Home Blog Page 3169

ಬಿಜೆಪಿ ರಾಜ್ಯಾಧ್ಯಕ್ಷ ರಾಗಿ ಬಿವೈ ವಿಜಯೇಂದ್ರ ನೇಮಕ

0

ಬೆಂಗಳೂರು :- ರಾಜ್ಯ ಬಿಜೆಪಿಗೆ ನೂತನ ಸಾರಥಿ ಕೊನೆಗೂ ಸಿಕ್ಕಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ನೇಮಕವಾಗಿದ್ದಾರೆ. ಈ ಮೂಲಕ ಲಿಂಗಾಯತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಪಟ್ಟ ಒಲಿದಿದೆ. ಬಿಜೆಪಿಯಲ್ಲಿ ಮತ್ತೆ ಮಾಜಿ ಸಿಎಂ ಯಡಿಯೂರಪ್ಪ ಅಧಿಪತ್ಯ ಸಾಧಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಸದ್ಯ ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸಿತ್ತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಕರ್ನಾಟಕ ಬಿಜೆಪಿಯ ಅಧ್ಯಕ್ಷರಾಗುವುದು ಬಹುತೇಕ ಪಕ್ಕಾ ಎಂದೂ ಈ ಹಿಂದೆ ಹೇಳಲಾಗುತ್ತಿತ್ತು. ಆದರೆ ಇದೀಗ ಬಿವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ತಪಸ್ಸಿನ ಅಧ್ಯಯನದಿಂದ ಮಾತ್ರ ಗೆಲುವು ಸಾಧ್ಯ

0

ಗದಗ:ಪ್ರಾಚೀನ ಕಾಲದಿಂದಲೂ ನ್ಯಾಯ, ನೀತಿ ಹಾಗೂ ಧರ್ಮಗಳು ಭಾರತೀಯ ಜನ-ಜೀವನದ ಸಾಮಾಜಿಕ, ಆರ್ಥಿಕ, ಧಾರ್ಮಿಕ ರಂಗಗಳ ಅವಿಭಾಜ್ಯಗಳಾಗಿವೆ. ನ್ಯಾಯಾಲಯದಲ್ಲಿ ನ್ಯಾಯದಾನ ಪ್ರಕ್ರಿಯೆಯಿಂದ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಬೆಂಗಳೂರನ ಕರ್ನಾಟಕ ಲಾ ರಿಪೋಟರ‍್ಸ್ ಪಬ್ಲಿಕೇಷನ್‌ನಿಂದ ಯುವ ನ್ಯಾಯವಾದಿ ಎಸ್.ಕೆ. ನದಾಫ್ ಅವರ ಸಂಪಾದಿತ `ಸಿವಿಲ್ ನ್ಯಾಯಾಧೀಶರ ಮುಖ್ಯ ಪರೀಕ್ಷೆಯ ಪರಿಹರಿಸಿದ ಪ್ರಶ್ನೆ ಪತ್ರಿಕೆಗಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಯುವ ಉತ್ಸಾಹಿ ನ್ಯಾಯವಾದಿ ನದಾಫ್ ಅವರು ತಮ್ಮ ಕೃತಿಯಲ್ಲಿ 2013ರಿಂದ 2022ರ ಹೊಸ ಪಠ್ಯಕ್ರಮ ಕಾನೂನು ಪತ್ರಿಕೆ ಭಾಗ-1ರಿಂದ ಭಾಗ-3 ಮತ್ತು ಅನುವಾದ ಪತ್ರಿಕೆ 1800 ಪುಟಗಳ ಬೃಹತ್ ಸಂಪಾದಿತ ಕೃತಿ ಲೋಕಾರ್ಪಣೆ ಮಾಡುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ.

ಇಂದಿನ ಸಂಘರ್ಷದ ಕಂದಕಗಳನ್ನು ಮುಚ್ಚಿ ಯಶಸ್ಸಿನ ಹಾದಿಯಲ್ಲಿ ಸಾಗಲು ಯುವ ನ್ಯಾಯವಾದಿಗಳಿಗೆ ಸಿವಿಲ್ ನ್ಯಾಯಾಧೀಶರ ಮುಖ್ಯ ಪರೀಕ್ಷೆಗಾಗಿ ಪೂರ್ವ ತಯಾರಿಕೆಗಾಗಿ ಈ ಪುಸ್ತಕ ಉತ್ತಮ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.

ಲೇಖಕ, ನ್ಯಾಯವಾದಿ ಎಸ್.ಕೆ. ನದಾಫ್ ಮಾತನಾಡಿ, ಇಂದಿನ ದಿನಮಾನದಲ್ಲಿ ನಮ್ಮ ಯುವ ನ್ಯಾಯವಾದಿಗಳಿಗೆ ಕನ್ನಡದಲ್ಲಿ ಕಾನೂನು ಪುಸ್ತಕಗಳ ಅವಶ್ಯಕತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ನಾನು ನನ್ನ ಅನುಭವ ಹಾಗೂ ಅಧ್ಯಯನಶೀಲತೆಯಿಂದ ಈ ಪುಸ್ತಕ ಸಿದ್ಧಪಡಿಸಿದ್ದೇನೆ.

ಮುಖ್ಯವಾಗಿ ನನ್ನ ಮಾರ್ಗದರ್ಶಕರು ಹಾಗೂ ನಮ್ಮ ಮಾತೃ ಇಲಾಖೆಯ ಸಚಿವರಿಂದಲೇ ಈ ಪುಸ್ತಕ ಬಿಡುಗಡೆಯಾಗಿದ್ದು ನನ್ನ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಬೆಂಗಳೂರಿನ ಕರ್ನಾಟಕ ಲಾ ರಿಪೋರ್ಟ್, ಬಿಬಿಸಿ ಪ್ರಕಾಶನದ ಪ್ರಕಾಶಕ ವಿ.ತ್ಯಾಗರಾಜ್ ಹಾಗೂ ನ್ಯಾಯವಾದಿ ಕುಶವಂತ ಕುಮಾರ್ ಹಾಗೂ ನ್ಯಾಯವಾದಿಗಳಾದ ತುಳಸಿಗಿರಿ, ಬೆಳ್ಳೆಪ್ಪ, ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ. ಲತೀಫ ಕುನ್ನಿಭಾವಿ ಮುಂತಾದವರು ಉಪಸ್ಥಿತರಿದ್ದರು.

ನ್ಯಾಯಾಧೀಶರಾಗಲು ಕನಸು ಕಾಣುತ್ತಿರುವ ನ್ಯಾಯವಾದಿ ಮಿತ್ರರು ತಪಸ್ಸಿನ ರೀತಿಯಲ್ಲಿ ಅಧ್ಯಯನಶೀಲರಾದಾಗ ಮಾತ್ರ ಗೆಲುವು ಲಭಿಸುತ್ತದೆ. ಪರೀಕ್ಷಾರ್ಥಿಗಳ ನಿಶ್ಚಿತ ಗುರಿ ಸಾಧನೆಗೆ ಈ ಪುಸ್ತಕ ಪ್ರಶ್ನೋತ್ತರ ಮಾಲಿಕೆಯ ಹೊತ್ತಿಗೆಯಾಗಿ ಗುರುವಿನ ಸ್ಥಾನದಲ್ಲಿ ಮಾರ್ಗದರ್ಶಿಯಾಗಬಲ್ಲದು. ಕಳೆದ ಒಂದು ದಶಕದಲ್ಲಿ ನ್ಯಾಯಾಧೀಶರ ಮತ್ತು ಅಭಿಯೋಜಕರ ಪರೀಕ್ಷೆಯಲ್ಲಿ ಭಾಗಶಃ ಅಭ್ಯರ್ಥಿಗಳು ಬಿ.ಬಿ.ಸಿ ಹಾಗೂ ಕೆ.ಎಲ್.ಆರ್ ಸೇರಿದಂತೆ ಇನ್ನಿತರ ಪ್ರಕಾಶನದ ಕಾನೂನು ಪುಸ್ತಕಗಳನ್ನು ಉಲ್ಲೇಖ ಮಾಡಿದ್ದನ್ನು ಸಚಿವರು ಸ್ಮರಿಸಿದರು.

ಪಾದಚಾರಿಗೆ ಗುದ್ದಿದ ಅಪರಿಚಿತ ವಾಹನ: ಸ್ಥಳದಲ್ಲಿಯೇ ವ್ಯಕ್ತಿ ಸಾವು

0

ದೊಡ್ಡಬಳ್ಳಾಪುರ : ಕೆಲಸದಿಂದ ಮನೆಯತ್ತ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಗೆ ಅಪರಿಚಿತ ಬಸ್ ಡಿಕ್ಕಿ ಹೊಡೆದಿದೆ, ಘಟನೆ ನಂತರ ಚಾಲಕ ಬಸ್ ಸಮೇತ ಪರಾರಿಯಾಗಿದ್ದಾನೆ.

ಹಿಟ್ ಅಂಡ್ ರನ್ ಕೇಸ್ ನಲ್ಲಿ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದೊಡ್ಡಬಳ್ಳಾಪುರ ನಗರದ ಮುತ್ತೂರಿನ ಅಂಜನೇಯ ದೇವಸ್ಥಾನದ ಬಳಿ ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಘಟನೆ ನಡೆದಿದೆ.

ಘಟನೆಯಲ್ಲಿ 26 ವರ್ಷದ ಖದೀರ್ ಪಾಷಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಮೃತ ವ್ಯಕ್ತಿ ಮೂತ್ತೂರಿನ ನಿವಾಸಿಯಾಗಿದ್ದು, ಮೂಟೆ ಹೊರುವ ಕೆಲಸ ಮಾಡುತ್ತಿದ್ದ, ರಾತ್ರಿ 8 ಗಂಟೆ ಸಮಯದಲ್ಲಿ ಕೆಲಸ ಮುಗಿದ ನಂತರ  ರೈಲ್ವೆ ಸ್ಟೇಷನ್ ನಿಂದ ಊಟ ಪಾರ್ಸಲ್ ತಗೊಂಡ್ ಬರುವಾಗ ಈ ಘಟನೆ ನಡೆದಿದೆ.

ರಸ್ತೆಯ ಪಕ್ಕದಲ್ಲಿ ನೆಡದುಕೊಂಡು ಹೋಗುತ್ತಿದ್ದ ಖದೀರ್ ಪಾಷನಿಗೆ ಅಪರಿಚ ವಾಹನ ಡಿಕ್ಕಿ ಹೊಡೆದಿದೆ, ಘಟನೆ ನಂತರ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ.

ಮುತ್ತೂರು ಬಳಿ ಅಪಘಾತಗಳು ಸಾಮಾನ್ಯವಾಗಿವೆ ಎಂಬುದು ಸ್ಥಳೀಯರ ಆರೋಪ, ಕಿರಿದಾದ ರಸ್ತೆ, ರಸ್ತೆ ಬದಿಯಲ್ಲಿ ಬೀದಿ ದೀಪಗಳು ಅಳವಡಿಸದೆ ಇರೋದು ಮತ್ತು ಹಪ್ಸ್ ಗಳನ್ನ ಅಳವಡಿಸದೆ ಇರೋದು ಅಪಘಾತಗಳಿಗೆ ಕಾರಣವಾಗಿದೆ.

ದೊಡ್ಡಬಳ್ಳಾಪುರ ನಗರಸಭೆ ಅಧಿಕಾರಿಗಳು ಬೀದಿ ದೀಪಗಳನ್ನ ಅಳವಡಿಸಿ ಅಮಾಯಕರ ಪ್ರಾಣಗಳನ್ನು ರಕ್ಷಣೆ ಮಾಡುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು ಸ್ನೇಹದ ಮಹತ್ವ ಸಾರುವ “ಕುಚುಕು” ಚಿತ್ರದ ಟ್ರೇಲರ್

0

ಶ್ರೀ ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ಅವರು ನಿರ್ಮಿಸಿರುವ, ಮೈಸೂರು ರಾಜು ನಿರ್ದೇಶನದ “ಕುಚುಕು” ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ಮಾಪಕ – ವಿತರಕ ಎಂ ಎನ್ ಕುಮಾರ್, ನಿರ್ಮಾಪಕ ಎಂ ಡಿ ಪಾರ್ಥಸಾರಥಿ, ಅದಿತಿ(ವಕೀಲರು), ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಸೇರಿದಂತೆ ಅನೇಕ ಗಣ್ಯರು ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು.

ನಾನು 26ವರ್ಷಗಳಿಂದ ಡ್ಯಾನ್ಸರ್ ಹಾಗೂ ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಹಿಂದೆ “ನೃತ್ಯಂ” ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ಸ್ನೇಹದ ಮಹತ್ವ ಸಾರುವ ಕಥಾಹಂದರದ ಜೊತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದು ತಿಳಿಸಿದರು. ನಾನು ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದವನು. ಈಗ ನಾಯಕನಾಗಿದ್ದೇನೆ. ಇದು ನನ್ನ ಅಭಿನಯದ ಮೂರನೇ ಚಿತ್ರ. ಹೆಸರೆ ತಿಳಿಸುವಂತೆ ಸ್ನೇಹಿತರ ಕುರಿತಾದ ಚಿತ್ರದಲ್ಲಿ ನಾನು ಒಬ್ಬ ಸ್ನೇಹಿತ ಎಂದು ನಾಯಕ ಅರ್ಜುನ್ ಚೋಹಾನ್ ತಿಳಿಸಿದರು.

ಗುಲ್ಬರ್ಗ ಮೂಲದವನಾದ ನಾನು ಮೂಲತಃ ರಂಗಭೂಮಿ ಕಲಾವಿದ. ಈ‌ ಚಿತ್ರದಲ್ಲಿ ನಾನು ಹಾಗೂ ಅರ್ಜುನ್ “ಕುಚುಕು”ಗಳಾಗಿ‌ ನಟಿಸಿದ್ದೇವೆ ಎನ್ನುತ್ತಾರೆ ಮತ್ತೊಬ್ಬ ನಾಯಕ ಬಸವರಾಜ್ ಕುಮಾರ್. ಈ ಚಿತ್ರದಲ್ಲಿರುವ ಬಹುತೇಕರು ಮೈಸೂರಿನವರು. ನಾನು ಕೂಡ ಮೈಸೂರಿನವನು. ಈ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದೇನೆ ಎಂದರು ನಟ ಶೈಕ್ ಶಿವಾಜಿ.

ಸಿನಿಮಾ ಮೇಲಿನ ಪ್ರೀತಿಯಿಂದ ಕಷ್ಟಪಟ್ಟು ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕಿ ನಾಗರತ್ನಮ್ಮ ಹೇಳಿದರು. ಚಿತ್ರದಲ್ಲಿ ಐದು ಸುಮಧುರ ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಎ.ಟಿ.ರವೀಶ್ ತಿಳಿಸಿದರು. ಅರ್ಜುನ್ ಚೋಹಾನ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವಥ್, ಬಲ ರಾಜ್ವಾಡಿ, ಶೈಕ್ ಶಿವಾಜಿ , ಹನುಮಂತೇ ಗೌಡ, ಬಿ.ಡಿ.ಜತ್ತಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾ

KEA ಪರೀಕ್ಷಾ ಅಕ್ರಮ: ಕಿಂಗ್ʼಪಿನ್ ಆರ್ ಡಿ ಪಾಟೀಲ್ ಕೊನೆಗೂ ಬಂಧನ

0

ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್‍ನನ್ನು ಬಂಧಿಸಲಾಗಿದೆ.

ಪ್ರಕರಣ ಬೆಳಕಿಗೆ ಬಂದ ಬಳಿಕ ಅಂದರೆ ಕಳೆದ 12 ದಿನಗಳಿಂದ ಆರ್‌ಡಿ ಪಾಟೀಲ್ ತಲೆ ಮರೆಸಿಕೊಂಡಿದ್ದನು. ತೀವ್ರ ಹುಡುಕಾಟದ ನಂತರ ಇಂದು  ಪಾಟೀಲ್‌ನನ್ನು ಅರೆಸ್ಟ್ ಮಾಡಲಾಗಿದೆ.

ತಲಮರೆಸಿಕೊಂಡಿದ್ದ ಆರ್ ಡಿ ಪಾಟೀಲ್ ಸಂಬಂಧಿಕರ ಮನೆಯಲ್ಲಿಯೇ ಅವಿತುಕೊಂಡಿದ್ದ. ಇಂದು ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ಅಫಜಲಪುರದಲ್ಲಿರುವ ಸಂಬಂಧಿಕರ ಮನೆಯಿಂದಲೇ ಆರ್‌ಡಿ ಪಾಟೀಲ್‍ನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಹಾಸನಾಂಬೆ ದರ್ಶನದ ವೇಳೆ ಕರೆಂಟ್ ಶಾಕ್: ಅಸ್ವಸ್ಥರ ಆರೋಗ್ಯ ವಿಚಾರಿಸಿದ ಸಚಿವ ದಿನೇಶ್ ಗುಂಡೂರಾವ್

0

ಹಾಸನ: ಹಾಸನಾಂಬೆ ದರ್ಶನದ ವೇಳೆ ವಿದ್ಯುತ್ ತಗುಲಿ​ 17 ಜನರು ಅಸ್ವಸ್ಥರಾಗಿದ್ದ ಹಿನ್ನಲೆ ಹಾಸನ ಜಿಲ್ಲಾಸ್ಪತ್ರೆ ಬಳಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ತೆರೆಳಿದ್ದಾರೆ. ವೇಳೆ ಮಾತನಾಡಿದ ಅವರುಹಾಸನಾಂಬೆ ದರ್ಶನದ ವೇಳೆ ಕರೆಂಟ್ ಶಾಕ್ಹೊಡೆದಿದ್ದು ಸ್ಪಷ್ಟವಾಗಿದೆ. ಇದೇ ವೇಳೆ ನೂಕಾಟ ತಳ್ಳಾಟದ ವೇಳೆ ಹಲವರಿಗೆ ಗಾಯಗಳಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ, ಸದ್ಯ ಆರೋಗ್ಯವಾಗಿದ್ದು, ಕರೆಂಟ್ಶಾಕ್ನಿಂದ ಓರ್ವ ಯುವತಿ ಅಸ್ವಸ್ಥಗೊಂಡಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.

ಮಾಜಿ ರಾಜ್ಯಪಾಲ ಪಿ.ಬಿ ಆಚಾರ್ಯ ನಿಧನ

0

ಉಡುಪಿ: ಮಾಜಿ ರಾಜ್ಯಪಾಲ ಪಿ.ಬಿ ಆಚಾರ್ಯ (92) ವಿಧಿವಶರಾಗಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯವರಗಿರುವ ಪಿ.ಬಿ ಆಚಾರ್ಯಯವರು ಮಹಾರಾಷ್ಟ್ರದ ಮುಂಬೈಯಲ್ಲಿ ನಿಧನರಾಗಿದ್ದಾರೆ. ಇವರು ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶದಲ್ಲಿ ರಾಜ್ಯಪಾಲರಾಗಿದ್ದರು.

ಉಡುಪಿಯ ತೆಂಕಪೇಟೆಯ ಆಚಾರ್ಯ ಮಠದಲ್ಲಿ ಜನಿಸಿರುವ ಪಿ.ಬಿ ಆಚಾರ್ಯ ಅವರು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಅವಿರತಶ್ರಮ ಪಟ್ಟಿದ್ದಾರೆ. ಆರ್ ಎಸ್ ಎಸ್ ಕಾರ್ಯಕರ್ತರಾಗಿಯೂ ಈಶಾನ್ಯ ಭಾರತದ ಮೂಲೆ ಮೂಲೆಯಲ್ಲಿ ಕೆಲಸ ಮಾಡಿದ್ದಾರೆ. ಸಾಮಾನ್ಯ ಜನರಿಗೆ ರಾಜಭವನ ಮುಕ್ತವಾಗಿ ತೆರೆದಿಟ್ಟವರಾಗಿದ್ದಾರೆ. ಅಲ್ಲದೆ ಬಡ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಶಿಕ್ಷಣ ಕೊಡಿಸುತ್ತಿದ್ದರು.

ಬಿಡದಿಗೆ ಗಿಫ್ಟ್ ಕೊಡುವ ಆಸೆಯಿಂದ ಮೆಟ್ರೋ ತರಲು ಪ್ರಯತ್ನ ಮಾಡುತ್ತೇನೆ: ಡಿಕೆ ಶಿವಕುಮಾರ್

0

ರಾಮನಗರ : ಬಿಡದಿ ಭಾಗಕ್ಕೆ ಮೆಟ್ರೋ ತರಲು ಪ್ರಯತ್ನ ಮಾಡುತ್ತೇನೆ. ಬಿಡದಿ ಭಾಗದಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದಾರೆ. ಹೊಸೂರುವರೆಗೂ ಮೆಟ್ರೋ ವಿಸ್ತರಣೆಗೆ ಪ್ರಯತ್ನ ಮಾಡುತ್ತಿದ್ದೇವೆ. ಅದೇ ರೀತಿ ಬಿಡದಿವರೆಗೂ ಮೆಟ್ರೋ ವಿಸ್ತರಿಸಲು ಯೋಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ​ಹೇಳಿದರು. ಬಿಡದಿಯಲ್ಲಿ ನಡೆದ ಟೊಯೋಟಾ‌ ತರಬೇತಿ ಕೇಂದ್ರ ವಿಸ್ತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ನಾನು ಬರೀ ಉದ್ಘಾಟನೆ ಮಾಡಲಿಕ್ಕೆ ಬಂದಿಲ್ಲ. ಬಿಡದಿಗೆ ಗಿಫ್ಟ್ ಕೊಡುವ ಆಸೆಯಿಂದ ಈ ಭಾಗಕ್ಕೂ ಮೆಟ್ರೋ ತರಲು ಪ್ರಯತ್ನ ಮಾಡುತ್ತೇನೆ. ಬಾಲಕೃಷ್ಣ ಹಾಗೂ ಸುರೇಶ್​​ರವರು ಬೆನ್ನು ಬಿದ್ದಿದ್ದಾರೆ. ಲಕ್ಷಾಂತರ ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಸೂರುವರೆಗೂ ನಾವು ಪ್ರಯತ್ನ ಮಾಡುತ್ತಿದ್ದೇವೆ. ಅದೇ ತರ ಬಿಡದಿವರೆಗೂ ಮೆಟ್ರೋ ತರಲು ಯೋಚಿಸಿದ್ದೇನೆ ಎಂದು ಹೇಳಿದರು.

 

ನಂಜುಂಡೇಶ್ವರ ಸ್ವಾಮಿಯ ದರ್ಶನಕ್ಕೆ ಹೊಗಿದ್ದ ಮಹಿಳೆ ಶವವಾಗಿ ಪತ್ತೆ..!

0

ಮೈಸೂರು: ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯ ದರ್ಶನ ಮಾಡಿಕೊಂಡು ಬರುವುದಾಗಿ ಹೇಳಿ ಬಂದಿದ್ದ ಮಹಿಳೆ ವಾಪಸ್ ಮನೆಗೆ ಶವವಾಗಿ ಮರಳಿದ್ದಾರೆ.

ಮೈಸೂರಿನ ಸುಭಾಷ್ ನಗರದ ಮಂಜುನಾಥ್ ಎಂಬುವವರ ಪತ್ನಿ ಮಂಜುಳಾ (50) ನವೆಂಬರ್ 07ರಂದು ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದಾರೆ.

ಆದ್ರೆ, ಅವರು ನಂಜುಂಡೇಶ್ವರ ಸ್ವಾಮಿ ದೇವಾಲಯದ ಬಳಿಯ ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಅವರ ಮೃತದೇಹ ಪತ್ತೆಯಾಗಿದೆ.

ನವೆಂಬರ್ 7 ರಂದು ಮಂಜುಳಾ ಮನೆಯಿಂದ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿ ಬರುತ್ತೇನೆ ಎಂದು ಬಂದಿದ್ದರು. ಆದ್ರೆ, ವಾಪಸ್ ಮನೆ ಬಂದಿರಲಿಲ್ಲ. ಈ ಬಗ್ಗೆ ಎಲ್ಲಾ ಕಡೆ ಹುಡುಕಿದರು ಇವರ ಸುಳಿವು ಸಿಕ್ಕಿರಲಿಲ್ಲ.

ಇಂದು ಕಪಿಲಾ ನದಿಯಲ್ಲಿ ಶವ ಸಿಕ್ಕಿದೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವವನ್ನು ಒಪ್ಪಿಸಲಾಗಿದೆ.

 

ಪರೀಕ್ಷಾ ಅಕ್ರಮದ ಆರೋಪಿ RD ಪಾಟೀಲ್​ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

0

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮದ ಆರೋಪಿ ಆರ್​.ಡಿ.ಪಾಟೀಲ್​​ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದ್ದು, ನ.16ರಂದು ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆ ನಡೆಸಲಿದೆ.

ಕಳೆದ 12 ದಿನಗಳಿಂದ ಆರ್​.ಡಿ.ಪಾಟೀಲ್ ತಲೆಮರೆಸಿಕೊಂಡಿದ್ದಾನೆ. ಇನ್ನು ಕಲಬುರಗಿ ಜಿಲ್ಲಾ ಕೋರ್ಟ್​ನಲ್ಲಿ ಆರೋಪಿ ಜಾಮೀನು ಅರ್ಜಿ ತಿರಸ್ಕಾರ ಹಿನ್ನೆಲೆ ಹೈಕೋರ್ಟ್​ ಪೀಠದ ಮುಂದೆ ಪಾಟೀಲ್, ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

error: Content is protected !!