂದರ್ ಬಾಹರ್ ಆಡಲಾಗುತ್ತಿತ್ತು.

ಈ ವೇಳೆ ದಾಳಿ ನಡೆಸಿದ ವಿದ್ಯಾಗಿರಿ ಠಾಣೆ ಪೊಲೀಸರು ಕಾಂಗ್ರೆಸ್‌ ಯುವ ಮುಖಂಡ ರಾಹುಲ್ ಅಷ್ಟಗಿ ಸೇರಿದಂತೆ 12 ಜನರನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

ದಾಳಿ ವೇಳೆ ಸುಮಾರು 1 ಲಕ್ಷಕ್ಕಿಂತಲೂ ಅಧಿಕ ಹಣ ಹಾಗೂ ಇತ್ಯಾದಿ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಬಾರಿ ರಮ್ಯ ರೆಸಿಡೆನ್ಸಿಯಲ್ಲಿ ನಡೆದ ಇಸ್ಪೀಟ್ ದಾಳಿ ವೇಳೆ ಈಗಿನ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಕೂಡ ಸಿಕ್ಕಿಹಾಕಿಕೊಂಡಿದ್ದರು. ಈಗ ಅವರ ಸಹೋದರನ ಮಗ ರಾಹುಲ್ ಅಷ್ಟಗಿ ಕೂಡ ಇಸ್ಪೀಟ್ ರೇಡ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಕುರುಮಲೆ ದೇವಾಲಯಕ್ಕೆ ಆಗಮಿಸಿದ ಬಿವೈ ವಿಜಯೇಂದ್ರ

0

ಕೋಲಾರಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಿಯೇಂದ್ರ ಅವರಿಗೆ ಕೋಲಾರದ ರಾಮಸಂದ್ರ ಗೇಟ್ ಬಳಿ ಅದ್ದೂರಿ ಸ್ವಾಗತ ದೊರೆತಿದೆ. ಸಂಸದ ಮುನಿಸ್ವಾಮಿ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್, ಬಿಜೆಪಿ ಮುಖಂಡರು ಸ್ವಾಗತಿಸಿದ್ದಾರೆ.

ಬಿವೈ ವಿಜಯೇಂದ್ರ  ರಾಜ್ಯಾಧ್ಯಕ್ಷರಾದ ಬಳಿಕ ಇದೆ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಬಿವೈ ವಿಜಯೇಂದ್ರ ಮುಳಬಾಗಲು ಕುರುಡುಮಲೆ ವಿನಾಯಕನ ದರ್ಶನಕ್ಕೆ‌ ಆಗಮಿಸಿದರು.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ಮೊಸಳೆ ಪ್ರತ್ಯಕ್ಷ

0

ಸಿರುಗುಪ್ಪನಗರದ ಕೆಎಸ್ಆರ್ಟಿಸಿ ಬಸ್ನಿಲ್ದಾಣದ ಹಿಂಬದಿಯಲ್ಲಿರುವ ಶೌಚಾಲಯ ಕಟ್ಟಡದ ಹಿಂದಿರುವ ಕೇವಲ ಒಂದು ಅಡಿ ಅಗಲದ ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.

ಮೂತ್ರ ವಿಸರ್ಜನೆಗೆಂದು ಹೋದ ವ್ಯಕ್ತಿಯು ಮೊಸಳೆ ಚರಂಡಿಯಿಂದ ಹೊರ ಬರುತ್ತಿರುವುದನ್ನು ನೋಡಿ ಹೌಹಾರಿ ಓಡಿ ಬಂದಿದ್ದಾನೆಬಳಿಕ ಜನರು ಮೊಸಳೆಯನ್ನು ನೋಡಲು ಮತ್ತು ತಮ್ಮ ಮೊಬೈಲ್ಗಳಲ್ಲಿ ಚಿತ್ರೀಕರಿಸಲು ಮುಗಿಬಿದ್ದರು. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆ ಹಿಡಿಯುವ ಕಾರ್ಯಾಚರಣೆ ನಡೆಸಿದರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ಅದ್ದೂರಿಯಾಗಿ ನೆರವೇರಿದ ರಥೋತ್ಸವ

0

ಚಾಮರಾಜನಗರಮಲೆ ಮಹದೇಶ್ವರ ಬೆಟ್ಟದಲ್ಲಿ ಅದ್ಧೂರಿಯಾಗಿ ರಥೋತ್ಸವ ನೆರವೇರಿತು. ಶಾಂತವೀರ ಮಲ್ಲಿಕಾರ್ಜುನ ಸ್ವಾಮಿಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಹಸ್ತದಿಂದ ಧನುರ್ ಲಘ್ನದಲ್ಲಿ ರಥ ಎಳೆಯಲಾಯಿತು. ಈ ವೇಳೆ ಮಾದಪ್ಪನ ಸನ್ನಿಧಾನದಲ್ಲಿ ಉಘೇ ಮಾದಪ್ಪ ಘೋಷವಾಕ್ಯ ಮೊಳಗಿತು.

ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಗಣ ನೆರದಿತ್ತು. ರಥದ ಮುಂದೆ ಬಸವ ವಾಹನ, ಹುಲಿ ವಾಹನ ಹಾಗೂ ರುದ್ರಾಕ್ಷಿ ವಾಹನ ಸಾಗಿದವು. ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ  ಆಗಮಿಸಿರುವ ಭಕ್ತಾಧಿಗಳು ರಥೋತ್ಸವಕ್ಕೆ ಸಾಕ್ಷಿಯಾದರು. ವರ್ಷದಲ್ಲಿ ಮೂರು ಬಾರಿ ಯುಗಾದಿ, ದೀಪಾವಳಿ, ಶಿವರಾತ್ರಿಯಂದು ಜಾತ್ರಾ ಮಹೋತ್ಸವ ನಡೆಯುತ್ತದೆ.

ಧಾರವಾಡದಲ್ಲಿ ಇಸ್ಪೀಟ್ ಜೂಜುಕೋರರಿಂದ ಪೊಲೀಸರ ಮೇಲೆ ಹಲ್ಲೆ

0

ಧಾರವಾಡ: ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮೆತ್ತಗಾಗಿದ್ದ ಧಾರವಾಡ ಗ್ರಾಮೀಣ ಪ್ರದೇಶದ ಜೂಜುಕೋರರು ಈಗ ಮತ್ತೆ ಬಾಲ ಬಿಚ್ಚಲು ಆರಂಭಿಸಿದ್ದಾರೆ.

ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಲು ಹೋದ ಪೊಲೀಸರ ಮೇಲೆಯೇ ಜೂಜುಕೋರರು ದಾಳಿ ಮಾಡಿದ್ದು, ಇನ್ಸ್‌ಪೆಕ್ಟರ್ ಸೇರಿ ಇಬ್ಬರು ಸಿಬ್ಬಂದಿಗೆ ಗಾಯವಾಗಿರುವ ಘಟನೆ ಧಾರವಾಡದ ನರೇಂದ್ರ ಗ್ರಾಮದಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಇಸ್ಪೀಟ್ ಆಟದ ಬಗ್ಗೆ ಮಾಹಿತಿ ಪಡೆದುಕೊಂಡ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ನಾಗರಾಜ್ ಪಾಟೀಲ್, ಜೀಪ್ ಚಾಲಕ ಶಿವಾನಂದ ಹುಬ್ಬಳ್ಳಿ, ಪೊಲೀಸ ಸಿಬ್ಬಂದಿ ಬಸನಗೌಡ್ ದಾಳಿ ಮಾಡಿದ್ದಾರೆ.

ಈ ವೇಳೆ ಜೂಜುಕೋರರು ದಾಳಿಗೆ ಬಂದಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾರೆ. ಇನ್ನೂ ಜೂಜುಕೋರರಿಂದ ಗಾಯವಾದ್ರೂ ಅದನ್ನು ಲೆಕ್ಕಿಸದೆ ಗ್ರಾಮೀಣ ಠಾಣೆಯ ಪೊಲೀಸರು 10 ಕ್ಕೂ ಹೆಚ್ಚು ಜೂಜುಕೋರರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳು ಪೊಲೀಸ್ ಅಧಿಕಾರಿಗಳು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಧಾರವಾಡ ನಗರ ಸೇರಿ ಗ್ರಾಮಾಂತರ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆಗಳು ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಪೊಲೀಸ್ ಇಲಾಖೆ ಯಾವುದಕ್ಕೂ ಜಗ್ಗದೇ ಜೂಜುಕೋರ ಕಿಂಗ್ ಪಿನ್‌ಗಳ ಹೆಡೆಮುರಿ ಕಟ್ಟಿ ಕುಟುಂಬಗಳ ನೆಮ್ಮದಿಗೆ ದಾರಿಯಾಗಬೇಕು ಎಂದು ಜನತೆ ಮನವಿ ಮಾಡುತ್ತಿದ್ದಾರೆ.

ನನ್ನ ಮೇಲೆ ಅನುಮಾನ ಪಟ್ಟು, ಕಾರಿಗೆ ಜಿಪಿಎಸ್ ಹಾಕಿದಾನೆಂದು ಠಾಣೆ ಮೆಟ್ಟಿಲೇರಿದ ಪತ್ನಿ..!

0

ಬೆಂಗಳೂರು: ಗಂಡ ಕಾರಿಗೆ ಜಿಪಿಎಸ್ ಹಾಕಿದಾನೆಂದು ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಗರದ ಬಾಣಸವಾಡಿಯಲ್ಲಿ ನಡೆದಿದೆ. ಅನುಮಾನ ಪಟ್ಟು ತನ್ನ ಕಾರಿಗೆ ಜಿಪಿಎಸ್ ಹಾಕಿ ಟ್ರಾಕ್ ಮಾಡ್ತಾನೆ  ದೈಹಿಕವಾಹಿ ಹಾಗು ಮಾನಸಿಕವಾಗಿ ಹಲ್ಲೆ ನಡೆಸ್ತಾನೆ  ಪತಿ ಹಾಗು ಅತ್ತೆ ಮೇಲೆ ದೂರು ದಾಖಲಿಸಿದ ಪತ್ನಿ ಎಂಜಲಿನಾ ಸಂದೀಪ್ ಗುಪ್ತಾ ಎಂಬಾಕೆಯಿಂದ ದೂರು ನೀಡಲಾಗಿದ್ದು ಸಂದೀಪ್ ಗುಪ್ತಾ ಹಾಗು ಆತನ ತಾಯಿ ರೀಟಾ ಗುಪ್ತಾ ಮೇಲೆ ದೂರು ನೀಡಲಾಗಿದೆ.

ಕೌಟುಂಬಿಕ ಕಲಹ ಹಿನ್ನಲೆ ಪ್ರತಿ ದಿನ ಜಗಳವಾಡುತ್ತಿದ್ದ ದಂಪತಿ  ಮಗನ ಜೊತೆ ಸೇರಿ ಏಂಜಲಿನಾಗೆ ಕಿರುಕುಳ ಕೊಡ್ತಿದ್ರಂತೆ  ಅಷ್ಟೆ ಅಲ್ಲದೆ ಅನುಮಾನ ಪಟ್ಟು ದೂರುದಾರೆ ಹೋಗೋ ಜಾಗವನ್ನೆಲ್ಲ ಪ್ರಶ್ನೆ ಮಾಡಿ ಅನುಮಾನ ಪಡ್ತಿದ್ನಂತೆ  ಈ ಹಿನ್ನಲೆ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ ಏಂಜಲಿನಾ . ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

error: Content is protected !!