Home Blog Page 3163

ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ – ಖಾಕಿ ನೋಟಿಸ್‌ಗೆ ದಚ್ಚು ಡೋಂಟ್ ಕೇರ್

0

ಬೆಂಗಳೂರು:- ನಟ ದರ್ಶನ್ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣ ಸಂಬಂಧ ಪೊಲೀಸರ ನೋಟಿಸ್‌ಗೆ  ಇನ್ನೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಉತ್ತರ ನೀಡಿಲ್ಲ.

ಮೂರು ದಿನಗಳ ಒಳಗಾಗಿ ಉತ್ತರಿಸುವಂತೆ ಪೊಲೀಸರು ನೋಟಿಸ್ ನಲ್ಲಿ ಸೂಚಿಸಿದ್ದರು. ಶುಕ್ರವಾರ ದರ್ಶನ್ ಗೆ ಆರ್ ಆರ್ ನಗರ ಠಾಣೆ ಪೊಲೀಸರು ನೊಟೀಸ್ ನೀಡಿದ್ದರು.

ಆದರೆ ನೋಟಿಸ್ ಜಾರಿ ಮಾಡಿ ಮೂರು ದಿನ ಕಳೆದರೂ ನೋಟಿಸ್ ಗೆ ದರ್ಶನ್ ಉತ್ತರಿಸಿಲ್ಲ. ಹೀಗಾಗಿ ಈ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮಕ್ಕೆ ಪೊಲೀಸರು ಚಿಂತನೆ ನಡೆಸಿದ್ದಾರೆ.

ಕಲಾಸಿಪಾಳ್ಯದ ಸುಧಾಹರನ್ ಹತ್ಯೆ ಕೇಸ್: ಆರೋಪಿ ವಿಚಾರಣೆ ವೇಳೆ ಹಲವು ಸಂಗತಿ ಬೆಳಕಿಗೆ

0

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಕಲಾಸಿಪಾಳ್ಯದ ಸುಧಾಹರನ್ ಹತ್ಯೆ ಪ್ರಕರಣ ಸಂಬಂಧ ವಿಜಯ್ ಕುಮಾರ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಚಾರಣೆ ವೇಳೆ ಆರೋಪಿ ವಿಜಯ್ ಕುಮಾರ್ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಪತ್ನಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡ ಹಾಗೂ ಆಕೆಗೆ ಬೇರೊಬ್ಬನ ಜತೆ ಮದುವೆ ಮಾಡಿಸಿದ್ದರಿಂದ ಆಕ್ರೋಶಗೊಂಡ ಆರೋಪಿ, ಸುಧಾಹರನ್ ಎಂಬಾತನನ್ನು ಹತ್ಯೆ ಮಾಡಿದ್ದ. ನಂತರ ಸುಟ್ಟು ಹಾಕಿ ಪರಾರಿಯಾಗಿದ್ದ.

ಸುಧಾಹರನ್ ಅಲಿಯಾಸ್ ಕುಳ್ಳ ಎನ್ನುವವನನ್ನು ಈತ ಮರ್ಡರ್ ಮಾಡಿದ್ದಾನೆ. ಸುಧಾಹರನ್ ಮತ್ತು ವಿಜಯ್ ಕುಮಾರ್ ಸ್ನೇಹಿತರಾಗಿದ್ದು, ಇಬ್ಬರೂ ಕಲಾಸಿಪಾಳ್ಯದ ತರಕಾರಿ ಮಾರ್ಕೆಟ್‌ನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದರು.

ವಿಜಯ್ ಕುಮಾರ್ ಮದ್ಯ ಮತ್ತು ಸಿಗರೇಟ್ ಸೇದುವ ಚಟಕ್ಕೆ ಬಿದ್ದಿದ್ದ. ಇದರಿಂದ 2015ರಲ್ಲಿ‌ ವಿಜಯ್‌ನನ್ನು ಆತನ ತಾಯಿ ಮದ್ಯವರ್ಜನ ಕೇಂದ್ರಕ್ಕೆ ಸೇರಿಸಿದ್ದರು. 11 ತಿಂಗಳು ಮದ್ಯವರ್ಜನ ಕೇಂದ್ರದಲ್ಲಿ ಬಂದಿಯಾಗಿದ್ದ ವಿಜಯ್ ಕುಮಾರ್. ಈ ವೇಳೆ ವಿಜಯ್ ಪತ್ನಿ ನಂದಿನಿಗೆ ಸುಧಾಹರನ್ ಬೇರೊಬ್ಬನ ಜತೆಗೆ ಮದುವೆ ಮಾಡಿಸಿದ್ದ.

ಮದ್ಯವರ್ಜನ ಕೇಂದ್ರದಿಂದ ಹೊರಬಂದಿದ್ದ ವಿಜಯ್‌ಗೆ ಇದರಿಂದ ಶಾಕ್ ಆಗಿತ್ತು. ಪತ್ನಿ‌ಗೆ ಬೇರೆ ಮದುವೆಯಾಗಿ ಹೋಗಿದ್ದರಿಂದ ಆತ ಡಿಪ್ರೆಶನ್‌ಗೆ ಹೋಗಿದ್ದ. ಈ ವಿಚಾರವಾಗಿ ಹಲವು ಬಾರಿ ಸುಧಾಹರನ್‌ನೊಂದಿಗೆ ಜಗಳವಾಡಿದ್ದ. ನಾಲ್ಕು ತಿಂಗಳ ಹಿಂದೆ ತನ್ನ ಪತ್ನಿ ನಂದಿನಿ ಮತ್ತು ಆನಂದ್ ಎಲ್ಲಿದ್ದಾರೆ ಎಂದು ಕೇಳಿದ್ದ. ಈ ವೇಳೆ ಆನಂದ್‌ಗೆ ಸುಧಾಹರನ್ ಫೋನ್ ಮಾಡಿದ್ದ. ಆಗ ಆನಂದ್ ಮತ್ತು ನಂದಿನಿ ಫೋನ್ ರಿಸೀವ್ ಮಾಡಿರಲಿಲ್ಲ.

ಇದರಿಂದ ಸುಧಾಹರನ್ ಮೇಲೆ ದ್ವೇಷ ಸಾಧಿಸಿದ್ದ ವಿಜಯ್, ತನ್ನ ಹೆಂಡತಿಗೆ ಮತ್ತೊಂದು ಮದುವೆ ಮಾಡಿಸಿ ಮೋಸ ಮಾಡಿದ್ದಿ ಎಂದು ಪದೇ ಪದೆ ಜಗಳ ಕಾಯುತ್ತಿದ್ದ. ಕೊನೆಗೆ ಸುಧಾಹರನ್ ಹತ್ಯೆ ಮಾಡಲು ನಿರ್ದರಿಸಿದ್ದ. ನವಂಬರ್ 11ರಂದು ಕಲಾಸಿಪಾಳ್ಯ ಮಾರ್ಕೆಟ್‌ನಲ್ಲಿ ಸುಧಾಹರನ್‌ನನ್ನು ಭೇಟಿಯಾಗಿ ತನ್ನ ಬಳಿ ಇದ್ದ ಒಂದೂವರೆ ಕ್ವಾರ್ಟರ್ ಮದ್ಯದ ಬಾಟಲು ನೀಡಿದ್ದ. ನನಗೆ ಆರೋಗ್ಯ ಸರಿಯಿಲ್ಲ ನೀನೇ ಕುಡಿಯೆಂದು ಸುಧಾಹರನ್‌ಗೆ ಮನವೊಲಿಸಿದ್ದ.

ನಂತರ ಸುಧಾಹರನ್‌ಗೆ ಮತ್ತೊಂದು ಕ್ವಾರ್ಟರ್ ಮದ್ಯ ಕುಡಿಸಿ, ಮಧ್ಯಾಹ್ನ 12 ಗಂಟೆಗೆ ವಿಶ್ರಾಂತಿ ಮಾಡೋಣ ಬಾ ಎಂದು‌ ತರಕಾರಿ ಮಾರ್ಕೆಟ್ ಮೇಲ್ಛಾವಣಿಗೆ ಕರೆದುಕೊಂಡು ಹೋಗಿದ್ದ. ನನ್ನ ಬಳಿ ಇದ್ದ 140 ರೂಪಾಯಿ ಕದ್ದಿದ್ದೀ ಎಂದು ಜಗಳ ತೆಗೆದಿದ್ದ. ಇದರಿಂದ ಮಾತಿಗೆ ಮಾತು ಬೆಳೆದು ಸಿಟ್ಟಿನಿಂದ ವಿಜಯ್ ಕಪಾಳಕ್ಕೆ ಸುಧಾಹರನ್ ಹೊಡೆದಿದ್ದ. ನಂತರ ವಿಜಯ್‌ ತನ್ನ ಬಳಿ ಇದ್ದ ಹಣ್ಣು ಕತ್ತರಿಸುವ ಚಾಕಿನಿಂದ ಸುಧಾಹರನ್ ಕುತ್ತಿಗೆಗೆ ಚುಚ್ಚಿದ್ದ.

ಈ ವೇಳೆ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದ ಸುಧಾಹರನ್. ಶವದ ಗುರುತು ಸಿಗದಂತೆ ಮಾಡಲು ಗೋಣಿಚೀಲ ಸುತ್ತಿ ಬೆಂಕಿ ಹಾಕಿ ವಿಜಯ್‌ ಎಸ್ಕೇಪ್ ಆಗಿದ್ದ. ವಿಚಾರಣೆಯಿಂದ ಸಾಕಷ್ಟು ವಿಚಾರ ಬೆಳಕಿಗೆ ಬಂದಿದೆ.

ಜೈಲಿಗೆ ಹೋದ್ರೂ ಬಿಡಲಿಲ್ಲ ವೇಶ್ಯಾವಾಟಿಕೆ ದಂಧೆ!?

0

ಬೆಂಗಳೂರು:- ಈತ ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ. ಲೊಕ್ಯಾಂಟೋ ಆ್ಯಪ್ ಮುಖಾಂತರವೇ ಈತನ ಫುಲ್ ಟೈಂ ಬ್ಯುಸನೆಸ್ ನಡೆಯುತ್ತಿತ್ತು.

ಹೌದು, ಲೊಕ್ಯಾಂಟೋ ಆಪ್ ಮುಖಾಂತರ ಹುಡುಗಿಯರನ್ನ ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ ಆರೋಪಿಯು, ಸುದ್ಗುಂಟೆಪಾಳ್ಯದಲ್ಲಿ ಬಂಧನವಾಗಿ ಜೈಲಿನಲ್ಲಿದ್ದಾನೆ.

ಹೊರರಾಜ್ಯದಿಂದ ಕೆಲಸ ಅರಸಿ ಬರುವ ಹುಡುಗಿಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ. ಬಾಡಿಗೆ ಮನೆ ಮಾಡಿಸಿ ಹುಡುಗೀರನ್ನ ಇರಿಸುತ್ತಿದ್ದ. ಜೈಲಿನಲ್ಲಿದ್ದುಕೊಂಡೇ ವಾಟ್ಸಪ್ ಕಾಲ್ ಮೂಲಕ ಗಿರಾಕಿಗಳನ್ನ ಸಂಪರ್ಕಿಸುತ್ತಿದ್ದ. ನಂತರ ಹುಡುಗಿಯರ ಲೊಕೇಷನ್ ಕಳಿಸಿ ಗೂಗಲ್ ಪೇ ಮಾಡಿಸಿಕೊಳ್ತಿದ್ದ. ಹುಳಿಮಾವು ಬಳಿ ಇರುವ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ.

ಮಂಜುನಾಥ್@ ಸಂಜು ಎಂಬಾತನೇ ಈ ಕೃತ್ಯದ ರೂವಾರಿ. ಸದ್ಯ ಜೈಲಿನಲ್ಲಿಯೇ ಮಂಜುನಾಥ್ @ಸಂಜು ಇದ್ದು, ಸುದ್ಗುಂಟೆಪಾಳ್ಯದಲ್ಲಿ ಕೂಡ ಲೊಕ್ಯಾಂಟೋ ಆ್ಯಪ್ ಮೂಲಕ ವೇಶ್ಯಾವಾಟಿಕೆ ಹಿನ್ನಲೆ ಸಿಕ್ಕಿಬಿದ್ದಿದ್ದ. ಸದ್ಯ ಜೈಲಿನಲ್ಲಿದ್ದುಕೊಂಡು ಹುಳಿಮಾವು ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕಯನ್ನ ಮೇಂಟೇನ್ ಮಾಡ್ತಿದ್ದ.

ಅರುಣ್@ಹೊಟ್ಟೆ , ರಾಜೇಶ್@ರಾಜು, ರಾಘವೇಂದ್ರ ಹಾಗು ದರ್ಶನ್ ಎಂಬುವವರು ವೇಶ್ಯಾವಾಟಿಕೆಗೆ ಸಹಕಾರ ನೀಡ್ತಿದ್ದರು. ಹಿನ್ನಲೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಸಿಸಿಬಿ ದೂರು ದಾಖಲಿಸಿದರು. ಸಂಜು ಬಿಟ್ಟು ಉಳಿದವರನ್ನ ಸಿಸಿಬಿ ವಿಚಾರಣೆ ಮಾಡುತ್ತಿದೆ. ಬಾಡಿ ವಾರೆಂಟ್ ಪಡೆದು ಮಂಜುನಾಥ್ ನನ್ನೂ ಕೂಡ ವಿಚಾರಣೆ ನಡೆಸಲು ಸಿಸಿಬಿ ನಿರ್ಧರಿಸಿದೆ.

ನೀವು ಬಡವರ ಬಗ್ಗೆ ಮಾತನಾಡುತ್ತಿರುವುದೇ ಸೋಜಿಗ – CM ವಿರುದ್ಧ ಕುಮಾರಸ್ವಾಮಿ ಟೀಕೆ

0

ಬೆಂಗಳೂರು:- ನೀವು ಬಡವರ ಬಗ್ಗೆ ಮಾತನಾಡುತ್ತಿರುವುದೇ ಸೋಜಿಗ ಎಂದು ಹೇಳುವ ಮೂಲಕ CM ವಿರುದ್ಧ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ HDK, ಸನ್ಮಾನ್ಯ @siddaramaiah ನವರೇ.. ನೀವು ಬಡವರ ಬಗ್ಗೆ ಮಾತನಾಡುತ್ತಿರುವುದೇ ಸೋಜಿಗ. ಐಶಾರಾಮಿಯಾದ ನೀವು ಮೇಲೆ ‘ಸರಳರಾಮಯ್ಯ! ಒಳಗೆ ಐಶಾರಾಮಯ್ಯ!!’ ಹೌದಲ್ಲವೇ?
ನಾನು ಹೇಳಿದ್ದನ್ನೇಕೆ ತಿರುಚುತ್ತೀರಿ? ಗ್ಯಾರಂಟಿಗಳ ಬಗ್ಗೆ ನನಗೇಕೆ ಹೊಟ್ಟೆಯುರಿ? ನಾನು ಹೇಳಿದ್ದೇನು? ನೀವು ವಕ್ರೀಕರಿಸುತ್ತಿರುವುದೇನು? ಕಾಸು ಕೊಟ್ಟು ಸಮೀಕ್ಷೆ ಮಾಡಿಸಿಕೊಂಡ ಹಾಗಲ್ಲ ಇದು.

5 ಗ್ಯಾರಂಟಿ ಕೊಟ್ಟಿದ್ದೀರಿ, ಸರಿ. ಅದನ್ನು ನೆಟ್ಟಗೆ ಕೊಡಲು ವಿಫಲರಾಗಿದ್ದೀರಿ ಎಂದಿದ್ದೇನೆ. ಇಲ್ಲವೆಂದರೆ ಹೇಳಿ, ಬಹಿರಂಗ ಚರ್ಚೆಗೆ ಬರುತ್ತೇನೆ. ಎಲ್ಲಿಗೆ ಬರಲಿ? ಐಶಾರಾಮಯ್ಯ ಎಂದಿದ್ದಾರೆ.

ಕೋಟ್ಯಂತರ ಫಲಾನುಭವಿಗಳು ಸಂಭ್ರಮಿಸುತ್ತಿದ್ದಾರೆಯೇ? ಸತ್ಯ ಹೇಳಿ. ಮಾಧ್ಯಮಗಳು ಸುಳ್ಳು ಹೇಳುತ್ತಿವೆಯೇ? ಪೊಳ್ಳು ಬರೆಯುತ್ತಿವೆಯೇ? ನಿಮ್ಮ ಪ್ರಕಾರ ಮಾಧ್ಯಮಗಳಿಗೆ, ಪ್ರತಿಪಕ್ಷಗಳಿಗೆ ಸುಳ್ಳು ಹೇಳುವುದೇ ಕೆಲಸವೇ? ಹಿಂದೆ ನೀವು ಮಾಡಿದ್ದೂ ಇದೇನಾ? ನಿಮ್ಮ ‘ಸಮಾಜವಾದಿ ಆತ್ಮಸಾಕ್ಷಿ’ ಹೀಗಂತ ಹೇಳುತ್ತಿದೆಯಾ?

ಗ್ಯಾರಂಟಿಗಳನ್ನು ಕಾಂಗ್ರೆಸ್x ಮತದಾರರಿಗಷ್ಟೇ ತಂದಿದ್ದೀರಿ ಎಂದು ನಾನು ಹೇಳಿದ್ದೇನೆಯೇ? ಬಹುಶಃ ನಿಮಗೆ ಅಂಥ ಮನಃಸ್ಥಿತಿ ಇದ್ದರೂ ಇದ್ದೀತು.

ಗ್ಯಾರಂಟಿಗಳು ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೇನೆ. ಹಾಗಾದರೆ, ಮಾಧ್ಯಮಗಳಿಗೆ ಸತ್ಯ ತಿಳಿಸುವುದೇ ಅಪರಾಧವೇ? ನಿಮ್ಮ ದರ್ಬಾರಿನಲ್ಲಿ ಮಾಧ್ಯಮಗೋಷ್ಠಿಯೂ ಮಹಾಪಾಪವೇ? ನಿಮ್ಮ ‘ಸಿದ್ದಾಂತರಾಳ’ ಹೀಗೆಂದು ಅಪ್ಪಣೆ ಕೊಟ್ಟಿದೆಯಾ? ಹಳ್ಳಿಗಳಿಗೆ ಹೋಗಿದ್ದೇನೆ, ಫಲಾನುಭವಿಗಳನ್ನು ಮಾತನಾಡಿಸಿದ್ದೇನೆ. ಸತ್ಯ ಹೇಳಿದ್ದೇನೆ. ಬನ್ನಿ, ನಿಮಗೂ ಸತ್ಯದರ್ಶನ ಮಾಡಿಸುತ್ತೇನೆ.

ಐಶಾರಾಮಯ್ಯನವರೇ, ನನ್ನ ದನಿ ಬಡವರ ಪರ. ನಿಮ್ಮಂತೆ ಯಾರ ಮುಲಾಜಿಗೂ ಬಿದ್ದವನಲ್ಲ ನಾನು. ರಾಜ್ಯಕ್ಕೆ ರಾಜ್ಯವೇ ಬರದ ಬೆಂಕಿಯಲ್ಲಿ ಬೇಯುತ್ತಿದೆ. ರೈತಸಂಕುಲ ನರಕದಲ್ಲಿದೆ. ಅವರ ಸಾಲಮನ್ನಾ ಮಾಡಿ. #YstTax, #SstTax ಕಲೆಕ್ಷನ್ ಬದಿಗಿಟ್ಟು ರೈತರ ಪರ ನಿಲ್ಲಿ. ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿದ್ದೀರಲ್ಲ, ರೈತರ ಬದುಕಿಗೆ ಗ್ಯಾರಂಟಿ ಕೊಡಿ. ನಾನು ಸಾಲಮನ್ನಾ ಮಾಡಿ ತೋರಿಸಿದ್ದೇನೆ, ಈಗ ನೀವು ಮಾಡಿ. ಬರೀ ಬಾಯಿ ಮಾತೇಕೆ? ಇದೇ ನನ್ನ ಸವಾಲು.

ಇದ್ದಿದ್ದನ್ನು ಇದ್ದಂತೆ ಹೇಳಿದರೆ, ಅದನ್ನೇ ವಾಗ್ದಾಳಿ ಎಂದು ಅನುಕಂಪ ಗಿಟ್ಟಿಸಿಕೊಳ್ಳುವ ನಿಮ್ಮ ಬಗ್ಗೆ ಸಹಾನೂಭೂತಿ ಇದೆ. ಶಾಂತಿ, ದ್ವೇಷಾಸೂಯೆ, ಹತಾಶೆ ಬಗ್ಗೆ ದಯವಿಟ್ಟು ಮಾತನಾಡಬೇಡಿ. ನಿಮ್ಮ ಸಕಲ ಸದ್ಗುಣಗಳ ಬಗ್ಗೆ ನನಗಿಂತ ಮಲ್ಲಿಕಾರ್ಜುನ ಖರ್ಗೆ ಅವರೇ ಹೆಚ್ಚು ಬಲ್ಲರು. ಇನ್ನು ಚುನಾವಣೆ ಸೋಲು ಎಂದಿದ್ದೀರಿ? ಇದು ನನಗೂ ಹೊಸದಲ್ಲ, ನಿಮಗೂ ಹೊಸದಲ್ಲ. ನಿಮ್ಮ ಹಳಹಳಿಕೆ ಅರ್ಥ ಮಾಡಿಕೊಳ್ಳಬಲ್ಲೆ. ವೈಫಲ್ಯಗಳನ್ನೇ ವಕ್ರೀಕರಿಸಿ ಅನುಕಂಪ ಗಿಟ್ಟಿಸುವ ಹಳೆಯ ಚಾಳಿ ಬಿಡಿ.

ನನ್ನ ಹೆಸರು ಕೇಳಿದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೇ ಭಯ ಅನ್ನುತ್ತೀರಿ. ಪ್ರಧಾನಿ ಬಗ್ಗೆ ಮುಖ್ಯಮಂತ್ರಿ ಆಡುವ ಮಾತೇ ಇದು. ‘ಸಾಸಿವೆ ಕಾಳಿನಷ್ಟು ಶಿಷ್ಟಾಚಾರ ಗೊತ್ತಿಲ್ಲ. ಸಾಲುಸಾಲು ಸಮ್ಮಾನ ಬೇಕು’ ಎಂದನಂತೆ ಒಬ್ಬ. ಹಾಗಿದೆ ನಿಮ್ಮ ಧಿಮಾಕು.

ಧಮ್ಮು, ತಾಕತ್ತು, ಗೈರತ್ತಿನಿಂದ ಕೆಲಸ ಆಗಲ್ಲ ಮುಖ್ಯಮಂತ್ರಿಗಳೇ? ಐದು ವರ್ಷ ಸಿಎಂ ಆಗಿದ್ದ ನಿಮಗೆ ಇಷ್ಟು ಸಾಮಾನ್ಯ ಜ್ಞಾನವೂ ಇಲ್ಲವೇ? ಕಾವೇರಿ ವಿಷಯದಲ್ಲಿಯೇ ನಿಮ್ಮ ದಮ್ಮು, ತಾಕತ್ತು ಮೂರಾಬಟ್ಟೆ ಆಯಿತಲ್ಲ. ತಮಿಳುನಾಡಿಗೆ ಈಗಲೂ ನೀರು ಹರಿಯುತ್ತಿದೆಯಲ್ಲ!! ಕಾಣುತ್ತಿಲ್ಲವೇ?

“ಮಹಾದೇವಪ್ಪ ನಿಂಗೂ ಕತ್ತಲು ಫ್ರೀ! ನಂಗೂ ಕತ್ತಲು ಫ್ರೀ!! ಕಾಕಾ ಪಾಟೀಲ್ ನಿಂಗೂ ಕತ್ತಲು ಫ್ರೀ!!” ಇದು ನಿಮ್ಮ ಗ್ಯಾರಂಟಿಗಳ ಸ್ಥಿತಿ. ಸುಳ್ಳೇಕೆ ಹೇಳುತ್ತೀರಿ? ಆ ಪದವಿಗಾದರೂ ಗೌರವ ಬೇಡವೇ? ಸೀಟಿನಲ್ಲಿ ಕೂತು ಸುಳ್ಳು ಹೇಳದಿರಿ. ಉಚಿತ, ಖಚಿತ ಎಂದವರು ನೀವು. ಇವು ಅಗ್ಗದ ಯೋಜನೆಗಳು ಎಂದು ನಾನು ಹೇಳಿದ್ದೂ ಹೌದು. ನಾನೇ ಏಕೆ, ನಿಮ್ಮ ಸಂಪುಟದ ಹಾಲಿ ಕ್ಯಾಬಿನೇಟ್ ಮಂತ್ರಿಯೊಬ್ಬರೇ, “ಎಲೆಕ್ಷನ್ ಗೆಲ್ಲಬೇಕಾದರೆ ಗ್ಯಾರಂಟಿಗಳಂಥ ಚೀಫ್ ಗಿಮಿಕ್, ಟ್ರಿಕ್ಸ್ ಮಾಡಲೇಬೇಕು” ಎಂದು ಹೇಳಿರಲಿಲ್ಲವೇ? ವೈರಲ್ ಆಗಿದ್ದ ಆ ವಿಡಿಯೋ ನಿಮ್ಮ ಮೊಬೈಲಿಗೂ ಬಂದಿರಬೇಕಲ್ಲವೇ?

ದೂರದೃಷ್ಟಿ ಇಲ್ಲದ ಗ್ಯಾರಂಟಿಗಳು ಕರ್ನಾಟಕವನ್ನು ಆರ್ಥಿಕ ಆಪತ್ತಿಗೆ ದೂಡುತ್ತವೆ ಎಂದು ಆರ್ಥಿಕ ಇಲಾಖೆ ಕಳೆದ ಜೂನ್ (1-6-2023) ನಲ್ಲಿಯೇ ಎಚ್ಚರಿಸಿತ್ತು. ಗೃಹಲಕ್ಷ್ಮೀ ಯೋಜನೆ ರಾಜ್ಯವನ್ನು ಆದಾಯ ಕೊರತೆಗೆ ನೂಕಲಿದೆ, ಪ್ರತಿ ವರ್ಷ ಇಷ್ಟು ಬೃಹತ್ ಮೊತ್ತ ಹೊಂದಿಸುವುದು ಕಷ್ಟ. ರಾಜ್ಯ ದಿವಾಳಿ ಆಗುತ್ತದೆ ಎಂಬ ಎಚ್ಚರಿಕೆಯನ್ನು ಹಣಕಾಸು ಸಚಿವರಾಗಿ ಉಪೇಕ್ಷೆ ಮಾಡಿದ್ದು ನೀವಲ್ಲವೇ? ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಸ್ವತಃ ವಿತ್ತ ಸಚಿವರೇ ಉಲ್ಲಂಘಿಸಿದರೆ ಹೇಗೆ?

ಸೋಲು, ಗೆಲುವು ಜನಾಧೀನ. ಆ ಸತ್ಯ ನನಗೂ ಗೊತ್ತು, ನಿಮಗೂ ಗೊತ್ತು. ಆದರೆ, ಅರೆಬರೆ ಗ್ಯಾರಂಟಿಗಳಿಂದ ಲೋಕಸಭೆ ಗೆಲ್ಲುತ್ತೇವೆ ಎಂದು ಹೊರಟಿದ್ದೀರಿ. ಬನ್ನಿ ಅಖಾಡಕ್ಕೆ. ನಮ್ಮ ಸತ್ಯಕ್ಕೆ ಸೋಲೋ, ನಿಮ್ಮ ಸುಳ್ಳಿಗೆ ಗೆಲುವೋ.. ಎಂದು ನೋಡೋಣ.

‘ಸಾಲದ ಶೂಲ’, ‘ಆರ್ಥಿಕ ದಿವಾಳಿತನ’, ‘ಆರ್ಥಿಕ ಅಸ್ಥಿರತೆ-ಅದಕ್ಷತೆ’, ‘ಪರಾಧೀನ ಬದುಕು’, ‘ಕಮೀಷನ್‌ ಕಾಂಡ’ ; ಇವು ನಿಮ್ಮ ಸರಕಾರ ರಾಜ್ಯಕ್ಕೆ ಕೊಟ್ಟಿರುವ 5 ಹೊಸ ಗ್ಯಾರಂಟಿಗಳು! ಇನ್ನು, ರಾಜ್ಯದ ಭವಿಷ್ಯ, ಪ್ರತಿಷ್ಠೆ ಎಲ್ಲವೂ ದೈವಾಧೀನ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮೀಟರ್ ಬಡ್ಡಿ ದಂಧೆ ನಡೆಸುತಿದ್ದ ನಾಲ್ಕು ಕಡೆ ಸಿಸಿಬಿ ದಾಳಿ

0

ಬೆಂಗಳೂರು:ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಧೆಕೋರರ ಅಡ್ಡೆ ಮೇಲೆ ಸಿಸಿಬಿ ರೇಡ್ ಮಾಡಿದೆ. ನಗರದ ಬಸವನಗುಡಿ, ಚಾಮರಾಜಪೇಟೆ, ಕಾಮಾಕ್ಷಿ ಪಾಳ್ಯೆ ಹಾಗೂ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಪೈನಾನ್ಸ್ ಕಚೇರಿ ಹಾಗೂ ಮೀಟರ್ ಬಡ್ಡಿ ದಂಧೆಕೋರರ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದೆ.

ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿ ವೇಳೆ 42 ಲಕ್ಷ ಮೌಲ್ಯದ ನಗದು ಚಿನ್ನ ಬೆಳ್ಳಿ ಆಭರಣ 6 ರೊಲೆಕ್ಸ್ ವಾಚ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಲೈಸನ್ಸ್ ಇಲ್ಲದೆ ಮೀಟರ್ ಬಡ್ಡಿಗೆ ಆರೋಪಿಗಳು ಪೈನಾನ್ಸ್ ಮಾಡುತ್ತಿದ್ದರು. ಸುಮಾರು 10ರಿಂದ 15% ವರೆಗೆ ಬಡ್ಡಿ ದರದಲ್ಲಿ ಪೈನಾನ್ಸ್ ವ್ಯವಹಾರ ನಡೆಸುತ್ತಿದ್ದರು.

ವರ್ತೂರ್ ಸಂತೋಷ್‌’ಗೆ ಸಿಕ್ತು ಅಮ್ಮನ ಕೈತುತ್ತು!!

0

ದೀಪಾವಳಿ ಪ್ರಯುಕ್ತ ಬಿಗ್‌ಬಾಸ್ ಮನೆಯವರಿಗೆಲ್ಲ ಒಂದು ಭಾವುಕ ಸರ್ಪೈಸ್ ನೀಡಿದ್ದಾರೆ. ಮನೆಮಂದಿಗೆಲ್ಲರಿಗೂ ಅವರ ಮನೆಯಿಂದ ಅವರಿಗಿಷ್ಟವಾದ ತಿನಿಸನ್ನು ತರಿಸಿ ಕೊಡಲಾಗಿದೆ.

ಬಾಕ್ಸ್‌ನಲ್ಲಿ ಬಂದ ತಮ್ಮಿಷ್ಟದ ತಿನಿಸನ್ನು ಮಾಡಿ ಕಳಿಸಿದ ಕುಟುಂಬದವರನ್ನು ನೆನಪಿಸಿಕೊಂಡು ಸ್ಪರ್ಧಿಗಳೆಲ್ಲ ಭಾವುಕರಾಗಿದ್ದಾರೆ.

ಎಲ್ಲರ ಮನೆಯಿಂದ ತಿಂಡಿ ಬಂದರೂ ಒಬ್ಬ ಸ್ಪರ್ಧಿಯ ಮನೆಯಿಂದ ಮಾತ್ರ ಬಾಕ್ಸ್ ಬಂದಿರಲಿಲ್ಲ. ಅದು ವರ್ತೂರ್  ಸಂತೋಷ್ ಮನೆಯಿಂದ. ಇದನ್ನು ನೋಡಿ ವರ್ತೂರ್ ಅವರು ದುಃಖದಿಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಆಗಲೇ ಇಡೀ ಮನೆಯವರೆಲ್ಲರೂ ದಂಗಾಗಿಬಿಡುವ ಆ ಘಟನೆ ನಡೆಯಿತು. ಈ ಘಟನೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿದೆ.

ತೆರೆದ ಬಿಗ್‌ಬಾಸ್ ಮನೆಯ ಬಾಗಿಲಿಂದ ವರ್ತೂರ್ ಸಂತೋಷ್ ಅವರ ಅಮ್ಮನೇ ಬುತ್ತಿ ಹಿಡಿದು ನಡೆದುಕೊಂಡು ಬರುತ್ತಿದ್ದರು! ಅವರ ಬಾಯಿಂದ ‘ಕಂದಾ’ ಅಂದಾಗಲಂತೂ ಸ್ಪರ್ಧಿಗಳೆಲ್ಲರಿಗೂ ತಮ್ಮ ಅಮ್ಮನೇ ಕರೆದ ಅನುಭವ. ವರ್ತೂರ್ ಸಂತೋಷ್‌ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ನಿನ್ನೆಯಿಂದಲೂ ಹೇಳುತ್ತಿದ್ದಾರೆ.

ನಿರ್ಧಾರವನ್ನು ಅವರಿಗೇ ಬಿಟ್ಟ ಕಿಚ್ಚ ಸುದೀಪ್‌, ವೀಕೆಂಡ್‌ ಎಪಿಸೋಡ್ ಮುಗಿಸಿದ್ದಾರೆ. ಇಂದು ಅವರನ್ನು ಮನೆಯವರೆಲ್ಲ ಕನ್ವಿನ್ಸ್ ಮಾಡುತ್ತಿದ್ದಾರೆ ಕೂಡ. ಜೊತೆಗೆ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯ ನಟಿ ಸುಷ್ಮಾ ಕೆ. ರಾವ್ ಕೂಡ ಬಂದು ವರ್ತೂರ್ ಅವರ ಜೊತೆಗೆ ಮಾತನಾಡಿ ಹೋಗಿದ್ದಾರೆ.

ಆದರೆ ವರ್ತೂರ್ ಅವರ ನಿರ್ಧಾರ ಏನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಈ ನಡುವೆಯೇ ಅವರ ಅಮ್ಮನೇ ಬಿಗ್‌ಬಾಸ್ ಮನೆಯೊಳಗೆ ಬಂದಿರುವುದು ಕುತೂಹಲ ಹೆಚ್ಚಿಸಿದೆ.

ಜೊತೆಗೆ ಅವರು, ‘ನನ್ನ ಆಸೆ ನೆರವೇರಿಸ್ತಾನೆ ನನ್ ಮಗ. ನಾನು ಇದೊಂದು ರಿಕ್ವೆಸ್ಟ್ ಮಾಡ್ಕೊಳ್ತಿದ್ದೀನಿ ನನ್ ಮಗನಲ್ಲಿ’ ಎಂದು ನಡುಗುವ ಧ್ವನಿಯಲ್ಲಿ ಹೇಳಿರುವುದೂ ಪ್ರೋಮೊದಲ್ಲಿ ಸೆರೆಯಾಗಿದೆ.

ವರ್ತೂರ್ ಅವರ ಅಮ್ಮ, ಮಗನಲ್ಲಿ ಮಾಡಿಕೊಂಡ ವಿನಂತಿ ಏನು? ಅದನ್ನು ನೇರವೇರಿಸುವುದಕ್ಕೆ ವರ್ತೂರ್ ಸಿದ್ಧರಾಗ್ತಾರಾ? ಈ ಎಲ್ಲವನ್ನು JioCinemaದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೋಡಿ ತಿಳಿದುಕೊಳ್ಳಬೇಕು.

ದಾವಣಗೆರೆ: ಮಂಗನ ದಾಳಿಗೆ ವ್ಯಕ್ತಿ ಬಲಿ

0

ದಾವಣಗೆರೆ: ಮಂಗನ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ಹೊನ್ನಾಳಿ ತಾಲೂಕಿನ ಅರಕೆರೆ ಎಕೆ ಕಾಲೋನಿಯಲ್ಲಿ ನಡೆದಿದೆ.

ಗುತ್ಯಪ್ಪ ಮಂಗನ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಮೃತ ಗುತ್ಯಪ್ಪನ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಭಾಗದಲ್ಲಿ ಕರಡಿ, ಚಿರತೆ, ಮಂಗಗಳ ಕಾಟ ಹೆಚ್ಚಾಗಿದೆ ಎಂದು ಗ್ರಾಮಸ್ಥರು ರೇಣುಕಾಚಾರ್ಯ ಬಳಿ ಹೇಳಿಕೊಂಡರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ರೇಣುಕಾಚಾರ್ಯ ಚರ್ಚಿಸಿದರು.

ಮೈಸೂರು ಜಿಲ್ಲೆಯಲ್ಲಿ ಬೋನಿಗೆ ಬಿದ್ದ ಚಿರತೆ

0

ಮೈಸೂರು: ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕು ಗುಳುವಿನ ಅತ್ತಿಗುಪ್ಪೆ ಗ್ರಾಮದಲ್ಲಿ ರೈತ ಮಂಜೇಗೌಡ ಅವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಬಿದ್ದಿದೆ. ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಚಿರತೆ ಹಾವಳಿ ವಿಪರೀತವಾಗಿತ್ತು. ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಗೆಯ ಬಾಯಿಗೆ ಈಗಾಗಲೇ ಕರು ನಾಯಿ ಮೇಕೆಗಳು ಆಹಾರವಾಗಿವೆ.

ಬಟಿಗನಹಳ್ಳಿ ಮುಂಜನಹಳ್ಳಿ ಸೋಮನಹಳ್ಳಿ ಸಂಬ್ರವಳ್ಳಿ ಹೊಸ ಅಗ್ರಹಾರ ಸೇರಿ ಹಲವು ಕಡೆ ದಾಳಿ ಮಾಡಿತ್ತು. ಇದರ ಚಲನವಲನ ಅಧ್ಯಯನ ಮಾಡಿದ ಅರಣ್ಯಾಧಿಕಾರಿಗಳು, ಮೂರು ದಿನದ ಹಿಂದೆ ಚಿರತೆ ಕಾಣಿಸಿಕೊಂಡಿದ್ದ ರೈತ ಮಂಜೇಗೌಡರ ಜಮೀನಿನಲ್ಲಿ ಬೋನು ಅಳವಡಿಸಿದ್ದರು. ಇದೀಗ ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ.

ಹುಣಸೂರಿನ ಕಾಡಂಚಿನ ಭಾಗದಲ್ಲಿ ಆನೆ ಹಾವಳಿ

0

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿ ಮಾನವ ಸಂಘರ್ಷ ಮುಂದುವರಿದಿದೆ. ಅದರಲ್ಲೂ ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ನಾಗರಹೊಳೆ ಉದ್ಯಾನದ ಕಾಡಂಚಿದಲ್ಲಿರುವ ಬಿಲ್ಲೇನಹೊಸಹಳ್ಳಿ ಗ್ರಾಮದ ರೈತ ಚಿನ್ನದೊರೆ ಮತ್ತು ವೆಂಕಟೇಶ್ ಅವರಿಗೆ ಸೇರಿದ ಜಮೀನಿಗೆ ಆನೆ ನುಗ್ಗಿ ರಾಗಿ, ಮುಸುಕಿನ ಜೋಳ, ಮರಗೆಣಸು ಬೆಳೆ ನಾಶ ಮಾಡಿದೆ.

ಬೆಳೆ ತಿಂದು ತುಳಿದು‌ ನಾಶ ಮಾಡಿದ ಕಾಡಾನೆಗಳು ವಾಸದ ಮನೆ ಮೇಲೂ ದಾಳಿ ಮಾಡಿವೆ. ಕಾಡಾನೆಗಳು ಮನೆ ಅಂಗಳದಲ್ಲಿ ಡ್ರಮ್ ನಲ್ಲಿ ತುಂಬಿಸಿಟ್ಟಿದ್ದ ನೀರು ಕುಡಿದು ಹೋಗಿವೆ. ಕೂಟದ ಕಡ, ತಟ್ಟೆ ಹಳ್ಳ ಪಾರೆ ಭಾಗದಿಂದ ಈ ಆನೆಗಳು ಬಂದಿವೆ ಎನ್ನಲಾಗಿದೆ. ರೈಲ್ವೆ ಬ್ಯಾರಿಕೇಡ್ ಬೇಲಿ ದಾಟಿ ಬಂದಿರುವ ಗಜಪಡೆ ಕಾಡಂಚಿನ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.

ಬಿ.ವೈ.ವಿಜಯೇಂದ್ರನ ಪ್ರತಿಭೆಯನ್ನ ಎಲ್ಲರೂ ಗುರುತಿಸಿದ್ದಾರೆ -ಎಸ್​​ಎಂ​​ ಕೃಷ್ಣ

0

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ವಿಚಾರ ಸಂಬಂಧ ಇಂದಲ್ಲಾ ನಾಳೆ ಯುವಕರು ಹೊರ ಹೊಮ್ಮಬೇಕು. ಅವರ ಕೈಗಳನ್ನು ಬಲಪಡಿಸಬೇಕು, ಮಾರ್ಗದರ್ಶನ ನೀಡಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ಮಾಜಿ ಸಚಿವ ಎಸ್​​ಎಂ ಕೃಷ್ಣ ತಿಳಿಸಿದರು.

ಹಿರಿಯರಾದ ನಾವು ಸಮನ್ವಯ ಸಾಧಿಸಿಕೊಂಡು ಹೋಗಬೇಕಾಗುತ್ತದೆ. ಇಂದಲ್ಲಾ ನಾಳೆ ಯುವಕರು ಹೊರ ಹೊಮ್ಮಿ ಸಾಧನೆ ಮಾಡಬೇಕು. ಈ ಯುವ ಮುಖಂಡನ ಹೆಗಲಿನ ಮೇಲೆ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರು ದೊಡ್ಡ ಜವಾಬ್ದಾರಿಗಳನ್ನು ಹೊರೆಸಿದ್ದಾರೆ. ಬಿ.ವೈ.ವಿಜಯೇಂದ್ರನ ಪ್ರತಿಭೆಯನ್ನ ಅವರಲ್ಲರೂ ಗುರುತಿಸಿದ್ದಾರೆ ಎಂದರು.

error: Content is protected !!